ಭಾನುವಾರ, ಅಕ್ಟೋಬರ್ 2, 2011

ಅಂದು ಇಂದು


ಗಾಂಧಿ ಜಯಂತಿದಿನದಂದು ಪ್ರತಿಯೊಬ್ಬರು ಮಹಾತ್ಮ ನನ್ನು ನೆನಪಿಸುಕೊಳ್ಳುವಂತೆ ಮಾಡುತ್ತಿರುವ ನಮ್ಮ  ಸರ್ಕಾರಿ ಆಯೋಜಿತ ಕಾರ್ಯಕ್ರಮಗಳು, ಶಾಲಾ ಸಮಾರಂಭಗಳು ಕೇವಲ ಒಂದು ದಿನದ ಮಟ್ಟಿಗೆ ಸೀಮಿತವೋ ಏನೋ? 

ಮಧ್ಯ ಮಾಂಸ ಮಾರಾಟ ನಿಷೇದ ವಿದ್ದರೂ ಸಹಿತ, ಕೆಲಕಡೆ ಮಾರಾಟದ ಬಗ್ಗೆ ವರದಿಯಾಗಿವೆ. ಗಾಂಧೀಜಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೂ ಪರವಾಯಿಲ್ಲ ಕನಿಷ್ಟಪಕ್ಷ ಅವರ ಮೌಲ್ಯಗಳಿಗೆ ಗಳಿಗೆ ಬೆಲೆಕೊಟ್ಟು ಒಂದು ದಿನ ಕುಡಿಯದೆ ತಿನ್ನದೆ ಇರಲು ನಮ್ಮ ಜನ ಸಾಮನ್ಯರಿಗೆ ಸಾಧ್ಯವಾಗುತ್ತಿಲ್ಲವೆ.

2008 ರ ಗಾಂಧಿ ಜಯಂತಿ ಯ ಸಂಧರ್ಭದಲ್ಲಿ ಈದ್ ಹಬ್ಬ ಸಹ ಬಂದಿತ್ತು, ಅಂದು ಸಹ ಬಹುತೇಕ ಕಡೆ ಪ್ರಾಣಿಗಳ ಮಾರಣಹೋಮ ನಡೆಯಿತು.








 ಅಹಿಂಸಾ ತತ್ವ ವನ್ನು ಪ್ರತಿಪಾದಿಸುತಿದ್ದ ಬಾಪೂಜಿ ದಶಕಗಳಕಾಲ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.


ಅಂದು

ಭಗತ್ ಸಿಂಗ್,ರಾಜ್ ಗುರು,ಸುಖ್ದೇವ್ ಅವರಿಗೆ ೧೯೩೧ರ ಮಾರ್ಚ್ ೨೩ರನ್ದು ಮರಣದಂಡನೆ ಶಿಕ್ಷೆ ವಿಧಿಸಿದಾಗ ಮರಣದಂಡನೆ ಮುಕ್ತಗೊಳಿಸಲು ಇಡೀ ದೇಶ ಗಾಂಧಿ ಯನ್ನು ಕೋರಿದರೂ ಕೂಡ ಬ್ರಿಟೀಷರ ಮುಂದೆ ಚಕಾರವೆತ್ತಲಿಲ್ಲ. ಕ್ರಾಂತಿಕಾರಿಗಳಿಗೆ ಅವರು ಎಂದೂ ಪ್ರೊತ್ಸಾಹವನ್ನು ನೀಡಿರಲಿಲ್ಲ. ಅವರ ಉದ್ದೇಶ ಅಹಿಂಸಾ ತತ್ವ ಪಾಲನೆ.


ಇಂದು



ಪಾರ್ಲಿಮೆಂಟಿನ ದಾಳಿಯ ರುವಾರಿ ಅಫ್ಜಲ್ ಗುರುವಿನ ಕ್ಷಮಾದಾನದ ಕುರಿತು ಜಮ್ಮು ಕಾಶ್ಮಿರ ವಿಧಾನ ಸಭೆ ನಿರ್ಣಯ ಕೈಗೊಳುತ್ತೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅಫ್ಜಲ್ ಗುರುವಿನ ಪರವಾಗಿ ಟ್ವೀಟ್ ಮಾಡುತ್ತಾರೆ. ಆಭಾಗದ ಜನರ ವಿರೋಧವನ್ನು ಕಟ್ಟಿಕೊಳ್ಳಲು ಅವರು ತಯಾರಿಲ್ಲ. ವೋಟ್ ಬ್ಯಾಂಕ್ ರಾಜಕಾರಣ. 


 


ತಮಿಳುನಾಡಿನ ರಾಜಕಾರಣಿಗಳು ರಾಜೀವ್ ಗಾಂಧಿಯನ್ನು ಕೊಂದ ಎಲ್ ಟಿ ಟಿ ಇ ಪರ ಮಾತನಾಡುತ್ತಾರೆ, ಮತ್ತು ಕ್ಷಮಾದಾನ ಪರ ಕೋರ್ಟ್ ಮೊರೆ ಹೋಗುತ್ತಾರೆ. ಇಲ್ಲೂ ಸಹ ವೋಟ್ ಬ್ಯಾಂಕ್ ರಾಜಕಾರಣ. 


ಹೀಗೆ ನೋಡಿದರೆ, ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಯಾವುದೇ ಬೆಲೆಯಿಲ್ಲ. ಕೇವಲ ಸ್ವ ಹಿತಾಸಕ್ತಿ, ಅಧಿಕಾರದ ದಾಹ, ಸ್ವಜನ ಪಕ್ಷಪಾತ ಗಳೆ ಇಂದಿನ ರಾಜಕಾರಣದ ಮೌಲ್ಯಗಳು.


ಅಂದು ಬ್ರಿಟೀಷರು ಧರ್ಮದ ಆಧಾರದಲ್ಲಿ ದೇಶವನ್ನು ಒಡೆದರು, ಇಂದಿನ ರಾಜಕಾರಣಿಗಳು ಧರ್ಮ, ಜಾತಿ ಮತ್ತು  ಭಾಷೆಯ ಆಧಾರದಲ್ಲಿ ದೇಶವನ್ನು ಒಡೆಯುತಿದ್ದಾರೆ. ಕೇವಲ ಅಧಿಕಾರ ಲಾಲಸೆ ಇಂದಿನ ಈ ಗತಿಗೆ ಕಾರಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ