ಮಂಗಳವಾರ, ಜೂನ್ 14, 2011

ಮಾಧ್ಯಮ ಹಾಗು ಕೇಸರಿ ಪಕ್ಷದವರಿಗೆ ಯಾಕೆ ಗೊತ್ತಾಗಲಿಲ್ಲ?


ಒಂದು ದುರಂತ ನಡೆದು ಹೋಗಿದೆ.
ಬಿಜೆಪಿ ಆಡಳಿತ ವಿರುವ ಉತ್ತರಾಖಂಡ್ ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಉಪವಾಸ ಮಾಡುತಿದ್ದ ಸರಸ್ವತಿ ಸ್ವಾಮಿ ನಿಗಮಾನಂದ (ಮಂತ್ರ ಸದನ, ಹರಿದ್ವಾರ) ರವರು ತೀವ್ರ ಅಸ್ವಸ್ಥ ಗೊಂಡು ನಿಧನರಾಗಿರುವುದು ವಿಷಾದದ ಸಂಗತಿ. 

ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಯಾವುದೇ ಮಾಧ್ಯಮ ಗಳಲ್ಲಿ ಸಹ ಅಷ್ಟೊಂದು ಸುದ್ದಿಯಾಗಲಿಲ್ಲ. ಅವರು ನಿಧನಗೊಂಡ ನಂತರ ಪ್ರತಿಯೊಬ್ಬರು ಕಾಂಗ್ರೆಸ್ ನಾಯಕರು ಪುಂಕಾನುಪುಂಖವಾಗಿ ಹೇಳಿಕೆಗಳನ್ನು ಕೊಡುತಿದ್ದಾರೆ, ಹಾಗು ಈಗ ಮಾಧ್ಯಮಗಳು ಅವರ ನಿಧನದ ಬಗ್ಗೆ ಸುದ್ದಿ ಯನ್ನು ಪ್ರಸಾರ ಮಾಡುತ್ತಿವೆ ಜತೆಯಲ್ಲಿ ಬಿಜೆಪಿ ಬಗ್ಗೆ ಟೀಕೆ, ಇದೇ ಕೆಲಸ ವನ್ನು ಅವರು ಬದುಕಿದ್ದಾಗ ಯಾಕೆ ಮಾಡಲಿಲ್ಲ. ಬಗ್ಗಿದವನಿಗೆ ನಾಲ್ಕು ಗುದ್ದು ಜಾಸ್ತಿ ಎನ್ನುವಂತೆ ಬಿಜೆಪಿ ಹಾಗು ಮತ್ತಿತರ ಸ್ವಾಮಿ ಗಳನ್ನು ಗುರಿ ಮಾಡಿ ಟೀಕೆ ಮಾಡುತಿದ್ದಾರೆ.


ನಿತ್ಯಾನಂದನ ಕರ್ಮ ಕಾಂಡವನ್ನು ದೇಶದ ಎಲ್ಲ ಚಾನೆಲ್ ಗಳು ಪದೇ ಪದೇ ಪ್ರಸಾರ ಮಾಡಿದವು ಆದರೆ ಅದೇ ಮಾಧ್ಯಮದವರು ಇಲ್ಲಿ ಮಾತ್ರ ಫೋಕಸ್ ಮಾಡಲಿಲ್ಲ ಕಾರಣ ಹೆಚ್ಚಿನ ಟಿಆರ್ ಪಿ ಸಿಗುವುದಿಲ್ಲ ಎಂದು. 

ಬಾಬಾ ರಾಮ್ ದೇವ್ ಬಗ್ಗೆ ಪರ ಚರ್ಚೆಗಿಂತ ಹೆಚ್ಚಿನ ಅವಧಿ ವಿರೋಧಕ್ಕೆ ಮೀಸಲಿಟ್ಟಿದ್ದವು. ಈಗ ಮಾತ್ರ ದಿಗ್ವಿಜಯ್ ಸಿಂಗ್ ಮಾತಗಳನ್ನು ತದೇಕ ಚಿತ್ತ ಆಲಿಸಿ ಬಿತ್ತರಿಸುತಿದ್ದಾರೆ.

ಬಿಜೆಪಿ ಯವರಿಗೆ ಏನು ತೊಂದರೆಯಿತ್ತು?

ಈ ಸತ್ಯಾಗ್ರಹವನ್ನು ಇವ್ರು ಯಾಕೆ ನಿರ್ಲಕ್ಷಿಸಿದರು? 

ಕೇವಲ ರಾಜಕೀಯ ಲಾಭಕ್ಕೋಸ್ಕರ ಚಳುವಳಿಗಳನ್ನು ಬಳಸಿಕೊಳ್ತಾರಾ? ಅಂತಹ ರಾಜಕೀಯಕ್ಕೆ ನಮ್ಮ ಧಿಕ್ಕಾರ ವಿರುತ್ತೆ. ಇಂತಹ ಸಮಯ ಸಾಧಕತನ ಯಾವುದೇ ಪಕ್ಷಕ್ಕೂ ಶ್ರೇಯಸ್ಕರವಲ್ಲ.

ಇಂದು ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಸಹ ಇದಕ್ಕೆ ಜವಬ್ದಾರಿ, ಇದು ಕೇವಲ ಉತ್ತಾರಖಂಡ್ ರಾಜ್ಯದ ಜವಬ್ದಾರಿಯಲ್ಲ ಜತೆಗೆ ಕೇಂದ್ರ ಸರ್ಕಾರದ ಜವಬ್ದಾರಿಯು ಸಹ ಇದೆ ಇದರಲ್ಲಿ.

ರಾಮ್ ದೇವ್ ಬಾಬಾ ದಾಖಾಲಾಗಿದ್ದ ಆಸ್ಪತ್ರೆ ಯಲ್ಲಿ ಇವರ ಬಗ್ಗೆ  ಮಾಧ್ಯಮ ವಾಗಲಿ, ರಾಜಕೀಯ ನೇತಾರರಾಗಲಿ ಹಾಗು ಸಂಧಾನಕ್ಕೆ ತೆರಳಿದ ಸ್ವಾಮಿಗಳು ಗಮನ ಸೆಳೆಯಲಿಲ್ಲ ವೆಂದರೆ ಇದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ.

ಅಕ್ರಮ ಗಣಿ(ಕಲ್ಲು)ಗಾರಿಕೆ  (ಹಿಮಾಲಯ ಸ್ಟೋನ್ ಕ್ರಶರ್) ಯಿಂದ ಆಗುತ್ತಿರುವ ಗಂಗಾನದಿ ಮಾಲಿನ್ಯ ದ ಕುರಿತು ಸರ್ಕಾರದ ಗಮನ ಸೆಳೆಯಲು ಸತ್ಯಾಗ್ರಹ ಕೊನೆ ಪಕ್ಷ ಪರಿಸರವಾದಿಗಳಿಗೆ ಸಹ ತಿಳಿದಿರಲಿಲ್ಲವೆಂದರೆ ಬಹಳ ಆಶ್ಚರ್ಯ ವಾಗುತ್ತಿದೆ.

ಈ ಮಧ್ಯೆ ಅವರ ಶಿಷ್ಯಂದಿರು ಸ್ವಾಮಿಜಿಗಳಿಗೆ ವಿಷ ಪ್ರಾಶನ ಮಾಡಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಯಾಗಿ ಸತ್ಯಾಂಶ ಹೊರಬಂದು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಯಾಗಬೇಕು.

ಒಳ್ಳೆಯ ಸಾಮಜಿಕ ಕಳಕಳಿ ಚಳುವಳಿಗೆ ಪ್ರಚಾರ ಸಿಗದೇ ಇದ್ದದು ಈ ದೇಶದ ಧೌರ್ಭಾಗ್ಯ.
ಏನೇ ಆಗಲಿ ಸಂಪೂರ್ಣ ಸತ್ಯ ಜಗತ್ತಿಗೆ ಗೊತ್ತಾಗಬೇಕು. ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವೊಬ್ಬ ರಾಜಕೀಯ ನಾಯಕನಾಗಲಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಲಿ ಇರಲಿಲ್ಲ ವೆಂದರೆ ಇದು ಇವರ ಸತ್ಯಾಗ್ರಹಕ್ಕೆ  ಮಾಧ್ಯಮ ಗಳು ಯಾವ ರೀತಿ ಪ್ರಚಾರ ಕೊಟ್ಟಿರಬಹುದು ಎಂದು ಗೊತ್ತಾಗುತ್ತೆ.
ಒಂದು ಒಳ್ಳೆಯ ಉದ್ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ಸ್ವಾಮಿಜಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವ.


1 ಕಾಮೆಂಟ್‌: