ಗುರುವಾರ, ಸೆಪ್ಟೆಂಬರ್ 8, 2011

ಈ ಎಡಬಿಡಂಗಿಗಳೇ ಹಿಂಗೇ!




ನಮ್ಮ ನಿಮ್ಮ ಮಧ್ಯೆಯಿರುವ ಕೆಲ ಎಡಬಿಡಂಗಿ ಗಳು ನಿನ್ನೆ ದೆಹಲಿ ಹೈಕೋರ್ಟ್ ನಲ್ಲಿ ನಡೆದ ಬಾಂಬ್ ಸ್ಪೋಟದ ಕುರಿತು ಒಂದು ಹೇಳಿಕೆ ಕೊಟ್ಟರು. " ಬಿಜೆಪಿಗೆ ಅವಮಾನ ಆಗುವ ಸಂಧರ್ಭ ಗಳಲ್ಲಿ ಬಾಂಬ್ ಸ್ಪೋಟ ನಡೆಯುತ್ತಿದೆ ಹಾಗಾಗಿ ರೆಡ್ಡಿಯ ಬಂಧನದ ಸಂಧರ್ಭ ದಲ್ಲಿ ಈ ಸ್ಪೋಟ ನಡೆದಿರುವುದು ಹಲವಾರು ಉಹಾಪೋಹಗಳಿಗೆ ಎಡೆ ಮಾಡಿಕೊಡುತ್ತಿದೆ. ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ನಡೆಸಿದ ಬಾಂಬ್ ಸ್ಪೋಟಗಳೇ ಇದಕ್ಕೆ ಸಾಕ್ಷಿ. ಅಣ್ಣಾ ಹಜಾರೆ ಮತ್ತು ರೆಡ್ಡಿ ಬಂಧನದ ಅಬ್ಬರ ಗಳಿಗಿಂತ ಹೆಚ್ಚಿನರೀತಿಯಲ್ಲಿ ಬಿಜೆಪಿ ದೇಶ ಭಕ್ತರು ಕಿರುಚಾಟಗಳನ್ನು ಶುರುಮಾಡ್ತಾರೆ ನೋಡ್ತಾಯಿರಿ" ಎಂದು ಎರಡು ಲೈನ್ ಬರೆದು ತಮ್ಮ ಮನಸ್ಸಿನಲ್ಲಿರುವ ಅಸಹ್ಯವನ್ನು ಹೊರಹಾಕಿದರು.


ಸ್ನೇಹಿತರೇ ನಾವು ಗಮನಿಸ ಬೇಕಾದ ಮುಖ್ಯವಾದ ಅಂಶವೆಂದರೆ ಈಗ ನಡೆಯುತ್ತಿರುವುದು ಭಯೋತ್ಪಾದಕರು ಮತ್ತು ಭಾರತ ದೇಶದ ಮಧ್ಯೆ ಯುದ್ದ, ಈ ಯುದ್ದ ದಲ್ಲಿ  ಭಯೋತ್ಪಾದಕರು ವಿಜಯಿಯಾಗುತಿದ್ದಾರೆ. ಈ ಭಯೋತ್ಪಾದನೆ ಕೃತ್ಯಗಳನ್ನ ಯಾವುದೇ ದೇಶ ಸುಮ್ಮನೆ ಸಹಿಸಿ ಕೊಳ್ಳುವುದಿಲ್ಲ. ಹಾಗು ಕೃತ್ಯ ನಡೆಸಿದವರಿಗೆ ಸರಿಯಾದ ಶಿಕ್ಷೆ ಕೊಡುವ ವ್ಯವಸ್ಥೆ ಬೇರೆ ದೇಶಗಳಲ್ಲಿದೆ. ಒಂದು ಸಣ್ಣ ಪ್ರಮಾದ ದಿಂದ ಬೆಂಗಳೂರಿನ ವೈದ್ಯ ಹನೀಫ್ ಆಸ್ಟ್ರೇಲಿಯಾದಲ್ಲಿ ಹೇಗೆ ನರಳಿದ ಎಂದು ನಮಗೆ ಗೊತ್ತಿಲ್ಲವೆ.


ಪಕ್ಷಗಳನ್ನು ಸಮರ್ಥಿಸಿಕೊಂಡು ಜಗಳವಾಡುವ ಸಮಯ ಇದಲ್ಲ. ಸುಮ್ಮನೆ ವಿತಂಡವಾದ ಮಾಡಿ ಎಲ್ಲದಕ್ಕು ಒಂದೊಂದು ಸಂಭಂದ ಕಲ್ಪಿಸಿ ನಿಮ್ಮ ಹೊಲಸನ್ನು ಕಾರಬೇಡಿ. ನಿಮ್ಮ ಭಂಡತನದ ನಿಲುವುಗಳು ಏನೆಂದು ಅಣ್ಣಾ ಹಜಾರೆ ಹೋರಾಟದ ಸಂಧರ್ಭದಲ್ಲಿ ನಮ್ಮ ಭಾರತದ ಎಲ್ಲ ಸತ್ಪ್ರಜೆಗಳಿಗೆ ಗೊತ್ತಾಗಿವೆ.


ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ , ಎಲ್ಟಿಟಿಯಿ, ಎಲ್ ಇ ಟಿ ಅಥವ ಮತ್ತಿನ್ಯಾದೋ ಸಂಘಟನೆ ಇಂತಹ ಕೃತ್ಯ ಯಾರೇ ಮಾಡಿದರು ಸಮರ್ಥನೆ ಅದು ಸರಿಯಲ್ಲ. ಅವರು ಅಂತಹ ಕೃತ್ಯ ಮಾಡಿದ್ದಾರೆಂದು ಸಾಬೀತಾದರೆ ತಕ್ಕ ಶಿಕ್ಷೆ ಆಗಲೇಬೇಕು.


ದಿಲ್ಲಿ ಸ್ಫೋಟ ಪ್ರಕರಣದಲ್ಲಿ, ಗಾಯಗೊಂಡು ರಾಮ ಮನೋಹರ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ನೋಡಲೆಂದು ರಾಹುಲ್ ಗಾಂಧಿ ಮಧ್ಯಾಹ್ನ ಅಲ್ಲಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಡೀ ರಾಹುಲ್ ಗಾಂಧಿ ವಿರೋಧಿ ಘೋಷಣೆಗಳು, ಕಾಂಗ್ರೆಸ್ ವಿರೋಧೀ ಕೂಗಾಟಗಳು ಮತ್ತು ಯುಪಿಎ ವಿರೋಧಿ ಘೋಷಣೆಗಳೇ ಕೇಳಿಬರತೊಡಗಿದ್ದವು. "ರಾಹುಲ್ ಗಾಂಧಿ ವಾಪಸ್ ಜಾವೋ" "ರಾಹುಲ್ ಗಾಂಧಿ ಹೇಡಿ" ಮುಂತಾದ ಘೋಷಣೆಗಳೊಂದಿಗೆ ಯುಪಿಎ ಡೌನ್‌ಡೌನ್, ಕಾಂಗ್ರೆಸ್ ಡೌನ್‌ಡೌನ್ ಎಂಬ ಘೋಷಣೆಗಳೂ ಕೇಳಿಬಂದಿದ್ದವು.




ಈ ರೀತಿ ನಡೆದುಕೊಳ್ಳಿ ಎಂದು ಬಿಜೆಪಿ ಯವರು ಅಥವ ಸಂಘಪರಿವಾದವರು ಸಂತ್ರಸ್ತರಿಗೆ ಮಾರ್ಗ ದರ್ಶನ ಕೊಟ್ಟಿದ್ದರೆ? ಅದು ಅವರು ಅನುಭವಿಸಿದ ಕಷ್ಟ ನಷ್ಟ ನೋವುಗಳ ಆಕ್ರೋಶ ಅವರನ್ನು ಆ ರೀತಿ ನಡೆಸಿತ್ತು. ಈಗ ಅಧಿಕಾರ ಯಾರ ಕೈಯಲ್ಲಿ ಇದೆಯೊ ಅವರನ್ನೆ ಗುರಿ ಮಾಡುತ್ತಾರೆ ವಿನಹ ವಿರೋಧ ಪಕ್ಷದವರನ್ನು ಗುರಿ ಮಾಡಿ ಟೀಕೆ ಮಾಡುವುದಿಲ್ಲ. ಇಂದಿಗೂ ಮಾಜಿ ಪ್ರಧಾನಮಂತ್ರಿ ದಿ.ಇಂದಿರಗಾಂಧಿಯವರನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳುವುದು ದೇಶದ ಒಳಿತಿಗಾಗಿ ಅವರು ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದ. ಅಂತಹ ಗಂಡೆದೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಇಂದಿನವರು ಆಪೇಕ್ಷಿಸುತಿದ್ದಾರೆ ವಿನಹ ಬೇರೇನು ಅಲ್ಲ.


ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ಬಗ್ಗೆ ಮಾತಾಡ್ತಾಯಿರ್ತೀರಲ್ಲ. ಅವರಿಗೂ ಅಷ್ಟೆ, ಪದೇ ಪದೇ ನಡೆದು ಹೋದ ಭಯೋತ್ಪಾದಕ ಕೃತ್ಯಗಳ ಬಗ್ಗೆ ರೋಸಿ ಹೋಗಿ ಕೈಗೊಂಡ ಸ್ವಯಂ ನಿರ್ಧಾರವೇ ಹೊರತು ಯಾವುದೇ ಪಕ್ಷ ಅಥವ ಸಂಘಟನೆ ಈ ರೀತಿ ಮಾಡಿ ಎಂದು ಅವರಿಗೆ ಮಾರ್ಗದರ್ಶನ ನೀಡಿರಲಿಲ್ಲ.


ಪ್ರತಿಯೊಬ್ಬ ಪ್ರಜೆ ತನ್ನ ಮನೆಯ ಪಕ್ಕದ ಅಥವ ಗಲ್ಲಿಯಲ್ಲಿರುವ ಯಾವುದೇ ಧರ್ಮ ಹಾಗೂ ಯಾವುದೇ ಜಾತಿಯ ಜನರನ್ನು ಸ್ನೇಹಿತರಂತೆ ಕಾಣುತ್ತಾನೆ ಹೊರತು ವೈರಿಯಂತೆ ಕಾಣುವುದಿಲ್ಲ.  ಎಲ್ಲರಿಗೂ ಬೇಕಾಗಿರುವುದು ಶಾಂತಿ ನೆಮ್ಮದಿ ಮತ್ತು ದೇಶದ ಪ್ರಜೆಗಳ ರಕ್ಷಣೆ ಹೊರತು ಬೇರೇನಲ್ಲ. ಆದರೆ ಇಂತಹ ಸೌಹಾರ್ದ ಸಂಭಂದಕ್ಕೆ ಧಕ್ಕೆ ತರುವುದು ನಿಮ್ಮಂತ ಎಡಬಿಡಂಗಿ, ಲದ್ದಿಜೀವಿಗಳ ಪ್ರಭಾವಳಿ ಗಳೇ ಕಾರಣ.


ಕನ್ನಡಪ್ರಭ ದಿ. 08.09.2011 ರಲ್ಲಿ ಪ್ರಕಟವಾದ ಒಂದು ವರದಿ. 



4 ಕಾಮೆಂಟ್‌ಗಳು:

  1. ಇಂಥಹ ಅಸಹ್ಯ ಸಣ್ಣತನದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಪ್ರೊ .ಗೋವಿಂದ ರಾಯರಿಗೆ ಸಮಾಜ ಅ "ಚಿಂತಕರು "ಎನ್ನಬಹುದೇ ...?

    ಪ್ರತ್ಯುತ್ತರಅಳಿಸಿ
  2. "half knowledge is full denger" this coat is suitable for those persones like g.k. govindrao and ppr like vish bhat, r.b. and some jarnalist's like x working jarnalist union prez ... and others lostly suvarna chanalls some ಯಡಬಿಡಂಗಿಗಳು's... rite...?

    ಪ್ರತ್ಯುತ್ತರಅಳಿಸಿ
  3. ಅರವತ್ತರ ಅರಳು ಮರಳು ಗೋವಿಂದ ರಾಯರಿಗೆ

    ಪ್ರತ್ಯುತ್ತರಅಳಿಸಿ
  4. ಎಲ್ಲವನ್ನೂ ವಿರೋಧಿಸುವುದೆ ಪ್ರಗತಿಪರತೆ ಎಂಬ ಅಚಲ ನಿರ್ಧಾರ ಅವರದ್ದು. ಅಥವ ಭಾರತೀಯವಾದದ್ದೆಲ್ಲವೂ ತಪ್ಪು ಎಂಬ ಬೆಪ್ಪು.

    ಪ್ರತ್ಯುತ್ತರಅಳಿಸಿ