ಬುಧವಾರ, ಜುಲೈ 20, 2011

ಯಾವದೇಶದಲ್ಲಿ ಜಾಗ ಇದೆ?

ಭಗವದ್ಗೀತೆ ಅಭಿಯಾನವನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಲಿ
ಕಾಗೇರಿ ಯವರು ಹೇಳಿದ ಮಾತು ಕೇಳಿದರೆ, ಇವರನ್ನು ಯಾವ ದೇಶದವರು ರತ್ನ ಗಂಬಳಿ ಹಾಸಿ ಇವರನ್ನು ಬರಮಾಡಿಕೊಳ್ಳುತ್ತಾರೆ ? ಇಂತಹ ನಕಲಿ ಜಾತ್ಯಾತೀತ ಜನರಿಗೆ ನಮ್ಮ ದೇಶ ಬಿಟ್ರೆ ಬೇರೆಲ್ಲೂ ಜಾಗ ಇಲ್ಲ.  ನಮ್ಮ ದೇಶ ದಲ್ಲಿ ದೇಶದ್ರೋಹಿಗಳಿಗೂ ಜಾಗ ಇದೆ. ರಾಷ್ಟ್ರಗೀತೆ ಗೆ ಅಪಮಾನ ಮಾಡಿದವರಿಗೂ ಜಾಗ ಇದೆ. ರಾಷ್ಟ್ರಧ್ವಜ ಸುಟ್ಟವರಿಗೂ ಜಾಗ ಇದೆ. ಸಂಸತ್ತಿಗೆ ದಾಳಿ ಮಾಡಿದವರಿಗೂ ಜಾಗ ಇದೆ. ಎಲ್ಲರಿಗೂ ಜಾಗ ಇದೆ.ಅಂತ ಉದಾರಿ ದೇಶ ನಮ್ಮದು.

ಕಳೆದ ನಾಲ್ಕ ವರ್ಷಗಳಿಂದ ಸೊಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಸ್ವಾಮಿಗಳು ಮಕ್ಕಳಿಗೆ ಭಗವದ್ಗೀತೆ ಪಠಣದ ಬಗ್ಗೆ ಜ್ಞಾನ ಮೂಡಿಸುತ್ತಿದ್ದಾರೆ ಸರ್ಕಾರ ಸಹ ಗೀತಾಧ್ಯಯನ ಯೋಜನೆ ಗೆ ಪ್ರೋತ್ಸಾಹ ನೀಡಿ  ಶಾಲೆಗಳಲ್ಲಿ ಜಾರಿಗೆ ತಂದಿದ್ದಾರೆ. ಯಾರಿಗೆ ಕಲಿಯಬೇಕು ಅಂತ ಇಷ್ಟ ಇದೆಯೋ ಅವರಿಗೆ ಕಲಿಯಲು ಅಡ್ಡಿಯೇನಿಲ್ಲ, ಹಾಗು ಕಲಿಯಲೇ ಬೇಕು ಅಂತ ಒತ್ತಡವೇನಿಲ್ಲ. ಆದರೆ ವಿರೋಧದ ಹೆಸರಿನಲ್ಲಿ ಭಗವದ್ಗೀತೆಯನ್ನು ಹರಿದಿರುವುದು ಅಕ್ಷಮ್ಯ,  ನಮ್ಮ ಧರ್ಮದಲ್ಲಿರುವ ಸ್ವಾತಂತ್ರ್ಯದಿಂದ ಇಂದು ಇವರು ಸಾಯದೆ ಬದುಕಿದ್ದಾರೆ. ಆದರೆ ಇದೇ ಧೈರ್ಯದಿಂದ ಒಂದು ವೇಳೆ ಬೇರೆ ಧರ್ಮದ ಪುಸ್ತಕಗಳನ್ನು ಹರಿದಿದ್ದರೆ ಅವರು ಜೀವಂತ ವಾಗಿರುತಿದ್ದರೆ?

ನನ್ನ ಸ್ನೇಹಿತನೋರ್ವ ಹೇಳುತಿದ್ದ ಮಾತುಗಳು " ಕೆಲ ದಶಕ ಗಳಿಂದ ರಾಜ್ಯದ ಹಾಗು ಹೊರ ರಾಜ್ಯದ ದೇವಸ್ಥಾನಗಳಿಗೆ ಹೋದಾಗ ನಾನು ಗಮನಿಸುತಿದ್ದುದು ಅಲ್ಲಿ ನಡೆಯುತಿದ್ದ ವೇದ ಹಾಗು ಸಂಸ್ಕೃತ ಪಾಠಶಾಲೆಗಳು. ಯಾಕೆಂದರೆ ಹಿಂದುಳಿದ ಜನಾಂಗದಲ್ಲಿ ಹುಟ್ಟಿದ ನನಗೆ ಬ್ರಾಹ್ಮಣ ವಿಧ್ಯಾರ್ಥಿಗಳು ಕಲಿಯುತಿದ್ದ ಹಾಗು ಅಲ್ಲಿನ ವಾತವರಣ ನನಗೆ ಬಹು ಅಚ್ಚರಿಯನ್ನು ಮೂಡಿಸುತಿತ್ತು. ನಮಗೆ ಯಾಕೆ ಇಂತಹ ಸೌಲಭ್ಯ ಸಿಗ್ತಾಯಿಲ್ಲ, ನಮ್ಮ ಮನೆಯಲ್ಲಿ ಯಾಕೆ ವೇದಾಧ್ಯನ ಹಾಗು ಪೂಜೆ ಕಾರ್ಯಗಳು ಅವರು ಮಾಡಿದ ರೀತಿಯಲ್ಲಿ ಯಾಕೆ ನಡೆಯುತಿಲ್ಲ ಅಂತ ಬೇಸರವಾಗುತಿತ್ತು. ಇಂದು ಕಾಲ ಬದಲಾಗಿದೆ, ಸದ್ಯದ ಪರಿಸ್ಥಿತಿ ಯಲ್ಲಿ ಎಲ್ಲವು ಕೈಗೆ ಎಟುಕುತ್ತಿದೆ, ಎಲ್ಲ ರೀತಿಯ ಕಾರ್ಯ ವಿಧಾನ ಗಳು ಮುದ್ರಿತ ರೂಪದಲ್ಲೂ ಹಾಗು ವೀಡಿಯೋ ಗಳ ಮುಖಾಂತರ ಇಂದು ದೊರೆಯುತ್ತಿವೆ. ನಿಜವಾಗ್ಯೂ ಆಚಾರ ವಿಚಾರಗಳಲ್ಲಿ ಶ್ರದ್ಧೆ ಭಕ್ತಿಯಿದ್ದರೆ ಕಲಿಯುವುದು ದೊಡ್ಡದೇನಿಲ್ಲ, ಮನಸ್ಸು ಮಾತ್ರ ದೊಡ್ಡದಾಗಿದ್ದರೆ ಸಾಕು."




ಅಷ್ಟಕ್ಕೂ ಭಗವದ್ಗೀತೆ ಯಲ್ಲೇನಿದೆ? ಅಲ್ಲಿ ಜೀವನದ ವಿಧಾನ ಹಾಗು ಬದುಕುವ ಕಲೆಯ ಬಗ್ಗೆ ವಿವರಣೆಯಿದೆ ಹೊರತು ಧರ್ಮ ಭೋದನೆ ಯಿಲ್ಲ. ಪಾಶ್ಚ್ಯಾತ್ಯರು ಸಹಿತ ಗೀತೆಯಲ್ಲಿನ ಸಾರ ಕ್ಕೆ ಮಾರುಹೋಗಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸಹ ವ್ಯಕ್ತಿತ್ವ ವಿಕಸನ ಕ್ಕಾಗಿ ಗೀತೆಯ ಕೆಲ ಅಧ್ಯಾಯಗಳನ್ನು ಆಯ್ದುಕೊಂಡು ಭೋದಿಸುತಿದ್ದಾರೆ. ವಿದ್ಯಾರ್ಥಿಗಳಿಗೆ ಜೀವನ ಪದ್ದತಿಯನ್ನು ಭೋಧಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಭಗವಧ್ಗೀತೆ ಅಭಿಯಾನವನ್ನು ನಡೆಸಲು ಉದ್ದೇಶಿಸಿದೆ ಹೀಗಿರುವಾಗ ಗೀತೆಯ ಭೋದನೆಗೆ ಇರುವ ವಿರೋಧ ಕೇವಲ ರಾಜಕೀಯ ಹೊರತು ಬೇರೆನಿಲ್ಲ. ಅಂದು ಗಾಂಧಿ ಸಹ ಬಹು ಮೆಚ್ಚಿದ್ದ ವಿಚಾರಧಾರೆ ಗಳು ಇಂದು ಜನಕ್ಕೆ ಬೇಡವಾಗಿವೆ.
ಅಂದು ದೊರೆಯದಿದ್ದ ಆಚಾರ ವಿಚಾರ ಗಳು ಶಿಕ್ಷಣ ಇಂದು ನಮಗೆ ದೊರೆಯುತ್ತಿರುವಾಗ ವಿರೋಧಿಸುವುದು ಮೂರ್ಖತನದ ಪರಮಾವಧಿ.

ಒಬ್ಬ ಮುಸಲ್ಮಾನ ನಾಗಿ ಹುಟ್ಟಿದರೆ, ಕುರಾನ್ ಪಠಣ ದಿಂದ ಮದರಸದಲ್ಲಿ ಶಿಕ್ಷಣ ಶುರುವಾಗುತ್ತೆ. ಬೈಬಲ್ ಓದದ ಹಾಗು ಕೇಳದ ಕ್ರಿಶ್ಚಿಯನ್ ಇರಲಾರ ಹಾಗು ಗ್ರಂಥ ಸಾಹೇಬ ಓದದ ಸಿಖ್ ಧರ್ಮೀಯ ಸಹ ಇರಲಾರ. ಆದರೆ  ಸರಿಯಾದ ಧಾರ್ಮಿಕಆಚರಣೆ ವಿಧಾನ ಹಾಗು ಆಧ್ಯಾತ್ಮ ಶಿಕ್ಷಣ ದೊರೆಯದೆ ಇರುವ ಕೋಟ್ಯಾಂತರ ಹಿಂದುಗಳು ಸಿಗುವುದು ಸಹಜ. ಕಾರಣ ಧರ್ಮದಲ್ಲಿರುವ ಸಂಪೂರ್ಣ ಸ್ವಾತಂತ್ರ್ಯ. ಯಾವುದೇ ಕಟ್ಟುಪಾಡು ಗಳು ನೀತಿ ನಿಯಮಗಳು, ಹೀಗೆ ಆಚರಣೆ ಮಾಡಬೇಕು ಎನ್ನುವ ಮಾತುಗಳು ಹಿಂದು ಧರ್ಮದಲ್ಲಿ ಎಲ್ಲಿ ಸಹ ನಮೂದಾಗಿಲ್ಲ. ಇದೆಲ್ಲದರ ಪರಿಣಾಮ ಇಂದು ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರ, ಕೊಲೆ,  ಸುಲಿಗೆ, ಮೋಸ, ದಗಾ, ವಂಚನೆ,  ದರೋಡೆ ಅನೈತಿಕ ಚಟುವಟಿಕೆ ಗಳು ಇನ್ನು ಮುಂತಾದ ಸಮಾಜ ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕಾರಣ  ಜನರಲ್ಲಿ ಯಾವುದೇ ರೀತಿಯ ಭಯ ಭಕ್ತಿ ಇಲ್ಲ. ಇರುವ ಅಲ್ಪ ಸ್ವಲ್ಪ ಅರಿವು ಸಹ ನಶಿಸುತ್ತಿದೆ. ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಯಾರು ಸಹ ಮಾಡುತ್ತಿಲ್ಲ. ಆಧ್ಯಾತ್ಮಿಕ ಚಿಂತನೆ ಹಾಗು ಧರ್ಮದ ಅರಿವು ಜನರಲ್ಲಿ ಸ್ವಲ್ಪ ಮಟ್ಟಿಗೆ ಆದರು ಸುಧಾರಣೆ ತಾರದೆ ಇರದು.
ಅರಬ್ ರಾಷ್ಟ್ರಗಳಾದ ದುಬೈ, ಅಬುಧಾಬಿ, ಕತಾರ್, ಮಸ್ಕತ್, ಬಹ್ರೈನ್ ಗಳಲ್ಲಿ ಅತ್ಯಂತ ಧಾರ್ಮಿಕ ಶ್ರದ್ದೆಯ ಪರಿಣಾಮ ದಿಂದ ಜನ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸುತಿದ್ದಾರೆ. ಕಾರಣ ಅವರಿಗಿರುವ ಧರ್ಮದ ಅರಿವು. ಅಲ್ಲಿ ಕೊಲೆ ಸುಲಿಗೆ, ಮೋಸ, ದಗಾ ವಂಚನೆ ತುಂಬಾ ಕಡಿಮೆ.
ದೊಡ್ಡವರು ಹೇಳಿದ ಹಾಗೆ ಒಳ್ಳೆಯ ವಿಷಯ ಜಗದ ಯಾವುದೇ ಮೂಲೆಯಿಂದ ಬಂದರೂ ನಮ್ಮ ಕಿವಿ ಹಾಗು ಮನಸ್ಸು ಗಳನ್ನು ತೆರೆದು ಆಹ್ವಾನಿಸ ಬೇಕು. ಅದು ಕುರಾನ್ ಆಗಿರಲಿ, ಬೈಬಲ್ ಆಗಿರಲಿ ಅಥವ ಭಗವದ್ಗೀತೆ ಆಗಿರಲಿ ತಿಳಿದು ಕೊಳುವುದರಲ್ಲಿ ತಪ್ಪೇನಿದೆ?


4 ಕಾಮೆಂಟ್‌ಗಳು:

  1. ಸರ್ವೇ ಜನೋ ಸುಖಿನೋಭವಂತೂ.. ಎಂದು ಹೇಳಿರುವ ಧರ್ಮ ಹಿಂದೂ., ಈ ಮತಿಹೀನ ಬುದ್ದಿವಂತರು, ತಮ್ಮ ಈ ಕೆಳಮಟ್ಟದ ಚಿಂತನೆಗಳಿಂದ ಹೊರಬಂದು ಭಗವದ್ಗೀತೆಯನ್ನು ಕಲಿಸಲು ಒಪ್ಪಿಕೊಳ್ಳಬೇಕು. ಇಲ್ಲದೇ ಹೋದರೆ, ನಮ್ಮ ಹಿಂದೂಸ್ಥಾನದಿಂದ ಎಲ್ಲಾದರೂ ಬೇರೆ ಸ್ಥಾನಗಳಿಗೆ ಹೋಗಲಿ..
    ದೇಶದ್ರೋಹಿಗಳು.,

    ಪ್ರತ್ಯುತ್ತರಅಳಿಸಿ
  2. ಭಗವದ್ಗೀತೆಯನ್ನು ಎಂದೂ ಓದಿರದ, ಎಂದೂ ತಿಳಿದುಕೊಳ್ಳದ, ಕೇವಲ ಪೂರ್ವಾಗ್ರಹಪೀಡಿತ ವ್ಯಕ್ತಿಯೊಬ್ಬನನ್ನು ಕೋಟ್ಯಾಂತರ ಜನ ಓದುವ ಪತ್ರಿಕೆಗೆ ಆಹ್ವಾನಿಸಿದ್ದೇ ತಪ್ಪು. ವಿಚಾರಧಾರೆಗಳು ಹುಟ್ಟುವುದು ಮೆದುಳಿನಿಂದಲೇ ಹೊರತು ಮತ್ತೆಲ್ಲಿಂದಲೋ ಅಲ್ಲ.

    ಪ್ರತ್ಯುತ್ತರಅಳಿಸಿ
  3. ಭಗವದ್ಗೀತೆಯ ವಿರೋಧಿಗಳಿಗೆ ನನ್ನದೊಂದು ಮನವಿ ನೀವು ಹೀಗೆ ಎಲ್ಲದ್ದಕ್ಕೂ ಸಾಕ್ಷಿ ಪುರಾವೆ ಕೇಳುತ್ತ, ಹಿಂದುಧರ್ಮವನ್ನು ಹಾಗೂ ಅದರ ಪರಿಪಾಲಕರನ್ನು ನಿಂದುಸುತ್ತಿದ್ದರೆ ಮುಂದೊಂದು ದಿನ ಯಾರಾದರೂ ಇವರೇ ನಿಮ್ಮ ತಾತ ಮುತ್ತಾತ ಎಂದು ನಿಮ್ಮ ವಂಶಸ್ಥರಿಗೆ ನಿಮ್ಮ ಫೋಟೋ ತೋರಿಸಿ ಪರಿಚಹಿಸಿದರೆ ಅದನ್ನೂ ನಂಬುವುದಿಲ್ಲ, ನಮ್ಮ ಸಂಸ್ಕೃತಿ ನಿಂತಿರುವುದೇ ನಂಬಿಕೆಯ ಮೇಲೆ ಸ್ವಾಮಿ, ಕೇವಲ ಬ್ರಾಹ್ಮಣರ ಮೇಲಿನ ದ್ವೇಶಕ್ಕೆ ತಮ್ಮಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಕೆಲಸ ಬಿಡಿ. ಬ್ರಾಹ್ಮಣರ ನಾಯಕತ್ವ ನಿಮಗಿಷ್ಟವಿಲ್ಲದಿದ್ದರೆ ನೀವೇ ನೇತೃತ್ವವಯಿಸಿ ಭಗವದ್ಗೀತೆಯ ಪ್ರಚಾರ ಮಾಡಿ, ಹಿಂದು ಧರ್ಮಕ್ಕೆ ಅಡ್ಡಿಯುಂಟುಮಾಡುವ ನೀವು ತಾಕತ್ತಿದ್ದರೆ ಕ್ರೈಸ್ತ ಬಾಂದವರ ಹಾಗು ಮುಸಲ್ಮಾನ ಬಾಂದವರಲ್ಲಿರುವ ಕಂದಾಚಾರದ ಬಗ್ಗೆ ಮಾತನಾಡಿ. ತಾಕತ್ತಿಲ್ಲ ಅಲ್ವ ಏಕೆಂದರೆ ಎಲ್ಲಿ ತಲೆ ಉರುಳುವುದೋ ಎಂಬ ಭಯ !. ಜಾತಿ ವ್ಯವಸ್ಥೆ ಎಲ್ಲಿಲ್ಲ ಹೇಳಿ ಕ್ರೈಸ್ತ ಹಾಗು ಮುಸಲ್ಮಾನರಲ್ಲಿಲ್ಲವೇ?. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಮ್ಮವರು ಮಾಡುತ್ತಿರುವುದೇನು ನಾನು ಮಲಯಾಳಿ ಕ್ರಿಸ್ಚಿಯನ್, ನಾನು ತಮಿಳು ಕ್ರಿಸ್ಚಿಯನ್, ನಾನು ಕೊಂಕಣಿ ಕ್ರಿಸ್ಚಿಯನ್, ನಾನು ತುಳು ಕ್ರಿಸ್ಚಿಯನ್ ಎಂದು ಹೇಳುವುದ್ದಿಲ್ಲವೆ ಹೀಗಿರುವಾಗ ಸಮಾನತೆ ಎಲ್ಲಿಂದ ಬಂತು, ನಿಮ್ಮ ಪೂರ್ವಾಗ್ರತೆಯಿಂದ ಹೊರ ಬಂದು ನಿಮ್ಮ ಮನೆಯಿಂದಲೇ ನಿಮ್ಮ ಮಕ್ಕಳಿಗೆ ಅಂತರ್ಜಾತಿಯ ವಿವಾಹವನ್ನು ಮಾಡಿ, ಜಾತಿ ವ್ಯವಸ್ಥೆಯನ್ನು ಹೊಡೆದೋಡಿಸೋಣ.

    ಪ್ರತ್ಯುತ್ತರಅಳಿಸಿ
  4. “ಭಗವದ್ಗೀತೆ ಒಪ್ಪದವರು ದೇಶ ಬಿಟ್ಟು ತೊಲಗಲಿ” ಎಂದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಹೇಳಿಕೆ ಅಪ್ರಭುದ್ದ ಮತ್ತು ಸಂವಿಧಾನ ವಿರೋಧಿಯಾಗಿದೆ. ಈ ಹೇಳಿಕೆಯನ್ನು ದೇಶಪ್ರೇಮಿಗಳು ತೀವ್ರವಾಗಿ ಖಂಡಿಸಬೇಕಾಗುತ್ತದೆ.
    ಈ ರಾಷ್ಟ್ರದ ಗ್ರಂಥ ಸಂವಿಧಾನವೇ ಹೊರತು ಭಗವದ್ಗೀತೆಯಲ್ಲ. ಭಾರತ ಹಲವು ಧರ್ಮ, ಜಾತಿ, ಭಾಷೆ, ಪಂಗಡ, ಆಚರಣೆಯಿಂದ ಕೂಡಿದ ದೇಶವೆಂಬುದನ್ನು ಸಚಿವರು ಮರೆತಿದ್ದಾರೆ, ನಮ್ಮ ಸಂವಿಧಾನದ ಅನುಚ್ಚೇದ 19(1) ರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವುದನ್ನು ಸಚಿವರು ಅರಿತು ಮಾತನಾಡುವುದು ಒಳಿತು. ಪ್ರಭುತ್ವವನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದೆ. ಪ್ರಶ್ನಿಸಿದವರನ್ನು ದೇಶದಿಂದ ಹೊರ ಹಾಕಿ ಎನ್ನುವ ವಿವೇಕ ಇಲ್ಲದ ಈ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಹಿಟ್ಲರನ ಫ್ಯಾಸಿಸ್ಟ್ ದೋರಣೆಯ ಅನುಕರಣೆಯಾಗಿದೆ.
    ಪ್ರಾಥಮಿಕ ಮತ್ತು ಫೌಢಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನ ನಡೆಸಲು ಶೀರಸಿಯ ಸೋಂದಸ್ವರ್ಣವಲ್ಲಿ ಸಂಸ್ಥಾನಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆ ಹಾಗು ಶಿಕ್ಷಕರಿಗೆ ಆದೇಶಿಸುವ ಮೂಲಕ ರಾಜ್ಯದ ಬಿ.ಜೆ.ಪಿ. ಸಕರ್ಾರ ತನ್ನ ಕೋಮುವಾದಿ ಅಜೆಂಡವನ್ನು ಮುಗ್ದ ಮನಸ್ಸಿನ ಶಾಲಾ ಮಕ್ಕಳ ಮೇಲೆ ಹೇರುತ್ತಿರುವುದು ಖಂಡನೀಯ. ಈ ಅಭಿಯಾನವನ್ನು ನಡೆಸಲು ಅವಕಾಶ ನೀಡಬಾರದು ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಪ್ರಚಾರ ಹಾಗು ಧಾಮರ್ಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಯಾವುದೇ ಧರ್ಮಪ್ರಚಾರಕ್ಕೆ ಸಕರ್ಾರಿ ಶಾಲೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು.
    ಶಾಲೆಗಳು ಯಾವುದೇ ಒಂದು ಧರ್ಮದ ಆಸ್ತಿಯಲ್ಲ, ಅಲ್ಲಿ ಹಿಂದು, ಮುಸ್ಲಿಮ್, ಸಿಖ್, ಜೈನ ಹಾಗೂ ಇತರೆ ಧರ್ಮದಲ್ಲಿ ನಂಬಿಕೆ ಇರುವವರು ಅಥವ ಧರ್ಮದಲ್ಲಿ ನಂಬಿಕೆ ಇಲ್ಲದವರೂ ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಯಾವುದೇ ಒಂದು ಧಾಮರ್ಿಕ ಗ್ರಂಥವನ್ನು ಶಾಲೆಗಳಲ್ಲಿ ಪ್ರಸಾರ ಮಾಡುವುದು ಭಾರತ ಸಂವಿಧಾನದ ಧರ್ಮ ನಿರಪೇಕ್ಷ ತತ್ವಕ್ಕೆ ವಿರುದ್ದವಾಗಿದೆ. ಶಾಲೆಗಳನ್ನು ಧರ್ಮದ ಪ್ರಸಾರ ಕೇಂದ್ರಗಳನ್ನಾಗಿಸಲು ಹೊರಟಿರುವ ರಾಜ್ಯ ಸಕರ್ಾರದ ಕ್ರಮ ಫ್ಯಾಸಿಸ್ಟ್ ಮನೋಭಾವದ್ದಾಗಿದೆ.
    ಭಗವದ್ಗೀತೆ ಪ್ರಶ್ನಾತೀತ ಗ್ರಂಥವಲ್ಲ ಎಂದುಕೊಂಡರೆ ಅದು ಮೂರ್ಖತನವಾದೀತು. ಆರ್ಯರ ಆಗಮನದಿಂದಲೇ ಪುರೋಹಿತಶಾಹಿ ವ್ಯವಸ್ಥೆಯ ಹೇರಿಕೆಯ ವಿರುದ್ದ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ವೈಧಿಕ ಪರಂಪರೆಯನ್ನು ಧಿಕ್ಕರಿಸಿದ ಶಿವಶರಣ ಕ್ರಾಂತಿಕಾರಿ ಬಸವಣ್ಣನವರ ಹೋರಾಟವನ್ನು ಸಚಿವರು ನೆನಪಿಸಿಕೊಳ್ಳಲಿ,. ಹಿಂದೂ ಧರ್ಮದಲ್ಲಿನ ಜಾತಿ ಪದ್ದತಿಯನ್ನು ಪ್ರಶ್ನಿಸಿ ಕನಕದಾಸರು, ಕಭೀರ ದಾಸರು ಮತ್ತಿತರ ಶರಣರು ಹೋರಾಡಿದ ಇತಿಹಾಸವಿದೆ. ಭಗವದ್ಗೀತೆಯ ಕುರಿತಾಗಿ ಕೆಲವು ಪ್ರಶ್ನೆಗಳಿದ್ದು ಅವುಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಾಗಿದೆಯೆಂದು ಸ್ವಾಮಿ ವಿವೇಕಾನಂದರು ಹೇಳಿರುವುದನ್ನು ಈ ಸನಾತನಿಗಳು ಮರೆತಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಜಾತಿ ಭೇದವನ್ನು ಸಮರ್ಥಿಸುವ ಮನುಸ್ಪ್ರುತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ರವರು ಸುಟ್ಟು ಹಾಕಿ ತಿರಸ್ಕರಿಸಿದ್ದನ್ನು ಸಚಿವರು ಮನದಟ್ಟುಮಾಡಿಕೊಳ್ಳಬೇಕು.
    ಭಗವದ್ಗೀತೆ ರಾಷ್ಟ್ರೀಯ ಗ್ರಂಥವೂ ಅಲ್ಲ, ಎಲ್ಲಾ ಹಿಂದುಗಳ ಪವಿತ್ರ ಗ್ರಂಥವೂ ಅಲ್ಲ. ಬದಲಾಗಿ ಕೆಲ ವೈದಿಕರ ಗ್ರಂಥವಷ್ಟೇ ಎಂದು ಸಚಿವರು ತಿಳಿಯಬೇಕಾಗಿದೆ. ಇದನ್ನು ಸಾರ್ವತ್ರೀಕರಣಗೊಳಿಸುವುದು ಸಂವಿಧಾನಕ್ಕೆ ತೋರಿದ ಅಪಚಾರ. ಪ್ರಜಾಪ್ರಭುತ್ವ, ಸಂವಿಧಾನ, ಶಾಸಕಾಂಗ ಇವುಗಳು ರಚಿತವಾಗಲು ವಿದೇಶಿ ತಜ್ಞರ ಕೊಡುಗೆಯನ್ನ ಯಾರೂ ಮರೆಯುವಂತಿಲ್ಲ. ಈ ನಾಡಿನಲ್ಲಿ ವೈಚಾರಿಕ ಕ್ರಾಂತಿಗೆ ಕರೆ ನೀಡಿದ ರಾಷ್ಟಕವಿ ಕುವೆಂಪುರವರ ಸಾಹಿತ್ಯವನ್ನು ಓದಿ ವಿಶ್ವ ಮಾನವನಾಗಲು ಕಾಗೇರಿಯವರು ಪ್ರಯತ್ನಿಸಿದರೆ ಅದು ಶಿಕ್ಷಣ ಸಚಿವರ ಸ್ಥಾನಕ್ಕೆ ಸಲ್ಲುವ ಗೌರವ.
    ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ, ಜಾತಿವ್ಯವಸ್ಥಯನ್ನು ಸಮರ್ತಿಸಲಾಗಿದೆ. ಯಾವುದೇ ಪ್ರತಿಫಲ ನಿರೀಕ್ಷಿಸದೇ ಸುಮ್ಮನೇ ದುಡಿಯಬೇಕು ಪ್ರತಿಫಲ ನೀಡುವುದು ದೇವರಿಗೆ ಬಿಟ್ಟಿದ್ದು ಎನ್ನುವ ಗೀತೆಯಸಾರ ಗುಲಾಮಗಿರಿ ಮತ್ತು ಪಾಳೇಗಾರಿ ವ್ಯವಸ್ಥೆಯನ್ನು ಪ್ರೋಸ್ತಾಯಿಸುವಂತಿದೆ. ಎದು ಶ್ರಮಶಕ್ತಿಯನ್ನು ಕಡೆೆಗಣಿಸುತ್ತದೆ. ಪುನರ್ಜನ್ಮ, ಪಾಪ-ಪುಣ್ಯ, ಆಸ್ತಿಗಾಗಿ ಸಹೋದರನ್ನು ಕೊಲ್ಲು ಹೀಗೆ ಮೌಡ್ಯತೆಯನ್ನ ಸಾರುವ ಜೀವವಿರೋಧಿ ಸಂದೇಶಗಳು ಗೀತೆಯಲ್ಲಿವೆ. ಹೀಗಾಗಿ ಇದು ಸರ್ವಸಮ್ಮತವಲ್ಲ. ಇದನ್ನು ಅನುಸರಿಸುವುದು ಕೆಲವರ ಖಾಸಗೀ ವಿಚಾರ. ಸರ್ಕಾರಿಶಾಲೆಗಳಲ್ಲಿ ಅಭಿಯಾನದ ಮೂಲಕ ಅಧಿಕೃತಗೊಳಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.
    ಸರ್ಕಾರಿ ಶಾಲೆಗಳು ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿವೆ, ಸುಮಾರು ಶೇ 58 ರಷ್ಟು ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಶಿಕ್ಷಣ ವ್ಯಾಪಾರೀಕಣ, ಡೊನೇಷನ್ ಹಾವಳಿಯನ್ನು ನಿಯಂತ್ರಿಸಲು ಸಕರ್ಾರ ಮುಂದಾಗುತ್ತಿಲ್ಲ. ಬದಲಾಗಿ ಈ ರೀತಿಯ ಕೋಮುವಾದಿ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಸರ್ಕಾರದ ಹೊಣೆಗೇಡಿತನವಾಗಿದೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಒಪ್ಪದಿರುವ ಭಗವದ್ಗೀತೆಯನ್ನು ಶಾಲೆಗಳಲ್ಲಿ ಭೋಧಿಸುವ ಅಗತ್ಯವಿಲ್ಲ. ಸಂವಿಧಾನ ಬದ್ದ ಶಾಲೆಗಳು ಆರ್.ಎಸ್.ಎಸ್. ಕೇಂದ್ರಗಳಾಗಬೇಕಿಲ್ಲ. ಅಪ್ರಾಪ್ತ ಎಳೇ ಮಕ್ಕಳಲ್ಲಿ ಬಲವಂತದ ಮತ ಪ್ರಚಾರ ಮಾಡುತ್ತಿರುವ ತಾವು ಕಾನೂನು ಉಲ್ಲಂಘಿಸುತ್ತಿದೆ. ಇಂತಹ ಸಂವಿಧಾನ ವಿರೋಧಿ ಅಭಿಯಾನವನ್ನು ರಾಜ್ಯ ಸಕರ್ಾರ ಕೂಡಲೇ ಹಿಂಪಡೆಯಬೇಕು ಮತ್ತು ಶಿಕ್ಷಣ ಸಚಿವ ಕಾಗೇರಿ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು.
    - ಹೆಚ್.ಆರ್.ನವೀನ್ ಕುಮಾರ್
    ಬೆಂಗಳೂರು

    ಪ್ರತ್ಯುತ್ತರಅಳಿಸಿ