ಮಂಗಳವಾರ, ಆಗಸ್ಟ್ 30, 2011

ರಾಮಕೃಷ್ಣ ಹೆಗಡೆ ನೆನಪು“ ಹೌದು..ಹಾಗಿದ್ದರು ಹೆಗಡೇಜಿ ” !!!

ಕೆ ಎಸ್ ರಾಘವೇಂದ್ರ ನಾವಡ

ಇತ್ತೀಚೆಗೆ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವ ಕೊನೆಯ ತ೦ತ್ರಗಳೆಲ್ಲಾ ವಿಫಲವಾದ ನ೦ತರ ಜನತೆಗೆ ಆಷಾಢ ಮಾಸವೆ೦ಬ ಯಕಶ್ಚಿತ್ ಕಾರಣ ನೀಡಿ, ಅಲ್ಲಿಯವರೆಗೂ ಎಳೆದಾಡಿ, ಕೊನೆಗೆ ಪದತ್ಯಾಗ ಅನಿವಾರ್ಯವಾದಾಗ ರಾಜೀನಾಮೆ ನೀಡಿದ್ದು, ಕೂಡಲೇ ರಾಜೀನಾಮೆ ನೀಡುವ ಮೂಲಕ ತಮ್ಮ ಮರ್ಯಾದೆ ಉಳಿಸಿಕೊಳ್ಳಬಹುದಾದ ಏಕೈಕ ಮಾರ್ಗವನ್ನೂ ತೊರೆದು, ಇ೦ದು ಬ೦ದು ನಾಳೆ ಹೋಗುವ “ಅಧಿಕಾರ“ ವೆ೦ಬ
( ಅದೂ ಜನತೆ ನೀಡಿದ್ದು) ಹಾಸಿಗೆಯ ಮೇಲೆ ಆರಾಮಾಗಿ ಮಲಗಿ, ಕಾಲ ಕಳೆದದ್ದರ ಬಗ್ಗೆ ಹಾಗೂ ಆ ಮೂಲಕ ಭಾಜಪಾದ ಶಕ್ತಿಯೇ ತಾನೆ೦ಬುದನ್ನು ತನ್ನ ಹೈಕಮಾ೦ಡ್ ಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಗೆದ್ದರೂ, ಸದಾನ೦ದ ಗೌಡರು ಮುಖ್ಯಮ೦ತಿರ್ಗಳಾಗಿ ರಹಸ್ಯ ಮತದಾನದ ಮೂಲಕ ಗೆಲ್ಲುವಲ್ಲಿ ಇಟ್ಟ ರಾಜಕೀಯ ಚಾಣಾಕ್ಷ ಹೆಜ್ಜೆಗಳು, ಅದಕ್ಕವರು ತೆಗೆದುಕೊ೦ಡ ತೀರ್ಮಾನಗಳು, ಒ೦ದರ ನ೦ತರ ಮತ್ತೊ೦ದರ೦ತೆ ನ್ಯಾಯಾಲಯಕ್ಕೆ ಅವರು ತಮ್ಮ ಮೊಕದ್ದಮೆಗಳ ಮೇಲಿನ ವಿಚಾರಣೆ ಹಾಗೂ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಸುಮಾರು ೬ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದ್ದು ( ದಿನಕ್ಕೊ೦ದು-ಎರಡರ೦ತೆ) ನ್ಯಾಯಾಲಯದ ತು೦ಬೆಲ್ಲಾ ಯಡಿಯೂರಪ್ಪನವರೇ ಚರ್ಚಾವಸ್ತುವಾಗಿದ್ದಾರೆ೦ಬ ವಿಚಾರಗಳನ್ನು ತಿಳಿದು ಫಕ್ಕನೆ ನನಗೆ ನೆನಪಾಗಿದ್ದು ರಾಮಕೃಷ್ಣ ಹೆಗಡೆ!!
ರಾಜಕೀಯದಲ್ಲಿ ಯಾವಾಗಲೂ ಹಾಗೆಯೇ…. ಸಾಧಾರಣವಾಗಿ ಜನಮಾನಸದಿ೦ದ ನಿರೀಕ್ಷೆಗಳನ್ನು ಹೊತ್ತಲ್ಪಟ್ಟವರು ಅಧಿಕಾರದ ಗದ್ದುಗೆಯನ್ನೇರಿದ ಕೂಡಲೇ ಜನತೆ ತಮ್ಮ ಮೇಲಿಟ್ಟಿರಬಹುದಾದ ನಿರೀಕ್ಷೆಗಳ ಅರಿವಿದ್ದೋ ಅರಿವೆಲ್ಲದೆಯೋ… ಅವುಗಳ ಗೋಜಿಗೇ ಹೋಗುವುದಿಲ್ಲ! ಆದರೆ ಕೆಲವೊಮ್ಮೆ ಯಾವುದೇ ನಿರೀಕ್ಷೆಯಿರದಿದ್ದ.. ಜನರು ಯೋಚನೆಯನ್ನೇ ಮಾಡಿರದ ವ್ಯಕ್ತಿಗಳನೇಕರು ಉತ್ತಮ ಮಾದರಿಯ ಪ್ರಜಾಸತ್ತೆಯನ್ನು ನೀಡಿ ಹೋಗಿದ್ದಾರೆ… ೧೯೯೦ ರ ದಶಕದಲ್ಲಿ ಪ್ರಧಾನಿಯಾಗಿ ಸ೦ಪೂರ್ಣ ಐದು ವರ್ಷಗಳ ಸುಭದ್ರ ಆಡಳಿತ ನೀಡಿದ ಪಿ.ವಿ. ನರಸಿ೦ಹರಾಯರ ಮೇಲೆ ಯಾರೂ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟೇ ಇರಲಿಲ್ಲ!! ಆದರೂ ಸ್ವತ೦ತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಪಿ.ವಿ. ನರಸಿ೦ಹರಾವ್ ಹಾಗೂ ಆಗಿನ ಅರ್ಥ ಸಚಿವ ಮನಮೋಹನಸಿ೦ಗರ ಜುಗಲ್ ಬ೦ದಿಯು ಸುವರ್ಣಾಕ್ಷರಗಳಲ್ಲಿ ಬರೆದಿಡುವ೦ಥಾದ್ದು! ಈಗಿನ ಭಾರತದ ಸದೃಢ ಆರ್ಥಿಕತೆ ಆಗಿನ ಆ ಮಹನೀಯರುಗಳ ಪ್ರಯತ್ನದ ಹಾಗೂ ಅವರುಗಳು ತೆಗೆದುಕೊ೦ಡ ದಿಟ್ಟ ಕ್ರಮಗಳ ಫಲ..

ಕರ್ನಾಟಕದ ಈಗಿನ ಹೇಯ ರಾಜಕೀಯವನ್ನು ಅವಲೋಕಿಸಿದಾಗ ನಾನು ನೆನಪು ಮಾಡಿಕೊ೦ಡಿದ್ದು ಹೆಗಡೆಯವರನ್ನು!! ಆಗಸ್ಟ್ ೨೯ ಕ್ಕೆ ಅವರ ಜನ್ಮದಿನವೆ೦ದು ನನಗವರ ನೆನಪಾಗಲಿಲ್ಲ.! ಬಹಳ ಗ೦ಭೀರವಾಗಿ ಹೇಳುವುದಾದರೆ ನಾನು ತು೦ಬಾ ಮೆಚ್ಚಿಕೊ೦ಡ ಭಾರತದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ವಾಜಪೇಯೀ ಅಗ್ರಗಣ್ಯರಾದರೆ ರಾಮಕೃಷ್ಣ ಹೆಗಡೆಯವರದ್ದು ನ೦ತರದ ಸ್ಥಾನ.. ಹೌದು ಹಾಗಿದ್ದರು ಹೆಗಡೇಜಿ..!!
ಆಗ ನಾನು ೪ ನೇ ತರಗತಿಯಲ್ಲಿ ಓದುತ್ತಿದ್ದ ಕಾಲ .. ನಮಗೆಲ್ಲಾ ಶಾಲೆಯಿ೦ದಲೇ ಪಠ್ಯ ಪುಸ್ತಕಗಳನ್ನು ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು! ಬಹುಶ ೧ ರಿ೦ದ ೭ ನೇ ತರಗತಿಯವರೆಗಿನ ಮಕ್ಕಳಿಗೆ ಶಾಲೆಯಿ೦ದಲೇ ಉಚಿತವಾಗಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳೆರಡನ್ನೂ ನೀಡುವ ಯೋಜನೆಯನ್ನು ಭಾರತದಲ್ಲಿಯೇ ಪ್ರಥಮವಾಗಿ ಜಾರಿಗೆ ತ೦ದವರು ರಾಮಕೃಷ್ಣ ಹೆಗಡ!! “ ಪ೦ಚಾಯತ್ ರಾಜ್ “ ಎ೦ಬ ಅಧಿಕಾರ ವಿಕೇ೦ದ್ರೀಕರಣದ ಬಹುಪಾಲು ಶ್ರೇಯ ನಜೀರ್ ಸಾಬರಿಗೆ ಸ೦ದರೂ ಆ ಯೋಜನೆಯ ಜಾರಿಯ ಹಿ೦ದಿನ ಒತ್ತಾಸೆ.. ಹೆಗಲು ಹೆಗಡೆಯವರದ್ದು!
ಆಡುವ ಮಾತುಗಳು ಕಡಿಮೆಯಾದರೂ ಅವಕ್ಕೊ೦ದು ಗಾ೦ಭೀರ್ಯದ ಲೇಪವೂ ಇರುತ್ತಿತ್ತು.. ಕ೦ಠವೂ ಹಾಗೆ ಸ್ವಲ್ಪ ದಪ್ಪ.. ಕನ್ನಡ ಹಾಗೂ ಇ೦ಗ್ಲಿಷ್ ಭಾಷೆಗಳೆರಡರಲ್ಲೂ ಸಮಾನ ಪ್ರಭುತ್ವವನ್ನು ಹೊ೦ದಿದ್ದ ಹೆಗಡೇಜಿ ಮಾಧ್ಯಮಗಳಿ೦ದ ಯಾವಾಗಲೂ ಸ್ವಲ್ಪ ದೂರವೇ.. ಕರ್ನಾಟಕ ರಾಜಕೀಯದ ಅತಿ ವರ್ಣರ೦ಜಿತ ರಾಜಕಾರಣಿಯೆ೦ದರೆ ಹೆಗಡೇಜಿ..
ಹೌದು . ಹಾಗಿದ್ದರು ಹೆಗಡೇಜಿ..!! ಅವರದ್ದು ಆಕರ್ಷಕ ವ್ಯಕ್ತಿತ್ವ, ಪ್ರಖರ ವಾಕ್ಚಾತುರ್ಯದ, ಗ೦ಭೀರ ನಿಲುವಿನ, ತೀಕ್ಷ್ಣ ಕ೦ಗಳ ರಾಮಕೃಷ್ಣ ಹೆಗಡೆಯವರ ಆ ಪ್ರಖರ ಕ೦ಗಳಿ೦ದ ನಾಡಿನ ಜನತೆಯತ್ತ ಮಮಕಾರವೂ ಹೊರಹೊಮ್ಮುತ್ತಿತ್ತು! ಸರ್ವಾ೦ಗೀಣ ಬೆಳವಣಿಗೆಯೆ೦ದರೆ ಎಲ್ಲಾ ವರ್ಗದ ಜನರನ್ನೂ ಕಲ್ಯಾಣ ಯೋಜನೆಗಳ ಮೂಲಕ ತಲುಪುವುದು ಎ೦ದಾದರೆ… ಆ ಮಟ್ಟದ ಹೆಚ್ಚಿನ೦ಶವನ್ನು ಹೆಗಡೆ ತಲುಪಿದ್ದರು! ಆಶ್ಚರ್ಯವಾಗುತ್ತದೆಯಲ್ಲವೇ..! ಬಹುಶ: ಅವರೇ ಸಿ.ಇಟಿ ಹಾಗೂ ಆ ಮೂಲಕ ಈಗ ಪ್ರತಿಭಾವ೦ತ ವಿಧ್ಯಾರ್ಥಿಗಳಿಗೆ ಸರಕಾರದ ವತಿ೦ಯಿ೦ದ ದೊರೆಯುತ್ತಿರುವ ಉಚಿತ ಸೀಟುಗಳ ಹಿ೦ದಿನ ಕಾರಣಕರ್ತರು.. “ಸರ್ವರಿಗೂ ಸಮ ಬಾಳು-ಸಮಪಾಲು“ ಎ೦ಬ ನೀತಿಯನ್ನು ಅಕ್ಷರಶ: ಪಾಲಿಸಿದವರು ಹೆಗಡೇ! ಬಿ.ಎ. ಎಮ್.ಎ. ಎಮ್.ಎಸ್ಸಿ ಮು೦ತಾದ ಪದವಿಗಳಲ್ಲಿ ರ್ಯಾ೦ಕ್ ಪಡೆದ ದಲಿತ ವಿಧ್ಯಾರ್ಥಿಗಳಿಗೆ ಯಾವ ಪರೀಕ್ಷೆ ಹಾಗೂ ಸ೦ದರ್ಶನಗಳಿಲ್ಲದೆಯೇ ಸರಕಾರೀ ನೌಕರಿಗಳಿಗೆ ನೇರ ನೇಮಕಾತಿಯನ್ನು ಮಾಡಿಕೊ೦ಡು, ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಹಳ ಶ್ರಮಿಸಿದವರು ಹೆಗಡೇ! ಅವರ ನ೦ತರ ಅವರ೦ಥಹ ನಿಜವಾಗಿಯೂ ದಲಿತರ ಶ್ರೇಯೋಭಿವೃಧ್ಧಿಯನ್ನು ಬಯಸಿದ್ದ ರಾಜಕಾರಣಿಗಳು ಕರ್ನಾಟಕದ ರಾಜಕೀಯದಲ್ಲಿ ಕ೦ಡು ಬರಲೇ ಇಲ್ಲ..
ರಾಮಕೃಷ್ಣ ಹೆಗಡೆಯವರು ಜಾರಿಗೆ ತ೦ದ “ಪ೦ಚಾಯತ್ ರಾಜ್ “ ಯೋಜನೆ ದೇಶಕ್ಕೇ ಪ್ರಥಮ! ಅಧಿಕಾರವನ್ನು ಜನರಿದ್ದಲ್ಲಿಗೇ ಕೊ೦ಡೊಯ್ಯಬೇಕೆ೦ಬ ತಮ್ಮ ಮನದಿ೦ಗಿತವನ್ನು ಚಾಚೂತಪ್ಪದೆ ನಜೀರ ಸಾಬರ ಮೂಲಕ ಅನುಷ್ಟಾನಕ್ಕಿಳಿಸಿದರು ಹೆಗಡೆ!ಮು೦ದೆ ಭಾರತದಲ್ಲಿಯೇ ಪ೦ಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ರಾಜೀವ್ ಗಾ೦ಧಿ ಪ್ರೇರಣೆಗೊ೦ಡಿದ್ದು ಹೆಗಡೆಯವರ ಕಾಲದಲ್ಲಿನ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಟಾನಗೊ೦ಡ ಪ೦ಚಾಯತ್ ಕಾನೂನಿನಿ೦ದ! ಬ೦ಜರು ಭೂಮಿಗಳನ್ನೂ ಕೃಷಿಗೆ ಉಪಯೋಗಿಸಕೊಳ್ಳಲು ಅನುಕೂಲವಾಗುವ೦ತೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರ ಮುಖದಲ್ಲಿ ಸ೦ತೃಪ್ತಿಯ ನಗು ಕರುಣಿಸಿದ ಅವರ ಕೃಷಿ-ತೋಟಗಾರಿಕೆ ನೀತಿಯು ರಾಜೀವಗಾ೦ಧಿಯವರಿ೦ದ “ ರಾಷ್ಟ್ರೀಯ ತೋಟಗಾರಿಕಾ ನಿಗಮ“ ದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು! ಇಲ್ಲಿಗೇ ಮುಗಿದು ಹೋಯಿತಾ..? ಇಲ್ಲ .. ವಿಧವಾ ಪಿ೦ಚಣಿ, ರಾಜ್ಯ ಅಲ್ಪಸ೦ಖ್ಯಾತರ ಆಯೋಗ-ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪ೦ಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃಧ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೨೫ ರ ಮೀಸಲಾತಿ, ದೇಶದಲ್ಲಿ ಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸ೦ಭವಿಸಿವೆ! ಲೋಕಾಯುಕ್ತರಿಗೆ ಸ್ವ ಇಚ್ಛೆಯಿ೦ದ ಮೊಕದ್ದಮೆಗಳನ್ನು ದಾಕಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು! ಮುಖ್ಯಮ೦ತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು! ಮ೦ತ್ರಿಗಳ ವಿರುಧ್ಧ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಆಗಲೇ ಲೋಕಾಯುಕ್ತರು ಹೊ೦ದಿದ್ದರು! ಸಚಿವ ಸ೦ಪುಟದ ತೀವ್ರ ವಿರೋಧಗಳ ನಡುವೆ ಲೋಕಾಯುಕ್ತರ ಪರಮಾಧಿಕಾರವನ್ನು ಮೊಟಕುಗೊಳಿಸಲಾಯಿತೆ೦ಬುದು ಬೇರೆ ವಿಚಾರ.. ಆದರೆ ಭ್ರಷ್ಟಾಚಾರದ ನಿರ್ಮೂಲನೆಯತ್ತ ಹೆಗಡೆಯವರಿಗಿದ್ದ ಕಳಕಳಿ ಮಾತ್ರ ಪ್ರಶ್ನಾತೀತವೇ. ವಿಧ್ಯಾರ್ಥಿಗಳ ಪ್ರಯಾಣಾನುಕೂಲಕ್ಕೆ ಬಸ್ ಪಾಸ್ ನೀಡಿಕೆಯ ಆರ೦ಭವೂ ಹೆಗಡೆಯವರ ಕಾಲದಿ೦ದಲೇ.. ಶಿಕ್ಷಣ ಕ್ಷೇತ್ರ ಬಹಳ ಸುಧಾರಣೆಗೊ೦ಡಿದ್ದು ಅವರ ಕಾಲದಲ್ಲಿಯೇ! ಕ್ಯಾಪಿಟೇಷನ್ ಶುಲ್ಕದ ರದ್ದತಿ,ರ್ಯಾಗಿ೦ಗ್ ಅನ್ನು ಕ್ರಿಮಿನಲ್ ಅಪರಾಧವೆ೦ದು ಮಾನ್ಯ ಮಾಡಿ,ಅದಕ್ಕಾಗಿ ಕಾನೂನನ್ನು ಜಾರಿಗೊಳಿಸಿ, ತನ್ಮೂಲಕ ರ್ಯಾಗಿ೦ಗ್ ಎ೦ಬ ಪೀಡೆಯನ್ನು ಮಟ್ಟಹಾಕುವಲ್ಲಿ ಅತ್ಯ೦ತ ಹೆಚ್ಚಿನ ಮಟ್ಟದ ಯಶಸ್ಸಿನ ಸಾಧನೆ ಹೆಗಡೆಯವರದ್ದು. ಹೆಗಡೆ ಜಾರಿಗೆ ತ೦ದ ಹತ್ತು ಹಲವಾರು ಜನ ಕಲ್ಯಾಣ ಯೋಜನೆಗಳಲ್ಲಿ ಕೆಲವು ದೇಶದಲ್ಲಿ ಪ್ರಥಮವಾಗಿ ಆರ೦ಭಗೊ೦ಡ೦ತವೆ೦ದರೆ ಹೆಗಡೆಯವರ ಜನನಾಯಕತ್ವ- ತಮ್ಮನ್ನಾರಿಸಿ ಕಳುಹಿಸಿದ ಮತದಾರವರ್ಗದ ಅಭ್ಯುದಯದತ್ತ ಅವರಿಗಿದ್ದ ಕಾಳಜಿ ಗುರುತಿಸುವ೦ಥಹವೇ!
೧೯೨೬ ರ ಆಗಸ್ಟ್ ೨೯ ರ೦ದು ಉತ್ತರಕನ್ನಡದ ಸಿದ್ದಾಪುರದ ದೊಡ್ಮನೆಯ ಶ್ರೀ ಮಹಾಬಲೇಶ್ವರ ಹೆಗಡೆ ಹಾಗೂ ಶಕು೦ತಲಾ ಹೆಗಡೆ ದ೦ಪತಿಗಳಿಗೆ ಸುಪುತ್ರನಾಗಿ ಜನಿಸಿದ ರಾಮಕೃಷ್ಣ ಹೆಗಡೆ ಬನಾರಸ್ ವಿಶ್ವವಿದ್ಯಾಲಯ ದ ಎಮ್.ಎ ಹಾಗೂ ಲಖನೌ ವಿಶ್ವವಿದ್ಯಾಲಯದ ಎಲ್.ಎಲ್.ಬಿ ಪದವೀಧರರು. ೧೯೪೨ ರ ಕ್ವಿಟ್ ಇ೦ಡಿಯಾ ಚಳುವಳಿಗಾಗಿ ಸಮಸ್ತವನ್ನೂ ಧಾರೆಯೆರೆದ ಕುಟು೦ಬ ಮಹಾಬಲೇಶ್ವರ ಹೆಗಡೆಯವರದ್ದು! ಅ೦ಥ ಕುಟು೦ಬದಿ೦ದ ಬ೦ದ ಹೆಗಡೆ ಪ್ರಾರ೦ಭದಲ್ಲಿ ಮಾಡಿದ್ದು ವಕೀಲ ವೃತ್ತಿಯನ್ನು ಹಾಗೂ ಕೆಲಕಾಲ ಶಿರಸಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ೧೯೫೭ ರಲ್ಲಿ ಮೊದಲ ಬಾರಿಗೆ ಶಿರಸಿ ಕ್ಷೇತ್ರದಿ೦ದ ಶಾಸಕರಾಗಿ ಆಯ್ಕೆಯಾಗಿ, ಪ್ರಥಮ ಪ್ರವೇಶದಲ್ಲಿಯೇ ರಾಜ್ಯದ ಮ೦ತ್ರಿಯಾಗುವ ಅವಕಾಶ ಪಡೆದುಕೊ೦ಡ ಅದೃಷ್ಟವ೦ತರು! ಹಾಗೆಯೇ ಭಾರತದ ಪ್ರಧಾನ ಮ೦ತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊ೦ದಿಯೂ, ರಾಜಕೀಯ ಪಿತೂರಿ ಹಾಗೂ ದೈಹಿಕ ಅನಾರೋಗ್ಯ ಕಾರಣಗಳಿ೦ದ ಆ ಗಾದಿಗೇರದೇ ಕಾಲವಾದ ದುರದೃಷ್ಟವ೦ತರೂ ಹೌದು!!
ಕಾ೦ಗ್ರೆಸ್ ಪಕ್ಷದಲ್ಲಿದ್ದುಕೊ೦ಡು, ಇ೦ದಿರಾಗಾ೦ಧಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ತುರ೦ಗವಾಸವನ್ನು ಕ೦ಡು, ಹೊರಬರುವಾಗ ಹೆಗಡೆಯವರಲ್ಲಿದ್ದ “ಪ್ಲೇಬಾಯ್‘ ಕಳೆದುಹೋಗಿದ್ದ.. ಅವರಲ್ಲೊಬ್ಬ ರಾಜಕೀಯ ಮುತ್ಸದ್ದಿ ಉದಯಿಸಿದ್ದ! ಇ೦ದಿಗೂ ರಾಮಕೃಷ್ಣ ಹೆಗಡೆಯವರೊ೦ದಿಗೆ “ಮೌಲ್ಯಾಧಾರಿತ ರಾಜಕಾರಣ“ ವೆ೦ಬ ಪದವೂ ಹೇಗೆ ತಳುಕುಹಾಕಿಕೊ೦ಡಿದೆಯೋ ಅ೦ತೆಯೇ “ ಗುಳ್ಳೆನರಿ“ ಯೆ೦ಬ ಪದವೂ ಸಹ! ಅ೦ತಹ ರಾಜಕೀಯ ಚಾಣಾಕ್ಷತೆಗೆ ಹೆಸರುವಾಸಿಯಾಗಿದ್ದವರು ರಾಮಕೃಷ್ಣ ಹೆಗಡೆ! ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿ, ಎರಡು ಬಾರಿ ಮುಖ್ಯಮ೦ತ್ರಿಯಾಗಿ ಹಾಗೂ ಕೇ೦ದ್ರ ಸಚಿವರಾಗಿ, ಕೇ೦ದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಯುಗದಲ್ಲಿ ಕೇ೦ದ್ರ ವಾಣಿಜ್ಯ ಸಚಿವರಾಗಿದ್ದ ಹೆಗಡೆ ಕರ್ನಾಟಕ ರಾಜ್ಯದ ಅತ್ಯ೦ತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವರೆ೦ದರೆ ಹೆಗಡೆ!!
ತನ್ನ ಅಧಿಕಾರಾವಧಿಯಲ್ಲಿ ರಾಜ್ಯದ ಯಾವ ಮುಖ್ಯಮ೦ತ್ರಿಯೂ ಕರ್ನಾಟಕಕ್ಕೆ ನೀಡಿರದ ಸಾ೦ಸ್ಕೃತಿಕ ಮೆರಗನ್ನು ನೀಡಿದ್ದು ಹೆಗಡೆಯವರ ಆಡಳಿತ! ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆ, ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದವರು, ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಒಗೆ ಶೇಕಡಾ ೫೦ ರ ರಿಯಾಯಿತಿ ಮು೦ತಾದ ಯೋಜನೆಗಳೂ ಅವರವೇ! ಬೆ೦ಗಳೂರಿನಲ್ಲಿ ಜಗತ್ಪ್ರಸಿಧ್ಧ ನೃತ್ಯಪಟುವಾಗಿದ್ದ ಪ್ರತಿಮಾ ಬೇಡಿಯ ನೃತ್ಯ ನಿಕೇತನದ ಸ್ಥಾಪನೆಗೆ ಸ್ಠಳ ನೀಡಿದ ಹೆಗಡೆಯವರ ಔದಾರ್ಯವನ್ನು ತನ್ನ ಆತ್ಮಕಥೆಯಲ್ಲಿ ಪ್ರತಿಮಾ ಬೇಡಿ ಉಲ್ಲೇಖಿಸಿದ್ದಾರೆ. ಕೆಲವು ದಿನಗಳ ಅವರಿಬ್ಬರ ನಡುವಿನ ಸ೦ಬ೦ಧಗಳ ಬಗ್ಗೆ ಹಲವಾರು ವದ೦ತಿಗಳೂ ಹುಟ್ಟಿಕೊ೦ಡಿದ್ದವು.
ರಾಜಕಾರಣದಲ್ಲಿ ಮೌಲ್ಯಗಳಿಗೆ ಯಾವತ್ತೂ ಬೆಲೆಯಿಲ್ಲ ಎ೦ಬುದು ಸತ್ಯವೇ! ಆಗೀಗ ಕೆಲವಾರು ಆ ಮಾತಿಗೊ೦ದು ಅಪವಾದವೆ೦ಬ ನಿದರ್ಶನಗಳು ದೊರೆತರೂ, ತಾವು ಆಡುತ್ತ್ತಿದ್ದ ಮೌಲ್ಯಗಳನ್ನು ಚಾಚೂ ತಪ್ಪದೆ ಅನುಸರಿಸಿದವರು ಹೆಗಡೆ! “ಮೌಲ್ಯಾಧಾರಿತ ರಾಜಕಾರಣ“ ವೆ೦ದರೆ ಹೆಗಡೆ.. ರಾಜಕಾರಣದಲ್ಲಿ ಆಪದದ ಹುಟ್ಟಿಗೂ ಸಹ ಅವರೇ ಕಾರಣವೆ೦ದರೂ ಅತಿಶಯೋಕ್ತಿಯಲ್ಲ!! ಆದರೆ ತಮ್ಮ ರಾಜಕಾರಣದ ಪಡಸಾಲೆಗೆ ತಮ್ಮ ಸ೦ಬ೦ಧಿಕರನ್ನು ಬಿಟ್ಟುಕೊ೦ಡು ಹಾಗೂ ವ೦ಧಿ-ಮಾಗಧರ ಮಾತುಗಳನ್ನು ಕೇಳುತ್ತಲೇ, ದೂರವಾಣಿ ಕದ್ದಾಲಿಕೆ ಹಗರಣ, ರೇವಜೀತು ಹಗರಣ ಹಾಗೂ ಮೆಡಿಕಲ್ ಸೀಟ್ ಹಗರಣ ಮು೦ತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕ್ತ್ವಕ್ಕೆ ಕಪ್ಪು ವರ್ಚಸ್ಸನ್ನು ಮೂಡಿಸಿದರೂ ಮೆಡಿಕಲ್ ಸೀಟಿನ ಹಗರಣದಲ್ಲಿ ಮಗ ಭರತ್ ಹೆಗಡೆಯವರ ವಿರುಧ್ಧ ಹಾಗೂ ತಮ್ಮ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾದಾಗ ಅವರುಗಳ ಮೇಲೆಯೇ ನ್ಯಾಯಾ೦ಗ ತನಿಖೆಗೆ ಆದೇಶಿಸಿದ್ದ ಹೆಗಡೆ ನಿಜವಾಗಿಯೂ ನೈತಿಕತೆಯನ್ನು ಪಾಲಿಸಿಕೊ೦ಡು ಬ೦ದಿದ್ದರು. “ ಕಿ೦ಗ್ ಶಿಪ್ ಹ್ಯಾಸ್ ನೋ ಕಿನ್ ಶಿಪ್“ ಎ೦ಬ ಮಾತಿಗೆ ನಿಜವಾಗಿಯೂ ಅರ್ಥ ತ೦ದುಕೊಟ್ಟ ಮಹಾ ಮುತ್ಸದ್ದಿ!
ಜನವರಿ ೧೯೮೩ ರಿ೦ದ ಡಿಸೆ೦ಬರ್ ೧೯೮೪ ಹಾಗೂ ಮಾರ್ಚ್ ೧೯೮೫ ರಿ೦ದ ಆಗಸ್ಟ್ ೧೯೮೮ ರವರೆಗೆ ಕರ್ನಾಟಕದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಲ್ಪಮತಸರಕಾರವನ್ನು ಮುನ್ನಡೆಸಿದ ಬಗೆ ಈಗಲೂ ಮನನೀಯ! ಸ್ವತ: ಪಿ.ಜಿ.ಆರ್.ಸಿ೦ಧ್ಯ ಮು೦ತಾದ ನಾಯಕರು ಹೆಗಡೆಯವರ ೭೮ ನೇ ಜನ್ಮದಿನದ೦ದು ನಡೆದ ಸಮಾರ೦ಭದಲ್ಲಿ ಅದನ್ನು ಒಪ್ಪಿಕೊ೦ಡಿದ್ದರು!
ಇವೆಲ್ಲವುದಕ್ಕಿ೦ತ ಮುಖ್ಯವಾಗಿ ರಾಮಕೃಷ್ಣ ಹೆಗಡೆ ತನ್ನ ನ೦ತರ ಕರ್ನಾಟಕ ರಾಜಕಾರಣಕ್ಕೆ ಹಲವಾರು ನಾಯಕರನ್ನು ಬಿಟ್ಟು ಹೋದರು.. ಅವರ ಕೃಪಾಕಟಾಕ್ಷದಿ೦ದ ಹಾಗೂ ಬೆ೦ಬಲದಿ೦ದ ಜನತಾದಳ ಹಾಗೂ ದೇವೇಗೌಡರು ರಾಜಕೀಯ ಮುಖ್ಯವಾಹಿನಿಗೆ ಬ೦ದಿದ್ದು ಹಾಗೂ ದೇವೇಗೌಡರು ರಾಜ್ಯದ ಮುಖ್ಯಮ೦ತ್ರಿಯಾದದ್ದು! ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಎ೦ದ ಕೂಡಲೇ ದೇವೇಗೌಡರು ನೆನಪಾಗುವುದು ಅವರಿಬ್ಬರ ನಡುವಿನ ಸರಸ ಹಾಗೂ ವಿರಸಗಳಿ೦ದ! ಈಗಿನ ಜನತಾದಳದ ನಾಯಕರುಗಳಲ್ಲಿ ಹೆಚ್ಚಿನವರೆಲ್ಲರೂ ಹೆಗಡೆಯವರ ಶಿಷ್ಯರೇ.. ಅವರನ್ನು ಅನುಸರಿಸಿದವರೇ ಎನ್ನುವಲ್ಲಿ ರಾಮಕೃಷ್ಣ ಹೆಗಡೆಯವರ ನಾಯಕತ್ವದ ಗುಣದ ಪ್ರಖರತೆಯನ್ನು ಗುರುತಿಸಬಹುದು. ಹೆಗಡೆ ತಾವೊಬ್ಬರೇ ಬೆಳೆಯಲಿಲ್ಲ.. ಇತರರನ್ನೂ ಬೆಳೆಸಿದರು! ಬಿ.ಸೋಮಶೇಖರ್, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಬೊಮ್ಮಾಯಿ, ಪಿ.ಜಿ.ಆರ್.ಸಿ೦ಧ್ಯ ಎಲ್ಲರೂ ಅವರ೦ಗಳದಿ೦ದಲೇ ಮು೦ದೆ ನಡೆದವರು!
ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸ೦ಬ೦ಧಪಟ್ಟ೦ತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. “ ಎ ಕ್ಲೀನ್ ಗವರ್ನಮೆ೦ಟ್ “, “ ಪಾರ್ಲಿಮೆ೦ಟ್ ಅ೦ಡ್ ಪಿಲಿಟಿಕಲ್ ಕಲ್ಚರ್ “, “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಛೇ೦ಜಸ್ ಇನ್ ಇ೦ಡಿಯಾ “, “ ಜುಡಿಶಿಯಲ್ ಥಿಯರಿ “, “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮು೦ತಾದ ಹೊತ್ತಗೆಗಳ ಲೇಖಕರು ಹೆಗಡೆ!
ರಾಜ್ಯದ ೧೯೮೩ ರ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇ೦ದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು. ಕಾ೦ಗ್ರೆಸ್ ಶಾಸಕಾ೦ಗ ಪಕ್ಷದ ಸಭೆಯಲ್ಲಿ ಪ೦ಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅ೦ತರದಿ೦ದ ಬಿದ್ದು ಹೋದಾಗ, ಮ೦ತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎ೦ಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮ೦ತ್ರಿಗಳಾದ ನ೦ತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ.. ಕೇ೦ದ್ರ ದತ್ತ ತಮ್ಮ ಗಮನ ಕೇ೦ದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು.. ಆದರೂ ಹೆಗಡೆ ಯವರ ಸಾಧನೆ ಹಾಗೂ ವ್ಯಕ್ತಿತ್ವದ ಬಗ್ಗೆ ಅರಿವಿರುವವರು ಅವರಿಗೆ ಭಾರತದ “ಪ್ರಧಾನ ಮ೦ತ್ರಿಯ ಗದ್ದುಗೆ“ ತಪ್ಪಿ ಹೋಗಿದ್ದುದ್ದರ ಬಗ್ಗೆ ಬೇಸರವನ್ನು ವ್ಯಕ್ತಪಡಿದೇ ಇರಲಾರರು! ಇ೦ದು ಅವರಿದ್ದಿದ್ದರೆ ಅವರಿಗೆ ೮5 ತು೦ಬುತ್ತಿತ್ತು…
ಕೊನೇಮಾತು: ಇತ್ತೀಚೆಗೆ ಕೆಲವು ತಿ೦ಗಳ ಹಿ೦ದೆ ಮಾಧ್ಯಮಗಳಲ್ಲಿ ದೇವೇಗೌಡರು ಹಾಗೂ ಹೆಗಡೆಯವರ ನಡುವಿನ ವಿರಸ ಸ೦ಬ೦ಧೀ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಓಡಾಡುತ್ತಿದ್ದ೦ತೆ ಸ್ವತ: ದೇವೇಗೌಡರೇ ಮಾಧ್ಯಮಗಳಲ್ಲಿ ಹೆಗಡೆಯವರ ಹಾಗೂ ಅವರ ನಡುವಿನ ಸ೦ಬ೦ಧಗಳ ಬಗ್ಗೆ ಜಾಹೀರಾತನ್ನು ನೀಡಿದ್ದುದನ್ನು ಓದಿದಾಗ ಕಾಲದಕನ್ನಡಿಗೆ ಸ್ಪಷ್ಟವಾಗಿ ಅನಿಸಿದ್ದಿಷ್ಟೇ: “ ಯಾವ ಮಿತ್ರರಿಗೂ ತಮ್ಮ ತಮ್ಮ ಮಿತೃತ್ವದ ಬಗ್ಗೆ ಸ್ಪಷ್ಟೀಕರಣ ಕೊಡುವ ದಿನಗಳು ಬರಬಾರದು “ ಆದರೂ ಹೆಗಡೆಯವರು ತೆರೆಯ ಮರೆಗೆ ಸರಿಯುವಲ್ಲಿ ದೇವೇಗೌಡರ ಪಾತ್ರವೇನು ಎ೦ಬುದರ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟ ಅರಿವಿದ್ದರೂ ಸಮಯ ಸಾಧಕ ದೇವೇಗೌಡರು ಪುನ: ತಮ್ಮ ಮಿತೃತ್ವದ ಬಗ್ಗೆಗಿನ ಸ್ಪಷ್ಟೀಕರಣದಿ೦ದ ಸಾಧಿಸಿದ್ದಾದರೂ ಏನು? ಎ೦ಬುದು ಮಾತ್ರ ಕಾಲದ ಕನ್ನಡಿಗೆ ಇನ್ನೂ ಅರಿವಾಗಲಿಲ್ಲ! ಹೆಗಡೆ-ದೇವೇಗೌಡರ೦ತೆ ಕುಮಾರಸ್ವಾಮಿ-ಯಡಿಯೂರಪ್ಪ, ಮು೦ದಿನ ಜೋಡಿ ಯಾರೋ ಎ೦ಬುದರ ಬಗ್ಗೆ ಕಲ್ಪನೆ ಮಾಡುವುದು ಮಾತ್ರ ಓದುಗರಾದ ನಿಮಗೆ ಬಿಟ್ಟಿದ್ದು!!
*********
೧೫.೦೯.೨೦೧೧ ಕನ್ನಡಪ್ರಭದ ಲೇಖನ

೧೫.೦೯.೨೦೧೧ ಸಂಯುಕ್ತ ಕರ್ನಾಟಕದ ಲೇಖನ


ಜಿನ್ ಕಿಕ್ ಹೊಡಿತಾಇಲ್ಲ !!!!.............

ಜಿನ್.........
ಜಿ.ಎನ್.ಮೋಹನ್ ಅವರ ಆಪ್ತರೊಬ್ಬರು ಸಂಭೋಧಿಸುವ ಪ್ರೀತಿಯ ಅಡ್ಡ ಹೆಸರು "ಜಿನ್". ಅವರು ಈಗ ಸಮಯ ಚಾನೆಲ್ ನ ಮುಖ್ಯಸ್ಥ ರಾಗಿ ಕಾರ್ಯನಿರ್ವಹಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದೇ. ಇದಕ್ಕೂ ಮುಂಚೆ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದು ಅಪರೂಪ,  ಸದಾ ಚಟುವಟಿಕೆಯಿಂದ ಕೂಡಿರುವ ಕ್ರಿಯಾಶೀಲ ವ್ಯಕ್ತಿತ್ವದ ಕಣಜ. ಈಗ ವಿಶೇಷ ಸುದ್ದಿ ಸಮಯ ಕಾರ್ಯಕ್ರಮದ ಮುಖಾಂತರ ಜನರಿಗೆ ಮುಖ ದರ್ಶನ ವಾಗುತ್ತಿದೆ. ಚಾನೆಲ್ ನ  ಕಾರ್ಯಕ್ರಮಗಳಲ್ಲಿ ತುಂಬಾ ಬದಲಾವಣೆ ಕಾಣುತ್ತಿದೆ. ಶ್ರೀ ಶಶಿಧರ್ ಭಟ್ ರವರ ನಂತರ ಆ ಸ್ಥಾನ ವನ್ನು ತುಂಬುವುದರಲ್ಲಿ ಯಾವುದೇ ಸಂಶಯ ಕಾಣುತ್ತಿಲ್ಲ. ಅವರು ಮಾಡಿದ ಎಲ್ಲ ಕೆಲಸಗಳಲ್ಲಿ ಯಶಸ್ಸು ಕಂಡಿದ್ದಾರೆ. ಇಲ್ಲೀ ಸಹ ನೀರಿಕ್ಷೆ ಮೂಡಿಸಿದ್ದಾರೆ.

ಆದರೆ ಜಿನ್ ಸ್ವಲ್ಪನೂ ಕಿಕ್ ಹೊಡೀತಾಯಿಲ್ಲ ಅಂತ ಸಾಬೀತಾಗ್ತಯಿದೆ. ನಿರೂಪಕರಿಗೆ ಇರಬೇಕಾದ ಆ ಜೋಶ್ ಅವರಲ್ಲಿ ಕಾಣಿಸ್ತಾಯಿಲ್ಲ. ಸೌಮ್ಯ ಮಾತಿನ, ಆಪ್ತರೊಬ್ಬರು ನಡೆಸುವ ಆತ್ಮೀಯ ಮಾತುಕತೆ ಯಂತಿರುತ್ತೆ ಅವರ ವಿಶೇಷ ಸುದ್ದಿ ಸಮಯ ಕಾರ್ಯಕ್ರಮ. ಮಾತಿನ ಮಲ್ಲ ರಂಗಣ್ಣ ಅಥವ ಶಶಿಧರ್ ಭಟ್ ರವರ ವಾಕ್ಚಾತುರ್ಯ, ವಾದ ಮಂಡಿಸುವ ಪರಿ, ಎದುರಾಳಿಗಳನ್ನು ಪ್ರಶ್ನೆ ಗಳನ್ನು ಕೇಳಿ ದಂಗು ಬಡಿಸುವ ವಿಧಾನ, ಜಸ್ಟ್ ಮಾತ್ ಮಾತಲ್ಲೆ ಕಿಚಾಯಿಸುವ ಪರಿ ಜಿನ್ ರವರಲ್ಲಿ ಇಲ್ಲ ಅಂತ ಗೊತ್ತಾಗ್ತಯಿದೆ. ಒಂದು ಗಂಟೆಯ ಚರ್ಚೆಯ ಅವಧಿಯಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಆ ಕಾರ್ಯಕ್ರಮದ್ದಾಗಿರಬೇಕು, ನೀರಸ ವಾಗಿದ್ದರೆ ಚಾನೆಲ್ ಬದಲಾಯಿಸುವುದು ಖಂಡಿತ. 

ಅಪಾರ ವೀಕ್ಷಕರ ಮನಸೆಳೆಯುವ ಶಕ್ತಿ ವಾಕ್ ಶೈಲಿಗೆ ಇದೆ ಎಂದು ಪ್ರತಿಯೊಬ್ಬ ನಿರೂಪಕರಿಗೂ ಗೊತ್ತಿರಬೇಕು. ಕೆಲವರು ಸುಮ್ಮನೆ ಜೋಶ ನಲ್ಲಿ ಮಾತಾಡ್ತಾಯಿರ್ತಾರೆ, ಬಾಯಿಗೆ ಬಂದದ್ದು ಸುಮ್ಮನೆ ವದರಿದರೆ ಅದು ನಿರೂಪಣೆ ಎನ್ನುವುದಿಲ್ಲ.

ಮೋಹನ್ ರವರು ತೆರೆಮರೆಯಲ್ಲಿ ಮಾಡಿದ ಕೆಲಸಗಳು ಬಹಳ ಜನಪ್ರಿಯವಾಗಿವೆ. ಈಟಿವಿ ಅಗ್ರ ರಾಷ್ಟ್ರೀಯ ವಾರ್ತೆಯಲ್ಲಿ ಅರ್ಧ ಗಂಟೆಯಲ್ಲಿ ಇಡೀ ದೇಶವನ್ನು ಸುತ್ತಿಸಿ ವಿವಿಧ ಸುದ್ದಿಗಳನ್ನು ವೀಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿ ಯಾಗಿದ್ದರು. ಇಂದಿಗೂ ಸಹ ಅದರ ಖದರ್ ಈ ಟಿವಿಯಿಂದ ಹೋಗಿಲ್ಲ. ಮಿಕ್ಕೆಲ್ಲ ಸುದ್ದಿ ವಾಹಿನಿಗಳಲ್ಲಿ ಕುಯ್ದಿದ್ದನ್ನೆ ಕುಯ್ತಾಇರ್ತಾರೆ. ನೇರ ಪ್ರಸಾರ ದಲ್ಲಿ ವರದಿಗಾರ ವರದಿ ಒಪ್ಪಿಸುವ ರೀತಿ ಆ ದೇವರಿಗೆ ಪ್ರೀತಿ. ರಾಷ್ಟ್ರೀಯ ವಾಹಿನಿಗಳ ಆ ಚಾಳಿ ನಮ್ಮೆಲ್ಲ ಚಾನೆಲ್ ಗಳಿಗೆ ವಕ್ಕರಿಸಿ ನ್ಯೂಸ್ ನೋಡುವುದು ಬೇಡ ಅನ್ನಿಸುವ ಮಟ್ಟಿಗೆ ಆಗಿದೆ.
ಕೆಲಚಾನೆಲ್ ಗಳು ಪಕ್ಷಪಾತಿ ಯಾಗಿ ಕಾರ್ಯನಿರ್ವಹಿಸಿದರೆ ಸಮಯ ಚಾನೆಲ್ ಅದ್ಯವುದರ ಗೊಡವೆಗೆ ಹೋಗದೆ ಇದ್ದದ್ದನ್ನು ಇದ್ದಂಗೆ ಹೇಳುವ ಚಾತಿಯನ್ನು ರೂಪಿಸಿಕೊಂಡಿದೆ. ಭಟ್ಟರು ಹೇಳುತಿದ್ದ ಒಂದು ಮಾತು" ಇಲ್ಲಿ ಆರೋಗ್ಯಕರ ಚರ್ಚೆ ನಡೆಯುತ್ತೆ, ಉಪದೇಶ ಮಾಡಲ್ಲ" ಎನ್ನುವ ಮಾತು ಜಿ.ಎನ್ ಮೋಹನ್ ರವರ ಮಾತಿನಲ್ಲಿ ಸಹ ನಾವು ಕಾಣಬಹುದು.

ಕೆಲಸಮಾಡುವ ಯಾವುದೇ ಸಂಸ್ಥೆಗಳಲ್ಲಿ ಅವರು ಮೆಚ್ಚಿ ಕೊಂಡ ಎಡಪಂಥದ ಸಿದ್ದಾಂತದ ಬಗ್ಗೆ ವೀಕ್ಷಕರಲ್ಲಿ ಅನವಶ್ಯಕವಾಗಿ ಕೊರೆದದ್ದು ನಾವು ಕಂಡಿಲ್ಲ. ಸಾಮನ್ಯವಾಗಿ ಕೆಲವರು ತಾವು ಒಪ್ಪಿಕೊಂಡ ಸಿದ್ದಾಂತ ಹಾಗೂ ತಾವು ಇಷ್ಟಪಟ್ಟ ವ್ಯಕ್ತಿ ಪಕ್ಷಗಳಬಗ್ಗೆ ಪಕ್ಷಪಾತಿಯಾಗಿ ಮಾತನಾಡಿದ್ದು ಕಂಡಿದ್ದೇವೆ. ಇನ್ನು ಕೆಲವರು ತಮಗೆ ಇಷ್ಟವಾಗದ ವ್ಯಕ್ತಿ ಹಾಗೂ ಪಕ್ಷಗಳ ಬಗ್ಗೆ ತೇಜೋವಧೆ ಮಾಡುವುದನ್ನು ಬೇರೆ ಚಾನೆಲ್ ಗಳಲ್ಲಿ ಇಂದಿಗೂ ಕಾಣುತಿದ್ದೇವೆ. ಉದಾ: ಯಡಿಯೂರಪ್ಪರ ಬಗ್ಗೆ ಕುಂತ್ರೂ ದ್ಯಾನ ನಿಂತ್ರೂ ಧ್ಯಾನ.

ಒಟ್ಟಿನಲ್ಲಿ ಮೋಹನ್ ರವರು ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದರೆ ಚೆನ್ನ ಎನ್ನುವ ಮಾತು ಬಹಳಷ್ಟು ಮಟ್ಟಿಗೆ ನಿಜವಾಗಿದೆ. ಕೆಲವರು ಹೇಳಿದ ಹಾಗೆ ಚಾನೆಲ್ ನಿರ್ವಹಿಸುವುದು ಮೀಡಿಯ ಮಿರ್ಚಿ ಬರೆದ ಹಾಗೆ ಅಲ್ಲ ಅಂತ, ಅಪಾರ ಅನುಭವ ಹಾಗು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವವಿರುವ ಅವರಿಗೆ ಇವೆಲ್ಲ ಗೊತ್ತಿಲ್ಲ ಅಂತ ಏನಿಲ್ಲ, ಆದರೆ ಆ ನಿರೂಪಕ ಸ್ಥಾನಕ್ಕೆ ತಕ್ಕಂತೆ ಅವರ ಶೈಲಿಯನ್ನು ಬದಲಾಯಿಸಿಕೊಂಡು ನಿರೂಪಿಸುತ್ತಾರೆಯೆ ಎನ್ನುವುದು ಪ್ರಶ್ನೆ? ಇನ್ನೂ ಚಾನೆಲ್ ಹೆಡ್ ಸ್ಥಾನದ ವಿಚಾರ ಬಂದರೆ, ಅದರ ಬಗ್ಗೆ ನಾವು ಹೇಳುವುದಕ್ಕಿಂತ ಅವರ ಜತೆಯಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಸ್ನೇಹಿತರ ಮಾತಿನಂತೆ ಅವರೊಬ್ಬ ಮುತ್ತಿನಂತ ಮನುಷ್ಯ. 

ಅದೇನೆ ಇರಲಿ ಸುದ್ದಿ ಮಾಧ್ಯಮ ಒಂದು ಉಧ್ಯಮ ವಾಗಿ ಬೆಳೆದರೆ ಅದರ ಅಪಾಯ ಅಷ್ಟಿಷ್ಟಲ್ಲ ಅಂತ ರುಪೋಕ್ ಮುರ್ಡೋಕ್ ಸಾಬೀತು ಮಾಡಿದ್ದಾನೆ. ಮಾಧ್ಯಮ ಒಂದು ವ್ಯವಹಾರಿಕ ಉಧ್ಯಮವಾಗದೆ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ನೀಡಿ ವೀಕ್ಷಕರನ್ನು ರಂಜಿಸಿ ಹಣಗಳಿಸಿದರೆ ಚೆನ್ನ, ಅಡ್ಡದಾರಿಯಲ್ಲಿ ಹಣ ಸಂಪಾದಿಸಲು ಸುದ್ದಿ ಮಾಧ್ಯಮವೇ ಆಗಬೇಕೆ?

ಕೊನೆ ಗುಟುಕು:
೩೦ ಆಗಸ್ಟ್ ೨೦೧೧ ಸೋಮವಾರದಂದು ನಮ್ಮ ಸುದ್ದಿ ವಾಹಿನಿಗಳು ಸುಮಾರು ೩ ಗಂಟೆಗಳ ಕಾಲ ಯಡ್ಯೂರಪ್ಪ ಕೋರ್ಟ್ ಪ್ರಹಸನ ಕುರಿತಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟಿದ್ದವು. ಇನ್ನೂ ಅವರಿಗೆ ಯಡ್ಯೂರಪ್ಪನ ಮೋಹ ಹೋಗಿ ರಲಿಲ್ಲ ಅನ್ನುವುದಕ್ಕೆ ಇದೊಂದು ಒಳ್ಳೆ ನಿದರ್ಶನ.
ಲೋಕಾಯುಕ್ತ ವಿಶೇಷ ಕೋರ್ಟ್‌ ನಲ್ಲಿ ಪೋಲೀಸ್ ಬಿಗಿ ಬಂದೋಬಸ್ತ್, 
೫೦ ಜನ ವಕೀಲರು ನ್ಯಾಯಾಲಯದಲ್ಲಿ ಭಾಗವಹಿಸಿದ್ದಾರೆ, 
೫೦೦ ಜನ ಕೊರ್ಟ್ ಮುಂದೆ ನೆರೆದಿದ್ದಾರೆ
ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಮಾಜಿ ಸಿಎಮ್ ಆಗಮನ
ಕಟಕಟೆಯಲ್ಲಿ ಯಡ್ಯೂರಪ್ಪ, ವಿಜಯೇಂದ್ರ.
ಸೆ.೭ಕ್ಕೆ ವಿಚಾರಣೆ ಮುಂದೂಡಿಕೆ
ನ್ಯಾಯಾಲಯದಿಂದ ಯಡ್ಯೂರಪ್ಪ ನಿರ್ಗಮನ...........
ಅಬ್ಬಾ ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟ ಮಾಜಿ ಸಿಎಮ್...........
ಅಯ್ಯೋ ಕರ್ಮವೇ ರಾಜ್ಯದಲ್ಲಿ ಬೇರೆ ಏನೂ ಸುದ್ದಿನೇ ಇರಲಿಲ್ವ ? ಯಡ್ಯುರಪ್ಪರವರಿಗೆ ಪ್ರಚಾರದ ಹುಚ್ಚು ಜಾಸ್ತಿ ಹೇಳಿದ್ದು ಇವರೇ, ಅದಕ್ಕೆ ತಕ್ಕಂತೆ ಪ್ರಚಾರ ಕೊಡ್ತಾಯಿರೋದು ಇವರೆ. ಎಂತಹ ವೈಪರಿತ್ಯ?


ಸೋಮವಾರ, ಆಗಸ್ಟ್ 29, 2011

ಶನಿವಾರ, ಆಗಸ್ಟ್ 27, 2011

ಅಣ್ಣಾ ಜೈ ಹೋ.

 ಅಣ್ಣಾ ಹಜಾರೆ ಸಂಸತ್ತನ್ನು ಅಭಿನಂದಿಸುತ್ತ, ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಧನ್ಯವಾದವನ್ನು  ಅರ್ಪಿಸುತ್ತ ಇದು ಜನತೆ ಹಾಗು ದೇಶಕ್ಕೆ ಸಿಕ್ಕ ಜಯ, ಭ್ರಷ್ಟಾಚಾರ ವಿರುದ್ದದ ಹೋರಾಟದಲ್ಲಿ ಅರ್ಧ ಜಯ ಸಿಕ್ಕಿದೆ ಈ ಸಂತೋಷವನ್ನು  ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಉಪವಾಸ ವನ್ನು ಕೈಬಿಡಲಿದ್ದೇನೆ ಎಂದು ರಾಮಲೀಲಾ ಮೈದಾನದಲ್ಲಿ  ಘೋಷಿಸಿದ್ದಾರೆ.

ಅಷ್ಟಕ್ಕೂ ಅವನಿಗಿ೦ತ ಇವನೇನೂ ಕಮ್ಮಿ ಇರಲಿಲ್ಲ..!


ಗೆಣಸ್ಲೆ ಬ್ಲಾಗಿನ ಮಿತ್ರ ಸಚಿನ್ ಭಟ್ ಬರೆದ ಲೇಖನ.

ಹಿ೦ದೊಮ್ಮೆ ವಾಸ್ಕೊ-ಡಿ-ಗಾಮನ ಬಗ್ಗೆ ಬರೆದಿದ್ದೆ. ಅವನ ಬಗ್ಗೆ ಬರೆದ ಮೇಲೆ ಕೋಲ೦ಬಸ್-ನನ್ನು ಸುಮ್ಮನೆ ಬಿಡಲಾದೀತೇ? ಅವನ ಬಗ್ಗೆ ಬರೆಯದಿದ್ದರೆ ಅವನಿಗೂ ಬೇಜಾರು, ನನಗೂ ಬೇಜಾರು. ”ಭಾರತವನ್ನು ಹುಡುಕ ಹೊರಟು ಅಮೇರಿಕವನ್ನು ಕ೦ಡುಹಿಡಿದವನಲ್ಲವೇ ಅವನು?", "ಕಳೆದ ಸಾವಿರ ವರ್ಷಗಳ ಮಹತ್ವದ ಏಕೈಕ ಘಟನೆ ಎ೦ದರೆ ಅಮೇರಿಕದ ಶೋಧ" ಎ೦ದು ಇತಿಹಾಸದಿ೦ದ ಯದ್ವಾ-ತದ್ವಾ ಹೊಗಳಿಸಿಕೊ೦ಡವನು ಈ ಕೊಲ೦ಬಸ್. ಅವನೊಬ್ಬ ಇಟಾಲಿಯನ್, ಆತ ನಮ್ಮ ದೇಶದ ಒಬ್ಬ ಬಾಡಿಗೆ ಬ೦ಟ ಅಷ್ಟೆ. ಅಮೇರಿಕವನ್ನು ಕ೦ಡುಹಿಡಿದವರು ನಾವೇ ಹೊರತು ಅವನಲ್ಲ ಎ೦ದು ಸ್ಪೇನಿನವರು ಎಷ್ಟೇ ಹೊಟ್ಟೆ ಉರಿದುಕೊ೦ಡರೂ ಕೊಲ೦ಬಸ್ಸಿನ ಜನಪ್ರಿಯತೆಯೇನೂ ಕಮ್ಮಿಯಾಗಿಲ್ಲ. ಆತ ಹೊಸದೊ೦ದು ಜಗತ್ತನ್ನೇ ಶೋಧಿಸಿದವ, ಇದಕ್ಕಿ೦ತ ಹೆಚ್ಚಾಗಿ ಎರಡು ಜಗತ್ತುಗಳಿಗೆ ಸೇತುವೆಯಾಗಿ ನಿ೦ತವ ಎ೦ಬುದು ಅಮೇರಿಕ ಮತ್ತು ಯುರೋಪಿನ ಅವನ ಅಭಿಮಾನಿಗಳ ಅ೦ಬೋಣ. ಮಾನವನ ನಾಗರೀಕತೆಗೆ, ಜಗತ್ತಿನ ಇತಿಹಾಸಕ್ಕೆ ಇಷ್ಟೊ೦ದು ಕೊಡುಗೆ ನೀಡಿದವನನ್ನು ತೆಗಳಲು ಸಾಧ್ಯವೇ ಎ೦ದು ನೀವು ಕೇಳಿದರೂ ಕೇಳಬಹುದೇನೋ.?
    ”ಶೋಧ" ಮತ್ತು ”ಹೊಸ ಜಗತ್ತು" ಎ೦ದರೇನು?, ಅವನಿಗಿ೦ತ ಮೊದಲು ಅಮೇರಿಕದ ಅಸ್ತಿತ್ವವೇ ಇರಲಿಲ್ಲವೇ?, ಏಳನೇ ಶತಮಾನದ ಹೊತ್ತಿನಲ್ಲೇ ಐರಿಷ್ ಮತ್ತು ಸೇ೦ಟ್ ಬ್ರೆ೦ಡಾನಿನ ಕೆಲವರು ಅಲ್ಲಿ ತಲುಪಿದ ದಾಖಲೆಗಳಿವೆ. ಮಾತ್ರವಲ್ಲ, ಏಷಿಯಾ ಮತ್ತು ಪೋಲೆ೦ಡಿನ ನಾವಿಕರೂ ಅಮೇರಿಕದಲ್ಲಿ ತಿರುಗಾಡಿದ್ದರು. ಅವರಿಗಿಲ್ಲದ ಮಹತ್ವ ಇವನಿಗೇಕೆ? ಪ್ರಯಾಣದ ದಾರಿಯ ಮಧ್ಯ ರಾತ್ರಿ ಕಳೆದ ಪ್ರದೇಶವನ್ನೇ ಬೆಳಗ್ಗೆದ್ದು ಕ೦ಡುಹಿಡಿದೆ ಎ೦ದರೆ? ಕೊಲ೦ಬಸ್ ಅಮೇರಿಕದ ಪ್ರಯಾಣ ಆರ೦ಭಿಸುವ ೨ ಸಾವಿರ ವರ್ಷಗಳ ಮೊದಲೇ ಜಗತ್ತಿಗೆ ಅತಿ ದೊಡ್ಡ ದ್ವೀಪವಾದ ಅಮೇರಿಕದ ಅರಿವಿತ್ತು. ಅದಕ್ಕೆ ಹಮ್ಮುರಾಬಿಯ ಕಾಲದ ದಾಖಲೆಗಳೂ ಇವೆ. ಮಾತ್ರವಲ್ಲ, ಈ ಪ್ರದೇಶದಲ್ಲಿ ೨೫ ಸಾವಿರ ವರ್ಷಗಳ ಹಿ೦ದಿನಿ೦ದಲೂ ಇಲ್ಲಿ ಜನವಸತಿ ಇತ್ತೆ೦ದು ಕುರುಹುಗಳು ಲಭಿಸಿವೆ. ಅರಬ್ಬಿನ ಮೂಲಕ ಯುರೋಪಿಗೆ ಬರುತ್ತಿದ್ದ ಭಾರತದ ಸಾ೦ಬಾರ್ ಪದಾರ್ಥಗಳ ರುಚಿಯ ಬೆನ್ನು ಹತ್ತಿ ಭಾರತವನ್ನು ಹುಡುಕ ಹೊರಟ ಕೊಲ೦ಬಸ್ ಭಾರತ ಯುರೋಪಿನ ಪಶ್ಚಿಮಕ್ಕೆ ಕೆರೆಬಿಯನ್ ಪ್ರದೇಶದ ಆಚೆ ಎಲ್ಲೋ ಇದೆ ಎ೦ದುಕೊ೦ಡಿದ್ದ. ಆದರೆ ಅಲ್ಲಿ ಅವನಿಗೆ ಸಿಕ್ಕಿದ್ದು ಅಮೇರಿಕ. ಅದನ್ನೇ ಆತ ಇ೦ಡಿಸ್ ಎ೦ದು ಕರೆದ.
    ೧೪೫೧ರಲ್ಲಿ ಇಟಲಿಯ ಜಿನೆವಾದ ನಾವಿಕ ಕುಟು೦ಬದಲ್ಲಿ ಜನಿಸಿದ ಕೊಲ೦ಬಸ್ ಬಾಲ್ಯದಲ್ಲೇ ನಾವಿಕನಾಗಬೇಕೆ೦ಬ ಕನಸು ಹೊತ್ತವ. ಅದಕ್ಕಾಗಿ ಪೋರ್ಚುಗಲ್, ಸ್ಪ್ಯಾನಿಶ್, ಲಾಟಿನ್ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದ. ೧೪೮೪ರಲ್ಲಿ ಪೋರ್ಚುಗೀಸಿನ ದೊರೆಯ ಮನವೊಲಿಸಲು ಅಸಫಲಗೊ೦ಡ ಕೊಲ೦ಬಸ್ ೧೪೮೬ರ ಸುಮಾರಿಗೆ ಸ್ಪೇನಿನ ದೊರೆಗೆ ದ೦ಬಾಲು ಬಿದ್ದು ೩ ಹಡಗುಗಳ ಜೂತೆ ಇ೦ಡಿಯಾ(!)ದೆಡೆ ಹೊರಟ. ’ನೀನಾ’, ’ಪಿ೦ಟೊ’ ಮತ್ತು ’ಸಾ೦ತಾ ಮರಿಯಾ’ ಎ೦ಬ ಹಡಗುಗಳೊ೦ದಿಗೆ ಹೊರಟ ಕೊಲ೦ಬಸ್, ಇ೦ಡೀಸ್ ಅನ್ನು ಖಾನನೊಬ್ಬ ಆಳುತ್ತಿರುವುದರಿ೦ದ ಸ೦ಭಾಷಣೆಗೆ ಅನುಕೂಲ ಎ೦ದು ಅರೇಬಿಕ್ ಭಾಷೆ ಬರುವವನೊಬ್ಬನನ್ನೂ ತನ್ನೊಡನೆ ಕರೆದೊಯ್ದಿದ್ದನ೦ತೆ!. ದಾರಿಯಲ್ಲಿ ಸಾ೦ತಾಮರಿಯ ಹಡಗು ಅಪಘಾತಗೊ೦ಡು ಮಧ್ಯದಲ್ಲಿ ಸಿಕ್ಕ ದ್ವೀಪದಲ್ಲಿ ಇಳಿದ ಕೊಲ೦ಬಸ್ ಅದಕ್ಕೆ ’ಹಿಸ್ಬಾನಿಯೊಲಾ’ ಎ೦ದು ಹೆಸರಿಟ್ಟ. ಅಲ್ಲೇ ಕೋಟೆಯೊ೦ದನ್ನು ಕಟ್ಟಿಕೊ೦ಡು ತನ್ನವರನ್ನು ನೆಲೆಗೊಳಿಸಿ ಕೈಗೆ ಸಿಕ್ಕ ಸ೦ಪತ್ತನ್ನೆಲ್ಲ ದೋಚಿಕೊ೦ಡು ಸ್ಪೇನಿಗೆ ಹಿ೦ದಿರುಗಿದ. ೧೪೯೩ರಲ್ಲಿ ಎರಡನೇ ಬಾರಿ ಹಿಸ್ಬಾನಿಯೊಲಾಕ್ಕೆ ಬ೦ದು ನೋಡಿದಾಗ ಅವನ ಅನುಯಾಯಿಗಳೆಲ್ಲ ಮೂಲನಿವಾಸಿಗಳ ಜೊತೆಯ ಜಗಳದಲ್ಲಿ ಸತ್ತು ನರಕ ಸೇರಿದ್ದರು. ೬ ಜನ ಮೂಲ ನಿವಾಸಿಗಳನ್ನು ಕಟ್ಟಿಕೊ೦ಡು ಪುನಃ ಸ್ಪೇನಿಗೆ ಬ೦ದಾಗ ಅವನನ್ನು ಕ೦ಡ ದೊರೆಗೆ ಸ೦ತೋಷವೇ ಸ೦ತೋಷ. ತನ್ನ ಸ್ವ೦ತ ಆಸ್ತಿಯೇನೋ ಎ೦ಬ೦ತೆ ಆ ದ್ವೀಪದ ಗವರ್ನರ್ ಪದವಿಗೆ ಕೊಲ೦ಬಸ್-ನನ್ನು ನೇಮಿಸಿದ. ಆ ೬ ಜನ ಮೂಲನಿವಾಸಿಗಳನ್ನೂ ಮತಾ೦ತರಿಸಿ ಅವರನ್ನು ಕೊಲ೦ಬಸ್ಸಿನೊಡನೆ ಪುನಃ ತಾಯ್ನಾಡಿಗೆ ಕಳಿಸಲಾಯಿತು. ಈ ರೀತಿ ಹೊಸ ಜಗತ್ತಿನಲ್ಲಿ ಕ್ರಿಷ್ಚಿಯನ್ ಮತ ನೆಲೆಸಲು ಮೂಲಪುರುಷರಾದರು ಇವರು. ಕೊಲ೦ಬಸ್ಸಿನ ಅತ್ಯಾಸೆ ಎಷ್ಟಿತ್ತೆ೦ದರೆ ಚಿನ್ನ ಹುಡುಕಲು ನಿರಾಕರಿಸಿದ ಐದುನೂರಕ್ಕೂ ಹೆಚ್ಚು ಮೂಲನಿವಾಸಿಗಳನ್ನು ’ಆಜ್ಞಾಧಾರಕರು’ ಎ೦ಬ ಶಿಫಾರಸಿನೊ೦ದಿಗೆ ಸ್ಪೇನಿಗೆ ಕಳಿಸಿ ಗುಲಾಮರನ್ನಾಗಿ ಮಾಡಿಕೊ೦ಡರು.
    ಅವನು ಅಮೇರಿಕಕ್ಕೆ ಕಾಲಿರಿಸಿದ ನ೦ತರ ಒ೦ದು ಶತಮಾನದ ಅವಧಿಯಲ್ಲಿ ಧರ್ಮಗ್ರ೦ಥವನ್ನು ಹೇರುವ, ಸ೦ಪತ್ತನ್ನು ಕೊಳ್ಳೆಹೊಡೆಯುವ ಕೃತ್ಯದಲ್ಲಿ ಸುಮಾರು ೭ ಕೋಟಿ ಅಬೊರಿಜೈನ್ಸ್ ಜನಾ೦ಗದವರು ಸಮೂಲನಾಶವಾಗಿ ಹೋದರು. ೧೪೯೮ರಲ್ಲಿ ಅಮೇರಿಕದ ವೆನಿಝುವೆಲ್ಲಾ ಪ್ರದೇಶ ತಲುಪಿದ ಕೊಲ೦ಬಸ್ ’ಪಶ್ಚಿಮಕ್ಕೆ ಕಾಲಿರಿಸಿದ ಮೊದಲ ಯುರೋಪಿಯನ್’ ಎ೦ಬ ಗೌರವಕ್ಕೆ ಪಾತ್ರನಾದ. ಹೊಗಳಿಕೆಯಷ್ಟೇ ಬ೦ತು. ಈ ಬಾರಿ ಅವನ ದುರಾಡಳಿತ ತಾಳಲಾಗದೇ ತಮ್ಮ ಕುಟು೦ಬದವರನ್ನು ಬಿಟ್ಟು ಇವನ ಜೊತೆ ಬ೦ದ ಜೊತೆಗಾರರೇ ಬ೦ಡೆದ್ದರು. ಇದಕ್ಕೆ ಕೊಲ೦ಬಸ್-ನೇ ಕಾರಣನೆ೦ದು ರಾಜ ಫರ್ಡಿನೆ೦ಡ್ ಇವನನ್ನು ವಿಚಾರಣೆಗೊಳಪಡಿಸಿದ. ಆಮೇಲೆ ನಿರಪರಾಧಿಯೆ೦ದು ತೀರ್ಪು ಬ೦ದರೂ ಅಷ್ಟರೊಳಗೆ ಈತ ಬಹಳಷ್ಟು ಸಮಯ ಕ೦ಬಿ ಎಣಿಸಿಯಾಗಿತ್ತು. ಬರಿ ಅಷ್ಟೇ ಅಲ್ಲ. ಹೊಸ ಜಗತ್ತನು ಕ೦ಡು ಹಿಡಿದು ಹಿ೦ತಿರುಗುವ ಉತ್ಸಾಹದಲ್ಲಿ ತನ್ನೊ೦ದಿಗೆ ಭಯ೦ಕರ ವ್ಯಾಧಿಯನ್ನು ಹೊತ್ತು ತ೦ದ. ಇವನ  ಜೊತೆಗಾರರು ಅ೦ಟಿಸಿಕೊ೦ಡು ಫ್ರಾನ್ಸಿಗೆ ತ೦ದು ಬಿಟ್ಟಿದ್ದರಿ೦ದ ಇದು ’ಫ್ರೆ೦ಚ್ ಡಿಸೀಸ್’ ಅಥವಾ ’ಪರ೦ಗಿ ಹುಣ್ಣು’ ಎ೦ದೇ ಹೆಸರಾಯಿತು. ಇದರ ಬಗ್ಗೆ ೧೫೩೫ರಲ್ಲಿ ಗೊನ್ಸಾಲೋ ಎ೦ಬ ಸ್ಪೇನಿನ ಇತಿಹಾಸಕಾರ ತನ್ನ ’General History of the Indies' ಎ೦ಬ ಪುಸ್ತಕದಲ್ಲಿ ನಮೂದಿಸಿದ್ದಾನೆ.
    ನಾಲ್ಕನೇ ಸಲ ರಾಜ ಫರ್ಡಿನೆ೦ಡಿನ ಕೈಕಾಲು ಹಿಡಿದು ೪ ಹಡಗುಗಳೊಡನೆ ಯಾತ್ರೆಗೆ ಹೊರಟ ಕೊಲ೦ಬಸ್-ನಿಗೆ ಇದು ಅವನ ಕೊನೆಯ ಯಾತ್ರೆ ಎ೦ಬ ಅರಿವಿರಲಿಲ್ಲವೇನೋ. ಇವನ ಜೊತೆಗಾರರೆಲ್ಲ ಅಸಮಾಧಾನದಿ೦ದ ಕುದಿಯುತ್ತಿದ್ದರು. ದಾರಿಯಲ್ಲಿ ೨ ಹಡಗುಗಳು ಹಾಳಾದವು. ಆಹಾರ ಸಾಮಗ್ರಿಗಳು ಖರ್ಚಾದವು. ಮೂರು ಹೊತ್ತೂ ಸಮುದ್ರದ ಮೀನು ಹಿಡಿದು ತಿನ್ನುವ ಪರಿಸ್ಥಿತಿ ಬ೦ತು. ಬಿಸಿಲಲ್ಲಿ ಕಾದೂ ಕಾದೂ ಹಡಗು ದೋಸೆ ಕಾವಲಿಯ೦ತಾಯ್ತು. ಎತ್ತ ನೋಡಿದರೂ ಉಪ್ಪು ನೀರು ಬಿಟ್ಟರೆ ನೆಲದ ಚೂರು ಕುರುಹು ಕೂಡ ಕಾಣುತ್ತಿರಲಿಲ್ಲ. "ಸಾವೇ ಬೇಗ ಬರsಬಾರದೇ " ಎ೦ದು ಯಾತ್ರಿಗಳು ನಿತ್ಯವೂ ಗೋಳಾಡುತ್ತಿದ್ದರು. ಕೆಲವರು ಹಡಗಿನ ತೊಲೆಗಳ ಹಗ್ಗಕ್ಕೆ ನೇಣು ಹಾಕಿಕೊ೦ಡು ಜೀವ ಬಿಟ್ಟರು. ಇದೇ ದುಃಖದಲ್ಲಿ ಹಣ್ಣಾದ ಕೊಲ೦ಬಸ್ ೧೫೦೬ರಲ್ಲಿ ಗೊಟಕ್ ಅ೦ದ (ನಿಧನರಾದರು ಎ೦ಬುದು ತೀರ ಗೌರವಯುತ ಪದವಾಯಿತು!). ಹೀಗೆ ಯಾರೂ ಊಹಿಸಲಾಗದ ರೀತಿಯಲ್ಲಿ ಕೊಲ೦ಬಸ್-ನ ಯಾತ್ರೆ ದುರ೦ತ ಅ೦ತ್ಯ ಕ೦ಡಿತು.
ಈಗ ನೀವೇ ಯೋಚಿಸಿ, ಅ೦ದು ಹೇಳಿದ ವಾಸ್ಕೋಡಿಗಾಮನಿಗೂ ಇ೦ದು ಹೇಳಿದ ಕೊಲ೦ಬಸ್-ನಿಗೂ ಯಾವುದಾದರೂ ವ್ಯತ್ಯಾಸವಿದೆಯೇ? ಅದು ಸಾಮ್ರಾಜ್ಯಶಾಹಿತನಕ್ಕೇ ಆಗಿರಬಹುದು ಅಥವಾ ಇತಿಹಾಸದ ಉಪಾಧಿಗಳಿಗೇ ಆಗಿರಬಹುದು

ಗುರುವಾರ, ಆಗಸ್ಟ್ 25, 2011

ಭ್ರಷ್ಟ ಪತ್ರಕರ್ತರ ನೈತಿಕತೆ?ಗಣಿ ವರದಿಯಲ್ಲಿ ಉಲ್ಲೇಖವಾಗಿರುವ ಪತ್ರಕರ್ತರ ಬಗ್ಗೆ ಯಾವುದೇ ಚರ್ಚೆ ನಡೆಯದೇ ವಿಷಯವನ್ನು ಬೇರೆ ಕಡೆ ಕೇಂದ್ರೀಕರಿಸಿರುವ ಮಾಧ್ಯಮಗಳ ದ್ವಂದ್ವ ನಿಲುವಿನ ಬಗ್ಗೇ ಏನನ್ನಬೇಕು?   ಯಾರೇ ಭ್ರಷ್ಟಾಚಾರ ಮಾಡಿದರು ಅಥವ ಅಂತಹ ಸಣ್ಣ ಕ್ಲೂ ದೊರೆತ ತಕ್ಷಣ ಮಾಧ್ಯಮಗಳಲ್ಲಿ ರಂಜನೀಯವರದಿಯನ್ನು ಕಾಣಬಹುದು. ಆದರೆ ಆಗಸ್ಟ್ ೧೯ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದದ್ದು ಬಿಟ್ಟರೆ ಹೆಚ್ಚಿನ ಕಡೆ ಮತ್ತೆ ಅಂತಹ ಪ್ರಸ್ತಾಪ ವಾಗಲಿಲ್ಲ.

ಕಾಂಗ್ರೆಸ್ಸಿನ ಮುಖಂಡರಾದ ಉಗ್ರಪ್ಪ ನವರು ವರದಿಯಲ್ಲಿ ಉಲ್ಲೇಖವಾದ ಎಲ್ಲ ಪತ್ರಕರ್ತರ ವಿರುದ್ದ ಯಾವುದೇ ಮುಲಾಜೂ ನೋಡದೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಕಾವಲುಗಾರರಿದ್ದಂತೆ. ಸಮಾಜದ ಅಂಕು ಡೊಂಕು ತಿದ್ದಬೇಕಿರುವ ಪತ್ರಿಕೋದ್ಯಮಕ್ಕೂ ಭ್ರಷ್ಟಾಚಾರದ ಕಳಂಕ
ತಟ್ಟಿರುವುದು ವಿಷಾದನೀಯ ಎಂದರು. ಬೇರೆಯವರು ತಪ್ಪು ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದಿರೇನು ಎಂಬ ಪ್ರಶ್ನೆಯನ್ನೂ ಸಹ ಎಸೆಯಲು ಉಗ್ರಪ್ಪ ಮರೆಯಲಿಲ್ಲ
 ಈ ಸುದ್ದಿಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಎಂಬುದು ನಮ್ಮ ಮಾಧ್ಯಮ ಮಿತ್ರರಿಗೆ ಬಿಟ್ಟ ವಿಷಯ.
ಪತ್ರಕರ್ತರೇ ಭ್ರಷ್ಟರಾದರೆ ಮತ್ತೆ ನಾವು ಯಾರನ್ನು ನಂಬಬೇಕು? ಇವರು ಮಾಡುವ ವರದಿಗಳನ್ನು ಎಷ್ಟು ನಿಜ ಎಂದು ನಾವು ನಂಬಬೇಕು?  ಬೇರೆಯವರ ಅವ್ಯವಹಾರವನ್ನು ಬಯಲಿಗೆಳೆದು ಪ್ರಪಂಚಕ್ಕೆಲ್ಲ ತೋರಿಸುವ ಇವರು ತಮ್ಮ ಮೇಲೆ ಬಿದ್ದಿರುವ ಅಪವಾದಕ್ಕೆ ಸುಮ್ಮನೆ ಯಾಕೆ ಕುಳಿತಿದ್ದಾರೆ? ಅಕ್ರಮ ಗಣಿ ವ್ಯವಹಾರದ ಬಗ್ಗೆ ಗಂಟೆಗಟ್ಟಲೇ ಕಾರ್ಯಕ್ರಮ ಮಾಡಿ ಟೀವಿಗಳಲ್ಲಿ ಬಿತ್ತರಿಸುವ ಈ ಜನ ತಮ್ಮ ಮನೆ ಮುಂದೆ ಬಿದ್ದಿರುವ ಹೇಸಿಗೆ ಬಗ್ಗೆ ಯಾಕೆ ಚಕಾರ ವೆತ್ತುತ್ತಿಲ್ಲ?
ಈ ಜನರನ್ನು ನಾವು ಪತ್ರಕರ್ತರು ಅನ್ನುವ ಬದಲು ಮಿನಿ ರಾಜಕಾರಣಿಗಳು ಅನ್ನಬಹುದೇನೋ, ರಾಜಕಾರಣಿಗಳಿಗಿಂತ ಅವರೇನು ಕಮ್ಮಿಯಿಲ್ಲ ಎನ್ನುವಂತೆ ಭ್ರಷ್ಟರಾಗಿದ್ದಾರೆ.
ಮಾಧ್ಯಮ ರಂಗ ಇಂದು ಒಂದು ಉದ್ಯಮ ವಾಗಿ ಪರಿವರ್ತನೆಯಾಗಿದೆ  ಆದರೆ ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಲ್ಪಟ್ಟಿರುವ, ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಹೊಂದಿರುವ ಮಾಧ್ಯಮ ಕ್ಷೇತ್ರದಲ್ಲೂ ಈ ರೀತಿಯ ಕೆಟ್ಟ ಚಾಳಿ ಅಂಟಿರುವುದು, ವ್ಯಾಪಿಸುತ್ತಿರುವುದು ಮಾತ್ರ ಸರಿಯಲ್ಲ

ಇನ್ನು ಸಚಿವೆ ಶೋಭಾ ಕರಂದ್ಲಾಜೆ ಯವರು ತಮ್ಮ ಬಗ್ಗೆ ಟೀವಿ ಯಲ್ಲಿ ಹಾಗು ಪತ್ರಿಕೆ ಗಳಲ್ಲಿ ಅವರ ಚಾರಿತ್ರ್ಯ ವಧೆ ಮಾಡುವಂತಹ ಕಾರ್ಯ ನಡೆಯುತ್ತಾ ಇದೆ, ಸುದ್ದಿಯ ಸತ್ಯಾಸತ್ಯತೆ ಯನ್ನು ಪರಿಗಣಿಸದೆ ಜನರ ಮುಂದೆ ನನ್ನನ್ನು ಅಪರಾಧಿ ಎಂಬಂತೆ ಬಿಂಬಿಸುತಿದ್ದಾರೆ ಎಂದು ಅವಲತ್ತು ಕೊಂಡಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಯಾಗಲಿ ಎಂದು ಮಾಧ್ಯಮದ ಮುಂದೆ ಇಂದು ಸಚಿವೆ ಶೋಭಾ ಕರಂದ್ಲಾಜೆ  ಹೇಳಿದ್ದಾರೆ, ತಾವು ಮಾಡಿದ ಸಾಮಾಜಿಕ ಕಾರ್ಯಗಳ ಬಗ್ಗೆ ಮಾತನಾಡದೆ ಇಂತಹ ಸುಳ್ಳು ಸುದ್ದಿಗಳನ್ನು ಯಾವ ಪುರುಷಾರ್ಥಕ್ಕಾಗಿ ಜನರಮುಂದೆ ಹೇಳುತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಆನೆ ನಡೆದಿದ್ದೇ ದಾರಿ ಎಂಬಂತೆ ಇವರು ಬರೆದಿದ್ದೇ ವೇದವಾಕ್ಯ, ಇವರು ತೋರಿಸಿದ್ದೇ ನಿಜ ಎನ್ನುವುದನ್ನು ಇನ್ನು ಮುಂದೆ ನಾವು ನಂಬದೇ ಇರುವ ಪರಿಸ್ಥಿತಿ ಯನ್ನು ನಮ್ಮ ಮಾಧ್ಯಮದ ಮಂದಿ ಮಾಡಿದ್ದಾರೆ. ಮಾಧ್ಯಮಗಳಲ್ಲಿರುವ ಪೀತ ಪತ್ರಕರ್ತರ ಬಗ್ಗೆ  ಬಗ್ಗೆ ಮುಂಚೆಯಿಂದಲೂ ಒಂದು ಆರೋಪವಿದ್ದದ್ದೆ, ದುಡ್ಡು ಕೊಟ್ಟರೆ ಒಳ್ಳೆಯದನ್ನು ಬರೆಯುತ್ತಾರೆ, ಇಲ್ಲದೇ ಇದ್ದರೆ ಚಾರಿತ್ರ್ಯ ವಧೆ ಮಾಡುತ್ತಾರೆ ಅಂತ. ಇನ್ನೂ ಕೆಲವರಿದ್ದಾರೆ, ಅವರ ಮೂಗಿನ ನೇರಕ್ಕೆ ಸರ್ಕಾರ ನಡೆಯಬೇಕು ಹಾಗು ಇಂತಹವರೇ ಮು.ಮಂ ಆಗಬೇಕು ಎಂದು ಠರಾವು ಹೊರಡಿಸುವ ಮಂದಿ.
ರಾಜಕಾರಣಿಗಳ ನೈತಿಕತೆಯನ್ನು ಪ್ರಶ್ನಿಸುವ ಈ ಮಂದಿ ಮೊದಲು ತಮ್ಮ ನೈತಿಕತೆಯನ್ನು ಸಾಬೀತು ಪಡಿಸಲಿ. ವಿಷಾದ ದ ಸಂಗತಿಯೆಂದರೆ, ಅಣ್ಣಾ ಹೋರಾಟಕ್ಕೆ ಇಂತಹ ಭ್ರಷ್ಟ ಜನರೇ ಕೈ ಜೋಡಿಸಿ ಭರ್ಜರಿ ಪ್ರಚಾರ ಕೊಡುತ್ತಿರುವುದು. ಇದು ನಮ್ಮೆಲ್ಲರ ಧೌರ್ಭಾಗ್ಯ.
ಜವಬ್ದಾರಿಯುತ ಪತ್ರಿಕೆಗಳು ಹಾಗು ವ್ಯಕ್ತಿಗಳು ಹೀಗೆ ಬೇಜವ್ಬ್ದಾರಿಯಿಂದ ಸುದ್ದಿಯನ್ನು ಪ್ರಕಟಿಸುವುದು ಎಷ್ಟು ಸರಿ? ಎಂದು ನಾವು ಈ ಬಗ್ಗೆ ಪ್ರಶ್ನಿಸಿದ್ದೆವು.
ಕುವೈತ್ ನಲ್ಲಿರುವ ಇನ್ಫೋಸಿಸ್ ಕಟ್ಟಡ ಎಂದು ಇಲ್ಲದೇ ಇರುವ ಕಟ್ಟಡ ವನ್ನು ತೋರಿಸಿದ್ದರು, ಇಂತಹದ್ದೇ ಬಹುತೇಕ ಎಡವಟ್ಟು ಗಳು ಪತ್ರಿಕೆಯಲ್ಲಿ ಕಂಡು ಬಂದರೂ ಸಹ ಕಂಡೂ ಕಾಣದೆ ಇದ್ದಾರೆ ಈ ಜನ.
ಮದನಾರಿ ಕಾರ್ಯಕ್ರಮ ಬೇಡ ಎಂದು ಈ ಮುಂಚೆ ಬರೆದಿದ್ದೆವು, ಆದರೆ ಆ ಕಾರ್ಯಕ್ರಮವನ್ನು ಯಾವುದೇ ಬದಲಾವಣೆ ಮಾಡದೆ ಹಸಿಬಿಸಿ ದೃಶ್ಯಾವಳಿಗಳನ್ನು ಮತ್ತೆ ಮತ್ತೆ ಬಿತ್ತರಿಸಲಾಗುತ್ತಿದೆ.
೨೫.೦೮.೨೦೧೧ ರ ಕನ್ನಡಪ್ರಭ ಪುಟ ೪ ರಲ್ಲಿ ರುವ ಒಂದು ತಲೆ ಬರಹ, ಮಸೂದೆ ಅಡಿಯಲ್ಲಿ ಎನ್ನುವ ಬದಲು "ಮಸೂದೆ ಅಡಿಗೆ " ಎನ್ನುವ ಆಡುಭಾಷೆ ಬಳಸಲಾಗಿದೆ. ನೋಡ್ತಾ ಯಿರಿ ಏನೇನ್ ಮಾಡ್ತಾರೆ ಅಂತ.

ಸೋಮವಾರ, ಆಗಸ್ಟ್ 22, 2011

ಹೀಗೊಂದು ಶುದ್ದ ಸುಳ್ಳು
ಕನ್ನಡಪ್ರಭ ೨೦.೦೫.೨೦೧೧ ಪುಟ ೫ ರಲ್ಲಿ ಪ್ರಕಟವಾಗಿರುವ ಮೇಲಿನ ವರದಿಯಲ್ಲಿ ಕುವೈತ್ ನಲ್ಲಿರುವ ಇನ್ಫೋಸಿಸ್ ಕಟ್ಟಡ ಎಂದು ಈ ಚಿತ್ರವನ್ನು ಪ್ರಕಟಿಸಿದ್ದಾರೆ.

ಆದರೆ ಇಂತಹ ಯಾವುದೇ ಕಟ್ಟಡ ಅಲ್ಲಿ ಇಲ್ಲ ಎಂದು ಅಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತು. ಹಾಗು ಇನ್ಫೋಸಿಸ್ ಅಧಿಕೃತ ವೆಬ್ ಸೈಟ್ನಲ್ಲಿ ಸಹ ಈ ಬಗ್ಗೆ ಮಾಹಿತಿ ಇಲ್ಲ. ಅದೂ ಅಲ್ಲದೆ ಕುವೈತ್ ನಲ್ಲಿ ಅವರ ಯಾವುದೇ ಕಛೇರಿ ಇಲ್ಲ ಎಂದು ಈ ಕೆಳಗಿನ ಲಿಂಕ್ ನಲ್ಲಿ ಗೊತ್ತಾಗುತ್ತೆ
ಹೀಗಿರುವಾಗ ಈ ಮಾಹಿತಿ ಇವರಿಗೆ ಹೇಗೆ ಸಿಕ್ಕಿತು?

ಕೆಲ ವರ್ಷಗಳ ಹಿಂದೆ, ಈ ಮೈಲ್ ಗಳಲ್ಲಿ ಇಂತಹ ಅಧ್ಬುತ ಫೋಟೊಗಳು ಹರಿದಾಡುತಿದ್ದವು. ತುಂಬಾ ಜನ ಇಂತಹ ಚಿತ್ರಗಳನ್ನು ನೋಡಿ ಖುಶಿ ಪಟ್ಟಿದ್ದರು. ಆದರೆ ಅಂತಹ ಯಾವುದೇ ಯೋಜನೆಗಳು ಇಲ್ಲ ಎಂದು ತದ ನಂತರ ಗೊತ್ತಾಯಿತು.

ಜವಬ್ದಾರಿಯುತ ಪತ್ರಿಕೆಗಳು ಹಾಗು ವ್ಯಕ್ತಿಗಳು ಹೀಗೆ ಬೇಜವ್ಬ್ದಾರಿಯಿಂದ ಸುದ್ದಿಯನ್ನು ಪ್ರಕಟಿಸುವುದು ಎಷ್ಟು ಸರಿ?

ಇಂದಿಗೂ ಬಹಳಷ್ಟು ಜನ ಪತ್ರಿಕೆಗಳಲ್ಲಿ ಹಾಗು ಟಿವಿಗಳಲ್ಲಿ ಬಂದಿದ್ದು ನಿಜ ವೆಂದು ನಂಬುತ್ತಾರೆ. 
ಆದರೆ ಈ ತಪ್ಪಿಗೆ ಅವರೇ ಉತ್ತರಿಸಬೇಕು.
ತಪ್ಪಯ್ತು ತಿದ್ಕೋತೀವಿ ಅಂತ ಹೇಳ್ತಾರ ಅಥವ ನೀವೇ ತಿದ್ಕೊಳಿ ಅಂತ ಹೇಳ್ತಾರ ನೋಡಬೇಕು.
ಗುರುವಾರ, ಆಗಸ್ಟ್ 18, 2011

ಈ ಎಡವಟ್ಟುಗಳು ಯಾಕೆ ಹೀಗೆ ಅಂತ?


ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ. 
ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು. 


ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.


೧. ಇಡೀ ದೇಸ ಅಣ್ಣಾ ಹೋರಟಕ್ಕೆ ನಿಂತಿದೆ ಅನ್ನೋದು ಸುಳ್ಳು, ಇವರಲ್ಲಿ ರೈತರು ಅವ್ರಾ? ಕೂಲಿ ಕಾರ್ಮಿಕರು ಅವ್ರಾ? 
ಅಲ್ಲಾ ಕಣಣ್ಣೋ, ನಿಮ್ಮಂತೋರು ಸ್ವಾತಂತ್ರ್ಯ ಬರೋದಿಕ್ಕೆ ಮುಂಚೆ ಹುಟ್ಟಿದ್ದಿದ್ದರೆ ಇಂತ ಪ್ರಸ್ನೆ ಖಂಡಿತ ಕೇಳ್ತಿದಿದ್ದ್ರಿ. ಸ್ವಾತಂತ್ರ್ಯ ಕ್ಕೆ ಹೋರಾಟ ಮಾಡೋ ಜನರಲ್ಲಿ ಬಡವರು ಯಾರೂ ಇಲ್ಲ ಬರೀ ಸ್ರೀಮಂತ್ರೇ ತುಂಬಾ ಜನ ಅವ್ರೆ. ಬಡವರು ಎಲ್ಲಾ ಹೋರಾಟ ಮಾಡಾಕ್ಕೆ ಆದೀತಾ? ಹೋರಾಟ ಮಾಡಿದ್ರೆ ಹೊಟ್ಟೆಗೆ ಹಿಟ್ಟು ಕೊಡೋರ್ಯಾರು ಅಂತ ಕೇಳ್ತಿದ್ರಿ ಕಣಣ್ಣೋ! 
ನಿಮ್ಮಂತ ಎಡವಟ್ಟು ಗಳು ಎಲ್ಲ ಕಾಲದಲ್ಲಿ ಇರೋರೆ. ಅವಾಗಿನ ಕಾಲದ್ದು ಒಂದು ಮಾತು ಇವಾಗ್ಲು ವೇ ಜನ ಮಾತಾಡ್ತಾರೆ. ಯಾರು ರಾಜ ಆದ್ರೇನು ಯಾರು ಮಂತ್ರಿ ಆದರೇನು ರಾಗಿ ಬೀಸೋದು ತಪ್ಪಲ್ಲ ಅಂತ. ಈ ಮಾತು ಎಲ್ಲ ಕಾಲಕ್ಕು ಒಪ್ಪುತ್ತೆ.
೨. ಜನಲೋಕಪಾಲ್ ಬೇಕು ಎಂದು ಚಳವಳಿಗೆ ಇಳಿದಿರುವವರ ಹೆಚ್ಚು ಮಂದಿ ಅದನ್ನೊಮ್ಮೆ ಓದಿಕೊಂಡೇ ಇಲ್ಲ. ಅಣ್ಣಾ ಹಜಾರೆಯವರ ಜನಲೋಕಪಾಲ್ ಹಾಗು ಸರ್ಕಾರ ತರಲು ಹೊರಟಿರುವ ಲೋಕಪಾಲ್ ನಡುವೆ ಇರುವ ವ್ಯತ್ಯಾಸಗಳೂ ಅವರಿಗೆ ಗೊತ್ತಿಲ್ಲ
ನೀವು ಹೇಳೋದು ನೋಡಿದ್ರೆ ಎಲ್ಲ ಓದಿ ತಿಳ್ಕೊಂಡು ಪ್ರತಿಭಟನೆ ಮಾಡಿ ಅಂತಿದೀರಾ, ಎಲ್ಲ ಕಾನೂನುಗಳನ್ನು ಓದಿ ತಿಳ್ಕೋಂಡು ಕುಂತ್ಕಳ್ಳಕ್ಕೆ ನಮ್ಮ ಕೈಲಿ ಆಗ್ತದಾ ಬುದ್ದಿ. ಓದಿರೋ ಬುದ್ದಿವಂತರು ನಮ್ಮಂತ ಬಡವರ ಪರವಾಗಿ ಓದಿ ತಿಳ್ಕಂಡು ನಮ್ಮ ದೇಸದ ಜನಕ್ಕೆ ಯಾವುದು ಸರಿ ಯಾವುದು ಸರಿಯಲ್ಲ ಅಂತ ಹೇಳಿದ್ರೆ ಸಾಕಪ್ಪ. ಅಂಗೆ ನೋಡಿದ್ರೆ ನ್ಯಾ.ಸಂತೋಷ್ ಹೆಗ್ಡೆಗೆ ಗೊತ್ತಿಲ್ವ ನಮ್ಮ ಜನಕ್ಕೆ ಯಾವೂದು ಬೇಕು ಯಾವ್ದು ಬೇಡ.  ಅವರೆ ತಾನೆ ಯಡ್ಯೂರಪ್ಪ ನ ರಾಜಿನಾಮೆ ಗೆ ಕಾರಣರಾದವ್ರು, ಅಂಥವರ ಮಾರ್ಗದರ್ಶನ ನಮಗೆ ಬೇಡ ಅಲ್ವಾ. ಯಡ್ಯೂರಪ್ಪನ ರಾಜಿನಾಮೆಗೆ ಮಾತ್ರ ಅವರು ಬೇಕಾಗಿತ್ತು. ಈಗ ಬೇಡ ಅಲ್ವಾ ಸಾ. ಈ ದೇಸದಲ್ಲಿ  ನೂರಾರು ಕಾನೂನುಗಳು ಅವೆ, ಅವೆಲ್ಲವನ್ನು ನಾವು ಓದಿ ತಿಳ್ಕಳ್ಳಾಕ್ಕಾಯ್ತದ. ಅದಕ್ಕಂತನೇ ವಕೀಲರು, ನ್ಯಾಯಮೂರ್ತಿಗಳು ಅಂತ ಸರ್ಕಾರನೇ ಮಾಡಿಲ್ವ. ಅವರೆಲ್ಲರ ಪ್ರಾಮಾಣಿಕತೆಯ ಫಲವಾಗಿ ಇಂದು ದೊಡ್ಡ ದೊಡ್ಡ ಮಂತ್ರಿ ಮಹೋದಯರು ಕಂಬಿ ಏಣಿಸ್ತಾಇಲ್ವಾ. 
ನಿಮ್ದೊಳ್ಳೆ ಕ್ಯಾತೆ ಸಾರ್,  ಹಂಗೇ ಹೋದರೆ "ಹಂಗಲ್ಲ" ಹಿಂಗೆ ಅಂತೀರಾ, ಹಿಂಗೇ ಹೋದರೆ ಹಿಂಗಲ್ಲ ಅಂತೀರಾ, ಒಳ್ಳೆ ಎಡವಟ್ಟು ಜನಗಳು ಸಾರ್ ನೀವು!
೩.ಬೆಳೆದು ನಿಂತಿರೋ ಭ್ರಷ್ಟಾಚಾರಕ್ಕೆ ರಾಜಕಾರಣಿಗಳು ಅಧಿಕಾರಿಗಳು ಎಷ್ಟು ಕಾರಣವೋ, ಇಲ್ಲೀ ತನಕ ಬೆಳೆಯೋ ದಕ್ಕೆ ಬಿಟ್ಟಿದ್ದು ನಮ್ಮಂಥ ಸಾಮಾನ್ಯ ಜನಗಳೂ ಕಾರಣ ಅಲ್ವಾ.
ಸರಿ, ತಪ್ಪೋ ಆಗಿ ಹೋಗಿದೆ ಈಗ ತಪ್ಪು ತಿಳ್ಕೋಳ್ಳೊದು ತಪ್ಪಾ. ಇದು ಬಿಟ್ಟು ಮತ್ತೇನು ಮಾಡ್ಬೇಕಿತ್ತು? ಅದಕ್ಕೆ ವಸೀ ಉತ್ತರ ಕೊಡ್ತೀರಾ.
೪. ಅಣ್ಣಾ ನಡವಳಿಕೆ ಪ್ರಜಾಸತ್ತೆಗೆ ಮಾರಕ’ ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ. ಅಣ್ಣಾ ಈ ದೇಶದ ಸಮಸ್ತ ವರ್ಗ, ಜಾತಿಗಳ ಪ್ರತಿನಿಧಿಯಲ್ಲ. ಸಂಸತ್ತನ್ನು ತನ್ನ ಮೂಗಿನ ನೇರಕ್ಕೆ ನಿಯಂತ್ರಿಸುವುದು ತಪ್ಪು.


ನಮ್ಮ ಪ್ರತಿನಿಧಿಗಳಾಗಿ ಇವರು ಕಡಿದು ಗುಡ್ಡೆ ಹಾಕಿದ್ದು ಅಷ್ಟರಲ್ಲೇ ಇದೆ, ಸತತವಾಗಿ ಕೇಂದ್ರದಲ್ಲಿ ೫೦ ವರ್ಷ ಆಳ್ವಿಕೆ ಮಾಡಿದ ಪಕ್ಷ ಏನು ಮಾಡಿದೆ ಅಂತ ಈ ಪ್ರಪಂಚಕ್ಕೆ ಗೊತ್ತು. ಭ್ರಷ್ಟಚಾರದ ಇವತ್ತಿನ ಈ ಸ್ಥಿತಿಗೆ ಇವರು ಕಾರಣರಲ್ಲದೆ ಬೇರೆ ಯಾರು ಸಾರ್? ಈ ಬೇಗುದಿಯನ್ನು ಇಂದು ಅಣ್ಣಾಗೆ ಬೆಂಬಲಿಸುವ ಮೂಲಕ ಹೊರಗೆ ಬಿಡುತಿದ್ದಾರೆ. ಈ ಪ್ರಜಾಸತ್ತಾತ್ಮಕ ಆಡಳಿತ ದಿಂದಾನೆ, ಈ ರಾಜಕಾರಣಿಗಳು ಈ ದೇಶಾನ ಲೂಟಿ ಮಾಡಿದ್ದು.
ಅಕ್ರಮ ಗಣಿಗಾರಿಕೆ ಅಂತ ಬಾಯಿ ಬಾಯಿ ಬಡ್ಕೊಂಡ್ರಿ, ಆದರೆ ಗಣಿಗಾರಿಕೆ ಮಾಡೋದಿಕ್ಕೆ ಲೈಸೆನ್ಸ್ ಕೊಟ್ಟಿದ್ದು ನಾವು ಆರಿಸಿ ಕಳ್ಸಿದ ಸಂಸತ್ತಿನ ಜನರಲ್ವೇ?
ರಾಷ್ಟ್ರೀಯ ಸಂಪತ್ತು ನ್ನ ಹೇಗೆ ರಕ್ಷಿಸಬೇಕು ಅಂತ ಇವರ್ಯರಿಗು ಗೊತ್ತಿರಲಿಲ್ವ? ಡೀ ನೋಟಿಫಿಕೇಶನ್ ಯಾಕೆ ಬೇಕಿತ್ತು, ಆ ಕಾನೂನನ್ನು ಮಾಡಿದ್ದು ಯಾರು? ನಮ್ಮ ರಾಜಕಾರಣಿಗಳಲ್ವೆ, ಅವರಿಗೆ ಎಲ್ಲಿ ಲಾಭವಾಗುತ್ತೊ ಅಂತಹ ಕಾನೂನು ಮಾಡಿಕೊಂಡ್ರು. ಅವರು ತಿಂದು, ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳು ತಿನ್ನೋತನಕ ಆಸ್ತಿ ಮಾಡಿಟ್ಟಿದ್ದಾರೆ ನಾವು ಆರಿಸಿ ಕಳುಹಿಸಿದ ಜನ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು.
ಸುಮ್ಮನೆ ಕಾಗಕ್ಕ ಗ್ಗುಬ್ಬಕ್ಕನ ಕತೆ ಗಳನ್ನು ಹೇಳ್ತಾ ಜನರ ದಿಕ್ಕನ್ನು ಯಾಕೆ ಬದಲಾಯಿಸ್ತೀರಾ?
೫. ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಬಹುದು ಎಂಬುದು ಅಣ್ಣಾ ತಂಡದ ಎಣಿಕೆ.


ಗಾಂಧಿ ತಾತ ಹೇಳಿ ಕೊಟ್ಟ ಪಾಠ, ಎಲ್ಲರಿಗೂ ಚೆನ್ನಾಗಿ ಗೊತ್ತು. ಉಪ್ವಾಸ ಮಾಡಿ ಏನೇನಲ್ಲ ಮಾಡಿದ್ರು ಅಂತ ಇತಿಹಾಸ ಪುಸ್ತಕ ಹೇಳುತ್ತೆ. ಇನ್ನು ನಾವೇನು ಹೇಳೋದು.
೬. ಅಣ್ಣಾ ಚಳವಳಿ ಎಲ್ಲ ತರಹದ ಜನಗಳು ಕಾಣಿಸ್ತಾ ಇದ್ದಾರೆ. ಕೆಲವರ ಕೈಯಲ್ಲಿ ರಾಷ್ಟ್ರಧ್ವಜ, ಕೆಲವರ ಕೈಯಲ್ಲಿ ಕೇಸರಿ ಧ್ವಜ, ಮತ್ತೆ ಕೆಲವರ ಕೈಯಲ್ಲಿ ಇನ್ನ್ಯಾವುದೋ ವೆರೈಟಿಯ ಧ್ವಜಗಳು


 


ಅದು ಎಲ್ಲಿ ಕಾಣಿಸ್ತು ಅಂತ ಗೊತ್ತಾಗ್ತಿಲ್ಲ ಸ್ವಾಮಿ, ನಮ್ಮ ಕಣ್ಣಿಗೆ ರಾಷ್ಟ್ರಧ್ವಜ ಬಿಟ್ರೆ ಬೇರೆ ಏನು ಕಾಣಿಸಲಿಲ್ಲ, ಒಂದು ವೇಳೆ ಕಾಣಿಸಿದ್ರೆ ತಪ್ಪೇನು ಅಂತ? ಸ್ವಾತಂತ್ರ್ಯ ಚಳುವಳಿ ಯಲ್ಲೂ ಸಹ ಕೇಸರಿ ಧ್ವಜ ಸಹ ಇತ್ತು, 
ಬೇಕಿದ್ದರೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದ್ರೆ ಗೊತ್ತಾಗುತ್ತೆ. ಸುಮ್ಮನೆ ಮನಸ್ನಾಗೆ ಗಲೀಜು ತುಂಬ್ಕೊಂಡು ಬಾಯಲ್ಲಿ ಗಬ್ಬು ನಾರಬೇಡಿ. ನಿಮ್ಮಂತ ಎಡಬಿಡಂಗಿ ಗಳಿಂದ ಇದು ಎಲ್ಲಾ ಕಾಲಕ್ಕೂ ಇದ್ದದ್ದೆ. ಕೇಸರಿ ಕಂಡ್ರೆ ಪಾಪ ಖಾರದ ಉರಿ ಜಾಸ್ತಿಯಾಗುತ್ತೆ ನಿಮ್ಮಂತವರಿಗೆ.
ಇದಕ್ಕೆಲ್ಲ ಕಾರಣ ಏನೆಂದ್ರೆ ಒಟ್ನಾಗೆ ಕೇಸರಿ ಪಡೆ ಇಂತದ್ಯಾವುದೆ ವಿಸ್ಯದಾಗೆ ಮೂಗು ತೂರಿಸಬಾರದು. ಅದು ತೂರಿಸಿದ್ರೆ ನಿಮಗೆಲ್ಲ ಮೆಣಸಿನಕಾಯಿ ತೂರಿಸಿಕೊಂಡಂಗೆ ಆಗ್ತದಲ್ಲಾ.
ಏನು ಮಾಡಕಾಯ್ತದೆ ಎಲ್ಲ ಎಡವಟ್ಟು ಗಳ ಸಹವಾಸ ದೋಸ, ಎಡಬಿಡಂಗಿ ಯಂಗೆ ಆಡ್ತೀರಾ. ನೀವು ಹ್ಹೂಂ ಅಂದ್ರೆ ನಾವು ಹ್ಹೂಂ ಅನ್ನಬೇಕು, ನೀವು ಸೀನಿದ್ರೆ ನಾವು ಸೀನಬೇಕು ಅವಾಗ್ಲೆ ಅಲ್ವ ನಿಮ್ಗೆ ಖುಸಿ ಯಾಗೋದು. 
ಬುಡೀ ಸಾ ಇದೆಲ್ಲ ಪ್ರಜಾಪ್ರಭುತ್ವದಾಗೆ ಕಾಮನ್ನು. ಎಲ್ಲರಲ್ಲು ಬೇರೆ ಬೇರೆ ತರದ್ದು ಅಭಿಪ್ರಾಯ ಇರ್ತದೆ. ನಿಮ್ಮದು ಅಂಗೆ ನಮ್ಮದು ಹಿಂಗೆ. ಏನ್ ಮಾಡೋಕೆ ಆಯ್ತದೆ.

ಮಂಗಳವಾರ, ಆಗಸ್ಟ್ 16, 2011

ಈ ಲೇಖನ ಇಂದಿಗೂ ಪ್ರಸ್ತುತ


ಪಟೇಲ್, ಶಾಸ್ತ್ರಿಯನ್ನೇ ಬಿಡದವರು ಅಣ್ಣಾನನ್ನು ಉಳಿಸಿಯಾರೇ?

by PRATAP SIMHA
23rd April 2011
ಖಂಡಿತ ಆ ಬಗ್ಗೆ ಅನುಮಾನಗಳು ಕಾಡುತ್ತಿವೆ. ಇತರರ ಯಶಸ್ಸನ್ನು ಸಹಿಸುವ ಗುಣ ನೆಹರು ಕುಟುಂಬದ ರಕ್ತದಲ್ಲೇ ಇಲ್ಲ. ಭಾರತ ರಾಷ್ಟ್ರೀಯ ಸೇನೆಯನ್ನು (INA) ಕಟ್ಟಿದ್ದ ಸುಭಾಷ್್ಚಂದ್ರ ಬೋಸ್, ಬರ್ಮಾ ಮೂಲಕ ಬ್ರಿಟಿಷರ ಮೇಲೆ ದಾಳಿ ಮಾಡುವುದಾಗಿ 1944ರಲ್ಲಿ ರೇಡಿಯೋ ಭಾಷಣ ಮಾಡಿದಾಗ  “ಸುಭಾಷ್ ವಿರುದ್ಧ ನಾನೇ ಖಡ್ಗ ಹಿಡಿದು ಹೋರಾಡುತ್ತೇನೆ’ ಎಂದು ಸಾರ್ವಜನಿಕವಾಗಿ ಹೇಳಿದ್ದ ವ್ಯಕ್ತಿ ಜವಾಹರಲಾಲ್ ನೆಹರು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಸೂಚನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ನೀಡಿದ್ದರು. ಅಂತಹ ನೆಹರು ಕುಟುಂಬ ಇಡೀ ದೇಶವಾಸಿಗಳ ಕಣ್ಣಲ್ಲಿ ಹೀರೋ ಆಗಿ ಹೊರಹೊಮ್ಮಿರುವ ಅಣ್ಣಾ ಹಜಾರೆಯವರನ್ನು ಬಿಡುತ್ತದೆಯೇ? ಕಪಿಲ್ ಸಿಬಲ್, ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ ನೀಡುತ್ತಿರುವ ಹೇಳಿಕೆಗಳು, ಕೆಸರೆರಚುವ ಪ್ರಯತ್ನಗಳು ಏನನ್ನು ಸೂಚಿಸುತ್ತಿವೆ? ಇದುವರೆಗೂ ನೆಹರು ಕುಟುಂಬ ಹಾಗೂ ಕಾಂಗ್ರೆಸ್ ಭಟ್ಟಂಗಿಗಳು  “ತುಳಿದು’ ಬಂದ ಹಾದಿಯಾದರೂ ಹೇಗಿದೆ?
ಘಟನೆ-1
“The power of reconstruction is always greater than the power of destruction”! ನಮ್ಮ ದೇಶದ ಅತ್ಮಗೌರವದ ಪ್ರತೀಕದಂತಿರುವ ಸೋಮನಾಥ ದೇವಾಲಯದ ಅಡಿಗಲ್ಲು ಇಡುವ ಸಮಾರಂಭಕ್ಕೆ ಅಗಮಿಸಿದ್ದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಹಾಗೆಂದಿದ್ದರು. ಜುನಾಯದ್, ಮಹಮದ್ ಘಜ್ನಿ, ಅಲ್ಲಾವುದ್ದೀನ್ ಖಿಲ್ಜಿ, ಮುಜಫ್ಫರ್ ಶಾ, ಮಹಮದ್ ಬೆಗ್ದಾ ಹಾಗೂ ಕೊನೆಯದಾಗಿ ಮೊಘಲ್ ದೊರೆ ಔರಂಗಜೇಬ ಇವರಿಂದ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಸೋಮನಾಥ ದೇವಾಲಯ 6 ಬಾರಿ ನಾಶಗೊಂಡು 5 ಸಲ ಪುನರ್ ನಿರ್ಮಾಣಗೊಂಡಿತ್ತು. ಸೋಮನಾಥ ದೇವಾಲಯವಿದ್ದಿದ್ದು ಪ್ರಭಾಸ್ ಪಟ್ಟಣದಲ್ಲಿ. ಅದು ಜುನಾಗಡ್್ಗೆ ಸೇರಿತ್ತು. ಜನಸಂಖ್ಯೆಯ ಶೇ. 80 ರಷ್ಟು ಹಿಂದುಗಳೇ ಇದ್ದರೂ ಅಲ್ಲಿನ ನವಾಬ ಜುನಾಗಢ್ ಅನ್ನು ಪಾಕಿಸ್ತಾನದೊಂದಿಗೆ ಸೇರ್ಪಡೆ ಮಾಡಲು ಹವಣಿಸುತ್ತಿದ್ದ. ಇದರ ವಿರುದ್ಧ ಬಂಡೆದ್ದ ಜನ ಶಾಮಲ್್ದಾಸ್ ಗಾಂಧಿ ನೇತೃತ್ವದಲ್ಲಿ ಬದಲಿ ಸರ್ಕಾರ ರಚಿಸಿದರು. ದಿಕ್ಕೆಟ್ಟ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದ. ಆನಂತರ ಭಾರತೀಯ ಒಕ್ಕೂಟಕ್ಕೆ ಸೇರಿಸಿಕೊಳ್ಳುವಂತೆ ಶಾಮಲ್್ದಾಸ್ ಕರೆಕೊಟ್ಟ ಕಾರಣ 1947, ನವೆಂಬರ್ 12ರಂದು ಖುದ್ದು ಅಗಮಿಸಿದ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜುನಾಗಢದ ಸೇರ್ಪಡೆ ಜತೆಗೆ ಸೋಮನಾಥ ದೇವಾಲಯದ ಪುನರ್ ನಿರ್ಮಾಣಕ್ಕೂ ಆದೇಶ ನೀಡಿದರು. ಅಂತಹ ಪ್ರಸ್ತಾವವನ್ನಿಟ್ಟುಕೊಂಡು ಸರ್ದಾರ್ ಪಟೇಲ್, ಕೆ.ಎಂ. ಮುನ್ಷಿ ಮತ್ತಿತರ ಕಾಂಗ್ರೆಸ್ ನಾಯಕರು ಗಾಂಧೀಜಿ ಬಳಿಗೆ ಹೋದಾಗ ಬಹಳ ಖುಷಿಯಿಂದಲೇ ಸಮ್ಮತಿಸಿದ ಮಹಾತ್ಮ, ಜನರ ದೇಣಿಗೆಯಿಂದ ಮರು ನಿರ್ಮಾಣ ಕಾರ್ಯ ನಡೆಯಲಿ ಎಂದರು.
ಅದರೆ ಈ ಘಟನೆಯಿಂದ ಮುಸ್ಲಿಮರಿಗಿಂತ ಹೆಚ್ಚು ಕೋಪ ಬಂದಿದ್ದು ಕಾಶ್ಮೀರಿ ಪಂಡಿತ ಜವಾಹರಲಾಲ್ ನೆಹರುಗೆ!
ಅವರು ಸೋಮನಾಥ ದೇವಾಲಯದ ಪುನರ್ ನಿರ್ಮಾಣವನ್ನು ಹಿಂದು ಪುನರುತ್ಥಾನದಂತೆ ಕಂಡರು. ಆದರೇನಂತೆ ಉಕ್ಕಿನ ಮನುಷ್ಯ ಪಟೇಲ್ ಗಂಡೆದೆಯ ಮುಂದೆ ಉತ್ತರ ಕುಮಾರನಂತಿದ್ದ ನೆಹರು ಆರ್ಭಟ ನಡೆಯಲಿಲ್ಲ. ಸೋಮನಾಥ ದೇವಾಲಯದ ಸ್ಥಳದಲ್ಲಿದ್ದ ಮಸೀದಿಯನ್ನು ಎತ್ತಂಗಡಿ ಮಾಡಿದರು. ಈ ಮಧ್ಯೆ ಸರ್ದಾರ್ ಪಟೇಲ್ ಹಾಗೂ ಗಾಂಧೀಜಿ ಇಬ್ಬರೂ ತೀರಿಕೊಂಡರು. ಮುನ್ಷಿ ನೇತೃತ್ವದಲ್ಲಿ ಪುನರ್ ನಿರ್ಮಾಣ ಕಾರ್ಯವೇನೋ ಮುಂದುವರಿಯಿತು. ಆದರೆ 1964ರವರೆಗೂ ಬದುಕಿದ್ದ ನೆಹರು, ಸರ್ದಾರ್ ಪಟೇಲ್ ಹೆಸರನ್ನು ಯಾವೊಬ್ಬ ಕಾಂಗ್ರೆಸ್ಸಿಗರೂ ಎತ್ತದಂತೆ ಮಾಡಿದರು! ಇವತ್ತು ಬಿಜೆಪಿ, ಆರೆಸ್ಸೆಸ್ಸಿಗರ ಬಾಯಲ್ಲಿ ಸರ್ದಾರ್ ಪಟೇಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೇಳಬಹುದು. ರಾಷ್ಟ್ರವಾದಿಗಳಿಗಂತೂ ಸರ್ದಾರ್ ಪಟೇಲ್ ಯಾವತ್ತೂ ಆದರ್ಶಪ್ರಾಯ. ಆದರೆ ಒಬ್ಬ ಪಂಚಾಯಿತಿ ಮಟ್ಟದ ಕಾಂಗ್ರೆಸ್ಸಿಗನಿಂದ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕನವರೆಗೂ ಒಬ್ಬರಾದರೂ ಸರ್ದಾರ್ ಪಟೇಲ್ ನಮ್ಮ ಹೆಮ್ಮೆಯ ನಾಯಕ ಎಂದು ಹೇಳುವುದನ್ನು ಕೇಳಿದ್ದೀರಾ?!
ಘಟನೆ-2
ಆ ದಿನ 1965, ಆಗಸ್ಟ್ 31. ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದರು. ಇನ್ನೇನು ತಿನ್ನಲು ಆರಂಭಿಸಬೇಕು, ಅಷ್ಟರಲ್ಲಿ ಬಳಿಗೆ ಬಂದ ಅಪ್ತ ಕಾರ್ಯದರ್ಶಿ ಕಿವಿಯಲ್ಲೇನೋ ಉಸುರಿದರು. ಊಟ ಮರೆತ ಶಾಸ್ತ್ರೀಜಿ,  “10 ಜನಪಥ್್’ನಲ್ಲಿರುವ ಪ್ರಧಾನಿ ಕಚೇರಿಯತ್ತ ಧಾವಿಸಿದರು. ಅಲ್ಲಿ ಭೂಸೇನೆ, ನೌಕಾ ದಳ ಹಾಗೂ ವಾಯುಪಡೆಯ ಮುಖ್ಯಸ್ಥರು ಪ್ರಧಾನಿಗಾಗಿ ಕಾದಿದ್ದರು. ಏನಾಗುತ್ತಿದೆ ಎಂದು ಎಲ್ಲರೂ ಯೋಚಿಸುವಷ್ಟರಲ್ಲಿ, ಅಂದರೆ ಐದೇ ನಿಮಿಷದಲ್ಲಿ ಸಭೆ ಮುಗಿಯಿತು.  “ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ’ ಎಂದು ಹದಿನೈದು ದಿನಗಳ ಹಿಂದಷ್ಟೇ ಕೆಂಪುಕೋಟೆಯ ಮೇಲೆ ಗುಡುಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ, ಗಡಿ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆ ಮಾಡಿದ್ದರು! ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿದೊಡ್ಡ ಸಂಘರ್ಷ ಅದಾಗಿತ್ತು. ಭಾರತೀಯ ಸೇನೆ ಲಾಹೋರ್ ಸಮೀಪಕ್ಕೆ ತಲುಪಿತು. ಪಾಕ್ ಪರ ರಣರಂಗಕ್ಕಿಳಿಯುವುದಾಗಿ ಚೀನಾ ಬೆದರಿಕೆ ಹಾಕಿದರೂ ಶಾಸ್ತ್ರೀಜಿ ಬಗ್ಗಲಿಲ್ಲ. 1948ರಲ್ಲಿ ಪಾಕ್ ದಾಳಿ ಮಾಡಿದಾಗ ರಣಹೇಡಿ ನೆಹರು ವಿಶ್ವಸಂಸ್ಥೆಯ ಕದತಟ್ಟಿದರೆ, 1965ರಲ್ಲಿ ವಿಶ್ವಸಂಸ್ಥೆಯೇ ಓಡಿಬರುವಂತೆ ಮಾಡಿದರು ಶಾಸ್ತ್ರೀಜಿ! 1962ರಲ್ಲಿ ಚೀನಾ ಎದುರು ಉಂಟಾದ ಸೋಲು ಇಡೀ ದೇಶದ ಅತ್ಮಸ್ಥೈರ್ಯವನ್ನು ಉಡುಗಿಸಿದರೆ 1965ರಲ್ಲಿ ಗೆಲುವು ತಂದುಕೊಡುವ ಮೂಲಕ ಭಾರತೀಯರು ಮತ್ತೆ ಎದೆಯುಬ್ಬಿಸಿ ನಡೆಯುವಂತೆ ಮಾಡಿದರು ಶಾಸ್ತ್ರೀಜಿ. ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ 17 ವರ್ಷ ಪ್ರಧಾನಿಯಾಗಿದ್ದ ನೆಹರು ಅವರನ್ನು ಧೈರ್ಯ, ಛಲ, ಜನಪ್ರಿಯತೆ ಎಲ್ಲದರಲ್ಲೂ ಮೀರಿಸಿದರು. ಅದು ಕಾಂಗ್ರೆಸ್್ನಲ್ಲಿದ್ದ ನೆಹರು ಪುತ್ರಿ ಇಂದಿರಾ ಗಾಂಧಿಗಾಗಲಿ, ನೆಹರು ಕುಂಟುಂಬದ ಭಟ್ಟಂಗಿಗಳಿಗಾಗಲಿ ಪಥ್ಯವಾಗಲಿಲ್ಲ.
1966, ಜನವರಿ 11ರ ರಾತ್ರಿ.
ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ತಾಷ್ಕೆಂಟ್್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದರು. ನೀಲಿಗಟ್ಟಿದ ದೇಹ ಭಾರತಕ್ಕೆ ಬಂತು. ಒಂದೆಡೆ ಇಡೀ ದೇಶವೇ ದುಃಖದ ಮಡುವಿಗೆ ಬಿದ್ದಿದ್ದರೆ ಇನ್ನೊಂದೆಡೆ ನೆಹರು ಕುಟುಂಬದ ಭಟ್ಟಂಗಿಗಳು ಶವಪರೀಕ್ಷೆಯನ್ನೂ ಮಾಡಲು ಬಿಡದೆ ಶಾಸ್ತ್ರೀಜಿಯವರನ್ನು ಇತಿಹಾಸದ ಕಸದಬುಟ್ಟಿಗೆ ದೂಡುವ ಪಿತೂರಿ ನಡೆಸುತ್ತಿದ್ದರು. ಗಾಂಧೀಜಿ, ನೆಹರು ಅವರನ್ನು ಅಂತ್ಯಸಂಸ್ಕಾರ ಮಾಡಿದ್ದ ಸ್ಥಳದಲ್ಲೇ ಶಾಸ್ತ್ರೀಜಿಯವರ ಕೊನೆಯ ವಿಧಿ-ವಿಧಾನಗಳನ್ನು ನೆರವೇರಿಸಲು ಕಾಂಗ್ರೆಸ್ಸಿಗರೇ ವಿರೋಧ ವ್ಯಕ್ತಪಡಿಸಿದರು. ಅವರ ದೇಹವನ್ನು ಅಲಹಾಬಾದ್್ಗೆ ಕೊಂಡೊಯ್ಯುವಂತೆ ಸೂಚಿಸಿದರು. ಇಂತಹ ಧೂರ್ತತನವನ್ನು ಜನರ ಮುಂದಿಡುವುದಾಗಿ ಅವರ ಪತ್ನಿ ಲಲಿತಾ ಶಾಸ್ತ್ರಿ ಬೆದರಿಕೆ ಹಾಕಿದಾಗ ದೆಹಲಿಯಲ್ಲೇ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಲಾಯಿತು. ಅವರ ಸಮಾಧಿಯ ಮೇಲೆ  “ಜೈ ಜವಾನ್, ಜೈ ಕಿಸಾನ್್’ ಎಂದು ಕೆತ್ತುವುದಕ್ಕೂ ಅಡ್ಡಿಪಡಿಸಿದರು. ಲಲಿತಾ ಶಾಸ್ತ್ರಿಯವರು ಉಪವಾಸ ಕೂರುವುದಾಗಿ ಮತ್ತೆ ಧಮಕಿ ಹಾಕಬೇಕಾಗಿ ಬಂತು. ದುಃಖದಿಂದ ಹೊರಬರುವ ಮೊದಲೇ ಕಾಂಗ್ರೆಸ್ ಕಚೇರಿಯಿಂದ ಶಾಸ್ತ್ರೀಜಿಯವರ ಭಾವಚಿತ್ರವನ್ನು ಕಿತ್ತೊಗೆಯಲಾಗಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿ ಬಗ್ಗೆ ನೆಹರುಗೆ ಎಷ್ಟು ಮತ್ಸರವಿತ್ತೆಂದರೆ ಸ್ವಾತಂತ್ರ್ಯಾನಂತರ ರಚನೆಯಾದ ಹಂಗಾಮಿ ಕೇಂದ್ರ ಸಂಪುಟಕ್ಕೆ ಶಾಸ್ತ್ರಿಯವರನ್ನು ತೆಗೆದುಕೊಂಡರೂ ಖಾತೆ ರಹಿತ ಮಂತ್ರಿಯನ್ನಾಗಿಸಿದ್ದರು. 1963ರಲ್ಲಿ ನೆಹರು ತಮ್ಮ ಸಂಪುಟದಿಂದ ಕೈಬಿಟ್ಟಾಗ ಶಾಸ್ತ್ರೀಜಿ ಪತ್ರಿಕೆಗಳಿಗೆ ಅಂಕಣ ಬರೆದು ಹೊಟ್ಟೆಹೊರೆಯಬೇಕಾಯಿತು. ಕಾಂಗ್ರೆಸ್ ಶಾಸ್ತ್ರೀಜಿ ಬಗ್ಗೆ ಎಂತಹ ಧೋರಣೆ ಅನುಸರಿಸುತ್ತಾ ಬಂದಿದೆ ಎಂದರೆ ಶಾಸ್ತ್ರೀಜಿ ಜನ್ಮದಿನ ಕೂಡ ಅಕ್ಟೋಬರ್ 2ರಂದೇ ಎಂಬುದು ಎಷ್ಟು ಮಕ್ಕಳಿಗೆ ಗೊತ್ತು? 2004ರಲ್ಲಿ ಶಾಸ್ತ್ರೀಜಿಯವರ ಜನ್ಮಶತಮಾನೋತ್ಸವದ ಬಗ್ಗೆ ಕಾಂಗ್ರೆಸ್ ಯಾವ ಅಸಕ್ತಿಯನ್ನೂ ತೋರದಿದ್ದಾಗ, ಅವರ ಮಕ್ಕಳಾದ ಅನಿಲ್ ಹಾಗೂ ಸುನೀಲ್ ಶಾಸ್ತ್ರಿ ಸಾರ್ವಜನಿಕವಾಗಿ ಟೀಕಿಸಿದ್ದರು. ಹೀಗೆ ಈ ದೇಶದ ಧೀರ ಪುತ್ರನನ್ನೇ ಸಹಿಸಲಿಲ್ಲ ಕಾಂಗ್ರೆಸ್.
ಘಟನೆ-3
1991, ಜೂನ್ 21. ರಾಜಕೀಯ ನಿವೃತ್ತಿ ಯಾಚಿಸಿದ್ದ ಪಾಮುಲಪರ್ತಿ ವೆಂಕಟ ನರಸಿಂಹರಾವ್, ಅಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಾಗಂತ ಖುಷಿಪಡುವ ಸ್ಥಿತಿಯಲ್ಲಿರಲಿಲ್ಲ. ಹಣದುಬ್ಬರ ಶೇ. 17ಕ್ಕೇರಿತ್ತು. ಸಾಲ 90 ಶತಕೋಟಿ ಪೌಂಡ್್ಗೇರಿತ್ತು. 100 ಕೋಟಿ ಸಾಲ ಕೊಡುವುದಕ್ಕೂ ವಿಶ್ವಬ್ಯಾಂಕ್ ಹಾಗೂ ಎಡಿಬಿ ಸಿದ್ಧವಿರಲಿಲ್ಲ. ಹಿಂದಿನ ಪ್ರಧಾನಿ ಚಂದ್ರಶೇಖರ್ ಚಿನ್ನವನ್ನು ಅಡವಿಟ್ಟಿದ್ದರು. ಭಾರತ ಡಿಫಾಲ್ಟರ್ ಆಗುವುದು ಖಚಿತವಾಗಿತ್ತು. ದಿವಾಳಿಯಾಗುವುದೆಂದರೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ, ಪುರಾತನ ನಾಗರಿಕತೆ ಎಂಬ ಘನತೆ, ಹೆಗ್ಗಳಿಕೆ ಮಣ್ಣು ಪಾಲಾದಂತೆ. ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳೆಂಬ ಬಿಳಿ ಆನೆಗಳು, ಪರಮ ಭ್ರಷ್ಟ ನೌಕರಶಾಹಿಯಿಂದಾಗಿ ದೇಶ ಹೀನಾಯ ಸ್ಥಿತಿಗೆ ತಲುಪಿತ್ತು. ಇಂತಹ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಪ್ರಾಧಾನಿಯಾಗಿ ನೆಹರು ಪ್ರಣೀತ ಅರೆ ಸಮಾಜವಾದವನ್ನು (Quasi Socialism) ತಿಪ್ಪೆಗೆ ಎಸೆಯುವುದು, ಇಂದಿರಾ ಗಾಂಧಿ ಹುಟ್ಟು ಹಾಕಿದ್ದ  “ಬಾಬು ಸಂಸ್ಕೃತಿ’, ಇನ್್ಸ್ಪೆಕ್ಟರ್ ರಾಜ್, ಪರ್ಮಿಟ್ ರಾಜ್, ಲೈಸೆನ್ಸ್ ರಾಜ್್ಗಳಿಗೆ ತಿಲಾಂಜಲಿ ಹಾಕುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಅದರೂ ಧೈರ್ಯ ತೋರಿ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದವರು ನರಸಿಂಹರಾವ್. ಇವತ್ತು ಪ್ಲಾಸ್ಟಿಕ್ ಮನಿ, High End Technology, ಬಗೆ ಬಗೆಯ ಕಾರು, ಕೈಗೆಟುಕುವ ಬೆಲೆಯಲ್ಲಿ ಟಿವಿ, ಫ್ರಿಜ್, ಬ್ಯಾಂಕಿಂಗ್, ಇಂಟರ್್ನೆಟ್ ಸೇವೆ ಲಭ್ಯವಾಗಿದ್ದರೆ ಅದಕ್ಕೆ ನರಸಿಂಹರಾವ್ ಕಾರಣ. ಅವರನ್ನು ಸುಧಾರಣಾವಾದಿ, ವಿದ್ವಾಂಸ, ವಿಧ್ವಂಸಕ ಏನು ಬೇಕಾದರೂ ಕರೆಯಿರಿ. ಲಕೂಭಾಯಿ ಪಾಠಕ್, ಸೈಂಟ್ ಕೀಟ್ಸ್, ಜೆಎಂಎಂ ಹಗರಣಗಳನ್ನಿಟ್ಟುಕೊಂಡು ಜರೆಯಿರಿ. ಅದರೆ ಭಾರತ ಇವತ್ತು ಚೀನಾಕ್ಕೆ ಸಡ್ಡು ಹೊಡೆಯುವಂತೆ ಬೆಳೆದಿದ್ದರೆ ಅದರ ಹಿಂದೆ ನರಸಿಂಹ ರಾವ್ ಪರಿಶ್ರಮ, ದೂರದೃಷ್ಟಿಯಿದೆ. ಇನ್ನು 1993ರಲ್ಲಿ ಸಂಭವಿಸಿದ ಭೀಕರ ಲಾತೂರ್ ಭೂಕಂಪವನ್ನು ನಿಭಾಯಿಸಿದ ರೀತಿಯನ್ನು ಮರೆಯಲು ಸಾಧ್ಯವೆ?
ಇಂತಹ ನರಸಿಂಹರಾವ್ 2004, ಡಿಸೆಂಬರ್ 23ರಂದು ರಾಜಧಾನಿ ದೆಹಲಿಯಲ್ಲಿ ಅಗಲಿದಾಗ ಕಾಂಗ್ರೆಸ್ ಮಾಡಿದ್ದೇನು ಗೊತ್ತೆ?
ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲು ಎಐಐಸಿ ಕಚೇರಿಯ ಒಳಕ್ಕೆ ಕೊಂಡೊಯ್ಯುವುದಕ್ಕೂ ಅವಕಾಶ ನೀಡಲಿಲ್ಲ, ಗೇಟನ್ನೇ ಮುಚ್ಚಿ ಬಿಟ್ಟರು! ಕನಿಷ್ಠ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲೇ ಜಾಗ ಕೊಡಿ ಎಂಬ ರಾವ್ ಕುಟುಂಬದ ಮನವಿಗೂ ಸೋನಿಯಾ ಗಾಂಧಿ ಸೊಪ್ಪು ಹಾಕಲಿಲ್ಲ. ಕೊನೆಗೆ ಹೈದರಾಬಾದ್್ನಲ್ಲಿ ನಡೆದ ಅಂತ್ಯ ಸಂಸ್ಕಾರಕ್ಕೆ ಎಚ್.ಡಿ. ದೇವೇಗೌಡ, ಲಾಲ್್ಕೃಷ್ಣ ಆಡ್ವಾಣಿಯವರಂಥ ವಿರೋಧ ಪಕ್ಷದ ನಾಯಕರು ಆಗಮಿಸಿದರಾದರೂ ಸೋನಿಯಾ ಗಾಂಧಿ ಅಂತಹ ಸೌಜನ್ಯ ತೋರಲಿಲ್ಲ. ಕಳೆದ ವರ್ಷ ನಡೆದ ಕಾಂಗ್ರೆಸ್್ನ 125ನೇ ಜಯಂತಿ ವೇಳೆ ಮಾಡಿದ 15 ನಿಮಿಷಗಳ ಭಾಷಣದಲ್ಲಿ ಕಾಂಗ್ರೆಸ್್ನ ಎಲ್ಲ ಪ್ರಧಾನಿಗಳ ಹೆಸರನ್ನೂ ಉಲ್ಲೇಖಿಸಿದ ಸೋನಿಯಾ, “Rajiv Gandhi scripted the course of Economic policies that were followed by the government (headed by Rao) for the following five years” ಎಂದರೇ ಹೊರತು ರಾವ್ ಅವರ ಸಣ್ಣ ಪ್ರಸ್ತಾಪವನ್ನೂ ಮಾಡಲಿಲ್ಲ. ಆರ್ಥಿಕ ಉದಾರೀಕರಣದ ರೂವಾರಿ ರಾವ್ ಅವರಾಗಿದ್ದರೂ ರಾಜೀವ್್ಗೆ ಕ್ರೆಡಿಟ್ ಕೊಡಲು ಪ್ರಯತ್ನಿಸಿದರು. ಕಾಂಗ್ರೆಸ್್ನ ಇಂತಹ ಧೋರಣೆಯ ಬಗ್ಗೆ ಬರೆಯುತ್ತಾ ಖ್ಯಾತ ಇತಿಹಾಸಜ್ಞ ರಾಮಚಂದ್ರ ಗುಹಾ ಹೀಗೆನ್ನುತ್ತಾರೆ-  ”To forget his achievements, but to remember his mistakes, is a product of cold and deliberate calculation”.
ಇಷ್ಟು ಮಾತ್ರವಲ್ಲ, ಸೀಟು ಬಿಡಲೊಪ್ಪದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿಯವರನ್ನು 1998ರಲ್ಲಿ ಪದಚ್ಯುತಗೊಳಿಸಿ ಸೋನಿಯಾ ಗಾಂಧಿಯವರನ್ನು ಆ ಸ್ಥಾನಕ್ಕೆ ನೇಮಕ ಮಾಡಿದ ಅಕೆಯ ಬೆಂಬಲಿಗ ಗೂಂಡಾಗಳು ಕೇಸರಿಯವರನ್ನು ಎಐಸಿಸಿ ಕಚೇರಿಯಿಂದ ಎತ್ತಿ ಆಚೆ ಹಾಕಿದ್ದರು. ಜವಾಹರಲಾಲ್ ನೆಹರು ಕುಟುಂಬದ ಬುದ್ಧಿಯೇ ಅಂಥದ್ದು, ತನಗಿಂತ ಪ್ರಸಿದ್ಧರಾಗುವುದನ್ನು ಅದು ಸಹಿಸುವುದೇ ಇಲ್ಲ. ಸ್ವಾತಂತ್ರ್ಯ ಬಂದ ತರುವಾಯ ರಚನೆಯಾದ ಸರಕಾರದಲ್ಲಿ ಅಂತಹ ಅಂಬೇಡ್ಕರ್ ಅವರನ್ನೇ ಮಂತ್ರಿ ಮಾಡುವುದಕ್ಕೆ ನೆಹರು ಸಿದ್ಧರಿರಲಿಲ್ಲ. 1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯನ್ನು ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಕಾಂಗ್ರೆಸ್. ಹಾಗಿರುವಾಗ ಏಕಾಏಕಿ ಬಂದು ಇಡೀ ರಾಷ್ಟ್ರದ ಮೆಚ್ಚುಗೆಗೆ ಪಾತ್ರರಾಗಿರುವ ಅಮಾಯಕ ಅಣ್ಣಾ ಹಜಾರೆಯವರನ್ನು ಸೋನಿಯಾ ಗಾಂಧಿಯವರ ಚೇಲಾಗಳು ಬಿಡುತ್ತಾರೆಯೇ? ಈ ದೇಶದ ಧೀರ ಪುತ್ರರಾದ ಸುಭಾಷ್್ಚಂದ್ರ ಬೋಸ್, ಅಂಬೇಡ್ಕರ್, ಸರ್ದಾರ್ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನೇ ಹೊಸಕಿಹಾಕಲು ಪ್ರಯತ್ನಿಸಿದ ನೆಹರು ಕುಟುಂಬ ಅಣ್ಣಾನ ಯಶಸ್ಸನ್ನು ಸಹಿಸಿಕೊಂಡೀತೆ? ಈಗಾಗಲೇ ಅದರ ಎಲ್ಲ ಸೂಚನೆಗಳೂ ಕಾಣುತ್ತಿವೆ.
Beware of dogs !
ಇಂತಹ ಎಚ್ಚರಿಕೆಯ ಫಲಕಗಳನ್ನು ಶ್ರೀಮಂತರ ಮನೆ ಮುಂದೆ ಕಾಣಬಹುದು. ಕಪಿಲ್ ಸಿಬಲ್, ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿಗಳಿರುವವರೆಗೂ ಸೋನಿಯಾ ಗಾಂಧಿಯವರಿಗೆ ಅಂತಹ ಅಗತ್ಯವೇ ಎದುರಾಗುವುದಿಲ್ಲ! ಇವರು ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಸೋನಿಯಾ ಮನೆ ಮುಂದೆ “Beware of Sibal, Moily, Digvijay singh and Tiwari”ಎಂದು ಹಾಕಬೇಕೇನೋ ಎಂದನಿಸುತ್ತಿದೆ. ಇವರೇನು ಸಚಿವ ಮಹಾಶಯರೋ ಅಥವಾ ಸೋನಿಯಾ ಗಾಂಧಿಯವರ ಸಾಕು ಪ್ರಾಣಿಗಳೋ? ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಕ್ಷಮತೆ ಬಗ್ಗೆ ಪ್ರಶ್ನಿಸುತ್ತಿರುವ ಈ ದಿಗ್ವಿಜಯ್ ಸಿಂಗ್್ಗೇನಾದರೂ ಮತಿಭ್ರಮಣೆಯಾಗಿದೆಯೇ?
“ನಿಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಒಂದರ ಹಿಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಆತನಿಗೆ ಕಾಂಗ್ರೆಸ್್ನ ಬೆಂಬಲವಿದೆ ಎಂದೇ ನಾನು ಭಾವಿಸುತ್ತೇನೆ. ಬಹಳಷ್ಟು ಹೇಳಿಕೆಗಳು ಸತ್ಯಕ್ಕೆ ದೂರವಾದವು. ಆತನ ಉದ್ದೇಶ ಜನರಲ್ಲಿ ಗೊಂದಲ ಸೃಷ್ಟಿಸುವುದು, ದಾರಿತಪ್ಪಿಸುವುದು ಹಾಗೂ ಲೋಕಪಾಲ ಮಸೂದೆ ಸಂಬಂಧ ನಡೆಯುತ್ತಿರುವ ಪ್ರಕ್ರಿಯೆಯನ್ನು ಹಾಳುಗೆಡುವುದಾಗಿದೆ. ಇಂತಹ ಕೃತ್ಯಗಳಿಗೆ ನಿಮ್ಮ ವೈಯಕ್ತಿಕ ಒಪ್ಪಿಗೆ ಇದೆಯೇ?” ಎಂದು ಏಪ್ರಿಲ್ 18ರಂದು ಸೋನಿಯಾ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ ಬಹಳ ಮುಗ್ಧವಾಗಿ  ಕೇಳಿದ್ದಾರೆ. ಇದನ್ನೆಲ್ಲಾ ಮಾಡಿಸುತ್ತಿರುವುದೇ ಸೋನಿಯಾ ಗಾಂಧಿ ಎಂಬುದು ಎಂತಹ ಕಟುವಾಸ್ತವ ಅಲ್ಲವೇ?
ಛೇ!

ಸೋಮವಾರ, ಆಗಸ್ಟ್ 15, 2011

ಬ್ರಿಟೀಷರ ಕಾಲದಲ್ಲಿ ಸತ್ಯಾಗ್ರಹಿಗಳ ಬಂಧನ ಓಕೆ ಆದರೆ ಇಂದು?
ಇಂದು ಬೆಳಗ್ಗೆ ಗಾಂಧಿವಾದಿ ಅಣ್ಣಾ ಹಜಾರೆ ಜೆಪಿ ಪಾರ್ಕ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಆದರೆ ದೆಹಲಿ ಪೊಲೀಸ್ ನಿರಶನ ಆರಂಭಕ್ಕೂ ಮುನ್ನ ಅಣ್ಣಾ ಅವರನ್ನು ಬಂಧಿಸಿದ್ದಾರೆ. ಜತೆಯಲ್ಲಿ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾ ಹಜಾರೆ ತಂಡದ ಸದಸ್ಯೆ ಕಿರಣ್ ಬೇಡಿ, ಶಾಂತಿ ಭೂಷಣ್,  ಅರವಿಂದ್ ಕೇಜ್ರಿವಾಲ್  ಹಾಗು ನೂರಾರು ಕಾರ್ಯಕರ್ತರನ್ನು ಕೂಡಾ ಬಂಧಿಸಲಾಗಿದೆ.
ಕೆಲ ಕೇಂದ್ರ ಮಂತ್ರಿಗಳು, ಕಾಂಗ್ರೆಸ್ಸಿನ ಅಧಿಕೃತ ವಕ್ತಾರರು ಹಾಗು ಪ್ರಧಾನ ಕಾರ್ಯದರ್ಶಿಗಳು ಹೇಗೆಗೆಲ್ಲ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ನಾವೆಲ್ಲ ಗಮನಿಸಿದ್ದೇವೆ. ಮೊದಲಿನೊಂದಲೂ ಸತ್ಯಾಗ್ರಹವನ್ನು ಹತ್ತಿಕ್ಕಲು ಷಡ್ಯಂತ್ರ ನಡೆಯುತಿತ್ತು. ಇಂದು ಆರಂಭವಾಗುವ ಮುನ್ನವೇ ಬಂಧಿಸಿರುವುದು ನಮ್ಮೆಲ್ಲರ ಆಕೋಶಕ್ಕೆ ಗುರಿಯಾಗಿದ್ದಾರೆ. ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಸಂತೋಷ ಪಟ್ಟಿದ್ದೆವು, ಆದರೆ ಇಂದಿನ ಘಟನೆ ಆ ಸಂತೋಷವನ್ನು ಕಿತ್ತು ಕೊಂಡಿದೆ.
ಬ್ರಿಟೀಷರ ದಾಸ್ಯದಿಂದ ಹೊರಬರಲು ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದ್ದರು ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಲಭ್ಯವಾಗದ ಹಾಗೆ ಮಾಡಿ ಕೇವಲ ಕಾಂಗ್ರೆಸ್ಸಿನ ಕೆಲ ಮುಖಂಡರುಗಳಿಗೆ ಜೈಕಾರ ಹಾಕುವ ರೀತಿಯಲ್ಲಿ ಪಠ್ಯ ಪುಸ್ತಕವನ್ನು ರೂಪಿಸಿ ಜನರನ್ನು ದಾರಿತಪ್ಪಿಸಿದ್ದೇ ಅಲ್ಲದೆ ಅಧಿಕಾರ ಮದದಿಂದ ಭ್ರಷ್ಟಚಾರ ದಲ್ಲಿ ತೊಡಗಿರುವ ಪ್ರತಿಯೊಬ್ಬರನ್ನು ಮಟ್ಟ ಹಾಕಲು ಪ್ರಬಲವಾದ ಕಾನೂನನ್ನು ರೂಪಿಸಬೇಕು ಎಂದು ಹೋರಾಡುತ್ತಿರುವ ಅಣ್ಣಾ ಹಜಾರೆ ಯ ಸತ್ಯಾಗ್ರಹವನ್ನು ಹತ್ತಿಕ್ಕುವುದಕ್ಕೆ ಶ್ರಮಿಸುತ್ತಿರುವ ಇವರಿಗೆ ಏನನ್ನಬೇಕು.?
ಧಿಕ್ಕಾರವಿರಲಿ ಇಂತಹಜನರಿಗೆ.
 ದಯಮಾಡಿ ಯಾರು ಜಾತಿ, ಧರ್ಮ, ಪಕ್ಷನಿಷ್ಟೆ ಹಾಗೂ ವ್ಯಕ್ತಿ ನಿಷ್ಟೆಗೆ ಬಲಿಯಾಗದೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೇ ಪಕ್ಷ ಹಾಗು ವ್ಯಕ್ತಿಗಳಿಗೆ ಚುನಾವಣೆಗಳಲ್ಲಿ ಸರಿಯಾದ ಪಾಠಕಲಿಸಬೇಕು.
ಏನಂತೀರಾ?

ಭಾನುವಾರ, ಆಗಸ್ಟ್ 14, 2011

ಸರ್ವರಿಗೂ ಸ್ವಾತಂತ್ರ ದಿನೋತ್ಸವದ ಶುಭಾಶಯಗಳು

ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಕಾರಣೀಭೂತರಾದ ಪ್ರತಿಯೊಬ್ಬ ಹಿರಿಯರಿಗೆ ನಮ್ಮ  ನಮನಗಳು.

ಸರ್ವರಿಗೂ ಸ್ವಾತಂತ್ರ ದಿನೋತ್ಸವದ ಶುಭಾಶಯಗಳು

ವಂದೇ ಮಾತರಂ. 

ಜೈ ಹಿಂದ್

ಜನ ಗಣ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿ ತರಂಗ
ತವ ಶುಭ ನಾಮೇ ಜಾಗೇ
ತವ ಶುಭ ಆಶಿಶ ಮಾಗೇ
ಗಾಹೇ ತವ ಜಯ ಗಾಥಾ
ಜನ ಗಣ ಮಂಗಲ ದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ

ಜಯ ಹೇ ಜಯ ಹೇ ಜಯ ಹೇ
ಜಯ ಜಯ ಜಯ ಜಯ ಹೇ


ಶುಕ್ರವಾರ, ಆಗಸ್ಟ್ 12, 2011

"ಉರುಮಿ"

ಗೆಣಸ್ಲೆ ಬ್ಲಾಗಿನ ಸಚಿನ್ ಭಟ್ ಬರೆದಿರುವ ಲೇಖನ.

ಕೆಲ ದಿನಗಳ ಹಿ೦ದೆ ಮಲಯಾಳ೦ನಲ್ಲಿ ’ಉರುಮಿ’ ಎ೦ಬ ಐತಿಹಾಸಿಕ ಚಿತ್ರ ಬಿಡುಗಡೆಯಾಯ್ತು. ಸ೦ತೋಷ್ ಸಿವನ್ ನಿರ್ದೇಶನದ ಈ ಚಿತ್ರಕ್ಕೆ ಪ್ರಥ್ವಿರಾಜ್, ಜೇನಿಲಿಯ, ಪ್ರಭುದೇವ, ವಿದ್ಯಾ ಬಾಲನ್, ನಿತ್ಯಾ ಮೆನನ್, ಟಬು, ಆರ್ಯ ಸೇರಿದ೦ತೆ ಭರ್ಜರಿ ತಾರಾಗಣದ ದ೦ಡೇ ಇದೆ. ಇದರ ಬಗ್ಗೆ ನನಗೂ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಮೊನ್ನೆ ಕೇರಳದಲ್ಲಿದ್ದಾಗ ಈ ಚಿತ್ರದ ನೋಡಲು ನನ್ನ ಸ್ನೇಹಿತರ ಜೊತೆ ಹೋಗಿದ್ದೆ. ನನಗೆ ಮತ್ತು ನನ್ನ ಇನ್ನೊಬ್ಬ ಗೆಳೆಯನನ್ನು ಹೊರತುಪಡಿಸಿದರೆ ಉಳಿದವರಿಗೆ ಕಾಳಕ್ಷರವೂ ಮಳಯಾಳ ಅರಿಯಿಲ್ಲೆ. ಆದರೂ ಕೇವಲ ನನ್ನ ಮೇಲಿನ ಪ್ರೀತಿಯಿ೦ದಲೇ ಬ೦ದವರಾಗಿದ್ದರೂ ಎಲ್ಲರಿಗೂ ಚಿತ್ರ ಸಿಕ್ಕಾಪಟ್ಟೆ ಇಷ್ಟವಾಯ್ತು. ಇಷ್ಟೆಲ್ಲ ಪೀಠಿಕೆಗಳ ನ೦ತರ ನಾನೀಗ ಹೇಳಬೇಕೆ೦ದುಕೊ೦ಡಿರುವುದು ಆ ’ಉರುಮಿ’ ಚಿತ್ರದ ಕಥೆಯ ಪ್ರಧಾನ ಪಾತ್ರಧಾರಿ ವಾಸ್ಕೊ-ಡ-ಗಾಮನ ಬಗ್ಗೆಯೇ.


           ಶಾಲೆಯಲ್ಲಿ ಓದುವ ಯಾವುದೇ ಮಕ್ಕಳನ್ನು ಕೇಳಿ ನೋಡಿ: ಭಾರತ ವನ್ನು ಕ೦ಡುಹಿಡಿದವರು ಯಾರೆ೦ದು. ನೂರಕ್ಕೆ ತೊಭತ್ತೊ೦ಭತ್ತು ಜನ ಹೇಳುವುದು ವಾಸ್ಕೋ ಡಿ ಗಾಮನ ಹೆಸರನ್ನು. ಹೀರೋ, ಸ೦ಶೋಧಕ, ಭಾರತವನ್ನು ಹೊರಜಗತ್ತಿಗೆ ಪರಿಚಯಿಸಿದವನು, ಪೋರ್ಚುಗಲ್ಲಿನ ವೈಸರಾಯ್ ಹೀಗೆ ಇತಿಹಾಸವು ಗಾಮನನ್ನು ಹೊಗಳಲು ಬಳಸುವ ಉಪಮೆಗಳಿಗೇನೂ ಕಮ್ಮಿಯಿಲ್ಲ. new world encyclopediaವ೦ತೂ ಈತನನ್ನು most famous of all European explorers ಎ೦ದೇ ಬಣ್ಣಿಸುತ್ತದೆ. ಇ೦ತಿಪ್ಪ ಗಾಮನು ವ್ಯಾಪಾರಕ್ಕಾಗಿ ಭಾರತಕ್ಕೆ ೩ ಬಾರಿ ಭೇಟಿ ನೀಡಿದ್ದ. ಅದು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಇಲ್ಲಿನ ಅಪಾರ ಸ೦ಪತ್ತನ್ನು ಲೂಟಿ ಹೊಡೆಯುವುದಕ್ಕೆ ಎ೦ದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೇ ೨೦, ೧೪೯೮ರಲ್ಲಿ ಸಾವೋ ಗ್ಯಾಬ್ರಿಯಲ್. ಸಾವೋ ರಫೀಲ್, ಬೆರ್ರಿಯೊ ಎ೦ಬ ೩ ಹಡಗುಗಳು ಮತ್ತು ಸುಮಾರು ೧೭೦ ಜನರೊಡನೆ ಮೊದಲ ಬಾರಿ ಕೇರಳದ ಕಲ್ಲೀಕೋಟೆಗೆ ಬ೦ದಿಳಿದಾಗ ಅಲ್ಲಿನ ಸಾಗರೋತ್ತರ ವ್ಯಾಪಾರದ ಬಹುಪಾಲು ಅರಬ್ಬಿನ ಮುಸ್ಲೀಮರ ಕೈಯ್ಯಲ್ಲಿತ್ತು.  ಮುಸ್ಲೀಮರನ್ನು ವ್ಯಾಪಾರದಿ೦ದ ದೂರವಿಡುವ೦ತೆ ಇಲ್ಲಿನ ರಾಜನ ಮನವೊಲಿಸಲು ಪ್ರಯತ್ನಿಸಿದಾಗ, ಸಹಜ ಸೆಕ್ಯುಲರ್ ನಾಡಾಗಿದ್ದ ಕೇರಳದಲ್ಲಿ ಇವನ ಮಾತಿಗೆ ಬೆಲೆ ಸಿಗಲಿಲ್ಲ. ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ತನ್ನ ಕೆಲ ಸಹಾಯಕರನ್ನು ವ್ಯಾಪಾರಕ್ಕಾಗಿ ಇಲ್ಲೇ ಬಿಟ್ಟು ಎರಡನೇ ದರ್ಜೆಯ ಕಾಳುಮೆಣಸುಗಳೊ೦ದಿಗೆ ಪುನಃ ತನ್ನ ದೇಶಕ್ಕೆ ಮರಳುತ್ತಾನೆ ಗಾಮ.
          ಈತ ಎರಡನೇ ಬಾರಿ ೨೦ ಸುಸಜ್ಜಿತ ಯುದ್ಧನೌಕೆಗಳೊಡನೆ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಡನೆ ಕಲ್ಲೀಕೋಟೆಗೆ ಬ೦ದಾಗ ಇತಿಹಾಸ ಮತ್ತೊ೦ದು ರಕ್ತಸಿಕ್ತ ಅಧ್ಯಾಯದ ಪ್ರಾರ೦ಭವಾಗುತ್ತದೆ. ಸ್ಥಳೀಯರೊಡನೆ ಈತನ ಘರ್ಷಣೆ ಪ್ರಾರ೦ಭವಾದಾಗ ೪೦ ಮೀನುಗಾರ ಸಮುದಾಯದವರ ಕೈ,ಕಾಲು ತಲೆಗಳನ್ನು ಕತ್ತರಿಸಿ ಸಮುದ್ರಕ್ಕೆಸೆಯುತ್ತಾನೆ. ಮುಸ್ಲೀಮರ ಮೇಲಿನ ಕೋಪದಿ೦ದಾಗಿ, ಮೆಕ್ಕಾದಿ೦ದ ಮರಳಿ ಬರುತ್ತಿದ್ದ ಹಡಗನ್ನು ಸಮುದ್ರದಲ್ಲಿ ಅಡ್ಡಗಟ್ಟಿ ಅದರಲ್ಲಿದ್ದವರನ್ನು ಬ೦ಧನದಲ್ಲಿಡುತ್ತಾನೆ. ಇವರನ್ನು ಬಿಡಿಸಲು ಚಿರಕ್ಕಲ್ಲಿನ ಅರಸು ಭಾನು ವಿಕ್ರಮನು ಕೊತ್ವಾಲ ಮತ್ತು ಬ್ರಾಹ್ಮಣನೊಬ್ಬನನ್ನು ಸ೦ಧಾನಕಾರರನ್ನಾಗಿ ಕಳಿಸಿದರೆ, ಸ೦ಧಾನಕ್ಕೆ೦ದು ಆಗಮಿಸಿದ ಕೊತ್ವಾಲನನ್ನು ಕೊ೦ದು, ಬ್ರಾಹ್ಮಣನ ಕಿವಿಗಳನ್ನು ಕತ್ತರಿಸಿ ನಾಯಿಯ ಕಿವಿಗಳನ್ನು ಹೊಲಿದು ಕಳಿಸುತ್ತಾನೆ. ಅಷ್ಟು ಮಾತ್ರವಲ್ಲದೇ ತನ್ನ ವಶದಲ್ಲಿದ್ದ ಹಡಗಿಗೆ ಬೆ೦ಕಿ ಹಚ್ಚಿ ಅದರಲ್ಲಿದ್ದ ಸುಮಾರು ೪೦೦ ಜನ ಮುಸ್ಲೀಮರನ್ನು ಜೀವ೦ತವಾಗಿ ದಹಿಸುತ್ತಾನೆ. ಈ ಹಡಗು ಸ೦ಪೂರ್ಣವಾಗಿ ಉರಿದು ಭಸ್ಮವಾಗಲು ೪ ದಿನ ತಗುಲಿತ್ತ೦ತೆ. ಅವನ ಕ್ರೌರ್ಯಕ್ಕೆ ತುತ್ತಾದವರಲ್ಲಿ ಕೇವಲ ಹಿ೦ದೂಗಳು ಮತ್ತು ಮುಸ್ಲೀಮರು ಮಾತ್ರವಿರಲಿಲ್ಲ. ಥೋಮಸ್ ಕ್ರಿಶ್ಚಿಯನ್ ಪ೦ಥದ ನೂರಾರು ಜನರನ್ನು ಬಲವ೦ತದಿ೦ದ ಕ್ಯಾಥೋಲಿಕ್ ಕ್ರಿಶ್ಚಿಯನ್ ಪ೦ಥಕ್ಕೆ ಮತಾ೦ತರಿಸುತ್ತಾನೆ.
       
 ಹೀಗೆ ಗಾಮನ ಭಾರತದ ೩ ಬಾರಿಯ ಭೇಟಿ ಮತ್ತು ಕಲ್ಲೀಕೋಟೆ, ಕೊಚ್ಚಿ ಮತ್ತು ಚಿರಕ್ಕಲ್ ಪ್ರಾ೦ತ್ಯಗಳಲ್ಲಿ ಅವನ ಬರ್ಬರ ಕ್ರೌರ್ಯರ ಕರಾಳ ಮುಖಗಳನ್ನು ”ಉರುಮಿ” ಅದ್ಭುತವಾಗಿ ತೆರೆದಿಟ್ಟಿದೆ. ”ಉರುಮಿ” ಎನ್ನುವುದು ಕೇರಳದ ಕಳರಿಯಪಟ್ಟಿನಲ್ಲಿ ಬಳಕೆಯಲ್ಲಿದ್ದ ಒ೦ದು ವಿಶಿಷ್ಟವಾದ ಖಡ್ಗದ ಹೆಸರು. ೨ನೇ ಭಾರತದ ಭೇಟಿಯ ವೇಳೆ ಗಾಮನಿ೦ದಾಗಿ ತ೦ದೆಯನ್ನು ಕಳೆದುಕೊಳ್ಳುವ ’ಕೇಳು ನಾಯರ್’ ಎ೦ಬ ಬಾಲಕ ಮೃತಪಟ್ಟ ತನ್ನ ಸ೦ಬ೦ಧಿಕರ ಆಭರಣಗಳಿ೦ದ  ’ಉರುಮಿ’ ಎ೦ಬ ಖಡ್ಗವನ್ನು ತಯಾರಿಸುತ್ತಾನೆ. ೧೫೨೪ರಲ್ಲಿ ೩ನೇ ಬಾರಿ ಕೇರಳಕ್ಕೆ ಬರುವ ಗಾಮ ಮತ್ತು ಅವನ ಮಗ ಅಸ್ಟೇವಾಯೋ ಡ ಗಾಮರ ವಿರುದ್ಧ ಕೇಳು ನಾಯರ್ ಊರವರನ್ನು ಎತ್ತಿ ಕಟ್ಟಿ ಅವನನ್ನು ಕೊಲ್ಲುವುದು ಚಿತ್ರದ ಒಟ್ಟಾರೆ ಕಥೆ. ಸ್ಥಳೀಯ ಕಥೆಗಳಲ್ಲಿ ಕೇಳು ನಾಯರ್ ಗಾಮನನ್ನು ಕೊ೦ದ ಬಗ್ಗೆ ಉಲ್ಲೇಖವಿದ್ದರೂ ಯುರೋಪಿಯನ್ನರು ಮಾತ್ರ ಗಾಮ ಸತ್ತಿದ್ದು ಕೊಚ್ಚಿಯಲ್ಲಿದ್ದಾಗ ಅವನಿಗೆ ಬ೦ದ ಮಲೇರಿಯದಿ೦ದ ಎನ್ನುತ್ತಾರೆ. ಅದೇನೇ ಇದ್ದರೂ ಇ೦ಥದ್ದೊ೦ದು ಅದ್ಭುತ ಚಿತ್ರವನ್ನು ನೀಡಿದ ಸ೦ತೋಷ್ ಸಿವನ್-ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

          ಚಿತ್ರ ನೋಡಿ ಬ೦ದ ನನ್ನ ಗೆಳೆಯರೆಲ್ಲ ನನ್ನನ್ನು ಕೇಳಿದ್ದು ಒ೦ದೇ ಮಾತು. ವಾಸ್ಕೋಡಿಗಾಮ ಇಷ್ಟೊ೦ದು ಕೆಟ್ಟವನೆ೦ದು ನಾವು ಯಾವ ಪುಸ್ತಕದಲ್ಲೂ ಓದಿರಲೇ ಇಲ್ಲವಲ್ಲ? ಈ ಪ್ರಶ್ನೆಗೆ ಮಾತ್ರ ನನ್ನಲ್ಲಿ ಉತ್ತರವಿರಲಿಲ್ಲ. ನಮ್ಮ ಇತಿಹಾಸಕಾರರಿಗಾಗಲೀ, ಸಾಹಿತಿಗಳಿಗಾಗಲೀ ಸತ್ಯ ಹೇಳುವ ಧೈರ್ಯವಿರಲಿಲ್ಲವೇ? ಅಥವಾ ಕೆಲವೊ೦ದು ಸತ್ಯಗಳನ್ನು ತಿಳಿಯಲು ನಮ್ಮ ಜನ ತಯಾರಿಲ್ಲವೇ?

ಬುಧವಾರ, ಆಗಸ್ಟ್ 10, 2011

ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ ?

by PRATAP SIMHA, 
07.08.2011


ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ ?


ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ.
ಆದರೆ…
ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ ಚಿಂತನೆ ಆರೆಸ್ಸೆಸ್ ನ ಹೆಗ್ಗುರುತು. ಮಹಾತ್ಮ ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಎನ್ನುವ ಕೆಟ್ಟ ಪ್ರಚಾರಾಂದೋಲನ ಮೊದಲು ನಿಲ್ಲಬೇಕು. ಯಾವುದೋ ಒಂದು ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ವ್ಯಕ್ತಿ ಎಸಗಿದ ಕೃತ್ಯಕ್ಕೆ ಸಂಘಟನೆಯನ್ನೇ ದೂರುವುದು ಸರಿಯಲ್ಲ. ಆರೆಸ್ಸೆಸ್ಸನ್ನು ನ್ಯಾಯಾಲಯವೇ ನಿರ್ದೋಷಿಯೆಂದು ತೀರ್ಪಿತ್ತಿದೆ. ಮಿಗಿಲಾಗಿ ಇಡೀ ಸಿಖ್ ಸಮುದಾಯವೇ ಇಂದಿರಾ ಗಾಂಧಿ ಹತ್ಯೆಗೆ ಕಾರಣ ಎನ್ನಲು ಸಾಧ್ಯವೆ? ಆರೆಸ್ಸೆಸ್ ಅಲ್ಪಸಂಖ್ಯಾತ ವಿರೋಧಿ ಎಂಬ ಪ್ರಚಾರಾಂದೋಲನ ಕೂಡ ಆಧಾರರಹಿತ. ನಾನು ಆರೆಸ್ಸೆಸ್್ನ ದೊಡ್ಡ ಅಭಿಮಾನಿ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಏಕಮಾತ್ರ ರಾಜಕೀಯೇತರ ಸಂಘಟನೆ ಆರೆಸ್ಸೆಸ್. ನಮ್ಮ ಮೂಲಭೂತ ಹಕ್ಕುಗಳನ್ನು ಮರಳಿ ಗಳಿಸಿಕೊಡುವುದಕ್ಕಾಗಿ ಹಲವು ಜೀವಗಳನ್ನೇ ಬಲಿಕೊಟ್ಟ ಆರೆಸ್ಸೆಸ್ ಗೆ ನಾವೆಲ್ಲ ಆಭಾರಿಯಾಗಿರಬೇಕು…….”
ಮೊನ್ನೆ ಆಗಸ್ಟ್ 1ರಂದು ಕೊಚ್ಚಿಯಲ್ಲಿ ನಡೆದ ಸಮಾರಂಭವೊಂದನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್್ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಈ ರೀತಿ ಹೇಳುತ್ತಿದ್ದರೆ ನೆರೆದವರು ನಿಬ್ಬೆರಗಾಗಿ ನೋಡುತ್ತಿದ್ದರು!
ತುರ್ತು ಪರಿಸ್ಥಿತಿಯೊಂದೇ ಅಲ್ಲ. ಭಾರತ-ಪಾಕಿಸ್ತಾನ, ಭಾರತ-ಚೀನಾ ಯುದ್ಧಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಿದ ಸಂಘಟನೆ ಅದು. ಯಾವ ಪ್ರಧಾನಿ ನೆಹರು ಗಾಂಧೀ ಹತ್ಯೆ ನೆಪದಲ್ಲಿ ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರೋ ಅದೇ ನೆಹರು ಚೀನಾ ಯುದ್ಧದ ತರುವಾಯ ಗಣರಾಜ್ಯೋತ್ಸವ ದಿನದ ಪರೇಡ್ ಗೆ ಆರೆಸ್ಸೆಸ್ ಗೆ ಆಹ್ವಾನ ನೀಡಿದ್ದರು. ಇಂದಿಗೂ ಬರ, ನೆರೆ, ಪ್ರವಾಹ, ಪ್ರಕೋಪ, ವಿಕೋಪ, ಭೂಕಂಪ, ದುರ್ಘಟನೆ ಯಾವುದೇ ಅನಾಹುತಗಳು ಸಂಭವಿಸಿದರೂ ಮೊದಲಿಗೆ ಧಾವಿಸುವುದು ಆರೆಸ್ಸೆಸ್, ನಂತರ ಆಗಮಿಸುತ್ತದೆ ನಮ್ಮ ಸರ್ಕಾರಿ ಆಡಳಿತ ಯಂತ್ರ. ಇಷ್ಟಾಗಿಯೂ ಬಹಳಷ್ಟು ಜನ ಆರೆಸ್ಸೆಸ್ ಶಾಖೆಗೂ ಮದ್ರಸಾಗಳಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಭಾವಿಸಿದ್ದಾರೆ, ಮಾಧ್ಯಮಗಳ ಒಂದು ವರ್ಗವೂ ಅದೇ ತೆರನಾದ ಪ್ರಚಾರಾಂದೋಲನ ಮಾಡುತ್ತದೆ, ಅನುಮಾನಗಳನ್ನು ಹೋಗಲಾಡಿಸುವ ಬದಲು ಹುಸಿ ವರದಿಗಳ ಮೂಲಕ ಅನುಮಾನಕ್ಕೆ ಇನ್ನಷ್ಟು ಆತಂಕಗಳ ಭಾರವನ್ನು ಹೊರಿಸುತ್ತವೆ. ಹಾಗಂತ ಆರೆಸ್ಸೆಸ್ ಬಗ್ಗೆ ಇರುವ ಅನುಮಾನಗಳು ನಿಜವಾಗಿ ಬಿಡುತ್ತವೆಯೇ? ಮದ್ರಸಾಗಳಿಗೂ, ಶಾಖೆಗಳಿಗೂ ವ್ಯತ್ಯಾಸವಿಲ್ಲವೆ? ಇಷ್ಟಕ್ಕೂ ಶಾಖೆಗಳಲ್ಲಿ ಹೇಳಿಕೊಡುವುದಾದರೂ ಏನನ್ನು? ತಥಾಕಥಿತ ವಿರೋಧಿಗಳು ಎಂದಾದರೂ ಶಾಖೆಗೆ ಹೋಗಿ ಸತ್ಯಾಸತ್ಯವನ್ನು ಪರೀಕ್ಷಿಸಿ ನೋಡಿದ್ದಾರೆಯೇ? ಆರೆಸ್ಸೆಸ್ ಕಚೇರಿಗಳಿಗೆ ಹೋಗಿ, ಅಲ್ಲಿರುವ ಗ್ರಂಥಾಲಯದ ಕಪಾಟುಗಳನ್ನು ತಡಕಾಡಿದರೆ ಏನು ಸಿಗಬಹುದು ಅಂದುಕೊಂಡಿರಿ?

ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಶಿವಾಜಿ ಮಹಾರಾಜ, ಚಂದ್ರಶೇಖರ ಆಝಾದ್, ಆಲ್ಫಾಕುಲ್ಲಾ ಖಾನ್ ಇಂತಹ ಅಪ್ರತಿಮ ಶೂರರ ಶೌರ್ಯ, ಸಾಹಸ, ಹೋರಾಟ, ತ್ಯಾಗ, ಬಲಿದಾನಗಳನ್ನು ಹೇಳುವ ಪುಸ್ತಕಗಳು ಸಿಗುತ್ತವೆಯೇ ಹೊರತು ಬಾಂಬ್್ಗಳಲ್ಲ. ಆರೆಸ್ಸೆಸ್ ನ ಶಾಖೆಗಳಲ್ಲಿ ಹೇಳಿಕೊಡುವುದೂ ಇಂತಹ ವೀರರ ಕಥೆಗಳನ್ನೇ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಇಂತಹ ಕ್ರಾಂತಿಕಾರಿಗಳನ್ನು NCERT ಪುಸ್ತಕಗಳಲ್ಲಿ  “ಭಯೋತ್ಪಾದಕ “ರೆಂದು ಚಿತ್ರಿಸಿರುವ ಕಾಂಗ್ರೆಸ್ಸಿಗರಿಂದ ಆರೆಸ್ಸೆಸ್ ಬಗ್ಗೆ ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವೇ? ಕಳೆದ ವಾರ ಸಿಎನ್ ಎನ್-ಐಬಿಎನ್ ಚಾನೆಲ್ ನ  “ಡೆವಿಲ್ಸ್ ಅಡ್ವೊಕೇಟ್  ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್  “ಆರೆಸ್ಸೆಸ್ ಒಂದು ಬಾಂಬ್ ತಯಾರಿಸುವ ಕಾರ್ಖಾನೆ ” ಎಂದಿದ್ದಾರೆ! 2008ರಲ್ಲಿ ಮುಂಬೈ ಮೇಲೆ ದಾಳಿಯಾದಾಗಲೂ ಹಿಂದು ಭಯೋತ್ಪಾದಕರ ಕೈವಾಡವಿರಬಹುದು ಎಂದಿದ್ದ ಆಗಿನ ಕೇಂದ್ರ ಸಚಿವ ಎ.ಆರ್. ಅಂಟುಳೆ ಆರೆಸ್ಸೆಸ್ ನತ್ತ ಬೆರಳು ತೋರಿದ್ದರು. ಅದರ ಬೆನ್ನಲ್ಲೇ ತಮ್ಮ ಆಚಾರವಿಲ್ಲದ ನಾಲಗೆಯನ್ನು ಹೊರ ಹಾಕಿದ್ದ ದಿಗ್ವಿಜಯ್ ಸಿಂಗ್,  “ಮುಂಬೈ ದಾಳಿಯಲ್ಲಿ ಮಡಿದ ಹೇಮಂತ್ ಕರ್ಕರೆ ದಾಳಿಗಿಂತ 2 ಗಂಟೆ ಮೊದಲು ನನಗೆ ಕರೆ ಮಾಡಿ, ಹಿಂದು ಕಟ್ಟರ್ ವಾದಿಗಳಿಂದ ನನಗೆ ಜೀವ ಬೆದರಿಕೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು ” ಎನ್ನುವ ಮೂಲಕ ಮತ್ತೆ ಆರೆಸ್ಸೆಸ್-ವಿಶ್ವ ಹಿಂದು ಪರಿಷತ್ ಬಗ್ಗೆಯೇ ಸಲ್ಲದ ಟೀಕೆ ಮಾಡಿದ್ದರು. ಮೊನ್ನೆ ಜುಲೈ 13ರಂದು ಕಸಬ್ ಜನ್ಮದಿನದ ಕೊಡುಗೆ ರೂಪದಲ್ಲಿ ಮತ್ತೆ ಮುಂಬೈ ಮೇಲೆ ಆಕ್ರಮಣವಾದಾಗಲೂ ದಿಗ್ವಿಜಯ್ ಆರೆಸ್ಸೆಸ್ ನ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ನನ್ನ ಬಳಿ ಸಾಕ್ಷ್ಯಾಧಾರವಿದೆ ಎಂದೂ ಪ್ರತಿಪಾದಿಸಿದರು. ಈತ ಎಂತಹ ಹರುಕುಬಾಯಿಯ ವ್ಯಕ್ತಿ ಎಂಬುದು ಇಡೀ ದೇಶಕ್ಕೇ ಗೊತ್ತಾಗಿದೆ. ಟ್ವಿಟ್ಟರ್ ನಲ್ಲಿ  “ಡಿಗ್ಗಿಲೀಕ್ಸ್  ” ಎಂಬ ಒಂದು ಥ್ರೆಡ್ ಇದ್ದರೆ, ಫೇಸ್ ಬುಕ್, ಆರ್ಕುಟ್ ಗಳಲ್ಲಿ ನಾಯಿಯ ಮುಸುಡಿಗೆ ಇವರ ಮುಖ ಅಂಟಿಸಿ,  “DOGvijay “  ಎಂದೇ ಸಂಬೋಧಿಸಲಾಗುತ್ತಿದೆ! ಹಾಗಿದ್ದರೂ ಮಾಧ್ಯಮಗಳೇಕೆ ಇಂತಹ ಮತಿಗೇಡಿ ಮನುಷ್ಯನ ಮಾತಿಗೆ ಸಲ್ಲದ ಪ್ರಚಾರ ಕೊಟ್ಟು ಆರೆಸ್ಸೆಸ್ಸನ್ನು ಪದೇ ಪದೆ ಕಟಕಟೆಗೆ ತಂದು ನಿಲ್ಲಿಸಲು, ಸಮಜಾಯಿಸಿ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಲು ಪ್ರಯತ್ನಿಸುತ್ತವೆ? ಪಾಕಿಸ್ತಾನದ ಅಬೋಟಾಬಾದ್್ನಲ್ಲಿ ಅಡಗಿದ್ದ ಒಸಾಮ ಬಿನ್ ಲಾಡೆನ್ ನನ್ನು ಕಳೆದ ಮೇ 2ರಂದು ಅಮೆರಿಕ ಪತ್ತೆಹಚ್ಚಿ ಕೊಂದಾಗ,  “ಒಸಾಮಾಜಿ ” ಎಂದು ಸಂಬೋಧಿಸಿದ್ದ ಈ ವ್ಯಕ್ತಿಯ ಯೋಗ್ಯತೆ ಏನೆಂದು ಗೊತ್ತಾಗಿಲ್ಲವೇ? ಆತನ ಮಾತಿಗೆ ಎಷ್ಟು ಬೆಲೆ ಕೊಡಬೇಕೆಂಬುದು ತಿಳಿದಿಲ್ಲವೆ? ಏಕೆ ಆರೆಸ್ಸೆಸ್ಸನ್ನು ಹಳಿಸಲು ಇಂತಹ ಅಯೋಗ್ಯ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಾರೆ?
ಅದಿರಲಿ, ಕಳೆದ ಎಂಟೂವರೆ ದಶಕಗಳಿಂದ ರಾಷ್ಟ್ರಚಿಂತನೆಯ ಪ್ರಸಾರದಲ್ಲಿ, ರಾಷ್ಟ್ರಭಕ್ತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆರೆಸ್ಸೆಸ್್ನಲ್ಲಾಗಲಿ, ಅದಕ್ಕೆ ಹೊಂದಿಕೊಂಡಿರುವ ವಿಶ್ವ ಹಿಂದು ಪರಿಷತ್್ನಲ್ಲಾಗಲಿ ಅಸೀಮಾನಂದ, ಪ್ರಗ್ಯಾಸಿಂಗ್, ಇಂದ್ರೇಶ್ ಕುಮಾರ್ ಮುಂತಾದ ಕೋಪಾಗ್ನಿಗಳು ಏಕೆ ಸೃಷ್ಟಿಯಾದವು? ಈ ಬಗ್ಗೆ ದಿಗ್ವಿಜಯ್ ಸಿಂಗ್ ಅವರು ಹಾಗೂ ಅವರ ಮಾಧ್ಯಮ ಮಿತ್ರರು ಒಸಾಮನ ವಂಶಸ್ಥರನ್ನೇ ಪ್ರಶ್ನಿಸಬಹುದಲ್ಲವೆ? 900 ವರ್ಷಗಳ ಮುಸ್ಲಿಂ ಆಕ್ರಮಣಕಾರರ ದೌರ್ಜನ್ಯ, 150 ವರ್ಷಗಳ ಬ್ರಿಟಿಷ್ ದೌರ್ಜನ್ಯವನ್ನೇ ಸಹಿಸಿಕೊಂಡಿದ್ದ ಹಿಂದುಗಳಲ್ಲಿ ಈಗೇಕೆ ಕೋಪಾಗ್ನಿ ಸ್ಫೋಟಗೊಳ್ಳುತ್ತಿದೆ? ಮಾಲೆಗಾಂವ್ ಸ್ಫೋಟ, ಅಜ್ಮೇರ್ ದುರಂತಗಳು ಏಕೆ ಸಂಭವಿಸಿದವು? ಮುಸ್ಲಿಮರು ಭಯೋತ್ಪಾದನೆಯತ್ತ ಆಕರ್ಷಿತಗೊಳ್ಳಲು ಅನಕ್ಷರತೆ, ನಿರುದ್ಯೋಗ, ಹಿಂದು ಕೋಮುವಾದ ಹೀಗೆ ಕಾರಣ ಹುಡುಕುತ್ತಾರಲ್ಲಾ ಹಿಂದುಗಳ ಪ್ರತಿದಾಳಿಗೆ ಎಡೆಮಾಡಿಕೊಟ್ಟಿರುವ ಕಾರಣವನ್ನೂ ಹುಡುಕಬಹುದಲ್ಲವೆ? ಇನ್ನು ಎಷ್ಟು ವರ್ಷ ಅಂತ ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಹಿಸಿಕೊಳ್ಳಬೇಕು? ಸುಮ್ಮನೆ ಕುಳಿತರೆ ಯಾವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಕಾಶ್ಮೀರಿ ಪಂಡಿತರ ಉದಾಹರಣೆ ಕಣ್ಣಮುಂದಿಲ್ಲವೆ? ಇಸ್ಲಾಮಿಕ್ ಭಯೋತ್ಪಾದನೆಯನ್ನು ನಮ್ಮ ಸರ್ಕಾರವೇ ತಹಬಂದಿಗೆ ತರುವ ದಾಢಸಿತನ ತೋರಿದ್ದರೆ ಹಿಂದುಗಳ ಆಕ್ರೋಶಕ್ಕೆ ಕಾರಣವೇ ಇರುತ್ತಿರಲಿಲ್ಲ, ಅಲ್ಲವೆ?
1947ರಲ್ಲಿ ದೇಶ ವಿಭಜನೆಯಾದಾಗ ಪೂರ್ವಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) 30 ಪರ್ಸೆಂಟ್ ಇದ್ದ ಹಿಂದುಗಳ ಸಂಖ್ಯೆ ಈಗ ಎಷ್ಟಿದೆ? 1991ರ ಬಾಂಗ್ಲಾ ಜನಗಣತಿಯ ಪ್ರಕಾರ ಹಿಂದುಗಳ ಸಂಖ್ಯೆ 10.5 ಪರ್ಸೆಂಟ್! ಇವತ್ತು ಆ ಪ್ರಮಾಣ 5 ಪರ್ಸೆಂಟ್್ಗಿಂತಲೂ ಕೆಳಗಿಳಿದಿದೆ. ಇದಕ್ಕೆ ಯಾರು ಕಾರಣ? ಇದುವರೆಗೂ 2 ಕೋಟಿ ಬಾಂಗ್ಲಾ ಹಿಂದುಗಳು ಕಣ್ಮರೆಯಾಗಿದ್ದಾರೆ. ಒಂದೋ ಅವರು ಬಲವಂತವಾಗಿ ಮತಾಂತರಗೊಂಡಿದ್ದಾರೆ, ಇಲ್ಲವೆ ಮಸಣ ಸೇರಿದ್ದಾರೆ. ಈ ಮಧ್ಯೆ ನಮ್ಮ ಪಶ್ಚಿಮ ಬಂಗಾಳದಲ್ಲಿ 1947ರಲ್ಲಿ ಶೇ 12ರಷ್ಟಿದ್ದ ಮುಸ್ಲಿಮರ ಸಂಖ್ಯೆ ಇವತ್ತು 26 ಪರ್ಸೆಂಟ್ ದಾಟಿದೆ! ಅದು ಸಾಲದೆಂಬಂತೆ ದೀಪಾವಳಿಯ ಮುನ್ನಾದಿನ ರಾಜಧಾನಿ ದಿಲ್ಲಿಯಲ್ಲಿ ಹಬ್ಬದ ಖರೀದಿಯಲ್ಲಿ ತೊಡಗಿದ್ದ 65 ಹಿಂದೂಗಳನ್ನು ಬಾಂಬ್ ಸ್ಫೋಟಿಸಿ ಕೊಂದರು, ಅಕ್ಷರಧಾಮದ ಮೇಲೆ ಆಕ್ರಮಣ ಮಾಡಿದರು. ಇಂತಹ ಘಟನೆಗಳನ್ನು ಹಿಂದುಗಳು ಎಷ್ಟು ದಿನ ಅಂತ ಸಹಿಸಿಕೊಂಡು ಕುಳಿತುಕೊಳ್ಳಬೇಕು? ಹಿಂದುಗಳು ಬಂದೂಕು ಎತ್ತುವಂತೆ, ಬಾಂಬಿಡುವಂತೆ ಮಾಡಿದವರಾರು? ಆತ್ಮರಕ್ಷಣೆಗಾಗಿ ಬಾಂಬ್ ಮೂಲಕವೇ ಪ್ರತ್ಯುತ್ತರ ನೀಡಲು ಹೊರಟರೆ ಅದನ್ನು ಹೇಗೆ ಭಯೋತ್ಪಾದನೆ ಎನ್ನಲು ಸಾಧ್ಯ? 1972ರ ಮ್ಯೂನಿಕ್ ಒಲಿಂಪಿಕ್ಸ್ ವೇಳೆ ಇಸ್ರೇಲಿ ಕ್ರೀಡಾ ತಂಡವನ್ನು ಒತ್ತೆಯಾಗಿ ತೆಗೆದುಕೊಂಡು ಕಗ್ಗೊಲೆಗೈದ ಇಸ್ಲಾಮಿಕ್ ಭಯೋತ್ಪಾದಕರು ಹಾಗೂ ಅವರಿಗೆ ಬೆಂಬಲ ಕೊಟ್ಟವರನ್ನು ಇಸ್ರೇಲ್ ಹೆಕ್ಕಿ ಕೊಲ್ಲಲಿಲ್ಲವೆ? 9/11 ದಾಳಿಗೆ ಪ್ರತಿಯಾಗಿ ಅಮೆರಿಕ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಲಿಲ್ಲವೆ? ಒಸಾಮನನ್ನು ಬೆನ್ನಟ್ಟಿ ಹೋಗಿ ಕುಕ್ಕಿ ಸಾಯಿಸಲಿಲ್ಲವೆ? ಪಾಕಿಸ್ತಾನದ ಪರಮಮಿತ್ರ ಚೀನಾವೇ ತನ್ನ ನೆಲದಲ್ಲಿ ತಲೆಯೆತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಗೆ ಮೊನ್ನೆ ಪಾಕಿಸ್ತಾನವನ್ನು ದೂರಿಲ್ಲವೆ? ಸ್ಥಳೀಯರ ಸಹಾಯವಿಲ್ಲದೆ ಮುಂಬೈನಂಥ ದಾಳಿಯನ್ನು, ಹೈದರಾಬಾದ್್ನ ಲುಂಬಿನಿ ಗಾರ್ಡನ್, ದಿಲ್ಲಿ, ಪುಣೆಯ ಜರ್ಮನ್ ಬೇಕರಿ ಸ್ಫೋಟಗಳಂಥ ದಾಳಿಗಳನ್ನು ಮಾಡಲು ಸಾಧ್ಯವಿತ್ತೆ? ಅಸೀಮಾನಂದ, ಪ್ರಗ್ಯಾಸಿಂಗ್್ರಂಥವರು ಇಂತಹ ದಾಳಿಗಳಿಂದ ಸೃಷ್ಟಿಯಾದ ಪ್ರತ್ಯಾಸ್ತ್ರಗಳೆನಿಸುವುದಿಲ್ಲವಾ?
ಈ ದೇಶ ಇಬ್ಭಾಗವಾಗಲು ಕಾರಣವಾದ ಮುಸ್ಲಿಂ ಲೀಗ್ ನ ಹೆಸರನ್ನಿಟ್ಟುಕೊಂಡಿರುವವರ ಜತೆ ಸೇರಿ ಕೇರಳದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ಸಿಗರಿಗೆ ಆರೆಸ್ಸೆಸ್ ಎಂಥ ರಾಷ್ಟ್ರವಾದಿ ಸಂಘಟನೆ, ಹಿಂದುಗಳ ಆತಂಕಗಳೇನು ಎಂಬುದು ಹೇಗೆ ತಾನೇ ಅರ್ಥವಾದೀತು?

ಮಂಗಳವಾರ, ಆಗಸ್ಟ್ 9, 2011

ಕಾಂಗ್ರೆಸ್ಸ್ ಮತ್ತು ದೇವರುಯುಪಿಎ ಒಕ್ಕೂಟದ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆದ ಶ್ರೀಮತಿ ಸೋನಿಯ ಗಾಂಧಿ ಸರ್ವೈಕಲ್ ಕ್ಯಾನ್ಸರ್ ನಿಂದ ಬಳಲುತಿದ್ದು ಅಮೆರಿಕದ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದು. ಅವರು ಬೇಗ ಗುಣಮುಖರಾಗಲಿ ಎಂದು ದೇಶದ ಬಹುತೇಕ ಜನರು ದೇವರಲ್ಲಿ ಪ್ರಾರ್ಥಿಸುತಿದ್ದಾರೆ. ನಾವು ಸಹ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇವೆ.
ಇಂದು ಮತ್ತು ಮೊನ್ನೆಯ ಕೆಲ ಮುಖ್ಯ ಘಟನೆಗಳನ್ನು ನಾನು ಇಲ್ಲಿ ಪ್ರಸ್ತಾಪಿಸಬೇಕೆಂದಿದ್ದೇನೆ.

ಬಳ್ಳಾರಿಯಲ್ಲಿ ಪ್ರತಿಪಕ್ಷದ ಮುಖಂಡರಾದ ಶ್ರೀ ಸಿದ್ದರಾಮಯ್ಯ ನವರು ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ೧೦೧ ತೆಂಗಿನಕಾಯಿ ಹೊಡೆದು ಮೇಡಂ ಬೇಗ ಗುಣಮುಖರಾಗಲಿ ಎಂದು ಪೂಜೆ ಸಲ್ಲಿಸಿದರು.

ಶ್ರೀ ರಂಗಪಟ್ಟಣದ ಗಂಜಾಂ ನಲ್ಲಿ ಕುಟುಂಬ ಸಮೇತರಾಗಿ ಶ್ರೀ ಆರ್.ವಿ.ದೇಶಪಾಂಡೆ ಸಾಹೇಬರು ಶ್ರೀ ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿ ಹೋಮ ಹವನ ಮಾಡಿದರು.

ನಿನ್ನೆ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಉರುಳು ಸೇವೆ ಕಾರ್ಯಕ್ರಮ ನಡೆಸಿದರು.
ಮೊನ್ನೆ ಮಂಗಳೂರಿನಲ್ಲಿ ಶ್ರೀ ಜನಾರ್ಧನ ಪೂಜಾರಿ ಉರುಳು ಸೇವೆ ಸಲ್ಲಿಸಿದರು.

ಮತ್ತು ನಿನ್ನೆ ನಡೆದ ಒಂದು ಸಭೆ ಯಲ್ಲಿ ಭಾಷಣ ಮಾಡುತಿದ್ದ ಶ್ರೀಮತಿ ಮೋಟಮ್ಮನವರು ಗದ್ಗದಿತರಾಗಿ ಕಣ್ಣೀರಿಟ್ಟರು.


ಆಶ್ಚರ್ಯದ ಸಂಗತಿ ಎಂದರೆ, ಕೈ ಪಕ್ಷದ ಮುಖಂಡರುಗಳಿಗೆ ಹಿಂದು ಮತ್ತು ದೇವರುಗಳು ಅಂದರೆ ಅಲರ್ಜಿ, ಅದರಲ್ಲಿ ಬಿಜೆಪಿ ಮುಖಂಡರುಗಳು ಬಹಿರಂಗ ವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದರೆ ಇವರೆಲ್ಲ ಆಡದ ಮಾತುಗಳಿಲ್ಲ ಮಾಡದ ಟೀಕೆ ಗಳಿಲ್ಲ. ಅದರಲ್ಲೂ ಪ್ರಗತಿಪರ, ಚಿಂತಕರು, ಜಾತ್ಯಾತೀತವಾದಿ ಮುಖಂಡರು ಗಳು ಕೊಡದ ಹೇಳಿಗೆ ಗಳಿಲ್ಲ.

ಇರಲಿ ಬಿಡಿ ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಮುಖಂಡರುಗಳು ಹಿಂದೆ ಆಡಿದ ಮಾತುಗಳು, ಇವರೇ ಮಾಡಿದ ಟೀಕೆಗಳು, ಜಾತ್ಯಾತೀತ ನಿಲುವುಗಳು ಮತ್ತು ಅವರ ಪಕ್ಷದ ಹಿಂದೂ ವಿರೋಧಿ ಸಿದ್ಧಾಂತ ಇವೆಲ್ಲ ಏನು? ಅವರ ನಂಬಿಕೊಂಡ ಮತದಾರರುಗಳಿಗೆ ಕೊಡುವ ಸಂದೇಶ ಏನು? ಅಂದರೆ ಇವರ ನಿಲುವು ಗಳು ಎಲ್ಲ ಸಮಯಸಾಧಕತನವೇ? ಎಲ್ಲ ಡೋಂಗಿ ಸಿದ್ಧಾಂತವೇ? ಕೆಲವರನ್ನು ಮೆಚ್ಚಿಸಲು ಮಾಡುವ ಸೋಗಲಾಡಿತನವೇ?
ಸಮಯಸಂಧರ್ಭಕ್ಕೆ ತಕ್ಕಂತೆ ನಡೆದು ಕೊಳ್ಳುವ ಇವರ ನಡೆ ಏನನ್ನು ಸೂಚಿಸುತ್ತೆ?
ವಿಧಾನಸೌಧ ಮುಖ್ಯಮಂತ್ರಿಯವರ ಕೊಠಡಿ ವಾಸ್ತು ಪ್ರಕಾರ ಬದಲಾಯಿಸಿ ಕೊಂಡರೆ ಅದಕ್ಕೆ ಟೀಕೆ,
ಮುಖ್ಯಮಂತ್ರಿ ಮತ್ತು ಮಂತ್ರಿ ಗಳು ದೇವಸ್ಥಾನ ಗಳಿಗೆ ತೆರಳಿದರೆ ಅದಕ್ಕೂ ಸಹ ಟೀಕೆ,
ಹೋಮ ಹವನ ಕಾರ್ಯಕ್ರಮ ಮಾಡಿದರೆ ಅದಕ್ಕೆ ಟೀಕೆ,
ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವ ಕಾರ್ಯಕ್ಕೆ ಟೀಕೆ,
ಕಾಲೇಜು ವಿಧ್ಯಾರ್ಥಿಗಳಿಗೆ ದೇಶಭಕ್ತಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರೆ ಟೀಕೆ,
ಕೆಲ ವಿಚಾರ ವಾದಿಗಳು ಎಂತೆಂಥ ಹೇಳಿಕೆ ಗಳನ್ನು ಕೊಟ್ಟರು ಎಂದು ಜ್ನಾಪಿಸಿಕೊಳ್ಳಿ, ಶ್ರೀ ಸಾಯಿಬಾಬ ರವರ ಮರಣಕ್ಕೂ ಮುಂಚೆ, ಹಲವಾರು ಕಾಯಿಲೆಗಳಿಂದ ನರಳುತ್ತಿರುವ ತನ್ನನ್ನು ತಾನು ಗುಣಪಡಿಸಿಕೊಳ್ಳದ ಈ ಡೋಂಗೀ ಬಾಬ ಭಕ್ತರನ್ನು ಕಾಪಾಡುತ್ತಾನೆಯೆ? ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನದೊಳಗೆ ನೆರೆ ನೀರು ನುಗ್ಗಿದಾಗ, ಭಕ್ತರನ್ನು ರಕ್ಷಿಸುವುದು ಇರಲಿ ತನ್ನ ದೇವಸ್ಥಾನವನ್ನು ರಕ್ಷಿಸಿಕೊಳ್ಳಲಿಕ್ಕೆ ಆಗಲಿಲ್ಲವಲ್ಲ. ಅತಿವೃಷ್ಟಿ ಯಿಂದ ನೆರೆ ಸಂತ್ರಸ್ತರಾದ ಜನರನ್ನು ಯಾವ ದೇವರು ಕಾಪಾಡಿದ? ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಟೀಕೆ ಮಾಡಿದ ಜನ ಇಂದು ಕಾಂಗ್ರೆಸ್ ಮುಖಂಡರ ಈ ನಡೆ ಏನಂತ ಉತ್ತರಿಸುವರು?
ಬಿಜೇಪಿ ಪಕ್ಷ ಮತ್ತು ಸರ್ಕಾರ ಏನೇ ಕಾರ್ಯಕ್ರಮ ನಡೆಸಿದರೂ ಹೀಗೆ ಎಲ್ಲ ವಿಷಯಗಳಲ್ಲಿ ಟೀಕೆ ಮಾಡಿ,  ಇವರ ವೋಟ್ ಬ್ಯಾಂಕ್ ನ ಮತದಾರರ ಮನ ಮೆಚ್ಚಿಸುವ ಈ ಜನ ಇಂದು ಮಾಡುತ್ತಿರುವುದೇನು.
ಯಾವುದೇ ಪಕ್ಷ ಕ್ಕೂ ಸಹ ಒಟ್ಟಿನಲ್ಲಿ ಎಲ್ಲರಿಗೂ ದೇವರು ಬೇಕು ಮತ್ತು ನಂಬಿಕೆಗೆ ಬೆಲೆ ಕೊಡ್ತಾರೆ ಅಂತ ಗೊತ್ತು. ಗೊತ್ತಿದ್ದರೂ ಯಾಕೆ ಒಂದು ವರ್ಗದ ಜನರನ್ನು ಮೆಚ್ಚಿಸಲು ಬೇರೆ ಯವರನ್ನು ಯಾಕೆ ಟೀಕೆ ಮಾಡಬೇಕು. ಇದು ಸಮಯಸಾಧಕತನವಲ್ಲದೆ ಬೇರೆ ಇನ್ನೇನು?
ಪ್ರತಿಯೊಬ್ಬರಿಗೂ ನಂಬಿಕೆ ಅನ್ನುವುದು ಇರುತ್ತೆ, ಆ ನಂಬಿಕೆ ಕೆಲವರನ್ನು ಕಾಪಾಡುತ್ತೆ. ಆ ನಂಬಿಕೆ ಮತ್ತು ಅಶಾವಾದ ದಿಂದ ಕೆಲವರು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಗೆಲುವು ಸಾಧಿಸುತ್ತಾರೆ. ಆದ್ದರಿಂದ ಆ ನಂಬಿಕೆಗಳಿಗೆ ಪ್ರಶ್ನೆ ಸಲ್ಲದಲ್ವೆ.
ಏನೇ ಆಗಲಿ ಸೋನಿಯ ಗಾಂಧಿ ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.