ವಿ.ಭಟ್ಟರೇ ಇದೆಲ್ಲ ಬೇಕಿತ್ತಾ?
ಎರಡು ಎಡವಟ್ಟುಗಳು
೧. ತಪ್ಪಾಯ್ತು ತಿದ್ಕೋತೀವಿ.
೨. ಕ್ರಿಯೇಟಿವಿಟಿ ಶೀರ್ಷಿಕೆ.
ಮೊದಲನೆಯದಾಗಿ, ತಪ್ಪಾಯ್ತು ತಿದ್ಕೋತೀವಿ ಅಂಕಣ. ಕೆಲ ಸಾರಿ ಉತ್ತಮ ಮಾಹಿತಿಗಳನ್ನು ನಾವು ಇಲ್ಲಿ ಕಾಣಬಹುದು. ಹಾಗು ಓದುಗರು ಸಹ ಬುದ್ದಿವಂತರು ಎಂದು ಸಾರಿ ಸಾರಿ ಹೇಳುತ್ತೆ ಈ ಅಂಕಣ. ಕೆಲ ಉತ್ತಮ ವಿಚಾರ ಹಾಗು ಚರ್ಚೆಗಳನ್ನು ಸಹ ನಾವು ಕಂಡಿದ್ದೇವೆ.
ಆದರೆ ಪ್ರಶ್ನೆ ಇರೋದು ಲೇಖನದ ದಾಟಿಯಲ್ಲಿ. ಕೆಲವೊಮ್ಮೆ ಓದುಗರನ್ನು ಟೀಕಿಸಿ ಬರೆದ ಹಾಗಿರುತ್ತೆ. ಅಮಾಯಕ ಓದುಗರು ಇದು ತಪ್ಪು ಅದು ತಪ್ಪು ಎಂದು ಬರೆದು ಕಳಿಸಿದರೆ ಅಂತವರನ್ನು ಹೀಯಾಳಿಸಿದ್ದು ಉಂಟು. ಕೆಲ ತಪ್ಪು ಗಳನ್ನು ಹೆಕ್ಕಿ ಕಳುಹಿಸಿದ ಪತ್ರಗಳನ್ನು ಅಥವ ಈಮೈಲ್ ಗಳನ್ನು ಮಾನ್ಯ ಮಾಡುವುದೇ ಇಲ್ಲ, ಕೊನೆ ಪಕ್ಷ ಅವುಗಳಿಗೆ ಉತ್ತರಿಸುವ ಮನಸ್ಥಿತಿ ಇಲ್ಲವೇ ಇಲ್ಲ. ಇಲ್ಲಿ ಮಾನ್ಯ ಮಾಡುವ ಪತ್ರಗಳು ಯಾವುವೆಂದರೆ, ಕೆಲ ವಿದ್ವಾಂಸರು, ಶಿಕ್ಷಕರು, ವಕೀಲರು, ಪಂಡಿತರು ಕೆಲ ಈಮೇಲ್ ಮಿತ್ರರು ಹಾಗು ಪ್ರಸಿದ್ದಿ ಪಡೆದ ಕೆಲ ಲೇಖಕರು ಬರೆದ ಪತ್ರಗಳು. ಎಲ್ಲರ ಪತ್ರಗಳನ್ನು ಮಾನ್ಯ ಮಾಡಿದರೆ ಪತ್ರಿಕೆ ಯಲ್ಲಿ ಜಾಗವೇ ಇರುವುದಿಲ್ಲ ಎನ್ನುವುದು ಸತ್ಯ. ಆಯ್ದ ಕೆಲ ಹಾಗು ನಿಜವಾಗಲು ತಪ್ಪು ಎಂದು ಗುರುತಿಸಲ್ಪಡುವ ಲೇಖನಗಳನ್ನು ಆಯ್ದು ಪ್ರಕಟಿಸುತ್ತಾರೆ ಎನ್ನುವುದು ಸತ್ಯ.
ತಪ್ಪುಗಳನ್ನು ಸಮರ್ಥಿಸುವ ಪರಿಯಿದೆಲ್ಲ, ಅದು ನಿಜಕ್ಕೂ ಮೆಚ್ಚುವಂತಹದ್ದೇ? ಪತ್ರ ಬರೆದ ಓದುಗರನ್ನು ಹೀಯಾಳಿಸಿ ಅಥವ ಟೀಕಿಸಿ ಪ್ರಕಟಿಸುವುದು ಎಷ್ಟು ಸಮಂಜಸ? ತಪ್ಪುಗಳು ಆದರು ಸಹ ಅದು ಅಂತಹ ಘೋರ ತಪ್ಪಲ್ಲ, ಆ ಪತ್ರಿಕೆ ಈ ಪತ್ರಿಕೆ ಆ ದೇಶದಲ್ಲಿ ಈ ದೇಶದಲ್ಲಿ ಅದು ಇದು ಅಂತ ಸಮಜಾಯಿಷಿ ಕೊಡ್ತಾರೆ. ಮೊದಲನೆಯದಾಗಿ ನಾವು ಓದುಗರು ಅಂಕಣ ವನ್ನು ಶುರು ಮಾಡಿ ಅಂತ ಇವರನ್ನು ಕಾಡಿದ್ವಾ? ಆಯ್ತು ಶುರು ಮಾಡಿದ್ರಿ, ಆದರೆ ಅದಕ್ಕೆ ನಾದರು ನಿರ್ದಿಷ್ಟ ಮಾನದಂಡ ವೇನಾದರು ಇಟ್ಟಿದ್ದೀರಾ? ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂಡು ಒದ್ದಾಡೊ ಪರಿಸ್ಥಿತಿ ಇದ್ದ ಹಾಗಿದೆ ಈಗ. ವಿಜಯಕರ್ನಾಟಕದಲ್ಲಿ ಇದ್ದ ಹಾಗೆ ತಪ್ಪು ಒಪ್ಪು ಹಾಗೇನಾದರು ಇದ್ದಿದ್ದರೆ ಯಾವುದೇ ಗೊಂದಲ ವಿರುತ್ತಿರಲಿಲ್ಲ.
ಎರಡನೆಯದಾಗಿ, ಚಿತ್ರ ವಿಚಿತ್ರ ಶೀರ್ಷಿಕೆ ಗಳು.ದೇವರಿಗೆ ಪ್ರೀತಿ.
ಕೆಲ ಮುಖ್ಯ ವರದಿಗಳಿಗೆ ಸ್ಪಷ್ಟ ಶೀರ್ಷಿಕೆ ಕೊಟ್ಟು, ರಂಜಿಸುವ ವರದಿಗಳಿಗೆ ಬೇಕಾದರೆ ಕ್ರಿಯಾಶೀಲತೆ ಪ್ರಯೋಗ ಮಾಡಿದರೆ ಮೆಚ್ಚಿಕೊಳ್ಳೋದು ಸಹಜ. ಟ್ಯಾಬಲಾಯ್ಡ್ ಪತ್ರಿಕೆ ಗಳಾದರೆ ಅವುಗಳಿಗೆ ಮಾರಾಟವಾಗಲು ಅಂತಹ ಶೀರ್ಷಿಕೆ ಗಳೆ ಮುಖ್ಯ ಬಂಡವಾಳ. ಪತ್ರಿಕೆ ಗಳಿಗೆ ಅಂತಹ ಅವಕಶ್ಯತೆ ಏನಿದೆ. ಇಂತಹ ತಲೆ ಬರಹಗಳು ಗೊಂದಲ ಮೂಡಿಸುತ್ತವೆ ವಿನಹ ಅದರಿಂದ ಯಾವುದೇ ಪ್ರಯೋಜನ ವಾಗಲ್ಲ. ಬೇಕಾದಷ್ಟು ಸಾರಿ ಓದುಗರೇ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆದರೆ ಮತ್ತೆ ಅದೇ ಸಮರ್ಥನೆ ಗಳನ್ನು ಪದೇ ಪದೇ ಕೊಡುವ ಪ್ರಯತ್ನ ಮಾಡುತಿದ್ದಾರೆ. ಕ್ರಿಯಾಶೀಲತೆ , ಪ್ರತಿಯೊಂದರಲ್ಲಿ ಒಂದು ಹೊಸತನ ಇರಲೇ ಬೇಕೆಂದು ಬಯಸುವ ಮನಸ್ಥಿತಿ ಇರುವುದರಿಂದ ಈ ಅತಿ ಉತ್ಸಾಹ ಯಾವಗಲು ಗೊಂದಲಕ್ಕೀಡು ಮಾಡುತ್ತದೆ. ಕೆಲವೊಮ್ಮೆ ನಾವು ವಿಜಯಕರ್ನಾಟಕ ಓದ್ತಾ ಇದೀವಾ ಅಥವ ಕನ್ನಡಪ್ರಭ ಓದ್ತಾ ಇದೀವ ಅಂತ ಅನ್ನಿಸುತ್ತೆ. ಏನೇನು ಮಾಡ್ತೀವಿ ನೋಡ್ತಾ ಯಿರಿ ಅಂತಾರೆ, ಅಂದಹಾಗೇನೆ ಇಂತಹ ಗೊಂದಲಗಳನ್ನು ಸೃಷ್ಟಿ ಮಾಡ್ತಾರೆ.
ಮೊದಲಿನಿಂದಲೂ ಕನ್ನಡಪ್ರಭ ಓದುತಿದ್ದ ಓದುಗರು ಇವರ ಕೆಲ ಪ್ರಯೋಗ ಶೀಲತೆಗೆ ಬೇಸರಿಸಿಕೊಂಡು ಗೋಡೆ ಬರಹ ಅಂಕಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ