ಮಂಗಳವಾರ, ಅಕ್ಟೋಬರ್ 11, 2011

IRS Q2 2011: Top 10 dailies in Karnataka


IRS Q2 2011: Top 10 dailies in Karnataka


2011 ರ ಸಾಲಿನ ಎರಡನೇ ತ್ರೈಮಾಸಿಕದ ಐಆರ್‌ಎಸ್ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. 
ಮುಂಚೂಣಿಯಲ್ಲಿರುವ ಕರ್ನಾಟಕದ ಪತ್ರಿಕೆಗಳು ಕಳೆದ ಒಂದು ವರ್ಷದಲ್ಲಿ ಉತ್ತಮವಾದ ಬೆಳವಣಿಗೆ ತೋರಿಸಿವೆ. 




ನಂ .1 ಕನ್ನಡ ದೈನಿಕ ವಿಜಯ ಕರ್ನಾಟಕ ತನ್ನ ಓದುಗರನ್ನು ಕಳೆದುಕೊಳ್ಳದೆ ನಂ.1 ಪಟ್ಟವನ್ನು ಕಾಯ್ದುಕೊಂಡಿದೆ.  ಹಿಂದಿನ ತ್ರೈಮಾಸಿಕದಲ್ಲಿ 34,7 ಲಕ್ಷ ಮತ್ತು IRS Q2 2010 ರಲ್ಲಿ 32,68 ಲಕ್ಷ ಕ್ಕೆ  ಹೋಲಿಸಿದರೆ ಈ ಸಾರಿ  34,38 ಲಕ್ಷ ದಾಖಾಲಾಗಿದೆ.  ಒಟ್ಟಿನಲ್ಲಿ, ವಿಜಯ ಕರ್ನಾಟಕ ಕಳೆದ ಒಂದು ವರ್ಷದ ಅವಧಿಯಲ್ಲಿ  ಶೇಕಡಾ 5.2 ರಷ್ಟು ಸಾಧನೆ ಮಾಡಿದೆ.




ಎರಡನೇ ಸ್ಥಾನದಲ್ಲಿರುವ ಪ್ರಜಾವಾಣಿ, ಈ ವರ್ಷದ ಅವಧಿಯಲ್ಲಿ ಶೇ 31 ರಷ್ಟು ಪ್ರಗತಿಯನ್ನು ಸಾಧಿಸಿದೆ.  ಆದರೆ ಕಳೆದ ತ್ರೈಮಾಸಿಕಕ್ಕೆ (34,03 ಲಕ್ಷ) ಹೋಲಿಸಿದರೆ ಶೇ1 ರಷ್ಟು ಪ್ರಸಾರ ಕಡಿಮೆ ಯಾಗಿದೆ. ಈಸಾರಿ 33,69 ಲಕ್ಷ . ಕಳೆದ ವರ್ಷ 
ಈ ಅವಧಿಯಲ್ಲಿ 25,65 ಲಕ್ಷ ಪ್ರಸಾರವನ್ನು ದಾಖಲಿಸಿತ್ತು. ಹಾಗೆನೋಡಿದರೆ ಪ್ರಜಾವಾಣಿಗೆ ಇದೊಂದು ಉತ್ತಮ ಬೆಳವಣಿಗೆ.


ಮೂರನೆ ಸ್ಥಾನದಲ್ಲಿ ಕನ್ನಡಪ್ರಭವಿದ್ದು, ಅದೂ ಸಹ ವೇಗವಾಗಿ ಬೆಳೆಯುತ್ತಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1.5 ಪ್ರಮಾಣ ಹೆಚ್ಚಳವಾಗಿದೆ, ಕಳೆದ ವರ್ಷ ಎರಡನೇ ತ್ರೈಮಾಸಿಕದಲ್ಲಿ ನಡೆಸಿದ ಸಮೀಕ್ಷೆ ಯ  ಪ್ರಕಾರ ಇದುವರೆವಿಗೂ  ಶೇಕಡ 57 ರಷ್ಟು  ಓದುಗರು ಜಾಸ್ತಿಯಾಗಿದ್ದಾರೆ. IRS Q2 2010 ರಲ್ಲಿ 8,62 ಲಕ್ಷ ಇದ್ದ ಪ್ರಸಾರ ಸಂಖ್ಯೆ  ಅಚಾನಕ್ ಆಗಿ ಈ ಸಾರಿ  Q2 2011 ರಲ್ಲಿ 13,54 ಲಕ್ಷ ಬಂದು ನಿಂತಿದೆ.  ಹಿಂದಿನ ಸಮೀಕ್ಷೆಯಲ್ಲಿ 13,34 ಲಕ್ಷ ಪ್ರಸಾರವಿತ್ತು.


ನಾಲ್ಕನೆ ಸ್ಥಾನದಲ್ಲಿರುವ ಸಂಯುಕ್ತ ಕರ್ನಾಟಕ  ಈ ಸಾರಿ ತನ್ನ ಓದುಗರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಶೇ ೧೦ ರಷ್ಟು ಓದುಗರನ್ನು ಅದು ಕಳೆದುಕೊಂಡಿದೆ. ಒಟ್ಟಿನಲ್ಲಿ ಈ ವರ್ಷ ಶೇ 19.5 ರಷ್ಟು ಬೆಳವಣಿಗೆಯನ್ನು ಕಂಡಿದ್ದು ನಾಲ್ಕನೆ ಸ್ಥಾನದಲ್ಲಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ 13,06 ಲಕ್ಷ ಮತ್ತು ಈ ಬಾರಿ 11,76 ಲಕ್ಷ ದಾಖಲಾಗಿದ್ದೆ ಕಳೆದವರ್ಷ ಈ ಅವಧಿಯಲ್ಲಿ  9,84 ಲಕ್ಷ  ದಾಖಲಾಗಿತ್ತು.




ಉದಯವಾಣಿ ಹಿಂದಿನ ತ್ರೈಮಾಸಿಕದಲ್ಲಿ 8,93 ಲಕ್ಷ ವಿದ್ದ ಸಂಖ್ಯೆ ಈ ಬಾರಿ 9.85 ಲಕ್ಷಕ್ಕೆ ಜಾಸ್ತಿಯಾಗಿದ್ದು, ಶೇ 10.3 ಓದುಗರ  ಸಂಖ್ಯೆ ಯಲ್ಲಿ ಜಾಸ್ತಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾರಿ ಶೇ 24 ರಷ್ಟು ಬೆಳವಣಿಗೆ ಯನ್ನು ದಾಖಲಿಸಿದೆ.




ಆರನೆ ಸ್ಥಾನದಲ್ಲಿ ಟೈಮ್ಸ್ ಆಫ್ ಇಂಡಿಯಾ  ( Q2 2011 ರಲ್ಲಿ 5,75 ಲಕ್ಷ ) ಹಾಗು 


ಏಳನೆ ಸ್ಥಾನದಲ್ಲಿ  ಡೆಕನ್ ಹೆರಾಲ್ಡ್  (Q2 2011 ರಲ್ಲಿ 4.14 ಲಕ್ಷ )
ಎಂಟನೆ ಸ್ಥಾನದಲ್ಲಿ ಸಂಜೆವಾಣಿಯಿದ್ದು Q2 2011 ರಲ್ಲಿ 2,15 ಲಕ್ಷ ಪ್ರ್ಸಸಾರವನ್ನು ದಾಖಲಿಸಿದೆ , ಹಿಂದಿನ ತ್ರೈಮಾಸಿಕದಲ್ಲಿ 2,07 ಲಕ್ಷ ಮತ್ತು IRS Q2 2010 ರಲ್ಲಿ 2,11 ಲಕ್ಷ ಪ್ರಸಾರವಿತ್ತು.





ಒಂಬತ್ತನೆ ಸ್ಥಾನದಲ್ಲಿ ಬೆಂಗಳೂರ್ ಮಿರರ್ ಇದ್ದು  ಹಿಂದಿನ ತ್ರೈಮಾಸಿಕದಲ್ಲಿ 1.60 ಲಕ್ಷ ಇದ್ದ ಪ್ರಸಾರ ಇಂದು 1,75 ಲಕ್ಷ ಬಂದು ನಿಂತಿದೆ. Q2 2010 ರಿಂದ ಶೇಕಡ 150 ರಷ್ಟು ಬೆಳೆಯುತ್ತಿದೆ. 
------------------------------------------------------------------------------------------------




3 ಕಾಮೆಂಟ್‌ಗಳು:

  1. ಏನ್ ಗುರು, ಸಂಪಾದಕೀಯದವರು ನೋಡಿದರೆ "ಐಆರ್‌ಎಸ್ ಸರ್ವೆ ಬೆಂಗಳೂರು: ಕನ್ನಡ ಪತ್ರಿಕೆಗಳಲ್ಲಿ ತಳಮಳ ಶುರು...." ಅಂತ ಬರೆದು ಹಸಿಹಸಿ ಸುದ್ದಿ ಬರೆದು ಕನ್ನಡಪ್ರಭದ ಬಗ್ಗೆ ಓದುಗರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದರು.
    ಸಾಯಂಕಾಲದ ಹೊತ್ತಿಗೆ ಕೇಸ್ ಉಲ್ಟಾ ಹೊಡೆದಿತ್ತು "ಐಆರ್‌ಎಸ್ ಸರ್ವೆ ಕರ್ನಾಟಕ: ವಿಜಯ ಕರ್ನಾಟಕ ಈಗಲೂ ನಂ.೧" ಇದರಲ್ಲಿ ಕನ್ನಡಪ್ರಭದ ಬಗ್ಗೆ ಮೆಚ್ಚುಗೆ ಮಾತುಗಳು.....
    ಬಹುಶಃ ನಿಮ್ಮ ಪೋಸ್ಟ್ ನೋಡಿ ಮತ್ತೆ ಲೇಖನವನ್ನು ಮರು ಪ್ರಕಟಿಸಿದ್ದಾರೆ.
    ಒಳ್ಳೆ ಎಡಬಿಡಂಗಿಗಳು ಸಾರ್.
    -
    ಸಂತೋಷ್

    ಪ್ರತ್ಯುತ್ತರಅಳಿಸಿ
  2. I think Sampadakiya corrected their bog post after seeing your blog post.
    In addition to that, they have added one more blog..
    cragy guys!!

    ಪ್ರತ್ಯುತ್ತರಅಳಿಸಿ
  3. ಹೌದ್ರಿ ಸಂತೋಷ್ ಮಧ್ಯಾಹ್ನ ದ ಹೊತ್ತಿನಲ್ಲಿ ಸಂಪಾದಕೀಯದ ಬ್ಲಾಗ್ ನೋಡಿದ್ದೆ, ಈಗ ಈ ಬ್ಲಾಗ್ ನೋಡಿದ ಮೇಲೆ ತದ್ವಿರುದ್ದ ವಾದ ವರದಿಗಳು!!!, ಮತ್ತೆ ರಾತ್ರಿ ಹೊತ್ತಿಗೆ ಇನ್ನೊಂದು ಬ್ಲಾಗ್ ಬರೆದು ಹಾಕಿದ್ದಾರೆ. ಏನ್ ವಿಚಿತ್ರ ಜನಗಳು ಅವರು. ಒಬ್ಬರನ್ನು ತೇಜೋವಧೆ ಮಾಡೋದಿಕ್ಕೋಸ್ಕರ, ತಮಗೆ ಬಂದ ಹಾಗೆ ಬ್ಲಾಗ್ ಬರಿತಾರಲ್ಲ.. ಕನ್ನಡಪ್ರಭದ ಉತ್ತಮ ಸಾಧನೆ ಯನ್ನು ತಮ್ಮ ಮೊದಲಿನ ಬ್ಲಾಗ್ ನಲ್ಲಿ ಕಳಪೆ ಅಂತ ಬರೆದಿದ್ದರು. ಈಗ ನೋಡಿದರೆ ಎಲ್ಲಾ ಉಲ್ಟಾ
    ............
    ವಂದನೆಗಳು
    ಜಯಕುಮಾರ್

    ಪ್ರತ್ಯುತ್ತರಅಳಿಸಿ