ಸೋಮವಾರ, ಜೂನ್ 13, 2011

ಕಲಿಯುಗ ಸಾರ್ ಇದು ಕಲಿಯುಗ!




ಮೈಸೂರ್ನಾಗೆ ಕಾಡ್ನಾಗಿಂದ ಆನೆಗಳು ಬಂದಿದ್ವಲ್ಲ ಅವಾಗ ಒಬ್ಬ ಅಮಾಯಕನನ್ನು ಸಾಯಿಸಿತು, 
ಸರ್ಕಾರ ದವರೇನೋ ೫ ಲಕ್ಷ ಅಂತ ಪರಿಹಾರ ಕೊಟ್ರು. ಯಾರು ಅದಕ್ಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ ಆದರೆ ನಮ್ಮ ಮಾಜಿ ಸಿಯಮ್ ಒಂದು ವಿಷಯ ಕಂಡು ಹಿಡಿದುಬಿಟ್ಟರು ಕಣ್ರಪ್ಪ. 


ಅದೇನಂದರೆ ಸತ್ತ ಅವಯ್ಯನ ಹೆಸರು ರೇಣುಕಾ ಪ್ರಸಾದ್ ಸ್ವಾಮಿ ಅಂತ ಅದಕ್ಕೆ, ಯಡ್ಯೂರಪ್ಪ ನವರು ಸತ್ತವರು ತಮ್ಮ ಜಾತಿ ಯವರು ಅಂತ ತಿಳ್ಕೊಂಡು ಅಷ್ಟೊಂದು ಪರಿಹಾರ ಕೊಟ್ಟಾರೆ ಕಣಣ್ಣಾ ಅಂದ್ರು.
ಹೆಸರಿನಾಗೆ ಜಾತಿ ಕಂಡು ಹಿಡಿದು ಜಾತಿ ರಾಜಕೀಯ ಮಾತಾಡ್ತಾವರಲ್ಲ ಶಿವನೇ.
ಏನೋ ಬಿಡಪ್ಪ, ಸಕಲಕಲಾವಲ್ಲಭರು ನೀವು, ಎಂಗೆಂಗೋ ರಾಜಕೀಯ ಮಾಡ್ತೀರಾ. ಏನು ಬೇಕಾದರು ಹೇಳ್ತೀರ ಹಂಗೆ ಅದನ್ನು ದಕ್ಕಿಸಿಕೊಳ್ತೀರಾ. ದೊಡ್ಡವರಪ್ಪ ನೀವು.
*******
-ಸಂಪುಟ ಸಭೆ ಟೂರಿಂಗ್ ಟಾಕೀಸಾ?: ಎಚ್ಡಿಕೆ
ಬಿಜೆಪಿ ಸರ್ಕಾರದ ಹೊಸ ಪರಿಕಲ್ಪನೆ‘ರಾಜ್ಯ ಸಂಪುಟದ ಗ್ರಾಮಸಭೆ’ಯನ್ನು ಮಾಜಿ ಸಿ‌ಎಂ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಸಚಿವ ಸಂಪುಟಸಭೆಯೇನು ಟೂರಿಂಗ್ ಟಾಕೀಸಾ ಎಂದು ಪ್ರಶ್ನಿಸಿದ್ದಾರೆ.
ಹಾಗಿದ್ರೆ "ಗ್ರಾಮ ವಾಸ್ತವ್ಯ" ಒಂದು ಸಿನಿಮಾನ ಸಾರ್?
ಮತ್ತೆ ಜನ ಹಿಂಗೆ ಹೇಳ್ತಾ ಯಿದ್ರು!!!
ಇನ್ನು ಈ ಕನ್ನಡದ ಕಂದ ಕುಮಾರಸ್ವಾಮಿ ಮಾಡಿದ್ದಾದರೂ ಏನು? ನಮ್ಮ ಹಳ್ಳಿ ಕಡೆಯ ಸೋಮಾರಿಗಳು ಆಗಾಗ್ಗೆ ನೆಂಟರ ಮನೆಗೆ ಹೋಗಿ ಕಾಲಕ್ಷೇಪ ಹಾಕುವಂತೆಯೇ ಅವರು ಗ್ರಾಮವಾಸ್ತವ್ಯ ಹಾಕಿದ್ದು. ಆಯಾ ಊರಿನ ತಮ್ಮ ತಮ್ಮ ಪಕ್ಷದ ಸ್ಥಿತಿವಂತರುಗಳ ಮನೆಗಳಲ್ಲಿ ಗಡದ್ದಾಗಿ ಬಾಡೂಟ ಉಂಡು, ವೇಳೆ ಮೀರಿದ ಸಮಯಕ್ಕೆ ವಾಸ್ತವ್ಯದ ಮನೆಗಳಿಗೆ ತೆರಳಿ ಇನ್ನೊಮ್ಮೆ ಉಂಡ ಶಾಸ್ತ್ರ ಮಾಡಿ ಮಲಗುತ್ತಿದ್ದುದೇ ಅವರ ಗ್ರಾಮವಾಸ್ತವ್ಯವಾಗಿತ್ತು. ವ್ಯತ್ಯಾಸವೆಂದರೆ ಸಿನಿಮಾ ನಿರ್ಮಾಪಕರಾದ ಇವರು ಮುದಿ ರಾಜಕಾರಣಿಗಳು ಮಾಡುತ್ತಿದ್ದುದ್ದನ್ನೇ ಕಾಪಿ ಮಾಡಿ, ಅದಕ್ಕೊಂದು "ಗ್ರಾಮವಾಸ್ತವ್ಯ" ಎಂಬ ಟೈಟಲ್ ಕೊಟ್ಟು, ಅಗತ್ಯ ಕನ್ನಡ ಸಿನಿಮಾ ಫಾರ್ಮುಲಾಗಳನ್ನೆಲ್ಲಾ ಸೇರಿಸಿ ಬಾಕ್ಸಾಫೀಸಿನಲ್ಲಿ ದಾಖಲಾಗುವಂತೆ ಮಾಡಿದ್ದು ಬಿಟ್ಟರೆ ಈ "ಗ್ರಾಮವಾಸ್ತವ್ಯ" ಬಡ ಬೋರೇಗೌಡನ ನಾಲ್ಕಾಣೆ ಕನಸುಗಳನ್ನೂ ವಾಸ್ತವವಾಗಿಸಿಲ್ಲ!


:-) :-) :-)
*******
ಎಮ್.ಎಫ್.ಹುಸೇನ್ ಸತ್ತೋದ್ರಲ್ಲ, ಆಗ ಬಹಳ ಜನ ಏನೇನೋ ಬರೆದ್ರು ಕಣ್ರಿ. 


ಒಬ್ಬರು ಬರೀತಾರೆ "ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಕಳೆದುಕೊಂಡ ಅಮೂಲ್ಯ ರತ್ನ ಎಂ.ಎಫ್. ಹುಸೇನ್. ಕಲೆಯನ್ನೇ ತನ್ನ ಉಸಿರಾಗಿಸಿಕೊಂಡು ಅಲೆದಾಡಿದ ಬರಿಗಾಲಿನ ಕಲಾವಿದ ಹುಸೇನ್ ಇನ್ಲಿಲ್ಲ ಎಂದರೆ ಭಾರತದ ಕಲಾ ಪ್ರಪಂಚದಲ್ಲಿ ಒಂದು ಶೂನ್ಯ ಸೃಷ್ಟಿಯಾಗಿದೆ ಎಂದೇ ಭಾವಿಸಬಹುದು. ಹುಸೇನ್ ಕಲೆಯ ಮಾಂತ್ರಿಕ. ಕುಂಚ ಪ್ರಪಂಚದ ಸಾಮ್ರಾಟ. ತಮ್ಮ ಕ್ಯಾನ್ವಾಸಿನ ಮೇಲೆ ಕುಂಚದಿಂದ ಚಿತ್ರಗಳನ್ನು ಬಿಡಿಸುವ ಮಟ್ಟಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಚಿತ್ರಕಲೆಯಲ್ಲಿ ಪ್ರಯೋಗಶೀಲತೆಗೆ ಒಂದು ವಿಭಿನ್ನ, ನವೀನ, ಅಂತಾರಾಷ್ಟ್ರೀಯ, ಅತೀತ ಆಯಾಮವನ್ನು ನೀಡಿದ ಧೀಮಂತ ವ್ಯಕ್ತಿತ್ವ."
ಇತ್ತೀಚಿಗೆ ಕೆಲ ಸ್ನೇಹಿತರು ಮಾತಾಡ್ತಾಯಿದ್ರು, ನಾವು ಒಂದು ಹೊಸ ಪ್ರಯೋಗ ಶೀಲತೆ ಮಾಡ್ತೀವಿ ಅಂದ್ರು. ಏನಪ್ಪ ಅಂತ ಕೇಳಿದ್ರೆ, ಎಮ್.ಎಫ್. ಹುಸೇನ್ ನನ್ನು ಯಾರ್ಯಾರು ಸಮರ್ಥನೆ ಮಾಡ್ಕೊತಾರೊ ಅವರ ಮನೆಯ ಹೆಂಗಸರ ನಗ್ನ ಚಿತ್ರ ವನ್ನು ಕುಂಚದಲ್ಲಿ ನವೀನ ವಾಗಿ ಚಿತ್ರಿಸ್ತೀವಿ. ಪ್ರತಿಯೊಂದು ಆಯಾಮವನ್ನು ಚೆನ್ನಾಗಿ ಬರೆದು ಸುಂದರವಾಗಿ ತೋರಿಸ್ತೀವಿ ಅಂತ ಅಂದ್ರು. 
ಅದೇಂಗಾಗ್ತದೆ, ಅದು ಸರಿಯಲ್ಲಯ್ಯ ಅಂತ ನಾನು ಹೇಳ್ದೆ, 
ಅದಕ್ಕೆ ಅವರು ಹುಸೇನ್ ಬೇಕಾದರೆ ಬರೀಬಹುದಾ?
ಅವರು ಯಾವ ಹೆಣ್ಣಿನ ಚಿತ್ರವನ್ನು ಅವರು ಅಸಹ್ಯವಾಗಿ ಬರೆದಿಲ್ರಯ್ಯ
ನಮ್ಮ ಹಿಂದು ದೇವತೆಗಳು ಮತ್ತೆ ಭಾರತ ಮಾತೆ ಚಿತ್ರಗಳನ್ನು ನಗ್ನವಾಗಿ ಬರೆದದ್ದು ಅಶ್ಲೀಲ ಅಲ್ಲವೆ.


ನೋಡ್ರಪ್ಪ ದೇವರು ನಮ್ಮ ಕಲ್ಪನೆ, ದೇವರು ಹಿಂಗಿದಾರೆ ಭಾರತ ಮಾತೆ ಹಿಂಗೇ ಇದಾರೆ ಅಂತ ಯಾರಿಗು ಗೊತ್ತಿಲ್ಲ.
ಹಾಗಿದ್ರೆ ಬೇರೆ ಧರ್ಮದ ದೇವರುಗಳನ್ನು ಬರೀಬೇಕಾಗಿತ್ತು
ಅವರಿಗೆ ಏನು ಇಷ್ಟನೋ ಅದನ್ನು ಬರೀತಾರೆ ಕಣ್ರಪ್ಪ, ಅದನ್ನೆಲ್ಲ ಪ್ರಶ್ನೆ ಮಾಡಬಾರದು. 
ಹಾಗಿದ್ರೆ ಇದು ಸಹ ನಮ್ಮಿಷ್ಟ, ಅವರ ಮನೆ ಹೆಂಗಸರನ್ನು ಸಹ ಸೂಪರ್ರಾಗಿ ಚಿತ್ರ ಬರೆದು ತೋರಿಸ್ತೀವಿ. ಅದು ನಮ್ಮ ಕಲೆಯಲ್ಲಿ ಸೂಸುವ ಅಧ್ಬುತ ಕಲ್ಪನೆಗಳು. ಅಲ್ಲ ಗುರುವೇ ಅವಯ್ಯ ಬರೆದ ಚಿತ್ರಗಳನ್ನು ಮಕ್ಕಳು ಮತ್ತು ಹೆಂಗಸರ ಮುಂದೆ ತೋರಿಸಿದ್ರೆ ಏನು ತಿಳ್ಕಂತಾರೆ ಅಂತ ಪರಿಜ್ನಾನ ಬೇಡ್ವಾ. ಅವರ ಧರ್ಮದಲ್ಲಿ ತಲೆಯಿಂದ ಕಾಲು ವರೆಗೆ ಮುಚ್ಚಿಕೊಂಡಿರೋ ಬುರ್ಕಾ ಹಾಕಿರ್ತಾರೆ. ಅರಬ್ ದೇಶಗಳಲ್ಲಿ ಅಶ್ಲೀಲ ಚಿತ್ರಗಳನ್ನು ಬ್ಯಾನ್ ಮಾಡಿದ್ದಾರೆ. ಇಂಟರ್ನೆಟ್ ನಲ್ಲಿ ಹುಡುಕಿದರೆ ಸಹ ಸಿಗಲ್ಲ. ಅವರ ಹೆಂಗಸರನ್ನು ಕಣ್ಣೆತ್ತಿ ನೋಡೋತರಹ ಇಲ್ಲ. ನಮ್ಮ ಹಿಂದಿ ಸಿನಿಮಾದಲ್ಲಿ ಬರುವ ಕೆಲ ಅಶ್ಲೀಲ ದೃಶ್ಯಗಳನ್ನು ಸೆನ್ಸಾರ್ ಮಾಡಿ ಟಿವಿನಲ್ಲಿ ತೋರಿಸ್ತಾರೆ. ಅಷ್ಟೊಂಡು ಕಟ್ಟುನಿಟ್ಟು ಇರಬೇಕಾದರೆ, ಈ ಮನುಷ್ಯ ನಿಗೆ ನಮ್ಮ ದೇವರು ಗಳು ಹಾಗು ಭಾರತ ಮಾತೆ ಚಿತ್ರ ವನ್ನು ನಗ್ನ ವಾಗಿ ತೋರಿಸಿ ಚಿತ್ರ ಬರಿಬೇಕಾಗಿತ್ತ. ಅವನನ್ನು ಸಮರ್ಥಿಸಿ ನಮ್ಮ ಜನ ಮಾತಾಡ್ತಾರಲ್ಲ ಮೊದಲು ಅವರನ್ನು .......
ಶ್!...... ಜೈ ಹೋ.
:-)



1 ಕಾಮೆಂಟ್‌:

  1. ಕಲಿಯುಗ ಸಾರ್ ಇದು ಕಲಿಯುಗ !

    ಯಾಕೆಂದರೆ

    ಹೀಗೊಬ್ಬ ಕನ್ನಡ ವಿರೋಧಿಯ ಕಥೆ!...

    ಕನ್ನಡ ಕಲಿಯಬೇಕೆ೦ಬ ಲೇಖನವೊ೦ದು ಫೇಸ್ ಬುಕ್ಕಿನಲ್ಲಿ ಅವನ ಕಣ್ಣಿಗೆ ಬಿದ್ದಿತು. ಅದಕ್ಕೆ ಅವನು ರಾಜಾರೋಷವಾಗಿ ಆ೦ಗ್ಲ ಭಾಷೆಯಲ್ಲಿ 'FUCK OFF' ಎ೦ದು ಉತ್ತರಿಸಿದ. ತನ್ಮೂಲಕ ತಾನು ಯಾವುದೇ ಕಾರಣಕ್ಕೂ ಕನ್ನಡ ಕಲಿಯುವುದಿಲ್ಲವೆ೦ದು ಘೋಷಿಸಿದ. ಆ ಕೀಳುಮಟ್ಟದ ಪ್ರತಿಕ್ರಿಯೆಯನ್ನು ತೆಗೆದು ಹಾಕುವ೦ತೆ ಎಷ್ಟೇ ಒತ್ತಾಯಿಸಿದರೂ ಮೂರು ದಿನಗಳ ಕಾಲ ಅದನ್ನು ತೆಗೆಯದೆ "ಹೀರೋ" ಥರಾ ಫೋಸು ಕೊಡುತ್ತಾ ಮೆರೆದ.

    http://www.gulfkannadiga.com/news-44725.html


    ಕರ್ನಾಟಕದ ರಾಜಧಾನಿ ನಗರದ ಕನ್ನಡ ಪತ್ರಿಕೆಗಳಿಗೆ ಇದು ಸುದ್ದಿಯೇ ಅಲ್ಲ.!

    ಪ್ರತ್ಯುತ್ತರಅಳಿಸಿ