ಭಾನುವಾರ, ಸೆಪ್ಟೆಂಬರ್ 4, 2011

ಪ್ರತಿಕ್ರಿಯೆಗಳು - ಭ್ರಷ್ಟ ಪತ್ರಕರ್ತರ ನೈತಿಕತೆ

ಈ ಲೇಖನವನ್ನು ನಾನು ಒಬ್ಬ ಓದುಗ ಮಿತ್ರರ ಸಹಾಯದಿಂದ ಗಲ್ಫ್ ಕನ್ನಡಿಗ ವೆಬ್ ಸೈಟ್ ಗೆ ಕಳುಹಿಸಿದ್ದೆ. ಸಂಪಾದಕರಾದ ಬಿ.ಜಿ.ಮೋಹನ್ ದಾಸ್ ಲೇಖನವನ್ನು ಸ್ವೀಕರಿಸಿದ ತಕ್ಷಣ ಪ್ರಕಟಿಸಿದರು. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹಾಗು ಸಹಕರಿಸಿದ ಮಿತ್ರರಿಗೂ ವಂದನೆಗಳು.
ಇನ್ನೂ ಕೆಲ ಓದುಗ ಮಿತ್ರರು ಈ ಲೇಖನವನ್ನು ಎಲ್ಲ ಪತ್ರಿಕಾ ಸಂಪಾದಕರಿಗೂ ರವಾನಿಸಿ ಅವರ ಅಭಿಪ್ರಾಯ ಹೇಳುವಂತೆ ದುಂಬಾಲು ಬಿದ್ದಿದ್ದರು. ಮತ್ತೆ ಕೆಲವರು ಕೆಲ ಪತ್ರಕರ್ತರ ಫೇಸ್ ಬುಕ್ಕಿನ ವಾಲ್ ಗೆ ಲಿಂಕ್ ಹಾಕಿ ಅವರ ಗಮನಸೆಳೆದಿದ್ದರು.

ಪತ್ರಕರ್ತರನ್ನು  ಭ್ರಷ್ಟ ರಾಜಕಾರಣಿಗಳ ಹಾಗು ಭ್ರಷ್ಟ ಸರ್ಕಾರಿ ನೌಕರರ ಹಾಗೆ  ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ.
ಗಮನ ಸೆಳೆದ ಕೆಲ ಪ್ರತಿಕ್ರಿಯೆಗಳು, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಪ್ರತಿಸ್ಪಂದನ
vaijanath hiremath, yadgir, karnataka
2011-08-31
ಎಲ್ಲ ಕ್ಷೇತ್ರದಲ್ಲಿರುವಂತೆ ಮಾಧ್ಯಮದಲ್ಲಿಯೂ ಬ್ರಷ್ಟರಿದ್ದಾರೆ ಹಾಗಂತ ಎಲ್ಲ ಪತ್ರಕರ್ತರಿಗೂ ಅದು ಅನ್ವಯವಾಗದು. ಹಾಂ ಕೆಲವರು ಹೇಳಿದಂತೆ ನಮ್ ರಾಜ್ಯದ ದರಲ್ಲೂ ಇದೇ ವಿಸ್ವೆಸ್ವರಬಟ್ಟ ಮತ್ತು ರವಿ ಬೆಳಗ್ಗೆರೆ ಇಬ್ಬರು ಜತೆಗೆ ಡೆಕ್ಕನ್ ಕ್ರಾನಿಕಲ್ ಎಂಬ ಆಂದ್ರದ ಪೇಪರ್, ಜನಶ್ರೀಯ ಮುಖಿಯಾ ಸಂಜಯ್ ಬೆಟಗೇರಿ ಸೇರಿದಂತೆ ಬಹುತೇಕ ಕೆಲ ಭಟ್ಟಂಗಿಗಳು ಸೆ'ಗಣಿ'ಧಣಿಗಳಿಂದ ತಿಂದಿದ್ದಾರೆ. ಅಲ್ಲದೇ ಒಬ್ಬ ಬಹಿರಂಗವಾಗಿಯೇ ಬಿಜೆಪಿ ಬೆಂಬಲಿಸಿದರೆ ಇನ್ನೊಬ್ಬ ಈಗಾಗಲೇ ಒಂದು ಕಡೆಯಿಂದ ಇನ್ನೊಬ್ಬ ಕೇರಳ ಮೂಲದ ರಾಜೀವ ಚಂದ್ರುಶೇಕರ ೆನ್ನವ 'ಎಂಪ್ಟಿ'ಯ ಾಶ್ರಯಕ್ಕೆ ಹೋಗಿಯಾಗಿದೆ.ಅಲ್ಲಿ ೇನೇನು ಮಾಡ್ತಿವಿ ನೋಡ್ತಿರಿ ಅಂತ ಹೇಳುತ್ತಲೇ ಕನ್ನಡಪ್ರಭದಲ್ಲಿ ಇಸ್ಪೀಟ್ ಎಲೆಯನ್ನಾಗಿಸಿ ಮಾಡಿ ರಾಡಿ ಎಬ್ಬಿಸಿ 'ಗಣಿ ಕಪ್ಪೆ'ತಿಂದು ಇನ್ನು ಫಾರೆನ್ ಗೆ ಸ್ಟಡಿಗೆ ಯಾವಾಗ ಹೋಗ್ತಾನೋ ರಾಜೀವ ಯಾವಾಗ ಿವರನ್ನ ಸ್ಟಡಿಗೆ ಕಳಿಸ್ತಾನೋ ಇಲ್ಲವೊ ಕಾದು ನೋಡಬೇಕಿದೆ.
ಇಷ್ಟೆಲ್ಲ ಂದರೂ ಒಂದೆ ಒಂದು ಸ್ಪಷ್ಟನೆಯನ್ನೂ ನೀಡದ ಪತ್ರಕರ್ತರು ನಿಜಕ್ಕೂ ಿನ್ನುಳಿದ ಪತ್ರಕರ್ತರ ಮಾನಹರಾಜು ಹಾಕೋದಂತ ನಿರ್ಧರಿಸಿದಂತಿದೆ. ಛೇ. ಛೀ. ಥೂ..
suresh B V , Gulbarga
2011-08-31
corrupt reporter should be punished. he is not an exception
ರಾಜುವಿನಯ್, ಮೈಸೂರು
2011-08-29
ಛೀ.... ಅನ್ನಿಸುತ್ತೆ. ನಾವು ಆರಾಧಿಸುತ್ತಿದ್ದ ಕೆಲವು ಪತ್ರಕರ್ತರು ಅವರನ್ನೇ ಆದರ್ಶವಾಗಿ ಇಟ್ಟುಕೊಂಡಿದ್ದ ನಮ್ಮಂತಹವರಿಗೆ ನಾಚಿಕೆ ಯಾಗುತ್ತೆ. ಇವರುಗಳು ತಮ್ಮ ನೈತಿಕತೆಯ ಬಗ್ಗೆ ಅರಿತು ನಂತರ ಪತ್ರಕರ್ತರಾಗಲೀ, ಇವರಿಗೆ ದೇಶದ ಬಗ್ಗೆ ಕಾಳಜಿ ಬೇಡ, ತಮ್ಮ ತಮ್ಮ ಆಸ್ತಿಯ ಬಗ್ಗೆ ತಿನ್ನೋಕೆ ಬೇಕಾಗಿರುವುದು ದಿನಕ್ಕೆ ಕಾಲು ಕೇಜಿ ಅನ್ನ. ಅದಕ್ಕೆ ಯಾಕಿಷ್ಟು ವಾಮಮಾರ್ಗಗಳು.ದೇಶಕ್ಕಾಗಿ ಏನಾದರೂ ಮಾಡ್ರಿ, ಈ ರಾಜ್ಯ ನಿಮಗೆ ಬೇಕಾದಷ್ಟನ್ನು ಕೊಟ್ಟಿದೆ. ನೀವು ಏನೂ ಕೊಟ್ಟಿದ್ದೀರಿ. ನಿಮಗೆ ಬೇಕಾದುದನ್ನು ನೀವು ಸ್ವಾರ್ಥಕ್ಕೆ ಪಡೆದುಕೊಂಡಿರಿ. ನೀವು ಹೇಳಿದ್ದು, ಬರೆದದ್ದು, ತೋರಿಸಿದ್ದು ನಾವು ನಂಬಬೇಕು. (ಇದನ್ನು ಫೋನ್ ಮೂಲಕ ಕೇಳಿದಾಗ ನಿಮಗೆ ಇಷ್ಟವಿದ್ದರೆ ಓದಿ, ನೋಡಿ ಇಲ್ಲದಿದ್ದರೆ ಬಿಡಿ ಅನ್ನೋ ಮಾತುಗಳನ್ನು ಕೇಳಿಸಿಕೊಳ್ಳುವಂತಹ ಸಮಯವೂ ಇತ್ತು) ಈಗಲಾದರೂ ಪ್ರಾಮಾಣಿಕತೆ ತೋರಿಸಿ, ನಿಮ್ಮನ್ನು ನಾವು ಜನ ನಂಬಿದ್ದೇವೆ. ನೈತಿಕತೆ ತೋರಿಸಿ, ಮೌಲ್ಯಗಳಿಗೆ ಬೆಲೆ ಕೊಡಿ.
Ashwini Dasare, Dharwad
2011-08-28
2G ಹಗರಣದಿಂದ ಗಣಿ ಹಗರಣದವರೆಗೂ ನಮ್ಮ ಮಾಧ್ಯಮಗಳ ಮತ್ತು ಪತ್ರಕರ್ತರ ಕೊಡುಗೆ ಅಪಾರವಾದದ್ದು!. ಆಚಾರ ಹೇಳಿ ಬದನೆಕಾಯಿ ತಿನ್ನು ಎನ್ನುವ ಗಾದೆಯಂತೆ ಬಹುತೇಕ ಪತ್ರಕರ್ತರೂ ತಮ್ಮ ಹೊಟ್ಟೆ ಪಾಡಿಗಾಗಿ ಜನರ ವಿಶ್ವಾಸ ಮತ್ತು ಅಭಿಮಾನವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿಜವಾಗಲು ವಿಷಾದದ ಸಂಗತಿ. ಇಷ್ಟಾಗಿಯೂ ನಮಗೇನು ಆಗೇ ಇಲ್ಲವೆಂಬಂತೆ ವರ್ತಿಸುತ್ತಿರುವ ಇವರನ್ನು TV ಪರದೆಯ ಮೇಲೆ ನೋಡಲು ಅಸಹ್ಯವಾಗುತ್ತಿದೆ. ತಮ್ಮ ಹಸ್ತವೆ ಶುದ್ಧ ಇಟ್ಟುಕೊಳ್ಳಲು ಆಗದ ಈ ಮಹಾನುಭಾವರು ಗಂಟೆಗಟ್ಟಲೆ ಅಣ್ಣಾ ಹಜಾರೆ ಅವರ ಬಗ್ಗೆ ಮಾತನಾಡಲು, ಮತ್ತು ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಾಚಿಕೆ ಯಾಗುವದಿಲ್ಲವೇ?. ತಮ್ಮ ಬುಡದಲ್ಲೇ ಬ್ರಹ್ಮಾಂಡ ಬ್ರಷ್ಟತೆಯನ್ನು ಇಟ್ಟುಕೊಂಡು ಬೇರೆಯವರ ನೈತಿಕತೆ ಮಾತನಾಡುವ ಇಂಥ ಕ್ರಿಮಿಗಳನ್ನು ಮಧ್ಯಮಗಳು ಮತ್ತು ಜನರು ಇನ್ನು ಮುಂದೆ ಯಾದರೂ ದೂರ ಇಡುವರೆ? ಕಾದು ನೋಡಬೇಕು. ಮತ್ತು ಇಂಥವರಿಗೆ ಕಟ್ಟಾ ಅಂಥ ರಾಜಕಾರಣಿಗಿಂತ ಘೋರ ಶಿಕ್ಷೆ ವಿಧಿಸಬೇಕು!
K S Rajaram, Tlaguppa - Shimoga
2011-08-28
It is most timely and eye opener, bEliyE eddu hola maidare hEge allave .. ee bageya ecchara indina yuvajanathege bEkE bEku.. baravaNige mundevarisiri namma sahakaara yaavaagaloo labhya.. k s rajaram
ವಿಜಯ್ ಬಾರಕೂರು, ಕತಾರ್
2011-08-28
ಇಂದಿನ ದಿನಗಳಲ್ಲಿ ಮುಖ್ಯವಾಗಿ ಚರ್ಚಿಸಬೇಕಾದ ಅಗತ್ಯದ ವಿಚಾರವನ್ನೇ ಕೈಗೆತ್ತಿಕೊಂಡು ಪ್ರಕಟಿಸಿದುದಕ್ಕೆ Thanks ಸಚಿನ್ ರವರೇ... ಇಂದು ಪತ್ರಿಕೆ ಓದುವುದೆಂದರೆ ಕೇವಲ ಮನರಂಜನೆಗಾಗಿಯೇನೋ ಎನಿಸಿದರೆ ಆಶ್ಚರ್ಯವಾಗದು. ಯಾಕೆಂದರೆ ನಿಜವಾದ ಸತ್ಯ ಸಂಗತಿಯ ಸುದ್ದಿ ಓದುಗರಿಗೆ ಪತ್ರಿಕೆಗಳ ಮೂಲಕ ಲಭಿಸುವುದು ಅಲ್ಲೋ ಇಲ್ಲೋ ಎಂಬಂತೆ ಅಪರೂಪಕ್ಕೆ ಮಾತ್ರ. ಇಂದಿನ ಯಾವುದೇ ಪತ್ರಿಕಾ ಗೋಷ್ಠಿಯಲ್ಲಿ (ನಾನು ಹಿಂದೆಯೂ ಕೆಲವೆಡೆ ಬರೆದಿರುವಂತೆ) ಪ್ರಕಟವಾಗಿಸಬೇಕಾಗಿರುವ ಸುದ್ದಿಯನ್ನೊಳಗೊಂಡ ಕವರ್ ನೊಂದಿಗೆ "ಇನ್ನೊಂದು ಕವರ್" ಕೂಡಾ ಇರುತ್ತದೆ. ಆ ಇನ್ನೊಂದು ಕವರ್ ನ ಭಾರ ಅದೆಷ್ಟಿಸಿರುತ್ತದೆ ಎಂಬುದನ್ನು ಅನುಸರಿಸಿ ಆ ಪತ್ರಿಕಾಗೋಷ್ಠಿಯಲ್ಲಿ ನಡೆದ ವಿಷಯ ಪ್ರಕಟವಾಗುತ್ತದೆ. ಇದು ಸತ್ಯವಿಷಯ. ಅಂದರೆ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಕರ್ತರು ಕೇವಲ ನಾಮಕಾವಸ್ತೆ ಮಾತ್ರ. ಪತ್ರಿಕೆಯಲ್ಲಿ ಏನು ಬರೆಯಬೇಕು ಎಂಬುದನ್ನು ಪತ್ರಿಕಾಗೋಷ್ಠಿ ಏರ್ಪಡಿಸಿರುವವರು ಮೊದಲೇ ನಿರ್ಧರಿಸಿ ಬರೆದು ಕವರಿನಲ್ಲಿ ಹಾಕಿ ಭದ್ರವಾಗಿ ಇಟ್ಟಿರುತ್ತಾರೆ. ಗೋಷ್ಟಿಯ ನಂತರ ಪತ್ರಕರ್ತರುಗಳಿಗೆ ಬಾರ್ ಊಟದೊಂದಿಗೆ ಗುಂಡು ಕಾಗೂ ವಿಶೇಷ ಕವರ್ ದೊರೆತರೆ ಸಾಕು. ಸುದ್ದಿ "ಕವರ್" ಆಗಿಬಿಡುತ್ತದೆ.ನಮಗೆ ತಿಳಿದಿರುವಂತೆ ಕೆಲವು ದೇಶಗಳಲ್ಲಿ ಯಾವುದೇ ಸುದ್ದಿಯನ್ನು ಪ್ರಕಟಿಸಬೇಕಾದರೆ ಏನು ಪ್ರಕಟಿಸಬೇಕು ಏನನ್ನು ಪ್ರಕಟಿಸಬಾರದುಬಾರದು ಎಂಬುದನ್ನು ಅಲ್ಲಿನ ಸರಕಾರವೇ ನಿರ್ಧರಿಸಿ ಸೆನ್ಸಾರ್ ಮಾಡಿದ ನಂತರ ಪತ್ರಿಕೆಗಳಿಗೆ ರಿಲೀಸ್ ಮಾಡುತ್ತದೆ. ಆದರೆ ನಮ್ಮ ದೇಶದಲ್ಲಿ ಪತ್ರಕರ್ತರುಗಳೇ... ಇನ್ನೊಂದರ್ಥದಲ್ಲಿ ಮಾಧ್ಯಮದ ದೊರೆಗಳು ಹಾಗೂ ಪತ್ರಕರ್ತರುಗಳು ತಮಗೆ ಸಿಗುವ ಸಂಭಾವನೆಯ ಆಧಾರದ ಮೇಲೆ ಸುದ್ದಿಯನ್ನು ಸೆನ್ಸಾರ್ ಮಾಡಿ ಪ್ರಕಟಿಸುತ್ತಾರೆ! ಭೇಷ್!
ನಿಜಹೇಳಬೇಕೆಂದರೆ, ಪತ್ರಿಕೆಯೆಂದರೆ ಅದು ಸಂಪೂರ್ಣ ಜನರ ಸ್ವತ್ತು. ಜನರ ನೋವುನಲಿವು ಗಳೆರಡರಲ್ಲೂ ಸಮಾನ ನೆಲೆಯಲ್ಲಿ ಸ್ಪಂಧಿಸಿ ಅವುಗಳಿಗೆ ನುಡಿಯ ರೂಪವನ್ನು ನೀಡುವ ಶುದ್ಧ ಜೀವನದ ಪ್ರತಿಬಿಂಬವಾಗಿ ಅದು ರೂಪಗೊಳ್ಳಬೇಕು. ಅದು ನಿರ್ಧಿಷ್ಟ, ನಿರ್ಧುಷ್ಟ ಮಾತ್ಸರ್ಯರಹಿತ, ನಿಷ್ಪಕ್ಷಪಾತ ಹಾಗೂ ಸ್ವತಂತ್ರವಾಗಿರಬೇಕು. ಸರಕಾರದ ಅಥವಾ ಇನ್ನಾವುದೇ ಶಕ್ತಿಗಳ ಅಂಕೆ ಅದಕ್ಕಿರಲೇ ಬಾರದು. ಇದು ನಿಜವಾದ ಪತ್ರಿಕಾ ಧರ್ಮ. ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಪತ್ರಿಕೊಧ್ಯಮಗಳೊಂದಿಗೆ ಹಾಗೂ ಪತ್ರಿಕಾಕರ್ತರುಗಳನ್ನೂ ಭ್ರಷ್ಟಾಚಾರದ ಕುರಿತು ತೀಕ್ಷ್ಣವಾಗಿ ಬಿಸಿ ಎದ್ದಿರುವ ಜನಲೋಕಪಾಲನೆಯ ಮಸೂದೆಯಡಿಗೆ ಎಳೆದು ತರಬೇಕಾದ ಅವಶ್ಯಕತೆ ಖಂಡಿತಾಯಿದೆ ಅನಿಸುವುದಿಲ್ಲವೇ?
Manjunath Parashurampura Matad , Chitradurga
2011-08-28
ಖ೦ಡಿತ ಸತ್ಯ......ಹೆಚ್ಚು ಕಮ್ಮಿ ಇವರು ಹೇಳಿದ ಹಾಗೇ ಸರ್ಕಾರ ನೆಡಿಯುತ್ತಿದೆ ಅ೦ತ ತೊರಿಸುಕೊಳ್ಳುವ ಬುದ್ದಿ ಪತ್ರಕರ್ತರಲ್ಲಿ ಬ೦ದಿದೆ......ಕರ್ನಾಟಕ ಕ೦ಡ ಅತಿ ಭ್ರಷ್ಟ ಮುಖ್ಯಮ೦ತ್ರಿ , ಅ೦ತ ಇದು ವರೆಗೂ ಸಹ ಬಿ೦ಬಿಸುತ್ತಿರುವ ಮತ್ತು ಮಕ್ಕಳೇ ಸಿ.ಎ೦.ಗೆ ಪತ್ರ ಬರೆದಿದ್ದಾರೆ ಅ೦ತ ಪೇಪರ್ ಮಾರುವ೦ತಹ ಮ೦ದಿ ಅತಿಯಾಗಿದ್ದಾರೆ.....ಯಾರನ್ನೇ ಅತಿ ಭ್ರಷ್ಟ ಅನ್ನ್ನೊ ಮೊದಲು ಆ ಪತ್ರಿಕೆಯವರು ತಮ್ಮ ’ಅಡಿ’ ಮತ್ತು’ಮುಡಿ’ ನೋಡಿಕೊಳ್ಳೊದು ಒಳ್ಳೆದೇ ಅಲ್ಲವೇ....ಕರ್ನಾಟಕ ಕ೦ಡ ಅತಿ ಭ್ರಷ್ಟ ’ಸ೦ಪಾದಕ /ಪತ್ರಕರ್ತ ’ ಅನ್ನ್ನೊ ಅವಾರ್ಡಿಗೆ ಪತ್ರಿಕೋದ್ಯಮದಲ್ಲಿ ಪೈಪೋಟಿ ನೆಡಿತಾ ಇರಬೇಕು ಅಲ್ಲವೇ.........!!!!!! ನೋಡ್ತಾ ಇರಿ ನಾವೇನೇನ್ ಮಾಡ್ತೇವೆ......!!!!!!!!
Indresh, Coovercolly
2011-08-27
ಪತ್ರಕರ್ತರೇನೂ ಆಕಾಶದಿಂದ ಇಳಿದುಬಂದವರಲ್ಲ. ಕಳ್ಳ ಪತ್ರಕರ್ತರಿಗೂ ತಕ್ಕ ಶಿಕ್ಷೆ ಆಗಲೇಬೇಕು . ಇವರು ಪತ್ರಿಕೆಗಳ ಹೆಸರು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ.
ರವಿ ಮೂರ್ನಾಡು,, ಕ್ಯಾಮರೂನ್,ಆಫ್ರಿಕಾ
2011-08-27
ಸಮಾಜ ಮತ್ತು ಸರಕಾರದ "ದಲ್ಲಾಳಿ" ಗಳಾಗಿರುವ ಪತ್ರಕರ್ತರು ಇಂದಿನ ಭೃಷ್ಟ ಮಂತ್ರಿಗಳನ್ನು ಹುಟ್ಟು ಹಾಕಿದರು ಅಂತ ನೇರವಾಗಿ ಹೇಳುತ್ತೇನೆ.ಅದೇ ರೀತಿ ಭೃಷ್ಟ ಅಧಿಕಾರಿಗಳು- ಮ0ತ್ರಿಗಳ ಎಂಜಲು ತಿನ್ನುವ ಇಂತಹವರು ಭೃಷ್ಟಾಚಾರದ ಬಗ್ಗೆ ಸೋಲ್ಲೆತ್ತಲು ಏನು ಹಕ್ಕಿದೆ? ಭೃಷ್ಟ ಪತ್ರಕರ್ತರು ಎಂಜಲು ನೆಕ್ಕುವ ನಾಯಿಗಳು ಅಂತ ಇಂದಿನ ಪೀತ ಪತ್ರಿಕಾ ಕ್ಷೇತ್ರಕ್ಕೆ ಭಾಷ್ಯ ಬರೆಯುತ್ತೇನೆ. ಇವರಿಗೆ ಅಣ್ಣಾ ಹಜಾರೆ ಬಗ್ಗೆ ಹೆಸರೇಳಲು ಯಾವ ನೈತಿಕ ಹಕ್ಕಿಲ್ಲ. ಅವರಿಗೆ ಧಿಕ್ಕಾರವಿರಲಿ.
ksraghavendranavada, Horanadu
2011-08-27
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥ೦ಭವಾದ ಸಮೂಹ ಮಾಧ್ಯಮಗಳಿಗೆ ಹಿಡಿದಿರುವ ಇತ್ತೀಚಿನ ರೋಗವೆ೦ದರೆ ಪ್ರಸಾರ ಹೆಚ್ಚಿಸಿಕೊಳ್ಳುವುದು ಹಾಗೂ ದುಡ್ಡು ಮಾಡುವುದು. ನಮ್ಮ ಕಡೆ ಇವತ್ತಿಗೂ ಹೆಚ್ಚಿನ್ನ ಸ್ಥಳೀಯ ಮಾಧ್ಯಮಗಳು ಬದುಕುವುದು ಅವರಿವರನ್ನು ಹೆದರಿಸಿ.. “ ಹೆಚ್ಚಿಗೆ ಗಾ೦ಚಾಲಿ ಮಾಡಿದರೆ ಮು೦ದಿನ ಸ೦ಚಿಕೆಯಲ್ಲಿ ನಿನ್ನ ಬಗ್ಗೆನೇ ಬರೆಯುತ್ತೇನೆ“ ಎ೦ದು ಹೆದರಿಸಿ, ಅವರಿ೦ದ ಅಗ್ಗಾಗ್ಗೆ ದುಡ್ಡು ಕೀಳುತ್ತಾ, ತಾವು ಬಾರ್ ನಲ್ಲಿ ಮಜಾ ಮಾಡುವುದು.. ಇನ್ನೇನು?ಪಾಪಿ-ಪರದೇಶಿಗಳು ಹೆದರಿ ದುಡ್ಡು ಕೊಡ್ತಾರೆ.. ಕೊಡದಿದ್ದವರ ಹೆಸರು ಮಾರನೇ ದಿನದ ಪತ್ರಿಕೆಯಲ್ಲಿ.. ಸಮೂಹ ಮಾಧ್ಯಮಗಳಲ್ಲಿರುವವರಲ್ಲಿ ಇರುವ ಭ್ರಷ್ಟಾಚಾರದ ಬಗ್ಗೆ ಹೇಳಲೇ ನಾಚಿಕೆಯಾಗುತ್ತದೆ.. ಇವರನ್ನೆಲ್ಲಾ ಹಿಡಿದು ಜೈಲಿಗೆ ಹಾಕಬೇಕು.. ಮು೦ದೆ೦ದೂ ಯಾವುದೇ ಪತ್ರಿಕೆಗಳಲ್ಲಿ ಕೆಲಸ ಮಾಡದಿರುವ೦ತೆ ಹಾಗೂ ಪತ್ರಿಕೆಗಳನ್ನು ಸ್ವ೦ತವಾಗಿ ನಡೆಸದಿರುವ೦ತೆ ನಿರ್ಬ೦ಧ ಹೇರಬೇಕು.
ಅದಿರಲಿ.ಈ ಪಟ್ಟಿಯಲ್ಲಿರುವ ವಿ.ಭಟ್ ಎ೦ದರೆ ಯಾರೋ? ನನಗೊ೦ದು ಅನುಮಾನ ಬಹು ಪ್ರಸಿಧ್ಧರಾದ ವಿಜಯ ಕರ್ನಾಟಕದ ಮಾಜಿಗಳೋ? ಹೇಗೆ? ಬಲ್ಲವರು ಗೊತ್ತಿದ್ದರೆ ತಿಳಿಸುವ ಕೃಪೆ ಮಾಡಬೇಕು.
Satyaprakash, Bangalore
2011-08-27
ಹೌದು ಸರ್, ಈ ಪತ್ರಕರ್ತರ ರೀತಿನೇ ಸರಿ ಇಲ್ಲಾ. ಆರು ಕಾಸು ಕೊಟ್ರೆ ಅತ್ತೆ ಕಡೆ, ಮೂರು ಕಾಸು ಕೊಟ್ರೆ ಸೊಸೆ ಕಡೆ ಅನ್ನೋ ಗಾದೆ ತರ.
ತಿಮ್ಮಪ್ಪ ಎಂ. ಎಸ್, ಬೆಂಗಳೂರು
2011-08-27
ನೇರ, ಸ್ಪಷ್ಟ, ನಿಖರ ಮಾತು. ಇದಕ್ಕೆ ಸಂಬಂಧಪಟ್ಟಿರುವವರು ಸಹೃದಯಿಗಳಾಗಿದ್ದರೆ ಮನಕ್ಕೆ ಬಿಸಿತಟ್ಟಿ ಮಾರ್ಪಾಡುಮಾಡುವಂತ ಬರವಣಿಗೆ/ನಿರೂಪಣೆ. ಅಭಿನಂದನೆಗಳು. ಒಳ್ಳೆಯ ಕೆಲಸ ಮಾಡಿದ್ದೀರ.
Manjunatha HT, Bangalore
2011-08-27
ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯ ನಿರ್ವಹಿಸಬೇಕಾದ ಪತ್ರಿಕಾ ಮಾಧ್ಯಮರ೦ಗ ಇ೦ದು ಪೀತ ಪತ್ರಕರ್ತರಿ೦ದ ತು೦ಬಿ ತುಳುಕುತ್ತಿದೆ. ನೈತಿಕವಾಗಿ ದಿವಾಳಿಯಾಗಿರುವ ಇ೦ಥ ಮ೦ದಿ ವಸ್ತುನಿಷ್ಠ ವರದಿಗಳನ್ನು ನೀಡುವ ಬದಲು ಕಾಸು ಕೊಟ್ಟವರ ಪರವಾಗಿಯೇ ಬರೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಗಣಿ ಧಣಿಗಳ ಕಾಲು ನೆಕ್ಕಿ ಅಮೇಧ್ಯವನ್ನು ಆಘ್ರಾಣಿಸಿರುವ ಮಹಾನ್ ಪತ್ರಕರ್ತರಿಗೆ ಶಿಕ್ಷೆಯಾಗಲೇಬೇಕು. ತಮ್ಮ ವೃತ್ತಿ ಧರ್ಮಕ್ಕೆ ಮೋಸ ಮಾಡಿದ್ದಲ್ಲದೆ, ಸಮಾಜದ ಕಣ್ಣಿಗೆ ಮಣ್ಣೆರಚುವ ಇ೦ತಹ ಪತ್ರಕರ್ತರನ್ನು ಸಮಾಜದ ಮು೦ದೆ ಬೆತ್ತಲೆಗೊಳಿಸಬೇಕು.
Komal Kumar , Bangalore
2011-08-27
ಬೇಲಿನೇ ಎದ್ದು ಹೊಲ ಮೇಯ್ದ ಹಾಗೆ. ಭ್ರಷ್ಟ ಪತ್ರಕರ್ತರ ವಿರುದ್ದ ತನಿಖೆಯಾಗಬೇಕು. ಇಲ್ಲದೆ ಹೋದರೆ ಇದು ಮುಂದೆ ಮತ್ತಷ್ಟು ಮಾರಕವಾಗುತ್ತದೆ.ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ