ಭಾನುವಾರ, ಜೂನ್ 5, 2011

ಸಂಪಾದಕೀಯದ ಹಿಡನ್ ಅಜೆಂಡಾ!!!
ನಿರ್ಭಯ, ನಿಷ್ಠುರ, ವಿಕಟ, ಕಟಕಿ, ಚಟಾಕಿ ಮಾತುಗಳಿಂದಾಗಿ ಏಕಕಾಲಕ್ಕೆ ಖ್ಯಾತಿ ಮತ್ತು ಅಪಖ್ಯಾತಿಯನ್ನು ಸಂಪಾದಿಸಿದ ಕನ್ನಡ ಬ್ಲಾಗಿನ ಹೆಸರು "ಸುದ್ದಿಮಾತು" ಅಂತ ಅಂದು ದಟ್ಸ್ ಕನ್ನಡ ವರದಿ ಮಾಡಿತ್ತು. ಈಗ "ಸುದ್ದಿಮಾತು" ಅನ್ನುವ ಹೆಸರಿನ ಬದಲಾಗಿ ಸಂಪಾದಕೀಯ ಅಂತ ಓದಿಕೊಳ್ಳಬೇಕು. 


ಕಾರಣ ಈ ಎರಡು ಬ್ಲಾಗ್ ಗಳ ಉದ್ದೇಶ ಒಂದೇ, ಎರಡು ಬ್ಲಾಗ್ ಗಳ ಲೇಖನಗಳನ್ನು ಒಮ್ಮೆ ಪರಾಂಬರಿಸಿ ನೋಡಿದಾಗ ವಿಷಯ ಬಹಳ ಸ್ಪಷ್ಟವಾಗುತ್ತೆ ಹಾಗು ಎರಡರ ಮದ್ಯೆ ಯಾವುದೇ ವ್ಯತ್ಯಾಸ ಕಾಣಸಿಗುವುದಿಲ್ಲ. ಇವರಿಗೆ ಪ್ರಗತಿಪರರು, ಜಾತ್ಯಾತೀತ ವಾದಿಗಳು, ಎಡಪಂಥೀಯ, ವಿಚಾರವಾದಿಗಳು ಎಂದು ತೋರಿಸಿಕೊಳ್ಳುವ ಹಪಾಹಪಿ. ಸಮಯ ಸಿಕ್ಕಾಗ ಹಿಂದುತ್ವ ವಾದಿ, ಕೋಮು ವಾದಿಗಳೆಂದು ಕರೆಯುವ ಜನರನ್ನು ಜಾಡಿಸುವುದು ಇವರ ಹವ್ಯಾಸ. ಅಪ್ಪಟ ಹಿಂದೂ ವಿರೋಧಿ ಬ್ಲಾಗ್. ಪ್ರತಿ ಅಕ್ಷರದಲ್ಲೂ ಹಿಂದೂ ವಿರೊಧಿ ಭಾವನೆಯೆ ತುಂಬಿದೆ. ಅದು ಒಂದು ರೀತಿಯಲ್ಲಿ ನುಡಿ ಭಯೋತ್ಪಾದನೆ. ಇದಕ್ಕೆ ಮುನ್ನ ಸುದ್ದಿಮಾತು ಇದೇ ಕೆಲ್ಸ ಮಾಡ್ತಿತ್ತು. ಈಗ ಸಂಪಾದಕೀಯ. 
ಅಂದು ಸುದ್ದಿಮಾತಿನಲ್ಲಿ "ಹೊಲಸು ಕಾರಿಕೊಂಡ ಭೈರಪ್ಪ" ಎನ್ನುವ ಲೇಖನ ಬಂದಿತ್ತು, ಅದೇ ರೀತಿಯ ಲೇಖನ  ಚಿದಾನಂದ ಮೂರ್ತಿಯವರ ಕುರಿತಾಗಿ "ಚಿಮೂ ಕುರಿತು ರವಿ ಬರೆದಿದ್ದಾರೆ, ಓದಿ..." ಅಂತ ವಾರಪತ್ರಿಕೆಯ ಒಂದು ತುಣುಕನ್ನು ತೋರಿಸಿತು. ಅದನ್ನು ಸಮರ್ಥಿಸಲು ಮತ್ತೆ ಇನ್ನೂಒಂದು ಲೇಖನ "ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ಚಿದಾನಂದ ಮೂರ್ತಿಯವರನ್ನು ಕಾಪಾಡಿದ್ದು ಯಾರು?" ಮತ್ತು " ಮಾಂಸದ ಅಂಗಡಿಯಲ್ಲಿ ಚೆಂಡುಹೂವು ನೇತುಹಾಕ್ತಾರಾ ಚಿದಾನಂದಮೂರ್ತಿಗಳೇ?" ಹೀಗೆ ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಲ್ಲಲ್ಲಿ ವಿಷಕಾರಿಕೊಂಡು ಬಂದಿದೆ 
ರಂಜಾನ್ ದರ್ಗಾ, ದಿನೇಶ್ ಅಮೀನ್ ಮಟ್ಟು, ಜಿ.ಎನ್.ಮೋಹನ್, ಶಶಿಧರ್ ಭಟ್, ಪ್ರಜಾವಾಣಿ, ಪ್ರಗತಿಪರರು ವಿಚಾರವಾದಿಗಳು ಇಂತಹ ಪರವಾಗಿರುವ ಸಂಘ ಸಂಸ್ಥೆಗಳ ವಿಷಯದಲ್ಲಿ ಅತ್ಯಂತ ಆತ್ಮೀಯವಾಗಿ ಪ್ರೀತಿಯಿಂದ ಪುಟಗಟ್ಟಲೆ ಬರೆಯುತ್ತಾರೆ. ಅದೇ ರೀತಿ, ಆರೆಸ್ಸೆಸ್, ವಿಜಯಕರ್ನಾಟಕ, ಕನ್ನಡಪ್ರಭ, ಪೇಜಾವರ ಶ್ರೀಗಳು ಪ್ರತಾಪ್ ಸಿಂಹ, ವಿಶ್ವೇಶ್ವರಭಟ್ಟರು, ಚಿದಾನಂದ ಮೂರ್ತಿ, ಭೈರಪ್ಪ ,ಮುಂತಾದವರ ಬಗ್ಗೆ ಯಕ್ಕಾ ಮಕ್ಕಾ ಉಗಿದು ಉಪ್ಪಿನಕಾಯಿ ಹಾಕ್ತಾರೆ. 
ಬಹುತೇಕ ಜನರು ಯಾವಗಲೂ ಕೇಳುವ ಪ್ರಶ್ನೆ, ಇದೆಲ್ಲ ಯಾರನ್ನು ಮೆಚ್ಚಿಸುವುದಕ್ಕೆ ಮಾಡ್ತಾರೆ? 
ಒಂದು ವೇಳೆ, ನಿಮ್ಮ ಮನದಮೂಲೆಯಲ್ಲಿರುವ ದ್ವೇಷ, ವರ್ಷಾನುವರ್ಷಗಳಿಂದ ಅನುಭವಿಸಿದ ಶೋಷಣೆ, ಅವಮಾನ, ನೋವು ಇಂತಹ ಲೇಖನಗಳಿಂದ ದೂರವಾಗುತ್ತೆ ಅನ್ನುವ ಭ್ರಮೆ ನಿಮಗಿದೆಯೇ? 
ಸ್ವಾಮಿ, ಇಂದಿನ ಹಿಂದೂ ಧರ್ಮ ಪ್ರತಿಪಾದಕರಲ್ಲಿ ಕೇವಲ ಬ್ರಾಹ್ಮಣ, ವೈಶ್ಯ, ಕ್ಷತ್ರಿಯರೊಂದೆ ಇಲ್ಲ, ಅವರ ಜತೆಗೆ ಶೋಷಿತ ವರ್ಗದ ಅಪಾರ ಬೆಂಬಲವಿದೆ. ಇತಿಹಾಸದಲ್ಲಿ ನಡೆದ ಪೋರ್ಚಗೀಸರ, ಮುಸ್ಲಿಮರ, ಬ್ರಿಟೀಷರ ದಬ್ಬಾಳಿಕೆ, ದೌರ್ಜನ್ಯದಿಂದ ಇಂದಿಗೂ ಹಿಂದೂ ಧರ್ಮ ಕುಗ್ಗಿಲ್ಲ ಮುಂದೆಯೂ ಸಹ ಕುಗ್ಗೋದು ಇಲ್ಲ. ನಿಮ್ಮಂಥವರು ವಿಷವನ್ನು ಮನಸ್ಸಿನಲ್ಲಿಟ್ಟುಕೊಂಡು ಸಮಯ ಸಂಧರ್ಭಕ್ಕೆ ತಕ್ಕಂತೆ ಕಕ್ಕುತ್ತಾ ಹೋದರು ಸಹ ಹಿಂದೂ  ಸಮಾಜಕ್ಕೆ ಕಿಂಚಿತ್ತೂ ಧಕ್ಕೆಯುಂಟಾಗುವುದಿಲ್ಲ ಅಂಥ ತಿಳಿದಿದ್ದರೆ ಒಳ್ಳೆಯದು.
ನಿಮ್ಮ ಕೆಲ ಬ್ಲಾಗ್ ಗಳಲ್ಲಿ ಬರೆದಿರುವ ಹಾಗೆ ಸಾಮಜಿಕ ಕಳಕಳಿ ಬಗ್ಗೆ ನಮ್ಮೆಲ್ಲರಿಗು ಅತೀವ ಗೌರವ ವಿದೆ. ಒಳ್ಳೆಯ ಕೆಲ ಕಾರ್ಯಗಳಿಗೆ ನಮ್ಮ ಬೆಂಬಲವಿದೆ. ನರೇಂದ್ರಬಾಬು ವಿನ ವಿರುದ್ಧ ಮೊಳಗಿಸಿದ ಕಹಳೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕೆಟ್ಟವರು ಯಾವ ಜಾತಿ ಧರ್ಮದಲ್ಲಿದ್ದರೂ ಅವರು ಕೆಟ್ಟವರೇ. 
ಒಳ್ಳೆಯ ಲೇಖನಗಳನ್ನು ನೀವು ನೀಡಿದ್ದೀರಿ, ನೂರಾರು ಜನರು ನಿರಂತರ ಓದುಗರಾಗಿದ್ದಾರೆ. ಪಕ್ಷಪಾತಿಯಾಗಿ ಲೇಖನಗಳನ್ನು ಪ್ರಕಟಿಸಿದರೆ ಜನವಾಹಿನಿಯಿಂದ ದೂರ ಹೋಗುವ ಕಾಲ ದೂರವಿಲ್ಲ. ಕೆಲ ಓದುಗರು ಹೇಳಿದ ಹಾಗೆ ಕಾಮೆಂಟುಗಳಿಗೆ ಉತ್ತರಿಸದೆ, ಹೊಡೆದು ಓಡುವ ಆಟ ಆಡುತ್ತಿದೆಯೇನೋ ಅನ್ನಿಸಲು ಶುರುವಾಗಿದೆ. ಹೀಗೆ ನಡೆದರೆ ಚಿಂತನಶಿಲ ಕನ್ನಡಿಗರ ತಿರಸ್ಕಾರಕ್ಕೆ ಗುರಿಯಾಗುವ ಮತ್ತೊಂದು ಜಾಲತಾಣವಾಗಲಿದೆ.
ಇನ್ನು ಕೆಲವರು ಹೇಳಿದ ಹಾಗೆ "ಈ ಸಂಪಾದಕೀಯದ ವಿಶೇಷ ಏನು ಗೊತ್ತಾ? ಆ ಬ್ಲಾಗಿನಲ್ಲಿ ಶೇ ಎಂಭತ್ತರಷ್ಟು ಕಾಮೆಂಟುಗಳು “ಅನಾನಿಮಸ್” ಗುಂಪಿನವು. ಹೀಗಿರುವಾಗ ಈ ಬ್ಲಾಗು ಯಾವ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದೇ ಸಂಶಯವಾಗುತ್ತಿದೆ". ಆ ಸಂಶಯ ಇಂದು ನಿಜವಾಗುತ್ತಿದೆ. ಮಾಡರೇಟ್ ಮಾಡುವ ಉದ್ದೇಶ ದಿಂದ ಸಹಿಸಲಾಗದ ಉತ್ತರಕೊಡಲಾಗದ ಪ್ರತಿಕ್ರಿಯೆಗಳನ್ನು ಪ್ರಕಟಿಸದಂತೆ ತಡೆಯುವ ದೃಷ್ಠಿಯಿಂದ  ಪ್ರತಿಕ್ರಿಯೆಗಳನ್ನು ಪ್ರಕಟಿಸದೇ ತಡೆಹಿಡಿಯುವಿರಿ ಎನ್ನುವ ಆಪಾದನೆ ಯಿದೆ  ಎಷ್ಟೆ ಆಗ್ಲಿ ಹೆಸರೇ ಸಂಪಾದಕೀಯ, ಅವ್ರು ಏನ್ ಬರೆದ್ರೂ ಸೈ ಎನ್ನುವ ಭಾವನೆ ಜನರ ಮನದಲ್ಲಿ ಮೂಡತೊಡಗಿದೆ.

6 ಕಾಮೆಂಟ್‌ಗಳು:

 1. ಸರಿಯಾಗಿ ಹೇಳಿದ್ದೀರಿ.

  ಪ್ರತ್ಯುತ್ತರಅಳಿಸಿ
 2. ಮಾಡರೇಟ್ ಮಾಡ್ತರೆ ಎನ್ನುವುದು, ಅವರಿಗೆ ಹಿತವಾದದ್ದನ್ನು ಮಾತ್ರ ಪ್ರಕಟಿಸ್ತರೆ ಎನ್ನುವುದನ್ನು ತೋರಿಸುತ್ತೆ. ನಾನೂ ಕೂಡ ತುಂಬಾ ಪ್ರತಿಕ್ರಿಯೆ ಬರೆದೆ. ಊಹೂಂ ಒಂದೂ ಪ್ರಕಟಗೊಳ್ಳಲೇ ಇಲ್ಲ. ಅದೆಷ್ಟು ಪೂರ್ವಗ್ರಹಪೀಡಿತರು ಎಂದು ಅದರಲ್ಲೆ ಗೊತ್ತಾಗುತ್ತೆ. ಅದೊಂದು ಅಪ್ಪಟ ಹಿಂದೂ ದ್ವೇಷಿಗಳ ಬ್ಲಾಗ್ ಅಷ್ಟೇ. ಹುರುಳು ಇಲ್ಲ ತಿರುಳಂತೂ ಇಲ್ವೆ ಇಲ್ಲ

  ಪ್ರತ್ಯುತ್ತರಅಳಿಸಿ
 3. ಗುರುವೇ, ಸಂಪಾದಕೀಯ ಬ್ಲಾಗ್ ಅದೊಂದು ಎಡಬಿಡಂಗಿಗಳ ಬ್ಲಾಗ್. ಅಲ್ಲಿರೋರೆಲ್ಲ ಎಡವಟ್ಟುಗಳೇ. ನೀವು ಹೇಳಿದ್ದು ಮಾತ್ರ ೧೦೦ಕ್ಕೆ ೧೦೦ ರಷ್ಟು ನಿಜ. ಮಾಧ್ಯಮದ ವಿಚಾರ ಬರಿತೀವಿ ಅಂತಾರೆ ಆದರೆ ರಾಜಕೀಯ ಮಾಡ್ತಾರೆ. ಇನ್ನು ಚೆನ್ನಾಗಿ ಉಗಿದು ಬರೀರಿ ಅವರಿಗೆ.

  ಇಂತಿ
  ಹರ್ಷ

  ಪ್ರತ್ಯುತ್ತರಅಳಿಸಿ
 4. ಈ ಪ್ರಗತಿಪರರ ಉಪಟಳ ಒಂದೊಂದಲ್ಲ,

  ಪ್ರತ್ಯುತ್ತರಅಳಿಸಿ
 5. ಈ ಪ್ರಗತಿಪರರ ಉಪಟಳ ಒಂದೊಂದಲ್ಲ, ಅಗ್ನಿ ಶ್ರೀಧರ್ ಎಂಬ ಪ್ರಗತಿಪರರು (?) ದಾದಾಗಿರಿಯ ದಿನಗಳನ್ನು 'ಪ್ರಗತಿಪರರ' ಹೆಸರಿನಲ್ಲಿ ಮುಂದುವರೆಸುತ್ತಿದ್ದಾರೆ

  ಪ್ರತ್ಯುತ್ತರಅಳಿಸಿ