ಶಾಂತಿಯುತ ವಾಗಿ ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು ಅಲ್ಲ ಅಂತ ಇಂದು ಸಾಬೀತಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತಿದ್ದ ಬಾಬಾ ರಾಮ್ ದೇವ್ ಅವರನ್ನು ಮಧ್ಯರಾತ್ರಿ ೨:೩೦ ಕ್ಕೆ ಬಂಧಿಸುವ ಅಗತ್ಯವೇನಿತ್ತು? ಇದಕ್ಕೆ ನಮ್ಮ ಬುದ್ದಿವಂತ(ಸಂಪಾ.....) ಜನರು ಏನು ಹೇಳ್ತಾರೋ ಎಂದು ಕಾದು ನೋಡಬೇಕು.
ಒಂದು ವೇಳೆ ಈ ಘಟನೆ ಬಿಜೇಪಿ ಆಡಳಿತ ವಿರುವ ನಮ್ಮ ರಾಜ್ಯದಲ್ಲಿ ರಾಮ್ ದೇವ ಬಾಬ ರ ಬದಲಿಗೆ ಬೇರೊಬ್ಬ ಜಾತ್ಯಾತೀತ ಮುಖಂಡರು ಪ್ರತಿಭಟನೆ ಮಾಡಿದಾಗ ಅವರ ಬಂಧನವಾಗಿದ್ದರೆ ಈ ನಮ್ಮ ಸೋ ಕಾಲ್ಡ್ ಜನರು ಊರೂ ಕೇರಿ ಎಲ್ಲ ಒಂದು ಮಾಡುತ್ತಿರಲಿಲ್ವಾ. ಹಿಂದೆ ನಡೆದ ಘಟನೆ ಗಳನ್ನು ನೆನೆಸಿಕೊಂಡರೆ ನಮಗೆ ಹೀಗೆ ಅನಿಸುವುದರಲ್ಲಿ ತಪ್ಪಿಲ್ಲ ಅಲ್ವಾ.
ಮಾನ್ಯ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಹೇಳ್ತಾಯಿದಾರೆ "ಅವರು ರಾಮ್ ಲೀಲಾ ಮೈದಾನ ದಲ್ಲಿ ಯೋಗ ಶಿಕ್ಷಣ ನೀಡುವುದಕ್ಕೆ ಅನುಮತಿ ಪಡೆದಿದ್ದರು, ಆದರೆ ಅವರು ರಾಜಕೀಯ ಚಳುವಳಿ ಮಾಡಿದ್ದಾರೆ. ನೀತಿ ನಿಯಮ ಉಲ್ಲಂಘನೆ ಯಾಗಿರುವುದರಿಂದ ಬಂಧನವಾಗಿದೆ" ಅಂತ ಸಮಜಾಯಿಷಿ ನೀಡಿದರು.
ಅಲ್ಲ ಸಾರ್, ಬಾಬಾ ಅವರು ಸತ್ಯಾಗ್ರಹ ಮಾಡ್ತಿನಿ ಅಂತ ಗೋಷಣೆ ಮಾಡಿ ದಿನಗಳೆ ಉರುಳಿದವು, ಮಾಧ್ಯಮದಲ್ಲಿ ಬಹುವಾಗಿ ಪ್ರಚಾರ ವಾಯಿತು, ಹಾಗು ನಿಮ್ಮ ಕೇಂದ್ರ ಸರ್ಕಾರ ಸತ್ಯಾಗ್ರಹ ನಿಲ್ಲಿಸೋದಿಕ್ಕೆ ಎಷ್ಟೆಲ್ಲಾ ಪ್ರಯತ್ನ ಮಾಡಿದ್ರಿ, ಸಂಧಾನಕ್ಕೆ ನೀವು ಬಂದಿದ್ರಿ. ಆಗೆಲ್ಲ ನಿಮಗೆ ಕಾನೂನಿನ ಅರಿವು ಇರಲಿಲ್ವೆ. ಒಟ್ಟಿನಲ್ಲಿ ಸತ್ಯಾಗ್ರಹ ನಿಲ್ಲಿಸೋಕೆ ನಿಮಗೊಂದು ಪಿಳ್ಳೆನೆವ ಬೇಕಾಗಿತ್ತು ಅಲ್ವಾ?
ಈ ಆಂದೋಲನಕ್ಕೆ ಸತತ ವಾಗಿ ಕೋಮು ಬಣ್ಣ ಹಚ್ಚಲು ವ್ಯವಸ್ಥಿತ ರೀತಿಯಲ್ಲಿ ಮೊದಲಿನಿಂದಲೂ ಪಿತೂರಿ ನಡೆದೇಯಿತ್ತು. ಇಂಗ್ಲೀಶ್ ಟಿವಿ ಮಾದ್ಯಮ ಗಳಿಂದ ಶುರುವಾಗಿ ಕೊನೆಗೆ ನಮ್ಮ ಕನ್ನಡ ಕೆಲ ಬ್ಲಾಗ್ ಗಳವರೆಗೆ ಇದೇ ಕೆಲಸ ಆಯಿತು.
ಇನ್ಮುಂದೆ ಇಂತಹ ಕೆಲಸಗಳಿಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಅಥವ ಜಾತ್ಯಾತೀತ ವ್ಯಕ್ತಿ ಗಳಿಂದ ಚಾಲನೆ ದೊರೆತರೆ ಈ ನಮ್ಮೆಲ್ಲ ಮಿತ್ರರಿಗೆ ಹಾಲು ಕುಡಿದಷ್ಟು ಸಂತೋಷವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದು ಭಾರತ ದೇಶ... ಕ್ಷಮಿಸಿ ಇದು ಇಂಡಿಯಾ ಇಲ್ಲಿ ಏನು ಬೇಕಾದರು ಆಗಬಹುದು ಏನು ಬೇಕಾದರು ನಡೆಯಬಹುದು.
ಮೇರಾ ಇಂಡಿಯಾ ಮಹಾನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ