ಭಾನುವಾರ, ನವೆಂಬರ್ 13, 2011

ಲೋಕಾಯುಕ್ತ: ಭಿನ್ನ ಧ್ವನಿ ಗಳು


ಇಂದಿನ ಕನ್ನಡಪ್ರಭದಲ್ಲಿನ ಮುಖಪುಟದ ಲೇಖನ ದಲ್ಲಿ ಪ್ರಕಟವಾದ ಲೋಕಾಯುಕ್ತದಲ್ಲಿ ಎಸ್ಪಿ ಆಗಿದ್ದ ಶ್ರೀ ಮಧುಕರ ಶೆಟ್ಟಿ ರವರ ಸಂದರ್ಶನ, ಒಂದು ಕಡೆ ಪ್ರಬಲ ಜನಲೋಕಪಾಲ್ ಬಗ್ಗೆ ಅಣ್ಣಾ ಟೀಮ್ ಮತ್ತು ಬಹುತೇಕ ಪ್ರಜೆಗಳು ಒತ್ತಾಯ ಮಾಡ್ತಾಯಿರುವಾಗ ಮಧುಕರ ಶೆಟ್ಟಿಯವರ ಮಾತುಗಳು ಚಿಂತನೆಗೆ ಹಚ್ಚುತ್ತಿವೆ.....

ಬಾಲಕೃಷ್ಣೇಗೌಡರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆಗೆ ಸಿಟ್ಟಿಗೆದ್ದ ದೇವೇಗೌಡರು, ಲೋಕಾಯುಕ್ತ ಎಡಿಜಿಪಿಯಾಗಿದ್ದ ಜೀವನ್ ಕುಮಾರ್ ಗಾಂವ್ಕರ್ ಅವರಿಗೆ ದೂರವಾಣಿ ಕರೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿ, ತನಿಖೆ ಮುಂದುವರಿಸಿದ್ರೆ ಜಾಗ್ರತೆ ಎಂಬುದಾಗಿಯೂ ಬೆದರಿಕೆ ಹಾಕಿದ್ದಾರೆ ಅಂತ ವರದಿಯಾಗಿದೆ.,
ಆದರೆ ಅದಕ್ಕೆ ಸಮಜಾಯಿಷಿ ನೀಡಿದ  ಮಾಜಿ ಪ್ರಧಾನಿ ದೇವೇಗೌಡರು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ, ತಾವು ಲೋಕಾಯುಕ್ತ ಎಡಿಜಿಪಿ ಆಗಿದ್ದ ಜೀವನ್ ವಿ ಗಾಂವ್ಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿರುವ ಅವರು ಲೋಕಾಯುಕ್ತ ಹಗೆತನದ ತನಿಖೆ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀವನ್ ವಿ.ಗಾಂವಕರ್ ಅವರನ್ನು ಮುಖ್ಯಮಂತ್ರಿ ಸದಾನಂದ ಗೌಡ ವರ್ಗಾಯಿಸಿದ್ದಾರೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ. ಗಾಂವಕರ್ ಅವರ ಸ್ಥಾನಕ್ಕೆ ಎಚ್.ಎನ್ ಸತ್ಯನಾರಾಯಣ ರಾವ್ (ಅಪರಾಧ ಮತ್ತು ತಾಂತ್ರಿಕ) ಅವರನ್ನು ನೇಮಕ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧ ನಡೆಯುತ್ತಿರುವ ಲೋಕಾಯುಕ್ತ ತನಿಖೆಯನ್ನು ಸ್ಥಗಿತಗೊಳಸಿ, ತನಿಖೆಗಳ ಹಾದಿ ತಪ್ಪಿಸಬೇಕೆಂದೇ ಈ ವರ್ಗಾವಣೆ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಈ ಎಲ್ಲ ವರ್ಗಾವಣೆಗಳ ಹಿಂದೆ ಇದೆ ಎಂದು ಹೆಗ್ಡೆಯವರು ಬೆಂಗಳೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಜೀವನ್ ಕುಮಾರ್ ವಿ. ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿ, ಶಿವಮೊಗ್ಗ ಎಸ್ಪಿ ಆಗಿದ್ದ ಅರುಣ್ ಚಕ್ರವರ್ತಿಯವರನ್ನು ಲೋಕಾಯುಕ್ತ ಡಿಐಜಿ ಆಗಿ ವರ್ಗ ಮಾಡಿದ್ದಕ್ಕೆ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳಂಕಿತ ಅರುಣ್ ಚಕ್ರವರ್ತಿ ವಿರುದ್ಧ ಲೋಕಾಯುಕ್ತರಾಗಿದ್ದಾಗ ಸಂತೋಷ್ ಹೆಗ್ಡೆಯವರೇ ತನಿಖೆಗೆ ಆದೇಶಿಸಿದ್ದರು. ಇಂಥವರನ್ನು ಲೋಕಾಯುಕ್ತಕ್ಕೆ ತಂದು ಸಾಧಿಸುವುದಾದರೂ ಏನು ಎಂದು ಅವರು ಕಿಡಿ ಕಾರಿದ್ದಾರೆ. ಪ್ರಸ್ತುತ ಅಧಿಕಾರಿ ಸರಿಯಾಗಿ ಕೆಲಸ ಮಾಡದಿದ್ದಾಗ ವರ್ಗಾವಣೆ ಮಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ, ಘಟಾನುಘಟಿಗಳನ್ನು ಬಲೆಗೆ ಕೆಡವಿದಂಥ ದಕ್ಷ ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ...

(Click on the image to enlarge)


1 ಕಾಮೆಂಟ್‌:

  1. ಅ೦ತೂ ಗಣಿ ವರದಿಯ ಸ೦ತ್ರಸ್ತರು ಒ೦ದಾಗುವ ಹಾಗಿದೆ. ನಾನು ಗಣಿವರದಿಯಲ್ಲಿ ಭಟ್ರನ್ನು ಹೆಸರಿಸಿದ್ದಕ್ಕೆ ಈಗ ನನ್ನ ವಿರುದ್ಧ ಅಪಪ್ರಚಾರ ಮಾಡ್ತಾ ಇದ್ದಾರೆ ಅ೦ತ ಹೆಗ್ಡೆರು ಯಾವತ್ತು ಬಾಯ್ಬಿಟ್ರೋ, ಮಧುಕರ ಶೆಟ್ರ ಹೆಗಲ ಮೇಲೆ ಬ೦ದೂಕಿಟ್ಟು ವಿ.ಭಟ್ರು ಲೋಕಾಯುಕ್ತದ ಕಡೆ ಹೊಡೆದ ಗು೦ಡು ಠುಸ್ ಆಯ್ತು. ಏನಾದ್ರೂ ಮಾಡಿ ಮಾನ ಉಳಿಸ್ಕೋಬೇಕು ಅ೦ತ ಭಟ್ರು ತಮ್ಮ ಒ೦ದು ಕಾಲದ ಪರಮ ’ಮಿತ್ರ’, ಸಮಾನ ದುಃಖಿ ಯಡ್ರಪ್ಪನೋರನ್ನ ಸ್ಟುಡಿಯೋಗೆ ಕರೆಸಿ ಹೆಗ್ಡೆ ವಿರುದ್ಧ ಕಿಡಿ ಕಾರಿಸಿದ್ದಾರೆ. ಅಬ್ಬಾ... ಎ೦ಥಾ ತ೦ತ್ರಗಾರಿಕೆ...!!! ಭಟ್ರೇನಾದ್ರೂ ರಾಜಕೀಯಕ್ಕೆ ಬ೦ದ್ರೆ ದೊಡ್ಡಗೌಡ್ರು ಪರ್ಮನೆ೦ಟ್ ಆಗಿ ಮನೆಲಿ ಟೆ೦ಟ್ ಹಾಕೋಬೇಕಾಗತ್ತೆ. ಶನಿವಾರ ಪೀಪೀ ಸಿಮ್ಮ ಏನ೦ತಾನೆ ನೋಡೋಣ.

    ಪ್ರತ್ಯುತ್ತರಅಳಿಸಿ