ನಮ್ಮಲ್ಲಿನ ಪತ್ರಿಕಾ ವರದಿಗಾರರು ಪಕ್ಷಪಾತಿ ಯಾಗಿ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಅವರು ನೀಡುತ್ತಿರುವ ವರದಿಗಳೇ ಕಾರಣ. ಸನ್ಮಾನ್ಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವನ್ನು ಬೀಳಿಸಬೇಕೆಂದು ನಮ್ಮ ಕೆಲ ಪತ್ರಕರ್ತ ಮಿತ್ರರು ನಿರ್ಧಾರ ಮಾಡಿದ್ದಾರೆಂದು ಕೆಲ ಪತ್ರಿಕಾ ವರದಿಗಳನ್ನು ನೋಡಿದರೆ ಗೊತ್ತಾಗುತ್ತೆ. ಬಲಪಂತೀಯ ಹಾಗು ಜಾತೀವಾದಿ ಸರ್ಕಾರವನ್ನು ಶತಸಿದ್ದ ತೆಗೆದು ಹಾಕಲೇ ಬೇಕೆಂದು ನಿರ್ಧರಿಸುವಂತಿದೆ ಈ ಜನ.
ಮಾಡಿದ್ದುಣ್ಣೊ ಮಹರಾಯ ಯಾರ್ಯಾರು ತಪ್ಪು ಮಾಡಿದ್ದಾರೊ ಅವರು ಅನುಭವಿಸುವುದು ಸಹಜ. ಸ್ವಜನ ಪಕ್ಷಪಾತಿ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು.
ನಿನ್ನೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಆಷಾಢ ಮಾಸದ ಅಂಗವಾಗಿ ಭಾನುವಾರ ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದರು. ಮೈಸೂರಿನ ಬಹು ಜನ ಗಮನಿಸಿದ ಹಾಗೆ ಸಚಿವರು ಕಳೆದ ೩ ವರ್ಷಗಳಿಂದ ಈ ಕಾರ್ಯ ಮಾಡುತ್ತ ಬಂದಿದ್ದಾರೆ ಆದರೆ ಮಾಧ್ಯಮಗಳಲ್ಲಿ ವರದಿ ಯಾಗಿದ್ದು ಮಾತ್ರ ಇಂಧನ ಸಚಿವೆ ಸರ್ಕಾರದ ಉಳಿವಿಗಾಗಿ ಶೋಭಾ ಚಾಮುಂಡಿ ಪೂಜೆ ಎಂದು.
ಮೊದಲೇ ಸರ್ಕಾರ ಸಂಕಷ್ಟದಲ್ಲಿದೆ, ಅಂತದ್ರಲ್ಲಿ ಈ ಯಮ್ಮ ಹತ್ತಿದ್ದಕ್ಕು ಪೂಜೆ ಮಾಡಿದ್ದಕ್ಕು ಸರಿ ಹೋಯ್ತು,ಹಾಗೆನೆ ಕಾಗೆ ಕುಳಿತುಕೊಳ್ಳೋದಕ್ಕು ಮರದ ಕೊಂಬೆ ಬಿತ್ತು ಅನ್ನುವ ಹಾಗೆ ಇಂತಹದಕ್ಕೆ ಕಾಯುತಿದ್ದ ಪ್ರತಿಪಕ್ಷದವರು ಹಾಗು ಮಾಧ್ಯಮದವರು ತಮಗೆ ಬೇಕಾದ ಬಣ್ಣ ಬಳಿದು ಅದಕ್ಕೊಂದು ಅಪವಿತ್ರ ಅನ್ನುವ ಹಾಳೆ ಯನ್ನು ಅಂಟಿಸಿ ಈಗ ಮಜಾ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ.
ಶೋಭಾ ಮೇಡಮ್ ಬೆಟ್ಟ ಹತ್ತಿದ್ದಕ್ಕೆ ಮೆಟ್ಟಿಲುಗಳ ಪಾವಿತ್ರ್ಯ ಹಾಳಾಗಿದೆ ಎಂದು ಕೈ ಕಾರ್ಯಕರ್ತರು ಕೈಯಿಂದ ಮೆಟ್ಟಿಲುಗಳನ್ನು ತೊಳೆಯುವ ಕಾರ್ಯ ನಡೆಸಿಯೇ ಬಿಟ್ಟರು. ಜತೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶೋಭಾ ಕರಂದ್ಲಾಜೆಗೆ ಧಿಕ್ಕಾರ, ಶೋಭಾ ಮೆಟ್ಟಿಲು ಏರಿದ್ದರಿಂದ ಮೆಟ್ಟಿಲಿಗೆ ಕಳಂಕ ಎಂಬ ಘೋಷಣೆ ಸಹ ಕೂಗಿದರು.
ಈ ಜಾತ್ಯಾತೀತ ವಾದಿ ಕಾಂಗ್ರೆಸ್ಸಿಗರಿಗೆ ಪವಿತ್ರ ಅಪವಿತ್ರ ಅನ್ನೋ ಶಬ್ದ ಅವರ ಶಬ್ದಕೋಶದಲ್ಲಿ ಇದೆಯಾ ಎಂದು ಹುಡುಕಿ ನೋಡಬೇಕು!:)
ಅಲ್ಲಾ ಸ್ವಾಮಿ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸ್ತಾರಲ್ಲ ಇವರು ಎಂತಹ ಜನ! ದೇವರು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಹಿಂದೂ, ವೇದ, ಮುಂತಾದ ಶಬ್ದಗಳನ್ನು ಎಂದೋ ತಮ್ಮ ಡಿಕ್ಷನರಿಯಿಂದ ಇವರು ಕಿತ್ತು ಹಾಕಿದ್ದಾರೆ, ಹೀಗಿರುವಾಗ ಪವಿತ್ರ ಅಪವಿತ್ರ ಅನ್ನೋ ಪ್ರಶ್ನೆ ಎಲ್ಲಿಂದ ಬಂತು?
ಸುಮ್ಮನೆ ಪ್ರಚಾರಕ್ಕೆ ಏನೇನೋ ಗಿಮಿಕ್ ಮಾಡ್ತಾ ಟೈಮ್ ಪಾಸ್ ಮಾಡ್ತಾ ಇರೋ ಜನ ಇವರು.
ಈ ಲೇಖನ ಬರಿಯೋ ಹೊತ್ನಲ್ಲಿ ಟಿವಿ ಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ಯವರಿಗೆ ಕಾಂಗ್ರೆಸ್ಸ್ ಕಾರ್ಯಕರ್ತ ರಿಂದ ಹಲ್ಲೆ ಎಂದು ವಾರ್ತೆ ಯಲ್ಲಿ ಬರ್ತಾ ಯಿತ್ತು.
ಮೊದಲೇ ನೂರಾರು ಸಮಸ್ಯೆಗಳನ್ನು ಒಡಲಲ್ಲಿ ಕಟ್ಟಿಕೊಂಡಿರೋ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ
ತಮ್ಮ ವರದಿ ಕಾಂಗ್ರೆಸ್ ವಿರೋಧಿಯಂತೆ ಇದೆ. ಅಲ್ಲವೇ!
ಪ್ರತ್ಯುತ್ತರಅಳಿಸಿಖಂಡಿತವಾಗ್ಯೂ.
ಪ್ರತ್ಯುತ್ತರಅಳಿಸಿಸಾರ್ ಕಾಂಗ್ರೆಸ್ ನೋರು ಮಾಡೋದು ಆಚಾರ, ಬೇರೆಯವರು ಮಾಡೋದು ಅನಾಚಾರ.
ಪ್ರತ್ಯುತ್ತರಅಳಿಸಿಹೋಗ್ಲಿ ಬುಡಿ ಸಾ, ಹೊಟ್ಟೆಗೆ ಹಾಕ್ಕೊಳ್ಳಿ ಪಾಪ
Vivek Achar Said....
ಪ್ರತ್ಯುತ್ತರಅಳಿಸಿಪ್ರತಿಭಟನೆಗೂ ಒಂದು ರೀತಿ ನೀತಿ ಇರಬೇಕು.... ಸಧ್ಯ ಈ BJP ಸರಕಾರದಲ್ಲಿ ಇರುವ ಕೆಲವೇ ಪ್ರಾಮಾಣಿಕ ಸಚಿವರಲ್ಲಿ ಶೋಭಾ ಅವರು ಒಬ್ಬರೂ... ಕೇಂದ್ರದಲ್ಲಿ ಸುಮಾರು 3 ರಿಂದ 4 ಲಕ್ಷ ಕೋಟಿ ಹಗರಣ ಮಾಡಿರುವ ಈ ಕಾಂಗ್ರೆಸ್ಸಿನ ಕೆಲ ಅಯೋಗ್ಯರು ಓಡಾಡಿರುವ ಸ್ಥಳವನ್ನೆಲ್ಲಾ ಯಾವುದರಿಂದ ತೊಳೆಯಬೇಕು? ನಮ್ಮ ಧುರ್ಗತಿ ನೋಡಿ ಇವರು ನಮ್ಮ ಪ್ರಜಾ ನಾಯಕರು!!!
86 ವಯಸ್ಸಿನ N.D.ತಿವಾರಿ, ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಾಗ ಹದಿ ಹರೆಯ ವಯಸ್ಸಿನ್ ಹುಡುಗಿಯರ ಜತೆಗೆ ಕಾಮಕೇಳಿ ನಡೆಸಿದಾಗ ಇವರು ರಾಜಭವನವನ್ನು ಯಾವುದರಿಂದ ತೊಳೆದರು ಅಂತ? ಆಗ ರಾಜಭವನ ಅಪವಿತ್ರ ಆಗಲಿಲ್ವ. ಸಂಸತ್ತಿನಲ್ಲಿ ಮತಲಂಚ ಪ್ರಕರಣ ನಡೆದಾಗ ಸಂಸತ್ ಅಪವಿತ್ರ ಆಗಲಿವ್ಲಾ,ತ? ಇದು ನಮ್ಮ ಭಾರತ
ಪ್ರತ್ಯುತ್ತರಅಳಿಸಿಈ ಕಾಂಗ್ರೆಸ್ ಗರಿಗೆ ಹುಚ್ಚು ಹಿಡಿದಿದೆಯೇ ಅನುಮಾನ ? ಶೋಭ ಕರಂದ್ಲಾಜೆ ಒಬ್ಬ ಈ ರಾಜ್ಯದ ಹೆಣ್ಣು ಮಗಳು, ಪ್ರತಿಭಟನೆ ಮಾಡಿ ಮೆಟ್ಟಿಲು ತೊಳೆದವರೂ ಸಹ ಹೆಂಗಸರಲ್ಲವೇ ? ದೇವರ ದರ್ಶನಕ್ಕೆ ಮೆಟ್ಟಿಲು ಹತ್ತಿ ಹೋಗಿದ್ದಕ್ಕೇ ಈ ಪರಿ ಪ್ರತಿಭಟನೆ ಮಾಡಿದರೆ ಹೆಂಗಸರಿಗೆ ಬುದ್ದಿವಂತರೋ, ಅಥವಾ.....???? ಹೇಳಬೇಕು. ಚಾಮುಂಡೇಶ್ವರಿ ಬೆಟ್ಟದ ಮೆಟ್ಟಿಲನ್ನು ತೊಳೆದು ಪವಿತ್ರಗೊಳಿಸುವಷ್ಟು ಹೀನ ಸ್ಥಿತಿಯಲ್ಲಿದ್ದಾರೆಯೇ ಶೋಭಾ ಕರಂದ್ಲಾಜೆಯವರು. ರಾಜಕೀಯ ಮಾಡಲು ಬೇರೆ ಸ್ಥಳ ಇರಲಿಲ್ಲವೇ. ನಾಚಿಕೆ ಯಾಗಬೇಕು ............
ಪ್ರತ್ಯುತ್ತರಅಳಿಸಿರಮೇಶ್ ಹೇಳಿದ್ದು..
ಪ್ರತ್ಯುತ್ತರಅಳಿಸಿ50 ವರ್ಷ ಆಳಿದ್ರೂ ಕೂಡಾ., ಇವರಿಗೆ ಅಧಿಕಾರದ ತೀರದ ದಾಹ., 50 ವರ್ಷದಲ್ಲಿ ಏನನ್ನೂ ಕೆರೆದು ಗುಡ್ಡೆ ಹಾಕಿಲ್ಲ ಈ ಜನ.. ಜನರಿಗೆ ಎಂದೂ ತಲುಪದ ಯೋಜನೆಗಳನ್ನು ತಂದು., ಬರೀ ದುಡ್ಡು ತಿಂದವರೇ ಇವರು..
ಬಿ.ಜೆ.ಪಿಯವರ ಮೇಲೆ ಏನೆಲ್ಲಾ ದೂರುಗಳನ್ನು ಹೇಳುತ್ತಾರೆ. ಚಿದಂಬರಂ ಅಂತೂ ಮಾತೆತ್ತಿದರೆ ಹಿಂದೂ ಭಯೋತ್ಪಾದನೆ ಅಂತಾರೆ., ಆದರೆ ಈ ಹೇಡಿ ಕಾಂಗ್ರೆಸ್ ಜನಕ್ಕೆ ಮುಸ್ಲಿಂ ಭಯೋತ್ಪಾದನೆ ಎಂದು ಹೇಳುವ ತಾಕತ್ತಿಲ್ಲ.. ರಣಹೇಡಿಗಳು. ಇವರು ನಮ್ಮನ್ನಾಳುವ ದೊರೆಗಳು, ವಿಪರ್ಯಾಸ.