ಮಂಗಳವಾರ, ಅಕ್ಟೋಬರ್ 25, 2011

ಕನ್ನ್ಡಡ ವಾಹಿನಿಗಳ ಪರಭಾಷ ವ್ಯಾಮೋಹ



ಇಂದು ಸಮಯ ವಾಹಿನಿ ಯಲ್ಲಿ ಸಾಯಂಕಾಲ ೬:೩೦ ರ ಸಮಯದಲ್ಲಿ "ಸಕತ್ ಕಾಮಿಡಿ" ಎನ್ನುವ ಕಾರ್ಯಕ್ರಮದಡಿಯಲ್ಲಿ ತೆಲುಗು ಕಾಮಿಡಿ ನಟರ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ಪ್ರಸಾರ ವಾಯಿತು, ಆ ನಟರು ನಟಿಸಿದ ಕೆಲ ಚಿತ್ರದ ತುಣುಕುಗಳು ಮತ್ತು ಅವರ ಬಗ್ಗೆ ಕೆಲ ಮಾತುಗಳು ಆ ಕಾರ್ಯಕ್ರಮದಲ್ಲಿ ಮೂಡಿ ಬಂತು. ಅದಕ್ಕೂ ಮುಂಚೆ ಒಂದು ದಿನ  "7 sense" ತಮಿಳು ಚಿತ್ರದ ಕುರಿತು ಪ್ರಸಾರ ಮಾಡಿದರು. ಇಷ್ಟರಲ್ಲೇ ಭಾಗ-೨ ರ ಪ್ರಸಾರವೂ ಇದೆ.
ಅದು ಅಲ್ಲದೆ ಪ್ರತಿದಿನಾಲು ಒಂದಲ್ಲ ಒಂದು ಪರಭಾಷೆ ಚಿತ್ರದ ಕುರಿತು ಯಾವುದಾದರೊಂದು ಕಾರ್ಯಕ್ರಮದಲ್ಲಿ ಪ್ರಸಾರ ಮಾಡುತ್ತ ಇರುತ್ತಾರೆ.  ಅದೇ ರೀತಿ ಕನ್ನಡದ ಬಹುತೇಕ ವಾಹಿನಿಗಳಲ್ಲಿ ಪರಭಾಷ ಚಿತ್ರದ ಕುರಿತು ಒಂದಲ್ಲ ಒಂದು ಕಾರ್ಯಕ್ರಮ ಪ್ರಸಾರ ವಾಗುತ್ತಿರುವುದನ್ನು ನಾವೆಲ್ಲರು ಕಂಡಿದ್ದೇವೆ.

ಬೇರೆ ಭಾಷೆ ಯ ಚಿತ್ರಗಳು, ಆ ಭಾಷಾ ನಟ ನಟಿಯರ ಕುರಿತಾದ ಕಾರ್ಯಕ್ರಮ ನಮಗ್ಯಾಕೆ ಬೇಕು? ಪರಭಾಷ ಚಲನಚಿತ್ರಗಳ ಕುರಿತಾದ ಕಾರ್ಯಕ್ರಮ ಗಳನ್ನು ನಮಗೇಕೆ ಉಣ ಬಡಿಸುತಿದ್ದೀರ? ಇದು ವೀಕ್ಷಕರ ಕೋರಿಕೆಯೇ? ಯಾಕೆ ಈ ವಾಹಿನಿಗಳು ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿಕೊಂಡು ಬರುತಿದ್ದಾರೆ? ಹಲವಾರು ವರ್ಷಗಳಿಂದ ಈ ಬಗ್ಗೆ  ವಾಹಿನಿಗಳ ಗಮನಕ್ಕೆ ತಂದರೂ ಕಿವಿಗೊಡದೆ ಈ ಚಾಳಿಯನ್ನು ಮುಂದುವರೆಸಿದ್ದಾರೆ? ಬೇರೆ ಭಾಷಿಕರು ಅವರ ಭಾಷೆಗೆ ಸಂಭಂದಿಸಿದ ಚಲನಚಿತ್ರಗಳ ಕುರಿತಾದ ಕಾರ್ಯಕ್ರಮಗಳನ್ನು ಅವರ ವಾಹಿನಿಗಳಲ್ಲಿ ನೋಡಬೇಕಾದರೆ ಇವರಿಗೇಕೆ ಪರಭಾಷಾ ವ್ಯಾಮೋಹ?
ರೋಬೋ, ದೂಕೂಡು, ಮಗದೀರ, ೭ ಅರಿವು,  ಹೀಗೆ ಒಂದಲ್ಲ ಒಂದು ಸಿನಿಮಾ ಕುರಿತಾದ ಕಾರ್ಯಕ್ರಮಗಳು ಯಾರಿಗೋಸ್ಕರ ಪ್ರಸಾರ ಮಾಡ್ತಾಯಿದಾರೆ?

ಇದೇ ರೀತಿ ಬೇರೆ ಭಾಷೆಯ ಚಾನೆಲ್ ನಲ್ಲಿಯೂ ಸಹ ನಮ್ಮ ಕನ್ನಡ ಚಿತ್ರಗಳ ಕುರಿತಾದ ಕಾರ್ಯಕ್ರಮ ವೇನಾದರು ಪ್ರಸಾರ ವಾಗುತ್ತ ಅಂತ ಬೇರೆ ಎಲ್ಲ ಚಾನೆಲ್ ಗಳ ಮನರಂಜನಾ ಕಾರ್ಯಕ್ರಮ ಗಳಲ್ಲಿ ತಡಕಾಡಿದ್ದಾಯಿತು ಆದರೆ ಒಂದೇ ಒಂದು ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮ ನನಗೆ ಕಾಣಲಿಲ್ಲ. ನನ್ನ ಕೆಲ ಬೇರೆ ಭಾಷೆಯ ಸ್ನೇಹಿತರ ಕೆಲವರೊಂದಿಗೆ ಈ ಬಗ್ಗೆ ಮಾತನಾಡಿ ದ್ದ್ದಾಗ  ಅವರು ಸಹ ಅಂತಹ ಕಾರ್ಯಕ್ರಮ ಅವರ ಭಾಷೆ ಯಲ್ಲಿ ಇದುವರೆಗೂ ಪ್ರಸಾರ ಮಾಡಿಲ್ಲ ಅಂತ ಅಂದರು.

ಮತ್ತೆ ನಮ್ಮ ಮಾಧ್ಯಮಗಳಿಗೇಕೆ ಬೇರೆ ಭಾಷೆ ಚಿತ್ರಗಳ ಪ್ರಮೋಟ್ ಮಾಡುವ ಆಸೆ? ಬೇರೆಯವರಿಗಿಲ್ಲದ ಅಭಿಮಾನ ನಮ್ಮ ವಾಹಿನಿಗಳಿಗೇಕೆ?  ಏನು ಬೇಕಾದರು ತೋರಿಸ್ತೀವಿ, ನೋಡೋ ಕರ್ಮ ನಿಮ್ಮದು ವೀಕ್ಷಕರೇ ಅನ್ನೋ ಭಾವನೆಯಾ?
ಈ ತರಹ ಕಾರ್ಯಕ್ರಮಗಳಿಂದ ಲಾಭವಾಗುವುದು ಯಾರಿಗೆಂದರೆ ಆ ಚಲನ ಚಿತ್ರಗಳನ್ನು ವಿತರಣೆ ಮಾಡುವ ನಮ್ಮ ವಿತರಕರು ಮತ್ತು ಪ್ರದರ್ಶಕರಿಗೆ ಅಲ್ಲವೆ. ಪ್ರೈಮ್ ಟೈಮ್ ನಲ್ಲಿ ಪರಭಾಷ ಚಿತ್ರಗಳನ್ನು ಸುಮ್ಮನೆ ಯಾರು ಪ್ರಮೋಟ್ ಮಾಡೋದಿಲ್ಲ, ಅಲ್ಲಿ ಕಾಸಿನ ಸಂತರ್ಪಣೆ ಆಗಿರಬೇಕು ಇಲ್ಲದೆ ಇದ್ದರೆ ಆ ವಾಹಿನಿಯವರಿಗೆ ವಿಪರೀತ ವಾದ ಪರಭಾಷ ವ್ಯಾಮೋಹ ವಿರಬೇಕು.

ಕನ್ನಡಿಗರಿಗೆ ಪರಭಾಷೆ ಚಿತ್ರಗಳ ವೀಕ್ಷಣೆಗೆ ರತ್ನಗಂಬಳಿ ಹಾಸಿಕೊಡುತ್ತಿರುವ ಈ ಕಾರ್ಯಕ್ರಮಗಳು ನಮಗಂತು ಬೇಡ, ನಮ್ಮತನ ವನ್ನು ಮಾರಿಕೊಂಡು ಬದುಕುವ ಮುನ್ನುಡಿ ಬರೆಯುತ್ತಿರುವ ನಮ್ಮ ವಾಹಿನಿಗಳು ಮತ್ತು ಇದನ್ನು ಪ್ರಾಯೋಜಿಸುತ್ತಿರುವ  ಮಂದಿ ಎಚ್ಚೆತ್ತು ಕೊಳ್ಳದಿದ್ದರೆ, ಕನ್ನಡ ಚಿತ್ರಗಳನ್ನು ನೋಡಲು ಜನರೆ ಬರದಂತಾಗುವ ಕಾಲ ದೂರವಿಲ್ಲ.

ಒಂದು ಕಾಲದಲ್ಲಿ ಕನ್ನಡ ವಾಹಿನಿಗಳಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಕುರಿತಾದ ಒಂದೇ ಒಂದು ದೃಶ್ಯ ಅಪ್ಪಿ ತಪ್ಪಿಯೂ ಪ್ರಸಾರ ಮಾಡುತ್ತ ಇರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಅದು ಸಾಮನ್ಯ ಎನ್ನುವ ಮಟ್ಟಿಗೆ ಆಗಿ ಹೋಗಿದೆ.

ವಾರ್ತ ಪ್ರಸಾರ ಸಮಯದಲ್ಲಿ ಅಥವ ಕೆಲ ಸಂದರ್ಶನಗಳಲ್ಲಿ ಕೆಲವೊಮ್ಮೆ ಬೇರೆ ಭಾಶೆ ಯ ವ್ಯಕ್ತಿ  ಯ ಮಾತುಗಳು ಪ್ರಸಾರ ವಾಗುವ ಸಂಧರ್ಭ ಬಂದರೆ ಕೆಳಗಡೆ ಆ ಮಾತುಗಳನ್ನು  ಅನುವಾದಿಸಿ  ಪ್ರಸಾರ ಮಾಡುತಿದ್ದರು. ಈಗ ಅದು ಕಡಿಮೆ ಯಾಗಿದೆ. ಆದರೆ ತಮಿಳು ಮತ್ತು ತೆಲುಗು ವಾಹಿನಿಗಳಲ್ಲಿ ಅದನ್ನು ಅನುವಾದಿಸಿಯೆ ಪ್ರಕಟಿಸುತ್ತಾರೆ. ಒಂದೆರೆಡು ನಿಮಿಷ ತಡವಾದರು ಚಿಂತೆಯಿಲ್ಲ ಅವರಿಗೆ, ಆ ಗುಣಮಟ್ಟವನ್ನು ಅವರು ಬಹುತೇಕ ಕಾಪಾಡಿಕೊಳ್ಳುತ್ತಾರೆ.


**********
ಇನ್ನು ಪರಭಾಷೆ ಚಿತ್ರ ಗಳ ಮಿತಿಮೀರಿದ ಹಾವಳಿ ನಮ್ಮ ಚಿತ್ರಮಂದಿರಗಳಲ್ಲಿ ಬೇರೆ ಕಾಡ್ತ ಇದೆ, ನಮ್ಮ ಚಿತ್ರೋಧ್ಯಮ ತಾನು ಮಾಡಿದ ನಿಯಮಾವಳಿಗಳ ಪ್ರಕಾರ, ಕನ್ನಡ ಹೊರತುಪಡಿಸಿದ ಯಾವುದೇ ಭಾಷೆಯ ಚಿತ್ರ ಕರ್ನಾಟಕದಲ್ಲಿ 25ಕ್ಕಿಂತ ಹೆಚ್ಚು ಫ್ರಿಂಟ್‌ಗಳನ್ನು ಪ್ರದರ್ಶಿಸಬಾರದು. ಅಲ್ಲದೆ, ಪರಭಾಷಾ ಚಿತ್ರ ತನಗೆ ಸಂಬಂಧಪಟ್ಟ ರಾಜ್ಯದಲ್ಲಿ ಬಿಡುಗಡೆಯಾದ ಆರು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು ಎನ್ನುವ ನಿಭಂದನೆ ಹಾಕಿ ಕೊಂಡಿದೆ ಆದರೆ ಇತ್ತೀಚಿಗೆ ಅಂತಹ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಹೆಚ್ಚು ಪರಭಾಷ ಚಿತ್ರಗಳನ್ನು ಪ್ರದರ್ಶನ ಮಾಡುತಿದ್ದಾರೆ, ಆದರೆ ನಮ್ಮ ಮಂಡಳಿ ಪರಭಾಷಾ ಚಿತ್ರಗಳ ನಿರ್ಮಾಪಕರನ್ನು, ವಿತರಕರನ್ನು ನಿಯಂತ್ರಿಸುವ ಗೋಜಿಗೆ ಹೋಗದೆ ತನ್ನ ಪಾಡಿಗೆ ತಾನು ಕುಳಿತಿದೆ.
ನಮ್ಮ ಕನ್ನಡ ಅಭಿಮಾನಿಗಳು ಮಾತ್ರ ಇಂತಹ ಎಡವಟ್ಟುಗಳನ್ನು ಸಹಿಸಿಕೊಳ್ಳಲಾರದೆ ಇವರಿಗೆಲ್ಲ ಛೀಮಾರಿ ಹಾಕುತಿದ್ದಾರೆ. ನಮ್ಮ ಚಿತ್ರರಂಗದ ಉಧ್ಯಮಿಗಳೇ ಪರಭಾಶಾ ಚಿತ್ರಗಳನ್ನು ನೋಡಿ ಅಂತ ಪ್ರೋತ್ಸಾಹಿಸುತ್ತಿರ ಬೇಕಾದರೆ ಇನ್ನೇನ್ ಮಾಡಬೇಕು? ಇವರಿಗೆ ಬೇಕಾದಾಗ ಕನ್ನಡ ವನ್ನು ಉಳಿಸಿ ಕನ್ನಡ ಚಿತ್ರರಂಗವನ್ನು ಉಳಿಸಿ ಅಂತ ಗೋಳಿಡ್ತಾರೆ, ಜತೆಗೆ  ಆಚಾರ ಹೇಳಿ ಬದನೆ ಕಾಯಿತಿನ್ನುವ ನಮ್ಮ್ ಸಿನಿಮಾ ಮಂದಿ ಪರಭಾಷ ಚಿತ್ರಗಳ ವಿತರಣೆ ಹಕ್ಕನ್ನು ಪಡೆದು ಹಣ ಮಾಡುವ ಸಮಯದಲ್ಲಿ ಮಾತ್ರ ಕನ್ನಡ ಅಂದರೆ ಎನ್ನಡ ಎಕ್ಕಡ ಎನ್ನುವ ಇವರ ದ್ವಂದ್ವ ನಿಲುವು ಗಳಿಗೆ ಮಾತ್ರ ಛೀಮಾರಿ ಹಾಕಬೇಕು.

7 ಕಾಮೆಂಟ್‌ಗಳು:

  1. BARI SAMAYA VAAHINI MAATRA ALLA, TV9,NEWS9 ELLARU MAADTIRODU IDANNE.....
    NAAVU AA KAARYAKRAMAA NODABARDU,AVRU ADANNA PRASAARAA MAADBARDU....

    ಪ್ರತ್ಯುತ್ತರಅಳಿಸಿ
  2. Kannadada yella suddi vaahinigalu kannada marethive.... Kannada news Chanellgalu innu hosathanakke, bhasha baddatheyannu hondilla.......

    ಪ್ರತ್ಯುತ್ತರಅಳಿಸಿ
  3. ನಾನು ಚೆನ್ನೈ ನಲ್ಲಿ ಇರೋದ್ರಿಂದ ಹಲವಾರು ತೆಲುಗು, ತಮಿಳು ಸಹೋದ್ಯೋಗಿಗಳೊಂದಿಗೆ ಮಾತುಕತೆ ಆಗ್ತಾ ಇರುತ್ತೆ.
    ನಮ್ಮಲ್ಲಿನ ಕೆಲವು ಜನರುಗಳ, ಮಾಧ್ಯಮಗಳ ಪರಭಾಷಾ ವ್ಯಾಮೊಹದಿಂದಾಗಿ ಕೇಳಬಾರದ್ದನ್ನೆಲ್ಲ ಕೇಳಬೇಕಾಗಿದೆ.
    ಕನ್ನಡಿಗರಿಗೆ ಕನ್ನಡ ಸಿನೆಮಾಗಳು ಅಂದ್ರೆ ಆಗೋಲ್ಲ ತಾನೇ?
    ಕನ್ನಡಿಗರು ಕನ್ನಡ ಬಿಟ್ಟು ಬೇರೆಲ್ಲ ಸಿನೆಮಾಗಳನ್ನ ನೋಡ್ತಾರೆ ತಾನೆ?
    ಒಹ್ ಕರ್ನಾಟಕದವರ? ಹಾಗಾದ್ರೆ ನಿಮಗೆ ತೆಲುಗು /ತಮಿಳು ಬರ್ತಿರಬೇಕು?
    ಇನ್ನಿತರ ಅವಮಾನಕರವಾದ ಕಾಮೆಂಟ್ಗಳೂ ಮಾತುಗಳು ಬಂದು ಹೋಗ್ತಾ ಇರುತ್ವೆ. ನಿಜವಾಗಲೂ ವಿಷಾದನೀಯ.

    ಪ್ರತ್ಯುತ್ತರಅಳಿಸಿ
  4. ಕನ್ನಡ ವಾಹಿನಿಗಳ ಪರಭಾಷೆ ಪ್ರೇಮ ಅತಿರೇಖಾ.
    ರಾಒನ್, 7 ಆಮ್ಆವಿರ್, ವೇಲಾಯುತಮ್, ಊಸರವಳ್ಳಿ, ದೂಕುಡು ಮುಂತಾದವುಗಳ ಬಗ್ಗೆ ಅಬ್ಬರದ ಪ್ರಚಾರ
    ಸಾರಥಿ, ಪರಮಾತ್ಮ ಗಳ ಬೆಣ್ಣೆ ಹೊರೆಸುವ ತಂತ್ರ.
    ಕನ್ನಡ ಸಿನಿಮಾಗಳ ಬೆಳವಣಿಗೆ ಮತ್ತು ಉಳಿಯುವಿಕೆಗಾಗಿ ಕನ್ನಡ ವಾಹಿನಿಗಳು ಸ್ವಯಂ ಪ್ರೇರಿತ ಸಮಯಲೋಚನೆ ಮಾಡಬೇಕಿದೆ, ಇದು ಕನ್ನಡ ಭಾಷೆಗಾಗಿ ಸಲ್ಲಿಸಬೇಕಾದ ಕನಿಷ್ಠ ಪಕ್ಷ ಕೃತಜ್ಞತೆ!

    ಪ್ರತ್ಯುತ್ತರಅಳಿಸಿ
  5. ಹೌದು!! ಈ ಪರಭಾಷೆಯ ಸಿನೆಮಾಗಳ ಹಾವಳಿ ಅದರ ಬಗ್ಗೆ ನಮ್ಮ ಕನ್ನಡ ಚಾನೆಲ್ ಗಳಲ್ಲಿ ಪ್ರಮೋಟ್ ಮಾಡೋ ಅವಶ್ಯಕತೆ ನಮ್ಮ ಕನ್ನಡಿಗರಿಗೆ ಇಲ್ಲ. ನಮ್ಮತನವನ್ನು ಉಳಿಸಿಕೊಳ್ಳೋಣ. ಅಷ್ಟಕ್ಕೂ ಟಿವಿ ವಾಹಿನಿಯವರು ಪರಭಾಷೆಯ ಚಿತ್ರಗಳನ್ನು ತೋರಿಸಲೆಬೆಕೆಂದಿದ್ದರೆ ಅಂತಹ ವಾಹಿನಿಗಳಿಗೆ ನಮ್ಮ ಧಿಕ್ಕಾರ. ಆ ವಾಹಿನಿಗಳೇ ನಮಗೆ ಬೇಡ. ಇದನ್ನು ಕನ್ನಡದವರು ಹೀಗೆಯೇ ಬಿಡಬಾರದು. ಕನ್ನಡವೆಂದರೆ ಪರಭಾಷಿಗರಿಗೂ ಗೌರವ ಬರುವಂತೆ ನಾವು ನಡೆದುಕೊಳ್ಳಬೇಕು. "ಅಯ್ಯ ಕನ್ನಡಿಗರಾಗಿ ಅವರಿಗೆ ಅವರ ಭಾಷೆ ಬೇಡ, ಮತ್ತೆ ನಮಗೇಕೆ? " ಎಂಬಂತೆ ಆಗಬಾರದು. ನಾವು ಎಲ್ಲ ಭಾಷೆಗಳನ್ನು ಗೌರವಿಸೋಣ. ಆದರೆ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಕೊಡೋಣ. ನಮ್ಮತನವನ್ನು ಕಾಪಾಡೋಣ.

    ಪ್ರತ್ಯುತ್ತರಅಳಿಸಿ
  6. ಹಿತ್ತಲ ಗಿಡ ಮದ್ದಲ್ಲ ಎನ್ನವ ಹಾಗೆ ಕನ್ನಡ ಭಾಷೆಯ ಸಿನಿಮಾಗಳನ್ನು ಹೀಯಾಳಿಸುವುದೇ ಇವರ ಕೆಲಸ.ಕೀಳರಿಮೆ ಜಾಸ್ತಿ ಇದೆ.ಇತರ ಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ಬೆಳೆಯಲು ಕನ್ನಡ ವಾಹಿನಿಗಳ ಪಾತ್ರ ಬಹಳಷ್ಟಿದೆ.ಪರಭಾಷೆಯ ಸಿನಿಮಾಗಳು ಬಂದರೆ ವಿಷೇಶವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಅಸಹ್ಯ ಹುಟ್ಟಿಸುತ್ತದೆ.ನಿಜವಾಗಿಯೂ ಇವು ಕನ್ನಡದ ಚಾನೆಲ್ ಗಳೇ ಎನ್ನವಷ್ಟು ಸಂಶಯ ಮೂಡುತ್ತದೆ.ದಯವಿಟ್ಟು ಇಲ್ಲಿ ಪ್ರಕಟಿಸಿದ ಎಲ್ಲ ಲೇಖನ ಗಳನ್ನು ಚಾನೆಲ್ ನವರಿಗೆ ಕಳುಹಿಸಿ.ಇತ್ತ ಕನ್ನಡ ರಕ್ಷಣಾವೇದಿಕೆಯವರು ಗಮನ ಹರಿಸಬೇಕು.ಬೇರೆಯವರನ್ನು ಟೀಕಿಸುವುದಕ್ಕಿಂತ ನಮ್ಮವರ ಕಿವಿಹಿಂಡಬೇಕು.ನಮ್ಮವರಿಗೆ ನಾಚಿಕೆ, ಮಾನ,ಮರ್ಯಾದೆ ಏನೂ ಇಲ್ಲ.ಪ್ರತಿಭಟನೆ ಮೂಲಕ ಪರಭಾಷೆಯ ವ್ಯಾಮೋಹವನ್ನು ತಡೆಗಟ್ಟಬೇಕು.ಎಲ್ಲದಕ್ಕೂ ಇತಿಶ್ರೀ ಹಾಡಬೇಕು.ಧಿಕ್ಕಾರವಿರಲಿ ಕನ್ನಡದ ಚಾನೆಲ್ ಗಳಿಗೆ!
    ಕನ್ನಡದ ಅನ್ನ,ನೀರು ತಿಂದು ಕನ್ನಡಕ್ಕೆ ದ್ರೋಹ ಬಗೆಯುವ ಇಂಥ ಚಾನೆಲ್ ಗಳಿಗೆ ಧಿಕ್ಕಾರ!ಧಿಕ್ಕಾರ!ಧಕ್ಕಾರ!

    ಪ್ರತ್ಯುತ್ತರಅಳಿಸಿ
  7. ಇತರ ಭಾಷಯ ಸಿನಿಮಾಗಳನ್ನು ಪ್ರಮೋಟ್ ಮಾಡುವ ಕನ್ನಡ ಚಾನೆಲ್ ಗಳಿಗೆ ಧಿಕ್ಕಾರ!

    ಪ್ರತ್ಯುತ್ತರಅಳಿಸಿ