ಸೋಮವಾರ, ಆಗಸ್ಟ್ 1, 2011

ಮನೆಗೆ ಬೆಂಕಿ ಬಿದ್ರೆ ಅದ್ರಲ್ಲಿ ಬೀಡಿ ಹಚ್ಚೋ ಜನ

ಇಬ್ಬರ ಮಧ್ಯೆ ಜಗಳ ತಂದಿಟ್ಟು ಮಜಾ ತಗೋಳ್ಳೋದು ಅಂದ್ರೆ ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.
ವಿನಾ ಕಾರಣ ವಾದ ವಾಗ್ವಾದ ಗಳಿಗೆ ಆಸ್ಪದ ಮಾಡಿ ಕೊಟ್ಟು ಮಜಾ ತಗೊಳ್ತಿದ್ದಾರೆ ನಮ್ಮ ಸುವರ್ಣ ನ್ಯೂಸ್ ನ ಮಂದಿ.



11 ಕಾಮೆಂಟ್‌ಗಳು:

  1. ಸಾರ್ ನಿನ್ನೆ ಸುವರ್ಣ ನ್ಯೂಸ್ ನೋಡ್ತಾ ಇದ್ದೆ.. ಭಾರಧ್ವಾಜ್ ವಿ.ಸೋಮಣ್ಣ,ಯತ್ನಾಳ್ ಇಬ್ಬರಿಗೂ ಜಗಳ ಹಚ್ಚಿ ಸುಮ್ಮನೆ ಕೂತು ಮಜಾ ತಗೊಂಡು ನಂತರ ಹಿರಿಯರು ಹೀಗೆಲ್ಲಾ ಮಾತಾಡಬಾರದು ಎನ್ನಬೇಕೇ...? ಮಾತು ವಿಕೋಪಕ್ಕೆ ಹೋದ ತಕ್ಷಣ ಫೋನ್ ಕಟ್ ಮಾಡಬಹುದಿತ್ತು....


    ಪತ್ರೇಶ್ ಹಿರೇಮಠ್
    ಹಗರಿಬೊಮ್ಮನಹಳ್ಳಿ
    ಬಳ್ಳಾರಿ

    ಪ್ರತ್ಯುತ್ತರಅಳಿಸಿ
  2. ನಿಮ್ಮ ಮಾತು ನಿಜ ಹಿರೇಮಠ್ ರವರೆ. ಅವರು ಫೋನ್ ಕಟ್ ಮಾಡಬಹುದಿತ್ತು. ಆದರೆ ಅವರಿಗೆ ಬೇಕಿದ್ದಿದ್ದೆ ಇಂತಹ ಪ್ರಸಂಗ ಗಳು. ಯಾಕೆಂದರೆ ಅವರ TRP Rating ಇಂತಹವುಗಳಿಂದ ಜಾಸ್ತಿ ಯಾಗುತ್ತೆ. ರಂಗನಾಥ್ ಭಾರಧ್ವಜ್ ನಡೆಸಿಕೊಡುವ ಇನ್ನೊಂದು ಕಾರ್ಯಕ್ರಮ ಮೆಗಾ ಫೈಟ್ ನಲ್ಲಿ ಸಹ ಇಂತಹ ಅವಕಾಶ ಗಳಿಗೆ ಜಾಸ್ತಿ ಆಸ್ಪದ ಮಾಡಿಕೊಡುತ್ತಾರೆ.
    ಇಂತಹ ಹೊಲಸು ಮನಸ್ಸಿನ ಜನರಿಂದ ನೈತಿಕ ಪಾಠ ದ ಬಗ್ಗೆ ಪ್ರವಚನ. ಧಿಕ್ಕಾರ ವಿರಲಿ ಇಂತಹವರಿಗೆ

    ಪ್ರತ್ಯುತ್ತರಅಳಿಸಿ
  3. ನಿಮ್ಮ ಮಾತು ನಿಜ ಹಿರೇಮಠ್ ರವರೆ. ಅವರು ಫೋನ್ ಕಟ್ ಮಾಡಬಹುದಿತ್ತು. ಆದರೆ ಅವರಿಗೆ ಬೇಕಿದ್ದಿದ್ದೆ ಇಂತಹ ಪ್ರಸಂಗ ಗಳು. ಯಾಕೆಂದರೆ ಅವರ TRP Rating ಇಂತಹವುಗಳಿಂದ ಜಾಸ್ತಿ ಯಾಗುತ್ತೆ. ರಂಗನಾಥ್ ಭಾರಧ್ವಜ್ ನಡೆಸಿಕೊಡುವ ಇನ್ನೊಂದು ಕಾರ್ಯಕ್ರಮ ಮೆಗಾ ಫೈಟ್ ನಲ್ಲಿ ಸಹ ಇಂತಹ ಅವಕಾಶ ಗಳಿಗೆ ಜಾಸ್ತಿ ಆಸ್ಪದ ಮಾಡಿಕೊಡುತ್ತಾರೆ.
    ಇಂತಹ ಹೊಲಸು ಮನಸ್ಸಿನ ಜನರಿಂದ ನೈತಿಕ ಪಾಠ ದ ಬಗ್ಗೆ ಪ್ರವಚನ. ಧಿಕ್ಕಾರ ವಿರಲಿ ಇಂತಹವರಿಗೆ

    ಪ್ರತ್ಯುತ್ತರಅಳಿಸಿ
  4. ಪತ್ರೇಶ್ ಹಿರೇಮಠ ರವರೆ ತಿಳಿಸಲಿ ಬಿಡಿ . ಒಳ್ಳೇದನ್ನೇ ಮಾಡಿದ್ದಾರೆ ಭಾರದ್ವಾಜ್ ರವರು ಅವರೇನು ಮಜಾ ತಗೊತ್ತಿರಲಿಲ್ಲ . ಇವರು ಮಂತ್ರಿಗಳಾಗಿ ಇಡಿ ಕರ್ನಾಟಕದ ಜನತೆ ನೋಡುತ್ತಿದೆ ಎನ್ನುವ ಪ್ರಜ್ಞೆ ಅವರಿಗಿರಬೇಕು ರೀ ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ. ಇವರೆಸ್ಟು ಕೆಟ್ಟವರು ಎಂದು ನೋಡ್ರಿ ಒಬ್ಬ ಮಂತ್ರಿ ಮಾತಾಡುವ ಮಾತೆನ್ರಿ ಅದು , ಅಲ್ಲ ರೀ ಒಬ್ಬ ರಾಜಕೀಯ ದುರಿಣರು ಅವರ ಜೋತೆ ಈ ತರ ಮಾತಾಡುತ್ತಾರೆ ಅಂದ್ರೆ ಸಾಮಾನ್ಯ ಜನರ ಗತಿ ಏನ್ರಿ , ಸೋಮಣ್ಣ ಪಕ್ಷ ಸೇರಿ ಎಷ್ಟು ವರ್ಷ ವಾಯಿತು . ಏನ್ರಿ ಆ ಕೆಟ್ಟ ಮಾತು ನಿಮಗೇನು ಮೈ ಹುರಿಯೋದಿಲ್ಲವೆನ್ರಿ ಇಂತಾ ಕೆಟ್ಟ ಮಾತು ನನ್ನ ಮಗನೆ , ಲೋಪರ್ .ಸಾಟ .ಇದನ್ನೇ ಹೆನ್ರಿ ಹೇಳಿಕೊಟ್ಟಿರೋದು , ಇದಕ್ಕೆ ನಾವು ನೀವೆಲ್ಲರೂ ದಂಗೆ ಹೇಳಬೇಕು .ಆಗಲೇ ಬುದ್ದಿ ಕಲಿತಾರೆ

    ಪ್ರತ್ಯುತ್ತರಅಳಿಸಿ
  5. ರಾಮಕೃಷ್ಣ ರವರೆ,
    ಆಡುವ ಮಾತುಗಳು ಅತಿರೇಕಕ್ಕೆ ತಲುಪಿದಾಗ ತಕ್ಷಣ ಫೋನ್ ಕಟ್ ಮಾಡಬಹುದಿತ್ತು... ಅದರೆ ಅವರಿಗೆ ಬೇಕಿದ್ದಿದ್ದೆ ಇಂತಹ ಪ್ರಸಂಗ ಗಳು.
    ಏನೆ ಆಗಲಿ ಇದು ಮಾಧ್ಯಮದ ಸಭ್ಯತೆಯ ಲಕ್ಷಣವಲ್ಲ. ನಿಯಂತ್ರಣ ಅವರ ಕೈಯಲ್ಲಿ ಇರುವಾಗ ಯಾವುದು ಬೇಕೋ ಯಾವುದು ಬೇಡ ಎಂದು ನಿರ್ಧರಿಸಿ ನಿಯಂತ್ರಿಸಬಹುದಿತ್ತು. ಆದರೆ ಅವರಿಗೆ ಈ ತರಹದ ಹೆಚ್ಚಿನ ವಿಸ್ಯೂಯಲ್ಸ್ ಬೇಕಾಗಿತ್ತು ಅದಕ್ಕೆ ನಿಯಂತ್ರಿಸದೆ ಹೋದರು.
    ಇನ್ನು ಸೋಮಣ್ಣ ಅಥವ ಯತ್ನಾಳ್ ಬಗ್ಗೆ, ಇವರ ಹಣೆಬರಹವನ್ನು ಆಗಲೆ ಜನ ಚುನಾವಣೆಯಲ್ಲಿ ನಿರ್ಧಾರ ಮಾಡಿಯಾಗಿದೆ. ಇಂತಹ ಪ್ರಸಂಗಗಳಿಂದ ರಾಜಕೀಯದಲ್ಲಿ ಮೂಲೆ ಗುಂಪಾಗುವುದು ನಿಶ್ಚಿತ.

    ಪ್ರತ್ಯುತ್ತರಅಳಿಸಿ
  6. ರವಿಯವರೆ,

    ತಮ್ಮದೆ ಪ್ರತಿಕ್ರಿಯೆ ನೀಡಿದ್ದಿದ್ದರೆ ಚೆನ್ನಾಗಿರುತಿತ್ತು.
    ಆದರೆ ತಾವುಗಳು ನನ್ನ ಮಾತುಗಳನ್ನೆ ಪುನರುಚ್ಚರಿಸಿದ್ದೀರಿ.
    ಅಡ್ಡಿಯಿಲ್ಲ....

    ಪ್ರತ್ಯುತ್ತರಅಳಿಸಿ
  7. Shri J.H. Patel during Miss World contest in Namma Bengaluru - "If women want to [expose] themselves, let them. Let those who want to see, see.” Similarly, if two leaders want to honor each other in Public, what any media can do?

    ಪ್ರತ್ಯುತ್ತರಅಳಿಸಿ
  8. ಇವರದು ಅತಿಯಾಯಿತು ಕಣ್ರಿ ಕ್ಯಾಮೆರ ಮುಂದೆ ನಿಂತರೆ ಒಳ್ಳೆ ಕರೆಂಟು ಹೊಡೆದವರ ತರಹ ಮಾತಾಡುತ್ತಾರೆ, ಆಡಿದ ಮಾತನ್ನೇ ಹತ್ತು ಸಾರಿ ಆಡಿ ತಲೆ ಚಿಟ್ಟಿಡಿಸುತ್ತಾರೆ, ತಾವೇ ಸಂವಿಧಾನವನ್ನು ಅರೆದು ಕುಡಿದವರ ಹಾಗೆ ಕನವರಿಸುತ್ತಾರೆ, ವಯಸ್ಸಿನ ಪರಿವೇ ಇಲ್ಲದೆ ಹಿರಿಯರನ್ನೆಲ್ಲ ಏಕವಚನದಲ್ಲಿ ಸಂಭಾಳಿಸುತ್ತಾರೆ, ಅಪರಾಧ ಸಾಬೀತಾಗುವ ಮೊದಲೇ ಅಪರಾಧಿಯಂತೆ ಬಿಂಬಿಸಿ ಅಮಾಯಕರ ತೇಜೋವದೆ ಮಾಡಿ ಸಮಾಜದಲ್ಲಿ ಅವರ ಆತ್ಮಾಬಿಮಾನಕ್ಕೆ ಧಕ್ಕೆ ತರುತ್ತಾರೆ, ಒಬ್ಬ ಮುಖ್ಯಮಂತ್ರಿಯನ್ನು ಹೇಗೆ ಸಂಭೋದಿಸಬೇಕೆನ್ನುವ ಕಾಮನ್ ಸೆನ್ಸ್ ಇಲ್ಲದ ಇವರು ಉತ್ತಮ ಸಮಾಜಕ್ಕಾಗಿ ನಾವು ಎಂದು ಬೊಗಳೆ ಬಿಡುತ್ತಾರೆ, ದಿಕ್ಕಾರವಿರಲಿ ಇಂತವರಿಗೆ.

    ಪ್ರತ್ಯುತ್ತರಅಳಿಸಿ
  9. THIS VIDE0 HAS BOTH GOOD AND BAD THINGS
    GOOD THING IS THE MEDIA SHOWED THE ORIGINALITY OF OUR LEADERS TONG
    BAD THING IS THEY WERE SUPPOSE TO WARN BOTH THE LEADERS ABOUT WHAT THEY SHOULD NOT SPEAK

    ಪ್ರತ್ಯುತ್ತರಅಳಿಸಿ
  10. hi sir
    i use to write songs when i was studying after finishing my P G i dropped writing few days back i got some of them .
    if you are going to publish them in this site i will send them
    please reply me

    ಪ್ರತ್ಯುತ್ತರಅಳಿಸಿ