ಬುಧವಾರ, ಜೂನ್ 8, 2011

ಇಷ್ಟ ಇದ್ರೆ ಓದ್ರಿ ಇಲ್ಲದೆ ಇದ್ರೆ ರೈಟ್ ಹೇಳಿ, ಹಿಂಗೂ ಹೇಳ್ತಾರೆ ಸ್ವಾಮಿ ನಮ್ಮ ಮಾಧ್ಯಮ ಮಿತ್ರರು.


ಕಿರಿಕಿರಿಯಾಗುತ್ತಿದ್ದರೆ ಅನ್‌ಫ್ರೆಂಡ್ !..ಜೈ ಹೋ.
ಮಾಧ್ಯಮ ಕ್ಷೇತ್ರ ದಲ್ಲಿ ಕೆಲಸ ಮಾಡುವ ಮಾಧ್ಯಮ ಮಿತ್ರ ರಿಂದ ನಾವು ಬಯಸುವುದೇನು? ನಿಶ್ಪಕ್ಷವಾದ ವಸ್ತುನಿಷ್ಟ ವರದಿಗಳನ್ನು ಮಾತ್ರ. ಜತೆಗೆ ಆದಷ್ಟು ವಿವಾದಿತ ಹಾಗು ಪ್ರಚೋದನಕಾರಿ ವಿಷಯಗಳನ್ನು ದೂರವಿಟ್ಟು ನೋಡುವ ಮನಸ್ಥಿತಿ. ಆದರೆ ಮಾಧ್ಯಮ ದವರೆ ಪ್ರಚೋದನಕಾರಿ ವಿಷಯಗಳನ್ನು ಬ್ಲಾಗ್ ಬರೆದು ಜನರನ್ನು ಹಾದಿ ತಪ್ಪಿಸಿದರೆ ಹೇಗಿರಬೇಡ. 

ಪಕ್ಷಪಾತಿಯಾಗಿ ಕೆಲಸ ಮಾಡಿ ತಾವು ನಂಬಿಕೊಂಡ ಸಿದ್ದಾಂತಗಳನ್ನು ಜನರ ಮೇಲೆ ಹೇರಿದರೆ ಅವರನ್ನು ಜನ  ಧಿಕ್ಕರಿಸಲು ಜನ ಹಿಂದೆ ಮುಂದೆ ನೋಡರು ಅಂತ ಇತಿಹಾಸ ನೋಡಿದರೆ ಗೊತ್ತಾಗುತ್ತೆ.

ಇಲ್ಲಿ ಒಂದು ಗಮನಿಸಿ, ಒಂದು ಮಾತು ಎನ್ನುವ ಪತ್ರದಲ್ಲಿ "ನಿಮಗೆ ನಿಜಕ್ಕೂ ಸಂಪಾದಕೀಯದಿಂದ ಕಿರಿಕಿರಿಯಾಗುತ್ತಿದ್ದರೆ ಅನ್‌ಫ್ರೆಂಡ್ ಎಂಬ ಬಟನ್ ಒತ್ತಿ ನಮ್ಮಿಂದ ದೂರವಾಗಬಹುದು. ನಿಮಗೆ ಬೇಕಾದ ಬರೆಹಗಳನ್ನು ಬರೆಯುವ ಸಾಕಷ್ಟು ಬ್ಲಾಗ್‌ಗಳಿವೆ. ಅಲ್ಲಿ ನಿಮ್ಮ ಓದಿನ ಹಸಿವು ತಣಿಸಿಕೊಳ್ಳಬಹುದು" 

ಮಾತು ಅಂದರೆ ಇದಪ್ಪ, ಭಂಡತನದ ಮಾತು. ಅನಾಮಧೇಯರಾಗಿ ಎಂತ ಮಾತನ್ನು ಹೇಳಿದ್ರಿ. ತಾವು ನಿಜವಾಗಲು ಮಾಧ್ಯಮ ಕ್ಷೇತ್ರದಲ್ಲಿ ಕೆಲಸಮಾಡ್ತಿದ್ದರೆ ಧೈರ್ಯವಾಗಿ ಇದೇ ಮಾತನ್ನು ತಾವು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಹೇಳಿಕೆ ಕೊಡಿ. ನೋಡ್ರಪ್ಪಾ ನಾವು ಹಿಂಗೆ ಬರಿತೀವಿ, ನಾವು ಹಿಂಗೆ ಟಿವಿ ನಲ್ಲಿ ತೋರಿಸ್ತಿವಿ ನಿಮ್ಮ ಇಷ್ಟ ಇದ್ರೆ ನೋಡ್ಕೊಳ್ರಿ ಇಲ್ಲ ಅಂದ್ರೆ ಪತ್ರಿಕೆಯನ್ನು ಅಥವ ಚಾನೆಲ್ ಅನ್ನು ಬದಲಾಯಿಸಿ ಅಂತ ಹೇಳಿ ಸಾರ್. ನೋಡೋಣ ಆಮೇಲೆ ಏನಾಗುತ್ತೆ ಅಂತ! ಯಾವ ಟಿವಿ ಟಿಅರ್ಪಿ ಯಾಸ್ತಿಯಾಗುತ್ತೆ, ಯಾವ ಪತ್ರಿಕೆ ಪ್ರಸಾರ ಜಾಸ್ತಿ ಯಾಗುತ್ತೆ ಅಂತ ಗೊತ್ತಾಗುತ್ತೆ.

ಒಂದು ಇಡೀ ಸಿದ್ದಾಂತವನ್ನು ವಿರೋಧಿಸಲು ಸಮಯಸಾಧಕರಂತೆ ವಿಷಯಗಳನ್ನು ಆಯ್ದು ವ್ಯಕ್ತಿ ಹಾಗು ಸಂಘಟನೆಯನ್ನು ಬ್ಲಾಗ್ ಮುಖಾಂತರ ತೇಜೋವಧೆ ಮಾಡುವ ಪ್ರಯತ್ನ ಎಷ್ಟು ದಿನ ಫಲಿಸುತ್ತೆ. ಕೊನೆ ಪಕ್ಷ ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ ಯಾದ್ರು ಭಂಡತನದಿಂದ ಧೈರ್ಯವಾಗಿ ಆ ಕೆಲಸ ಮಾಡ್ತಾಯಿದಾರೆ. ಕದ್ದು ಮುಚ್ಚಿ ತಮ್ಮ ಸಿದ್ದಾಂತವನ್ನು ಪ್ರತಿಪಾದನೆ ಮಾಡುವಂತ ಕರ್ಮ ನಿಮಗೇನಿದೆ ಸ್ವಾಮಿ. 

ನಿಮ್ಮ ಬ್ಲಾಗ್ ನಲ್ಲಿ ಬರೆದಿರುವ ಹಾಗೆ, "ಇನ್ನು ಬಾಬಾ ರಾಮದೇವ. ಒಬ್ಬ ಚಳವಳಿಗಾರನಿಗೆ ಇರಬೇಕಾದ ಕಾಮನ್ ಸೆನ್ಸ್ ಇಲ್ಲದ ನಾಯಕ ಇವರು. ರಾಮಲೀಲಾ ಮೈದಾನದಲ್ಲಿ ರಾಮದೇವರು ನಡೆಸಿದ್ದು ಚಳವಳಿಯಲ್ಲ, ಹುಚ್ಚಾಟ. ಚಳವಳಿಗೆ ಬೇಕಾದ್ದು ಎಸಿ, ಏರ್ ಕೂಲರ್‌ಗಳು, ಐಶಾರಾಮಿ ವ್ಯವಸ್ಥೆ ಅಲ್ಲ; ಸರ್ಕಾರದಿಂದ ಕಾರ್ಯಸಾಧುವಾದಂಥ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜಾಣತನ ಎಂಬುದನ್ನು ಇವರು ಅರಿತಿರಲಿಲ್ಲ".

ಇಲ್ಲಿ ಗಮನಿಸಬೇಕಾದ ವಿಷಯ ಏನಪ್ಪ ಅಂದರೆ, ದೆಹಲಿ ಯಲ್ಲಿ ಸದ್ಯಕ್ಕೆ ೪೧ ರಿಂದ ೪೩ ಡಿಗ್ರಿ ಯಷ್ಟು ಬಿಸಿಲು ಹಾಗು ೪೯% ನಶ್ಟು ಆರ್ದ್ರತೆ ಯ ವಾತಾವರಣವಿದೆ. ಇಂತಹ ವಾತಾವರಣದಲ್ಲಿ ಕೇವಲ ಪೆಂಡಾಲ್ ಮತ್ತು ಫ್ಯಾನ್ ಗಳು ಅಂತಹ ಸೆಕೆಯನ್ನು ತಡೆಗಟ್ಟಬಲ್ಲದೆ. ಅದು ಅಲ್ಲದೆ ದಿನ ಪೂರ್ತಿ ಅಲ್ಲಿ ಕುಳಿತಿದ್ದರೆ ಮನುಷ್ಯನ ಆರೋಗ್ಯ ಅತಿ ಬೇಗ ಕೆಡುವುದಿಲ್ಲವೇ? ಬೀದರ್, ಗುಲ್ಬರ್ಗ ಬಳ್ಳಾರಿ, ರಾಯಚೂರು ಮಂಗಳೂರಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಂತಹ ವಾತವರಣವಿದ್ದು ಜನ ಪ್ರಯಾಸ ಪಡುವುದನ್ನು ಕಂಡಿದ್ದೇವೆ. ತಾವುಗಳೇನೋ ಏ.ಸಿ. ರೂಮಿನಲ್ಲಿ ಕೂತು ಕೆಲಸ ಮಾಡ್ತೀರ ಆ ಬಿಸಿಲಿನಬಗ್ಗೆ ಅರಿವು ಇದ್ದಿದ್ದರೆ ಇಂತಹ ಬಾಲಿಶ ಮಾತುಗಳನ್ನಾಡುತ್ತಿರಲಿಲ್ಲ. ಮಿಕ್ಕ ವಿಷಯಗಳ ಬಗ್ಗೆ ಹೇಳಬೇಕೆಂದರೆ, ಬಾಬಾರವರನ್ನು ಸಾಧ್ಯವಾದ ಮಟ್ಟಿಗೆ ಟೀಕಿಸಬೇಕು ಅಂತ ತೀರ್ಮಾನಿಸಿ ಬರೆದ ಮಾತುಗಳೇ. ಅಲ್ಲಿ ಬೇರೆ ಏನು ನಿರೀಕ್ಷೆ ಮಾಡೋದಿಕ್ಕೆ ಆಗುತ್ತೆ.

ಅದೇ ಲೇಖನದಲ್ಲಿ ಹೀಗೆ ಏನೆನೊ ಬರೆದು, ಒಂದು ಕಡೆ "ನಿರೀಕ್ಷಿತವಾಗಿಯೇ ಅವರು ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಕೆದಕಿ ಮಾತನಾಡಿದ್ದಾರೆ" ಅಂತ ಬರೀತಾರೆ. ಸುಬ್ರಮಣ್ಯಸ್ವಾಮಿ ಯವರನ್ನು ಕೇಳಿ ಮೂಲದ ಬಗ್ಗೆ ಚೆನ್ನಾಗಿ ಹೇಳ್ತಾರೆ.

"ದಿಗ್ವಿಜಯ್ ಸಿಂಗ್ "ಲಾಡೆನ್ ಜಿ ಅಂತ ಸಂಭೋಧಿಸಿದಾಗ ತಾವೇನಾದ್ರು ಬರೆದ್ರಾ? ಇಲ್ಲ. ಮತ್ತೆ ಯಾಕೆ ಸುಮ್ಮನಿದ್ರಿ. ಇರಲಿ ಬಿಡಿ, ದಿಗ್ವಿಜಯ್ ಸಿಂಗ್ ನೇರವಾಗಿ ಹೇಳ್ತಾರೆ, ನೀವು ಕದ್ದು ಮುಚ್ಚಿ ಹೇಳ್ತೀರ.

`ನೆರಳು ಕೊಟ್ಟು ಹೋದ ಮನುಷ್ಯ' ಲಿಂಗದೇವರು ಹಳೆಮನೆ ಬ್ಲಾಗ್ ನಲ್ಲಿ, ಎಲ್ಲ ವಿಷಯ ಬರೆದು ಕೊನೆಗೆ ಮತ್ತೆ ತಮ್ಮ ಬುದ್ದಿ ತೋರಿಸಿ ಬಿಟ್ರಲ್ಲಾ, ಮತ್ತೆ ಎಡ ಪಂಥೀಯ ಮತ್ತು ಬಲ ಪಂಥೀಯ ಎನ್ನುವ ಮಾತುಗಳು. ಮುಂಚೆ ಹೇಳಿದ ಹಾಗೆ ಎಡಪಂಥೀಯ ವಿಚಾರಧಾರೆಯ ವ್ಯಕ್ತಿಗಳ ಬಗ್ಗೆ ಮಾತ್ರ ಪ್ರೀತಿಯಿಂದ ಬರೆದು ಬಲಪಂಥೀಯ ವ್ಯಕ್ತಿಗಳನ್ನು ತೆಗಳುವುದೆ ಇವರ ಕೆಲಸ.

ನರೇಂದ್ರ ಬಾಬು ಶರ್ಮರ ವಿಚಾರ ದಲ್ಲಿ ಸಹ ಇದೇ ಧಾಟಿ, ಇಲ್ಲಿ ಸಂಪೂರ್ಣ ಸಮಯಸಾಧಕತನ ತೋರಿಸಿ ಬಹುತೇಕ ಹಿಂದೂಗಳು, ನಾವೆಲ್ಲ ಅವರ ವಿಚಾರಗಳನ್ನು ಹಾಗು ಅವರನ್ನು ವಿರೋಧಿಸುವುದನ್ನು ಕಂಡು ಅವರ ಮೇಲೆ ಗದಾಪ್ರಹಾರ ಮಾಡಿತು. ಕಾರಣ, ಅವರೊಬ್ಬ ಹಿಂದೂ, ಪುರೋಹಿತಶಾಹಿ ಮನೋಭಾವದವನು ಹಾಗು ಕಪಟ ಜ್ಯೋತಿಷಿ, ಇಷ್ಟು ಸಾಕಿತ್ತು ಅವರನ್ನು ತೇಜೋವಧೆ ಮಾಡಲು.

"ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಪ್ಪು ಹಣ ತರುವ ವಿಷಯ ಅಡ್ವಾನಿ ತಲೆಗೇಕೆ ಹೊಳೆದಿರಲಿಲ್ಲ? "  ಅಂತ ಕೇಳ್ತಾರೆ, ಸ್ವಲ್ಪ ಕೆಂಪು ಕನ್ನಡಕ ಪಕ್ಕಕಿಟ್ಟು ಸ್ವಿಸ್ ಬ್ಯಾಂಕ್ ವಿಚಾರ ಯಾವಾಗಿನಿಂದ ಪ್ರಸ್ತಾಪ ಆಯಿತು ಅಂತ ಗಮನಿಸಲಿ. ಜಾಗತಿಕ ಅರ್ಥಿಕ ಹಿಂಜರಿತ ಶುರುವಾದಾಗ ಕೆಲ ಯುರೋಪ್ ರಾಷ್ಟ್ರಗಳು ಕಪ್ಪು ಹಣದಬಗ್ಗೆ ಮಾಹಿತಿ ಸಂಗ್ರಹಣೆಗೆ ಮುತುವರ್ಜಿ ವಹಿಸಿದವು. ಅದರ ಫಲವಾಗಿ ನಮ್ಮ ದೇಶದ ಹಣ ಎಷ್ಟಿರಬಹುದು ಎನ್ನುವ ಲೆಕ್ಕಾಚಾರ ಅಂದಿನಿಂದ ಶುರುವಾಗಿದ್ದು. ಆ ವಿಷಯವನ್ನು ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಸೇರಿಸಿ ಚುನಾವಣೆಗೆ ಇಳೀತು. ಆದರೆ ಗೆದ್ದಿದ್ದು ಕಾಂಗ್ರೆಸ್ ಪಕ್ಷ. ಇಲ್ಲಿಗೆ ೩ ವರ್ಷಗಳು ಕಳೆದಿವೆ, ಕೇಂದ್ರ ಸರ್ಕಾರ ಏನು ಮಾಡಿತು ಈ ಸಮಯದಲ್ಲಿ? ಅವರಿಗೆ ಬದ್ದತೆ ಇರಲಿಲ್ವೆ? ಇದನ್ನು ಪ್ರಶ್ನೆ ಮಾಡಿ ಸ್ವಾಮಿ ನೀವು. ಅದು ಬಿಟ್ಟು ಬಾಬ ಬಗ್ಗೆ ಏನೇನೋ ಕಾಗಕ್ಕ ಗುಬ್ಬಕ್ಕನ ಕಥೆ ಬರೀತಾಯಿದೀರಲ್ಲ.

ನಿನ್ನೆ ಸುವರ್ಣ ಟಿವಿಯಲ್ಲಿ ಪ್ರಸಾರ ವಾದ ವಾರ್ತೆ ಯಲ್ಲಿ "ಅಡ್ಡದಾರಿ ಹಿಡಿದ ಬಾಬಾ ರಾಮದೇವ್ ಸತ್ಯಾಗ್ರಹ, ಈಗ ಕಪ್ಪು ಹಣದ ವಿಚಾರದ ಪ್ರಸ್ತಾಪ ಇಲ್ಲ, ಕೇವಲ ಬಾಬ ರವರ ಸತ್ಯಾಗ್ರಹ ಹತ್ತಿಕ್ಕಲು ನಡೆದ ಪ್ರಸಂಗದ ಬಗ್ಗೆ ಮಾತ್ರ ಚರ್ಚೆ ನಡೀತಾಯಿದೆ. ರಾಜಕೀಯ ದಾಳವಾಗಿ ಬಾಬರವರನ್ನು ಉಪಯೋಗಿಸುತಿದ್ದಾರೆ, ಮಾತು ಬದಲಾಯಿಸಿದ ಬಾಬಾ." ಅಂತ ನಿನ್ನೆ ವರಾತ ಶುರು ಹಚ್ಕೊಂಡಿತ್ತು. ಮಾಡೊದಿಕ್ಕೆ ಬೇರೆ ಏನು ಕೆಲಸ ಇಲ್ಲದೆ ಇದ್ರೆ, ಏನೆನೋ ತಲೆಗೆ ಹೊಳೆಯುತ್ತೆ ಅಂತೆ.


ಅದೇನೆ ಇರಲಿ, ಶ್ರೀವತ್ಸ ಜೋಷಿ ಯವರು ಸೂಪರ್ರಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದಕ್ಕೆ ನೀವು ಕಮಕ್ ಕಿಮಕ್ ಅಂತ ಅಂದಿಲ್ಲ
ಶ್ರೀವತ್ಸ ಜೋಶಿ said...
ಕಪ್ಪುಹಣ- ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರುಗಳಲ್ಲಿ... 
ಭ್ರಷ್ಟಾಚಾರ, ಕಪ್ಪುಹಣ, ಬಾಬಾರಾಮದೇವ್ ಸತ್ಯಾಗ್ರಹ... ಇತ್ಯಾದಿ ಈಗ ಸುದ್ದಿಯಲ್ಲಿರುವುದರಿಂದ ಇದನ್ನು ಇಲ್ಲಿ ದಾಖಲಿಸುತ್ತಿದ್ದೇನೆ (ವಿಜಯ ಕರ್ನಾಟಕ ಪತ್ರಿಕೆಯಲ್ಲಿ 27 ಫೆಬ್ರವರಿ 2011ರಂದು ಪರಾಗಸ್ಪರ್ಶ ಅಂಕಣದಲ್ಲಿಯೂ ಇದನ್ನು ವಿವರಿಸಿದ್ದೆ)-
ಎಪ್ಪತ್ತೈದು ಲಕ್ಷ ಕೋಟಿ ಎಂಬ ಒಂದು ಸಂಖ್ಯೆಯ ವಿಚಾರ ತಿಳಿಸುತ್ತೇನೆ ಈಗ. ಈ ಸಂಖ್ಯೆಯನ್ನು ಬರೆಯಲು 75ರ ಬಲಗಡೆಯಲ್ಲಿ ಹನ್ನೆರಡು ಸೊನ್ನೆಗಳು ಬೇಕು. 75 ಲಕ್ಷ ಕೋಟಿ ಏನು ಗೊತ್ತೇ? ವಿದೇಶೀ ಬ್ಯಾಂಕ್‌ಗಳಲ್ಲಿ ಭಾರತೀಯರ ಹೆಸರಿನಲ್ಲಿರುವ ಕಪ್ಪುಹಣ ರೂಪಾಯಿಗಳಲ್ಲಿ! ಬಹುಶಃ ಸಂಖ್ಯೆಯ ರೂಪದಲ್ಲಿ ಅಂಥ ದೊಡ್ಡ ಮೊತ್ತವೆಂದೇನೂ ಅನಿಸುವುದಿಲ್ಲ. 2ಜಿ ಸ್ಪೆಕ್ಟ್ರಂ ಹಗರಣದ ಮೊತ್ತ ಸುಮಾರು 2 ಲಕ್ಷ ಕೋಟಿ ರೂಪಾಯಿಗಳು ಎಂದು ಓದಿದ ನೆನಪು. ಅದರ ಮೂವತ್ತೇಳುವರೆ ಪಟ್ಟು ಇದೆ ಈ ಮೊತ್ತ. ಸರಿ, ಈಗ ಇದಕ್ಕೆ ಒಂದು ಪ್ರತಿಮೆ ಕಟ್ಟೋಣ. ನಿಜಕ್ಕೂ ಎಷ್ಟೊಂದು ದೊಡ್ಡ ಮೊತ್ತವಿದು ಎಂದು ಮನದಟ್ಟಾಗುವಂತಿರಬೇಕು ಪ್ರತಿಮೆ. 75 ಲಕ್ಷ ಕೋಟಿ ರೂಪಾಯಿಗಳು ಸ್ವಿಸ್ ಬ್ಯಾಂಕ್‌ನಿಂದ ಹೊರಬಂದು ಹಾರ್ಡ್ ಕ್ಯಾಷ್ ಆಗಿ ಭಾರತಕ್ಕೆ ಬಂತು ಅಂತಿಟ್ಕೊಳ್ಳೋಣ. ಸಾವಿರ ರೂಪಾಯಿಗಳ ಗರಿಗರಿ ನೋಟುಗಳು. ಒಂದು ನೋಟಿನ ಉದ್ದ 18 ಸೆ.ಮೀ, ಅಗಲ 8 ಸೆ.ಮೀ. ನೂರು ನೋಟುಗಳ ಕಟ್ಟು ಮಾಡಿದರೆ ಅದರ ದಪ್ಪ ಸುಮಾರು 1.7 ಸೆ.ಮೀ ಎಂದು ‘ನೋಟ್’ ಮಾಡಿಟ್ಟುಕೊಳ್ಳೋಣ. ಈಗ ಒಂದು ಲಾರ್ಜ್ ಸೈಜ್ ಸೂಟ್‌ಕೇಸಿನ ಅಳತೆಗಳನ್ನು ನೋಡೋಣ. 71 ಸೆ.ಮೀ ಉದ್ದ, 53 ಸೆ.ಮೀ ಅಗಲ, 24 ಸೆ.ಮೀ ಎತ್ತರ. ಒಂದು ಸೂಟ್‌ಕೇಸ್‌ನೊಳಗೆ ಒಟ್ಟು 360 ಕಟ್ಟುಗಳು ತುಂಬಿಕೊಳ್ಳುತ್ತವೆ. ಒಂದು ಕಟ್ಟಿನಲ್ಲಿ ಒಂದು ಲಕ್ಷ ರೂಪಾಯಿ, ಆದ್ದರಿಂದ ಒಂದು ಸೂಟ್‌ಕೇಸ್‌ನಲ್ಲಿ ಒಟ್ಟು 3.6 ಕೋಟಿ ರೂಪಾಯಿ. ಒಂದು ಅಂಬಾಸಿಡರ್ ಕಾರಿನ ಡಿಕ್ಕಿಯಲ್ಲಿ ನಾಲ್ಕು ಸೂಟ್‌ಕೇಸ್‌ಗಳು ಹಿಡಿಸುತ್ತವೆ ಅಂತಿರಲಿ. ಹಾಗಾಗಿ ಒಂದು ಕಾರಿನಲ್ಲಿ ಒಟ್ಟು 14.4 ಕೋಟಿ ರೂಪಾಯಿಗಳು. ವಿದೇಶೀ ಬ್ಯಾಂಕ್‌‌ಗಳಿಂದ ಹೊರಬಂದ ಅಷ್ಟೂ ಮೊತ್ತವನ್ನು ತುಂಬಲು 5,20,833 ಕಾರುಗಳು ಬೇಕು. ಒಂದು ಕಾರಿನ ಉದ್ದ ಸುಮಾರು ನಾಲ್ಕೂಕಾಲು ಮೀಟರ್ ಅಂತಿಟ್ಟುಕೊಳ್ಳೋಣ. ಒಂದರಹಿಂದೆ ಒಂದರಂತೆ ಈ ಎಲ್ಲ ಕಾರುಗಳು ಹೊರಟರೆ, ನಡುವೆ ತಲಾ ಮುಕ್ಕಾಲು ಮೀಟರ್ ಗ್ಯಾಪ್ ಅಂತಿಟ್ಟುಕೊಂಡರೂ ಮೆರವಣಿಗೆ ಸುಮಾರು 3000 ಕಿ.ಮೀಗಿಂತಲೂ ಹೆಚ್ಚು ಉದ್ದವಾಗುತ್ತದೆ. ಅಂದರೆ "ಆಸೇತುಹಿಮಾಲಯ" ಅಥವಾ, "ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ" ಸರಳರೇಖೆ ಎಳೆದರೆ ಅಷ್ಟು ಉದ್ದ!
June 7, 2011 5:29 PM

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ