ನಟರಾಜ್ ಒಬ್ಬ ಮೇಧಾವಿ, ಅತಿ ಬುದ್ದಿವಂತ, ಅತ್ಯದ್ಬುತ ವಿಚಾರ ಪ್ರತಿಪಾದಕ, ತತ್ವಜ್ನಾನಿ, ಮಹಾನ್ ವೇದಾಂತಿ.... ವರೊಂದು ಧೈತ್ಯ ಪ್ರತಿಭೆ. ಸಿದ್ದಾಂತ, ವೇದಾಂತ ಮತ್ತು ವೈಚಾರಿಕತೆ ಯಲ್ಲಿ ಪ್ರತಿಭಾವಂತರು ಅವರು..... ಅಂತ ಹೇಳಿದರೆ ಉತ್ಪ್ರೇಕ್ಷೆ ಎನಿಸಬಹುದು. ಯಾಕೆಂದರೆ.................
ಬಿರುದು ಬಾವಲಿಗಳು ಪ್ರಶಂಷೆಗಳು ಬರಬೇಕೆಂದೇ ಮಾಡುವುದು!! ಬರೆಯುವುದು!! ಪ್ರಶಸ್ತಿಗಾಗೆ ಸಿನೆಮ ತೆಗೆಯುವುದು!! ಜ್ಞಾನಪೀಠಕ್ಕಾಗೆ ಬರೆಯುವುದು!! ಇವುಗಳು ಅಂತಂಕಕಾರಿ ಬೆಳವಣಿಗೆ!! ಹಾಗೆ ಮಾದದಿದ್ದವರನ್ನು ಎಲೆಮರೆಯ ಕಾಯಿ ಎಂದು ವರ್ಣಿಸುವುದು!! ಯಾರಿಗೋ ಸಿಗಬೇಕಾಗಿತ್ತು ಎಂದು ದೊಂಬಿ ಮಾಡುವುದೂ!!ಮಾಡಿಸುವುದು!!ಯಾವುದೋ ಆಸೆ ಆಮಿಷ್ಕ್ಕಾಗಿ ತಮ್ಮಗೆ ಇರದಿರುವ ವಿಷಯಜ್ನಾನವನ್ನು ಬೇರೆಯವರಿಂದ ಕದ್ದು ಅದನ್ನು ಕೇವಲ ತಮ್ಮ ಹೆಸರಿನಲ್ಲಿ ಪ್ರತಿಷ್ಟೇಗೊಸ್ಕರವೇ ಪ್ರಕಟಿಸಿಕೊಳ್ಳುವುದು!!ಇವೆಲ್ಲ ಒಳ್ಳೆ ಆರೋಗ್ಯಕರ ಮನಸ್ಸಿನ ಲಕ್ಷಣಗಳಲ್ಲ!!ಒಂದು ವೇಳೆ ಅದು ಒಳ್ಳೆಯ ಬರವಣಿಗೆಯೇ ಆಗಿದ್ದರೆ!! ವಿಚಾರಗಳೇ ಆಗಿದ್ದರೆ!! ಅದರಲ್ಲಿ ಯಾವುದಾದರೂ ಒಳ್ಳೆಯ ಪ್ರಯೋಜಕ ಅಂಶಗಳು ಇದ್ದರೆ!! ಅದು ಸಂಪಿಗೆ ಹೂವಿನಂತೆ ಪಾರಿಜಾತದ ಹೂವಿನಂತೆ ಅದು ಎಲೆ ಮರೆಯಲ್ಲಿ ಇದ್ದರೂ ಅದರ ಪರಿಮಳ ಎಲ್ಲೆಡೆಯೂ ಹರಡಿ ಅದು ಎಲ್ಲಿಗೆ ತಲುಪಬೇಕೋ ಅದು ತಲುಪಿಯೇ ತೀರುತ್ತದೆ!! ಹಾಗು ಅದಕ್ಕೆ ಯಾವ ಮನ್ನಣೆ ಸಿಗಬೇಕೋ ಅದು ಸಿಕ್ಕಿಯೇ ತೀರುತ್ತದೆ!!ಅದನ್ನು ಬರಹಗಾರರಾಗಲೀ ಅಥವ ಯಾರೇ ಆಗಲೀ ನಿರೀಕ್ಷಿಸಿದ ಮಾತ್ರಕ್ಕೆ ಅದು ಜನಮನ್ನಣೆಯದೂ ಆಗಿರುವುದಿಲ್ಲ!!
................ಅಂತ ಅವರೇ ಪೋಸ್ಟ್ ಮಾಡಿದ್ದಾರೆ.
ನಟರಾಜ್ ಅಫ್ಗಾನಿಸ್ಥಾನ್ ನ ಕಾಬೂಲ್ ನಲ್ಲಿ AFGHANTV ಯಲ್ಲಿ ಕೆಲಸ ಮಾಡುತಿದ್ದಾರೆ. ಇರಾಕ್ ಮತ್ತು ಅಫ್ಗಾನಿಸ್ಥಾನ್ ನಲ್ಲಿ ಕೆಲಸ ಮಾಡುವುದಕ್ಕೆ ಬಹಳ ಜನ ಹೆದರುತ್ತಾರೆ. ಆದರೆ ಯಾವುದೇ ಭಯವಿಲ್ಲ ದೆ ನಮ್ಮ ಕನ್ನಡಿಗರೊಬ್ಬರು Cheif Operating Officer ಆಗಿ ಕೆಲಸ ಮಾಡುತಿದ್ದಾರೆ ಎನ್ನುವುದು ಬಹಳ ಸಂತೋಷದ ವಿಚಾರ.
ಇವರ ವೃತ್ತಿ ಜೀವನದ ಅನುಭವಗಳ ಬಗ್ಗೆ ಅವರ ಕೈಯಿಂದಲೇ ಒಂದು ಬ್ಲಾಗ್ ಬರೆಸುವ ಆಲೋಚನೆ ಮಾಡಿದ್ದೀನಿ, ಅವರ ಅನುಭವಗಳನ್ನು ಬರೆದರೆ ಅದೊಂದು ರೋಚಕ ಕಥಾನಕವಾಗುವುದು ಅಂತ ಅನ್ನಿಸುತ್ತೆ.
ಕಳೆದ ತಿಂಗಳು ನಾನು ಹೀಗೆ ಟಿವಿ ನೋಡುತ್ತಿರಬೇಕಾದರೆ ಕಾಬೂಲಿನಲ್ಲಿ ಬಾಂಬ್ ಸ್ಪೋಟ ದ ವರದಿ ಯಾಯಿತು, ನನಗೆ ತಕ್ಷಣ ನೆನಪಾದವರು ನಟರಾಜ್, ಅಯ್ಯೊ ಯಾಕೆ ಇವರು ಅಂತಹ ದೇಶದಲ್ಲಿ ಹೋಗಿ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿ ಮಾಡಿ ಕೊಂಡಿದ್ದಾರೆ, ಈ ನಮ್ಮ ಭಾರತ ದೇಶದಲ್ಲಿ ಅವರಿಗೊಂದು ಕೆಲಸ ಸಿಗಲಾರದೆ. ಅಥವ ಪಕ್ಕದ ಶಾಂತಿಯುತ ಅರಬ್ ರಾಷ್ಟ್ರ ಗಳಲ್ಲಿ ಸಹ ಕೆಲಸ ಸಿಗದೆ? ಎಂದು ಮನಸ್ಸು ಚಡಪಡಿಸುತಿತ್ತು.. ಕೆಲ ಘಂಟೆಗಳ ನಂತರ ಫೇಸ್ ಬುಕ್ಕಿನಲ್ಲಿ ಅವರ ಒಂದು ಪೋಸ್ಟ್ ನೋಡಿದೆ.
"ಸ್ನೇಹಿತರೆ, ನಾವಿರುವ ಕಟ್ಟದ ಸಮೀಪದಲ್ಲೆ ಬಾಂಬ್ ಸ್ಪೋಟವಾಯಿತು, ನಾನು ಇಂತಹ ಘಟನೆಗಳ ಕುರಿತು ನೋಡಿದ್ದೆ ಮತ್ತು ಕೇಳಿದ್ದೆ ಆದರೆ ಈಗ ಖುದ್ದು ನೋಡುವ ಅನುಭವ ವಾಯಿತು, ಅದೄಷ್ಟವಶಾತ್ ನಮಗೇನು ಆಗಿಲ್ಲ ಅಂತ ತಣ್ಣಗೆ ಹೇಳಿದಾಗ ನನಗೆ ಸಣ್ಣಗೆ ಕಂಪಿಸಿದ ಅನುಭವವಾಯಿತು.
ಅಲ್ಲ ಮಾರಾಯ ಬಾಂಬ್ ಅಂತ ಕೇಳಿದರೆ ನಾವು ಬೆಚ್ಚಿ ಬೀಳ್ತೀವಿ, ಈ ಮನುಷ್ಯ "ಅನುಭವವಾಯ್ತು" ಅಂತ ಎಷ್ಟು ಕೂಲಾಗೆ ಹೇಳ್ತಾಯಿದಾನಲ್ಲಾ... ಅಂತ ಮನಸ್ಸಿನಲ್ಲಿ ಅಂದ್ಕೊಂಡೆ.
ಒಂದು ಕಡೆ ಹೀಗೆ ಬರೆಯುತ್ತಾರೆ
ಯಾವುದೇ ವಿಚಾರವನ್ನು ಬರೆದವನಿಗಾಲೀ ಯಾವುದೇ ಸಂಶೋಧನೆ ಮಾಡಿದವರಿಗಾಗಲೀ ಜ್ಞಾನ ಎಲ್ಲಿಂದಾ ಬಂತೂ ಎಂದು ಯೋಚಿಸಿ ಮೂಲಕ್ಕೆ ಹೋದರೆ ಮೂಲದಲ್ಲಿ ಅದನ್ನು ಯಾರು ಹೇಳಿದರೂ?!!ಅದು ಹೊರಗಡೆಯಿಂದ ಬಂದ ಜ್ನಾನವಾಗಿರುವುದಿಲ್ಲ!!ಅದರ ಮೂಲ ನಮ್ಮ ಮೂಲದಲ್ಲೇ ಇರುತ್ತದೆ!!ಅದಿರು ಲೋಹ ಎಲ್ಲಿಂದಲೋ ಬರುವುದಿಲ್ಲ ಅದು ಭೂಮಿಯಲ್ಲೇ ಹುದುಗಿರುತ್ತದೆ!!!ಬೆಣ್ಣೆ ಎಲ್ಲಿಂದಲೋ ಬರುವುದಿಲ್ಲ ಹಾಲಿನಲ್ಲೇ ಕಾಣದಂತೆ ಬೆರೆತಿರುತ್ತದೆ!!!
ನೋಡಿದ್ರಾ, ಎಲ್ಲ ವಿಷಯಗಳು ನಮಗೆ ತಿಳಿದಿರುವಂತಹದ್ದೆ. ಆದರೆ ನಾವು ಅಂತಹ ವಿಚಾರ ಮಾಡುವುದೇ ಇಲ್ಲ, ಇವರ ಸಂಗ್ರಹದಲ್ಲಿರುವ ಎಲ್ಲ ಮುತ್ತುಗಳು ನಾವು ಎಲ್ಲೋ ಒಂದು ಕಡೆ ಓದಿರುವಂತಹದ್ದೆ ಮತ್ತು ಹಿರಿಯರು ನಮಗೆ ಹೇಳಿರುವುದೇ. ಆದರೆ ಅದನ್ನೆಲ್ಲ ತಮ್ಮ ಸಾಹಿತ್ಯ ಭಂಡಾರದಿಂದ ಹೊರತೆಗೆದು ಇಂದಿನ ಆಧುನಿಕ ಯುಗದಲ್ಲಿ ನಮ್ಮ ಕೆಲಸ ಕಾರ್ಯಗಳ ಮಧ್ಯದಲ್ಲಿ ಹೊಸ ಚೈತನ್ಯ ತುಂಬಿ ನಮ್ಮ ಮುಂದಿನ ಕಾರ್ಯಗಳಿಗೆ ಅಣಿಯಾಗುವಂತೆ ಮಾಡುತ್ತಿರುವ ನಟರಾಜ್ ರವರಿಗೆ ವಂದನೆಗಳು.
ಮನಸ್ಸಿಗೆ ಬೇಸರವಾದಾಗ, ಅಥವ ಕೆಲಸದ ಒತ್ತಡದಿಂದ ದಣಿವಾದಾಗ ಫೇಸ್ ಬುಕ್ ತೆಗೆದರೆ ಅಲ್ಲೊಂದು ಎನರ್ಜಿ ಟಾನಿಕ್ ಸಿಗುತ್ತೆ, ಯಾವಗಲು ಬೇರೊಬ್ಬರನ್ನು ಹಳಿಯುತ್ತ, ಅವನು ಹೀಗೆ ಇವನು ಹೀಗೆ, ಸರ್ಕಾರ ಹಿಂಗಾಯಿತು ಅದು ಇದು ಎನ್ನುವುದರ ಮಧ್ಯೆ ನಟರಾಜ್ ರವರ ಗುಂಪುಗಳಲ್ಲಿನ ಪೋಸ್ಟಗಳು ನಮಗೆ ತಂಗಾಳಿ ಬೀಸುತ್ತವೆ.
ನಾವು ಯಾವಗಲೂ ಈ ಸರ್ಕಾರ ಮತ್ತು ಸಮಾಜ ವನ್ನು ದೂಷಿಸಿತ್ತಾ ಇರುತ್ತೇವೆ, ಸರ್ಕಾರ ಆ ಸೌಲಭ್ಯ ಕೊಡಲಿಲ್ಲ ಇದನ್ನು ಮಾಡಲಿಲ್ಲ , ಕೆಲವರಂತೂ ಈ ಹರಾಮಿ ದೇಶ, ದರಿದ್ರ ದೇಶ ಅಂತ ಹಾಗೆ ಹೀಗೆ ಬೈಯುತ್ತಾ ಇರುತ್ತಾರೆ, ಈ ಕೆಳಗಿನ ವಿಚಾರ ಧಾರೆ ಗಮನಿಸಿ.
ಸರಕಾರ ಅಂದರೆ ಏನು!!ಅದಕ್ಕೆ ಕಪಾಳಿಗೆ ಹೊದಿಬೇಕಾದವರು ಯಾರು?? ಅದನ್ನು ತಿದ್ದಬೇಕಾದವರು ಯಾರು?? ನಮ್ಮಲ್ಲಿ ಎಲ್ಲಾರೂ ಒಂದಾಗಿ ತಿದ್ದಬೇಕು!!! ಅದಕ್ಕೆ ನಾವಲ್ಲ ಒಂದೇ ಅನ್ನೋ ಮೊನೋಭಾವನೆ ಬರಬೇಕು!!! ಅದಕ್ಕೆ ಸರಿಯಾದ ಮಾರ್ಗದರ್ಶಿ ಬೇಕು!! ಯೋಚನೆಯನ್ನು ತುಂಬುವವರು ಬೇಕು!! ನಾವೆಲ್ಲ ಸಮಾಜದ ಅಂಗಗಳು ಅವಯವಗಳು ಎಂಬ ಸಂದೇಶ ರವಾನೆಯಾಗಬೇಕು!! ಆಗ ತನ್ನಿಂದ ತಾನೇ ದ್ವೇಷ ಅಸೂಯೆ ಮೇಲು ಕೀಳು ಎಂಬ ಭಾವನೆ ಹೋಗುತ್ತದೆ!! ಅದಕ್ಕೆ ಸ್ವಲ್ಪ ಕಾಲ ಬೇಕು!! ಆದರೆ ಇಂದೆಲ್ಲ ನಾಳೆ ಅದು ಆಗೇ ಆಗುತ್ತದೆ!! ದೇಹದಲ್ಲಿ ಎಲ್ಲಾ ಅಂಗಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ!! ಹಾಗೆಯೇ ಸಮಾಜದ ಅಂಗಗಳಾದ ನಾವು ಒಟ್ಟಿಗೆ ಇರ್ಬೇಕು ಎಂಬ ಭಾವನೆ ಎಲ್ಲರಿಗೂ ಬರಬೇಕು!! ಅದು ಬರುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ!! ಎಲ್ಲರೂ ಅಡಿಕೆ ತೋಟವನ್ನು ಮಾಡುತ್ತಾರೆ!! ಆದ್ರೆ ಯೆಷ್ಟುಜನಕ್ಕೆ ಮರಹತ್ತಿ ಕೊನೆಕೊಯ್ಯಲು ಬರುತ್ತದೆ?? ಅದಕ್ಕೆ ಅದನ್ನು ಬಲ್ಲವರು ಬೇಕೇ ಬೇಕಲ್ಲವೇ !!!ಹಾಗೆ ಎಲ್ಲಾ ಕೆಲಸಗಳೂ ಕೂಡ ಟೀಂ ವರ್ಕ್!!ಒಬ್ಬರಿಂದಾ ಒಂದು ಜನಾಂಗದಿಂದ ಒಂದು ಮತ ಧರ್ಮದಿಂದ ಒಂದು ಜಾತಿಯಿಂದಾ ಆಗುವುದಿಲ್ಲ!! ಯಾರೂ ಕಡಿಮೆಯಲ್ಲ ಎಂಬ ಭಾವನೆ ಮೂಡುವ ಮೂಡಿಸುವ ಅವಶ್ಯಕತೆ ಇದೆ!! ಅದು ಬಂದ ದಿನ ಸರಕಾರವೂ ಬದಲಾಗುತ್ತದೆ!!!
! ನಾನು ಎಂಬುದು ಸಮಾಜಕ್ಕಿಂತ ಬೇರೆಯಾಗಿಲ್ಲ!! ಅಥವ ಸಮಾಜ ಎಂಬುದು ನನಗಿಂತಾ ಬೇರೆಯದಲ್ಲ!! ಅನ್ನೋ ಭಾವನೆ ಯಾವುದು ಶಾಶ್ವತ ಎಂಬುದಕ್ಕಿಂತ ನನ್ನ ತಪ್ಪು ಒಪ್ಪುಗಳು ಸಮಾಜದ ಮೇಲೆ ಹಾಗೂ ಸಮಾಜದ ತಪ್ಪು ಒಪ್ಪುಗಳು ನನ್ನಮೇಲೆ ಪರಿಣಾಮ ಬೀರುತ್ತವೆ ಅನ್ನುವ ಪ್ರಜ್ಞೆ ಮುಖ್ಯ!!
ಕೆಲವರು ಸಮಸ್ಯೆಗಳ ಪಟ್ಟಿ ಮಾಡಿ ಜನರೆದುರಿಗೆ ಹಾಗು ಸರ್ಕಾರದೆದುರಿಗೆ ತೆರೆದಿಡುತ್ತಾರೆ, ಮತ್ತೆ ಆಮೇಲೆ........ ಮರೆತು ಹೋಗ್ತಾರೆ, ಏನಾದರು ಘಟನೆ ಸಂಭವಿಸಿದಾಗ ಮಾತ್ರ,. ನಾವು ಈ ಬಗ್ಗೆ ವರದಿ ಮಾಡಿದ್ದೆವು, ಈ ಬಗ್ಗೆ ಮುಂಚೇನೆ ಬರೆದಿದ್ದೆವು .. ಈ ಗ ನಡೆಯಬಾರದ ಘಟನೆ ನಡೆದು ಹೋಗಿದೆ ಅಂತ ಬರೆದು ಯಥಾ ಪ್ರಕಾರ ಬೇರೊಂದು ಸಮಸ್ಯೆಬಗ್ಗೆ ದೃಷ್ಟಿ ಇಟ್ಟು ಧೈನಂದಿನ ಕೆಲಸದಲ್ಲಿ ನಿರತರಾಗಿರುತ್ತರೆ.. ಆದರೆ ಹಳೆಯ ಸಮಸ್ಯೆಗಳ ಬಗ್ಗೆ ಅದರ ಪರಿಹಾರ ಬಗ್ಗೆ.............? ಅದು ಪ್ರಶ್ನೆ ಯಾಗಿಯೆ ಉಳಿಯುತ್ತೆ.
ನಟರಾಜ ರ ಪರಿಚಯ ವಾದದ್ದು ಫೇಸ್ ಬುಕ್ಕಿನಿಂದ, ಆದರೆ ಇದುವರೆವಿಗೂ ನಾನು ಅವರ ಜತೆ ಯಾವುದೇ ಸಂವಾದ ನಡೆಸಿಲ್ಲ. ಅವರ ವಿಚಾರ ಧಾರೆಗಳನ್ನು ಗಮನಿಸುತ್ತಾ ಬಂದಿದ್ದೀನಿ, ಅವರ group ಗಳಾದ
ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!! ಮತ್ತು "ಭಾವನೆಗಳು"FEELINGS
ಅಲ್ಲಿ ಅಧ್ಬುತ ವಿಚಾರಧಾರೆಗಳು ಹರಿದಾಡುತ್ತಿವೆ.
ಎಲ್ಲವನ್ನು ಕೂಡಿ ಹಾಕಿ ಒಂದು ಪುಸ್ತಕಮಾಡಿದರೆ ಅದೊಂದು ಜನಪ್ರಿಯ ಪುಸ್ತಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಪೂರಕವೆಂಬಂತೆ ಗುಂಪಿನ ಸದಸ್ಯರು ಅವರ ಕೈ ಜೋಡಿಸಿ ಅವರ ಉದ್ದೇಶವನ್ನು ಸಾರ್ಥಕ ಗೊಳಿಸುತಿದ್ದಾರೆ
ಭಾವನೆಗಳ ಗುಂಪಿನ ಉದ್ದ್ದೇಶ "ಭಾವನೆಗಳು!! ಎಲ್ಲಾ ರೀತಿಯ ಎಲ್ಲದರ ಬಗ್ಗೆಯ ಭಾವನೆಗಳು!! ಒಂದು ಕ್ಷಣವೂ ನಿಲ್ಲದ ಮಹಾಪೂರದಂತೆ ಹರಿಯುತ್ತಿರುವ ಒಂದೇ ವಿಷಯ ವಸ್ತುವಿನ ಬಗ್ಗೆ ಸಾವಿರ ಮನಸ್ಸಿನ ಸಾವಿರಾರು ಭಾವನೆಗಳು!! ""ಬನ್ನಿ ಭಾವಗಳೇ ಬನ್ನಿ ನನ್ನೆಡೆಗೆ ಕರೆಯುವೆ ಕೈಬೀಸಿ""ಎಂಬ ಕವಿಯ ಕರೆಯಂತೆ ಬನ್ನಿ ಭಾವಗಳೇ!! ನವಿರಾಗಿರಿ!! ಮ್ರುದುವಾಗಿರಿ!!ಮುದವಾಗಿರಿ!!!"
ಎಂತಹ ಸುಮಧುರವಾದ ಸಾಲುಗಳು, ಮನಸ್ಸಿಗೆ ಬೇಸರವಾದಾಗ ಒಂದು ಸುತ್ತು ಹಾಕಿ ಬಂದರೆ ಮನಸ್ಸು ಚೇತೋಹಾರಿ ಆಗುವುದು. ಹೊಸ ಚೈತನ್ಯ ತುಂಭಿ ಮತ್ತೆ ನಾವು ಕ್ರಿಯಾಶೀಲ ರಾಗುತ್ತೇವೆ. ಅದರ್ಲ್ಲಿ ಪೋಸ್ಟ್ ಮಾಡುವ ಎಲ್ಲರೂ ಮನಸ್ಸಿನ ತಾಕಲಾಟಗಳನ್ನು ಒಂದು ಕಡೆ ಹಾಕಿ ಭಾವನೆಗಳ ಜತೆ ಗುದ್ದಾಡಿ ಜಗ್ಗಾಡಿ ದೇಹ ಮತ್ತು ಮನಸ್ಸು ಗಳ ನ್ನು ಹಗುರವಾಗಿಸುತ್ತವೆ.
ಒಂದು ಕಡೆ ಹೀಗೆ ಪೋಸ್ಟ್ ಮಾಡುತ್ತಾರೆ..................
----------------
ದ್ವಂದ್ವ ಗಳು ಹೇಗಿರುತ್ತವೆ ನೋಡಿ!! ನಾವು ನಮ್ಮ ದಿನ ನಿತ್ಯದ ಬದುಕಿನಲ್ಲಿ ಬೇಕಾದಷ್ಟು ಜೀವಿಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹತ್ಯೆ ಮಾಡುತ್ತಲೇ ಇರುತ್ತೇವೆ!! ಉದಾಹರಣೆಗೆ ಒಂದು ಸೊಳ್ಳೆ ನಮ್ಮನ್ನು ಕಚ್ಚಿದ ಒಂದೇ ಕಾರಣಕ್ಕಾಗಿ ಮರಣ ಹೊಂದಬೇಕಾಗಿತ್ತದೆ!!ಇನ್ನು ಸೂಕ್ಷ್ಮಾಣುಗಳಾದ ಬ್ಯಾಕ್ಟೀರಿಯಗಳನ್ನೂ ರೋಗ ನಿರೋಧಕ ಮಾತ್ರೆಗಳ ಅಥವ ಚುಚ್ಚುಮದ್ದುಗಳ ಮೂಲಕ ಸಾಯಿಸುತ್ತೇವೆ!!ಮನೆಯಲ್ಲಿ ಇಲಿಯ ಕಾಟ ಜಾಸ್ತಿಯಾಗಿದೆಯೆಂದು ಅದಕ್ಕೆ ವಿಷ ನೀಡಿ ಸಾಯಿಸುತ್ತೇವೆ!!ಮುಘ್ಧವಾಗಿ ತನಗೆ ಏನೋ ಆಹಾರ ಸಿಕ್ಕೆದೆ ಎಂದು ತಿಳಿದು ಅದು ತನ್ನನ್ನು ಸಾಯಿಸಲು ಇಟ್ಟಿರುವ ವಿಷ ಎಂದು ತಿಳಿಯದೆ ಬದುಕಲಿಕ್ಕಾಗಿ ತಿನ್ನುತ್ತದೆ ಸಾಯುತ್ತದೆ!! ಅದನ್ನು ನಿರ್ದಯವಾಗಿ ಆಹಾರ ಪರಬ್ರಹ್ಮ ವಸ್ತು ಎಂದು ಹೇಳುವ ನಾವು ಆ ಪರಬ್ರಹ್ಮ ವಸ್ತುವಿನಿಂದಲೇ ಮೋಸ ಹೋಗಿ ಸಾಯುವಂತೆ ಮಾಡುತ್ತೇವೆ!! ಇವೆಲ್ಲ ಕೇವಲ ನಾವು ಬದುಕಲಿಕ್ಕಾಗಿ!!ಯಾವುದೇ ಜೀವಿಯಾದರೂ ಅದನ್ನು ಶ್ರುಷ್ಟಿಸಿದ್ದು ಪರಮಾತ್ಮನೇ ಅದಕ್ಕೂ ನಮ್ಮಂತೆ ಬದುಕುವ ಹಕ್ಕು ಇದೆ ಎನ್ನುವುದನ್ನು ಮರೆಯುತ್ತೇವೆ!!ಆದರೆ ನಮ್ಮನ್ನು ನಾವು ಕಾಪಾಡಿಕೊಳ್ಳುವ ಸಲುವಾಗಿ ನಿರ್ದಯಿಗಳಾಗುತ್ತೇವೆ!!ಸಂಬಂಧಿಕರೋ ಸ್ನೇಹಿತರೋ ಮರಣ ಹೊಂದಿದಾಗ ದುಃಖ ಉಕ್ಕಿ ಬರುತ್ತದೆ!!ನಮ್ಮನು ನಾವು ಪ್ರಶ್ನಿಸುತ್ತ ಹೋದಲ್ಲಿ ಒಂದು ದೊಡ್ಡ ಪ್ರಪಂಚವೇ ನಮ್ಮೊಳಗೇ ಗೋಚರಿಸುತ್ತದೆ!!ಮತ್ತೆ ಮಾನವೀಯತೆಯ ಬಗ್ಗೆ ಮಾತಾಡಲು ಎಂದೂ ಮರೆಯುವುದಿಲ್ಲ!!ಕಾಡನ್ನು ಕಡಿದು ನಾಡನ್ನು ಮಾಡಿ ಅಲ್ಲಿಯ ಜೀವಸಂಕುಲದ ಅವನತಿಗೆ ಕಾರಣರಾಗುತ್ತೇವೆ!!ಅವು ಅಲ್ಲಿ ತಿನ್ನಲು ಏನೂ ಸಿಗದೇ ನಾವು ಬೆಳೆದಿರುವ ಬೆಳೆಯನ್ನು ತಿನ್ನಲು ನಾಡಿಗೆ ಬಂದರೆ ನಿರ್ಧಾಕ್ಷಿಣ್ಯವಾಗಿ ಹೊಸಕಿ ಹಾಕುತ್ತೇವೆ!!ಮೋಕ್ಷ ಮುಕ್ತಿ ಪಾಪ ಪುಣ್ಯ ಧರ್ಮ ಅಧರ್ಮ ಎಂದು ಏನೇನೊ ಹೇಳುತ್ತೇವೆ!!ಸಕಲ ಚರಚರಗಳಲ್ಲೂ ಭಗವಂತನಿದ್ದಾನೆ ಎಂದು ಭಾಷಣ ಬಿಗಿಯುತ್ತೇವೆ!!ಮಾನವ ಜನ್ಮ ಅತಿ ಶ್ರೇಷ್ಥ ಎಂದು ಕೊಚ್ಚಿ ಕೊಚ್ಚಿ ಇಳಿಸುತ್ತೇವೆ!!ಪ್ರತಿ ಹೆಜ್ಜೆಯಲ್ಲೂ ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತೇವೆ!! ಯಾವ ವನ್ಯ ಮ್ರುಗಗಳೂ ಪ್ರಕೃತಿ ಯನ್ನು ಹಾಳು ಮಾಡುವುದಿಲ್ಲ!! ಅಂಥ ಘನ ಘೋರ ಕೃತ್ಯ ಎಸುಗುತ್ತೇವೆ !!ಛಿ ಛೀ !!ಇದೂ ಒಂದು ಜನ್ಮ ವೆ?!!
----------------
ಭಾವನೆಗಳು ಹರಿಯುವ ನೀರಿನ ಹಾಗೆ!! ಒಂದುಕಡೆ ನಿಂತುಕೊಳ್ಳುವುದಿಲ್ಲ ಹರಿಯುತ್ತಲೇ ಇರುತ್ತದೆ!! ಒಮ್ಮೊಮ್ಮೆ ನೀರು ನದಿ ಏನೆಲ್ಲ ಮಾಡುತ್ತದೆಯೋ ಅದನ್ನೆಲ್ಲಾ ಭಾವನೆಗಳೂ ಮಾಡುತ್ತವೆ!! ಇದನ್ನು ಹೆಚ್ಚು ಹೇಳುವುದು ಬೇಡ!! ಆದರೆ ನೀರನ್ನು ಯಾವುದೇ ಪಾತ್ರೆಯಲ್ಲಿ ಹಾಕಿದರೂ ಅದರ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ!!ಅಂದರೆ ಭಾವನೆಗಳು ಬದಲಾಗುತ್ತಲೇ ಇರುತ್ತವೆ!! ಕಾಲ ದೇಶ ವರ್ತಮಾನ ಪರಿಸ್ಥಿತಿ ಇವುಗಳಿಗೆ ಅನುಗುಣವಾಗಿ ಇದೆಲ್ಲವೂ ಹಿಂದೆ ಹೇಳಿರುವುದೇ ಯೆಲ್ಲಾರೀಗೂ ಗೊತ್ತಿರುವುದೇ!!!ಭಾವನೆಗಳು ಹರಿಯುವ ನೀರಿನಂತೆ ಎಂದಮೇಲೆ ಅದು ತಿರುಗಿ ಹರಿಯುವುದಿಲ್ಲ ಅದರ ಹರಿವು ಏಕಮುಖ!!ಅಂದರೆ ಅದು ಇಳಿಮುಖ ವಾಗಿಯೇ ಇರುತ್ತದೆ!!ಅಂದರೆ ಗುರುತ್ವಾಕರ್ಷಣೆಗೆ ಒಳಗಾಗಿ ಮೆಲಿನಿಂದಾ ಕೆಳಗೆ!!ಅಂದರೆ ಎಳೆಯಲ್ಪದುತ್ತದೆ ಆಕರ್ಷಣೆ ಇದ್ದಲ್ಲಿಗೆ!!!ಇದೂ ಕೂಡ ಅಂಥಹ ವಿಶೇಷವೇನೂ ಅಲ್ಲ!!!ಆದರೆ ಭಾವನೆಗಳು ನೀರಿನ ರೂಪದಿಂದಾ ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುವಂತೆ ಆದರೆ??!! ಒಂದುವೇಳೆ ಅದು ದ್ರುವಪ್ರದೇಶ ಆಗಿ ಅಲ್ಲಿ ಯಾವಾಗಲೂ ಅದು ನೀರಿನ ರೂಪಕ್ಕೆ ಬರದೆ ಹೆಪ್ಪುಗಟ್ಟಿ ಹಿಮಾಲಯದಂತೆ ನಿಂತುಬಿಟ್ಟರೆ???!!!ಹೌದು ಆಗ ಪ್ರತ್ಯಕ್ಷ ಕಲ್ಲಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಇರುವ ನೀರೆಂಬ ಕಲ್ಲು ಎಷ್ಟು ಕಠಿಣ ಅಲ್ಲವೇ ??!!ಹಾಗೆ ಆಗಲು ಕಾರಣ ಅತಿಶೈತ್ಯ ವೆಂಬ ಸುತ್ತಲಿನ ಪ್ರತಿಕೂಲತೆ!!ಚೈತನ್ಯವೆಂಬ ಬಿಸಿಯ ಕೊರತೆ!!ಉತ್ತೇಜನ ಎಂಬ ಶಾಖದ ಕೊರತೆ!!ಆದರೂ ನೋಡಲು ಸುಂದರವಾದ ಹಿಮ (ನೀರ್ಗಲ್ಲು)ತನ್ನಲ್ಲಿ ಎಷ್ಟು ಕೊರತೆಯನ್ನು ಹೊಂದಿರಬಹುದು ಎಂಬ ಕಲ್ಪನೆಯೂ ಕೂಡ ಅದನ್ನು ನೋಡಿ ಸಂತೋಷ ಪಡುವವರಿಗೆ ಇರುವುದಿಲ್ಲಾ!!ಎಂಥಹ ವಿಪರ್ಯಾಸ ಅಲ್ಲವೇ!!!,,,,,,,,
----------------
" ನನ್ನ ಸ್ನೇಹಿತರು ಒಬ್ಬರು ಹೇಳಿದರು ಯಾಕೋ ಮನಸ್ಸಿಗೆ ಒಳ್ಳೆಯ ವಿಚಾರ ಬರುತ್ತಿಲ್ಲ ಎಂದು!!ಭಾವನೆಗಳೇ ಹಾಗೆ ಸಮುದ್ರದ ಅಲೆಗಳಂತೆ!! ಒಂದೊಂದು ಸಾರಿ ಭಾರೀ ಅಲೆಗಳ ಅಬ್ಬರ!! ಮತ್ತೊಮ್ಮೆ ಶಾಂತ!! ಉಬ್ಬರ ಇಳಿತಗಳು!! ಕೆಲವೊಮ್ಮೆ ಸುನಾಮಿ!! ಹೀಗೆ ನಮ್ಮ ಭಾವನೆಗಳೂ !!!ಆದರೆ ನನಗೆ ಒಳ್ಳೆಯ ವಿಚಾರಗಳು ಮೂಡುತ್ತಿಲ್ಲ ಎಂದು ಅವರಿಗೆ ಅನ್ನಿಸುತ್ತಿದೆ ಅಂದಮೇಲೆ ಅವರ ಪ್ರಜ್ಞೆ ಮನಸ್ಸನ್ನು ಅವರಿಗೆ ಗೊತ್ತಿಲ್ಲದೇ ಗಮನಿಸುತ್ತಿದೆ ಎಂದು ಅರ್ಥ!!! ಅದೇ ಸಂಸ್ಕಾರ ಎಂದು ನಾನು ಹೇಳಿದೆ!!ನಾವು ಏನು ಯೋಚನೆ ಮಾಡುತ್ತಿದ್ದೇವೆ?? ಯಾವ ಭಾವನೆಗಳು ಮೂಡುತ್ತಿವೆ?? ಎಂಬ ಗಮನಿಸುವಿಕೆಯೇ ನಮ್ಮ ಮನಸ್ಸನ್ನೂ ಭಾವನೆಗಳನ್ನೂ ಶುದ್ಧಗೊಳಿಸುತ್ತಾ ಹೋಗುತ್ತದೆ!!ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ!! ಹಲವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಪರಿವೆ ಇರುವುದಿಲ್ಲ!!! ಅದಕ್ಕೆ ಕಾರಣ ಅವರು ತಮ್ಮ ಮನಸ್ಸನ್ನು ಗಮನಿಸಿರುವುದಿಲ್ಲ!!"
-------------------------
ನನ್ನನ್ನು ಒಬ್ಬ ನೀವೇಕೆ ಕ್ರಿಶ್ಚಿಯನ್ ಆಗಬಾರಾದೂ ಎಂದು ಕೇಳಿದ ಅದಕ್ಕೆ ನಾನು ಹೇಳಿದೆ ನೀವು ಕ್ರಿಶ್ಚಿಯನ್ ಎಂದು ಯಾರು ಹೇಳಿದರೂ ಎಂದು!!ಯೋಚಿಸಲು ತೊಡಗಿದ ನಾನು ಹೇಳಿದೆ ಎಂದೂ ಜೀಸಸ್ ತಾನು ಕ್ರಿಶ್ಚಿಯನ್ ಎಂದು ಹೇಳಿಕೊಂಡಿರಲಿಲ್ಲ ಅವರನ್ನು ಹಿಂಬಾಲಿಸಿದ ನೀವು ಒಂದು ಪಂಥವನ್ನು ಕಟ್ಟಿಕೊಂಡಿರಿ ಅಷ್ಟೇ ಎಂದೇ!!ಜೊತೆಗೆ ಒಂದು ವಿಚಿತ್ರವಾದ ಸಂಗತಿಯನ್ನು ಹೇಳಿದೆ "ನೋಡಿ ನಮ್ಮ ಧರ್ಮ ಗ್ರಂಥವೊಂದರಲ್ಲಿ ರಾತ್ರಿ "೦"ಘಂಟೆಯಲ್ಲಿ ನಾನು ಜನ್ಮ ತೆಗೆದುಕೊಳ್ಳುತ್ತೇನೆ ಎಂದು ಪರಮಾತ್ಮ ಹೇಳಿರುತ್ತಾನೆ!! ಒಂದು ಸೆಕೆಂಡ್ ಕೂಡ ಹೆಚ್ಚು ಕಡಿಮೆ ಇಲ್ಲದಂತೆ ೧೨ ಘಂಟೆಗೆ ಮಧ್ಯರಾತ್ರಿ ಯಾರೂ ಹುಟ್ಟುವುದಿಲ್ಲ ಅದು ಪರಮಾತ್ಮನ ಜನ್ಮ ಸಮಯ ಹಾಗಾಗಿ ನಿಮ್ಮ ಜೀಸಸ್ ಹುಟ್ಟಿದ್ದು ಆ ಸಮಯದಲ್ಲಿ ನಾನು ಅವರನ್ನು ಪರಮಾತ್ಮನ ಒಂದು ಅವತಾರ ಎಂದು ಪರಿಗಣಿಸುತ್ತೇನೆ ಏಕೆಂದರೆ ಆತ ಯುಗಪುರುಷ ಹೌದು!!ಹಾಗೆಂದು ನನಗೆ ಕ್ರಿಶ್ಚಿಯಾನಿಟಿಗಾಗಲೀ ಅಥವಾ ಯಾವುದೇ ಪಂಥಕ್ಕಾಗಲೀ ಸೇರುವ ಅವಶ್ಯಕತೆ ಇಲ್ಲ!!ಎಲ್ಲಾ ಮತ ಧರ್ಮಗಳ ಸಾರವನ್ನು ತಿಳಿದು ಅದಕ್ಕಿಂತ ಮೇಲಿನದನ್ನು ತಿಳಿಯಲು ಪ್ರಯತ್ನಿಸಬೇಕೇ ಹೊರೆತು ಧರ್ಮ ಮತಗಳಿಗೆ ಜೋತು ಬಿದ್ದು ಒದ್ದಾಡಬಾರದೂ!!ಎಂದೆ ಒಪ್ಪಿಕೊಂಡ!!!
---------------------------
ನನ್ನನ್ನು ನೀವು ಭ್ರಾಮ್ಮಣ ದ್ವೆಷಿಯೇ ಎಂದು ಬಹಳ ಜನ ಕೇಳಿದ್ದರು!! ನಾನು ಭ್ರಾಮ್ಮಣ ಎನ್ನುವುದನ್ನು ಏನೂ ತಿಳಿಯದವರು ಅದನ್ನು ಒಂದು ಜಾತಿ ಎಂದು ತಿಳಿದು ನಾವೇ ಶ್ರೇಷ್ಟರು ಎಂದು ತಿಳಿದುಕೊಂಡಿದ್ದರೆ ಖಂಡಿತಾ ನಾನು ಅದರ ದ್ವೇಷಿ ಹೌದು ಎಂದಿದ್ದೆ!!!ಆದರೆ "ಭ್ರಾಮ್ಮಣ"ಎನ್ನುವುದು ಒಂದು ಜಾತಿಯಲ್ಲ ಅದು ಒಂದು ತತ್ವ "ಭ್ರಾಮ್ಮಣತ್ವ"ಎನ್ನುವುದು ಒಂದು ಪದವಿ!! ಅದನ್ನು ಕ್ಷತ್ರಿಯ ನಾಗಿದ್ದ ವಿಶ್ವಾಮಿತ್ರ ಪಡೆದುಕೊಂಡು ಮಹಾ "ಭ್ರಾಮ್ಮಣ"ಎಂಬುದಾಗಿ ಮಹಾನ್ ತಪಿಸ್ವಿಗಳಾದ ವಸಿಷ್ಟರಿಂದಲೇ ಕರೆಯಲ್ಪಟ್ಟ ಏಕೆಂದರೆ ಅದು ಭುದ್ಧಿ ಪಕ್ವತೆಯಿಂದ ಸಾಧಿಸಲ್ಪಡುವ ಒಂದು ಪದವಿ ಅಥವ ಭುದ್ದಿ ಸ್ತರ!!!ಯಾರು ಬೇಕಾದರೂ ಆ ಮಟ್ಟ ತಲುಪಬಹುದು ಎನ್ನುವುದಕ್ಕೆ ಇದಕ್ಕಿಂತಾ ಒಳ್ಳೆಯ ಉದಾಹರಣೆ ಏನು ಬೇಕು??!!!ಅದನ್ನು ಒಂದು ಜಾತಿಯನ್ನಾಗಿ ಮಾಡಿ ಬೇರೆಯವರನ್ನೆಲ್ಲಾ ಕೀಳು ಎಂಬ ದ್ರುಷ್ಟಿಯಿಂದಾ ನೋಡುವುದಕ್ಕೆ ನನ್ನ ಧಿಕ್ಕಾರವಿದೆ!!
----------------------
ಹೆಂಗಸರನ್ನು ಬಿಟ್ಟು ಏನಾದರೂ ಇದೆಯೇ ಈ ಪ್ರಪಂಚದಲ್ಲಿ??!!ಯಾವುದನ್ನೇ ಮಾಡುವುದಿದ್ದರೂ ಕೂಡ ಅದರ ಹಿಂದೆ ಮಹಿಳೆಯರು ಇರಲೇ ಬೇಕು!! ಅವರಿಲ್ಲದೆ ಮನೆಯಾಗುವುದಿಲ್ಲ!! ಅವರಿಲ್ಲದೆ ಸಮಾಜ ದೇಶ ಯಾವುದೂ ನಿರ್ಮಾಣವಾಗುವುದಿಲ್ಲ!! ಅವರಿಲ್ಲದಿದ್ದರೆ ಸಂಸ್ಕಾರ ಸಂಸ್ಕೃತಿ ಬೆಳೆಯುವುದಿಲ್ಲ!! ಅಷ್ಟೇಕೆ ಅವರಿಲ್ಲದಿದ್ದರೆ ಒಬ್ಬನನ್ನ ಸಮಾಜ ಸಂಸಾರಿ ಎಂದು ಕರೆಯುವುದೇ ಇಲ್ಲ!!ಅಂದಮೇಲೆ ಅವರೇ ಎಲ್ಲವೂ ತಾನೇ??!!ಹೌದು ಪ್ರಕೃತಿ ಸಹಜವಾಗಿ ಕೆಲವು ಇತಿಮಿತಿಗಳು ಮಹಿಳೆಗೆ ಇರಬಹುದು!! ಆದರೆ ಒಂದು ಮನೆಯಿಂದ ಒಂದು ದೇಶದವರೆಗೆ ಬೆಂಗಾವಲಾಗಿ ಇರುವವಳೇ ಹೆಣ್ಣು!!! ಪುರುಷ ಪ್ರಧಾನ ಎನ್ನುವುದು ಹೆಸರಿಗೆ ಮಾತ್ರಾ !!ಎಲ್ಲಾ ಸುoದರವಾದ ಪವಿತ್ರವಾದ ಅಷ್ಟೇಕೆ ಬದುಕುವ ಭೂಮಿ ಜೀವನಾಡಿಯಾದ ನೀರನ್ನು ಕೂಡ ನಾವು ಮಹಿಳೆಯರ ದೃಷ್ಟಿಯಲ್ಲಿ ಪವಿತ್ರವಾಗಿ!! ನೋಡುತ್ತೇವೆ ಯಾರದೇ ಮನೆಗೆ ಹೋದರು ಬರುವಾಗ ಪುರುಷರಿಗೆ ಬರೀ ಕೈ ಬೀಸಿ ಹೋಗಿಬನ್ನಿ ಎಂದರೆ ಮಹಿಳೆಯರಿಗೆ ಹೂ ಕುಂಕುಮ ಕೊಟ್ಟು ಗೌರವವಾಗಿ ಕಳಿಸಿಕೊಡುತ್ತಾರೆ!! ಈಗ ಹೇಳಿ ಇದು ಪುರುಷ ಪ್ರಧಾನವೋ ಸ್ತ್ರೀ ಪ್ರಧಾನವೋ??ಖಂಡಿತ ಮಳೆಯರು ಮೀಸಲಾತಿಗಾಗಿ ಹೋರಾಡುವುದು ಬೇಡ!! ಇಡೀ ದೇಶವೇ ನಿಮ್ಮದು ಅದನ್ನು ನೀವು ತೆಗೆದುಕೊಳ್ಳಬೇಕು ಅಷ್ಟೇ!! ಇಡೀ ಪುರುಷ ಸಮುದಾಯವೇ ನಿಮ್ಮ ಮುಷ್ಟಿಯಲ್ಲಿದೆ!!!ಅಷ್ಟೇಕೆ ಪುರುಷರು ಮಾಡುವ ಎಲ್ಲಾ ಸಾಧನೆ ಸಂಪಾದನೆ ಸ್ಥಾನ ಮಾನ ಪ್ರತಿಷ್ಠೆ ಯಾರಿಗಾಗಿ??!! ಯುದ್ಧಗಳು ನಡೆಯುವುದು ಯಾರಿಗಾಗಿ??!! ಎಲ್ಲವೂ ನಿಮಗಾಗಿ ನೀವೇ ಎಲ್ಲವೂ ಆಗಿದ್ದೀರಿ!!
----------------------------
ಈ ಮೇಲಿನವು ಗಳು ಕೆಲ ಸ್ಯಾಂಪಲ್ ಗಳು ಮಾತ್ರ, ಆ ಗುಂಪಿಗೆ ಸದಸ್ಯರಾದರೆ ಅಲ್ಲಿ ಇನ್ನು ರಸದೌತಣವನ್ನು ಸವಿಯಬಹುದು.
ಇನ್ನು
ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!!
ಯ ವಿಚಾರಕ್ಕೆ ಬಂದರೆ ಆ ಗುಂಪಿನ ಉದ್ದೇಶ ಇಷ್ಟು ಸರಳ "ಸ್ನೇಹಿತರೆ ಬನ್ನಿ ವಿಚಾರ ಮಾಡೋಣ ಕಲಿಯೋಣ ಕಲಿಸೋಣ!!!"
ಖಂಡಿತ ಅಷ್ಟು ಸರಳವಿಲ್ಲ ಅಲ್ಲಿರುವ ಪೋಸ್ಟ್ ಗಳನ್ನು ನೋಡಿದರೆ....... ಗುಂಪಿನ ಸದಸ್ಯರು ಅವರ ಕೈ ಜೋಡಿಸಿ ಅವರ ಉದ್ದೇಶವನ್ನು ಸಾರ್ಥಕ ಗೊಳಿಸುತಿದ್ದಾರೆ
ಯಾರಾದರೂ ದೇಹವನ್ನು ತ್ಯಾಗಮಾಡಿದಾಗ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಹಾರೈಸುತ್ತಾರೆ!!!ಇದು ಎಂಥ ಅಪಭ್ರಂಶ!!ಆತ್ಮ ಎಂದೆಂದಿಗೂ ಶಾಂತವೇ ಅದು ಎಂದಿಗೂ ಅಶಾಂತ ಗೊಳ್ಳಲು ಸಾಧ್ಯವೇ ಇಲ್ಲ!!ಅಶಾಂತಿ ಗೊಳ್ಳುವುದು ಮನಸ್ಸು,ಬುದ್ಧಿ!! ಅದು ದೇಹದ ಅಂಗಗಳ ಮುಖಾಂತರವಾಗಿ ವ್ಯಕ್ತವಾಗುವ ಅಂಶಗಳೇ ಹೊರೆತು ಅದಕ್ಕೂ ಆತ್ಮಕ್ಕೂ ಸಂಬಂಧ ಇಲ್ಲ!!!ಆತ್ಮ ದೇಹವನ್ನು ಬಿಟ್ಟಾಗ ಮನಸ್ಸು,ಬುದ್ಧಿ, ಹೊರೆತು ಪಡಿಸಲ್ಪಟ್ಟಿರುತ್ತದೇ!!ಬುದ್ಧಿ ಮನಸ್ಸು ಇವೆಲ್ಲವೂ ಆತ್ಮದ ಶಕ್ತಿ ಇಂದ್ರಿಯಗಳಲ್ಲಿ ಹರಿದಾಗ ಉಂಟಾಗುವ ಅನುಭೂತಿಗಳು!!! ಹಾಗಾಗಿ ಆತ್ಮಕ್ಕೆ ಯಾರೂ ಶಾಂತಿ ಕೋರುವ ಮೂರ್ಖತನ ಮಾಡಬೇಡಿ!!!!
----------------------------
"ಧರ್ಮ ಶಾಸ್ತ್ರಗಳ ಉದ್ದೇಶ"
ಆತ್ಮ ಸರ್ವ ಜ್ಞಾನಿಯೂ ಸರ್ವ ವ್ಯಾಪಿಯೂ ಆಗಿರುತ್ತದೆ!! ಅದಕ್ಕೆ ಶಾಂತಿ ಸುಖ ದುಃಖ ದ್ವೇಷ ದುಮ್ಮಾನ ಕೋಪ ತಾಪ ಸಹನೆ!! ಎಂಬಾ ಯಾವುದೇ ಕಲ್ಮಶಗಳೂ ಇರದ ಪರಿಶುದ್ಧವಾಗಿರುವ ಒಂದು ಚೇತನ!! ನಾವು ಹೇಳುವ ಅರಿಷ್ದ್ ವೈರಿಗಳ ಯಾವುದೇ ಸೋಂಕು ಅದಕ್ಕೆ ಇರುವುದಿಲ್ಲ!! ಆದ್ದರಿಂದಲೇ ಅದನ್ನು ಅರ್ಥ ಮಾಡಿಕೊಳ್ಳುವುದೇ ಅದರ ಜ್ಞಾನ ವಾಗುವುದೇ ಪರಮ ಗುರಿ ಎಂದು ಎಲ್ಲಾ ಧರ್ಮಗಳೂ ಸಾರುತ್ತವೆ!!ಆದ್ದರಿಂದಲೇ ಆತ್ಮ ಸಾಕ್ಷಾತ್ಕಾರ ಎನ್ನುವುದಕ್ಕೆ ಮಹತ್ವ ಇದೆ ಆತ್ಮಸಾಕ್ಷಾತ್ಕಾರದ ಹೊರೆತಾಗಿ ಯಾವುದೇ ಕರ್ತವ್ಯವೂ ಇಲ್ಲ ಎಂಬುದಾಗಿ ಹೇಳಲ್ಪಟ್ಟಿದೆ!!!ಮುಕ್ತಿಯೇ ಆತ್ಮ ಸಾಕ್ಷಾತ್ಕಾರ!!!ಅಂದರೆ ನಮ್ಮ ಹುಡುಕುವಿಕೆ ಕೊನೆಯಲ್ಲಿ ಅಲ್ಲಿಯೇ ಪರ್ಯಾವಸಾನ ವಾಗುತ್ತದೆ!! ಅದೇ ಮೊದಲ ಹಾಗೂ ಕೊನೆಯ ಮಾರ್ಗವಾಗಿದೆ!! ಯಾರು ಏನೆ ಮಾಡಿದರೂ ಅದೇ ದಾರಿಯಲ್ಲಿಯಲ್ಲಿಯೇ ಅದಕ್ಕಾಗಿಯೇ ಮಾಡುತ್ತಿರುತ್ತಾರೆ!! ಕೊಲೆ ಸುಲಿಗೆ ದರೋಡೆ ದುಡ್ಡು ಐಶಾರಮಿ ಜೀವನ ಯಾವುದನ್ನೇ ಮಾಡುವವರೂ ಕೂಡ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದನ್ನೇ ಹುಡುಕುತ್ತಿರುತ್ತಾರೆ!!ಜ್ನಾನಿಯಾದವನು!!ಅದನ್ನು ಬಹಳ ಸುಲಭವಾದ ಮತ್ತು ಅತಿ ಹತ್ತಿರದ ಮಾರ್ಗದಿಂದಾ ಅದನ್ನು ಹುಡುಕಿ ಬಹಳ ಬೇಗ ಸೇರುತ್ತಾನೆ!! ಅಂಕುಡೊಂಕುಇಲ್ಲದ ನೇರವಾಗಿ ಹರಿಯುವ ನದಿಯಂತೆ!! ಉಳಿದವರು ಹಲವಾರು ತಿರುವುಗಳನ್ನು ಒಮ್ಮೊಮ್ಮೆ ಕೆರೆಯಾಗಿ ಯುಗಗಟ್ಟಲೇ ನಿಂತು ಅಲ್ಲಿಂದಲೂ ಆವಿಯಾಗಿ ಮತ್ತೆ ನದಿಯಾಗಿ ಹರಿದು ಸೇರಬೇಕಾಗುತ್ತದೆ!!!ಆದರೆ ಎಲ್ಲಾರ ದಾರಿಯೂ ಗುರಿಯೂ ಒಂದೇ ಆಗಿರುತ್ತದೆ ಕಲ್ಮಶಗಳನ್ನೂ ಹೊತ್ತು ಕೆಟ್ಟ ಕೆಲಸಗಳನ್ನು ಮಾಡಿ ಮತ್ತೆ ಮತ್ತೆ ಹುಟ್ಟಿ ಬವಣೆ ಪಡದೆ ಇರಲಿ ಎಂದೇ ಧರ್ಮ ಶಾಸ್ತ್ರಗಳು ಒಳ್ಳೆಯ ಮಾರ್ಗಗಳನ್ನು ಉಪದೆಶಿಸುತ್ತೇವೆ ಅಷ್ಟೇ!!!! ಇದೇ "ಧರ್ಮ ಶಾಸ್ತ್ರಗಳ ಉದ್ದೇಶ" !!!
-----------------------
= ಪ್ರಾಣಿಬಲಿ =
ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ, ಇದು ಎಲ್ಲಡೆ ಎಗ್ಗಿಲ್ಲದೆ ನಡೆಯುತ್ತಿರುವುದು ವಿಪರ್ಯಾಸವೆನಿಸುತ್ತದೆ.
ಹಲವು ವಿಪರ್ಯಾಸಗಳ ನಡುವೆ ನಾವು ಇರುವುದೂ ಯೋಚನೆ ಮಾಡುವುದೇ ಜೀವನ!!!ಜೀವನ ಶೈಲಿ ಅನ್ನುವುದು ಕಾಲ ದೇಶ ವರ್ತಮಾನಕ್ಕೆ ಭೂಮಿಯ ವಾತಾವರಣದ ಗುಣಧರ್ಮದ ಮೇಲೆ ಬೇರೆ ಬೇರೆ ಯಾಗಿರುತ್ತದೆ!!!
-------------
ವೇದಗಳ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ!! ವೇದ ಮಂತ್ರಗಳಲ್ಲಿ ಎಲ್ಲೂ ದೇವರ ಪೂಜಾವಿಧಾನವನ್ನು ಹೇಳಿರುವುದಿಲ್ಲ!! ಕೆಲವು ದೇವತೆಗಳ ಹೆಸರುಗಳನ್ನೂ ಋಷಿಮುನಿಗಳು ಕಲ್ಪಿಸಿಕೊಂಡು ಮಾಡಿದ ತಪಸ್ಸಿನಿಂದಾ ಈ ಮಂತ್ರವನ್ನು ಕಾಣಲಾಯಿತು ಎಂದು ನಮೂದಿಸಲ್ಪಟ್ಟಿದೆಯೇ ಹೊರೆತು ವೇದ ಮಂತ್ರಗಳು ಪೂಜಾ ವಿಧಾನವನ್ನಾಗಲೀ ಅಥವಾ ದೇವರ ಬಗ್ಗೆ ಯಾವುದೇ ರೂಪದ ಕಲ್ಪನೆಯನ್ನಾಗಲೀ ಕೊಟ್ಟಿಲ್ಲ!! ಅಲ್ಲಿ ಕೇವಲ ಕೆಲವು ಮಂತ್ರಗಳು ಕಾಣಲ್ಪಟ್ಟಿವೆ(ಅವುಗಳು ಯಾರಿಂದಲೂ ಬರೆಯಲ್ಪಟ್ಟಿಲ್ಲ)ಹಾಗೂ ಆ ಮತ್ರಗಳನ್ನು ಕಂಡವರಿಗೂ(ಯಾರ ಬಾಯಿಂದ ಬಂದಿದೆಯೋ)ಅವರಿಗೂ ಕೂಡ ಅದರ ಅರಿವು ಇರುತ್ತಿರಲಿಲ್ಲ!! ಅಂಥಹ ಸ್ಥಿತಿಗೆ ಅವರು ಹೋದಾಗಲೇ ಅವು ಅವರ ಬಾಯಿಂದಾ ಬರುತ್ತಿದ್ದವು(ಸಮಾಧಿ ಸ್ತಿತಿ)!!ಅದನ್ನ ಮತ್ತೊಬ್ಬರು ತಿಳಿದು ಬರೆದುಕೊಳ್ಳಬೇಕಾಗಿತ್ತು!!ಅಂತ ಒಂದು ಕಾಲವೇ ವೇದ ಕಾಲವಾಗಿತ್ತು!!ಯಾವ ಸಂಕಲ್ಪ ಅಥವ ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತೋ ಅದರ ಬಗ್ಗೆ ಸಂಕಲ್ಪ ಮಾಡಿ ಧ್ಯಾನದ ಸ್ಥಿತಿಯಲ್ಲಿ ಕುಳಿತಾಗ ಅವರು ಸಮಾಧಿ ಸ್ತಿತಿಗೆ ಹೋದಾಗ ಅವರ ಬಾಯಿಯಿಂದಾ ಬಂದಂತಹುದೇ ವೇದ ಮಂತ್ರ!!! ಅದು ಈ ನಮ್ಮ ಸಂಸ್ಕೃತದ ಅರ್ಥಕ್ಕೆ ಕೂಡ ಸಿಗುವುದಿಲ್ಲ!! ಅದನ್ನು ನಮಗೆ ಈಗ ಗೊತ್ತಿರುವ ಸಂಸ್ಕೃತದಿಂದ ವೇದ ಮಂತ್ರದ ಅರ್ಥ ಇಷ್ಟೇ ಹೀಗೆ ಎಂದು ಹೇಳಲು ಆಗುವುದಿಲ್ಲ!!ಅದನ್ನು ಜಪಿಸಿಯೇ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕಾಗುತ್ತದೆ!!ಹಾಗೆ ಅದನ್ನು ಜಪಿಸಿ ತಿಳಿದುಕೊಂಡವರು ಮಾತ್ರಾ ಈ ಮಂತ್ರ ಇದಕ್ಕಾಗಿ ಎಂದು ಹೇಳಲು ಸಾಧ್ಯ !!ನಮ್ಮಲ್ಲಿಯ ಯಾವ ವಿಧ್ವಾಂಸರಿಗೂ ಅದನ್ನು ಅರ್ಥೈಸಲು ಆಗುವುದಿಲ್ಲ!!ನಮ್ಮಲ್ಲಿಯ ಕೆಲವು ಕರ್ಮಠ ಬ್ರಾಹ್ಮಣರು ತಮ್ಮ ಉನ್ನತ ಸ್ಥಾನಕ್ಕಾಗಿ ಅದನ್ನು ಉಳಿಸಿಕೊಳ್ಳುವ ಸಲುವಾಗಿ ತಾವು ವೇದ ಬಲ್ಲವರೂ ಎಂಬುದಾಗಿ ಹೇಳಿಕೊಳ್ಳುತ್ತಾರೆ!!ಅದನ್ನು ಬಾಯಿಪಾಠ ಮಾಡಿದ ಮಾತ್ರಕ್ಕೆ ಯಾರೂ ಬ್ರಹ್ಮ್ಮಜ್ನಾನಿ ಯಾಗುವುದಿಲ್ಲ!!ಹೌದು ಅದರ ಶುದ್ಧವಾದ ಹಾಗೂ ನಿರಂತರ ಪಟನೆ ಯಿಂದಾ ಸಿದ್ಧಿಯನ್ನು ಹೊಂದಬಹುದಾಗಿದೆ ಅಷ್ಟೇ!!ಆದರೆ ಅದರ ಹೆಸರಿನಲ್ಲಿ ಬೇರೆ ಕೆಲಸವನ್ನು ಮಾಡುತ್ತಿರುವುದೆಲ್ಲವೂ ಅವರ ಸ್ವಾರ್ಥಕ್ಕಾಗಿಯೇ ಹೊರೆತು ಬೇರೆ ಇನ್ನೇನೂ ಅಲ್ಲ ವೇದದ ಹೆಸರನ್ನು ಹೇಳಿ ದಾರಿತಪ್ಪಿಸುತ್ತಿರುವುದೇ ನಮ್ಮ ಅರ್ಚಕರ ಕರ್ಮಖಾಂಡ!!!ಇದನ್ನು ಎದುರಿಸುವ ಹಾಗು ಸುಳ್ಳು ಎಂದು ಸಮಥಿಸುವ ಎದೆಗಾರಿಕೆ ಯಾವುದಾದರೂ ವಿಧ್ವಾಮ್ಸರಿಗೆ ಇದ್ದರೆ ನನಗೆ ಆಹ್ವಾನ ನೀಡಬಹುದು ಎದುರಿಸಲು ಸಿದ್ಧ!!!
--------------------
ದೇವರು ಜ್ಯೋತಿಷ್ಯ ಶಾಸ್ತ್ರ ಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳಿಕೊಳ್ಳುವುದು ಒಂದು ಹಿರಿಮೆ ಒಂದು ದೊಡ್ಡಸ್ತಿಕೆ ಎಂದು ನಾನೂ ತಿಳಿದುಕೊಂಡಿದ್ದೆ!! ಹಾಗೆ ಸ್ವಲ್ಪ ಗಡ್ಡ ಬಿಟ್ಟು ಒಂದು ಜೋಳಿಗೆ ಹಾಕಿ ಅರ್ಥವಾಗದ ಶಬ್ಧಗಳಲ್ಲಿ(ಅಂದು ಸುಜಾತ ರವರು ಹೇಳಿದಂತೆ)ಒಬ್ಬ ಸಾಹಿತಿ ಬರೆದಿದ್ದನ್ನು ಮತ್ತೊಬ್ಬ ಸಾಹಿತಿ ಕೆದರುವಂತೆ(ಒಂದು ಎಮ್ಮೆ ಹಾಕಿದ ಸಗಣಿಯಲ್ಲಿಯ ಹುಳುಗಳಿಗಾಗಿ ಕೋಳಿ ಆ ಸಗಣಿಯನ್ನು ಕೆದರುವಂತೆ)ಮಾಡಿ ಅದನ್ನೇ ಒಂದು ದೊಡ್ಡ ವಿಮರ್ಶೆ ನಾವು ಸಮಾಜವನ್ನು ವುದ್ಧರಿಸಿದಂತೆ (ಅವರವರೆ ಒಬ್ಬರನ್ನೊಬ್ಬರು ಹೊಗಳಿಕೊಂಡು ಒಂದು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ತಾವೇ ಸಮಾಜ ವುದ್ದಾರಮಾಡಿದಂತೆ ಕನಸು ಕಂಡು)ಪೋಸು ಬಿಗಿದುಕೊಂಡರೆ !!!ಒಂದು ದೊಡ್ಡ ಪ್ರಶಸ್ತಿ ಪಡೆದುಕೊಂಡರೆ ಬುದ್ದಿಜೀವಿ!!ಎಂದು ಎಲ್ಲಾರೂ ಕರೆಯುತ್ತಾರೆ ಎಂದು ನಾನೂ ತಿಳಿದುಕೊಂಡಿದ್ದೆ ಆದರೆ ಏನು ಮಾಡುವುದೂ!!!ಯಾವುದೂ ಆಗಲಿಲ್ಲ!!!ಈಗ ಅದು ಆಗದಿದ್ದಿದ್ದಕ್ಕಾಗಿ ಪಶ್ಚಾತ್ತಾಪವಿಲ್ಲ ಹೆಮ್ಮೆ ಪಡುತ್ತೇನೆ!!!
--------------------
ಈ ಪ್ರಪಂಚಕ್ಕೆ ಶಾಶ್ವತವಾದ ಉಪಕಾರವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದು ವಿವೇಕಾನಂದರು ಹೇಳಿದ್ದರು!!ಏಕೆಂದರೆ ಯಾವುದನ್ನೇ ಮಾಡಿದರೂ ಕಾಲಕ್ರಮೇಣ ಬದಲಾಗುವುದೇ ಪ್ರಪಂಚದ ನಿಯಮ ಎಂಬ ಅರ್ಥದಿಂದಾ!!ಅದು ಸಾರ್ವತ್ರಿಕವಾಗಿ ಎಂದೆಂದಿಗೂ ಸ್ವೀಕರಿಸಲ್ಪಟ್ಟಿತು!! ಏಕೆಂದರೆ ಅವರ ನುಡಿ ಎಂದಿಗೂ ವಿವಾದಾತ್ಮಕವಾಗಿ ಆಗಲೇ ಇಲ್ಲ ಅದಕ್ಕೆ ಕಾರಣ ಅವರ ಆಧ್ಯಾತ್ಮಿಕ ನಿಲುವು!! ಗಾಂಧೀಜಿ ಕೂಡ ಮಹಾತ್ಮರೇ ಅವರು ಸತ್ಯ,ನಿಷ್ಠೆ,ಪ್ರಾಮಾಣಿಕತೆ,ಸರಳತೆ,ನಿರಪೇಕ್ಷತೆ ಯಿಂದಾ ಯೋಗಿಯಾದವರೂ!!ಆದರೆ ಕೆಲವರ ದೃಷ್ಟಿಯಲ್ಲಿ ಅವರು ಇಂದಿಗೂ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ!! ಏಕೆಂದರೆ ಅವರು ರಾಜಕೀಯ ಎಂಬ ಅಮೆಧ್ಯವನ್ನು ಅವರಿಗೆ ಗೊತ್ತಾಗದಂತೆ ತುಳಿದುಬಿಟ್ಟಿದ್ದರು!!!ಅಥವ ಅದು ಅವರಕಾಲಿಗೆ ಮೆತ್ತಿಕೊಂಡು ಬಿಟ್ಟಿತ್ತು!!!ಎಷ್ಟೇ ಮಹಾತ್ಮರು ರಾಜಕೀಯ ಮಾಡಿದರೂ ಅಲ್ಲಿ ಪರ ವಿರೋಧ ಎಂಬುದು ಇರುವುದೇ ಅದಕ್ಕೆ ಕಾರಣ!!!
--------------------
ಪರಿಹಾರವಿಲ್ಲದ ಸಮಸ್ಯೆಗಳು ಎಂಬುದು ಇಲ್ಲ ದೇವರು ಯಾವುದಾದರೂ ಒಂದು ದಾರಿಯನ್ನು ಇಟ್ಟೇ ಇಟ್ಟಿರುತ್ತಾನೆ!!ಆದರೆ ಮನಸ್ಸಿನ ದುಗುಡದಲ್ಲಿ ಅದು ಕಾಣುವುದಿಲ್ಲ!!ತಾಳ್ಮೆಯಿಂದಾ ಹುಡುಕಬೇಕಾಗುತ್ತದೆ!!ಆದರೆ ಯಾವುದೇ ಬಾಗಿಲನ್ನೂ ಯಾವುದೇ ಬೇರೆ ದಾರಿಯನ್ನೂ ಇಡದೆ ಇರುವುದು ಸಾವಿನ ಸಮಯದಲ್ಲಿ ಮಾತ್ರಾ !!
----------------------
ಏಕಾಗ್ರತೆ ಅನ್ನುವುದೇ ಒಂದು ಅತಿ ಸೂಕ್ಷ್ಮವಾದ ವಿಚಾರ!!!ಏಕೆಂದರೆ ಯಾವುದೋ ಒಂದು ವಸ್ತುವಿನಲ್ಲಿ ಅಥವಾ ವಿಷಯದಲ್ಲಿ ನಾವು ಗಮನವಿಡಲು ಪ್ರಾರಂಭಿಸಿದ ಕೂಡಲೇ ಅದನ್ನು ನಮ್ಮ ನನಸ್ಸು ಸಹಿಸುವುದಿಲ್ಲ!!ಯಾವುದೇ ವಿಷಯದಲ್ಲಿಯೂ ಕೂಡ ಹೀಗೆ ಆಗುತ್ತದೆ!!ಏಕೆಂದರೆ ಮನಸ್ಸು ಇಂದ್ರಿಯಾಧೀನ ಇಂದ್ರಿಯಗಳು ಮನಸ್ಸಿನ ಅಧೀನ!!ಇಲ್ಲಿ ಮನಸ್ಸು ಬೇರೆ ಬೇರೆ ಇಂದ್ರಿಯಗಳ ಮೂಲಕ ಬೇರೆ ಬೇರೆ ಅನುಭವಗಳನ್ನು ಪಡೆಯುತ್ತಲೇ ಇರುತ್ತದೆ ದೃಶ್ಯ ಸ್ಪರ್ಶ ವಾಸನೆ ರುಚಿ ಶಭ್ದ ಹೀಗೆ!!ನಮ್ಮ ಬುದ್ಧಿಯಿಂದಾ ಯಾವುದೇ ವಿಷಯದಲ್ಲಿ ಏಕಾಗ್ರತೆ ವಹಿಸಲು ಪ್ರಯತ್ನಿಸಿದರೆ ಆಗ ಇಂದ್ರಿಯಗಳಲ್ಲಿಯ ಮನಸ್ಸಿನ ಶಕ್ತಿಯ ಪ್ರವಾಹ ವಿರುದ್ಧ ದಿಕ್ಕಿನಲ್ಲಿ ಅಥವ ಅಂತರ್ಮುಖಿ ಯಾಗತೊಡಗಿದಾಗ ಮನಸ್ಸಿನ ಹರಿಯುವಿಕೆ ತಡೆಯಲ್ಪಟ್ಟು ಆಣೆಕಟ್ಟು ಹಾಕಿ ನಿಲ್ಲಿಸಿದ ನೀರಿನಂತೆ ಆಗಿ ಇಂದ್ರಿಯಗಳ ಅಥವ ಬುದ್ಧಿಯ ಮೇಲೆ ಒತ್ತಡ ಹಾಕಲ್ಪಡುತ್ತದೆ!!ಆ ಒತ್ತಡದಿಂದಾ ಮತ್ತೆ ಏಕಾಗ್ರತೆ ಭಂಗಗೊಂಡು ಚಂಚಲತೆ ಏರ್ಪಡುತ್ತದೆ!!ಅದನ್ನು ಕಟ್ಟಿಹಾಕಲು ನಿಗ್ರಹಿಸಲು ಬಹಳ ಅಭ್ಯಾಸ ಬೇಕು ಒಮ್ಮೆಲೇ ಕಟ್ಟಿಹಾಕಲು ಕಷ್ಟ ವಾಗುತ್ತದೆ!!!
----------------------
ಕಲ್ಲು ಮುಳ್ಳುಗಳ ಹಾದಿ!!ಏಳು ಬೀಳುಗಳ ಹಾದಿ!!ಕಷ್ಟ ಸುಖಗಳ ಹಾದಿ!!ಈದರಲ್ಲಿ ಜೊತೆಯಾಗಿ ಧೀರ್ಘವಾದ ಹಾದಿಯಲ್ಲಿ ಒಬ್ಬರಿಗಿಬ್ಬರು ಸಹಾಯ ಮಾಡುತ್ತಾ ಸಾಗಿದಾಗ ಪ್ರಯಾಣದ ಕೊನೆಯ ಘಟ್ಟ ತಲುಪಿದಾಗ ಅಲ್ಲಿ ಬರೀ ಕಣ್ಣಿನ ನೋಟಗಳೆ ಭಾಷೆಗಿನ್ತಾ ಜಾಸ್ತಿ ಸುಖವೆನ್ನಿಸುತ್ತದೆ!!ಭಾಷೆಯೂ ಬೇಕೆನಿಸುವುದಿಲ್ಲ!!ಮೌನವೇ ಹಿತವಾದ ಭಾಷೆಯಾಗಿರುತ್ತದೆ!!ಬಿಟ್ಟಿರಲಾರದಷ್ಟು ಅದೇನೋ ಆತ್ಮೀಯತೆ!!ಕಷ್ಟಗಳ ದಾರಿಯಲ್ಲಿ ನಡೆಸಿಕೊಂಡು ಬಂದೆನಲ್ಲ!! ಎಂದು ಒಬ್ಬರಿಗೊಬ್ಬರು ಯೋಚಿಸುತ್ತಲೇ ಇರುತ್ತಾರೆ!!ಸಂಭಂದ ಗೌರವವಾಗಿ ಮಾರ್ಪಡುತ್ತದೆ!! ಹೇಳಲಾರದಾ ತಾಳಲಾರದ ವೆದನೆಯಾದರೂ ಸಿಹಿಯಾಗಿರುತ್ತದೆ!!ಶುದ್ಧವಾದ ನಿಷ್ಕಳಂಕ ನಿರಪೆಕ್ಷಿತ ಪ್ರೇಮ ವಾಗಿ ಮಾರ್ಪಡುತ್ತದೆ!!ಸುಧೀರ್ಘವಾದ ಕಷ್ಟಗಳ ಹಾದಿಯ ಪ್ರಯಾಣದ ನೆನಪು ವಿಶಾದವಾಗಿದ್ದರೂ ಜೊತೆಯಲ್ಲಿ ಸಂಗಾತಿ ಇದ್ದಾರೆ ಎಂಬ ನೆನಪೇ ಒಂದು ಅಹ್ಲ್ಲಾದಕರ ಅನುಭವ ಶಾಂತಿ ತಂದು ಜನ್ಮಜನ್ಮದಲ್ಲೂ ಜೊತೆಯಾಗಿ ಎಷ್ಟೇ ಕಷ್ಟ ಬಂದರೂ ಜೊತೆಯಾಗಿರಬೇಕು ಅನ್ನಿಸುತ್ತದೆ!! ಸೆಳೆತ ಮೂಡುತ್ತದೆ!! ಆದರೆ ಸ್ವಲ್ಪ ಸಮಯದಲ್ಲೇ ವಿಧಿ ಸಂಗಾತಿಯನ್ನು ತನ್ನ ತಕ್ಕೆಗೆ ತೆಗೆದುಕೊಂಡಾಗ!!ಕಲ್ಲುಮುಳ್ಳುಗಳ ದಾರಿಯಲ್ಲಿ ಕಷ್ಟಪಟ್ಟು ಸವೆಸಿದ ದಾರಿಯ ನೆನಪಿನಲ್ಲೇ ಉಳಿದ ಬದುಕು ಕಳೆಯುವುವ ಮನಸ್ಸು ಆಗ ಸುಖದ ಸುಪ್ಪತ್ತಿಗೆ ಸಿಕ್ಕರೂ ಅದರಬಗ್ಗೆ ವೈರಾಗ್ಯ ಹೊಂದುತ್ತದೆ!! ಸಂಗಾತಿಯ ಜೋತೆಯಾಗಿರುವಿಕೆಯ ನೆನಪೇ ಒಂದು ಧೀರ್ಘ ನಿಟ್ಟುಸಿರಾಗಿ ಹೊರಬರುತ್ತದೆ!! ಅದೇ ಸಾಕು ಅದೇ ಅಪ್ಪ್ಯಾಯಮಾನವಾಗಿ ಅನ್ನಿಸುತ್ತದೆ!! ಅಂತರ್ಮುಖಿಯಾಗುತ್ತೇವೆ!!!ಎಲ್ಲಾದರೂ ಒಮ್ಮೊಮ್ಮೆ ಕಣ್ಣು ತೇವವಾಗುವ ನೆನಪಿನೊಂದಿಗೆ!!ನಿರ್ಲಿಪ್ತತೆಯೇ ಸುಖ ಕೊಡುತ್ತದೆ!!!
-----------------
ರಕ್ತವನ್ನು ಪರಿಚಲನೆ ಮಾಡುವ ಅಂದವಾದ ಹೃದಯಕ್ಕೆ ಭಾವನೆಗಳನ್ನು ಅದರ ಉಗಮ ಹೃದಯ ವೆಂದು ಕರೆಯಲು ಕಾರಣವೇನು??!! ಪ್ರೀತಿ ಆತ್ಮೀಯತೆ ಹ್ರುದಯಪೂರ್ವಕವಾಗಿರಬೇಕೆಂದು ಯಾವದ್ರುಷ್ಟಿಯಿಂದಾ ಹೇಳುತ್ತಾರೆ??!! "ನಾನು" ಎಂದು ಹೇಳಿಕೊಳ್ಳುವಾಗ ಹೃದಯದ ಭಾಗವನ್ನು ಯಾಕೆ ಮುಟ್ಟಿ ತೋರಿಸುತ್ತಾರೆ??!! "ಹೃದಯಕ್ಕೆ ನೋವಾಗಿದೆ" ಎಂದು ಯಾಕೆ ಹೇಳುತ್ತಾರೆ??೧! ಆಘಾತವಾದಾಗ ಮೆದುಳು ಯಾಕೆ ನಿಲ್ಲದೆ ಹೃದಯಕ್ಕೆ ನೇರವಾಗಿ ತಟ್ಟುತ್ತದೆ??!!ಹೃದಯವನ್ನು ಭಾವಾನಾತ್ಮಕ ಸಂಧಗಳಿಗೆ ಏಕೆ ಜೋಡಿಸುತ್ತಾರೆ!!??ಉಳಿದ ಅಂಗಗಳಾದ ಕಿಡ್ನಿಗೋ ಮೂತ್ರಪಿನ್ದಕ್ಕೋ ಅಥವ ಯೆಕ್ರುತ್ತಿಗೋ ಮೆದುಳಿಗೋ ಅವುಗಳೊಂದಿಗೆ ಯಾಕೆ ಜೋಡಿಸುವುದಿಲ್ಲ ಕಲೆ ಸಾಹಿತ್ಯ ಸಂಗೀತ ಪ್ರೀತಿ ಪ್ರಣಯ ಇವೆಲ್ಲವುದರಲ್ಲೂ ಹೃದಯಕ್ಕೆ ಏಕೆ ಪ್ರಾಧಾನ್ಯತೆ ಕೊಡಲಾಗಿದೆ!!!???ಯಾರಾದರೂ ಇದರ ಬಗ್ಗೆ ಆಳವಾಗಿ ಯೋಚಿಸಿದ್ದೀರಾ?? ಚಿಂತನೆ ನಡೆಸಿದ್ದೀರ??ಹಾಗಾದರೆ ಅದರ ಬಗ್ಗೆ ನಾವು ಹೃದಯವನ್ನು ಕೆಡಿಸಿಕೊಳ್ಳದೆ,,,,,ತಲೆ ಕೆಡಿಸಿಕೊಳ್ಳೋಣವೇ???????!!!,,,,,,,,,
------------------------
ಸಾವಿರಾರು ಪುಸ್ತಕಗಳ ಅಧ್ಯಯನ ಕೂಡ ಓದುಗನನ್ನು ವಿಧ್ವಾಂಸನನ್ನಾಗಿ ಮಾಡಲಾರವೂ!!ಏಕೆಂದರೆ ಅಧ್ಯನದಿಂದ ದ್ವಂದ್ವ ಹೆಚ್ಚುತ್ತದೆ!!ತಾರ್ಕಿಕತೆ ಹೆಚ್ಚುತ್ತದೆ!!ಅದರಿಂದ ಮನಸ್ಸಿನ ಏಕಾಗ್ರತೆಗೆ ಭಂಗ ಉಂಟಾಗಿ ವಿಷಯಜ್ಞಾನ ಬರೀ ವೈಚಾರಿಕತೆಯಲ್ಲಿ ಸಿಲುಕಿ ಮತ್ತೆ ಚಂಚಲ ವಾಗುತ್ತದೆ!!ಮೂಲವನ್ನು ತಿಳಿಯುವ ಇಚ್ಛೆ ಇಲ್ಲದೆ ನೂರಾರು ಶಾಸ್ತ್ರಗ್ರಂಥಗಳನ್ನೂ ಅಭ್ಯಾಸ ಮಾಡುತ್ತಿದ್ದರೂ ಸಹ ಅಂತಹ ವ್ಯಾಸಂಗಕಾರನಿಗೆ ದೇವರ ನಿಜವಾದ ಅರಿವು ಉಂಟಾಗುವುದಿಲ್ಲ!!
----------------------
ನಾವು ಯಾವುದನ್ನು ವಾಸ್ತವಿಕತೆ ಎಂದುಕೊಂಡಿರುತ್ತೆವೋ ಅದೂ ಕೂಡ ಭ್ರಮೆಯೇ!!ಉದಾಹರಣೆಗೆ ನಾವು ಕನಸಿನಲ್ಲಿ ಅದನ್ನು ಕಾಣುವಷ್ಟು ಕಾಲ ಹೊರ ಪ್ರಪಂಚದ ಅರಿವು ಇರುದಿಲ್ಲ!! ಆ ಸಮಯದಲ್ಲಿ ಅದು ನಮಗೆ ವಾಸ್ತವವೇ!!ಕನಸಿನಲ್ಲಿ ಬಾಯಾರಿಕೆಯಾದರೆ ಕಲ್ಪನೆಯ ನೀರನ್ನು ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತೇವೆ!!ಎಚ್ಚರಿಕೆಯಾದಾಗ ಮಾತ್ರವೇ ಅದು ಕನಸು ಎಂಬ ಅರಿವು ಆಗುತ್ತದೆ!! ಹಾಗೆಯೇ ನಿದ್ರೆ ಮಾಡಿರುವಾಗ ಹೊರಗಿನ ಪ್ರಪಂಚ ಯಾಕೆ ಗೋಚರಿಸುವುದಿಲ್ಲ??ಏಕೆಂದರೆ ಅಲ್ಲಿ ಎಚ್ಚರ ಎಂಬ ಭ್ರಮೆಯಿಂದ ನಾವು ನಿದ್ರೆ ಎಂಬ ಬ್ರಮೆಗೆ ಜಾರಿರುತ್ತೇವೆ!! ಪ್ರಪಂಚ ಸತ್ಯವಾದುದಾಗಿದ್ದರೆ ಅದು ಕನಸಿನಲ್ಲೂ ಇರುತ್ತಿತ್ತಲ್ಲವೇ!!ಹಾಗಾಗಿ ಮನಸ್ಸು ಯೆನ್ನುವುದರಿಂದಾ ಯಾವುದು ಅನುಭವಕ್ಕೆ ಬರುವುದೋ ಅವ್ಯಾವುದೂ ವಾಸ್ತವ ಅಲ್ಲ!!ಮನಸ್ಸು ಎನ್ನುವುದು ಚಂದ್ರನ ಬೆಳಕಿನಂತೆ ಅರಿವಿನ ಪ್ರತಿಫಲನ ಅದು ಸ್ವಯಂ ಪ್ರಭೆಯುಳ್ಳದ್ದಲ್ಲ!!!
---------------------
ಸಾವು ಎನ್ನುವುದು ಬಿಡುಗಡೆ ಈ ದೇಹದಿಂದಾ ಮತ್ತು ಅದು ಕೊನೆಯ ಅನುಭವ!ವಿದಾಯದಲ್ಲಿ ವಿದಾಯ ಹೇಳುವವರಿಗೆ ಇನೂ ಕೆಲವುದಿನ ನಮ್ಮಜೊತೆ ಇದ್ದಿದ್ದರೆ ಚೆನ್ನ ಎಂಬ ಆಸೆ ಸಹಜ ಆದರೆ!ಬಿಡುಗಡೆಯನ್ನು ಹೊದುವಂಥ ವ್ಯಕ್ತಿಯ ದೃಷ್ಟಿಯಲ್ಲಿ ಅದು ಸಂಪೂರ್ಣ ಸ್ವಾತಂತ್ರ!,,
-------------------------
ಸಂತೆಯೊಳಗೊಂದು ಮನೆ ಮಾಡಿ ಶಭ್ದಕ್ಕೆ ನಾಚಿದೊಡೆಂತಯ್ಯ ಎಂದು ಹೇಳಿರುವುದೂ ಅದಕ್ಕೆ!!
ಮೊದಲು ಇದನ್ನೆಲ್ಲಾ ತಿಳಿದುಕೊಳ್ಳಲು ಸನ್ಯಾಸಿ ಆಗಬೇಕೆಂದು ಅನ್ನಿಸುತ್ತದೆ!! ಮನೆಯನ್ನು ಬಿಟ್ಟು ಕಾಡಿಗೆ ಅಥವ ಪ್ರಶಾಂತವಾದ ವಾತಾವರಣಕ್ಕೆ ಹೋಗಬೇಕೆನ್ನಿಸುತ್ತದೆ!! ಆದರೆ ಅದರಲ್ಲಿ ಆಗುವ ವ್ಯತ್ಯಾಸ ವೇನು? ಮನೆಯನ್ನು ಬಿಟ್ಟು ಕಾಡಿಗೆ ಹೋದರೆ ಮನೆಯ ಆವರಣದ ಬದಲಿಗೆ ಕಾಡಿನ ಆವರಣ ಇದೆ ಎನ್ನಿಸುತ್ತದೆ!! ಗೃಹಸ್ಥಾಶ್ರಮ ಬಿಟ್ಟು ಸನ್ಯಾಸಿಆದರೆ ಈಗ ನಾನು ಸನ್ಯಾಸಿಯೆನ್ನುವ ಹೊಸ ಭ್ರಮೆ ಆವರಿಸುತ್ತದೆ!! ಅಷ್ಟೇ ಅಲ್ಲವೇ?? ಇಲ್ಲಿ ಮನಸ್ಸೇ ತಡೆ ಆಗಿರುವುದು!! ಎಲ್ಲಿದ್ದರೂ ನಾನು ಎನ್ನುವುದು ಒಳಗಿನ ಆತ್ಮ ಎಂಬ ಅರಿವಿನೊಂದಿಗೆ! ಲೌಕಿಕವಾದ ಕೆಲಸಗಳನ್ನು ಮಾಡುತ್ತಲೇ ಇದಕ್ಕಾಗಿ ನನ್ನು ನಿಯೋಜಿಸಲ್ಪತ್ತಿದ್ದೇನೆ!! ಇದು ನನ್ನಿಂದ ಮಾಡಿಸಲ್ಪದುತ್ತಿದೆ!! ಎಂದು ಅದನ್ನು ದೇವರಿಗೆ ಬಿಟ್ಟು ನಿರಹಂಕಾರದಿಂದಾ ಇದ್ದರೆ ಎಲ್ಲವೂ ಸಿದ್ಧಿಸುತ್ತದೆ!!!
------------------------------
ಅರಿವು ಎಲ್ಲಿ ಇರುತ್ತದೋ ಅಲ್ಲಿ ಅಹಂಕಾರವಿರುದಿಲ್ಲ!!ಅಜ್ಞಾನ ಇರುವಲ್ಲಿ ಮಾತ್ರ ಅಹಂಕಾರವಿರುತ್ತೆ !!ಅಹಂಕಾರ ಇನ್ನೊದು ಅರ್ಥದಲ್ಲಿ ಲೌಕಿಕ ಅನುಭೂತಿ ಎಂತಲೂ ಆಗುತ್ತದೆ ಅದರಲ್ಲೇ ಮುಳುಗಿ ಅದೇ ಸತ್ಯವೆಂಬ ತೀವ್ರವಾದ ನಂಬಿಕೆಯೇ ಅಹಂಕಾರ ಯೆನ್ನಲ್ಪಡುವುವುದು!!ಅಲ್ಲಿ ಯಾವುದೇ ಬೇರೆಯ ಅಸ್ತಿತ್ವದ ಬಗ್ಗೆ ವಿಚಾರವಿಲ್ಲದಂತೆ ಕಡಿವಾಣ ಹಾಕಲಾಗಿರುವುದು!!ತಾನು ನಂಬಿರುವುದೇ ಸತ್ಯ ಎಂಬ ಪ್ರಭಲವಾದ ನಂಬಿಕೆಯೇ ಅಹಂಕಾರ ಎಂದು ಕರೆಯಲ್ಪಟ್ಟಿದೆ!!!
------------------------------
ದೇವರಲ್ಲಿ ನಿಮ್ಮ ಮನಸ್ಸಿನಿಂದ ನಡೆದ ತಪ್ಪಿಗೆ ಕ್ಷಮಾಪಣೆ ಒಂದನ್ನು ಬಿಟ್ಟು ಏನೂ ಬೇಡಲು ಆಗುವುದಿಲ್ಲ!!! ಏಕೆಂದರೆ ಅವನು ಏನು ಕೊಡಬೇಕೋ ಅದನ್ನೆಲ್ಲ ಕೊಟ್ಟಿರುತ್ತಾನೆ ತನ್ನಹತ್ತಿರ ಏನೂ ಉಳಿಸಿಕೊಂಡಿರುವುದಿಲ್ಲ!! ಅತ್ತಾಗೆಲ್ಲಾ ಕೊಡಲು ಅದೇನು ಚಾಕಲೆಟ ???!!!
-------------------------
ನೀವು ಹುಟ್ಟುವಾಗಲೇ ತಾಯಿಯ ಎದೆಯಲ್ಲಿ ಹಾಲನ್ನೂ ಕೂಡ ನಿಮಗಾಗಿ ತಯಾರುಮಾಡಿ ಇಟ್ಟಿರುವ ಭಗವಂತ ಎಂದಿಗೂ ನಮ್ಮನ್ನ ಮರೆಯುವುದಿಲ್ಲ!!ನಾವೇ ನಮಗೆ ಬೇಕಾದಾಗ ನೆನಸಿಕೊಳ್ಳುವವರು!!ಸಂಕಟಬಂದಾಗ ವೆಂಕಟರಮಣ!!!!
------------------------
ಜಗತ್ತಿಗೆ ಸೂರ್ಯನಿರುವಂತೆ ಶರೀರಕ್ಕೆ ಹೃದಯವಿರುತ್ತದೆ(ಆತ್ಮ)(ಸತ್ಯ)!!ಜಗತ್ತಿಗೆ ಚಂದ್ರ ಬಿಂಬವಿರುವಂತೆ ಮನಸ್ಸು ಇರುತ್ತದೆ(ಸುಳ್ಳು)(ಭ್ರಮೆ)!!ಸೂರ್ಯನು ಚಂದ್ರನಿಗೆ ಬೆಳಕನ್ನು ನೀಡುವಂತೆ ಹೃದಯದಿಂದ ಮನಸ್ಸಿಗೆ ಚೈತನ್ಯವು ಸಿಗುವುದು!!ಏಕೆಂದರೆ ಮನಸ್ಸು ಸ್ವಯಂ ಪ್ರಕಾಶಿತವಲ್ಲ!!ಅದು ಹೃದಯದಿಂದ(ಆತ್ಮ)ವೆಂಬ ಸೂರ್ಯನ ಪ್ರಕಾಶದಿಂದ ಪ್ರತಿಫಲಿಸುತ್ತದೆ!!ಯಾರು ಮನಸ್ಸೇ ನಿಜವಾದ ಬೆಳಕು ಎಂದು ಭ್ರಮಿಸುತ್ತಾರೋ ಅವರಿಗೆ ಹೃದಯದ ಸ್ವಯಂ ಪ್ರಕಾಶ ಅರಿವಾಗುವುದಿಲ್ಲ!!(ಚಂದ್ರೋ ಮನಸೋ ಜಾತಹ)!!ಯಾರು ಮನಸ್ಸೆಂಬ ಭ್ರಮೆಯನ್ನು ತಳ್ಳಿಹಾಕಿ,ಧಿಕ್ಕರಿಸಿ!!ಸತ್ಯದ ಕಡೆಗೆ (ಹೃದಯ)(ಆತ್ಮಸಾಕ್ಷಿ)ಕಡೆಗೆ ತಮ್ಮ ವಿವೇಚನೆ,ವಿಚಾರದಿಂದಾ ಹೋಗುತ್ತಾರೋ ಅವರಿಗೆ ಮಾತ್ರ!!ಸ್ವಯಂಪ್ರಭೆ (ಆತ್ಮ) (ಸತ್ಯ)ದರ್ಶನ ವಾಗುತ್ತದೆ!!!
--------------------------
ನಾವು ದಿನವೂ ಪ್ರತಿಕ್ಷಣವೂ ಯಾವುದೋ ಒಂದಕ್ಕಾಗಿ ಪರಿತಪಿಸುತ್ತಿರುತ್ತೇವೆ!!ಏನನ್ನೋ ಹುಡುಕುತ್ತಿರುತ್ತೇವೆ!!ನಮ್ಮಲ್ಲೇ ನಾನು ಪ್ರಶ್ನೆಗಳನ್ನ ಹಾಕಿಕೊಳ್ಳುತ್ತಿರುತ್ತೇವೆ!!ಸಮಾಧಾನ ಸಂತೋಷ ನೆಮ್ಮದಿಗಾಗಿ ಏನಾದರೊಂದನ್ನು ಮಾಡುತ್ತಲೇ ಇರುತ್ತೇವೆ ಇವೆಲ್ಲವೂ ನಮ್ಮ ಸುತ್ತ ಮುತ್ತ ಇರುವ ವಸ್ತುಗಳಿಂದಾ ಬರುತ್ತವೆ ಎಂದು ಅದನ್ನು ಕೂಡಿಹಾಕಲು ಪ್ರಯತ್ನಿಸುತ್ತೇವೆ ಅದಕ್ಕಾಗಿ ಹಣಗಳಿಸಲು ಹೊರಡುತ್ತೇವೆ!!ಕೊನೆಯಲ್ಲಿ ಭ್ರಮನಿರಸನ ಹತಾಶೆ ಗೋಳ್ಳುತ್ತೇವೆ!!!ಯಾವುದನ್ನೇ ಕಷ್ಟಪಟ್ಟು ಮಾಡಿದರೂ ಇದಲ್ಲ!! ಇದಲ್ಲ!!! ಇದಕ್ಕಿಂತಾ ಬೇರೇನೋ ಇದೆ ಎಂದು ಮತ್ತೆ ಹುಡುಕಾಡುತ್ತೇವೆ!!ಅತ್ರುಪ್ತಿಯಿಂದಾ ಕುದಿಯತ್ತೇವೆ ಇದಲ್ಲ!! ಇದಕ್ಕಾಗಿ ಜೀವಾಮಾನವೇ ಹಾಳಾಯಿತು!!ಎಂದು ಧುಖಿಸುತ್ತೇವೆ!!ಹೋದರೆ ಹೋಗಲಿ ನಾವು ಮಾಡಲಾರದ್ದನ್ನು ಮಕ್ಕಳಿಂದಾ ಕಾಣಲು ಬಯಸುತ್ತೇವೆ ಮುಂದಿನ ಜನ್ಮಾ ಎಂದಿದ್ದರೆ ತಾನು ಹಾಗಾಗಬೇಕು ಹೀಗಾಗಬೇಕು ಎಂದು ಅಂದುಕೊಂಡು ಅತ್ರುಪ್ತಿಯಿಂದಾ ಕೊನೆಯುಸಿರು ಯೆಳೆಯುತ್ತೇವೆ!!ಇದೆ ಅಲ್ಲವೇ ಜೀವನ!!!ಹಾಗಾದರೆ ಇಸ್ಟೆಯೇ ಜೀವನ??!!ಇಲ್ಲಾ !!ಸಾರ್ಥಕವಾಗಿಸಬಹುದು!!ಯೋಚಿಸಿನೋಡಿ!!!!!!!!!!!!!!!!!...........
-----------------------------
ನಟರಾಜರಿಗೆ ನನ್ನ ಕೋರಿಕೆ ಏನೆಂದರೆ, ತಾವು ಒಂದು ಬ್ಲಾಗ್ ಮಾಡಿ ಎಲ್ಲವನ್ನು ಒಂದು ಕಡೆ ಗುಡ್ಡೆ ಹಾಕಿದರೆ ಬಹಳಷ್ಟು ಜನರಿಗೆ ಸಹಾಯವಾಗುವುದರಲ್ಲಿ ಸಂಶಯವಿಲ್ಲ.
ಫೇಸ್ ಬುಕ್ಕಿನಲ್ಲಿ ನಟರಾಜ್: ನಟರಾಜ್
ಅವರ ಗುಂಪುಗಳು:
"ಭಾವನೆಗಳು"FEELINGS"
ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!!
ನಟರಾಜ್ ರವರನ್ನು ಫೇಸ್ ಬುಕ್ನಲ್ಲಿನ ಲೇಖನಗಳನ್ನು ಅಭಿಪ್ರಾಯಗಳನ್ನು ಗಮನಿಸುತ್ತಲೇ ಇರುತ್ತೇನೆ. ಮೇದಾವಿಗಳು, ನೇರ ನುಡಿಯ ವ್ಯಕ್ತಿ. ಮುಚ್ಚು ಮರೆಯಿಲ್ಲದೇ ನೇರವಾಗಿ ಬರೆಯುವಂತಹ ಧೈರ್ಯವಂತ ವ್ಯಕ್ತಿತ್ವ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಆಫ್ಘಾನಿಸ್ತಾನದಂತ ದೇಶದಲ್ಲಿ ಕೆಲಸ ಮಾಡುವುದೇ ಬಹು ದೊಡ್ಡಸಾಹಸ ಅವರ ಮುಂದೆ ನಾನು ಏನೂ ಅಲ್ಲ. ನಾನು ಅವರು ಬಹಳ ಸಲ ಬರವಣಿಗೆಯಲ್ಲಿ ಜಗಳವಾಡಿದ್ದೇವೆ. ಸಿಟ್ಟು ಮಾಡಿಕೊಂಡಿದ್ದಾರೆ. ನಂತರ ಸಮಾಧಾನ ಮಾಡಿಕೊಂಡು ಉತ್ತರಿಸಿದ್ದಾರೆ. ನಿಜಕ್ಕೂ ನಾನು ಒಳಗೊಳಗೇ ಪ್ರೀತಿಸುವಂತಹ ವ್ಯಕ್ತಿಗಳಲ್ಲಿ ನಮ್ಮ ನಟರಾಜ್ ಸಹ ಒಬ್ಬರು ಇಂತಹವರು ನಮ್ಮ ಕನ್ನಡಿಗರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅವರಿಗೆ ಒಳ್ಳೇಯದಾಗಲಿ. --ರಾಜು ವಿನಯ್ ದಾವಣಗೆರೆ
ಪ್ರತ್ಯುತ್ತರಅಳಿಸಿನನ್ನ ಬರಹಗಳನ್ನು ಇಷ್ಟೊಂದು ಜನ ಗಮನಿಸುತ್ತಿದ್ದಾರೆ ಈ ರೀತಿಯ ಮೆಚ್ಚುಗೆ ಸಿಗುತ್ತದೆ ಎಂದು ಎಣಿಸಿರಲಿಲ್ಲ!! ನನ್ನ ಬರಹಗಳನ್ನು ಸಂಗ್ರಹ ಮಾಡಿ ನನಗೊಂದು ತಲೆ ಬರಹ ಕೊಟ್ಟು!! ನನ್ನ ಬರಹಗಳನ್ನು ತಾಳ್ಮೆಯಿಂದಾ ಸಂಗ್ರಹಿಸಿ ಅದರ ಬಗ್ಗೆ ನಿಮ್ಮ ಬ್ಲಾಗ್ ನಲ್ಲಿ ಬರೆದಿದ್ದಕ್ಕೆ ನಿಮಗೆ ಧನ್ಯವಾದಗಳು!! ನಾನು ನನ್ನ ವೇದಿಕೆಯಲ್ಲಿ ಹೇಳಿದಂತೆ ನಾನು ಓದಿದ್ದು ಕೇಳಿದ್ದು ಕೆಲವು ಅನುಭವಗಳನ್ನು ಕೇಳಿದ ಪ್ರಶ್ನೆಗಳಿಗೆ ನನಗೆ ತಿಳಿದಿರುವ ರೀತಿಯಲ್ಲಿ ಉತ್ತರ ಕೊಟ್ಟಿದ್ದೆ!! ಅದು ಈರೀತಿಯ ಅದ್ಭುತವಾದ ಪರಿಣಾಮಗಳನ್ನು ಬೀರಿ ನಿಮ್ಮ ಮತ್ತೊಂದು ಬರವಣಿಗೆಗೆ ಕಾರಣವಾಗಿ ಪ್ರಶಂಸೆ ಸಿಗುತ್ತದೆ ಎಂದು ಭಾವಿಸಿರಲಿಲ್ಲ!! ಒಂದು ವೇಳೆ ನನ್ನ ಬರವನಿಗೆಯಿಂದಾ ಯಾರಿಗಾದರೂ ಉಪಯೋಗವಾಗಿದ್ದಲ್ಲಿ ಅದೇ ನನ್ನ ಓದಿನ ಅಧ್ಯಯನದ ಅನುಭವದ ಸಾರ್ಥಕತೆ ಎಂದು ತಿಳಿಯುತ್ತೇನೆ!! ಮತ್ತೊಮ್ಮೆ ನಿಮಗೆ ಧನ್ಯವಾದಗಳು!!!
ಪ್ರತ್ಯುತ್ತರಅಳಿಸಿಶ್ರೀ.ನಟರಾಜ್ ಕಾನುಗೋಡು ಅವರದು ಅದ್ಭುತ ವ್ಯಕ್ತಿತ್ವ !!!! ಅವರ ಬರಹಗಳು ನಮಗೆ ಹಿಡಿಸತೊಡಗಿದರೆ ಅವರಿಂದ ದೂರ ಹೋಗುವ ಮಾತೇ ಇಲ್ಲ .ನಿಜವಾಗಲು ನಾನಂತೂ ಅವರ ಬರಹಗಳಿಂದ ಸಾಕಷ್ಟು ಪ್ರಭಾವಿತಳಾಗಿದ್ದೇನೆ. ಅವರ ಕೋಪ (?) ವೂ ಸಹ ನನಗೆ ಅಸಹನೀಯ ಅನಿಸೋದಿಲ್ಲ.ಅವರ ಗೆಳೆಯರು ಅವರಿಂದ ಬೈಸಿಕೊಂಡರೂ ಅವರನ್ನು ಅಗಲರಾರರು ,ಗಮನಿಸಿದ್ದೀರಾ?.(@ರಾಜು ವಿನಯ್ ಅಲ್ವ?)
ಪ್ರತ್ಯುತ್ತರಅಳಿಸಿನಟರಾಜ್ ರವರೆ,
ಪ್ರತ್ಯುತ್ತರಅಳಿಸಿನೀವೆ ಹೇಳಿದ್ದೀರಾ ಈ ಕೆಳಗಿನ ಮಾತುಗಳನ್ನು....
ಒಂದು ವೇಳೆ ಅದು ಒಳ್ಳೆಯ ಬರವಣಿಗೆಯೇ ಆಗಿದ್ದರೆ!! ವಿಚಾರಗಳೇ ಆಗಿದ್ದರೆ!! ಅದರಲ್ಲಿ ಯಾವುದಾದರೂ ಒಳ್ಳೆಯ ಪ್ರಯೋಜಕ ಅಂಶಗಳು ಇದ್ದರೆ!! ಅದು ಸಂಪಿಗೆ ಹೂವಿನಂತೆ ಪಾರಿಜಾತದ ಹೂವಿನಂತೆ ಅದು ಎಲೆ ಮರೆಯಲ್ಲಿ ಇದ್ದರೂ ಅದರ ಪರಿಮಳ ಎಲ್ಲೆಡೆಯೂ ಹರಡಿ ಅದು ಎಲ್ಲಿಗೆ ತಲುಪಬೇಕೋ ಅದು ತಲುಪಿಯೇ ತೀರುತ್ತದೆ!! ಹಾಗು ಅದಕ್ಕೆ ಯಾವ ಮನ್ನಣೆ ಸಿಗಬೇಕೋ ಅದು ಸಿಕ್ಕಿಯೇ ತೀರುತ್ತದೆ!!ಅದನ್ನು ಬರಹಗಾರರಾಗಲೀ ಅಥವ ಯಾರೇ ಆಗಲೀ ನಿರೀಕ್ಷಿಸಿದ ಮಾತ್ರಕ್ಕೆ ಅದು ಜನಮನ್ನಣೆಯದೂ ಆಗಿರುವುದಿಲ್ಲ!!
ನಟರಾಜ್ ರವರನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಅವರ ವಿಚಾರಗಳು ಚೆನ್ನಾಗಿವೆ.. ಒಳ್ಳೆಯದಾಗಲಿ
ಪ್ರತ್ಯುತ್ತರಅಳಿಸಿ-
ವಸಂತ್