ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಸೋಮವಾರ ಸಂಜೆ ರಾಜ್ಯಪಾಲ ಹಂಸರಾಜ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾರಣ ನಿಯಮ ಬಾಹಿರ ವಾಗಿ ನಿವೇಶನ ವನ್ನು ಹೊಂದಿದ ಆರೋಪದ ಮೇಲೆ. ಇದೆಲ್ಲ ಶುರುವಾಗಿದ್ದು ಒಂದು ಆಂಗ್ಲ ಮಾಧ್ಯಮ ವರದಿಯಿಂದ
ನ್ಯಾ.ಶಿವರಾಜ್ ಪಾಟೀಲ್ ನೇಮಕವಾಗಿದ್ದು ಯಡ್ಯೂರಪ್ಪನವರಿಂದ, ಮೊದಲೇ ಯಡ್ಯೂರಪ್ಪ ಭ್ರಷ್ಟಾಚಾರ ಆರೋಪವನ್ನು ಎದುರಿಸುತಿದ್ದಾರೆ ಹಾಗು ತಮ್ಮದೇ ಜಾತಿಯವರನ್ನು ಅವರು ನೇಮಕ ಮಾಡಿದ್ದಾರೆ ಆದ್ದರಿಂದ ಇದೇ ಹಿನ್ನಲೆ ಮೇಲೆ ಶಿವರಾಜ್ ಪಾಟೀಲ್ ರ ಮೇಲೆ ಒಂದು ಕಣ್ಣು ಇಟ್ಟು ಅವರ ಆಸ್ತಿ ಪಾಸ್ತಿ ಗಳನ್ನು ವಿವರವನ್ನು ಕಲೆ ಹಾಕಿದ್ದಾರೆ. ೩ ನಿವೇಶನಗಳು ಕಂಡ ಕೂಡಲೆ ಅವರ ಮೇಲೆ ಆರೋಪ ಮಾಡಿದ್ದಾರೆ
ಮೊದಲನೆಯದಾಗಿ '1982ರಲ್ಲಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲನಾಗಿ ಸೇವೆ ಸಲ್ಲಿಸುತ್ತಿರುವಾಗ ವಸಂತನಗರದಲ್ಲಿ ಸಣ್ಣ ನಿವೇಶನವೊಂದನ್ನು ಖಾಸಗಿ ವ್ಯಕ್ತಿಯಿಂದ ಖರೀದಿಸಿ ಮನೆ ಕಟ್ಟಿದ್ದರು. ಈ ನಿವೇಶನವನ್ನು ಸರ್ಕಾರ ಅಥವಾ ಯಾವುದೇ ಸೊಸೈಟಿಯಿಂದ ಪಡೆದುಕೊಂಡಿಲ್ಲ'
ಎರಡನೆಯದಾಗಿ 1994ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಕರ್ನಾಟಕ ನ್ಯಾಯಾಂಗ ಇಲಾಖೆ ಹೌಸಿಂಗ್ ಸೊಸೈಟಿಯಿಂದ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನವೊಂದನ್ನು ಪಡೆದುಕೊಂಡಿದ್ದರು
ಮೂರನೆಯದು, 2006ರಲ್ಲಿ ಅಂದರೆ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿ ಸ್ಥಾನದಿಂದ ನಿವೃತ್ತಿಯಾದ ಬಳಿಕ ಅವರ ಪತ್ನಿಯು ನಾಗವಾರದಲ್ಲಿ ವೈಯಾಲ್‌ಕಾವಲ್ ಹೌಸಿಂಗ್ ಸೊಸೈಟಿಯಿಂದ ನಿವೇಶನವೊಂದನ್ನು ಖರೀದಿಸಿದ್ದರು. ಸಮಸ್ಯೆಗೆ ಈಡು ಮಾಡಿದ್ದು ಇದೇ ಸೈಟ್ ವಿಚಾರ, ತಮ್ಮ ಹೆಸರಿನಲ್ಲಿ ವಸಂತನಗರದಲ್ಲಿ ಒಂದು ನಿವೇಶನ ಇದ್ದಿದ್ದರೂ ಹೆಂಡತಿ ಹೆಸರಲ್ಲಿ ಮತ್ತೊಂದು ಹೌಸಿಂಗ್ ಬೋರ್ಡ್ ನಿವೇಶನ ಕೊಂಡ ಆರೋಪ.
ಕೂಲಂಕುಷವಾಗಿ ವಿಚಾರಣೆ ನಡೆಸಿದರೆ ಸತ್ಯ ಏನಂತ ಗೊತ್ತಾಗುತ್ತೆ. ಹೋಗಲಿ ಎಂದರೆ ಕೆ,ಜಿ,ಬಾಲಕೃಷ್ಣನ್ ಮತ್ತು ಪಿ,ಡಿ,ದಿನಕರನ್ ರವರು ಎದುರಿಸಿದ ಆರೋಪ ಗಳಿವೆಯಾ? ಯಕಶ್ಚಿತ್ ಒಂದು ಕ್ಷುಲ್ಲಕ ಕಾರಣದಿಂದ ಅವರ ಜೀವಮಾನ ವಿಡಿ ಕಾಪಾಡಿಕೊಂಡು ಬಂದಿದ್ದ ಪ್ರಾಮಣಿಕತೆ ಗೌರವ ಮಣ್ಣು ಪಾಲು ಮಾಡಲು ಹೊರಟಿದ್ದು ಎಷ್ಟು ಸರಿ? ಅವರಂಥ ದಕ್ಷ ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ಸಮರ ಸಾರಲು, ಅವರ ರಾಜೀನಾಮೆ ಪಡೆಯಲು ಇದು ಸಮಂಜಸವಾದ ಸಮಯವೆ?
ಅವರು ಸಲ್ಲಿಸಿದ 2ಜಿ ತರಂಗಗುಚ್ಛ ಹಗರಣದ ವರದಿಯಿಂದಾಗಿ ಎ ರಾಜಾರಂಥ ಹಗಲು ದರೋಡೆಕೋರರು ಇಂದು ತಿಹಾರ್ ಜೈಲಿನಲ್ಲಿ ದ್ದಾರೆ. ಆ ಪ್ರಕರಣಗಳ ವಿಚಾರಣೆಗೆ ಹಿನ್ನಡೆ ಉಂಟಾಗುವುದಿಲ್ಲ ಎನ್ನುವ ಗ್ಯಾರಂಟಿ ಇದೆಯಾ?
ಕೆಲ ರಾಜಕೀಯ ಮುಖಂಡರು ಇಂತಹ ಸಮಯದಲ್ಲಿ ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ, ಯಾಕೆಂದರೆ ಅವರು ನ್ಯಾಯಮೂರ್ತಿ ಯಾಗಿದ್ದಾಗ ಕಳಂಕಿತ ಹಾಗೂ ಭ್ರಷ್ಟರಿಗೆ ಚೆನ್ನಾಗಿ ಬಿಸಿ ಮುಟ್ಟಿಸುತಿದ್ದರು.
ಆರೋಪ ಕೇಳಿಬಂದ ತಕ್ಷಣ ಸೆ. 14 ರಂದು ನಿವೇಶನ ವನ್ನು ಹಿಂದಿರುಗಿಸಿದ್ದಾರೆ, ಆದರೆ ಅದನ್ನೇ ಮುಂದಿಟ್ಟುಕೊಂಡು ಅಕ್ರಮ ಎಸಗಿದಿದ್ದುಕ್ಕಾಗಿ ಆರೋಪಿ ಎಂದು ಬಿಂಬಿಸಿದ್ದುದು ಎಷ್ಟರ ಮಟ್ಟಿಗೆ ಸರಿ? ಬೆಟ್ಟದಷ್ಟು ಭ್ರಷ್ಟಾಚಾರದ ಸಮಸ್ಯೆಗಳು ನಮ್ಮ ಮುಂದೆ ಇರುವಾಗ, ಅದೇ ಬೆಟ್ಟವನ್ನು ಇಲಿಗಾಗಿ ಅಗಿಯುವುದು ಎಲ್ಲಿಯ ನ್ಯಾಯ? ತಪ್ಪಿನ ಪ್ರಮಾಣ ಎಷ್ಟೇ ಇರಲಿ, ತಪ್ಪು ತಪ್ಪೇ. ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿರುವಾಗ ಅದನ್ನೇ ದೊಡ್ಡದು ಮಾಡಿಕೊಂಡು, ಮುಂದಿನ ದೊಡ್ಡ ಸಮಸ್ಯೆಗಳನ್ನು ಸಣ್ಣದಾಗಿಸುವುದು ಎಷ್ಟು ಸರಿ? ಇಂತಹ ಪ್ರವೃತ್ತಿಯಿಂದ ಪ್ರಾಮಾಣಿಕ ವ್ಯಕ್ತಿ ಗಳಿಗೆ ಹಿನ್ನಡೆಯಾಗಿ ಇಂತಹ ಯಾವುದೇ ಜವಬ್ದಾರಿಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಭ್ರಷ್ಟಾಚಾರ ವಿರುದ್ಧ ದ ಹೋರಾಟಕ್ಕೆ ಸೋಲಾಗುತ್ತದೆ. ಭ್ರಷ್ಟರ ಕೈ ಮೇಲಾಗುತ್ತದೆ.
Kannadaprabha 24.09.2011
Kannadaprabha 22.09.2011
Kannadaprabha 21.09.2011
sampadakeeya - Vishweswara Bhat
Kannadaprabha 20.09.2011
Samyukta Karnataka 20.09.2011
ಎಡಬಿಡಂಗಿ ಎಲೆಕ್ಟ್ರೊನಿಕ್ ಮೀಡಿಯಾದವರಿಂದಲೇ ಇಂರ ಅಚಾತೂರ್ಯ ನೆಡೆಯುವುದು.
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗ್‌ನಲ್ಲಿನ ಬರಹಗಳನ್ನು ನಾನು ಓದಿದ್ದೇನೆ. ನೀವು ಶಿವರಾಜ ಪಾಟೀಲ ರಾಜಿನಾಮೆ ವಿಷಯವನ್ನು ಒಂದೇ ದೃಷ್ಟಿಯಿಂದ ನೋಡುತ್ತಿದ್ದೀರಿ. ಶಿವರಾಜಪಾಟೀಲ್ ಸೈಟಿನ ವಿಚಾರದಲ್ಲಿ ರಾಜಿನಾಮೆ ನೀಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ಸೈಟಿನ ವಿಚಾರದಲ್ಲಿ ಸಮರ್ಥ ದಾಖಲೆಗಳನ್ನು ಜನತೆಯ ಮುಂದೆ ಇಡಬೇಕಿತ್ತಲ್ಲವೇ? ದಯವಿಟ್ಟು ನಿಮ್ಮ ಬರವಣಿಗೆಯನ್ನು ಜಾತಿಯ ಸಂಕೋಲೆಯಿಂದ ಹೊರಗೆ ತನ್ನಿ. ಅವರು ರಾಜಿನಾಮೆ ನೀಡಿದ್ದು ಸರಿ.
ಪ್ರತ್ಯುತ್ತರಅಳಿಸಿವಿಶ್ವನಾಥರೇ, ದಯಮಾಡಿ ಯಾವ ದೃಷ್ಟಿಯೆಂದು ವಿವರಿಸುತ್ತೀರ?
ಪ್ರತ್ಯುತ್ತರಅಳಿಸಿಸೈಟಿನ ವಿಚಾರದ ಬಗ್ಗೆ ಆಸ್ತಿ ಪ್ರಕಟನೆಯಲ್ಲಿ ತಿಳಿಸಿಲ್ಲವೇ?
ನನ್ನ ಬರವಣಿಗೆ ಯಲ್ಲಿ ಯಾವ ಜಾತಿಯ ಸಂಕೋಲೆ ನಿಮಗೆ ಕಾಣಿಸಿತು ಸ್ವಾಮಿ.
ಒಬ್ಬ ಪ್ರಾಮಣಿಕ ವ್ಯಕ್ತಿಯ ಪರವಾಗಿ ನಾನು ಬರೆದಿದ್ದೇನೆ ಹೊರತು ಯಾವುದೇ ಜಾತಿಯನ್ನು ಓಲೈಸುವುದಕ್ಕೆ ನಾನು ಬರೆದಿಲ್ಲ.
ಪಕ್ಕದ ತಟ್ಟೆಯಲ್ಲಿ ಹೇಸಿಗೆ ಬಿದ್ದಿದೆ ಅದನ್ನು ಬಿಟ್ಟು ಈ ತಟ್ಟೆಯಲ್ಲಿ ನೊಣ ಹುಡುಕುತ್ತಿರುವವರಿಗೆ ಏನನ್ನಬೇಕು? ಹಾಗಿದೆ ಇಂದಿನ ಪರಿಸ್ಥಿತಿ.
ವಿಶ್ವ ಅವರೇ, Prajaprabhutva Blog ನವರು ಸರಿಯಾಗೆ ಬರೆದಿದ್ದಾರೆ. ಅವರ ಬ್ಲಾಗ್ ಗಳು ನೇರ ಮತ್ತು ತೀಕ್ಷ್ಣ ಮಾತಿನಲ್ಲಿರುತ್ವೆ. ಅವರ ವಿರೋಧ ಇರೋದು ಈ ಡೋಂಗಿ ಜಾತ್ಯಾತೀತರ ಬಗ್ಗೆ. ಯಾವುದೇ ಜಾತಿಯ ಪರ ಅವರು ಬರೆಯೋಲ್ಲ.
ಪ್ರತ್ಯುತ್ತರಅಳಿಸಿ-ರಾಜು