ಒಬ್ಬ ರಾಜಕೀಯ ನೇತಾರ ಅಥವ ಒಬ್ಬ ಸ್ವಾಮಿಜಿ ಯ ಕಾಮ ಕಾಂಡ ಏನಾದರು ಬಯಲಿಗೆ ಬಂತು ಅಂದರೆ ದಿನಾಲು ಟಿವಿನಲ್ಲಿ ಹಾಗು ಪೇಪರ್ ನಲ್ಲಿ ಸುದ್ದಿಯೋ ಸುದ್ದಿ. ಅದರಲ್ಲೂ ಇಂಗ್ಲೀಶ್ ಮೀಡಿಯಾ ಗಳಲ್ಲಿ ಅದರ ಅಬ್ಬರ ಹೇಳತೀರದು. ಆದರೆ ಒಬ್ಬ ಪಾದ್ರಿ ಅಥವ ಇನ್ಯಾರೋ ಒಬ್ಬ ಅಂಥವ ಚಟುವಟಿಕೆ ನಡೆಸಿದರೆ ಕೇವಲ ಆದಿನದ ಸುದ್ದಿ ಯಾಗಿ ಮರೆಯಾಗುತ್ತದೆ, ಅದರ ಬಗ್ಗೆ ಯಾವುದೇ ಚರ್ಚೆಯೇ ನಡೆಯಲ್ಲ.
ಫೋಕಸ್ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದರೆ, ಇಂತಹ ಕರ್ಮ ಕಾಂಡಗಳು ಬಯಲಿಗೆ ಬರೋದೆ ಇಲ್ಲ.
ವಿಚಾರವಾದಿಗಳು, ಸಮಾಜವಾದಿ ಮುಖಡರುಗಳು, ಬುದ್ದಿಜೀವಿಗಳು ಇಂತಹ ವಿಷಯಗಳ ಮೇಲೆ ಮಾತಾಡೋದೆ ಇಲ್ಲ. ಅಮಾಯಕ ಹೆಣ್ಣುಮಕ್ಕಳ ಬಾಳನ್ನು ಹಾಳು ಮಾಡಿದ ಇಂತಹವರ ವಿರುದ್ದ ಮಾತನಾಡಲು ಯಾರೂ ತಯಾರಾಗಿಲ್ಲ. ನಮ್ಮ ಮಾಧ್ಯಮಗಳಲ್ಲಿ ಸಹ ಒಬ್ಬ ಹಿಂದೂ ನೇತಾರ, ಮುಖಂಡ ಅಥವ ಸ್ವಾಮೀಜಿ ಯೊಬ್ಬನ ಪ್ರಕರಣ ಬಯಲಿಗೆ ಬಂದರೆ ವ್ಯಂಗ್ಯವಾಗಿ, ಚುಚ್ಚು ಮಾತುಗಳಿಂದ, ಹೀಯಾಳಿಸಿ ಮಾತನಾಡಿದ್ದೆ ಮಾತನಾಡಿದ್ದು. ಆದರೆ ಅನ್ಯ ಧರ್ಮೀಯರ ಬಗ್ಗೆ, ಕೇವಲ ಒಂದು ಸುದ್ದಿ ಪ್ರಸಾರ ವಾಗಿ ಮರೆಯಾಗಿ ಹೋಗುತ್ತೆ.
ಶಾಂತರಾಜು ಎನ್ನುವ ಕ್ರೈಸ್ತ ಧರ್ಮ ಪ್ರಚಾರಕನ ರಾಸಲೀಲೆಯ ವೀಡಿಯೋ ನೋಡಿದ ಮೇಲೆ, ಕಾಮಕ್ಕೆ ಧರ್ಮ, ನೈತಿಕತೆ, ಪವಿತ್ರತೆ ಇಲ್ಲ ಅಂತ ಸಾಬೀತಾಗುತ್ತೆ. ಇವನು ಅದೆಷ್ಟು ಜನರ ಮನೆ ದೀಪ ಆರಿಸಿದ್ದಾನೊ ಗೊತ್ತಿಲ್ಲ.
ಇವನ ಕಾಮಕಾಂಡ ಗಳಿಗೆ ಲೆಕ್ಕವೇಇಲ್ಲ. ಚರ್ಚ್ ಹಣವನ್ನು ದುರುಪಯೋಗ ಮಾಡಿದ್ದಲ್ಲದೆ, ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದಾರೆಂದು ಕ್ರೈಸ್ತ ಧರ್ಮ ಪ್ರಚಾರಕನ ಪತ್ನಿ ಗಂಗಮ್ಮನಗುಡಿ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನಲ್ಲಿ, ಅಪ್ರಾಪ್ತ ವಯಸ್ಕ ಹುಡುಗಿಯನ್ನು ವಂಚಿಸಿ, ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಈ ದೂರನ್ನು ಪುಷ್ಟೀಕರಿಸಲು ತನ್ನ ಬಳಿ ಛಾಯಾಚಿತ್ರಗಳಿವೆ ಎಂದು ದೂರನ್ನು ದಾಕಲಿಸಿದ್ದಾಳೆ. ಜಾಲಹಳ್ಳಿಯಲ್ಲಿರುವ ಬೆಥೆಲ್ ಚರ್ಚ್ ಮತ್ತು ಶಾಲೆಯಲ್ಲಿರುವ ಅಪ್ರಾಪ್ತ ವಯಸ್ಕ ಹುಡುಗಿಯರನ್ನು ಲೈಂಗಿಕವಾಗಿ ಶಾಂತರಾಜು ಬಳಸಿಕೊಳ್ಳುತ್ತಿದ್ದ ಎಂದು ಹೆಂಡತಿ ಆರೋಪಿಸಿದ್ದಾಳೆ. ಅಲ್ಲದೆ ಚರ್ಚ್ ಹಣವನ್ನು ಲೂಟಿ ಹೊಡೆಯುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ
ಬೆಥಲ್ ಚರ್ಚ್ ಪಾಸ್ಟರ್ ಶಾಂತರಾಜು ತುಮಕೂರು ರಸ್ತೆಯಲ್ಲಿರುವ ನಗರದ ಸಿದ್ದಾರ್ಥ ನಗರದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದಾನೆ. ಆದರೆ ಶಾಂತರಾಜು ಸಂಸ್ಥೆಯಲ್ಲಿನ ಅಪ್ರಾಪ್ತ ಬಾಲಕಿಯರನ್ನು ಮನೆಗೆ ಕರೆತಂದು ಕೌನ್ಸೆಲಿಂಗ್ ಹೆಸರಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುತ್ತಿರುವುದಾಗಿ ಪತ್ನಿ ಪ್ರಿಯಲತಾ ದೂರಿನಲ್ಲಿ ತಿಳಿಸಿದ್ದಾರೆ.
1995ರಲ್ಲಿ ಶಿಕ್ಷಣ ಸಂಸ್ಥೆ ಆರಂಭವಾಗಿದ್ದು, ಅದಕ್ಕೆ ಪಾಸ್ಟರ್ ಶಾಂತರಾಜು ಮುಖ್ಯಸ್ಥ. ಆದರೆ ಪತಿ ಹೆಣ್ಮಕ್ಕಳಿಗೆ ಆಮಿಷವೊಡ್ಡಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು. ಅದೂ ಅಲ್ಲದೇ ಹೆಣ್ಣು ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ. ಆಗ ನನ್ನ ಮತ್ತು ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕುತ್ತಿದ್ದ ಎಂದು ಅಲವತ್ತುಕೊಂಡಿರುವ ಪತ್ನಿ ಪ್ರಿಯಲತಾ, ಇದರಿಂದ ರೋಸಿ ಹೋಗಿ ತಾನು ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಶಾಂತರಾಜು ಮಾತ್ರವಲ್ಲ ಅವರ ಇತರ ಕುಟುಂಬದ ಸದಸ್ಯರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ, ರಾಜಕೀಯ ಪ್ರಭಾವವನ್ನು ಬಳಸಿ ಹಗರಣಗಳನ್ನು ಮುಚ್ಚಿಹಾಕುತ್ತಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಶಾಂತರಾಜು ಮತ್ತು ಪ್ರಿಯಲತಾ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಕೆಲ ಯುವತಿಯರನ್ನು ಪಾದ್ರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಇದಕ್ಕೂ ಮೊದಲು 18 ವರ್ಷದ ಯುವತಿಯೊಬ್ಬಳು ಆರೋಪಿಸಿದ್ದಳು. ಯುವತಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಅವರ ಅನುಮತಿಯಿಲ್ಲದೆ ಫೋಟೋ ತೆಗೆದು ಅಶ್ಲೀಲವಾಗಿ ತಿರುಚುತ್ತಿದ್ದ ವಿಕೃತ ಮನುಷ್ಯ ಎಂದು ಆರೋಪಿಸಿದ್ದಳು.
ಗಂಡನ ಈ ನಡವಳಿಕೆಯಿಂದ ರೋಸಿ ಹೋಗಿ ಸಾಕಷ್ಟು ರಂಪಾಟ ನಡೆದಿತ್ತು. ಆಗ 2000ನೇ ಇಸವಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು ಆದರೆ ಶಾಂತರಾಜು ವಿಚ್ಛೇದನಕ್ಕೆ ಒಪ್ಪದೆ, ಕೊನೆಗೆ ತಾನು ಇನ್ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕೋರ್ಟ್‌ನಲ್ಲಿ ಬರೆದುಕೊಟ್ಟು ರಾಜಿಯಾಗಿದ್ದ. ಆ ಬಳಿಕ 2010ರಲ್ಲಿ ಕೆಲ ಕಾಲ ಸುಮ್ಮನಿದ್ದ ಪತಿ, ನಂತರ ಮತ್ತೆ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳನ್ನು ಮನೆಗೆ ಕರೆದು ತಂದು ಎರಡು ಗಂಟೆಗಳ ಕಾಲ ಕೋಣೆಯೊಳಗೆ ಇರುತ್ತಿದ್ದರು. ಇದನ್ನು ಪ್ರತಿಭಟಿಸಿದ್ದಕ್ಕೆ ತನಗೂ ಮತ್ತು ಮಕ್ಕಳಿಗೆ ಹೊಡೆದು ಮನೆಯಿಂದ ಹೊರಹಾಕಿರುವುದಾಗಿ ಪ್ರಿಯಲತಾ ಆರೋಪಿಸಿದ್ದಾರೆ.
ಹದಿನಾರು ವರ್ಷದ ಹುಡುಗಿ ಈತನ ಕಾಮಕಾಂಡದಿಂದಾಗಿ ಗರ್ಭಪಾತ ಕೂಡ ಮಾಡಿಕೊಂಡಿದ್ದಳು ಎಂದು ಪ್ರಿಯಲತಾ ದೂರಿದ್ದಾಳೆ. ಇದನ್ನು ಪ್ರಶ್ನಿಸಿದಾಗ, ಯಾರಿಗಾದರೂ ತಿಳಿಸಿದರೆ ಮಕ್ಕಳು ಮತ್ತು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿಲಾಗಿದೆ
ಅಪ್ರಾಪ್ತೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಮತ್ತು ಚರ್ಚ್ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪವನ್ನು ಹೊತ್ತಿರುವ ಪಾದ್ರಿ ಶಾಂತರಾಜುವನ್ನು ಗಂಗಮ್ಮನಗುಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ರಾಜಕಾರಣಿಗಳ ಒತ್ತಡ ಹಾಗು ಕಾಣದ ಕೈಗಳ ಕೈವಾಡ ಗಳಿಂದ ಇಂತಹ ರಾದ್ದಾಂತ ಗಳು ಗುಪ್ತ್ ಗುಪ್ತ್ ಆಗಿ ಮುಚ್ಚಿ ಹೋಗಿ ಬಿಡುತ್ತೆ.
ಇನ್ನು ಬರ್ನಾಡ್ ಮೊರಸ್ ಏನು ಹೇಳಿಲ್ಲ ಹಾಗು ಹೇಳೋದು ಇಲ್ಲ ಅಂತ ಅನ್ನಿಸುತ್ತೆ. ಅಮಾಯಕ ಹೆಣ್ಣು ಮಕ್ಕಳು ಈ ಮಹಾಶಯನ ಕಣ್ಣಿಗೆ ಬೀಳಲ್ವೇನೋ?