ಸೋಮವಾರ, ಜೂನ್ 20, 2011

ಧರ್ಮಪ್ರಚಾರಕನ ಕಾಮಕಾಂಡ


ಒಬ್ಬ ರಾಜಕೀಯ ನೇತಾರ ಅಥವ ಒಬ್ಬ ಸ್ವಾಮಿಜಿ ಯ ಕಾಮ ಕಾಂಡ ಏನಾದರು ಬಯಲಿಗೆ ಬಂತು ಅಂದರೆ ದಿನಾಲು ಟಿವಿನಲ್ಲಿ ಹಾಗು ಪೇಪರ್ ನಲ್ಲಿ ಸುದ್ದಿಯೋ ಸುದ್ದಿ. ಅದರಲ್ಲೂ ಇಂಗ್ಲೀಶ್ ಮೀಡಿಯಾ ಗಳಲ್ಲಿ ಅದರ ಅಬ್ಬರ ಹೇಳತೀರದು. ಆದರೆ ಒಬ್ಬ ಪಾದ್ರಿ ಅಥವ ಇನ್ಯಾರೋ ಒಬ್ಬ ಅಂಥವ ಚಟುವಟಿಕೆ ನಡೆಸಿದರೆ ಕೇವಲ ಆದಿನದ ಸುದ್ದಿ ಯಾಗಿ ಮರೆಯಾಗುತ್ತದೆ, ಅದರ ಬಗ್ಗೆ ಯಾವುದೇ ಚರ್ಚೆಯೇ ನಡೆಯಲ್ಲ.
ಫೋಕಸ್ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದರೆ, ಇಂತಹ ಕರ್ಮ ಕಾಂಡಗಳು ಬಯಲಿಗೆ ಬರೋದೆ ಇಲ್ಲ.
ವಿಚಾರವಾದಿಗಳು, ಸಮಾಜವಾದಿ ಮುಖಡರುಗಳು, ಬುದ್ದಿಜೀವಿಗಳು ಇಂತಹ ವಿಷಯಗಳ ಮೇಲೆ ಮಾತಾಡೋದೆ ಇಲ್ಲ. ಅಮಾಯಕ ಹೆಣ್ಣುಮಕ್ಕಳ ಬಾಳನ್ನು ಹಾಳು ಮಾಡಿದ ಇಂತಹವರ ವಿರುದ್ದ ಮಾತನಾಡಲು ಯಾರೂ ತಯಾರಾಗಿಲ್ಲ. ನಮ್ಮ ಮಾಧ್ಯಮಗಳಲ್ಲಿ ಸಹ ಒಬ್ಬ ಹಿಂದೂ ನೇತಾರ, ಮುಖಂಡ ಅಥವ ಸ್ವಾಮೀಜಿ ಯೊಬ್ಬನ ಪ್ರಕರಣ ಬಯಲಿಗೆ ಬಂದರೆ ವ್ಯಂಗ್ಯವಾಗಿ, ಚುಚ್ಚು ಮಾತುಗಳಿಂದ, ಹೀಯಾಳಿಸಿ ಮಾತನಾಡಿದ್ದೆ ಮಾತನಾಡಿದ್ದು. ಆದರೆ ಅನ್ಯ ಧರ್ಮೀಯರ ಬಗ್ಗೆ, ಕೇವಲ ಒಂದು ಸುದ್ದಿ ಪ್ರಸಾರ ವಾಗಿ ಮರೆಯಾಗಿ ಹೋಗುತ್ತೆ.

ಶಾಂತರಾಜು ಎನ್ನುವ  ಕ್ರೈಸ್ತ ಧರ್ಮ ಪ್ರಚಾರಕನ ರಾಸಲೀಲೆಯ ವೀಡಿಯೋ ನೋಡಿದ ಮೇಲೆ, ಕಾಮಕ್ಕೆ ಧರ್ಮ, ನೈತಿಕತೆ, ಪವಿತ್ರತೆ ಇಲ್ಲ ಅಂತ ಸಾಬೀತಾಗುತ್ತೆ. ಇವನು ಅದೆಷ್ಟು ಜನರ ಮನೆ ದೀಪ ಆರಿಸಿದ್ದಾನೊ ಗೊತ್ತಿಲ್ಲ.
 ಇವನ ಕಾಮಕಾಂಡ ಗಳಿಗೆ ಲೆಕ್ಕವೇಇಲ್ಲ. ಚರ್ಚ್ ಹಣವನ್ನು ದುರುಪಯೋಗ ಮಾಡಿದ್ದಲ್ಲದೆ, ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದಾರೆಂದು ಕ್ರೈಸ್ತ ಧರ್ಮ ಪ್ರಚಾರಕನ  ಪತ್ನಿ ಗಂಗಮ್ಮನಗುಡಿ ಪೊಲೀಸರಿಗೆ ದೂರು ನೀಡಿದ್ದಾಳೆ.

ದೂರಿನಲ್ಲಿ, ಅಪ್ರಾಪ್ತ ವಯಸ್ಕ ಹುಡುಗಿಯನ್ನು ವಂಚಿಸಿ, ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಈ ದೂರನ್ನು ಪುಷ್ಟೀಕರಿಸಲು ತನ್ನ ಬಳಿ ಛಾಯಾಚಿತ್ರಗಳಿವೆ ಎಂದು ದೂರನ್ನು ದಾಕಲಿಸಿದ್ದಾಳೆ. ಜಾಲಹಳ್ಳಿಯಲ್ಲಿರುವ ಬೆಥೆಲ್ ಚರ್ಚ್ ಮತ್ತು ಶಾಲೆಯಲ್ಲಿರುವ ಅಪ್ರಾಪ್ತ ವಯಸ್ಕ ಹುಡುಗಿಯರನ್ನು ಲೈಂಗಿಕವಾಗಿ ಶಾಂತರಾಜು ಬಳಸಿಕೊಳ್ಳುತ್ತಿದ್ದ ಎಂದು ಹೆಂಡತಿ ಆರೋಪಿಸಿದ್ದಾಳೆ. ಅಲ್ಲದೆ ಚರ್ಚ್ ಹಣವನ್ನು ಲೂಟಿ ಹೊಡೆಯುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ

ಬೆಥಲ್ ಚರ್ಚ್ ಪಾಸ್ಟರ್ ಶಾಂತರಾಜು ತುಮಕೂರು ರಸ್ತೆಯಲ್ಲಿರುವ ನಗರದ ಸಿದ್ದಾರ್ಥ ನಗರದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದಾನೆ. ಆದರೆ ಶಾಂತರಾಜು ಸಂಸ್ಥೆಯಲ್ಲಿನ ಅಪ್ರಾಪ್ತ ಬಾಲಕಿಯರನ್ನು ಮನೆಗೆ ಕರೆತಂದು ಕೌನ್ಸೆಲಿಂಗ್ ಹೆಸರಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುತ್ತಿರುವುದಾಗಿ ಪತ್ನಿ ಪ್ರಿಯಲತಾ ದೂರಿನಲ್ಲಿ ತಿಳಿಸಿದ್ದಾರೆ.

1995ರಲ್ಲಿ ಶಿಕ್ಷಣ ಸಂಸ್ಥೆ ಆರಂಭವಾಗಿದ್ದು, ಅದಕ್ಕೆ ಪಾಸ್ಟರ್ ಶಾಂತರಾಜು ಮುಖ್ಯಸ್ಥ. ಆದರೆ ಪತಿ ಹೆಣ್ಮಕ್ಕಳಿಗೆ ಆಮಿಷವೊಡ್ಡಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು. ಅದೂ ಅಲ್ಲದೇ ಹೆಣ್ಣು ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ. ಆಗ ನನ್ನ ಮತ್ತು ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕುತ್ತಿದ್ದ ಎಂದು ಅಲವತ್ತುಕೊಂಡಿರುವ ಪತ್ನಿ ಪ್ರಿಯಲತಾ, ಇದರಿಂದ ರೋಸಿ ಹೋಗಿ ತಾನು ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಶಾಂತರಾಜು ಮಾತ್ರವಲ್ಲ ಅವರ ಇತರ ಕುಟುಂಬದ ಸದಸ್ಯರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ, ರಾಜಕೀಯ ಪ್ರಭಾವವನ್ನು ಬಳಸಿ ಹಗರಣಗಳನ್ನು ಮುಚ್ಚಿಹಾಕುತ್ತಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಶಾಂತರಾಜು ಮತ್ತು ಪ್ರಿಯಲತಾ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೆಲ ಯುವತಿಯರನ್ನು ಪಾದ್ರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಇದಕ್ಕೂ ಮೊದಲು 18 ವರ್ಷದ ಯುವತಿಯೊಬ್ಬಳು ಆರೋಪಿಸಿದ್ದಳು. ಯುವತಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಅವರ ಅನುಮತಿಯಿಲ್ಲದೆ ಫೋಟೋ ತೆಗೆದು ಅಶ್ಲೀಲವಾಗಿ ತಿರುಚುತ್ತಿದ್ದ ವಿಕೃತ ಮನುಷ್ಯ ಎಂದು ಆರೋಪಿಸಿದ್ದಳು.

ಗಂಡನ ಈ ನಡವಳಿಕೆಯಿಂದ ರೋಸಿ ಹೋಗಿ ಸಾಕಷ್ಟು ರಂಪಾಟ ನಡೆದಿತ್ತು. ಆಗ 2000ನೇ ಇಸವಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು ಆದರೆ ಶಾಂತರಾಜು ವಿಚ್ಛೇದನಕ್ಕೆ ಒಪ್ಪದೆ, ಕೊನೆಗೆ ತಾನು ಇನ್ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕೋರ್ಟ್‌ನಲ್ಲಿ ಬರೆದುಕೊಟ್ಟು ರಾಜಿಯಾಗಿದ್ದ. ಆ ಬಳಿಕ 2010ರಲ್ಲಿ ಕೆಲ ಕಾಲ ಸುಮ್ಮನಿದ್ದ ಪತಿ, ನಂತರ ಮತ್ತೆ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳನ್ನು ಮನೆಗೆ ಕರೆದು ತಂದು ಎರಡು ಗಂಟೆಗಳ ಕಾಲ ಕೋಣೆಯೊಳಗೆ ಇರುತ್ತಿದ್ದರು. ಇದನ್ನು ಪ್ರತಿಭಟಿಸಿದ್ದಕ್ಕೆ ತನಗೂ ಮತ್ತು ಮಕ್ಕಳಿಗೆ ಹೊಡೆದು ಮನೆಯಿಂದ ಹೊರಹಾಕಿರುವುದಾಗಿ ಪ್ರಿಯಲತಾ ಆರೋಪಿಸಿದ್ದಾರೆ.
ಹದಿನಾರು ವರ್ಷದ ಹುಡುಗಿ ಈತನ ಕಾಮಕಾಂಡದಿಂದಾಗಿ ಗರ್ಭಪಾತ ಕೂಡ ಮಾಡಿಕೊಂಡಿದ್ದಳು ಎಂದು ಪ್ರಿಯಲತಾ ದೂರಿದ್ದಾಳೆ. ಇದನ್ನು ಪ್ರಶ್ನಿಸಿದಾಗ, ಯಾರಿಗಾದರೂ ತಿಳಿಸಿದರೆ ಮಕ್ಕಳು ಮತ್ತು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿಲಾಗಿದೆ

ಅಪ್ರಾಪ್ತೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಮತ್ತು ಚರ್ಚ್ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪವನ್ನು ಹೊತ್ತಿರುವ ಪಾದ್ರಿ ಶಾಂತರಾಜುವನ್ನು ಗಂಗಮ್ಮನಗುಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ರಾಜಕಾರಣಿಗಳ ಒತ್ತಡ ಹಾಗು ಕಾಣದ ಕೈಗಳ ಕೈವಾಡ ಗಳಿಂದ ಇಂತಹ ರಾದ್ದಾಂತ ಗಳು ಗುಪ್ತ್ ಗುಪ್ತ್ ಆಗಿ ಮುಚ್ಚಿ ಹೋಗಿ ಬಿಡುತ್ತೆ.

ಇನ್ನು ಬರ್ನಾಡ್ ಮೊರಸ್ ಏನು ಹೇಳಿಲ್ಲ ಹಾಗು ಹೇಳೋದು ಇಲ್ಲ ಅಂತ ಅನ್ನಿಸುತ್ತೆ. ಅಮಾಯಕ ಹೆಣ್ಣು ಮಕ್ಕಳು ಈ ಮಹಾಶಯನ ಕಣ್ಣಿಗೆ ಬೀಳಲ್ವೇನೋ?


ಮಂಗಳವಾರ, ಜೂನ್ 14, 2011

ಮಾಧ್ಯಮ ಹಾಗು ಕೇಸರಿ ಪಕ್ಷದವರಿಗೆ ಯಾಕೆ ಗೊತ್ತಾಗಲಿಲ್ಲ?


ಒಂದು ದುರಂತ ನಡೆದು ಹೋಗಿದೆ.
ಬಿಜೆಪಿ ಆಡಳಿತ ವಿರುವ ಉತ್ತರಾಖಂಡ್ ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಉಪವಾಸ ಮಾಡುತಿದ್ದ ಸರಸ್ವತಿ ಸ್ವಾಮಿ ನಿಗಮಾನಂದ (ಮಂತ್ರ ಸದನ, ಹರಿದ್ವಾರ) ರವರು ತೀವ್ರ ಅಸ್ವಸ್ಥ ಗೊಂಡು ನಿಧನರಾಗಿರುವುದು ವಿಷಾದದ ಸಂಗತಿ. 

ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಯಾವುದೇ ಮಾಧ್ಯಮ ಗಳಲ್ಲಿ ಸಹ ಅಷ್ಟೊಂದು ಸುದ್ದಿಯಾಗಲಿಲ್ಲ. ಅವರು ನಿಧನಗೊಂಡ ನಂತರ ಪ್ರತಿಯೊಬ್ಬರು ಕಾಂಗ್ರೆಸ್ ನಾಯಕರು ಪುಂಕಾನುಪುಂಖವಾಗಿ ಹೇಳಿಕೆಗಳನ್ನು ಕೊಡುತಿದ್ದಾರೆ, ಹಾಗು ಈಗ ಮಾಧ್ಯಮಗಳು ಅವರ ನಿಧನದ ಬಗ್ಗೆ ಸುದ್ದಿ ಯನ್ನು ಪ್ರಸಾರ ಮಾಡುತ್ತಿವೆ ಜತೆಯಲ್ಲಿ ಬಿಜೆಪಿ ಬಗ್ಗೆ ಟೀಕೆ, ಇದೇ ಕೆಲಸ ವನ್ನು ಅವರು ಬದುಕಿದ್ದಾಗ ಯಾಕೆ ಮಾಡಲಿಲ್ಲ. ಬಗ್ಗಿದವನಿಗೆ ನಾಲ್ಕು ಗುದ್ದು ಜಾಸ್ತಿ ಎನ್ನುವಂತೆ ಬಿಜೆಪಿ ಹಾಗು ಮತ್ತಿತರ ಸ್ವಾಮಿ ಗಳನ್ನು ಗುರಿ ಮಾಡಿ ಟೀಕೆ ಮಾಡುತಿದ್ದಾರೆ.


ನಿತ್ಯಾನಂದನ ಕರ್ಮ ಕಾಂಡವನ್ನು ದೇಶದ ಎಲ್ಲ ಚಾನೆಲ್ ಗಳು ಪದೇ ಪದೇ ಪ್ರಸಾರ ಮಾಡಿದವು ಆದರೆ ಅದೇ ಮಾಧ್ಯಮದವರು ಇಲ್ಲಿ ಮಾತ್ರ ಫೋಕಸ್ ಮಾಡಲಿಲ್ಲ ಕಾರಣ ಹೆಚ್ಚಿನ ಟಿಆರ್ ಪಿ ಸಿಗುವುದಿಲ್ಲ ಎಂದು. 

ಬಾಬಾ ರಾಮ್ ದೇವ್ ಬಗ್ಗೆ ಪರ ಚರ್ಚೆಗಿಂತ ಹೆಚ್ಚಿನ ಅವಧಿ ವಿರೋಧಕ್ಕೆ ಮೀಸಲಿಟ್ಟಿದ್ದವು. ಈಗ ಮಾತ್ರ ದಿಗ್ವಿಜಯ್ ಸಿಂಗ್ ಮಾತಗಳನ್ನು ತದೇಕ ಚಿತ್ತ ಆಲಿಸಿ ಬಿತ್ತರಿಸುತಿದ್ದಾರೆ.

ಬಿಜೆಪಿ ಯವರಿಗೆ ಏನು ತೊಂದರೆಯಿತ್ತು?

ಈ ಸತ್ಯಾಗ್ರಹವನ್ನು ಇವ್ರು ಯಾಕೆ ನಿರ್ಲಕ್ಷಿಸಿದರು? 

ಕೇವಲ ರಾಜಕೀಯ ಲಾಭಕ್ಕೋಸ್ಕರ ಚಳುವಳಿಗಳನ್ನು ಬಳಸಿಕೊಳ್ತಾರಾ? ಅಂತಹ ರಾಜಕೀಯಕ್ಕೆ ನಮ್ಮ ಧಿಕ್ಕಾರ ವಿರುತ್ತೆ. ಇಂತಹ ಸಮಯ ಸಾಧಕತನ ಯಾವುದೇ ಪಕ್ಷಕ್ಕೂ ಶ್ರೇಯಸ್ಕರವಲ್ಲ.

ಇಂದು ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಸಹ ಇದಕ್ಕೆ ಜವಬ್ದಾರಿ, ಇದು ಕೇವಲ ಉತ್ತಾರಖಂಡ್ ರಾಜ್ಯದ ಜವಬ್ದಾರಿಯಲ್ಲ ಜತೆಗೆ ಕೇಂದ್ರ ಸರ್ಕಾರದ ಜವಬ್ದಾರಿಯು ಸಹ ಇದೆ ಇದರಲ್ಲಿ.

ರಾಮ್ ದೇವ್ ಬಾಬಾ ದಾಖಾಲಾಗಿದ್ದ ಆಸ್ಪತ್ರೆ ಯಲ್ಲಿ ಇವರ ಬಗ್ಗೆ  ಮಾಧ್ಯಮ ವಾಗಲಿ, ರಾಜಕೀಯ ನೇತಾರರಾಗಲಿ ಹಾಗು ಸಂಧಾನಕ್ಕೆ ತೆರಳಿದ ಸ್ವಾಮಿಗಳು ಗಮನ ಸೆಳೆಯಲಿಲ್ಲ ವೆಂದರೆ ಇದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ.

ಅಕ್ರಮ ಗಣಿ(ಕಲ್ಲು)ಗಾರಿಕೆ  (ಹಿಮಾಲಯ ಸ್ಟೋನ್ ಕ್ರಶರ್) ಯಿಂದ ಆಗುತ್ತಿರುವ ಗಂಗಾನದಿ ಮಾಲಿನ್ಯ ದ ಕುರಿತು ಸರ್ಕಾರದ ಗಮನ ಸೆಳೆಯಲು ಸತ್ಯಾಗ್ರಹ ಕೊನೆ ಪಕ್ಷ ಪರಿಸರವಾದಿಗಳಿಗೆ ಸಹ ತಿಳಿದಿರಲಿಲ್ಲವೆಂದರೆ ಬಹಳ ಆಶ್ಚರ್ಯ ವಾಗುತ್ತಿದೆ.

ಈ ಮಧ್ಯೆ ಅವರ ಶಿಷ್ಯಂದಿರು ಸ್ವಾಮಿಜಿಗಳಿಗೆ ವಿಷ ಪ್ರಾಶನ ಮಾಡಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಯಾಗಿ ಸತ್ಯಾಂಶ ಹೊರಬಂದು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಯಾಗಬೇಕು.

ಒಳ್ಳೆಯ ಸಾಮಜಿಕ ಕಳಕಳಿ ಚಳುವಳಿಗೆ ಪ್ರಚಾರ ಸಿಗದೇ ಇದ್ದದು ಈ ದೇಶದ ಧೌರ್ಭಾಗ್ಯ.
ಏನೇ ಆಗಲಿ ಸಂಪೂರ್ಣ ಸತ್ಯ ಜಗತ್ತಿಗೆ ಗೊತ್ತಾಗಬೇಕು. ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವೊಬ್ಬ ರಾಜಕೀಯ ನಾಯಕನಾಗಲಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಲಿ ಇರಲಿಲ್ಲ ವೆಂದರೆ ಇದು ಇವರ ಸತ್ಯಾಗ್ರಹಕ್ಕೆ  ಮಾಧ್ಯಮ ಗಳು ಯಾವ ರೀತಿ ಪ್ರಚಾರ ಕೊಟ್ಟಿರಬಹುದು ಎಂದು ಗೊತ್ತಾಗುತ್ತೆ.
ಒಂದು ಒಳ್ಳೆಯ ಉದ್ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ಸ್ವಾಮಿಜಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವ.


ಸೋಮವಾರ, ಜೂನ್ 13, 2011

ಕಲಿಯುಗ ಸಾರ್ ಇದು ಕಲಿಯುಗ!
ಮೈಸೂರ್ನಾಗೆ ಕಾಡ್ನಾಗಿಂದ ಆನೆಗಳು ಬಂದಿದ್ವಲ್ಲ ಅವಾಗ ಒಬ್ಬ ಅಮಾಯಕನನ್ನು ಸಾಯಿಸಿತು, 
ಸರ್ಕಾರ ದವರೇನೋ ೫ ಲಕ್ಷ ಅಂತ ಪರಿಹಾರ ಕೊಟ್ರು. ಯಾರು ಅದಕ್ಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ ಆದರೆ ನಮ್ಮ ಮಾಜಿ ಸಿಯಮ್ ಒಂದು ವಿಷಯ ಕಂಡು ಹಿಡಿದುಬಿಟ್ಟರು ಕಣ್ರಪ್ಪ. 


ಅದೇನಂದರೆ ಸತ್ತ ಅವಯ್ಯನ ಹೆಸರು ರೇಣುಕಾ ಪ್ರಸಾದ್ ಸ್ವಾಮಿ ಅಂತ ಅದಕ್ಕೆ, ಯಡ್ಯೂರಪ್ಪ ನವರು ಸತ್ತವರು ತಮ್ಮ ಜಾತಿ ಯವರು ಅಂತ ತಿಳ್ಕೊಂಡು ಅಷ್ಟೊಂದು ಪರಿಹಾರ ಕೊಟ್ಟಾರೆ ಕಣಣ್ಣಾ ಅಂದ್ರು.
ಹೆಸರಿನಾಗೆ ಜಾತಿ ಕಂಡು ಹಿಡಿದು ಜಾತಿ ರಾಜಕೀಯ ಮಾತಾಡ್ತಾವರಲ್ಲ ಶಿವನೇ.
ಏನೋ ಬಿಡಪ್ಪ, ಸಕಲಕಲಾವಲ್ಲಭರು ನೀವು, ಎಂಗೆಂಗೋ ರಾಜಕೀಯ ಮಾಡ್ತೀರಾ. ಏನು ಬೇಕಾದರು ಹೇಳ್ತೀರ ಹಂಗೆ ಅದನ್ನು ದಕ್ಕಿಸಿಕೊಳ್ತೀರಾ. ದೊಡ್ಡವರಪ್ಪ ನೀವು.
*******
-ಸಂಪುಟ ಸಭೆ ಟೂರಿಂಗ್ ಟಾಕೀಸಾ?: ಎಚ್ಡಿಕೆ
ಬಿಜೆಪಿ ಸರ್ಕಾರದ ಹೊಸ ಪರಿಕಲ್ಪನೆ‘ರಾಜ್ಯ ಸಂಪುಟದ ಗ್ರಾಮಸಭೆ’ಯನ್ನು ಮಾಜಿ ಸಿ‌ಎಂ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಸಚಿವ ಸಂಪುಟಸಭೆಯೇನು ಟೂರಿಂಗ್ ಟಾಕೀಸಾ ಎಂದು ಪ್ರಶ್ನಿಸಿದ್ದಾರೆ.
ಹಾಗಿದ್ರೆ "ಗ್ರಾಮ ವಾಸ್ತವ್ಯ" ಒಂದು ಸಿನಿಮಾನ ಸಾರ್?
ಮತ್ತೆ ಜನ ಹಿಂಗೆ ಹೇಳ್ತಾ ಯಿದ್ರು!!!
ಇನ್ನು ಈ ಕನ್ನಡದ ಕಂದ ಕುಮಾರಸ್ವಾಮಿ ಮಾಡಿದ್ದಾದರೂ ಏನು? ನಮ್ಮ ಹಳ್ಳಿ ಕಡೆಯ ಸೋಮಾರಿಗಳು ಆಗಾಗ್ಗೆ ನೆಂಟರ ಮನೆಗೆ ಹೋಗಿ ಕಾಲಕ್ಷೇಪ ಹಾಕುವಂತೆಯೇ ಅವರು ಗ್ರಾಮವಾಸ್ತವ್ಯ ಹಾಕಿದ್ದು. ಆಯಾ ಊರಿನ ತಮ್ಮ ತಮ್ಮ ಪಕ್ಷದ ಸ್ಥಿತಿವಂತರುಗಳ ಮನೆಗಳಲ್ಲಿ ಗಡದ್ದಾಗಿ ಬಾಡೂಟ ಉಂಡು, ವೇಳೆ ಮೀರಿದ ಸಮಯಕ್ಕೆ ವಾಸ್ತವ್ಯದ ಮನೆಗಳಿಗೆ ತೆರಳಿ ಇನ್ನೊಮ್ಮೆ ಉಂಡ ಶಾಸ್ತ್ರ ಮಾಡಿ ಮಲಗುತ್ತಿದ್ದುದೇ ಅವರ ಗ್ರಾಮವಾಸ್ತವ್ಯವಾಗಿತ್ತು. ವ್ಯತ್ಯಾಸವೆಂದರೆ ಸಿನಿಮಾ ನಿರ್ಮಾಪಕರಾದ ಇವರು ಮುದಿ ರಾಜಕಾರಣಿಗಳು ಮಾಡುತ್ತಿದ್ದುದ್ದನ್ನೇ ಕಾಪಿ ಮಾಡಿ, ಅದಕ್ಕೊಂದು "ಗ್ರಾಮವಾಸ್ತವ್ಯ" ಎಂಬ ಟೈಟಲ್ ಕೊಟ್ಟು, ಅಗತ್ಯ ಕನ್ನಡ ಸಿನಿಮಾ ಫಾರ್ಮುಲಾಗಳನ್ನೆಲ್ಲಾ ಸೇರಿಸಿ ಬಾಕ್ಸಾಫೀಸಿನಲ್ಲಿ ದಾಖಲಾಗುವಂತೆ ಮಾಡಿದ್ದು ಬಿಟ್ಟರೆ ಈ "ಗ್ರಾಮವಾಸ್ತವ್ಯ" ಬಡ ಬೋರೇಗೌಡನ ನಾಲ್ಕಾಣೆ ಕನಸುಗಳನ್ನೂ ವಾಸ್ತವವಾಗಿಸಿಲ್ಲ!


:-) :-) :-)
*******
ಎಮ್.ಎಫ್.ಹುಸೇನ್ ಸತ್ತೋದ್ರಲ್ಲ, ಆಗ ಬಹಳ ಜನ ಏನೇನೋ ಬರೆದ್ರು ಕಣ್ರಿ. 


ಒಬ್ಬರು ಬರೀತಾರೆ "ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಕಳೆದುಕೊಂಡ ಅಮೂಲ್ಯ ರತ್ನ ಎಂ.ಎಫ್. ಹುಸೇನ್. ಕಲೆಯನ್ನೇ ತನ್ನ ಉಸಿರಾಗಿಸಿಕೊಂಡು ಅಲೆದಾಡಿದ ಬರಿಗಾಲಿನ ಕಲಾವಿದ ಹುಸೇನ್ ಇನ್ಲಿಲ್ಲ ಎಂದರೆ ಭಾರತದ ಕಲಾ ಪ್ರಪಂಚದಲ್ಲಿ ಒಂದು ಶೂನ್ಯ ಸೃಷ್ಟಿಯಾಗಿದೆ ಎಂದೇ ಭಾವಿಸಬಹುದು. ಹುಸೇನ್ ಕಲೆಯ ಮಾಂತ್ರಿಕ. ಕುಂಚ ಪ್ರಪಂಚದ ಸಾಮ್ರಾಟ. ತಮ್ಮ ಕ್ಯಾನ್ವಾಸಿನ ಮೇಲೆ ಕುಂಚದಿಂದ ಚಿತ್ರಗಳನ್ನು ಬಿಡಿಸುವ ಮಟ್ಟಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಚಿತ್ರಕಲೆಯಲ್ಲಿ ಪ್ರಯೋಗಶೀಲತೆಗೆ ಒಂದು ವಿಭಿನ್ನ, ನವೀನ, ಅಂತಾರಾಷ್ಟ್ರೀಯ, ಅತೀತ ಆಯಾಮವನ್ನು ನೀಡಿದ ಧೀಮಂತ ವ್ಯಕ್ತಿತ್ವ."
ಇತ್ತೀಚಿಗೆ ಕೆಲ ಸ್ನೇಹಿತರು ಮಾತಾಡ್ತಾಯಿದ್ರು, ನಾವು ಒಂದು ಹೊಸ ಪ್ರಯೋಗ ಶೀಲತೆ ಮಾಡ್ತೀವಿ ಅಂದ್ರು. ಏನಪ್ಪ ಅಂತ ಕೇಳಿದ್ರೆ, ಎಮ್.ಎಫ್. ಹುಸೇನ್ ನನ್ನು ಯಾರ್ಯಾರು ಸಮರ್ಥನೆ ಮಾಡ್ಕೊತಾರೊ ಅವರ ಮನೆಯ ಹೆಂಗಸರ ನಗ್ನ ಚಿತ್ರ ವನ್ನು ಕುಂಚದಲ್ಲಿ ನವೀನ ವಾಗಿ ಚಿತ್ರಿಸ್ತೀವಿ. ಪ್ರತಿಯೊಂದು ಆಯಾಮವನ್ನು ಚೆನ್ನಾಗಿ ಬರೆದು ಸುಂದರವಾಗಿ ತೋರಿಸ್ತೀವಿ ಅಂತ ಅಂದ್ರು. 
ಅದೇಂಗಾಗ್ತದೆ, ಅದು ಸರಿಯಲ್ಲಯ್ಯ ಅಂತ ನಾನು ಹೇಳ್ದೆ, 
ಅದಕ್ಕೆ ಅವರು ಹುಸೇನ್ ಬೇಕಾದರೆ ಬರೀಬಹುದಾ?
ಅವರು ಯಾವ ಹೆಣ್ಣಿನ ಚಿತ್ರವನ್ನು ಅವರು ಅಸಹ್ಯವಾಗಿ ಬರೆದಿಲ್ರಯ್ಯ
ನಮ್ಮ ಹಿಂದು ದೇವತೆಗಳು ಮತ್ತೆ ಭಾರತ ಮಾತೆ ಚಿತ್ರಗಳನ್ನು ನಗ್ನವಾಗಿ ಬರೆದದ್ದು ಅಶ್ಲೀಲ ಅಲ್ಲವೆ.


ನೋಡ್ರಪ್ಪ ದೇವರು ನಮ್ಮ ಕಲ್ಪನೆ, ದೇವರು ಹಿಂಗಿದಾರೆ ಭಾರತ ಮಾತೆ ಹಿಂಗೇ ಇದಾರೆ ಅಂತ ಯಾರಿಗು ಗೊತ್ತಿಲ್ಲ.
ಹಾಗಿದ್ರೆ ಬೇರೆ ಧರ್ಮದ ದೇವರುಗಳನ್ನು ಬರೀಬೇಕಾಗಿತ್ತು
ಅವರಿಗೆ ಏನು ಇಷ್ಟನೋ ಅದನ್ನು ಬರೀತಾರೆ ಕಣ್ರಪ್ಪ, ಅದನ್ನೆಲ್ಲ ಪ್ರಶ್ನೆ ಮಾಡಬಾರದು. 
ಹಾಗಿದ್ರೆ ಇದು ಸಹ ನಮ್ಮಿಷ್ಟ, ಅವರ ಮನೆ ಹೆಂಗಸರನ್ನು ಸಹ ಸೂಪರ್ರಾಗಿ ಚಿತ್ರ ಬರೆದು ತೋರಿಸ್ತೀವಿ. ಅದು ನಮ್ಮ ಕಲೆಯಲ್ಲಿ ಸೂಸುವ ಅಧ್ಬುತ ಕಲ್ಪನೆಗಳು. ಅಲ್ಲ ಗುರುವೇ ಅವಯ್ಯ ಬರೆದ ಚಿತ್ರಗಳನ್ನು ಮಕ್ಕಳು ಮತ್ತು ಹೆಂಗಸರ ಮುಂದೆ ತೋರಿಸಿದ್ರೆ ಏನು ತಿಳ್ಕಂತಾರೆ ಅಂತ ಪರಿಜ್ನಾನ ಬೇಡ್ವಾ. ಅವರ ಧರ್ಮದಲ್ಲಿ ತಲೆಯಿಂದ ಕಾಲು ವರೆಗೆ ಮುಚ್ಚಿಕೊಂಡಿರೋ ಬುರ್ಕಾ ಹಾಕಿರ್ತಾರೆ. ಅರಬ್ ದೇಶಗಳಲ್ಲಿ ಅಶ್ಲೀಲ ಚಿತ್ರಗಳನ್ನು ಬ್ಯಾನ್ ಮಾಡಿದ್ದಾರೆ. ಇಂಟರ್ನೆಟ್ ನಲ್ಲಿ ಹುಡುಕಿದರೆ ಸಹ ಸಿಗಲ್ಲ. ಅವರ ಹೆಂಗಸರನ್ನು ಕಣ್ಣೆತ್ತಿ ನೋಡೋತರಹ ಇಲ್ಲ. ನಮ್ಮ ಹಿಂದಿ ಸಿನಿಮಾದಲ್ಲಿ ಬರುವ ಕೆಲ ಅಶ್ಲೀಲ ದೃಶ್ಯಗಳನ್ನು ಸೆನ್ಸಾರ್ ಮಾಡಿ ಟಿವಿನಲ್ಲಿ ತೋರಿಸ್ತಾರೆ. ಅಷ್ಟೊಂಡು ಕಟ್ಟುನಿಟ್ಟು ಇರಬೇಕಾದರೆ, ಈ ಮನುಷ್ಯ ನಿಗೆ ನಮ್ಮ ದೇವರು ಗಳು ಹಾಗು ಭಾರತ ಮಾತೆ ಚಿತ್ರ ವನ್ನು ನಗ್ನ ವಾಗಿ ತೋರಿಸಿ ಚಿತ್ರ ಬರಿಬೇಕಾಗಿತ್ತ. ಅವನನ್ನು ಸಮರ್ಥಿಸಿ ನಮ್ಮ ಜನ ಮಾತಾಡ್ತಾರಲ್ಲ ಮೊದಲು ಅವರನ್ನು .......
ಶ್!...... ಜೈ ಹೋ.
:-)ಬುಧವಾರ, ಜೂನ್ 8, 2011

ಇಷ್ಟ ಇದ್ರೆ ಓದ್ರಿ ಇಲ್ಲದೆ ಇದ್ರೆ ರೈಟ್ ಹೇಳಿ, ಹಿಂಗೂ ಹೇಳ್ತಾರೆ ಸ್ವಾಮಿ ನಮ್ಮ ಮಾಧ್ಯಮ ಮಿತ್ರರು.


ಕಿರಿಕಿರಿಯಾಗುತ್ತಿದ್ದರೆ ಅನ್‌ಫ್ರೆಂಡ್ !..ಜೈ ಹೋ.
ಮಾಧ್ಯಮ ಕ್ಷೇತ್ರ ದಲ್ಲಿ ಕೆಲಸ ಮಾಡುವ ಮಾಧ್ಯಮ ಮಿತ್ರ ರಿಂದ ನಾವು ಬಯಸುವುದೇನು? ನಿಶ್ಪಕ್ಷವಾದ ವಸ್ತುನಿಷ್ಟ ವರದಿಗಳನ್ನು ಮಾತ್ರ. ಜತೆಗೆ ಆದಷ್ಟು ವಿವಾದಿತ ಹಾಗು ಪ್ರಚೋದನಕಾರಿ ವಿಷಯಗಳನ್ನು ದೂರವಿಟ್ಟು ನೋಡುವ ಮನಸ್ಥಿತಿ. ಆದರೆ ಮಾಧ್ಯಮ ದವರೆ ಪ್ರಚೋದನಕಾರಿ ವಿಷಯಗಳನ್ನು ಬ್ಲಾಗ್ ಬರೆದು ಜನರನ್ನು ಹಾದಿ ತಪ್ಪಿಸಿದರೆ ಹೇಗಿರಬೇಡ. 

ಪಕ್ಷಪಾತಿಯಾಗಿ ಕೆಲಸ ಮಾಡಿ ತಾವು ನಂಬಿಕೊಂಡ ಸಿದ್ದಾಂತಗಳನ್ನು ಜನರ ಮೇಲೆ ಹೇರಿದರೆ ಅವರನ್ನು ಜನ  ಧಿಕ್ಕರಿಸಲು ಜನ ಹಿಂದೆ ಮುಂದೆ ನೋಡರು ಅಂತ ಇತಿಹಾಸ ನೋಡಿದರೆ ಗೊತ್ತಾಗುತ್ತೆ.

ಇಲ್ಲಿ ಒಂದು ಗಮನಿಸಿ, ಒಂದು ಮಾತು ಎನ್ನುವ ಪತ್ರದಲ್ಲಿ "ನಿಮಗೆ ನಿಜಕ್ಕೂ ಸಂಪಾದಕೀಯದಿಂದ ಕಿರಿಕಿರಿಯಾಗುತ್ತಿದ್ದರೆ ಅನ್‌ಫ್ರೆಂಡ್ ಎಂಬ ಬಟನ್ ಒತ್ತಿ ನಮ್ಮಿಂದ ದೂರವಾಗಬಹುದು. ನಿಮಗೆ ಬೇಕಾದ ಬರೆಹಗಳನ್ನು ಬರೆಯುವ ಸಾಕಷ್ಟು ಬ್ಲಾಗ್‌ಗಳಿವೆ. ಅಲ್ಲಿ ನಿಮ್ಮ ಓದಿನ ಹಸಿವು ತಣಿಸಿಕೊಳ್ಳಬಹುದು" 

ಮಾತು ಅಂದರೆ ಇದಪ್ಪ, ಭಂಡತನದ ಮಾತು. ಅನಾಮಧೇಯರಾಗಿ ಎಂತ ಮಾತನ್ನು ಹೇಳಿದ್ರಿ. ತಾವು ನಿಜವಾಗಲು ಮಾಧ್ಯಮ ಕ್ಷೇತ್ರದಲ್ಲಿ ಕೆಲಸಮಾಡ್ತಿದ್ದರೆ ಧೈರ್ಯವಾಗಿ ಇದೇ ಮಾತನ್ನು ತಾವು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಹೇಳಿಕೆ ಕೊಡಿ. ನೋಡ್ರಪ್ಪಾ ನಾವು ಹಿಂಗೆ ಬರಿತೀವಿ, ನಾವು ಹಿಂಗೆ ಟಿವಿ ನಲ್ಲಿ ತೋರಿಸ್ತಿವಿ ನಿಮ್ಮ ಇಷ್ಟ ಇದ್ರೆ ನೋಡ್ಕೊಳ್ರಿ ಇಲ್ಲ ಅಂದ್ರೆ ಪತ್ರಿಕೆಯನ್ನು ಅಥವ ಚಾನೆಲ್ ಅನ್ನು ಬದಲಾಯಿಸಿ ಅಂತ ಹೇಳಿ ಸಾರ್. ನೋಡೋಣ ಆಮೇಲೆ ಏನಾಗುತ್ತೆ ಅಂತ! ಯಾವ ಟಿವಿ ಟಿಅರ್ಪಿ ಯಾಸ್ತಿಯಾಗುತ್ತೆ, ಯಾವ ಪತ್ರಿಕೆ ಪ್ರಸಾರ ಜಾಸ್ತಿ ಯಾಗುತ್ತೆ ಅಂತ ಗೊತ್ತಾಗುತ್ತೆ.

ಒಂದು ಇಡೀ ಸಿದ್ದಾಂತವನ್ನು ವಿರೋಧಿಸಲು ಸಮಯಸಾಧಕರಂತೆ ವಿಷಯಗಳನ್ನು ಆಯ್ದು ವ್ಯಕ್ತಿ ಹಾಗು ಸಂಘಟನೆಯನ್ನು ಬ್ಲಾಗ್ ಮುಖಾಂತರ ತೇಜೋವಧೆ ಮಾಡುವ ಪ್ರಯತ್ನ ಎಷ್ಟು ದಿನ ಫಲಿಸುತ್ತೆ. ಕೊನೆ ಪಕ್ಷ ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ ಯಾದ್ರು ಭಂಡತನದಿಂದ ಧೈರ್ಯವಾಗಿ ಆ ಕೆಲಸ ಮಾಡ್ತಾಯಿದಾರೆ. ಕದ್ದು ಮುಚ್ಚಿ ತಮ್ಮ ಸಿದ್ದಾಂತವನ್ನು ಪ್ರತಿಪಾದನೆ ಮಾಡುವಂತ ಕರ್ಮ ನಿಮಗೇನಿದೆ ಸ್ವಾಮಿ. 

ನಿಮ್ಮ ಬ್ಲಾಗ್ ನಲ್ಲಿ ಬರೆದಿರುವ ಹಾಗೆ, "ಇನ್ನು ಬಾಬಾ ರಾಮದೇವ. ಒಬ್ಬ ಚಳವಳಿಗಾರನಿಗೆ ಇರಬೇಕಾದ ಕಾಮನ್ ಸೆನ್ಸ್ ಇಲ್ಲದ ನಾಯಕ ಇವರು. ರಾಮಲೀಲಾ ಮೈದಾನದಲ್ಲಿ ರಾಮದೇವರು ನಡೆಸಿದ್ದು ಚಳವಳಿಯಲ್ಲ, ಹುಚ್ಚಾಟ. ಚಳವಳಿಗೆ ಬೇಕಾದ್ದು ಎಸಿ, ಏರ್ ಕೂಲರ್‌ಗಳು, ಐಶಾರಾಮಿ ವ್ಯವಸ್ಥೆ ಅಲ್ಲ; ಸರ್ಕಾರದಿಂದ ಕಾರ್ಯಸಾಧುವಾದಂಥ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜಾಣತನ ಎಂಬುದನ್ನು ಇವರು ಅರಿತಿರಲಿಲ್ಲ".

ಇಲ್ಲಿ ಗಮನಿಸಬೇಕಾದ ವಿಷಯ ಏನಪ್ಪ ಅಂದರೆ, ದೆಹಲಿ ಯಲ್ಲಿ ಸದ್ಯಕ್ಕೆ ೪೧ ರಿಂದ ೪೩ ಡಿಗ್ರಿ ಯಷ್ಟು ಬಿಸಿಲು ಹಾಗು ೪೯% ನಶ್ಟು ಆರ್ದ್ರತೆ ಯ ವಾತಾವರಣವಿದೆ. ಇಂತಹ ವಾತಾವರಣದಲ್ಲಿ ಕೇವಲ ಪೆಂಡಾಲ್ ಮತ್ತು ಫ್ಯಾನ್ ಗಳು ಅಂತಹ ಸೆಕೆಯನ್ನು ತಡೆಗಟ್ಟಬಲ್ಲದೆ. ಅದು ಅಲ್ಲದೆ ದಿನ ಪೂರ್ತಿ ಅಲ್ಲಿ ಕುಳಿತಿದ್ದರೆ ಮನುಷ್ಯನ ಆರೋಗ್ಯ ಅತಿ ಬೇಗ ಕೆಡುವುದಿಲ್ಲವೇ? ಬೀದರ್, ಗುಲ್ಬರ್ಗ ಬಳ್ಳಾರಿ, ರಾಯಚೂರು ಮಂಗಳೂರಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಂತಹ ವಾತವರಣವಿದ್ದು ಜನ ಪ್ರಯಾಸ ಪಡುವುದನ್ನು ಕಂಡಿದ್ದೇವೆ. ತಾವುಗಳೇನೋ ಏ.ಸಿ. ರೂಮಿನಲ್ಲಿ ಕೂತು ಕೆಲಸ ಮಾಡ್ತೀರ ಆ ಬಿಸಿಲಿನಬಗ್ಗೆ ಅರಿವು ಇದ್ದಿದ್ದರೆ ಇಂತಹ ಬಾಲಿಶ ಮಾತುಗಳನ್ನಾಡುತ್ತಿರಲಿಲ್ಲ. ಮಿಕ್ಕ ವಿಷಯಗಳ ಬಗ್ಗೆ ಹೇಳಬೇಕೆಂದರೆ, ಬಾಬಾರವರನ್ನು ಸಾಧ್ಯವಾದ ಮಟ್ಟಿಗೆ ಟೀಕಿಸಬೇಕು ಅಂತ ತೀರ್ಮಾನಿಸಿ ಬರೆದ ಮಾತುಗಳೇ. ಅಲ್ಲಿ ಬೇರೆ ಏನು ನಿರೀಕ್ಷೆ ಮಾಡೋದಿಕ್ಕೆ ಆಗುತ್ತೆ.

ಅದೇ ಲೇಖನದಲ್ಲಿ ಹೀಗೆ ಏನೆನೊ ಬರೆದು, ಒಂದು ಕಡೆ "ನಿರೀಕ್ಷಿತವಾಗಿಯೇ ಅವರು ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಕೆದಕಿ ಮಾತನಾಡಿದ್ದಾರೆ" ಅಂತ ಬರೀತಾರೆ. ಸುಬ್ರಮಣ್ಯಸ್ವಾಮಿ ಯವರನ್ನು ಕೇಳಿ ಮೂಲದ ಬಗ್ಗೆ ಚೆನ್ನಾಗಿ ಹೇಳ್ತಾರೆ.

"ದಿಗ್ವಿಜಯ್ ಸಿಂಗ್ "ಲಾಡೆನ್ ಜಿ ಅಂತ ಸಂಭೋಧಿಸಿದಾಗ ತಾವೇನಾದ್ರು ಬರೆದ್ರಾ? ಇಲ್ಲ. ಮತ್ತೆ ಯಾಕೆ ಸುಮ್ಮನಿದ್ರಿ. ಇರಲಿ ಬಿಡಿ, ದಿಗ್ವಿಜಯ್ ಸಿಂಗ್ ನೇರವಾಗಿ ಹೇಳ್ತಾರೆ, ನೀವು ಕದ್ದು ಮುಚ್ಚಿ ಹೇಳ್ತೀರ.

`ನೆರಳು ಕೊಟ್ಟು ಹೋದ ಮನುಷ್ಯ' ಲಿಂಗದೇವರು ಹಳೆಮನೆ ಬ್ಲಾಗ್ ನಲ್ಲಿ, ಎಲ್ಲ ವಿಷಯ ಬರೆದು ಕೊನೆಗೆ ಮತ್ತೆ ತಮ್ಮ ಬುದ್ದಿ ತೋರಿಸಿ ಬಿಟ್ರಲ್ಲಾ, ಮತ್ತೆ ಎಡ ಪಂಥೀಯ ಮತ್ತು ಬಲ ಪಂಥೀಯ ಎನ್ನುವ ಮಾತುಗಳು. ಮುಂಚೆ ಹೇಳಿದ ಹಾಗೆ ಎಡಪಂಥೀಯ ವಿಚಾರಧಾರೆಯ ವ್ಯಕ್ತಿಗಳ ಬಗ್ಗೆ ಮಾತ್ರ ಪ್ರೀತಿಯಿಂದ ಬರೆದು ಬಲಪಂಥೀಯ ವ್ಯಕ್ತಿಗಳನ್ನು ತೆಗಳುವುದೆ ಇವರ ಕೆಲಸ.

ನರೇಂದ್ರ ಬಾಬು ಶರ್ಮರ ವಿಚಾರ ದಲ್ಲಿ ಸಹ ಇದೇ ಧಾಟಿ, ಇಲ್ಲಿ ಸಂಪೂರ್ಣ ಸಮಯಸಾಧಕತನ ತೋರಿಸಿ ಬಹುತೇಕ ಹಿಂದೂಗಳು, ನಾವೆಲ್ಲ ಅವರ ವಿಚಾರಗಳನ್ನು ಹಾಗು ಅವರನ್ನು ವಿರೋಧಿಸುವುದನ್ನು ಕಂಡು ಅವರ ಮೇಲೆ ಗದಾಪ್ರಹಾರ ಮಾಡಿತು. ಕಾರಣ, ಅವರೊಬ್ಬ ಹಿಂದೂ, ಪುರೋಹಿತಶಾಹಿ ಮನೋಭಾವದವನು ಹಾಗು ಕಪಟ ಜ್ಯೋತಿಷಿ, ಇಷ್ಟು ಸಾಕಿತ್ತು ಅವರನ್ನು ತೇಜೋವಧೆ ಮಾಡಲು.

"ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಪ್ಪು ಹಣ ತರುವ ವಿಷಯ ಅಡ್ವಾನಿ ತಲೆಗೇಕೆ ಹೊಳೆದಿರಲಿಲ್ಲ? "  ಅಂತ ಕೇಳ್ತಾರೆ, ಸ್ವಲ್ಪ ಕೆಂಪು ಕನ್ನಡಕ ಪಕ್ಕಕಿಟ್ಟು ಸ್ವಿಸ್ ಬ್ಯಾಂಕ್ ವಿಚಾರ ಯಾವಾಗಿನಿಂದ ಪ್ರಸ್ತಾಪ ಆಯಿತು ಅಂತ ಗಮನಿಸಲಿ. ಜಾಗತಿಕ ಅರ್ಥಿಕ ಹಿಂಜರಿತ ಶುರುವಾದಾಗ ಕೆಲ ಯುರೋಪ್ ರಾಷ್ಟ್ರಗಳು ಕಪ್ಪು ಹಣದಬಗ್ಗೆ ಮಾಹಿತಿ ಸಂಗ್ರಹಣೆಗೆ ಮುತುವರ್ಜಿ ವಹಿಸಿದವು. ಅದರ ಫಲವಾಗಿ ನಮ್ಮ ದೇಶದ ಹಣ ಎಷ್ಟಿರಬಹುದು ಎನ್ನುವ ಲೆಕ್ಕಾಚಾರ ಅಂದಿನಿಂದ ಶುರುವಾಗಿದ್ದು. ಆ ವಿಷಯವನ್ನು ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಸೇರಿಸಿ ಚುನಾವಣೆಗೆ ಇಳೀತು. ಆದರೆ ಗೆದ್ದಿದ್ದು ಕಾಂಗ್ರೆಸ್ ಪಕ್ಷ. ಇಲ್ಲಿಗೆ ೩ ವರ್ಷಗಳು ಕಳೆದಿವೆ, ಕೇಂದ್ರ ಸರ್ಕಾರ ಏನು ಮಾಡಿತು ಈ ಸಮಯದಲ್ಲಿ? ಅವರಿಗೆ ಬದ್ದತೆ ಇರಲಿಲ್ವೆ? ಇದನ್ನು ಪ್ರಶ್ನೆ ಮಾಡಿ ಸ್ವಾಮಿ ನೀವು. ಅದು ಬಿಟ್ಟು ಬಾಬ ಬಗ್ಗೆ ಏನೇನೋ ಕಾಗಕ್ಕ ಗುಬ್ಬಕ್ಕನ ಕಥೆ ಬರೀತಾಯಿದೀರಲ್ಲ.

ನಿನ್ನೆ ಸುವರ್ಣ ಟಿವಿಯಲ್ಲಿ ಪ್ರಸಾರ ವಾದ ವಾರ್ತೆ ಯಲ್ಲಿ "ಅಡ್ಡದಾರಿ ಹಿಡಿದ ಬಾಬಾ ರಾಮದೇವ್ ಸತ್ಯಾಗ್ರಹ, ಈಗ ಕಪ್ಪು ಹಣದ ವಿಚಾರದ ಪ್ರಸ್ತಾಪ ಇಲ್ಲ, ಕೇವಲ ಬಾಬ ರವರ ಸತ್ಯಾಗ್ರಹ ಹತ್ತಿಕ್ಕಲು ನಡೆದ ಪ್ರಸಂಗದ ಬಗ್ಗೆ ಮಾತ್ರ ಚರ್ಚೆ ನಡೀತಾಯಿದೆ. ರಾಜಕೀಯ ದಾಳವಾಗಿ ಬಾಬರವರನ್ನು ಉಪಯೋಗಿಸುತಿದ್ದಾರೆ, ಮಾತು ಬದಲಾಯಿಸಿದ ಬಾಬಾ." ಅಂತ ನಿನ್ನೆ ವರಾತ ಶುರು ಹಚ್ಕೊಂಡಿತ್ತು. ಮಾಡೊದಿಕ್ಕೆ ಬೇರೆ ಏನು ಕೆಲಸ ಇಲ್ಲದೆ ಇದ್ರೆ, ಏನೆನೋ ತಲೆಗೆ ಹೊಳೆಯುತ್ತೆ ಅಂತೆ.


ಅದೇನೆ ಇರಲಿ, ಶ್ರೀವತ್ಸ ಜೋಷಿ ಯವರು ಸೂಪರ್ರಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದಕ್ಕೆ ನೀವು ಕಮಕ್ ಕಿಮಕ್ ಅಂತ ಅಂದಿಲ್ಲ
ಶ್ರೀವತ್ಸ ಜೋಶಿ said...
ಕಪ್ಪುಹಣ- ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರುಗಳಲ್ಲಿ... 
ಭ್ರಷ್ಟಾಚಾರ, ಕಪ್ಪುಹಣ, ಬಾಬಾರಾಮದೇವ್ ಸತ್ಯಾಗ್ರಹ... ಇತ್ಯಾದಿ ಈಗ ಸುದ್ದಿಯಲ್ಲಿರುವುದರಿಂದ ಇದನ್ನು ಇಲ್ಲಿ ದಾಖಲಿಸುತ್ತಿದ್ದೇನೆ (ವಿಜಯ ಕರ್ನಾಟಕ ಪತ್ರಿಕೆಯಲ್ಲಿ 27 ಫೆಬ್ರವರಿ 2011ರಂದು ಪರಾಗಸ್ಪರ್ಶ ಅಂಕಣದಲ್ಲಿಯೂ ಇದನ್ನು ವಿವರಿಸಿದ್ದೆ)-
ಎಪ್ಪತ್ತೈದು ಲಕ್ಷ ಕೋಟಿ ಎಂಬ ಒಂದು ಸಂಖ್ಯೆಯ ವಿಚಾರ ತಿಳಿಸುತ್ತೇನೆ ಈಗ. ಈ ಸಂಖ್ಯೆಯನ್ನು ಬರೆಯಲು 75ರ ಬಲಗಡೆಯಲ್ಲಿ ಹನ್ನೆರಡು ಸೊನ್ನೆಗಳು ಬೇಕು. 75 ಲಕ್ಷ ಕೋಟಿ ಏನು ಗೊತ್ತೇ? ವಿದೇಶೀ ಬ್ಯಾಂಕ್‌ಗಳಲ್ಲಿ ಭಾರತೀಯರ ಹೆಸರಿನಲ್ಲಿರುವ ಕಪ್ಪುಹಣ ರೂಪಾಯಿಗಳಲ್ಲಿ! ಬಹುಶಃ ಸಂಖ್ಯೆಯ ರೂಪದಲ್ಲಿ ಅಂಥ ದೊಡ್ಡ ಮೊತ್ತವೆಂದೇನೂ ಅನಿಸುವುದಿಲ್ಲ. 2ಜಿ ಸ್ಪೆಕ್ಟ್ರಂ ಹಗರಣದ ಮೊತ್ತ ಸುಮಾರು 2 ಲಕ್ಷ ಕೋಟಿ ರೂಪಾಯಿಗಳು ಎಂದು ಓದಿದ ನೆನಪು. ಅದರ ಮೂವತ್ತೇಳುವರೆ ಪಟ್ಟು ಇದೆ ಈ ಮೊತ್ತ. ಸರಿ, ಈಗ ಇದಕ್ಕೆ ಒಂದು ಪ್ರತಿಮೆ ಕಟ್ಟೋಣ. ನಿಜಕ್ಕೂ ಎಷ್ಟೊಂದು ದೊಡ್ಡ ಮೊತ್ತವಿದು ಎಂದು ಮನದಟ್ಟಾಗುವಂತಿರಬೇಕು ಪ್ರತಿಮೆ. 75 ಲಕ್ಷ ಕೋಟಿ ರೂಪಾಯಿಗಳು ಸ್ವಿಸ್ ಬ್ಯಾಂಕ್‌ನಿಂದ ಹೊರಬಂದು ಹಾರ್ಡ್ ಕ್ಯಾಷ್ ಆಗಿ ಭಾರತಕ್ಕೆ ಬಂತು ಅಂತಿಟ್ಕೊಳ್ಳೋಣ. ಸಾವಿರ ರೂಪಾಯಿಗಳ ಗರಿಗರಿ ನೋಟುಗಳು. ಒಂದು ನೋಟಿನ ಉದ್ದ 18 ಸೆ.ಮೀ, ಅಗಲ 8 ಸೆ.ಮೀ. ನೂರು ನೋಟುಗಳ ಕಟ್ಟು ಮಾಡಿದರೆ ಅದರ ದಪ್ಪ ಸುಮಾರು 1.7 ಸೆ.ಮೀ ಎಂದು ‘ನೋಟ್’ ಮಾಡಿಟ್ಟುಕೊಳ್ಳೋಣ. ಈಗ ಒಂದು ಲಾರ್ಜ್ ಸೈಜ್ ಸೂಟ್‌ಕೇಸಿನ ಅಳತೆಗಳನ್ನು ನೋಡೋಣ. 71 ಸೆ.ಮೀ ಉದ್ದ, 53 ಸೆ.ಮೀ ಅಗಲ, 24 ಸೆ.ಮೀ ಎತ್ತರ. ಒಂದು ಸೂಟ್‌ಕೇಸ್‌ನೊಳಗೆ ಒಟ್ಟು 360 ಕಟ್ಟುಗಳು ತುಂಬಿಕೊಳ್ಳುತ್ತವೆ. ಒಂದು ಕಟ್ಟಿನಲ್ಲಿ ಒಂದು ಲಕ್ಷ ರೂಪಾಯಿ, ಆದ್ದರಿಂದ ಒಂದು ಸೂಟ್‌ಕೇಸ್‌ನಲ್ಲಿ ಒಟ್ಟು 3.6 ಕೋಟಿ ರೂಪಾಯಿ. ಒಂದು ಅಂಬಾಸಿಡರ್ ಕಾರಿನ ಡಿಕ್ಕಿಯಲ್ಲಿ ನಾಲ್ಕು ಸೂಟ್‌ಕೇಸ್‌ಗಳು ಹಿಡಿಸುತ್ತವೆ ಅಂತಿರಲಿ. ಹಾಗಾಗಿ ಒಂದು ಕಾರಿನಲ್ಲಿ ಒಟ್ಟು 14.4 ಕೋಟಿ ರೂಪಾಯಿಗಳು. ವಿದೇಶೀ ಬ್ಯಾಂಕ್‌‌ಗಳಿಂದ ಹೊರಬಂದ ಅಷ್ಟೂ ಮೊತ್ತವನ್ನು ತುಂಬಲು 5,20,833 ಕಾರುಗಳು ಬೇಕು. ಒಂದು ಕಾರಿನ ಉದ್ದ ಸುಮಾರು ನಾಲ್ಕೂಕಾಲು ಮೀಟರ್ ಅಂತಿಟ್ಟುಕೊಳ್ಳೋಣ. ಒಂದರಹಿಂದೆ ಒಂದರಂತೆ ಈ ಎಲ್ಲ ಕಾರುಗಳು ಹೊರಟರೆ, ನಡುವೆ ತಲಾ ಮುಕ್ಕಾಲು ಮೀಟರ್ ಗ್ಯಾಪ್ ಅಂತಿಟ್ಟುಕೊಂಡರೂ ಮೆರವಣಿಗೆ ಸುಮಾರು 3000 ಕಿ.ಮೀಗಿಂತಲೂ ಹೆಚ್ಚು ಉದ್ದವಾಗುತ್ತದೆ. ಅಂದರೆ "ಆಸೇತುಹಿಮಾಲಯ" ಅಥವಾ, "ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ" ಸರಳರೇಖೆ ಎಳೆದರೆ ಅಷ್ಟು ಉದ್ದ!
June 7, 2011 5:29 PM

ಮಂಗಳವಾರ, ಜೂನ್ 7, 2011

ಟಿಪ್ಪುಸುಲ್ತಾನ್ ಜಯಂತಿಗೆ ಸಾರ್ವತ್ರಿಕ ರಜೆ ಶೀಘ್ರದಲ್ಲೆ ಸರಕಾರಿ ಪ್ರಕಟಣೆ ಹೊರಬೀಳುವ ನೀರಿಕ್ಷೆ.

ನೋಡೀ ಸಾ,........ ಗೋರ್ಮೆಂಟ್ ನೋರು ಇಲ್ಲೊಂದು ನಿರ್ಧಾರ ತಗಂಡು ಹೊಸದಾಗಿ ಇನ್ನೊಂದು ಹಾಲಿಡೆ ಸಾಂಕ್ಸನ್ ಮಾಡ್ತಾವ್ರೆ (ಇನ್ನೂ ಮಾಡಿಲ್ಲ). ಈಗಲೆ ೨೫ ದಿನ ರಜೆಗಳು ಅವೆ, ಆಮೇಲೆ ಎರಡನೇ ಸನಿವಾರ ಅಂತ ಹನ್ನೆಲ್ಡು ದಿನ ಎಕ್ಸ್ಟ್ರಾ, ಜತೆಗೆ ಯಾರಾದ್ರು ದೊಡ್ಡ ರಾಜಕಾರಣಿ ಸತ್ರೆ ಸೋಕಾಚರಣೆ ಅಂತ ಅದಕ್ಕೆ ಅಂತ ಒಂದೆಲ್ಡು ದಿನ. ಇಸ್ಟೊಂದು ರಜಾ ಕೊಟ್ಟು ಜನರನ್ನು ಮನೇಲಿ ಕೂಡಿಸಿದ್ರೆ ಯಾವ ರಾಜ್ಯ ಉದ್ದಾರ ಆಗ್ತದೆ ಸಾ?

ಮೊದಲೇ ಸರ್ಕಾರಿ ನೋಕ್ರಿ ಜನ ಸರ್ಯಾಗಿ ಕೆಲ್ಸ ಮಾಡಕಿಲ್ಲ ಅಂತ ಆಪಾದ್ನೆ ಬೇರೆ ಐತೆ, ಇವಾಗ ಇಂಗೆ ರಜಾ ಮೇಲೆ ರಜಾ ಕೊಟ್ರೆ ಎಂಗೆ ಸಿವಾ?

ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಾವ್ರೆ, ಅಂತದ್ರಾಗೆ ಅವರು ಹುಟ್ಟಿದ ದಿನಾನೆ ಜನರು ಕಾಯಕ ಮಾಡದಂಗೆ ರಜಾ ಗೋಸಣೆ ಮಾಡಿದ್ರಿ. ಪ್ರವಾದಿ ಮೊಹಮ್ಮದ್ ಪೈಗಂಬರ್ ಹುಟ್ಟಿದ ಈದ್ ಮಿಲಾದ್ ದಿವಸ ಸೌದಿ ಅರೇಬಿಯ ದೇಸದಾಗೆ ರಜಾನೆ ಕೊಡಾಕಿಲ್ಲ, ಅಂತದ್ರಲ್ಲಿ ಟಿಪ್ಪು ಸುಲ್ತಾನ್ ಹುಟ್ಟಿದ ದಿವಸ ಅಂತ ಹೊಸ ರಜಾ ಕೊಡೋಕೆ ಹೊಂಟವ್ರಲ್ಲ ಗುರುಗಳೇ?ಮೊದಲೇ ಆವಯ್ಯನ ಮೇಲೆ ಏನೇನೋ ಆರೋಪಗಳು ಅವೆ, ಅವಯ್ಯ ಲಕ್ಸಾಂತರ ಜನಾನ ಮತಾಂತರ ಮಾಡಿದ್ರು ಅಂತ, ಆಡಳಿತದಲ್ಲಿ ಕನ್ನಡ ಬದಲು ಪಾರ್ಸಿ ಭಾಸೆನ ಉಪಯೋಗ್ಸಿದ್ರು ಅಂತ. ವಿಸ್ಯ ಹಿಂಗಿರಬೇಕಾದ್ರೆ ಅವರ ಹೆಸರಿನಾಗೆ ಒಂದು ಹೊಸ ರಜಾ ಬೇಕಾಗಿತ್ತ ಗುರುವೇ.

ಕನಕ ಜಯಂತಿಗೆ ವಾಲ್ಮಿಕಿ ಜಯಂತಿಗೆ ರಜಾ ಕೊಟ್ರಿ ಹಿಂಗೆ ಎಲ್ಲ ಜಯಂತಿ ಗಳಿಗೆ ರಜಾ ಕೊಡ್ತಾ ಹೋದ್ರೆ ಜನ ಸಾಮನ್ಯರ ದಿನನಿತ್ಯದ ಸರ್ಕಾರಿ ಕೆಲಸ ಕಾರ್ಯಗಳಿಗೆ ತೊಂದರೆ ಯಾಗಲ್ವ ಸಿವಾ!

ಸೋಮವಾರ, ಜೂನ್ 6, 2011

ಬ್ರಾಹ್ಮಣ ವಿರೋಧಿಯಲ್ಲ: ಸಿದ್ಧಲಿಂಗಯ್ಯ.


ಗುಜರಿ ಅಂಗಡಿಯ ಬಿ.ಎಮ್. ಬಷೀರ್ ರವರ ಪ್ರತಿಕ್ರಿಯೆ


ಸಂಪಾದಕೀಯದಲ್ಲಿ  ಗುಜರಿ ಅಂಗಡಿಯ ಬಿ.ಎಮ್. ಬಷೀರ್ ರವರಿಂದ ಈ ಕೆಳಗಿನ ಪ್ರತಿಕ್ರಿಯೆ


೦***********೦
ರಾಮದೇವ್ ಕಪ್ಪು ಹಣದ ವಿರುದ್ಧ ಸತ್ಯಾಗ್ರಹಕ್ಕಿಳಿದಿರೂದರ ಸ್ಪೂರ್ತಿಯಿಂದ ಇನ್ನೂ ಕೆಲವರು ಸತ್ಯಗ್ರಹಕ್ಕಿಳಿದಿದ್ದಾರೆ.
ಮುಖ್ಯವಾಗಿ ಲಿಕ್ಕರ್ ವಿರುದ್ಧ ಮಲ್ಯ ಚಳುವಳಿ ನಡೆಸಲಿದ್ದಾರೆ.
ರೈತರ ಪರವಾಗಿ ಖೇಣಿ ಸತ್ಯಾಗ್ರಹ ನಡೆಸುತ್ತಾರಂತೆ.
ಮುಂಬೈ ಸ್ಫೋಟದ ವಿರುದ್ಧ ದಾವೂದ್ ಇಬ್ರಾಹಿಂ ಅಮರಣಾಂತ ಸತ್ಯಾಗ್ರಹ ಮಾಡುತ್ತಾರಂತೆ.
ದಲಿತರ ಹಕ್ಕಿನ ಪರವಾಗಿ ಪೇಜಾವರ ಶ್ರೀ ಸತ್ಯಾಗ್ರಹ ನಡೆಸುತ್ತಾರಂತೆ.
ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ನರೇಂದ್ರ ಮೋದಿ ಸತ್ಯಾಗ್ರಹ ಮಾಡುತ್ತಾರಂತೆ.
ನಕಲಿ ನೋಟುಗಳ ತಯಾರಿ ವಿರುದ್ಧ ತೆಲಗಿ ಸತ್ಯಾಗ್ರಹ ಮಾಡುತ್ತಾರಂತೆ.
ಬನ್ನಿ ಅವರ ಒಳ್ಳೆಯ ಕಾರ್ಯವನ್ನು ಬೆಂಬಲಿಸೋಣ. ಚಳುವಳಿ ಮಾಡುವವರು ಯಾರಾದರೇನು, ಅವರ ಉದ್ದೇಶ ಒಳ್ಳೆಯದೇ ಅಲ್ಲವೇ?
B.M.Basheer
June 6, 2011 3:24 PM
೦***********೦
ಹ್ಮ್! ಏನು ಹೇಳಬೇಕು ಅಂತಾನೆ ಗೊತ್ತಾಗ್ತಯಿಲ್ಲ. ಮನಸ್ಸಿಗೆ ಬೇಜಾರಾಗ್ತಾಯಿದೆ.
ಪ್ರತಿಯೊಬ್ಬರ ಬಣ್ಣ ಈಗ ಕಳಚಿಬೀಳ್ತಾಯಿದೆ.
ಅವರಿಂದ ಇಂತಹ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ.
ಅವರ ಮನದೊಳಗಿನ ಆಕ್ರೋಶ, ಕಿಚ್ಚು ಮತ್ತು ದ್ವೇಶವನ್ನು ಇಂದು ಹೊರಗಡೆ ಹಾಕಿದ್ದಾರೆ ಅನ್ನುವದಕ್ಕಿಂತ ನಂಜನ್ನು ಕಾರಿದ್ದಾರೆ ಅಂತ ಹೇಳುವುದು ಸೂಕ್ತ.


ಗುಜರಿ ಅಂಗಡಿ ಬ್ಲಾಗ್ ನಲ್ಲಿ ಒಳ್ಳೋಳ್ಳೆಯ ಕಥೆಗಳನ್ನು ಅವರು ಬರೆದಿದ್ದಾರೆ, ನಾವು ಓದಿ ಮೆಚ್ಚಿ ಮತ್ತು ಬೇರೆಯವರಿಗೆ ಸಹ ತಿಳಿಸಿ ಖುಶಿ ಪಟ್ಟಿದ್ದೇವೆ. ಅವರಲ್ಲಿರುವ ಬರಹಗಾರನಿಗೆ ನಮ್ಮ ನೂರೆಂಟು ಸಲಾಮ್ ಗಳು. ಅವರ ಲೇಖನ, ಕಥೆ ಮತ್ತು ಬ್ಲಾಗ್ ಗಳಲ್ಲಿ ಬ್ಯಾರಿ, ಮದರಸ, ಮಸೀದಿ, ಅಲ್ಲಾ ಎನ್ನುವ ಪದಗಳು ನುಸುಳಿದರು ಸಹ ಅನ್ಯಥಾ ಭಾವಿಸದೆ ಅವು ನಮ್ಮವೆ ಎಂದು ಮನಪೂರ್ವಕ ವಾಗಿ ಸ್ವೀಕರಿಸಿ ಹರ್ಷಿಸಿದ್ದೇವೆ. 
ಅಂತಹುದರಲ್ಲಿ ಇವರಂತಹ ಪ್ರಗತಿಪರ ವಿಚಾರವಾದಿ ಲೇಖಕರು ಸಹ ಗುಂಪಿನೊಳಗೆ ಗೋವಿಂದ ಅನ್ನುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂದರೆ ನಮಗೆ ಬಹು ಆಶ್ಚರ್ಯ ವಾಗುತ್ತದೆ.
ಎಲ್ಲ ಅಲ್ಪಸಂಖ್ಯಾತರ ಮನೋಭಾವ ಒಂದೇ ಅವರ ಎಲ್ಲ ಗುಣ ಸ್ವಭಾವ ಗಳು ಒಂದೇ ಅಂತ ನಾವು ಭಾವಿಸಬೇಕಾಗುತ್ತದೆಯೆ? , ಇಂದು ಇಂತಹ ಪ್ರತಿಕ್ರಿಯೆ ಸಂಪಾದಕೀಯದಲ್ಲಿ ಹಾಕಿದ್ದಾರೆ, 
ಮುಂದೊಂದು ದಿನ ತಮ್ಮಲ್ಲಿರುವ ಆವೇಶವನ್ನು ಬೇರೆ ಅನಾಹುತಕಾರಿ ಕೆಲಸಮಾಡಲು ಹೇಸುವುದಿಲ್ಲ ಅಂತ ಏನು ಗ್ಯಾರಂಟಿ. 
ಒಟ್ಟಿನಲ್ಲಿ ಕೇಸರಿ ಪಡೆಯನ್ನು ಖಂಡಿಸಬೇಕು ಹಾಗು ಅವರನ್ನು ಸಾಧ್ಯವಾದಕಡೆ ಎಲ್ಲಾ ಬಗ್ಗು ಬಡಿಯಬೇಕು. ಇದು ಅವರ ಘೋಷ ವಾಕ್ಯವಾಗಿದೆ.
ರಾಮದೇವ ಬಾಬಾರವರು ಮಾಡಬಾರದಂತಹ ತಪ್ಪನ್ನು ಏನಾದರು ಮಾಡಿದ್ದಾರೆಯೆ? ಅಧಿಕಾರವನ್ನೇನಾದರು ಅನುಭವಿಸಿ ಅಕ್ರಮ ವಾಗಿ ಹಣವನ್ನೇನಾದರು ಸಂಪಾದಿಸಿದ್ದಾರೆಯೆ? ಭಯೋತ್ಪಾದಕ ಕೆಲಸಗಳಲ್ಲೇನದರು ಕೈ ಹಾಕಿದ್ದಾರೆಯೆ?  ಯಾವತರಹ ಘೋರ ಗಂಬೀರ ಆಪಾದನೆಗಳಿವೆ? ಯಾವುದೇ ರೀತಿಯ ಸಾಬೀತಾಗದ, ಪೊಳ್ಳು ಆಪಾದನೆಗಳೆ ಅವರ ಮೇಲಿದೆಯೇ ಹೊರತು ಬೇರೆ ಎಂತಹ ಗಂಭೀರ ಆಪಾದನೆ ಇಲ್ಲ. ಕೇಸರಿ ಪಡೆ ಬೆಂಬಲಕ್ಕೆ ನಿಂತಿದೆ ಜತೆಗೆ ಅವರೊಬ್ಬ ಹಿಂದೂ ಎನ್ನುವ ಕಾರಣಕ್ಕೆ ಅವರನ್ನು ಟೀಕಿಸುತಿದ್ದೀರಲ್ಲಾ ಏನು ಹೇಳಬೇಕು ಸಾರ್ ನಿಮಗೆ
ಅದೆಲ್ಲ ಸರಿ, ಕಳೆದ ಬಾರಿ ರಾಜ್ಯದ ಚುನಾವಣಾ ಸಂಧರ್ಭ ದಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಯನ್ನು ಬೆಂಬಲಿಸಿದ ಹಿರಿಯ ಪತ್ರಕರ್ತ ಮಾನ್ಯ ರವಿಬೆಳಗೆರೆ ಯವರ ಬಗ್ಗೆ ನಿಮ್ಮ ಅಭಿಪ್ರಾಯ ವೇನು ಸಾರ್? ಚಲಂ ಮತ್ತು ಯಮುನಕ್ಕ ಒಂದೇ ವೇದಿಕೆ ಮೇಲೆ ಅಂತ ಬ್ಲಾಗ್ ಬರೆದಿರಿ. ಆಗ ನಿಮಗೆ ವೈಚಾರಿಕ ನೆಲೆಗಟ್ಟಿನ ಭಿನ್ನಭಿಪ್ರಾಯ ನಿಮಗೆ ಅಡ್ಡ ಬರಲಿಲ್ಲವೆ.
ಏರುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಗಳಿಗೆ ಕಡಿವಾಣ ಹಾಕದ ಕೇಂದ್ರ ಸರ್ಕಾರ ಜತೆಯಲ್ಲಿ ಒಂದರ ಹಿಂದೆ ಒಂದು ಹಗರಣಗಳು. ಇಂತಹ ಪರಿಸ್ಥಿತಿಯಲ್ಲಿ ಈ ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳದೆ ಇದ್ದರೆ ಇನ್ಯಾರು ಬಂದು ಕಾಪಾಡುತ್ತಾರೆ ಸ್ವಾಮಿ.
ನಿಮ್ಮಂತ ವಿಚಾರವಾದಿಗಳು ಏನಾದರು ಇಂತಹ ಹೋರಾಟ ಮಾಡಿದ್ದರೆ ಅಥವ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಮ್ ರವರು ಒಂದು ವೇಳೆ ಇಂತಹ ಚಳುವಳಿಗೆ ಕೈ ಹಾಕಿದ್ದರೆ ಖಂಡಿತ ನಾವು ಜಾತಿ ಧರ್ಮ ನೋಡದೆ ಬೆಂಬಲಿಸುತಿದ್ದಿವಿ. ಏಕೆಂದರೆ ನಮ್ಮ ಮನಸ್ಸು ಗಳು ವಿಶಾಲವಾಗಿವೆ. ಸಂಕುಚಿತವಾಗಿಲ್ಲ. ಕೊನೆ ಪಕ್ಷ ಎ.ಆರ್.ರೆಹಮಾನ್ ಮುಂದಾಳತ್ವ ವಹಿಸಿಕೊಂಡರು ನಮ್ಮ ಬೆಂಬಲವಿದೆ ಸಾರ್.

ಭಾನುವಾರ, ಜೂನ್ 5, 2011

ಬಾಬಾ ಬಂಧನ: ಇದು ಪ್ರಜಾಪ್ರಭುತ್ವ ವಿರೋಧಿಯಲ್ಲವೇ?


ಶಾಂತಿಯುತ ವಾಗಿ ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು ಅಲ್ಲ ಅಂತ ಇಂದು ಸಾಬೀತಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತಿದ್ದ ಬಾಬಾ ರಾಮ್ ದೇವ್ ಅವರನ್ನು ಮಧ್ಯರಾತ್ರಿ ೨:೩೦ ಕ್ಕೆ ಬಂಧಿಸುವ ಅಗತ್ಯವೇನಿತ್ತು? ಇದಕ್ಕೆ ನಮ್ಮ ಬುದ್ದಿವಂತ(ಸಂಪಾ.....) ಜನರು ಏನು ಹೇಳ್ತಾರೋ ಎಂದು ಕಾದು ನೋಡಬೇಕು. 
ಒಂದು ವೇಳೆ ಈ ಘಟನೆ ಬಿಜೇಪಿ ಆಡಳಿತ ವಿರುವ ನಮ್ಮ ರಾಜ್ಯದಲ್ಲಿ  ರಾಮ್ ದೇವ ಬಾಬ ರ ಬದಲಿಗೆ ಬೇರೊಬ್ಬ ಜಾತ್ಯಾತೀತ ಮುಖಂಡರು ಪ್ರತಿಭಟನೆ ಮಾಡಿದಾಗ ಅವರ ಬಂಧನವಾಗಿದ್ದರೆ  ಈ ನಮ್ಮ ಸೋ ಕಾಲ್ಡ್ ಜನರು ಊರೂ ಕೇರಿ ಎಲ್ಲ ಒಂದು ಮಾಡುತ್ತಿರಲಿಲ್ವಾ. ಹಿಂದೆ ನಡೆದ ಘಟನೆ ಗಳನ್ನು ನೆನೆಸಿಕೊಂಡರೆ ನಮಗೆ ಹೀಗೆ ಅನಿಸುವುದರಲ್ಲಿ ತಪ್ಪಿಲ್ಲ ಅಲ್ವಾ. 
ಮಾನ್ಯ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಹೇಳ್ತಾಯಿದಾರೆ "ಅವರು ರಾಮ್ ಲೀಲಾ ಮೈದಾನ ದಲ್ಲಿ ಯೋಗ ಶಿಕ್ಷಣ ನೀಡುವುದಕ್ಕೆ ಅನುಮತಿ ಪಡೆದಿದ್ದರು, ಆದರೆ ಅವರು ರಾಜಕೀಯ ಚಳುವಳಿ ಮಾಡಿದ್ದಾರೆ. ನೀತಿ ನಿಯಮ ಉಲ್ಲಂಘನೆ ಯಾಗಿರುವುದರಿಂದ ಬಂಧನವಾಗಿದೆ" ಅಂತ ಸಮಜಾಯಿಷಿ ನೀಡಿದರು.
ಅಲ್ಲ ಸಾರ್, ಬಾಬಾ ಅವರು ಸತ್ಯಾಗ್ರಹ ಮಾಡ್ತಿನಿ ಅಂತ ಗೋಷಣೆ ಮಾಡಿ ದಿನಗಳೆ ಉರುಳಿದವು, ಮಾಧ್ಯಮದಲ್ಲಿ ಬಹುವಾಗಿ ಪ್ರಚಾರ ವಾಯಿತು, ಹಾಗು ನಿಮ್ಮ ಕೇಂದ್ರ ಸರ್ಕಾರ ಸತ್ಯಾಗ್ರಹ ನಿಲ್ಲಿಸೋದಿಕ್ಕೆ ಎಷ್ಟೆಲ್ಲಾ ಪ್ರಯತ್ನ ಮಾಡಿದ್ರಿ, ಸಂಧಾನಕ್ಕೆ ನೀವು ಬಂದಿದ್ರಿ. ಆಗೆಲ್ಲ ನಿಮಗೆ ಕಾನೂನಿನ ಅರಿವು ಇರಲಿಲ್ವೆ. ಒಟ್ಟಿನಲ್ಲಿ ಸತ್ಯಾಗ್ರಹ ನಿಲ್ಲಿಸೋಕೆ ನಿಮಗೊಂದು ಪಿಳ್ಳೆನೆವ ಬೇಕಾಗಿತ್ತು ಅಲ್ವಾ?
ಈ ಆಂದೋಲನಕ್ಕೆ ಸತತ ವಾಗಿ ಕೋಮು ಬಣ್ಣ ಹಚ್ಚಲು ವ್ಯವಸ್ಥಿತ ರೀತಿಯಲ್ಲಿ ಮೊದಲಿನಿಂದಲೂ ಪಿತೂರಿ ನಡೆದೇಯಿತ್ತು. ಇಂಗ್ಲೀಶ್ ಟಿವಿ ಮಾದ್ಯಮ ಗಳಿಂದ ಶುರುವಾಗಿ ಕೊನೆಗೆ ನಮ್ಮ ಕನ್ನಡ ಕೆಲ ಬ್ಲಾಗ್ ಗಳವರೆಗೆ ಇದೇ ಕೆಲಸ ಆಯಿತು. 
ಇನ್ಮುಂದೆ ಇಂತಹ ಕೆಲಸಗಳಿಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಅಥವ ಜಾತ್ಯಾತೀತ ವ್ಯಕ್ತಿ ಗಳಿಂದ ಚಾಲನೆ ದೊರೆತರೆ ಈ ನಮ್ಮೆಲ್ಲ ಮಿತ್ರರಿಗೆ ಹಾಲು ಕುಡಿದಷ್ಟು ಸಂತೋಷವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 
ಇದು ಭಾರತ ದೇಶ... ಕ್ಷಮಿಸಿ ಇದು ಇಂಡಿಯಾ ಇಲ್ಲಿ ಏನು ಬೇಕಾದರು ಆಗಬಹುದು ಏನು ಬೇಕಾದರು ನಡೆಯಬಹುದು. 
ಮೇರಾ ಇಂಡಿಯಾ ಮಹಾನ್.

ಸಂಪಾದಕೀಯದ ಹಿಡನ್ ಅಜೆಂಡಾ!!!
ನಿರ್ಭಯ, ನಿಷ್ಠುರ, ವಿಕಟ, ಕಟಕಿ, ಚಟಾಕಿ ಮಾತುಗಳಿಂದಾಗಿ ಏಕಕಾಲಕ್ಕೆ ಖ್ಯಾತಿ ಮತ್ತು ಅಪಖ್ಯಾತಿಯನ್ನು ಸಂಪಾದಿಸಿದ ಕನ್ನಡ ಬ್ಲಾಗಿನ ಹೆಸರು "ಸುದ್ದಿಮಾತು" ಅಂತ ಅಂದು ದಟ್ಸ್ ಕನ್ನಡ ವರದಿ ಮಾಡಿತ್ತು. ಈಗ "ಸುದ್ದಿಮಾತು" ಅನ್ನುವ ಹೆಸರಿನ ಬದಲಾಗಿ ಸಂಪಾದಕೀಯ ಅಂತ ಓದಿಕೊಳ್ಳಬೇಕು. 


ಕಾರಣ ಈ ಎರಡು ಬ್ಲಾಗ್ ಗಳ ಉದ್ದೇಶ ಒಂದೇ, ಎರಡು ಬ್ಲಾಗ್ ಗಳ ಲೇಖನಗಳನ್ನು ಒಮ್ಮೆ ಪರಾಂಬರಿಸಿ ನೋಡಿದಾಗ ವಿಷಯ ಬಹಳ ಸ್ಪಷ್ಟವಾಗುತ್ತೆ ಹಾಗು ಎರಡರ ಮದ್ಯೆ ಯಾವುದೇ ವ್ಯತ್ಯಾಸ ಕಾಣಸಿಗುವುದಿಲ್ಲ. ಇವರಿಗೆ ಪ್ರಗತಿಪರರು, ಜಾತ್ಯಾತೀತ ವಾದಿಗಳು, ಎಡಪಂಥೀಯ, ವಿಚಾರವಾದಿಗಳು ಎಂದು ತೋರಿಸಿಕೊಳ್ಳುವ ಹಪಾಹಪಿ. ಸಮಯ ಸಿಕ್ಕಾಗ ಹಿಂದುತ್ವ ವಾದಿ, ಕೋಮು ವಾದಿಗಳೆಂದು ಕರೆಯುವ ಜನರನ್ನು ಜಾಡಿಸುವುದು ಇವರ ಹವ್ಯಾಸ. ಅಪ್ಪಟ ಹಿಂದೂ ವಿರೋಧಿ ಬ್ಲಾಗ್. ಪ್ರತಿ ಅಕ್ಷರದಲ್ಲೂ ಹಿಂದೂ ವಿರೊಧಿ ಭಾವನೆಯೆ ತುಂಬಿದೆ. ಅದು ಒಂದು ರೀತಿಯಲ್ಲಿ ನುಡಿ ಭಯೋತ್ಪಾದನೆ. ಇದಕ್ಕೆ ಮುನ್ನ ಸುದ್ದಿಮಾತು ಇದೇ ಕೆಲ್ಸ ಮಾಡ್ತಿತ್ತು. ಈಗ ಸಂಪಾದಕೀಯ. 
ಅಂದು ಸುದ್ದಿಮಾತಿನಲ್ಲಿ "ಹೊಲಸು ಕಾರಿಕೊಂಡ ಭೈರಪ್ಪ" ಎನ್ನುವ ಲೇಖನ ಬಂದಿತ್ತು, ಅದೇ ರೀತಿಯ ಲೇಖನ  ಚಿದಾನಂದ ಮೂರ್ತಿಯವರ ಕುರಿತಾಗಿ "ಚಿಮೂ ಕುರಿತು ರವಿ ಬರೆದಿದ್ದಾರೆ, ಓದಿ..." ಅಂತ ವಾರಪತ್ರಿಕೆಯ ಒಂದು ತುಣುಕನ್ನು ತೋರಿಸಿತು. ಅದನ್ನು ಸಮರ್ಥಿಸಲು ಮತ್ತೆ ಇನ್ನೂಒಂದು ಲೇಖನ "ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ಚಿದಾನಂದ ಮೂರ್ತಿಯವರನ್ನು ಕಾಪಾಡಿದ್ದು ಯಾರು?" ಮತ್ತು " ಮಾಂಸದ ಅಂಗಡಿಯಲ್ಲಿ ಚೆಂಡುಹೂವು ನೇತುಹಾಕ್ತಾರಾ ಚಿದಾನಂದಮೂರ್ತಿಗಳೇ?" ಹೀಗೆ ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಲ್ಲಲ್ಲಿ ವಿಷಕಾರಿಕೊಂಡು ಬಂದಿದೆ 
ರಂಜಾನ್ ದರ್ಗಾ, ದಿನೇಶ್ ಅಮೀನ್ ಮಟ್ಟು, ಜಿ.ಎನ್.ಮೋಹನ್, ಶಶಿಧರ್ ಭಟ್, ಪ್ರಜಾವಾಣಿ, ಪ್ರಗತಿಪರರು ವಿಚಾರವಾದಿಗಳು ಇಂತಹ ಪರವಾಗಿರುವ ಸಂಘ ಸಂಸ್ಥೆಗಳ ವಿಷಯದಲ್ಲಿ ಅತ್ಯಂತ ಆತ್ಮೀಯವಾಗಿ ಪ್ರೀತಿಯಿಂದ ಪುಟಗಟ್ಟಲೆ ಬರೆಯುತ್ತಾರೆ. ಅದೇ ರೀತಿ, ಆರೆಸ್ಸೆಸ್, ವಿಜಯಕರ್ನಾಟಕ, ಕನ್ನಡಪ್ರಭ, ಪೇಜಾವರ ಶ್ರೀಗಳು ಪ್ರತಾಪ್ ಸಿಂಹ, ವಿಶ್ವೇಶ್ವರಭಟ್ಟರು, ಚಿದಾನಂದ ಮೂರ್ತಿ, ಭೈರಪ್ಪ ,ಮುಂತಾದವರ ಬಗ್ಗೆ ಯಕ್ಕಾ ಮಕ್ಕಾ ಉಗಿದು ಉಪ್ಪಿನಕಾಯಿ ಹಾಕ್ತಾರೆ. 
ಬಹುತೇಕ ಜನರು ಯಾವಗಲೂ ಕೇಳುವ ಪ್ರಶ್ನೆ, ಇದೆಲ್ಲ ಯಾರನ್ನು ಮೆಚ್ಚಿಸುವುದಕ್ಕೆ ಮಾಡ್ತಾರೆ? 
ಒಂದು ವೇಳೆ, ನಿಮ್ಮ ಮನದಮೂಲೆಯಲ್ಲಿರುವ ದ್ವೇಷ, ವರ್ಷಾನುವರ್ಷಗಳಿಂದ ಅನುಭವಿಸಿದ ಶೋಷಣೆ, ಅವಮಾನ, ನೋವು ಇಂತಹ ಲೇಖನಗಳಿಂದ ದೂರವಾಗುತ್ತೆ ಅನ್ನುವ ಭ್ರಮೆ ನಿಮಗಿದೆಯೇ? 
ಸ್ವಾಮಿ, ಇಂದಿನ ಹಿಂದೂ ಧರ್ಮ ಪ್ರತಿಪಾದಕರಲ್ಲಿ ಕೇವಲ ಬ್ರಾಹ್ಮಣ, ವೈಶ್ಯ, ಕ್ಷತ್ರಿಯರೊಂದೆ ಇಲ್ಲ, ಅವರ ಜತೆಗೆ ಶೋಷಿತ ವರ್ಗದ ಅಪಾರ ಬೆಂಬಲವಿದೆ. ಇತಿಹಾಸದಲ್ಲಿ ನಡೆದ ಪೋರ್ಚಗೀಸರ, ಮುಸ್ಲಿಮರ, ಬ್ರಿಟೀಷರ ದಬ್ಬಾಳಿಕೆ, ದೌರ್ಜನ್ಯದಿಂದ ಇಂದಿಗೂ ಹಿಂದೂ ಧರ್ಮ ಕುಗ್ಗಿಲ್ಲ ಮುಂದೆಯೂ ಸಹ ಕುಗ್ಗೋದು ಇಲ್ಲ. ನಿಮ್ಮಂಥವರು ವಿಷವನ್ನು ಮನಸ್ಸಿನಲ್ಲಿಟ್ಟುಕೊಂಡು ಸಮಯ ಸಂಧರ್ಭಕ್ಕೆ ತಕ್ಕಂತೆ ಕಕ್ಕುತ್ತಾ ಹೋದರು ಸಹ ಹಿಂದೂ  ಸಮಾಜಕ್ಕೆ ಕಿಂಚಿತ್ತೂ ಧಕ್ಕೆಯುಂಟಾಗುವುದಿಲ್ಲ ಅಂಥ ತಿಳಿದಿದ್ದರೆ ಒಳ್ಳೆಯದು.
ನಿಮ್ಮ ಕೆಲ ಬ್ಲಾಗ್ ಗಳಲ್ಲಿ ಬರೆದಿರುವ ಹಾಗೆ ಸಾಮಜಿಕ ಕಳಕಳಿ ಬಗ್ಗೆ ನಮ್ಮೆಲ್ಲರಿಗು ಅತೀವ ಗೌರವ ವಿದೆ. ಒಳ್ಳೆಯ ಕೆಲ ಕಾರ್ಯಗಳಿಗೆ ನಮ್ಮ ಬೆಂಬಲವಿದೆ. ನರೇಂದ್ರಬಾಬು ವಿನ ವಿರುದ್ಧ ಮೊಳಗಿಸಿದ ಕಹಳೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕೆಟ್ಟವರು ಯಾವ ಜಾತಿ ಧರ್ಮದಲ್ಲಿದ್ದರೂ ಅವರು ಕೆಟ್ಟವರೇ. 
ಒಳ್ಳೆಯ ಲೇಖನಗಳನ್ನು ನೀವು ನೀಡಿದ್ದೀರಿ, ನೂರಾರು ಜನರು ನಿರಂತರ ಓದುಗರಾಗಿದ್ದಾರೆ. ಪಕ್ಷಪಾತಿಯಾಗಿ ಲೇಖನಗಳನ್ನು ಪ್ರಕಟಿಸಿದರೆ ಜನವಾಹಿನಿಯಿಂದ ದೂರ ಹೋಗುವ ಕಾಲ ದೂರವಿಲ್ಲ. ಕೆಲ ಓದುಗರು ಹೇಳಿದ ಹಾಗೆ ಕಾಮೆಂಟುಗಳಿಗೆ ಉತ್ತರಿಸದೆ, ಹೊಡೆದು ಓಡುವ ಆಟ ಆಡುತ್ತಿದೆಯೇನೋ ಅನ್ನಿಸಲು ಶುರುವಾಗಿದೆ. ಹೀಗೆ ನಡೆದರೆ ಚಿಂತನಶಿಲ ಕನ್ನಡಿಗರ ತಿರಸ್ಕಾರಕ್ಕೆ ಗುರಿಯಾಗುವ ಮತ್ತೊಂದು ಜಾಲತಾಣವಾಗಲಿದೆ.
ಇನ್ನು ಕೆಲವರು ಹೇಳಿದ ಹಾಗೆ "ಈ ಸಂಪಾದಕೀಯದ ವಿಶೇಷ ಏನು ಗೊತ್ತಾ? ಆ ಬ್ಲಾಗಿನಲ್ಲಿ ಶೇ ಎಂಭತ್ತರಷ್ಟು ಕಾಮೆಂಟುಗಳು “ಅನಾನಿಮಸ್” ಗುಂಪಿನವು. ಹೀಗಿರುವಾಗ ಈ ಬ್ಲಾಗು ಯಾವ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದೇ ಸಂಶಯವಾಗುತ್ತಿದೆ". ಆ ಸಂಶಯ ಇಂದು ನಿಜವಾಗುತ್ತಿದೆ. ಮಾಡರೇಟ್ ಮಾಡುವ ಉದ್ದೇಶ ದಿಂದ ಸಹಿಸಲಾಗದ ಉತ್ತರಕೊಡಲಾಗದ ಪ್ರತಿಕ್ರಿಯೆಗಳನ್ನು ಪ್ರಕಟಿಸದಂತೆ ತಡೆಯುವ ದೃಷ್ಠಿಯಿಂದ  ಪ್ರತಿಕ್ರಿಯೆಗಳನ್ನು ಪ್ರಕಟಿಸದೇ ತಡೆಹಿಡಿಯುವಿರಿ ಎನ್ನುವ ಆಪಾದನೆ ಯಿದೆ  ಎಷ್ಟೆ ಆಗ್ಲಿ ಹೆಸರೇ ಸಂಪಾದಕೀಯ, ಅವ್ರು ಏನ್ ಬರೆದ್ರೂ ಸೈ ಎನ್ನುವ ಭಾವನೆ ಜನರ ಮನದಲ್ಲಿ ಮೂಡತೊಡಗಿದೆ.

ಶನಿವಾರ, ಜೂನ್ 4, 2011

ಬಾಬಾ ಮಾಡಬಾರದಾಗಿದ್ರೆ ಯಾರು ಮಾಡ್ಬೇಕಾಗಿತ್ತು?


ಸರಿ ಹೋಯ್ತು ಕಣಪ್ಪ, ಬಾಬಾ ಸತ್ಯಾಗ್ರಹ ಮಾಡಬಾರದಾಗಿದ್ರೆ ಮತ್ತೆ ಯಾರು ಮಾಡ್ಬೇಕಾಗಿತ್ತು?
ಅಲ್ಲಾ ಮಾರಾಯ ಒಂದು ಒಳ್ಳೇ ಕೆಲಸಕ್ಕೆ ಹಿಂಗಾ ಕಾಲೆಯೋಳೋದು?
ಸ್ವಾಮ್ಯೋರೆ, ಈ ವಯ್ಯ ಬಾಬ ಎಷ್ಟೊಂದು ದಿನಗಳಿಂದ ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ವಾಪಾಸು ತರಬೇಕು ಅಂಥಾ ಊರೂರುಗಳಲ್ಲಿ ಬೊಂಬಡ ಒಡಕಂತಿದ್ರು ಅವಾಗ ನಿಮ್ಮ ಕಿವಿಗೆ ಕೇಳಿಲ್ವ, ಈಗ ನೋಡಿದ್ರೆ ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್... ಅಂತ ಕಥೆ ಬಿಡ್ತಾ ಯಿದ್ದೀರಲ್ಲ. ಅದು ಇರಲಿ ಬಿಡಿ, ಅದ್ಯಾವಾಗೊ ಸಂವಾದ ನಡೆದಿತ್ತು ಅಂತ ಇವಾಗ ಅದರ ಕಥೆ ಹೊರಗಡೆ ತೆಗಿತಾಯಿದೀರಾ ಅಲ್ಲ ಇದರ ಮರ್ಮ ಏನು ಸಾಮಿ?
ಆಮೇಲೆ ಏನಂತೀರಾ ಸಂಸ್ಥೆಯ ವಾರ್ಷಿಕ ವಹಿವಾಟು ೧೧೦೦ ಕೋಟಿ ರೂ.ಗಳೆಂದು ಹೇಳಿಕೊಂಡಿದ್ದಾರೆ. ಇಷ್ಟೊಂದು ಹಣ ಕೆಲವೇ ವರ್ಷಗಳಲ್ಲಿ ಹೇಗೆ ಬಂತು ಎಂದು ಜನರು ಪ್ರಶ್ನಿಸುವುದು ಸ್ವಾಭಾವಿಕವೇ ಹೌದು ಅಂತ ಅಂದ್ರಿ, ಹಾಗಿದ್ರೆ ಪ್ರಶ್ನೆ ಮಾಡಿ, ಸಿಬಿಐ ಇದೆ, ಸುಪ್ರಿಂ ಕೋರ್ಟ್ ಇದೆ ಕೇಸ್ ದಾಖಲು ಮಾಡಿ ಸಾರ್. ಎಲ್ಲ ಹೊರಗೆ ಬರುತ್ತೆ. ಬೇಡ ಅಂತ ಹೇಳಿದವರು ಯಾರು.
ಒಂದು ಜಾತಿ ಪ್ರಮಾಣ ಪತ್ರ ಮಾಡಿಸುವುದಕ್ಕೇ ಲಂಚ ಕೊಡಬೇಕಾದ ಪರಿಸ್ಥಿತಿಯಿರುವ ಈ ದೇಶದಲ್ಲಿ ಬಾಬಾ ಅವರು ಇಷ್ಟೊಂದು ದೊಡ್ಡ ವಹಿವಾಟು ಮಾಡುವ ಸಂದರ್ಭದಲ್ಲಿ ಯಾರ ಕೈಯನ್ನೂ ಬೆಚ್ಚಗೆ ಮಾಡಿಲ್ಲವೆಂದು ನಂಬುವುದು ಹೇಗೆ ಎಂದು ಜನಸಾಮಾನ್ಯರು ಕೇಳುವುದೂ ಸಹಜವೇ ತಾನೆ? ಅದೆಲ್ಲಾ ಸರಿ, ನಂಬಬೇಕು ಅಂತ ಯಾರು ಹೇಳಿದ್ದಾರೆ. ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ, ಕೋರ್ಟ್ ನಲ್ಲಿ ತೀರ್ಮಾನ ಆಗಲಿ ತಪ್ಪಿತಸ್ಥ ರಾದರೆ ತಿಹಾರ್ ಜೈಲ್ ಗೆ ಹೋಗ್ತಾರೆ.
ಅಲ್ಲಾ ಸ್ವಾಮಿ ಮೊಸರಲ್ಲಿ ಕಲ್ಲು ಹುಡುಕೋದಿಕ್ಕೆ ಹೋಗ್ತೀರಲ್ಲಾ, ಆಸ್ತಿ ಎಲ್ಲಾ ಮಾಡಿ ಹೆಂಡ್ತಿ ಮಕ್ಕಳಿಗೆ ಹಂಚೋದಿಕ್ಕೆ ಏನಾದ್ರು ಹೆಂಡ್ತಿ ಯಿದ್ದಾರಾ? ಮಕ್ಕಳಿದ್ದಾರಾ? ಹೋಗಲಿ ಬೇರೆ ಏನಾದರು ಸಂಭಂದ ಇದೆಯಾ? ಅವರು ಏನೇ ಮಾಡಿದ್ರು ನಮ್ಮ ಜನ ಸಾಮಾನ್ಯರಿಗೆ ಅನ್ನೋದನ್ನ ಮರಿ ಬೇಡಿ ಸಾಮಿ.
ರಾಮದೇವ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು. ಅಧ್ಯಾತ್ಮ ಜನರ ಜೀವನ ದೃಷ್ಟಿ, ವಿಧಾನವನ್ನು ಬದಲಿಸಬೇಕು. ಮಾನವೀಯತೆಯನ್ನು ಬೋಧಿಸಬೇಕು.
ಅದನ್ನೇ ತಾನೆ ಇಷ್ಟು ದಿನ ಅವರು ಮಾಡಿಕೊಂಡು ಬಂದಿದ್ದು,
ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಸಾಮಾಜಿಕ ಶ್ರೇಣೀಕರಣದಿಂದ ದೇಶದ ಅಂತಃಸತ್ವವೇ ನಾಶವಾಗಿದೆ. ಎಲ್ಲರಿಗೂ ನೀರು-ನೆರಳು ಕೊಡಬೇಕಿದ್ದ ಧರ್ಮವೇ ಜನರನ್ನು ಶೋಷಿಸುವ ಸಲಕರಣೆಯಾಗಿದೆ.
ಅದೇ ಹಳೇ ಪುರಾಣದ ಕಥೆ ಹೊಡಿಬೇಡಿ, ಇದು ಒಬ್ಬ ವ್ಯಕ್ತಿಯಿಂದ ಆಗೋ ಕೆಲಸ ಅಲ್ಲ ಅಂತ ನಮಗಿಂತ ನಿಮಗೇ ಚೆನ್ನಾಗಿ ಗೊತ್ತು.
ಬಡತನ, ರೋಗರುಜಿನದಿಂದ ಜನ ನರಳುತ್ತಿದ್ದಾರೆ.
ಬಾಬಾರವರು ಬಡಜನರಿಗೆಂದೇ ತೆರೆದಿರುವ ಆಸ್ಪತ್ರೆ ಗಳಿವೆ, ಅಲ್ಲಿಗೆ ಬರಬೇಡಿ ಅಂತ ಯಾರು ಹೇಳಿಲ್ಲ. ಅಂತವರಿಗೆ ಅಲ್ಲಿ ಚಿಕಿತ್ಸೆ ಕೊಡುವ ಕಾರ್ಯ ಆಗಲೇ ನಡೀತಾಯಿದೆ.
ಅಭಿವೃದ್ಧಿಯ ಹೆಸರಲ್ಲಿ ಅಮಾಯಕ ಜನರು ಬೀದಿಪಾಲಾಗಿದ್ದಾರೆ.
ಅದಕ್ಕೆ ಕಾರಣಯಾರು, ಬಾಬಾರವರಾ? ೬೦ ವರ್ಷ ಗಳಿಂದ ಆಳ್ವಿಕೆ ನಡೆಸಿದ ಸರ್ಕಾರ ಅಲ್ವೆ ಸ್ವಾಮಿ.
ರೈತರು-ಕೂಲಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಅವರ ಯೋಗ ಶಿಬಿರದಲ್ಲಿ ಇದರ ಬಗ್ಗೆ ಹಲವಾರು ಬಾರಿ ಜನರಲ್ಲಿ ಮನವಿ ಮಾಡಿದ್ದಾರೆ, ಅವರ ಹಳೆಯ ಪ್ರವಚನಗಳಲ್ಲಿ ಇದರ ಬಗ್ಗೆ ಬಹಳಷ್ಟು ಮಾತಾಡಿದ್ದಾರೆ. ಅದಿರಲಿ ಅದು ಸಹ ಬಾಬಾರವರ ಕರ್ತವ್ಯವೇ ಅದು ಸರ್ಕಾರದ ಜವಬ್ದಾರಿಯಲ್ಲವೇ? ಬಾಬಾ ಸರ್ಕಾರ ನಡೆಸುತ್ತಿರುವವರೆ? ಯಾಕ್ರಿ ಸ್ವಾಮಿ ಎಲ್ಲಾ ಸಮಸ್ಯೆಗಳಿಗೆ ಒಬ್ಬರನ್ನೇ ಹೊಣೆ ಮಾಡ್ತೀರಾ. ೬೦ ವರ್ಷ ಗಳಿಂದ ಆಳ್ವಿಕೆ ನಡೆಸಿದ ಸರ್ಕಾರ ವಿಲ್ಲವೇ ಅವರನ್ನು ಕೇಳಿ.
ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರವೆಂದು ಘೋಷಿಸುವ ರಾಮದೇವ ಭಾರತದ ಹೀನ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ಏನನ್ನಾದರೂ ಮಾಡಿದ್ದಾರೆಯೇ? ಅಧ್ಯಾತ್ಮ ಜೀವಿಗಳ ಮೊದಲ ಕರ್ತವ್ಯವೇ ಸಮಾಜದ ಇಂಥ ಹೀನಾತಿಹೀನ ಕೊಳಕುಗಳನ್ನು ನಿರ್ಮೂಲನೆ ಮಾಡುವುದಲ್ಲವೆ?
ಎಲ್ಲ ರೀತಿಯ ನಿಯಂತ್ರಣ ಹೊಂದಿರುವ ಸರ್ಕಾರ ಮಾಡದೆ ಇರುವುದನ್ನು ಯಾವುದೇ ಅಧಿಕಾರ ಇಲ್ಲದ ಬಾಬಾ ರವರಿಂದ ನಿರೀಕ್ಷಿಸುತ್ತೀರಲ್ಲಾ, ಇದಕ್ಕೇನು ಹೇಳ್ಬೇಕು ಸ್ವಾಮಿ.
ಅಷ್ಟಕ್ಕೂ ಸಂವಿಧಾನದ ಮೂಲತತ್ತ್ವವನ್ನೇ ಒಪ್ಪದ ಇಂಥ ಮನುಷ್ಯರು ಪ್ರಜಾಪ್ರಭುತ್ವ ದೇಶದಲ್ಲಿ ಸತ್ಯಾಗ್ರಹ ನಡೆಸುತ್ತಾರೆ ಎನ್ನುವುದೇ ಅಪಹಾಸ್ಯದ ವಿಷಯ.
ಸಂವಿಧಾನ ಬರೆದ ಅಂಬೇಡ್ಕರ್ ರವರು ಹತ್ತು ವರ್ಷ ಗಳ ಬಳಿಕ ಮೀಸಲಾತಿ ಯನ್ನು ತೆಗೆದು ಹಾಕಿ ಅಂತ ಹೇಳಿದ್ರು, ಇನ್ನೂ ಯಾಕ್ರಿ ಸ್ವಾಮಿ ತೆಗೆದು ಹಾಕಿಲ್ಲ? ಬೇರೇ ಧರ್ಮಕ್ಕೆ ಮತಾಂತರ ಆದರು ಸಹ ಮೀಸಲಾತಿ ಬೇಕು ಅಂತೀರಲ್ಲಾ ಇದಕ್ಕೇನು ಅನ್ನಬೇಕು ಸ್ವಾಮಿ.
ಭಾರತದ ಸಾರ್ವಭೌಮತ್ವ ಹಾಗು ಸಂವಿಧಾನ ವನ್ನೇ ಒಪ್ಪದ, ಭಾರತದ ರಾಷ್ಟ್ರಧ್ವಜವನ್ನೇ ಸುಡುವ ಜನರನ್ನು ಖಂಡಿಸದ ಜನ ಬಾಬಾ ರ ಬಗ್ಗೆ, ಅವರ ಹಿನ್ನಲೆ ಬಗ್ಗೆ, ಅವರ ರಾಷ್ಟ್ರ ಪ್ರೇಮದ ಬಗ್ಗೆ, ಅವರಾಡಿದ ಮಾತುಗಳ ಬಗ್ಗೆ ಖಂಡಿಸುವ ಪರಿ ಕಂಡು ಏನೆನ್ನ ಬೇಕೋ? ಸಂಸತ್ತಿ ನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವಿನ ಬಗ್ಗೆ ಕನಿಕರ ಇರುವಷ್ಟು ಯೋಗ ಗುರುವಿನ ಮೇಲೆ ಇಲ್ಲವೇ?
ಇಂತದಕ್ಕೆಲ್ಲ ಭಾರತ ಮಾತೆ ಸಾಕ್ಷಿ ಯಾಗಬೇಕಲ್ಲ. ಕ್ಷಮಿಸಿ, ಭಾರತ ಮಾತೆ ಅಂದ್ರೆ ಜಾತ್ಯಾತೀತತೆಗೆ ದಕ್ಕೆ ಬರಬಹುದು. ಅದಕ್ಕೆ ಇಂತದಕ್ಕೆಲ್ಲ ...ನಾವೆಲ್ಲಾ.... ಸಾಕ್ಷಿ ಯಾಗಬೇಕಲ್ಲ.
ನಿಮ್ಮ ಎಲ್ಲಾ ಅನಿಸಿಕೆ ಗಳು ಅಭಿಪ್ರಾಯ ಗಳ ಹಿಂದೆ ಒಂದು ಹಿಡನ್ ಅಜೆಂಡಾ ಇದೆ ಅಂತ ಚೆನ್ನಾಗಿ ಗೊತ್ತು. ಅದರ ಬಗ್ಗೆ ಮುಂದೆ ಚರ್ಚೆ ಮಾಡೋಣ.
ಕೊನೆಗೊಂದು ಮಾತು, ಒಟ್ಟಿನಲ್ಲಿ ನಿಮ್ಮ ಪ್ರಕಾರ ಒಬ್ಬ ಹಿಂದುತ್ವ ವಾದಿ, ಆರೆಸ್ಸೆಸ್, ಬಿಜೇಪಿ,ವಿ ಹೆಚ್ ಪಿ, ಸ್ವಾಮೀಜಿಗಳು, ಚಿದಾನಂದಮೂರ್ತಿ,ಪೇಜಾವರ ಶ್ರೀಗಳು ಮಾತ್ರ ಯಾವುದೇ ಹೋರಾಟ ಮಾಡಬಾರದು ಅವರ ಬದಲು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಯಡಿಯೂರಪ್ಪ, ಕರುಣಾನಿಧಿ, ಹಸನ್ ಅಲಿ, ರಾಜಾ, ಸುರೇಶ್ ಕಲ್ಮಾಡಿ, ಕನಿಮೋಳಿ ಮುಂತಾದವರು ಬಂದ್ರೆ ನಾವು ಅವರಿಗೆ ಬೆಂಬಲ ಕೊಡ್ತೀವಿ ಅಂತ ಗೋಶಣೆ ಮಾಡ್ಬೇಕು ಅಲ್ವಾ ಸಾ, ಬಹುಶ: ಇದು ಸರಿ ಹೋಗಬಹುದು
ಸರಿ ಬುಡಿ...... ಎಲ್ಲಾ ನಿಮ್ದುಕೇ ಜೈ... ನಮ್ದೂಕೆ ಏನು ಜೈ ಇಲ್ಲಾ....