ಕೆಲ ದಿನಗಳ ಹಿಂದೆ ಇದ್ದ ಉಹಾ ಪೋಹಗಳಿಗೆ ಈಗ ಒಂದೊಂದಾಗಿ ತೆರೆಬಿಳ್ತಾಯಿದೆ. ಗಣಿಧಣಿಗಳು ಹೊಸಪಕ್ಷ ಕಟ್ತಾರೆ, ಇಲ್ಲವೇ ಜೆಡಿಎಸ್ ಅನ್ನು ಸೇರಬಹುದು ಎಂದು ಪತ್ರಿಕೆಗಳು ವರದಿಯನ್ನು ಪ್ರಕಟಿಸಿದ್ದವು. ಅದಕ್ಕೆ ಆಟದ ಮೊದಲ ದಾಳವಾಗಿ ಶ್ರೀರಾಮುಲು ರಾಜೀನಾಮೆ ಕೊಟ್ಟಿದ್ದಾರೆ. ಇನ್ನು ಮುಂದೆ ಏನಾಗುತ್ತೆ ಅಂತ ರಾಜ್ಯದ ಜನರೆ ಕುತೂಹಲದಿಂದ ಕಾಯುವಂತಾಗಿದೆ ಅನ್ನುವ ಹಾಗಿಲ್ಲ. ಮತ್ತೆ ನಮ್ಮ ನಾಡಿಗೆ ಕೆಟ್ಟ ಹೆಸರು ಬರುವಂತಾಯಿತಲ್ಲ ಎಂಬ ಬೇಸರ ವಾಗುತ್ತಿದೆ. ಕರ್ ನಾಟಕ್ ಎಂದು ರಾಷ್ಟ್ರೀಯ ಮಾಧ್ಯಮಗಳು ಮತ್ತೊಮ್ಮೆ ಮೂದಲಿಸಲು ಅವಕಾಶವಾಯಿತು. ಕೆಲವರು ಮತ್ತೆ ರಾಜಕೀಯದ ಆಟ ಶುರು ಮಾಡಿದ್ದಾರೆ. ಬಿಜೆಪಿ ಸರ್ಕಾರವನ್ನು ಬೀಳಿಸಬೇಕು ಅಂತ ಸಾಧ್ಯವಾದಾಗಲೆಲ್ಲ ಬಹಳ ಪ್ರಯತ್ನ ಪಟ್ಟು ಯಶಸ್ವಿಯಾಗದೆ ಸುಮ್ಮನಾಗಿದ್ದವರು ಮತ್ತೆ ಒಂದು ಹೊಸ ಆಟ ಆಡಿಸಲು ಶುರು ಮಾಡಿದ್ದಾರೆ
ಶ್ರೀರಾಮುಲು ರಾಜಿನಾಮೆ ಹಿಂದೆ ಬಹಳಷ್ಟು ರಾಜಕೀಯ ಮೇಲಾಟ ಗಳು ನಡೆದಿವೆ. ಅವರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇವೆ ಎಂದು ಕೆಲ ರಾಜಕೀಯ ಮುಖಂಡರುಗಳು ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ. ರಾಜೀನಾಮೆ ಕೊಟ್ಟ ಬೆನ್ನಲ್ಲೆ, ಬಸವನಗೌಡ ಪಾಟೀಲ್ ಯತ್ನಾಳ್ ಶ್ರೀ ರಾಮುಲು ಜೆಡಿಎಸ್ ಸೇರುವುದು ಸೂಕ್ತ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದಾರೆ. ಅವರು ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಸುಮ್ಮನೆ ಇಂತಹ ಹೇಳಿಕೆ ಗಳು ಹೊರಬರುವುದಿಲ್ಲ. ಆ ಹೇಳಿಕೆ ಯನ್ನು ಅವರ ಬಾಯಲ್ಲಿ ಹೇಳಿಸಿರಲೂಬಹುದು.
ಕೆಲ ರಾಜಕೀಯ ಮುಖಂಡರು ಅಂದುಕೊಂಡಂತೆ ನಡೆದರೆ, ಕೊಪ್ಪಳ ಉಪಚುನಾವಣೆ ಇದಕ್ಕೊಂದು ನೆಪ ಮಾತ್ರ. ಸ್ವತಂತ್ರ ಅಭ್ಯರ್ಥಿ ಯಾಗಿ ನಿಲ್ಲಿಸಿ ಪರೋಕ್ಷವಾಗಿ ಜೆಡಿಎಸ್ ಬೆಂಬಲ ಕೊಟ್ಟು ಶ್ರೀರಾಮುಲು ರವರನ್ನು ಜಯಗಳಿಸುವಂತೆ ಮಾಡುವುದು ಮೊದಲ ದಾಳ. ತದನಂತರ, ಕೆಲ ಬಿಜೆಪಿ ಶಾಸಕರು, ಜೆಡಿಎಸ್ ನ ಎಲ್ಲ ಶಾಸಕರು ಮತ್ತು ಕಾಂಗ್ರೆಸ್ಸಿನ ಕೆಲ ಶಾಸಕರನ್ನು ಸೇರಿಸಿಕೊಂಡು ಒಕ್ಕೂಟದ ಮಾದರಿಯಲ್ಲಿ ಸರ್ಕಾರ ರಚನೆ ಮಾಡಬೇಕು ಎನ್ನುವುದು ಅವರ ಯೋಜನೆ. ಹೈಕಮಾಂಡ್ ನ ಅವಕೃಪೆ ಗೆ ಒಳಗಾಗಿರುವ ರೆಡ್ಡಿ ಸಹೋದರರಿಗೆ ಪರೋಕ್ಷವಾಗಿ ಬೆಂಬಲ ಕೊಟ್ಟು ಅಥವ ಪಡೆದು ಸರ್ಕಾರ ರಚನೆ ಮಾಡಿ ಲೋಕಾಯುಕ್ತ ವರದಿಯನ್ನು ಮೂಲೆ ಗುಂಪು ಮಾಡಿದರೆ ರೆಡ್ಡಿ ಸಹೋದರರನ್ನು ಸಮಾಧಾನ ಮಾಡಿದಂತಾಗುತ್ತದೆ ಮತ್ತು ಅಧಿಕಾರನೂ ಸಹ ಸಿಗುತ್ತೆ ಎನ್ನುವುದು ಮಾಸ್ಟರ್ ಪ್ಲಾನ್.
ಲೋಕಾಯುಕ್ತ ವರದಿ, ಅನೇಕ ಭೂ ಹಗರಣ ಮತ್ತು ಭ್ರಷ್ಟಾಚಾರದಿಂದ ಜರ್ಜರಿತವಾಗಿರುವ ಈ ಸಮಯದಲ್ಲಿ ಬಿಜೆಪಿಯನ್ನು ಒಡೆದರೆ ಮತ್ತೆ ಮುಂದೆ ಬಿಜೆಪಿ ಅಧಿಕಾರಕ್ಕೆ ಬರದ ಹಾಗೆ ಮಾಡಬಹುದು ಅನ್ನುವುದು ಸಹ ಲೆಕ್ಕಾಚಾರ.
ಶ್ರೀ ರಾಮುಲು ಮುಖ್ಯಮಂತ್ರಿ ಅಭ್ಯರ್ಥಿ ಯಾಕೆಂದರೆ, ಇದರ ಹಿಂದಿದೆ ಜಾತಿ ಲೆಕ್ಕಾಚಾರ, ಹಿಂದುಳಿದವರ್ಗಗಳ ಬೆಂಬಲ, ಬಳ್ಳಾರಿ ಸುತ್ತಮುತ್ತಲೂ ಅವರಿಗೆ ಇರುವ ಇಮೇಜ್ ಮತ್ತು ರೆಡ್ಡಿಗಳ ಬೆಂಬಲ. ಹಿಂದೆ ರೆಡ್ಡಿಗಳು ಶ್ರೀ ರಾಮುಲು ಮುಖ್ಯಮಂತ್ರಿ ಗಾದಿಗೆ ಸೂಕ್ತ ಅಭ್ಯರ್ಥಿ ಎಂದು ಘೋಷಿಸಿದ್ದರು, ಈಗ ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿದ್ದಾರೆ. ಸರ್ಕಾರದಲ್ಲಿ ಸೂಕ್ತ ಸ್ಥಾನ ಮಾನ ಕೊಡಲಿಲ್ಲ ಎಂದು ಬೇಸರಗೊಂಡು ಕೆಲದಿನಗಳ ಹಿಂದೆ ೧೬ ಜನ ಶಾಸಕರು ಇಂಡೋನೇಶಿಯಾ ಪ್ರವಾಸ ಮತ್ತು ಗೋವಾ ಪ್ರವಾಸ ಕೈಗೊಂಡಿದ್ದರು. ಅವರ ಮೂಲ ಉದ್ದೇಶ ಮೊದಲಿನ ಹಾಗೆ ಸರ್ಕಾರದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಬೇಕು ಅಂತ. ಆದರೆ ಹೈಕಮಾಂಡ್ ಮತ್ತು ಸಂಘ ಪರಿವಾರ ಇವರ ಬೇಡಿಕೆಗೆ ಸೊಪ್ಪು ಹಾಕಲಿಲ್ಲವೋ,
ಈ ಸಮಯವನ್ನು ಉಪಯೋಗಿಸಿಕೊಂಡು ಕೆಲ ಪಕ್ಷದ ಮುಖಂಡರು ತಮ್ಮ ಬೇಳೆ ಬೇಯಿಸಲು ಹೊರಟಿದ್ದಾರೆ. ಕೆಲವರ ಸ್ವಪ್ರತಿಷ್ಟೆಗೋಸ್ಕರ ರಾಜ್ಯದ ಮರ್ಯಾದೆಯನ್ನು ಹಾಳು ಮಾಡುತಿದ್ದಾರಲ್ಲ ಇವರಿಗೆ ಏನನ್ನಬೇಕು? ಹೊರರಾಜ್ಯದವರ ಮುಂದೆ ಮತ್ತೆ ಮತ್ತೆ ಅವಮಾನವನ್ನು ಅನುಭವಿಸುವಂತಾಯಿತಲ್ಲ ಅಂತ ಬೇಸರವಾಗುತ್ತಿದೆ.
ಕೊನೆ ಕುಟುಕು: ಸಚಿವ ಸ್ಥಾನ ಪಡೆಯಲು ಒತ್ತಡ ತಂತ್ರ ಅನುಸರಿಸುತ್ತಿರುವ ಮಾಜಿ ಸಚಿವ ಶ್ರೀರಾಮುಲು, ಜನತೆಗೆ ದಿಕ್ಕು ತಪ್ಪಿಸುವ ತಂತ್ರ ಹೂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ. ಈಗ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಅವರಿಗೆ ಗೊತ್ತಿಲ್ಲದ್ದೇನು ಅಲ್ಲ, ಅಂತಹದಕ್ಕೆ ಅವಕಾಶ ಕೊಡಬಾರದು ಎಂದು ಎಲ್ಲರಿಗಿಂತ ಮೊದಲೇ ಕುಟುಕಿದ್ದಾರೆ. ರಾಜಕೀಯದಲ್ಲಿ ಯಾರೂ ಶ್ವಾಶ್ವತ ಶತ್ರುಗಳು ಅಲ್ಲ ಮತ್ತು ಮಿತ್ರರೂ ಅಲ್ಲ. ನೋಡ್ತಾಯಿರೋಣ ಏನಾಗುತ್ತೆ ಅಂತ.
Sir,
ಪ್ರತ್ಯುತ್ತರಅಳಿಸಿPublic have already tasted the bitterness of BJP after tasting the from Cong & JDS.Reddy bros vere already against to cong & JDS after the cassette episode.How can they join JDS.When alredy in too many scams they are not allwed in to cong.They will definetly build a new party & many from all parties will join and form a new govt in karnataka.Sriramulu is a scapegoat for reddy bros as he is not a bro but inlaw.Tried as a samle in to public