ಸೋಮವಾರ, ಜೂನ್ 6, 2011

ಗುಜರಿ ಅಂಗಡಿಯ ಬಿ.ಎಮ್. ಬಷೀರ್ ರವರ ಪ್ರತಿಕ್ರಿಯೆ


ಸಂಪಾದಕೀಯದಲ್ಲಿ  ಗುಜರಿ ಅಂಗಡಿಯ ಬಿ.ಎಮ್. ಬಷೀರ್ ರವರಿಂದ ಈ ಕೆಳಗಿನ ಪ್ರತಿಕ್ರಿಯೆ


೦***********೦
ರಾಮದೇವ್ ಕಪ್ಪು ಹಣದ ವಿರುದ್ಧ ಸತ್ಯಾಗ್ರಹಕ್ಕಿಳಿದಿರೂದರ ಸ್ಪೂರ್ತಿಯಿಂದ ಇನ್ನೂ ಕೆಲವರು ಸತ್ಯಗ್ರಹಕ್ಕಿಳಿದಿದ್ದಾರೆ.
ಮುಖ್ಯವಾಗಿ ಲಿಕ್ಕರ್ ವಿರುದ್ಧ ಮಲ್ಯ ಚಳುವಳಿ ನಡೆಸಲಿದ್ದಾರೆ.
ರೈತರ ಪರವಾಗಿ ಖೇಣಿ ಸತ್ಯಾಗ್ರಹ ನಡೆಸುತ್ತಾರಂತೆ.
ಮುಂಬೈ ಸ್ಫೋಟದ ವಿರುದ್ಧ ದಾವೂದ್ ಇಬ್ರಾಹಿಂ ಅಮರಣಾಂತ ಸತ್ಯಾಗ್ರಹ ಮಾಡುತ್ತಾರಂತೆ.
ದಲಿತರ ಹಕ್ಕಿನ ಪರವಾಗಿ ಪೇಜಾವರ ಶ್ರೀ ಸತ್ಯಾಗ್ರಹ ನಡೆಸುತ್ತಾರಂತೆ.
ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ನರೇಂದ್ರ ಮೋದಿ ಸತ್ಯಾಗ್ರಹ ಮಾಡುತ್ತಾರಂತೆ.
ನಕಲಿ ನೋಟುಗಳ ತಯಾರಿ ವಿರುದ್ಧ ತೆಲಗಿ ಸತ್ಯಾಗ್ರಹ ಮಾಡುತ್ತಾರಂತೆ.
ಬನ್ನಿ ಅವರ ಒಳ್ಳೆಯ ಕಾರ್ಯವನ್ನು ಬೆಂಬಲಿಸೋಣ. ಚಳುವಳಿ ಮಾಡುವವರು ಯಾರಾದರೇನು, ಅವರ ಉದ್ದೇಶ ಒಳ್ಳೆಯದೇ ಅಲ್ಲವೇ?
B.M.Basheer
June 6, 2011 3:24 PM
೦***********೦
ಹ್ಮ್! ಏನು ಹೇಳಬೇಕು ಅಂತಾನೆ ಗೊತ್ತಾಗ್ತಯಿಲ್ಲ. ಮನಸ್ಸಿಗೆ ಬೇಜಾರಾಗ್ತಾಯಿದೆ.
ಪ್ರತಿಯೊಬ್ಬರ ಬಣ್ಣ ಈಗ ಕಳಚಿಬೀಳ್ತಾಯಿದೆ.
ಅವರಿಂದ ಇಂತಹ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ.
ಅವರ ಮನದೊಳಗಿನ ಆಕ್ರೋಶ, ಕಿಚ್ಚು ಮತ್ತು ದ್ವೇಶವನ್ನು ಇಂದು ಹೊರಗಡೆ ಹಾಕಿದ್ದಾರೆ ಅನ್ನುವದಕ್ಕಿಂತ ನಂಜನ್ನು ಕಾರಿದ್ದಾರೆ ಅಂತ ಹೇಳುವುದು ಸೂಕ್ತ.


ಗುಜರಿ ಅಂಗಡಿ ಬ್ಲಾಗ್ ನಲ್ಲಿ ಒಳ್ಳೋಳ್ಳೆಯ ಕಥೆಗಳನ್ನು ಅವರು ಬರೆದಿದ್ದಾರೆ, ನಾವು ಓದಿ ಮೆಚ್ಚಿ ಮತ್ತು ಬೇರೆಯವರಿಗೆ ಸಹ ತಿಳಿಸಿ ಖುಶಿ ಪಟ್ಟಿದ್ದೇವೆ. ಅವರಲ್ಲಿರುವ ಬರಹಗಾರನಿಗೆ ನಮ್ಮ ನೂರೆಂಟು ಸಲಾಮ್ ಗಳು. ಅವರ ಲೇಖನ, ಕಥೆ ಮತ್ತು ಬ್ಲಾಗ್ ಗಳಲ್ಲಿ ಬ್ಯಾರಿ, ಮದರಸ, ಮಸೀದಿ, ಅಲ್ಲಾ ಎನ್ನುವ ಪದಗಳು ನುಸುಳಿದರು ಸಹ ಅನ್ಯಥಾ ಭಾವಿಸದೆ ಅವು ನಮ್ಮವೆ ಎಂದು ಮನಪೂರ್ವಕ ವಾಗಿ ಸ್ವೀಕರಿಸಿ ಹರ್ಷಿಸಿದ್ದೇವೆ. 
ಅಂತಹುದರಲ್ಲಿ ಇವರಂತಹ ಪ್ರಗತಿಪರ ವಿಚಾರವಾದಿ ಲೇಖಕರು ಸಹ ಗುಂಪಿನೊಳಗೆ ಗೋವಿಂದ ಅನ್ನುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂದರೆ ನಮಗೆ ಬಹು ಆಶ್ಚರ್ಯ ವಾಗುತ್ತದೆ.
ಎಲ್ಲ ಅಲ್ಪಸಂಖ್ಯಾತರ ಮನೋಭಾವ ಒಂದೇ ಅವರ ಎಲ್ಲ ಗುಣ ಸ್ವಭಾವ ಗಳು ಒಂದೇ ಅಂತ ನಾವು ಭಾವಿಸಬೇಕಾಗುತ್ತದೆಯೆ? , ಇಂದು ಇಂತಹ ಪ್ರತಿಕ್ರಿಯೆ ಸಂಪಾದಕೀಯದಲ್ಲಿ ಹಾಕಿದ್ದಾರೆ, 
ಮುಂದೊಂದು ದಿನ ತಮ್ಮಲ್ಲಿರುವ ಆವೇಶವನ್ನು ಬೇರೆ ಅನಾಹುತಕಾರಿ ಕೆಲಸಮಾಡಲು ಹೇಸುವುದಿಲ್ಲ ಅಂತ ಏನು ಗ್ಯಾರಂಟಿ. 
ಒಟ್ಟಿನಲ್ಲಿ ಕೇಸರಿ ಪಡೆಯನ್ನು ಖಂಡಿಸಬೇಕು ಹಾಗು ಅವರನ್ನು ಸಾಧ್ಯವಾದಕಡೆ ಎಲ್ಲಾ ಬಗ್ಗು ಬಡಿಯಬೇಕು. ಇದು ಅವರ ಘೋಷ ವಾಕ್ಯವಾಗಿದೆ.
ರಾಮದೇವ ಬಾಬಾರವರು ಮಾಡಬಾರದಂತಹ ತಪ್ಪನ್ನು ಏನಾದರು ಮಾಡಿದ್ದಾರೆಯೆ? ಅಧಿಕಾರವನ್ನೇನಾದರು ಅನುಭವಿಸಿ ಅಕ್ರಮ ವಾಗಿ ಹಣವನ್ನೇನಾದರು ಸಂಪಾದಿಸಿದ್ದಾರೆಯೆ? ಭಯೋತ್ಪಾದಕ ಕೆಲಸಗಳಲ್ಲೇನದರು ಕೈ ಹಾಕಿದ್ದಾರೆಯೆ?  ಯಾವತರಹ ಘೋರ ಗಂಬೀರ ಆಪಾದನೆಗಳಿವೆ? ಯಾವುದೇ ರೀತಿಯ ಸಾಬೀತಾಗದ, ಪೊಳ್ಳು ಆಪಾದನೆಗಳೆ ಅವರ ಮೇಲಿದೆಯೇ ಹೊರತು ಬೇರೆ ಎಂತಹ ಗಂಭೀರ ಆಪಾದನೆ ಇಲ್ಲ. ಕೇಸರಿ ಪಡೆ ಬೆಂಬಲಕ್ಕೆ ನಿಂತಿದೆ ಜತೆಗೆ ಅವರೊಬ್ಬ ಹಿಂದೂ ಎನ್ನುವ ಕಾರಣಕ್ಕೆ ಅವರನ್ನು ಟೀಕಿಸುತಿದ್ದೀರಲ್ಲಾ ಏನು ಹೇಳಬೇಕು ಸಾರ್ ನಿಮಗೆ
ಅದೆಲ್ಲ ಸರಿ, ಕಳೆದ ಬಾರಿ ರಾಜ್ಯದ ಚುನಾವಣಾ ಸಂಧರ್ಭ ದಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಯನ್ನು ಬೆಂಬಲಿಸಿದ ಹಿರಿಯ ಪತ್ರಕರ್ತ ಮಾನ್ಯ ರವಿಬೆಳಗೆರೆ ಯವರ ಬಗ್ಗೆ ನಿಮ್ಮ ಅಭಿಪ್ರಾಯ ವೇನು ಸಾರ್? ಚಲಂ ಮತ್ತು ಯಮುನಕ್ಕ ಒಂದೇ ವೇದಿಕೆ ಮೇಲೆ ಅಂತ ಬ್ಲಾಗ್ ಬರೆದಿರಿ. ಆಗ ನಿಮಗೆ ವೈಚಾರಿಕ ನೆಲೆಗಟ್ಟಿನ ಭಿನ್ನಭಿಪ್ರಾಯ ನಿಮಗೆ ಅಡ್ಡ ಬರಲಿಲ್ಲವೆ.
ಏರುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಗಳಿಗೆ ಕಡಿವಾಣ ಹಾಕದ ಕೇಂದ್ರ ಸರ್ಕಾರ ಜತೆಯಲ್ಲಿ ಒಂದರ ಹಿಂದೆ ಒಂದು ಹಗರಣಗಳು. ಇಂತಹ ಪರಿಸ್ಥಿತಿಯಲ್ಲಿ ಈ ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳದೆ ಇದ್ದರೆ ಇನ್ಯಾರು ಬಂದು ಕಾಪಾಡುತ್ತಾರೆ ಸ್ವಾಮಿ.
ನಿಮ್ಮಂತ ವಿಚಾರವಾದಿಗಳು ಏನಾದರು ಇಂತಹ ಹೋರಾಟ ಮಾಡಿದ್ದರೆ ಅಥವ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಮ್ ರವರು ಒಂದು ವೇಳೆ ಇಂತಹ ಚಳುವಳಿಗೆ ಕೈ ಹಾಕಿದ್ದರೆ ಖಂಡಿತ ನಾವು ಜಾತಿ ಧರ್ಮ ನೋಡದೆ ಬೆಂಬಲಿಸುತಿದ್ದಿವಿ. ಏಕೆಂದರೆ ನಮ್ಮ ಮನಸ್ಸು ಗಳು ವಿಶಾಲವಾಗಿವೆ. ಸಂಕುಚಿತವಾಗಿಲ್ಲ. ಕೊನೆ ಪಕ್ಷ ಎ.ಆರ್.ರೆಹಮಾನ್ ಮುಂದಾಳತ್ವ ವಹಿಸಿಕೊಂಡರು ನಮ್ಮ ಬೆಂಬಲವಿದೆ ಸಾರ್.

3 ಕಾಮೆಂಟ್‌ಗಳು:

  1. ಇದುವರೆಗೆ ಲೆಕ್ಕವಿಲ್ಲದಷ್ಟು ಹೋರಾಗಳು ನವೆದಿವೆ ಮತ್ತು ನವೆಯುತ್ತಿವೆ. ಹೋರಾಟದಿಂದ ಸಾಧಿಸಿರುವುದು ಮಾತ್ರ ಶೂನ್ಯ. ತಮ್ಮ ವ್ಯಕ್ತಿತ್ವವನ್ನು ಹಲವಾರು ದ್ರುಷ್ಟಿ ಕೋನಗಳ ಮುಖಾಂತರ ಬಿಂಬಿಸಿಕೊಂಡು ತಮ್ಮ ವರ್ಚಸ್ಸನ್ನು ಹಿಗ್ಗಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವೇ ಈ ಹೋರಾಟ.

    ಪ್ರತ್ಯುತ್ತರಅಳಿಸಿ
  2. ಅನಾಮಧೇಯರೇ ತಮಗೆ ಧನ್ಯವಾದಗಳು. ಸ್ವಲ್ಪ ಆಶಾವಾದಿಯಾಗಿ ಯೋಚಿಸಿ. ಇಂದಲ್ಲ ನಾಳೆ ಈ ಹೋರಾಟಗಳಿಂದ ಲಾಭವಾಗುವಂತದ್ದೇ. ಬ್ರೀಟೀಷರ ವಿರುದ್ದ ನೂರಾರು ವರ್ಷಗಳ ಕಾಲ ಹೋರಾಟ ಮಾಡಿದ್ದರ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತಿದ್ದೇವೆ. ಅಂದು ಜೇ.ಪಿ ಹೋರಾಟ ಮಾಡಿದ್ದರ ಫಲವಾಗಿ ಬದಲಾವಣೆಯ ಶಕೆ ಆರಂಭವಾಗಿದ್ದು. ವೈಯುಕ್ತಿಕವಾಗಿ ಪ್ರಚಾರದಿಂದ ಬಾಬಾ ರವರಿಗೆ ಆಗಬೇಕಾದದ್ದು ಏನು ಇಲ್ಲ. ಅದೆಲ್ಲ ಏನು ಮಾಡಿದರು ನಮ್ಮಂಥ ಜನಸಾಮನ್ಯರಿಗಾಗಿ ಮಾತ್ರ.
    ಶುಭವಾಗಲಿ ತಮಗೆ.

    ಪ್ರತ್ಯುತ್ತರಅಳಿಸಿ
  3. ಸ್ವಾಮಿ ಪ್ರಜಾಪ್ರಭುತ್ವ ಆಶಾವಾದಿಯಾಗಬೇಕಾದುದು ಅಗತ್ಯವೇ ಸರಿ. ಆದರೆ ಬ್ರಿಟಿಷರ ವಿರುದ್ಧ ಹೋರಾಡಲು ಅವರು ಹೊರಗಿನವರಾಗಿದ್ದರು. ಹಾಗಾಗಿ ಅದಕ್ಕೆ ಜನಬೆಂಬಲ ಸಿಕ್ಕಿತ್ತು. ಆದರೆ ಈಗ ಎಲ್ಲರೂ ಭಾರತೀಯರೇ. ಆದ್ದರಿಂದ ಅನಾಮಧೇಯರ ನಿರಾಶೆಗೆ ಕಾರಣವಿದೆ. ಇದಕ್ಕೆ ಬೇರೆ ಉದಾಹರಣೆ ಬೇಡ ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿಗಿಂತ ಬೇರೆ ನಿರಾಶಾದಾಯಕ ಸ್ಥಿತಿ ಇಲ್ಲ. ಮೊನ್ನೆ ಏನೋ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ ಅಲ್ಲಿಗೆ ಬಂದಿದ್ದ ತಮಿಳು ಮಹಿಳೆಯೋರ್ವಳು, ಅಂಗಡಿಯವನು ಸೇಟು (ಹಿಂದಿ ಅಥವಾ ಉತ್ತರದ ಭಾಷಿಕರು) ಆಗಿದ್ದರೂ ಕನ್ನಡದಲ್ಲಿ ಪ್ರತಿಕ್ರಿಯಿಸಿದರೂ ತಾನು ಮಾತ್ರ ಅಪ್ಪಟ ತಮಿಳಿನಲ್ಲಿ ಮಾತನಾಡುತ್ತಿದ್ದಳು. ಇದು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ. ಇದು ನಡೆದಿದ್ದು ಶ್ರೀನಿವಾಸನಗರದಲ್ಲಿ

    ಪ್ರತ್ಯುತ್ತರಅಳಿಸಿ