ಬಹು ಸೋಜಿಗದ ಸಂಗತಿ ಯೆಂದರೆ, ಮೈಸೂರಿನ ಒಂದು ಪತ್ರಿಕೆಯ ಸಂಪಾದಕರು ಬರೆದ ಅಂಕಣದ ಬಗ್ಗೆ ವಿಪರೀತ ಚರ್ಚೆ ನಡೀತು. ಆದರೆ ಆ ಅಂಕಣಕ್ಕೆ ಅಂತಹ ಮಹತ್ವ ವನ್ನು ಯಾರು ಕೊಡಲಿಲ್ಲ ಕೆಲವರು ಮಾತ್ರ ಬ್ಲಾಗ್ ಬರೆದು ಯಥಾರೀತಿ ಬಲಪಂತೀಯರನ್ನು ಖಂಡಿಸುವುದನ್ನು ಮಾತ್ರ ಮರೆಯಲಿಲ್ಲ. ಭೈರಪ್ಪನವರ ಅಭಿಮಾನಿಗಳಲ್ಲಿ ಹಂಗಾಯಿತು, ಹಿಂಗಾಯಿತು, ಕೆಂಡ ಕಾರಿದ್ರು. ಪಾಟೀಲ ಪುಟ್ಟಪ್ಪನವರು ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಮಾತನಾಡಿದರು. ಈ ಗಣಪತಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ ಅಂದ್ರು. ಅಂತ ಏನೇನೋ ಬಡಬಡಾಯಿಸಿದರು.
ಆದರೆ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿ ಮಾತುಗಳಿಗೆ ಮಾತ್ರ ಯಾಕೆ ಗಪ್ ಚುಪ್!!! ಮೈಸೂರಿನ ಪತ್ರಿಕೆಯ ಲೇಖನಕ್ಕೆ ಕೊಟ್ಟ ಪ್ರಾಮುಖ್ಯತೆ ಈ ಮಹಾನುಭಾವರ ಮಾತುಗಳಿಗೆ ಯಾಕಿಲ್ಲ? ಆ ಬ್ಲಾಗ್ ನಲ್ಲಿ ಲೇಖನದ ಬಗ್ಗೆ ಯಾವರೀತಿ ಖಂಡಿಸಿದಿರೋ ಅದೇ ರೀತಿ ಈ ಮಾತುಗಳನ್ನು ಸಹ ಯಾಕೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ? ನೀವು ಹೇಳಬೇಕಾಗಿರುವುದನ್ನು ಅವರು ಹೇಳಿದ್ದಾರೆ ಅಂತ ಇರಬಹುದೇನೋ!
------------------------------------------------------------------------------------------------------------
ಅಂದಿನಿಂದ ಇಂದಿನವರೆಗೆ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾದ ಪರ ವಿರೋಧದ ಲೇಖನಗಳು ಇಲ್ಲಿವೆ,
-------------------------------------------------------------------------------------------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ