ಮಂಗಳವಾರ, ಸೆಪ್ಟೆಂಬರ್ 27, 2011

ಹೆಚ್.ವಿಶ್ವನಾಥ್ ರ ಮಾತು ಅಂದರೆ...........ಚುನಾವಣೆಯಲ್ಲಿ ಹಣ ಹೆಂಡ ಹಂಚುವುದು ಸಾಮನ್ಯ ಅಂತ ಎಲ್ಲರಿಗೂ ಗೊತ್ತು ಆದ್ದರಿಂದ ಅದನ್ನು ಕಾನೂನು ಬದ್ದವಾಗಿ ಜಾರಿಗೋಳಿಸಿ ಅಂತ ಹೇಳಲಿಲ್ಲವಲ್ಲ ಸದ್ಯ. 


ತಾವು ಕಂಡ ಸತ್ಯಗಳನ್ನು ಸ್ವಲ್ಪವೂ ಮರೆಮಾಚದೇ ನೇರವಾಗಿ ಹೇಳುವ ಸರಳ ಸಜ್ಜನ ರಾಜಕಾರಣಿ  ಹೆಚ್.ವಿಶ್ವನಾಥ್ ರವರ ಮಾತು ಅಂದರೆ ಅಲ್ಲೊಂದು ವಿವಾದದ ಸಾಧ್ಯತೆ ಇಲ್ಲದೆ ಇರುವ ಅವಕಾಶ ಬಹು ಕಡಿಮೆ ಎನ್ನುವ ಮಟ್ಟಿಗೆ ಆಗಿದೆ ಇತ್ತೀಚಿನ ದಿನಗಳಲ್ಲಿ. ಕೆಲದಿನಗಳ ಹಿಂದೆ ಕಾಂಗ್ರೆಸ್ನಲ್ಲಿ ಸಖಿ ಸಂಸ್ಕೃತಿ ಬೆಳೆಯುತ್ತಿದೆ ಅಂತ ಒಂದು ಹೇಳಿಕೆ ಕೊಟ್ಟರು. ಆ ಮಾತಿನ ಬಾಣ ಡಿಕೆಶಿ ಮತ್ತು ನಟಿ ರಮ್ಯ ಕುರಿತದ್ದಾಗಿತ್ತು. ಆ ಸಖಿ ಯಾರು ಮತ್ತು ಯಾರಿಗೆ ಸಖಿ ಎಂದು ಕೇಳುವಷ್ಟರಲ್ಲಿ ಡಿಕೆಶಿ ಯಾರು ಸಖಿ ಸಂಸ್ಕೃತಿ ಹುಟ್ಟು ಹಾಕುತ್ತಿದ್ದಾರೆ ಎಂಬುದನ್ನು ಹೈಕಮಾಂಡ್ ಗೆ ದೂರಲಿ ಅಂತ ಹೇಳೀಯೆ ಬಿಟ್ಟರು.ತಮ್ಮ ಮಗ ಜೈನಧರ್ಮದ ಹುಡುಗಿಯನ್ನು ಪ್ರೀತಿಸಿದಾಗ, ಅವರಿಷ್ಟದಂತೆಯೆ ಯವುದೇ ವಿರೋಧ ತೋರದೆ ಸರಳ ಮದುವೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು.


ಒಂದು ಸಾರಿ ಕಾಂಗ್ರೆಸ್ಸಿಗರಿಗೆ ಕಾಲುಬಾಯಿ ರೋಗ ಅಂತ ಹೇಳಿ ಪಕ್ಷದ ಒಳಗಡೆ ವಿರೋಧ ಕಟ್ಟಿಕೊಂಡಿದ್ದರು. ಹೀಗೆ ಒಂದಿಲ್ಲೊಂದು ವಿವಾದದ ಮಾತುಗಳನ್ನಾಡಿ ಹಲವರಿಗೆ ಇರುಸು ಮುರುಸು ಮಾಡಿರುವುದು ನಾವೆಲ್ಲ ಕಂಡಿದ್ದೇವೆ.


ತಮ್ಮ ಹಳ್ಳಿ ಹಕ್ಕಿಯ ಹಾಡು ಕೃತಿಯಲ್ಲಿ ಎಸ್.ಎಂ. ಕೃಷ್ಣ ಹಾಗೂ ನಟಿ ಸರೋಜಾದೇವಿ ಅವರ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಎಸ್. ಎಂ. ಕೃಷ್ಣ ಮತ್ತು ಚಲನಚಿತ್ರ ಅಭಿನೇತ್ರಿ ಬಿ. ಸರೋಜಾದೇವಿ ನಡುವೆ "ಅಮರಾಮಧುರಾ ಪ್ರೇಮ, ನೀ ಬಾಬೇಗ ಚಂದಮಾಮ" ಎನ್ನುವಂಥ ಸಂಬಂಧಗಳು ಚಿಗುರೊಡೆದಿದ್ದವು. ಅವರಿಬ್ಬರ ಕೋಮಲ ಮನಸ್ಸುಗಳು ಪರಸ್ಪರ ಅನುರಾಗದ ತೆಕ್ಕೆಗೆ ಬಿದ್ದಿದ್ದವು ಎಂದು ಬರೆದಿದ್ದರು.


ರಾಜಕಾರಣಿಗಳ ದೌರ್ಬಲ್ಯವೇನೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಯಾರೂ ಹೇಳಿಕೊಳ್ಳುವುದಿಲ್ಲ. ಎಲ್ಲರೂ politically correct ಆಗಿ ಇರಲು ಪ್ರಯತ್ನಿಸುತ್ತಾರೆ. ಅಂಥದ್ದರಲ್ಲಿ ವಿಶ್ವನಾಥ್ ಇಂತಹ ಹೇಳಿಕೆ ಗಳನ್ನು ಕೊಡುವ ಮೂಲಕ ಒಂದಿಲ್ಲೊಂದು ವಿವಾದ ಗಳನ್ನು ಮೈಮೆಲೆ ಎಳೆದುಕೊಳ್ಳುತ್ತಾರೆ.  


ಜನರಿಗೆ ಆಮಿಷ ನೀಡಿ ಮತದಾರರನ್ನು ಸೆಳೆಯಲು ಇಂತಹ ಮಾರ್ಗ ಗಳನ್ನು ಶುರು ಮಾಡಿದ್ದು ಯಾರು? ಈ ರಾಜ ಕಾರಣಿಗಳೇ ಅಲ್ಲವೆ. ಅಧಿಕಾರ ಬೇಕು ಅದಕ್ಕಾಗಿ ಇಂತಹ ವಾಮ ಮಾರ್ಗಗಳನ್ನು ಹುಡುಕಿದರು. ಜತೆಗೆ ಜಾತಿ  ಧರ್ಮದ ಓಲೈಕೆ. ಹೀಗೆ ಸಮಾಜವನ್ನು  ಒಡೆದು ಆಳುವ ಕಾರ್ಯವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಮಾಡುತಿದ್ದಾರೆ. 


ಪ್ರತಿಯೊಬ್ಬರಿಗೂ ಶಿಕ್ಷಣ ಹಾಗು ಮೂಲಭೂತ ಸೌಲಭ್ಯಗಳನ್ನು ನೀಡಿ ದ್ದರೆ ಇಂತಹ ಪ್ರಮೇಯವೇ ಬರುತ್ತಿರಲಿಲ್ಲ. ಸುಶಿಕ್ಷಿತ ಮತದಾರರು ಇಂತಹ ಯಾವುದೇ ಆಮಿಷಗಳಿಗೆ ಒಳಗಾಗದೆ ತಮಗೆ ಬೇಕಾದ ವ್ಯಕ್ತಿಗೆ ಮತ ಚಲಾಯಿಸುತ್ತಾರೆ,  ಚುನಾವಣ ನೀತಿ ಸಂಹಿತೆ ಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿದ್ದು ಟಿ,ಎನ್ ಶೇಷನ್, ಕಾಯ್ದೆ ಯಲ್ಲಿ ಇದ್ದ ಕಾನೂನುಗಳ ವ್ಯಾಪ್ತಿಯಲ್ಲಿ  ಚುನಾವಣೆ ಹೇಗೆ ನಡೆಯಬೇಕು ಎಂದು ತೋರಿಸಿಕೊಟ್ಟಿದ್ದರು. ಅಂತಹ ಇಚ್ಚಾಶಕ್ತಿ ಎಲ್ಲರಿಗೂ ಇದ್ದರೆ ಪ್ರತಿಯೊಂದು ಚುನಾವಣೆಗಳು ಕಟ್ಟುನಿಟ್ಟಾಗಿ ನಡೆಯುತಿದ್ದವು.


ರಾಜಕಾರಣಿಗಳು ಬದಲಾಗದೆ ಮತದಾರರು ಬದಲಾಗುವುದು ಸಾಧ್ಯವಿಲ್ಲ ಎಷ್ಟು ನಿಜವೋ ಹಾಗೆ ಮತದಾರರು ಬದಲಾಗದೆ ರಾಜಕಾರಣಿಗಳು ಬದಲಾಗಲು ಸಾಧ್ಯ್ವವಿಲ್ಲ. ಬಹುತೇಕ ಅರಬ್ ದೇಶಗಳಲ್ಲಿ ಮಧ್ಯಪಾನ ನಿಷೇದ ವಿದ್ದು ಸಮಾಜದ ಸ್ವಾಸ್ತ್ಯವನ್ನು ಕಾಪಡುವಲ್ಲಿ ಯಶಸ್ವಿಯಾಗಿದೆ. ಮಾನ್ಯ ವಿಶ್ವನಾಥ್ ರವರ ಹೇಳಿಕೆಗಳು ಸಮಾಜವನ್ನು ಬದಲಾಯಿಸುವ ಕಾರ್ಯಕ್ಕೆ ಮುನ್ನುಡಿಯಾಗಬೇಕು ಹೊರತು ಸಮಾಜವನ್ನು ಪ್ರಪಾತಕ್ಕೆ ತಳ್ಳುವಂತಾಗಬಾರದು. ಮಧ್ಯಪಾನ ನಿಷೇದ ಮಾಡಿ ಅಂತ ಒಂದು ಹೋರಾಟ ಬಹು ಕಾಲದಿಂದಲೂ ನಡೆಯುತಿದೆ. ಗಾಂಧೀಜಿಯವರು ಸಹ ಮಧ್ಯಪಾನ ನಿಷೇದಕ್ಕೆ ತಮ್ಮ ಸಮ್ಮತಿಯನ್ನಿತ್ತಿದ್ದರು. ಅದೇ ಗಾಂಧೀಜಿ ಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷದ ಇಂದಿನ ರಾಜಕಾರಣಿ ವಿಶ್ವನಾಥ್ ರವರು ಹಣ ಹೆಂಡ ದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ.


 ಇಂದು ರಾಜಕಾರಣಿಗಳು  ಸಾರಾಯಿ ಮೇಲಿನ ನೀಷೇದ ತೆಗೆಯಿರಿ ಎಂದು ಒತ್ತಾಯಿಸುತ್ತಾರೆ, ಆಮೇಲೆ ಹಣ ಹೆಂಡ ಹಂಚೋದಕ್ಕೆ ಕಾನೂನು ಬದಲಾವಣೆ ಮಾಡಿ ಅಂತಾರೆ. ಹಾಗೆ ಬೇರೆಯವರು ವೇಶ್ಯಾವಾಟಿಕೆ ಗೆ ಒಂದು ಕಾನೂನು ಮಾಡಿ ಅಂತಾರೆ, ನಮಗೆ ಅರಣ್ಯಪ್ರಾಣಿಗಳ ಬೇಟೆಯಾಡುವಾಸೆ, ಆ ನಿಷೇದ ತೆಗೆಯಿರಿ ಅಂತಾರೆ, ಲಂಚತೆಗೆದುಕೊಳ್ಳೋದಿಕ್ಕೆ ಕಷ್ಟಾಅಗ್ತಾಯಿದೆ ಲೋಕಾಯುಕ್ತ ಬಂದ್ ಮಾಡಿ ಅಂತಾರೆ  ಹಿಂಗೆ ಎಲ್ಲ ನಿಷೇದಗಳನ್ನು ತೆಗೆದು ಎಲ್ಲರಿಗೂ full freedom ಕೊಟ್ಟು ಯಾರ್ಯಾರಿಗೆ ಹೇಗೆ ಬೇಕೊ ಹಾಗೆ ಕಾನೂನು ಬದಲಾವಣೆ ಮಾಡಿ ಎಲ್ಲರು ಶಿಲಾಯುಗದ ಆದಿಮಾನವರಾಗಿ ಇದ್ದುಬಿಟ್ರೆ ಎಷ್ಟು ಚೆನ್ನಾಗಿರುತ್ತೆ.


ಕೊನೆಕುಟುಕು:


AVÛVÚ ÑÚ}ÚÀ ÔæÞ×Û¡«æ ÑÛÁé
GÑé.GM. OÚäÎÚ| ÈÚßßRÀÈÚßM~à AW¥Û§VÚ ÑÚM®Úâ´lÑÚºæ ÈÚßßWÒ, ÑÚ_ÈÚ G^é. ÉËÚ‡«Û¢é d}æ ɨ۫ÚÑè¨Ú¥Ú AÈÚÁÚy¥ÚÆÇ «Úsæ¥Úß ÔæàÞVÚß~¡¥Û§VÚ GIÒÒ ÈÚáÛf ÑÚ¥ÚÑÚÀ ÔÚÂËÚ`M¥ÚÃVèsÚ G¥ÚßÁÛ¥ÚÁÚß. OÚäÎÚ| @ÈÚÁÚ«Úß„ OÚMsÚÈÚÁæÞ †Û¿ßVæ …M¥ÚM}æ …¾ÚßÀÄß ËÚßÁÚß ÈÚáÛt¥ÚÁÚß. "ÑæÉß' GM¥æÞ VÚßÁÚß~ÒOæàMtÁÚßÈÚ ÔÚÂËÚ`M¥ÚÃVèsÚÂVæ ®ÚÁÚÁÚ ¬M¥Ú«æ ®ÚÁÚÈÚß R¾ÚáÛÆ. "¬ÞÈÚâ´ @ƒOÛÁÚOæQ …M¥Ú ÈæßÞÅæ ÁÛdÀOæQ …ÁÚ …M}Úß. AVÚ†ÛÁÚ¥æ§ÄÇ AWÔæàÞ¿ß}Úß' - ÕÞVæ H«æÄÇ J¥ÚÂ¥ÚÁÚß. GÄÇÁæ¥ÚßÁÚß ÈÛVÛ§ØVæ ÒPQ¥Úߧ OÚäÎÚ| @ÈÚÂVæ ÈÚßßdßVÚÁÚ DMlß ÈÚáÛt}Úß. @¥Ú«Úß„ }æàÁÚVæàsÚ¥Ú OÚäÎÚ|, "ÂÞ, ÉËÚ‡«Û¢é ¾ÚáÛÂ%Þ @¥Úß. H«æÞ«æà ÈÚáÛ}Ût¡¥Û§Áæ' @M}Ú OæÞØ¥ÚÁÚß. AVÚ ÉËÚ‡«Û¢é ÔæÞØ¥Úߧ: "ÑÛÁé, @ÈÚâý„ ÔÚÂËÚ`M¥ÚÃVèsÚ @M}Ú «ÚÈÚáé ®Ûn%¾ÚßÈÚ«æÞ. Ñڇİ ÑÚ¿ßÄÇ. A¥ÚÁæ AVÛVÚ ÑÚ}ÚÀ ÔæÞ×Û¡«æ ÑÛÁé.' 

-- ಪಿ.ತ್ಯಾಗರಾಜ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ