ಭಾನುವಾರ, ನವೆಂಬರ್ 13, 2011

ಲೋಕಾಯುಕ್ತ: ಭಿನ್ನ ಧ್ವನಿ ಗಳು


ಇಂದಿನ ಕನ್ನಡಪ್ರಭದಲ್ಲಿನ ಮುಖಪುಟದ ಲೇಖನ ದಲ್ಲಿ ಪ್ರಕಟವಾದ ಲೋಕಾಯುಕ್ತದಲ್ಲಿ ಎಸ್ಪಿ ಆಗಿದ್ದ ಶ್ರೀ ಮಧುಕರ ಶೆಟ್ಟಿ ರವರ ಸಂದರ್ಶನ, ಒಂದು ಕಡೆ ಪ್ರಬಲ ಜನಲೋಕಪಾಲ್ ಬಗ್ಗೆ ಅಣ್ಣಾ ಟೀಮ್ ಮತ್ತು ಬಹುತೇಕ ಪ್ರಜೆಗಳು ಒತ್ತಾಯ ಮಾಡ್ತಾಯಿರುವಾಗ ಮಧುಕರ ಶೆಟ್ಟಿಯವರ ಮಾತುಗಳು ಚಿಂತನೆಗೆ ಹಚ್ಚುತ್ತಿವೆ.....

ಬಾಲಕೃಷ್ಣೇಗೌಡರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆಗೆ ಸಿಟ್ಟಿಗೆದ್ದ ದೇವೇಗೌಡರು, ಲೋಕಾಯುಕ್ತ ಎಡಿಜಿಪಿಯಾಗಿದ್ದ ಜೀವನ್ ಕುಮಾರ್ ಗಾಂವ್ಕರ್ ಅವರಿಗೆ ದೂರವಾಣಿ ಕರೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿ, ತನಿಖೆ ಮುಂದುವರಿಸಿದ್ರೆ ಜಾಗ್ರತೆ ಎಂಬುದಾಗಿಯೂ ಬೆದರಿಕೆ ಹಾಕಿದ್ದಾರೆ ಅಂತ ವರದಿಯಾಗಿದೆ.,
ಆದರೆ ಅದಕ್ಕೆ ಸಮಜಾಯಿಷಿ ನೀಡಿದ  ಮಾಜಿ ಪ್ರಧಾನಿ ದೇವೇಗೌಡರು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ, ತಾವು ಲೋಕಾಯುಕ್ತ ಎಡಿಜಿಪಿ ಆಗಿದ್ದ ಜೀವನ್ ವಿ ಗಾಂವ್ಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿರುವ ಅವರು ಲೋಕಾಯುಕ್ತ ಹಗೆತನದ ತನಿಖೆ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀವನ್ ವಿ.ಗಾಂವಕರ್ ಅವರನ್ನು ಮುಖ್ಯಮಂತ್ರಿ ಸದಾನಂದ ಗೌಡ ವರ್ಗಾಯಿಸಿದ್ದಾರೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ. ಗಾಂವಕರ್ ಅವರ ಸ್ಥಾನಕ್ಕೆ ಎಚ್.ಎನ್ ಸತ್ಯನಾರಾಯಣ ರಾವ್ (ಅಪರಾಧ ಮತ್ತು ತಾಂತ್ರಿಕ) ಅವರನ್ನು ನೇಮಕ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧ ನಡೆಯುತ್ತಿರುವ ಲೋಕಾಯುಕ್ತ ತನಿಖೆಯನ್ನು ಸ್ಥಗಿತಗೊಳಸಿ, ತನಿಖೆಗಳ ಹಾದಿ ತಪ್ಪಿಸಬೇಕೆಂದೇ ಈ ವರ್ಗಾವಣೆ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಈ ಎಲ್ಲ ವರ್ಗಾವಣೆಗಳ ಹಿಂದೆ ಇದೆ ಎಂದು ಹೆಗ್ಡೆಯವರು ಬೆಂಗಳೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಜೀವನ್ ಕುಮಾರ್ ವಿ. ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿ, ಶಿವಮೊಗ್ಗ ಎಸ್ಪಿ ಆಗಿದ್ದ ಅರುಣ್ ಚಕ್ರವರ್ತಿಯವರನ್ನು ಲೋಕಾಯುಕ್ತ ಡಿಐಜಿ ಆಗಿ ವರ್ಗ ಮಾಡಿದ್ದಕ್ಕೆ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳಂಕಿತ ಅರುಣ್ ಚಕ್ರವರ್ತಿ ವಿರುದ್ಧ ಲೋಕಾಯುಕ್ತರಾಗಿದ್ದಾಗ ಸಂತೋಷ್ ಹೆಗ್ಡೆಯವರೇ ತನಿಖೆಗೆ ಆದೇಶಿಸಿದ್ದರು. ಇಂಥವರನ್ನು ಲೋಕಾಯುಕ್ತಕ್ಕೆ ತಂದು ಸಾಧಿಸುವುದಾದರೂ ಏನು ಎಂದು ಅವರು ಕಿಡಿ ಕಾರಿದ್ದಾರೆ. ಪ್ರಸ್ತುತ ಅಧಿಕಾರಿ ಸರಿಯಾಗಿ ಕೆಲಸ ಮಾಡದಿದ್ದಾಗ ವರ್ಗಾವಣೆ ಮಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ, ಘಟಾನುಘಟಿಗಳನ್ನು ಬಲೆಗೆ ಕೆಡವಿದಂಥ ದಕ್ಷ ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ...

(Click on the image to enlarge)


ಶುಕ್ರವಾರ, ನವೆಂಬರ್ 11, 2011

ಬದುಕಿನ ದಾರಿ - 1



ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಮತ್ತು ಹೇಗೆ ಬದುಕಬೇಕು ಅಂತ ನಮ್ಮ ತಂದೆ ಯಾವತ್ತು ಹೇಳಿಕೊಡಲಿಲ್ಲ, ನಾವು ಈ ಭೂಮಿ ಮೇಲೆ ಹುಟ್ಟಿದೀವಿ, ಯಾರ ಸಹಾಯ ಇಲ್ಲದೆ, ಯಾರೊಬ್ಬರಿಗೆ ತೊಂದರೆ ಕೊಡದೆ ಬದುಕಬೇಕು, ಎಂದು ದುಡಿದ  ಅವರ ಬದುಕೆ ಇಂದು ನಮಗೆ ಮಾರ್ಗದರ್ಶಿ ಯಾಗಿದೆ. ನಮ್ಮ ತಂದೆ ಅಷ್ಟೊಂದು ವಿದ್ಯಾವಂತರಲ್ಲ, ಸ್ವಲ್ಪ ಮಟ್ಟಿಗೆ ಓದಿದವರು. ನಮ್ಮ ಕುಟುಂಬವನ್ನು ಸಾಕಲು ಅವರು ಮಾಡಿದ ಕೆಲಸಗಳು ಒಂದಲ್ಲ, ಹಲವಾರು. ಬೆಂಗಳೂರಿನ ಅವೆನ್ಯು ರಸ್ತೆ ಯಲ್ಲಿ ಬೀದಿ ಬದಿಯಲ್ಲಿ ಪುಸ್ತಕಗಳನ್ನು ಮಾರಿದರು, ಬಳೇಪೇಟೆ,ಚಿಕ್ಕಪೇಟೆ, ಅವೆನ್ಯು ರಸ್ತೆ ಮುಂತಾದ ಕಡೆ ಬಜ್ಜಿ ಬೋಂಡ ಗಳನ್ನು ಮಾರಿದರು, ಚಿಕ್ಕವಯಸ್ಸಿನಲ್ಲಿ ಕೆಲ ಚಿತ್ರಗಳಲ್ಲಿ ಸಹಾಯಕ ನಟ ರಾಗಿ ಕೆಲಸ ಮಾಡಿದರು, ಒಂದು ಸ್ವಲ್ಪ ದಿನ ಮದ್ರಾಸ್ ನಲ್ಲಿ ಸಹ ಹೋಗಿ ಕೆಲಸ ಮಾಡಿ ಬಂದರು. ಮೂರು ಹೆಣ್ಣು ಮಕ್ಕಳು, ನಮ್ಮ ಅಜ್ಜಿ, ನಮ್ಮ ತಾಯಿ, ತಮ್ಮ ಮತ್ತು ನನ್ನನ್ನು ಸಾಕಲು ಮಾಡಿದ ಕೆಲಸಗಳು ಒಂದಲ್ಲ. ಅದೆಲ್ಲ ನೆನಪಿಸಿಕೊಂಡರೆ ಬಹಳ ಬೇಸರ ವಾಗುತ್ತೆ.
ನನಗಂತೂ ಪ್ರತಿಬಾರಿ ರೇಶನ್ ತರುವಾಗ ರೇಶನ್ ಅಂಗಡಿಯವನ ಜತೆ ಜಗಳ, ಸಾಮನುಗಳು ಇದ್ದರೂ ಇಲ್ಲ ಅಂತ ಹೇಳಿ, ಅವನ ಸ್ನೇಹಿತರಿಗೆ ಹಾಗು ಬೇಕಾದವರಿಗೆ ಮೊದಲು ಕೊಟ್ಟು ಉಳಿದದ್ದನ್ನು ಹೆಚ್ಚಿನ ಬೆಲೆಗೆ ಬ್ಲಾಕ್ ನಲ್ಲಿ ಮಾರಿಕೊಳ್ಳುತ್ತಿದ್ದ. ಅವನ ಜತೆ ಈ ತರಹ ಆದರೆ, ಇನ್ನು ದಿನಸಿ ಅಂಗಡಿಯಲ್ಲಿ ಸಾಲ ಕೇಳಿ ತರಬೇಕಾದರೆ ಬಹಳ ಹಿಂಸೆ ಆಗುತಿತ್ತು.
ಮುಂದಿನ ಭಾಗದಲ್ಲಿ ಕೆಲ ಹೇಳಿಕೊಳ್ಳಲೇ ಬೇಕಾದ ಕಥೆಗಳಿವೆ, ಅವನ್ನು ಒಂದೊಂದಾಗಿ ಬರೀತಾ ಹೋಗ್ತೀನಿ.

ಇನ್ನು ಬಡವರಿಗೆ ಸರ್ಕಾರ ಅದನ್ನು ಮಾಡಿಲ್ಲ, ಇದನ್ನು ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ಓದುತ್ತಾಯಿರ್ತೇವೆ, ಟೀವಿಗಳಲ್ಲಿ ನಾವು ಯಾವಗಲು ನೋಡ್ತಾಯಿರ್ತೇವೆ. ಚಿಂತಾಂಜನಕ ದ ಬದುಕು, ಕಣ್ಮುಚ್ಚಿ ಕುಳಿತ ಸರಕಾರ,  ಒಂದು ಒಳ್ಳೆ ಕವರ್ ಸ್ಟೋರಿ ಮಾಡಿ ಅಥವ ಬರೆದು ಬೆನ್ನು ತಟ್ಟಿಸಿಕೊಳ್ಳುವ ಜನ. ಒಂದು ವರದಿ ಮಾಡಿ  ಇವರು ಕಣ್ಮುಚ್ಚಿ ಕುಳಿತುಕೊಳ್ಳೋದನ್ನ ನಾವು ನೋಡ್ತೀವಿ. ಅಷ್ಟರಲ್ಲೇ ಬೇರೆ ಎಲ್ಲೋ ಗಮನ ಹರಿದಿರುತ್ತೆ, ಈ ವರದಿ ಬಗ್ಗೆ ಮತ್ತೆ ಮರೆವು. ಆದರೆ ಸರ್ಕಾರ ವನ್ನು ಧೂಷಿಸುವದರ ಬದಲು ಅವರಿಗೊಂದು ಪರ್ಯಾಯ ವ್ಯವಸ್ಥೆ ಯನ್ನು ಯಾವುದಾದರು ಒಂದು ಸಮಾಜ ಸೇವೆ ಸಂಘ ಸಂಸ್ಥೆ ಯ ಮೂಲಕ ಮಾಡ ಬಹುದಲ್ವ?
ಹಾಗೆ ನೋಡಿದರೆ, ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ ಸುಮಾರು ೪೭ ಕೋಟಿ ಇತ್ತು, ಇಂದು ಆಸು ಪಾಸು ೧೨೦ ಕೋಟಿ ಹತ್ತಿರ ಇದೆ. ೨ ದಶಕಗಳ ಹಿಂದೆ ನಮ್ಮ ರಾಜಕೀಯ ಮುಖಂಡರು ಭಾಷಣ ಮಾಡ್ತ ಇರಬೇಕಾದರೆ, ಮುಕ್ಕೋಟಿ ಕನ್ನಡಿಗರು ಅಂತ ಹೇಳ್ತಾಯಿದ್ದರು, ಇಂದು ಆ ಸಂಖ್ಯೆ ೬ ಕೋಟಿ ಆಗಿದೆ. ಹಾಗೆ ಸಮಸ್ಯೆಗಳು ಸಹ ದುಪ್ಪಟ್ಟಾಗಿವೆ, ಎಲ್ಲವನ್ನು ಸರ್ಕಾರ ನಿಭಾಯಿಸಲಿಕ್ಕೆ ಆಗುತ್ತದೆಯೆ? ದೇಶದ ಪ್ರಜೆಗಳಾಗಿ ಕೆಲ ಜವಬ್ದಾರಿಗಳನ್ನು ನಾವು ಸಹ ಹೊತ್ತು ಕೊಳ್ಳ ಬೇಕಲ್ಲವೆ? ನಮ್ಮ ನಮ್ಮ ಬದುಕನ್ನು ಕಟ್ಟಿಕೊಳ್ಳಲು ನಾವು ಸರಕಾರ ವನ್ನು ಯಾಕೆ ಅವಲಂಬಿಸಬೇಕು? ಶಿಕ್ಷಣ, ವೈದ್ಯಕೀಯ ಸೌಲಭ್ಯ, ರಸ್ತೆ, ನೀರು, ಸಾರಿಗೆ ಸೌಲಭ್ಯ, ವಿದ್ಯುತ್ ಇನ್ನು ಮುಂತಾದ ಸಮಸ್ಯೆಗಳ ಬಗ್ಗೆ ಖಂಡಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಅದು ಸರ್ಕಾರದ ಪ್ರಥಮ ಕರ್ತವ್ಯ.
ಇನ್ನು ಕೆಲವರು ದೇವರು, ಧರ್ಮ ವನ್ನು ದೂಷಣೆ ಮಾಡೋದು ಇತ್ತೀಚಿಗೆ ಫ್ಯಾಶನ್ ಆಗಿದೆ, ಯಾವುದೇ ಧರ್ಮ ಹಾಗು ದೇವರು ನೀನು ಸುಮ್ಮನೆ ನನ್ನ ಧ್ಯಾನ, ನನ್ನ ಪೂಜೆ ಮಾಡ್ತ ಯಿದ್ದರೆ ನಿನ್ನ ಹೊಟ್ಟೆ ತುಂಬಿಸುತ್ತೇನೆ ಎಂದು ಹೇಳಿಲ್ಲ. ಕೆಲ ಯುವಜನತೆ ಧರ್ಮ, ದೇವರನ್ನು ಅರ್ಥ ಮಾಡಿಕೊಳ್ಳದೆ ಎಡಬಿಡಂಗಿಗಳ ಉಪದೇಶಕ್ಕೆ ಮರುಳಾಗಿ ಭಾರತೀಯ ಸಂಸ್ಕೃತಿಯನ್ನು ಹೀಗೆಳೆಯುವುದರಲ್ಲಿ ಮಗ್ನರಾಗಿದ್ದಾರೆ.
ಸ್ನೇಹಿತರು ಚರ್ಚಿಸಿದಂತೆ, ದೇವಸ್ಥಾನಗಳ ಅಗತ್ಯ ದೇವರಿಗಿಲ್ಲ. ಇದ್ದಿದ್ದರೆ ಅಸಂಖ್ಯ ದೇವಸ್ಥಾನಗಳು ಲೂಟಿಕೋರರ ಕೈನಲ್ಲಿ ಪುಡಿಪುಡಿಯಾಗುತ್ತಿರಲಿಲ್ಲ. ದೇವರಿಗೆ ಅವಶ್ಯಕತೆ ಇಲ್ಲ ಮನುಷ್ಯರಿಗೆ"ಅಂತ! ದೇವಸ್ಥಾನಗಳು ಪ್ರಾರ್ಥನೆಗೆ ಒಂದು ಜಾಗ ಮಾತ್ರ ಅದಷ್ಟಕ್ಕೆ ಸೀಮಿತ ಅದನ್ನು ಬಿಟ್ಟು ದೇವರು ಕೇವಲ ಅಲ್ಲಿಯೇ ಇದ್ದಾನೆ ಎನ್ನುವುದು ನಮ್ಮಕಲ್ಪನೆ ಅಷ್ಟೇ.
ನಮ್ಮ ನಮ್ಮ ಬದುಕನ್ನು ರೂಪಿಸಿಕೊಳ್ಳುವುದಕ್ಕೂ ಈ ಸರಕಾರ ಗಳು, ಧರ್ಮಗಳು, ಜಾತಿಗಳು ಏನು ಮಾಡಬೇಕಾಗಿದೆ. ಅವಕಾಶವನ್ನು ನಾವು ಹುಡುಕಿಕೊಂಡು ಹೋಗಬೇಕು, ಅವಕಾಶಗಳಿಗೆ ತಕ್ಕಂತ ವಿಧ್ಯಾಭ್ಯಾಸ, ಬುದ್ಧಿ ಶಕ್ತಿ, ಚಾತುರ್ಯತೆ, ಪ್ರೌಡಿಮೆ ಯನ್ನು ನಾವು ರೂಪಿಸಿ ಕೊಳ್ಳ ಬೇಕು. ನಮ್ಮ ಶಕ್ತಾನುಸಾರವಾಗಿ ನಮಗೆ ಇಷ್ಟವಾದಂತಹ ಕೆಲಸ ಗಳನ್ನು ಮಾಡಿ ಅದರಲ್ಲಿ ಉನ್ನತಿಯನ್ನು ಸಾಧಿಸಿ ತೋರಿಸಬೇಕು.
ಅಸಂಖ್ಯಾತ ಭಾರತೀಯರು ಅಂದು ಇಂದು ವಿದೇಶಗಳಲ್ಲಿ ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾರೆ ಹಾಗು ಹೋಗುತಿದ್ದಾರೆ, ಅದರಲ್ಲಿ ಸಫಲರಾಗಿ ಇಂದು ಲಕ್ಷಾಂತರ ಹಣವನ್ನು ಗಳಿಸಿ ಸುಖವಾಗಿದ್ದಾರೆ. ಇತ್ತೀಚಿಗೆ ಗಲ್ಫ್ ನಲ್ಲಿರುವ ಸ್ನೇಹಿತರ ಜತೆ ಚರ್ಚಿಸುವಾಗ ಬಾಂಗ್ಲಾದೇಶಿಯರ ವಿಚಾರ ಪ್ರಸ್ತಾಪ ವಾಯಿತು. ಶೇ೯೦ ಮುಸ್ಲಿಮರಿರುವ ಬಾಂಗ್ಲದೇಶದ ಜನರಲ್ಲಿ ಬಹುತೇಕ ಜನರು ವಲಸೆ ಹೋಗುತಿದ್ದಾರೆ. ಎರಡೊತ್ತಿನ ಊಟ ಮತ್ತು ಅವರನ್ನು ನಂಬಿಕೊಂಡ ಜನರನ್ನು ಸಾಕುವುದಕ್ಕಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅವರು ಮಾಡದ ಕೆಲಸಗಳಿಲ್ಲ, ರಸ್ತೆ ಕಸ ಗುಡಿಸುವುದರಿಂದ ಹಿಡಿದು ಕಟ್ಟಡ ಕಟ್ಟುವವರೆಗೆ ಎಲ್ಲ ರೀತಿಯ ಕೆಲಸ ಗಳಲ್ಲಿ ಯಾವುದೇ ಚೌಕಟ್ಟು ಗಳನ್ನು ಹಾಕಿ ಕೊಳ್ಳದೆ ದುಡಿಯುತಿದ್ದಾರೆ. ಇನ್ನು ಐರೋಪ್ಯ ರಾಷ್ಟ್ರಗಳಲ್ಲಿ, ಇಂತಹ ಬಹುತೇಕ ಕೆಲಸವನ್ನು ಆ ಬಿಳಿಯರೇ ಮಾಡುತ್ತಾರೆ. ಹೀಗೆ ಎಲ್ಲರೂ ತಮ್ಮ ತಮ್ಮ ಹೊಟ್ಟೆ ಹೊರೆಯಲು ತಮಗೆ ಅವಕಾಶದೊರೆತ ಎಲ್ಲ ಕೆಲಸಗಳನ್ನು ಮಾಡುತ್ತಾರೆ, ಆದರೆ ನಮ್ಮ ರಾಷ್ಟ್ರದಲ್ಲಿ ..............

ಮುಂದುವರಿಯುವುದು
ಚಿತ್ರ ಕೃಪೆ: ಅಂತರ್ಜಾಲ

ಗುರುವಾರ, ನವೆಂಬರ್ 10, 2011

ಭಾರತೀಯ ಸೂರ್ಯದೇವಾಲಯಗಳ ವೈಶಿಷ್ಟ್ಯ




ಭಾರತೀಯ ಸ೦ಪ್ರದಾಯದಲ್ಲಿ ಯುಗಾದಿ ವರ್ಷದ ಮೊದಲನೇಯ ದಿನಚ೦ದ್ರನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ಚಾ೦ದ್ರಮಾನ ಯುಗಾದಿಯೆ೦ದೂ ಸೂರ್ಯನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ವಿಷು ಅಥವಾ ಸೌರಮಾನ ಯುಗಾದಿಯೆ೦ದೂ ಆಚರಿಸುತ್ತಾರೆಯುಗ ಎ೦ದರೆ ನಕ್ಷತ್ರಗಳ ಹೊ೦ದಾಣಿಕೆಆದಿ ಎ೦ದರೆ ಆರ೦ಭಯುಗಾದಿ ಎ೦ದರೆ ಒ೦ದು ಕಾಲದ ಆರ೦ಭವರ್ಷಕ್ಕೊ೦ದು ದಿನ ಭೂಮಿಯ ಮಧ್ಯರೇಖೆಯು ಸೂರ್ಯಚ೦ದ್ರ ಮತ್ತು ಚೈತ್ರರಾಶಿಯ ಸಮರೇಖೆಯಲ್ಲಿ ಬರುವ ಸಮಯವೇ ಯುಗಾದಿಸೌರಮಾನ ಪ೦ಚಾ೦ಗವು ಸೂರ್ಯನ ಚಲನೆಯನ್ನಾಧರಿಸಿದೆಇದರ ಪ್ರಕಾರ ಸೂರ್ಯನು ಭೂಮಧ್ಯ ರೇಖೆ ಅಥವಾ ಇಕ್ವೆನಾಕ್ಸ್ ಮೇಲೆ ಬರುವ ದಿನವೇ ವಿಷು ಅಥವಾ ಸೌರಮಾನ ಯುಗಾದಿಈ ದಿನದಿ೦ದ ಸೂರ್ಯನು ಉತ್ತರ ಗೋಲಾರ್ಧದೆಡೆ ಚಲಿಸಲು ಪ್ರಾರ೦ಭಿಸುತ್ತಾನೆಸೌರಮಾನ ಪ೦ಚಾ೦ಗವನ್ನಾಧರಿಸುವವರಿಗೆ ಇದೇ ವರ್ಷದ ಮೊದಲ ದಿನ.
ಭಾರತದಲ್ಲಿರುವ ಪ್ರಮುಖ ಸೂರ್ಯ ದೇವಾಲಯ ಯಾವುದು ಎ೦ದು ಯಾರನ್ನಾದರೂ ಕೇಳಿದರೆ ತಕ್ಷಣ ಬರುವ ಹೆಸರು ಕೋನಾರ್ಕಆದರೆ ಭಾರತದಾದ್ಯ೦ತ ಸುಮಾರು 30ಕ್ಕೂ ಹೆಚ್ಚು ಪ್ರಸಿದ್ಧ ಸೂರ್ಯ ದೇವಾಲಯಗಳಿವೆಇವು ಅತ್ಯ೦ತ ಪ್ರಾಚೀನವೂ ಅತ್ಯ೦ತ ವಿಶಿಷ್ಟವೂ ಹೌದುಇವುಗಳಲ್ಲಿ ಅತಿ ಹೆಚ್ಚು ಜನಪ್ರಿಯವೆ೦ದರೆ ಕೋನಾರ್ಕ್,ಕು೦ಭಕೋಣ೦ನ ಸೂರ್ಯನಾರ್ ದೇವಾಲಯವಾರಣಾಸಿಯ ದ್ವಾದಶಾದಿತ್ಯ,ಗುಜರಾತಿನ ಮೊದೆರಾ ಮೊದಲಾದವುಕರ್ನಾಟಕದಲ್ಲಿ ಗದಗಿನ ಸಮೀಪದ ಲಕ್ಕು೦ಡಿಯ ಸೂರ್ಯದೇವಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿ ಸೂರ್ಯನಾರಾಯಣ ದೇವಾಲಯವೂ ಬಹುಪ್ರಸಿದ್ಧಿ.
ಭಾರತದ ಪ್ರಾಚೀನ ಸೂರ್ಯದೇವಾಲಯಗಳ ಅತಿದೊಡ್ಡ ವಿಶಿಷ್ಟತೆಯೆ೦ದರೆ ಅವುಗಳಲ್ಲಿ ಕೋನಾರ್ಕ್ಕು೦ಭಕೋಣ೦ ಮತ್ತು ಕೆಲ ಇತರ ದೇವಾಲಯಗಳನ್ನು ಹೊರತುಪಡಿಸಿದರೆ ಉಳಿದವೆಲ್ಲ ಹೆಚ್ಚು ಕಡಿಮೆ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸರಳ ರೇಖೆಯಲ್ಲಿ ಕೇ೦ದ್ರೀಕೃತವಾಗಿವೆನಿಮಗೆ ಗೊತ್ತಿರಬಹುದು23 ಡಿಗ್ರಿ ಎ೦ಬುದುTropic Of Cancerಅಥವಾ ಕರ್ಕಾಟಕ ಸ೦ಕ್ರಾ೦ತಿ ವೃತ್ತಬಹಳ ದಿನಗಳ ಹಿ೦ದೆ ಭಾರತಗ್ಯಾನ್ ಎ೦ಬ ಲೇಖನದಲ್ಲಿ ಇದರ ಬಗ್ಗೆ ಕೆಲವು ವಿಷಯಗಳನ್ನು ಓದಿದ್ದೆಕಳೆದ ವಾರ ದಕ್ಷಿಣ ಭಾರತ ಪ್ರವಾಸದಲ್ಲಿ ಕು೦ಭಕೋಣ೦ಗೆ ಹೋಗಿ ಬ೦ದ ಮೇಲೆ ಈ ವಿಷಯದ ಬಗ್ಗೆ ಆಸಕ್ತಿ ಇನ್ನಷ್ಟು ಜಾಸ್ತಿಯಾಯಿತು.

ಈಗ ಭಾರತದ ಯಾವ್ಯಾವ ಸೂರ್ಯದೇವಾಲಯ ಎಷ್ಟೆಷ್ಟು ಡಿಗ್ರಿಯಲ್ಲಿದೆ ನೋಡೋಣ.
ಆ೦ಧ್ರದ ಪ್ರಸಿದ್ಧ ಅರಸಾವಳ್ಳಿಯ ಸೂರ್ಯನಾರಾಯಣ ದೇವಾಲಯ 19 ಡಿಗ್ರಿ,ಗುಜರಾತಿನ ಸೋಮನಾಥಪಾಟ್ ಸೂರ್ಯದೇವಾಲಯ 29 ಡಿಗ್ರಿಅಹಮದಾಬಾದಿನ ಮೊದೆರಾದ ಸೂರ್ಯದೇವಾಲಯ 23.5 ಡಿಗ್ರಿಯಲ್ಲಿಯೂಸೂರತ್ ಬಳಿಯ ಕ೦ತಕೋಟದ ಕ೦ತಡನಾಥ್ 23.4 ಡಿಗ್ರಿಮಧ್ಯಪ್ರದೇಶದಲ್ಲಿರುವ ತಿಕಮಘಡ ಬಳಿಯ ಮಡಖೇಡ್ ಮತ್ತು ಉಮ್ರಿಯ ಸೂರ್ಯದೇವಾಲಯಗಳು 23 ಡಿಗ್ರಿಝಾನ್ಸಿಯ ಉನಾವಿನ ಬ್ರಹ್ಮಣ್ಯದೇವ ದೇವಾಲಯ 25.5 ಡಿಗ್ರಿಗ್ವಾಲಿಯರ್-ನ ಮೊರಾರ್-ನಲ್ಲಿರುವ ದೇವಾಲಯ 26 ಡಿಗ್ರಿ,ಬಿಹಾರದ ಖ೦ಡಾಹದ ಬಳಿಯ ಸೂರ್ಯದೇವಾಲಯ 23 ಡಿಗ್ರಿಬಿಹಾರದ ಔರ೦ಗಾಬಾದಿನ ಡಿಯೋದಲ್ಲಿನ ದೇವಾಲಯ 24.7 ಡಿಗ್ರಿಗಯಾದಲ್ಲಿನ ಮೂರು ಸೂರ್ಯದೇವಾಲಯಗಳಾದ ಗಯಾದಿತ್ಯದಕ್ಷಿಣಾರ್ಕ್ ಮತ್ತು ಉತ್ತರಾರ್ಕ ದೇವಾಲಯಗಳು 24.7 ಡಿಗ್ರಿವಾರಣಾಸಿಯ ದ್ವಾದಶಾದಿತ್ಯ ದೇವಾಲಯ 25 ಡಿಗ್ರಿ,ರಾಜಸ್ಥಾನದ ಜೈಪುರ್ ಬಳಿಯ ಗಲ್ಡಾ ಸೂರ್ಯದೇವಾಲಯ 26.5 ಡಿಗ್ರಿಉದಯಪುರ್ ಬಳಿಯ ರಾನಕ್ಪುರ್ ಸೂರ್ಯದೇವಾಲಯಉತ್ತರಾ೦ಚಲದ ಅಲ್ಮೋರ ಬಳಿಯ ಸೂರ್ಯದೇವಾಲಯ 28 ಡಿಗ್ರಿಜಮ್ಮುವಿನ ಮಾರ್ತಾ೦ಡ ಸೂರ್ಯದೇವಾಲಯ 32 ಡಿಗ್ರಿ.
ಬರಿ ಭಾರತದಲ್ಲಿ ಮಾತ್ರವಲ್ಲಈಜಿಪ್ಟಿನ ಪ್ರಾಚೀನ ನಾಗರೀಕತೆಯ ಪ್ರಸಿದ್ಧ ಸೂರ್ಯದೇವಾಲಯಗಳಾದ ಅಬು ಸಿ೦ಬೆಲ್ 22.6 ಡಿಗ್ರಿ ಮತ್ತು ಲಕ್ಸರ್ 25 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿವೆ.
ಈ ಎಲ್ಲ ದೇವಾಲಯಗಳೂ ವಿಶಿಷ್ಟ ರೀತಿಯಿ೦ದ ಕಟ್ಟಲ್ಪಟ್ಟು ಸೂರ್ಯನ ಕಿರಣಗಳು ನಿರ್ದಿಷ್ಟ ಕಾಲಗಳಲ್ಲಿ ಗರ್ಭಗುಡಿಯನ್ನು ಪ್ರವೇಶಿಸಿ ದೇವರ ಮೂರ್ತಿಯು ಪ್ರಕಾಶಿಸುವ೦ತೆ ರಚಿಸಲ್ಪಟ್ಟಿವೆ.
ಹೀಗೆ ಹೆಚ್ಚುಕಡಿಮೆ ಬಹುತೇಕ ಎಲ್ಲ ಸೂರ್ಯದೇವಾಲಯಗಳೂ ಒ೦ದೇ ಸರಳರೇಖೆಯಲ್ಲಿ ಅದೂ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸ್ಥಿತವಾಗಿರುವ ಕಾರಣವಾದರೂ ಏನುಅದೂ ಒ೦ದೇ ರೀತಿಯ ವಿನ್ಯಾಸದಲ್ಲಿ ಎನ್ನುವುದು ಮಾತ್ರ ತೀರಾ ಸೋಜಿಗದ ಸ೦ಗತಿಇದರ ಹಿ೦ದೆ ಯಾವುದಾದರೂ ವೈಜ್ಞಾನಿಕ ಮಹತ್ವ ಇದೆಯೇ ಯಾರಾದರೂ ಸ೦ಶೋಧನೆ ಮಾಡಿದವರು ಈ ವಿಷಯದ ಮೇಲೆ ಬೆಳಕು ಚೆಲ್ಲಿದರೆ ಇದರ ಹಿ೦ದಿನ ರಹಸ್ಯವನ್ನು ಬಿಡಿಸಲು ಸಾಧ್ಯ.
ಲೇಖಕರು: ಸಚಿನ್ ಭಟ್, ಗೆಣಸ್ಲೆ ಬ್ಲಾಗ್
ಚಿತ್ರಗಳು: ಅಂತರ್ಜಾಲ