ಮಂಗಳವಾರ, ಜೂನ್ 7, 2011

ಟಿಪ್ಪುಸುಲ್ತಾನ್ ಜಯಂತಿಗೆ ಸಾರ್ವತ್ರಿಕ ರಜೆ ಶೀಘ್ರದಲ್ಲೆ ಸರಕಾರಿ ಪ್ರಕಟಣೆ ಹೊರಬೀಳುವ ನೀರಿಕ್ಷೆ.

ನೋಡೀ ಸಾ,........ ಗೋರ್ಮೆಂಟ್ ನೋರು ಇಲ್ಲೊಂದು ನಿರ್ಧಾರ ತಗಂಡು ಹೊಸದಾಗಿ ಇನ್ನೊಂದು ಹಾಲಿಡೆ ಸಾಂಕ್ಸನ್ ಮಾಡ್ತಾವ್ರೆ (ಇನ್ನೂ ಮಾಡಿಲ್ಲ). ಈಗಲೆ ೨೫ ದಿನ ರಜೆಗಳು ಅವೆ, ಆಮೇಲೆ ಎರಡನೇ ಸನಿವಾರ ಅಂತ ಹನ್ನೆಲ್ಡು ದಿನ ಎಕ್ಸ್ಟ್ರಾ, ಜತೆಗೆ ಯಾರಾದ್ರು ದೊಡ್ಡ ರಾಜಕಾರಣಿ ಸತ್ರೆ ಸೋಕಾಚರಣೆ ಅಂತ ಅದಕ್ಕೆ ಅಂತ ಒಂದೆಲ್ಡು ದಿನ. ಇಸ್ಟೊಂದು ರಜಾ ಕೊಟ್ಟು ಜನರನ್ನು ಮನೇಲಿ ಕೂಡಿಸಿದ್ರೆ ಯಾವ ರಾಜ್ಯ ಉದ್ದಾರ ಆಗ್ತದೆ ಸಾ?

ಮೊದಲೇ ಸರ್ಕಾರಿ ನೋಕ್ರಿ ಜನ ಸರ್ಯಾಗಿ ಕೆಲ್ಸ ಮಾಡಕಿಲ್ಲ ಅಂತ ಆಪಾದ್ನೆ ಬೇರೆ ಐತೆ, ಇವಾಗ ಇಂಗೆ ರಜಾ ಮೇಲೆ ರಜಾ ಕೊಟ್ರೆ ಎಂಗೆ ಸಿವಾ?

ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಾವ್ರೆ, ಅಂತದ್ರಾಗೆ ಅವರು ಹುಟ್ಟಿದ ದಿನಾನೆ ಜನರು ಕಾಯಕ ಮಾಡದಂಗೆ ರಜಾ ಗೋಸಣೆ ಮಾಡಿದ್ರಿ. ಪ್ರವಾದಿ ಮೊಹಮ್ಮದ್ ಪೈಗಂಬರ್ ಹುಟ್ಟಿದ ಈದ್ ಮಿಲಾದ್ ದಿವಸ ಸೌದಿ ಅರೇಬಿಯ ದೇಸದಾಗೆ ರಜಾನೆ ಕೊಡಾಕಿಲ್ಲ, ಅಂತದ್ರಲ್ಲಿ ಟಿಪ್ಪು ಸುಲ್ತಾನ್ ಹುಟ್ಟಿದ ದಿವಸ ಅಂತ ಹೊಸ ರಜಾ ಕೊಡೋಕೆ ಹೊಂಟವ್ರಲ್ಲ ಗುರುಗಳೇ?



ಮೊದಲೇ ಆವಯ್ಯನ ಮೇಲೆ ಏನೇನೋ ಆರೋಪಗಳು ಅವೆ, ಅವಯ್ಯ ಲಕ್ಸಾಂತರ ಜನಾನ ಮತಾಂತರ ಮಾಡಿದ್ರು ಅಂತ, ಆಡಳಿತದಲ್ಲಿ ಕನ್ನಡ ಬದಲು ಪಾರ್ಸಿ ಭಾಸೆನ ಉಪಯೋಗ್ಸಿದ್ರು ಅಂತ. ವಿಸ್ಯ ಹಿಂಗಿರಬೇಕಾದ್ರೆ ಅವರ ಹೆಸರಿನಾಗೆ ಒಂದು ಹೊಸ ರಜಾ ಬೇಕಾಗಿತ್ತ ಗುರುವೇ.

ಕನಕ ಜಯಂತಿಗೆ ವಾಲ್ಮಿಕಿ ಜಯಂತಿಗೆ ರಜಾ ಕೊಟ್ರಿ ಹಿಂಗೆ ಎಲ್ಲ ಜಯಂತಿ ಗಳಿಗೆ ರಜಾ ಕೊಡ್ತಾ ಹೋದ್ರೆ ಜನ ಸಾಮನ್ಯರ ದಿನನಿತ್ಯದ ಸರ್ಕಾರಿ ಕೆಲಸ ಕಾರ್ಯಗಳಿಗೆ ತೊಂದರೆ ಯಾಗಲ್ವ ಸಿವಾ!





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ