ಶುಕ್ರವಾರ, ಜುಲೈ 22, 2011

ಕನ್ನಡಿಗರೆಂದರೆ ನಾಯಿಗಳಾ?

ಕನ್ನಡಿಗರೆಂದರೆ ನಾಯಿಗಳಾ?

ಸಿಂಗಮ್ ಚಿತ್ರದಲ್ಲಿ ನಟರಾದ ಅಜಯ್ ದೇವಗನ್ ಹಾಗು ಪ್ರಕಾಶ್ ರೈ ರವರ ಮಧ್ಯೆ ನಡೆಯುವ ಸಂಭಾಷಣೆ ಯಲ್ಲಿ ನಾಯಿಗಳು ಎನ್ನುವ ಪದ ತೂರಿ ಬರುತ್ತೆ.

ಪ್ರಕಾಶ್ ರೈ : ಕರ್ನಾಟಕ ಬಾರ್ಡರ್ ಇಂದ ೧೦೦೦ ಜನರನ್ನು ಕರೆದು ಕೊಂಡು ಬರುತ್ತೇನೆ.
ಅಜಯ್ ದೇವಗನ್: ಆ ಸಾವಿರ ನಾಯಿಗಳಿಗೆ ನಾನೊಬ್ಬ ಸಿಂಹ ಸಾಕು ಎನ್ನುತ್ತಾನೆ. ನನ್ನ ಹಿಂದೆ ಇಡೀ ಒಂದು ಜಿಲ್ಲೆ ಇದೆ ಎಂದು ರಾಜರೋಷವಾಗಿ ಅಜಯ್ ಹೇಳುತ್ತಾನೆ.

ಇದು ನಿಜವಾಗಲೂ ಬೇಕಿತ್ತಾ? ಈ ಮೇಲಿನ ಮಾತುಗಳು ಖಂಡಿತ ಆಕ್ಷೇಪಾರ್ಹ ವಾದದ್ದು.ಆಗಲೆ ಕರವೇ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿದೆ ಹಾಗು ಬೆಂಗಳೂರಿನ ಪೋಲಿಸರು ಚಿತ್ರ ವೀಕ್ಷಿಸಿ ಆಕ್ಷೇಪಾರ್ಹ ದೃಶ್ಯ ಹಾಗು ಸಂಭಾಷಣೆ ಗಳ ಬಗ್ಗೆ ಪರಿಶೀಲಿಸುತಿದ್ದಾರೆ. ಈ ವಿವಾದದಿಂದ ಖರ್ಚಿಲ್ಲದೆ ಪ್ರಚಾರ ವನ್ನು ಚಿತ್ರ ಗಿಟ್ಟಿಸುತ್ತಿದೆ. ಇಂತಹ ಮಾತುಗಳಿರುವ ಚಿತ್ರವನ್ನು ನೋಡಲು ಮಹರಾಷ್ಟ್ರ ದಾದ್ಯಂತ ಚಿತ್ರ ನೋಡಲು ಜನ ಮುಗಿಬೀಳುತಿದ್ದಾರೆನ್ನುವ ವರದಿಯಿದೆ.
 ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನಾದ್ಯಂತ ಶುಕ್ರವಾರ ಕನ್ನಡ ಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರವನ್ನು ದ್ವಂಸ ಮಾಡಿದ್ದು, ಪ್ರದರ್ಶನ ನಿಲ್ಲಿಸಲಾಗಿದೆ. ಪ್ರತಿಭಟನಾ ನಿರತ 20 ಮಂದಿಯನ್ನು ಬಂಧಿಸಲಾಗಿದೆ. ಆಗಲೆ ಮೊದಲನೇ ಚಿತ್ರ ಪ್ರದರ್ಶನ ರದ್ದಾಗಿದೆ ಹಾಗು ಯಾವುದೇ ಅಹಿತಕರ ಘಟನೆ ಬಾರದಂತೆ ಚಿತ್ರ ಮಂದಿರಗಳಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಚಿತ್ರ ನಿರ್ದೇಶಿಸಿರುವ ಕನ್ನಡಿಗ ರಾದ ರೋಹಿತ್ ಶೆಟ್ಟಿ ಹಾಗು ನಟರಾದ ಪ್ರಕಾಶ್ ರೈ ಇಂತಹ ಸಂಭಾಷಣೆ ರಾಜ್ಯದಲ್ಲಿ ಘರ್ಶಣೆ ಗೆ ಎಡೆ ಮಾಡಿಕೊಡುತ್ತವೆ  ಎನ್ನುವ ಅರಿವಿರಲಿಲ್ಲವೇ? ಸುಖಾ ಸುಮ್ಮನೆ ಅನವಶ್ಯಕ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳುವ ಸಿನಿಮಾ ಮಂದಿಗೆ ಏನೆನ್ನಬೇಕು.
ಪ್ರಕಾಶ್ ರೈ "ಇದು ಇಬ್ಬರು ಮರಾಠಿ ಪಾತ್ರದಾರಿ ಗಳ ನಡುವೆ ನಡೆಯುವ ಸಂಭಾಷಣೆ ಯಾಗಿದ್ದು ಕನ್ನಡಿಗರು ಬೇಸರಿಸಿಕೊಳ್ಳುವ ಅಗತ್ಯ ವಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಮೊದಲೇ ಮಹರಾಷ್ಟ್ರ ದ ಜತೆ ನಮ್ಮ ಸಂಭಂಧ ಸರಿಯಾಗಿಲ್ಲ, ಈಗಲೆ ಹಲವಾರು ವಿವಾದಗಳ ನಡುವೆ ರಾಜ್ಯದ ಗಡಿಭಾಗದಲ್ಲಿರುವ ಜನರು ನೆಮ್ಮದಿ ಯಿಲ್ಲದೆ ಬದುಕುತಿದ್ದಾರೆ, ಈ ಸಂಧರ್ಭದಲ್ಲಿ  ಇಂತಹ ಹೊಸ ವಿವಾದ ಅನವಶ್ಯಕ ವಾಗಿದ್ದು ಮತ್ತೊಮ್ಮೆ ಸಿನಿಮಾ ಮಂದಿ ಹಣವೇ ಮುಖ್ಯ ಎನ್ನುವುದು ಸಾಭೀತಾಗಿದೆ.
ಕರವೇ ಅಧ್ಯಕ್ಷ ನಾರಾಯಣ ಗೌಡರು ವಿವಾದಾತ್ಮಕ ದೃಶ್ಯ ಹಾಗು ಸಂಭಾಷಣೆ ಗಳಿಗೆ ಕತ್ತರಿ ಹಾಕಿದರೆ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಪಡಿಸುವುದಿಲ್ಲ ವೆಂದು ಹೇಳಿದ್ದಾರೆ. ಆದರೆ ಆಗ ಬೇಕಾದ ಡ್ಯಾಮೇಜ್ ಆಗಿ ಕತ್ತರಿ ಹಾಕಿದರೆ ಪ್ರಯೋಜನ ವೇನು ಬಂತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ