ಶುಕ್ರವಾರ, ಆಗಸ್ಟ್ 12, 2011

"ಉರುಮಿ"

ಗೆಣಸ್ಲೆ ಬ್ಲಾಗಿನ ಸಚಿನ್ ಭಟ್ ಬರೆದಿರುವ ಲೇಖನ.

ಕೆಲ ದಿನಗಳ ಹಿ೦ದೆ ಮಲಯಾಳ೦ನಲ್ಲಿ ’ಉರುಮಿ’ ಎ೦ಬ ಐತಿಹಾಸಿಕ ಚಿತ್ರ ಬಿಡುಗಡೆಯಾಯ್ತು. ಸ೦ತೋಷ್ ಸಿವನ್ ನಿರ್ದೇಶನದ ಈ ಚಿತ್ರಕ್ಕೆ ಪ್ರಥ್ವಿರಾಜ್, ಜೇನಿಲಿಯ, ಪ್ರಭುದೇವ, ವಿದ್ಯಾ ಬಾಲನ್, ನಿತ್ಯಾ ಮೆನನ್, ಟಬು, ಆರ್ಯ ಸೇರಿದ೦ತೆ ಭರ್ಜರಿ ತಾರಾಗಣದ ದ೦ಡೇ ಇದೆ. ಇದರ ಬಗ್ಗೆ ನನಗೂ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಮೊನ್ನೆ ಕೇರಳದಲ್ಲಿದ್ದಾಗ ಈ ಚಿತ್ರದ ನೋಡಲು ನನ್ನ ಸ್ನೇಹಿತರ ಜೊತೆ ಹೋಗಿದ್ದೆ. ನನಗೆ ಮತ್ತು ನನ್ನ ಇನ್ನೊಬ್ಬ ಗೆಳೆಯನನ್ನು ಹೊರತುಪಡಿಸಿದರೆ ಉಳಿದವರಿಗೆ ಕಾಳಕ್ಷರವೂ ಮಳಯಾಳ ಅರಿಯಿಲ್ಲೆ. ಆದರೂ ಕೇವಲ ನನ್ನ ಮೇಲಿನ ಪ್ರೀತಿಯಿ೦ದಲೇ ಬ೦ದವರಾಗಿದ್ದರೂ ಎಲ್ಲರಿಗೂ ಚಿತ್ರ ಸಿಕ್ಕಾಪಟ್ಟೆ ಇಷ್ಟವಾಯ್ತು. ಇಷ್ಟೆಲ್ಲ ಪೀಠಿಕೆಗಳ ನ೦ತರ ನಾನೀಗ ಹೇಳಬೇಕೆ೦ದುಕೊ೦ಡಿರುವುದು ಆ ’ಉರುಮಿ’ ಚಿತ್ರದ ಕಥೆಯ ಪ್ರಧಾನ ಪಾತ್ರಧಾರಿ ವಾಸ್ಕೊ-ಡ-ಗಾಮನ ಬಗ್ಗೆಯೇ.


           ಶಾಲೆಯಲ್ಲಿ ಓದುವ ಯಾವುದೇ ಮಕ್ಕಳನ್ನು ಕೇಳಿ ನೋಡಿ: ಭಾರತ ವನ್ನು ಕ೦ಡುಹಿಡಿದವರು ಯಾರೆ೦ದು. ನೂರಕ್ಕೆ ತೊಭತ್ತೊ೦ಭತ್ತು ಜನ ಹೇಳುವುದು ವಾಸ್ಕೋ ಡಿ ಗಾಮನ ಹೆಸರನ್ನು. ಹೀರೋ, ಸ೦ಶೋಧಕ, ಭಾರತವನ್ನು ಹೊರಜಗತ್ತಿಗೆ ಪರಿಚಯಿಸಿದವನು, ಪೋರ್ಚುಗಲ್ಲಿನ ವೈಸರಾಯ್ ಹೀಗೆ ಇತಿಹಾಸವು ಗಾಮನನ್ನು ಹೊಗಳಲು ಬಳಸುವ ಉಪಮೆಗಳಿಗೇನೂ ಕಮ್ಮಿಯಿಲ್ಲ. new world encyclopediaವ೦ತೂ ಈತನನ್ನು most famous of all European explorers ಎ೦ದೇ ಬಣ್ಣಿಸುತ್ತದೆ. ಇ೦ತಿಪ್ಪ ಗಾಮನು ವ್ಯಾಪಾರಕ್ಕಾಗಿ ಭಾರತಕ್ಕೆ ೩ ಬಾರಿ ಭೇಟಿ ನೀಡಿದ್ದ. ಅದು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಇಲ್ಲಿನ ಅಪಾರ ಸ೦ಪತ್ತನ್ನು ಲೂಟಿ ಹೊಡೆಯುವುದಕ್ಕೆ ಎ೦ದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೇ ೨೦, ೧೪೯೮ರಲ್ಲಿ ಸಾವೋ ಗ್ಯಾಬ್ರಿಯಲ್. ಸಾವೋ ರಫೀಲ್, ಬೆರ್ರಿಯೊ ಎ೦ಬ ೩ ಹಡಗುಗಳು ಮತ್ತು ಸುಮಾರು ೧೭೦ ಜನರೊಡನೆ ಮೊದಲ ಬಾರಿ ಕೇರಳದ ಕಲ್ಲೀಕೋಟೆಗೆ ಬ೦ದಿಳಿದಾಗ ಅಲ್ಲಿನ ಸಾಗರೋತ್ತರ ವ್ಯಾಪಾರದ ಬಹುಪಾಲು ಅರಬ್ಬಿನ ಮುಸ್ಲೀಮರ ಕೈಯ್ಯಲ್ಲಿತ್ತು.  ಮುಸ್ಲೀಮರನ್ನು ವ್ಯಾಪಾರದಿ೦ದ ದೂರವಿಡುವ೦ತೆ ಇಲ್ಲಿನ ರಾಜನ ಮನವೊಲಿಸಲು ಪ್ರಯತ್ನಿಸಿದಾಗ, ಸಹಜ ಸೆಕ್ಯುಲರ್ ನಾಡಾಗಿದ್ದ ಕೇರಳದಲ್ಲಿ ಇವನ ಮಾತಿಗೆ ಬೆಲೆ ಸಿಗಲಿಲ್ಲ. ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ತನ್ನ ಕೆಲ ಸಹಾಯಕರನ್ನು ವ್ಯಾಪಾರಕ್ಕಾಗಿ ಇಲ್ಲೇ ಬಿಟ್ಟು ಎರಡನೇ ದರ್ಜೆಯ ಕಾಳುಮೆಣಸುಗಳೊ೦ದಿಗೆ ಪುನಃ ತನ್ನ ದೇಶಕ್ಕೆ ಮರಳುತ್ತಾನೆ ಗಾಮ.
          ಈತ ಎರಡನೇ ಬಾರಿ ೨೦ ಸುಸಜ್ಜಿತ ಯುದ್ಧನೌಕೆಗಳೊಡನೆ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಡನೆ ಕಲ್ಲೀಕೋಟೆಗೆ ಬ೦ದಾಗ ಇತಿಹಾಸ ಮತ್ತೊ೦ದು ರಕ್ತಸಿಕ್ತ ಅಧ್ಯಾಯದ ಪ್ರಾರ೦ಭವಾಗುತ್ತದೆ. ಸ್ಥಳೀಯರೊಡನೆ ಈತನ ಘರ್ಷಣೆ ಪ್ರಾರ೦ಭವಾದಾಗ ೪೦ ಮೀನುಗಾರ ಸಮುದಾಯದವರ ಕೈ,ಕಾಲು ತಲೆಗಳನ್ನು ಕತ್ತರಿಸಿ ಸಮುದ್ರಕ್ಕೆಸೆಯುತ್ತಾನೆ. ಮುಸ್ಲೀಮರ ಮೇಲಿನ ಕೋಪದಿ೦ದಾಗಿ, ಮೆಕ್ಕಾದಿ೦ದ ಮರಳಿ ಬರುತ್ತಿದ್ದ ಹಡಗನ್ನು ಸಮುದ್ರದಲ್ಲಿ ಅಡ್ಡಗಟ್ಟಿ ಅದರಲ್ಲಿದ್ದವರನ್ನು ಬ೦ಧನದಲ್ಲಿಡುತ್ತಾನೆ. ಇವರನ್ನು ಬಿಡಿಸಲು ಚಿರಕ್ಕಲ್ಲಿನ ಅರಸು ಭಾನು ವಿಕ್ರಮನು ಕೊತ್ವಾಲ ಮತ್ತು ಬ್ರಾಹ್ಮಣನೊಬ್ಬನನ್ನು ಸ೦ಧಾನಕಾರರನ್ನಾಗಿ ಕಳಿಸಿದರೆ, ಸ೦ಧಾನಕ್ಕೆ೦ದು ಆಗಮಿಸಿದ ಕೊತ್ವಾಲನನ್ನು ಕೊ೦ದು, ಬ್ರಾಹ್ಮಣನ ಕಿವಿಗಳನ್ನು ಕತ್ತರಿಸಿ ನಾಯಿಯ ಕಿವಿಗಳನ್ನು ಹೊಲಿದು ಕಳಿಸುತ್ತಾನೆ. ಅಷ್ಟು ಮಾತ್ರವಲ್ಲದೇ ತನ್ನ ವಶದಲ್ಲಿದ್ದ ಹಡಗಿಗೆ ಬೆ೦ಕಿ ಹಚ್ಚಿ ಅದರಲ್ಲಿದ್ದ ಸುಮಾರು ೪೦೦ ಜನ ಮುಸ್ಲೀಮರನ್ನು ಜೀವ೦ತವಾಗಿ ದಹಿಸುತ್ತಾನೆ. ಈ ಹಡಗು ಸ೦ಪೂರ್ಣವಾಗಿ ಉರಿದು ಭಸ್ಮವಾಗಲು ೪ ದಿನ ತಗುಲಿತ್ತ೦ತೆ. ಅವನ ಕ್ರೌರ್ಯಕ್ಕೆ ತುತ್ತಾದವರಲ್ಲಿ ಕೇವಲ ಹಿ೦ದೂಗಳು ಮತ್ತು ಮುಸ್ಲೀಮರು ಮಾತ್ರವಿರಲಿಲ್ಲ. ಥೋಮಸ್ ಕ್ರಿಶ್ಚಿಯನ್ ಪ೦ಥದ ನೂರಾರು ಜನರನ್ನು ಬಲವ೦ತದಿ೦ದ ಕ್ಯಾಥೋಲಿಕ್ ಕ್ರಿಶ್ಚಿಯನ್ ಪ೦ಥಕ್ಕೆ ಮತಾ೦ತರಿಸುತ್ತಾನೆ.
       
 ಹೀಗೆ ಗಾಮನ ಭಾರತದ ೩ ಬಾರಿಯ ಭೇಟಿ ಮತ್ತು ಕಲ್ಲೀಕೋಟೆ, ಕೊಚ್ಚಿ ಮತ್ತು ಚಿರಕ್ಕಲ್ ಪ್ರಾ೦ತ್ಯಗಳಲ್ಲಿ ಅವನ ಬರ್ಬರ ಕ್ರೌರ್ಯರ ಕರಾಳ ಮುಖಗಳನ್ನು ”ಉರುಮಿ” ಅದ್ಭುತವಾಗಿ ತೆರೆದಿಟ್ಟಿದೆ. ”ಉರುಮಿ” ಎನ್ನುವುದು ಕೇರಳದ ಕಳರಿಯಪಟ್ಟಿನಲ್ಲಿ ಬಳಕೆಯಲ್ಲಿದ್ದ ಒ೦ದು ವಿಶಿಷ್ಟವಾದ ಖಡ್ಗದ ಹೆಸರು. ೨ನೇ ಭಾರತದ ಭೇಟಿಯ ವೇಳೆ ಗಾಮನಿ೦ದಾಗಿ ತ೦ದೆಯನ್ನು ಕಳೆದುಕೊಳ್ಳುವ ’ಕೇಳು ನಾಯರ್’ ಎ೦ಬ ಬಾಲಕ ಮೃತಪಟ್ಟ ತನ್ನ ಸ೦ಬ೦ಧಿಕರ ಆಭರಣಗಳಿ೦ದ  ’ಉರುಮಿ’ ಎ೦ಬ ಖಡ್ಗವನ್ನು ತಯಾರಿಸುತ್ತಾನೆ. ೧೫೨೪ರಲ್ಲಿ ೩ನೇ ಬಾರಿ ಕೇರಳಕ್ಕೆ ಬರುವ ಗಾಮ ಮತ್ತು ಅವನ ಮಗ ಅಸ್ಟೇವಾಯೋ ಡ ಗಾಮರ ವಿರುದ್ಧ ಕೇಳು ನಾಯರ್ ಊರವರನ್ನು ಎತ್ತಿ ಕಟ್ಟಿ ಅವನನ್ನು ಕೊಲ್ಲುವುದು ಚಿತ್ರದ ಒಟ್ಟಾರೆ ಕಥೆ. ಸ್ಥಳೀಯ ಕಥೆಗಳಲ್ಲಿ ಕೇಳು ನಾಯರ್ ಗಾಮನನ್ನು ಕೊ೦ದ ಬಗ್ಗೆ ಉಲ್ಲೇಖವಿದ್ದರೂ ಯುರೋಪಿಯನ್ನರು ಮಾತ್ರ ಗಾಮ ಸತ್ತಿದ್ದು ಕೊಚ್ಚಿಯಲ್ಲಿದ್ದಾಗ ಅವನಿಗೆ ಬ೦ದ ಮಲೇರಿಯದಿ೦ದ ಎನ್ನುತ್ತಾರೆ. ಅದೇನೇ ಇದ್ದರೂ ಇ೦ಥದ್ದೊ೦ದು ಅದ್ಭುತ ಚಿತ್ರವನ್ನು ನೀಡಿದ ಸ೦ತೋಷ್ ಸಿವನ್-ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

          ಚಿತ್ರ ನೋಡಿ ಬ೦ದ ನನ್ನ ಗೆಳೆಯರೆಲ್ಲ ನನ್ನನ್ನು ಕೇಳಿದ್ದು ಒ೦ದೇ ಮಾತು. ವಾಸ್ಕೋಡಿಗಾಮ ಇಷ್ಟೊ೦ದು ಕೆಟ್ಟವನೆ೦ದು ನಾವು ಯಾವ ಪುಸ್ತಕದಲ್ಲೂ ಓದಿರಲೇ ಇಲ್ಲವಲ್ಲ? ಈ ಪ್ರಶ್ನೆಗೆ ಮಾತ್ರ ನನ್ನಲ್ಲಿ ಉತ್ತರವಿರಲಿಲ್ಲ. ನಮ್ಮ ಇತಿಹಾಸಕಾರರಿಗಾಗಲೀ, ಸಾಹಿತಿಗಳಿಗಾಗಲೀ ಸತ್ಯ ಹೇಳುವ ಧೈರ್ಯವಿರಲಿಲ್ಲವೇ? ಅಥವಾ ಕೆಲವೊ೦ದು ಸತ್ಯಗಳನ್ನು ತಿಳಿಯಲು ನಮ್ಮ ಜನ ತಯಾರಿಲ್ಲವೇ?

9 ಕಾಮೆಂಟ್‌ಗಳು:

  1. ನೀಜವಾದ ಮಾತು. ಸ್ನಹಿತರೆ.
    Yogeesh Bevinamarada

    ಪ್ರತ್ಯುತ್ತರಅಳಿಸಿ
  2. ಕಸಬ್’ಗೆ ಇಷ್ಟೋಂದು ಉಪಚಾರ ಮಾಡೋ ಜನರು ಇದ್ದಾರೆ ಅಂದ್ರೆ...ಇದನ್ನು ಒಪ್ಪಿಕೊಳ್ಳಲೇ ಬೇಕು.. ಅನ್ನೋದೇ ದುರದುಷ್ಟಕರ....!!!
    Yogish Bk

    ಪ್ರತ್ಯುತ್ತರಅಳಿಸಿ
  3. ತ್ಯವಾದ ಮಾತು.. ಲೂಟಿಕೊರನಿಗೆ ಎಂತಹ ಮನ್ನಣೆ ಅಲ್ವ !

    Gv Jayashree

    ಪ್ರತ್ಯುತ್ತರಅಳಿಸಿ
  4. Bharath Curam Said...........

    Nammali Congress matuu Communists matthu Buddhi jeeevigalu iruttaro alli varage Charitre tiruchi bareya lagutte

    ಪ್ರತ್ಯುತ್ತರಅಳಿಸಿ
  5. Thank you prajaprabhutva for publishing my article. There are many hidden facts in the history which r yet to be revealed.
    Read some more articles in my blog
    http://sachinsbhat.blogspot.com/

    ಪ್ರತ್ಯುತ್ತರಅಳಿಸಿ
  6. ಈ ಶಾಲೆಗಳಲ್ಲಿ ಕಲಿಸುವ ವಿಧಾನದಲ್ಲಿ ಮಾರ್ಪಾಡು ಬರಬೇಕೆಂದೆನಿಸುತ್ತದ.

    By
    Jaideep Melur Subbarayappa

    ಪ್ರತ್ಯುತ್ತರಅಳಿಸಿ
  7. ಉತ್ತಮವಾದ ವಿಷಯ ಸಂಪತ್ತು ನಾನು ಪಡೆದುಕೊಳ್ಳುವಂತಾಯಿತು.ವಿಷಯ ಪ್ರಸ್ತಾಪನೆ ಅಂದರೆ , ನೇರ ಮತ್ತು ಖಡ್ಗದಂತೆ ಇರಿಯಬೇಕು. ಅದನ್ನು ನಾನು ಇಲ್ಲಿ ನೋಡಿದೆ. ವಿಚಾರ ಲಹರಿ ಹೀಗೆ ಗಟ್ಟಿಗೊಳ್ಳಲಿ. ಶುಭ ವಂದನೆ.
    -ರವಿ ಮೂರ್ನಾಡು.

    ಪ್ರತ್ಯುತ್ತರಅಳಿಸಿ
  8. Ganesha Belthangady Said..

    Thumba duradrushtakara sangathi. Thayi Bharathiyannu Britisharinda mukthagolisalu horata nadesiddu 6 lakshakku hecchu deshabhaktharu huthathmaragiddare. Avaralli kelave, kelavu mandiya bagge ithihasada putagalalli mahithi labhyavagutthide. Inthaha veeragranigala bagge ithihasada patyapusthakagalalli mahithi labhyavagabeku. Akramanakari, dhoortha Britishara gunagaana nillabeku. Inquilab zindabad..! Vande Mataram

    ಪ್ರತ್ಯುತ್ತರಅಳಿಸಿ
  9. Rajgopal Sharma Said....

    ಉರುಮಿ ನಿಜಕ್ಕು ಉತ್ತಮ ಚಿತ್ರ.ಮುಚ್ಚಿಹೋದ ಸತ್ಯಗಳನ್ನು ಪರಿಣಾಮಕಾರಿಯಗಿ ತೆರೆದಿಡಲು ಚಲನಚಿತ್ರ ಉತ್ತಮ ಮಾಧ್ಯಮ ಎಂಬುದಕ್ಕೆ ಇದೊಂದು ಉದಾಹರಣೆ.ಗಾಮನಂತ ಧಾಳಿಕೋರರು ಇತಿಹಾಸದ ಪುಸ್ತಕಗಳಲ್ಲಿ ನಾಯಕರಂತೆ ತೋರುತ್ತಿರುವುದು ನಿಜಕ್ಕು ದುರಂತ

    ಪ್ರತ್ಯುತ್ತರಅಳಿಸಿ