ಇಂದು ಬೆಳಗ್ಗೆ ಗಾಂಧಿವಾದಿ ಅಣ್ಣಾ ಹಜಾರೆ ಜೆಪಿ ಪಾರ್ಕ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಆದರೆ ದೆಹಲಿ ಪೊಲೀಸ್ ನಿರಶನ ಆರಂಭಕ್ಕೂ ಮುನ್ನ ಅಣ್ಣಾ ಅವರನ್ನು ಬಂಧಿಸಿದ್ದಾರೆ. ಜತೆಯಲ್ಲಿ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾ ಹಜಾರೆ ತಂಡದ ಸದಸ್ಯೆ ಕಿರಣ್ ಬೇಡಿ, ಶಾಂತಿ ಭೂಷಣ್, ಅರವಿಂದ್ ಕೇಜ್ರಿವಾಲ್ ಹಾಗು ನೂರಾರು ಕಾರ್ಯಕರ್ತರನ್ನು ಕೂಡಾ ಬಂಧಿಸಲಾಗಿದೆ.
ಕೆಲ ಕೇಂದ್ರ ಮಂತ್ರಿಗಳು, ಕಾಂಗ್ರೆಸ್ಸಿನ ಅಧಿಕೃತ ವಕ್ತಾರರು ಹಾಗು ಪ್ರಧಾನ ಕಾರ್ಯದರ್ಶಿಗಳು ಹೇಗೆಗೆಲ್ಲ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ನಾವೆಲ್ಲ ಗಮನಿಸಿದ್ದೇವೆ. ಮೊದಲಿನೊಂದಲೂ ಸತ್ಯಾಗ್ರಹವನ್ನು ಹತ್ತಿಕ್ಕಲು ಷಡ್ಯಂತ್ರ ನಡೆಯುತಿತ್ತು. ಇಂದು ಆರಂಭವಾಗುವ ಮುನ್ನವೇ ಬಂಧಿಸಿರುವುದು ನಮ್ಮೆಲ್ಲರ ಆಕೋಶಕ್ಕೆ ಗುರಿಯಾಗಿದ್ದಾರೆ. ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಸಂತೋಷ ಪಟ್ಟಿದ್ದೆವು, ಆದರೆ ಇಂದಿನ ಘಟನೆ ಆ ಸಂತೋಷವನ್ನು ಕಿತ್ತು ಕೊಂಡಿದೆ.
ಬ್ರಿಟೀಷರ ದಾಸ್ಯದಿಂದ ಹೊರಬರಲು ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದ್ದರು ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಲಭ್ಯವಾಗದ ಹಾಗೆ ಮಾಡಿ ಕೇವಲ ಕಾಂಗ್ರೆಸ್ಸಿನ ಕೆಲ ಮುಖಂಡರುಗಳಿಗೆ ಜೈಕಾರ ಹಾಕುವ ರೀತಿಯಲ್ಲಿ ಪಠ್ಯ ಪುಸ್ತಕವನ್ನು ರೂಪಿಸಿ ಜನರನ್ನು ದಾರಿತಪ್ಪಿಸಿದ್ದೇ ಅಲ್ಲದೆ ಅಧಿಕಾರ ಮದದಿಂದ ಭ್ರಷ್ಟಚಾರ ದಲ್ಲಿ ತೊಡಗಿರುವ ಪ್ರತಿಯೊಬ್ಬರನ್ನು ಮಟ್ಟ ಹಾಕಲು ಪ್ರಬಲವಾದ ಕಾನೂನನ್ನು ರೂಪಿಸಬೇಕು ಎಂದು ಹೋರಾಡುತ್ತಿರುವ ಅಣ್ಣಾ ಹಜಾರೆ ಯ ಸತ್ಯಾಗ್ರಹವನ್ನು ಹತ್ತಿಕ್ಕುವುದಕ್ಕೆ ಶ್ರಮಿಸುತ್ತಿರುವ ಇವರಿಗೆ ಏನನ್ನಬೇಕು.?
ಧಿಕ್ಕಾರವಿರಲಿ ಇಂತಹಜನರಿಗೆ.
ದಯಮಾಡಿ ಯಾರು ಜಾತಿ, ಧರ್ಮ, ಪಕ್ಷನಿಷ್ಟೆ ಹಾಗೂ ವ್ಯಕ್ತಿ ನಿಷ್ಟೆಗೆ ಬಲಿಯಾಗದೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೇ ಪಕ್ಷ ಹಾಗು ವ್ಯಕ್ತಿಗಳಿಗೆ ಚುನಾವಣೆಗಳಲ್ಲಿ ಸರಿಯಾದ ಪಾಠಕಲಿಸಬೇಕು.
ಏನಂತೀರಾ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ