ಮಂಗಳವಾರ, ಆಗಸ್ಟ್ 9, 2011

ಕಾಂಗ್ರೆಸ್ಸ್ ಮತ್ತು ದೇವರು



ಯುಪಿಎ ಒಕ್ಕೂಟದ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆದ ಶ್ರೀಮತಿ ಸೋನಿಯ ಗಾಂಧಿ ಸರ್ವೈಕಲ್ ಕ್ಯಾನ್ಸರ್ ನಿಂದ ಬಳಲುತಿದ್ದು ಅಮೆರಿಕದ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದು. ಅವರು ಬೇಗ ಗುಣಮುಖರಾಗಲಿ ಎಂದು ದೇಶದ ಬಹುತೇಕ ಜನರು ದೇವರಲ್ಲಿ ಪ್ರಾರ್ಥಿಸುತಿದ್ದಾರೆ. ನಾವು ಸಹ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇವೆ.
ಇಂದು ಮತ್ತು ಮೊನ್ನೆಯ ಕೆಲ ಮುಖ್ಯ ಘಟನೆಗಳನ್ನು ನಾನು ಇಲ್ಲಿ ಪ್ರಸ್ತಾಪಿಸಬೇಕೆಂದಿದ್ದೇನೆ.

ಬಳ್ಳಾರಿಯಲ್ಲಿ ಪ್ರತಿಪಕ್ಷದ ಮುಖಂಡರಾದ ಶ್ರೀ ಸಿದ್ದರಾಮಯ್ಯ ನವರು ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ೧೦೧ ತೆಂಗಿನಕಾಯಿ ಹೊಡೆದು ಮೇಡಂ ಬೇಗ ಗುಣಮುಖರಾಗಲಿ ಎಂದು ಪೂಜೆ ಸಲ್ಲಿಸಿದರು.

ಶ್ರೀ ರಂಗಪಟ್ಟಣದ ಗಂಜಾಂ ನಲ್ಲಿ ಕುಟುಂಬ ಸಮೇತರಾಗಿ ಶ್ರೀ ಆರ್.ವಿ.ದೇಶಪಾಂಡೆ ಸಾಹೇಬರು ಶ್ರೀ ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿ ಹೋಮ ಹವನ ಮಾಡಿದರು.

ನಿನ್ನೆ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಉರುಳು ಸೇವೆ ಕಾರ್ಯಕ್ರಮ ನಡೆಸಿದರು.
ಮೊನ್ನೆ ಮಂಗಳೂರಿನಲ್ಲಿ ಶ್ರೀ ಜನಾರ್ಧನ ಪೂಜಾರಿ ಉರುಳು ಸೇವೆ ಸಲ್ಲಿಸಿದರು.

ಮತ್ತು ನಿನ್ನೆ ನಡೆದ ಒಂದು ಸಭೆ ಯಲ್ಲಿ ಭಾಷಣ ಮಾಡುತಿದ್ದ ಶ್ರೀಮತಿ ಮೋಟಮ್ಮನವರು ಗದ್ಗದಿತರಾಗಿ ಕಣ್ಣೀರಿಟ್ಟರು.


ಆಶ್ಚರ್ಯದ ಸಂಗತಿ ಎಂದರೆ, ಕೈ ಪಕ್ಷದ ಮುಖಂಡರುಗಳಿಗೆ ಹಿಂದು ಮತ್ತು ದೇವರುಗಳು ಅಂದರೆ ಅಲರ್ಜಿ, ಅದರಲ್ಲಿ ಬಿಜೆಪಿ ಮುಖಂಡರುಗಳು ಬಹಿರಂಗ ವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದರೆ ಇವರೆಲ್ಲ ಆಡದ ಮಾತುಗಳಿಲ್ಲ ಮಾಡದ ಟೀಕೆ ಗಳಿಲ್ಲ. ಅದರಲ್ಲೂ ಪ್ರಗತಿಪರ, ಚಿಂತಕರು, ಜಾತ್ಯಾತೀತವಾದಿ ಮುಖಂಡರು ಗಳು ಕೊಡದ ಹೇಳಿಗೆ ಗಳಿಲ್ಲ.

ಇರಲಿ ಬಿಡಿ ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಮುಖಂಡರುಗಳು ಹಿಂದೆ ಆಡಿದ ಮಾತುಗಳು, ಇವರೇ ಮಾಡಿದ ಟೀಕೆಗಳು, ಜಾತ್ಯಾತೀತ ನಿಲುವುಗಳು ಮತ್ತು ಅವರ ಪಕ್ಷದ ಹಿಂದೂ ವಿರೋಧಿ ಸಿದ್ಧಾಂತ ಇವೆಲ್ಲ ಏನು? ಅವರ ನಂಬಿಕೊಂಡ ಮತದಾರರುಗಳಿಗೆ ಕೊಡುವ ಸಂದೇಶ ಏನು? ಅಂದರೆ ಇವರ ನಿಲುವು ಗಳು ಎಲ್ಲ ಸಮಯಸಾಧಕತನವೇ? ಎಲ್ಲ ಡೋಂಗಿ ಸಿದ್ಧಾಂತವೇ? ಕೆಲವರನ್ನು ಮೆಚ್ಚಿಸಲು ಮಾಡುವ ಸೋಗಲಾಡಿತನವೇ?
ಸಮಯಸಂಧರ್ಭಕ್ಕೆ ತಕ್ಕಂತೆ ನಡೆದು ಕೊಳ್ಳುವ ಇವರ ನಡೆ ಏನನ್ನು ಸೂಚಿಸುತ್ತೆ?
ವಿಧಾನಸೌಧ ಮುಖ್ಯಮಂತ್ರಿಯವರ ಕೊಠಡಿ ವಾಸ್ತು ಪ್ರಕಾರ ಬದಲಾಯಿಸಿ ಕೊಂಡರೆ ಅದಕ್ಕೆ ಟೀಕೆ,
ಮುಖ್ಯಮಂತ್ರಿ ಮತ್ತು ಮಂತ್ರಿ ಗಳು ದೇವಸ್ಥಾನ ಗಳಿಗೆ ತೆರಳಿದರೆ ಅದಕ್ಕೂ ಸಹ ಟೀಕೆ,
ಹೋಮ ಹವನ ಕಾರ್ಯಕ್ರಮ ಮಾಡಿದರೆ ಅದಕ್ಕೆ ಟೀಕೆ,
ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವ ಕಾರ್ಯಕ್ಕೆ ಟೀಕೆ,
ಕಾಲೇಜು ವಿಧ್ಯಾರ್ಥಿಗಳಿಗೆ ದೇಶಭಕ್ತಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರೆ ಟೀಕೆ,
ಕೆಲ ವಿಚಾರ ವಾದಿಗಳು ಎಂತೆಂಥ ಹೇಳಿಕೆ ಗಳನ್ನು ಕೊಟ್ಟರು ಎಂದು ಜ್ನಾಪಿಸಿಕೊಳ್ಳಿ, ಶ್ರೀ ಸಾಯಿಬಾಬ ರವರ ಮರಣಕ್ಕೂ ಮುಂಚೆ, ಹಲವಾರು ಕಾಯಿಲೆಗಳಿಂದ ನರಳುತ್ತಿರುವ ತನ್ನನ್ನು ತಾನು ಗುಣಪಡಿಸಿಕೊಳ್ಳದ ಈ ಡೋಂಗೀ ಬಾಬ ಭಕ್ತರನ್ನು ಕಾಪಾಡುತ್ತಾನೆಯೆ? ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನದೊಳಗೆ ನೆರೆ ನೀರು ನುಗ್ಗಿದಾಗ, ಭಕ್ತರನ್ನು ರಕ್ಷಿಸುವುದು ಇರಲಿ ತನ್ನ ದೇವಸ್ಥಾನವನ್ನು ರಕ್ಷಿಸಿಕೊಳ್ಳಲಿಕ್ಕೆ ಆಗಲಿಲ್ಲವಲ್ಲ. ಅತಿವೃಷ್ಟಿ ಯಿಂದ ನೆರೆ ಸಂತ್ರಸ್ತರಾದ ಜನರನ್ನು ಯಾವ ದೇವರು ಕಾಪಾಡಿದ? ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಟೀಕೆ ಮಾಡಿದ ಜನ ಇಂದು ಕಾಂಗ್ರೆಸ್ ಮುಖಂಡರ ಈ ನಡೆ ಏನಂತ ಉತ್ತರಿಸುವರು?
ಬಿಜೇಪಿ ಪಕ್ಷ ಮತ್ತು ಸರ್ಕಾರ ಏನೇ ಕಾರ್ಯಕ್ರಮ ನಡೆಸಿದರೂ ಹೀಗೆ ಎಲ್ಲ ವಿಷಯಗಳಲ್ಲಿ ಟೀಕೆ ಮಾಡಿ,  ಇವರ ವೋಟ್ ಬ್ಯಾಂಕ್ ನ ಮತದಾರರ ಮನ ಮೆಚ್ಚಿಸುವ ಈ ಜನ ಇಂದು ಮಾಡುತ್ತಿರುವುದೇನು.
ಯಾವುದೇ ಪಕ್ಷ ಕ್ಕೂ ಸಹ ಒಟ್ಟಿನಲ್ಲಿ ಎಲ್ಲರಿಗೂ ದೇವರು ಬೇಕು ಮತ್ತು ನಂಬಿಕೆಗೆ ಬೆಲೆ ಕೊಡ್ತಾರೆ ಅಂತ ಗೊತ್ತು. ಗೊತ್ತಿದ್ದರೂ ಯಾಕೆ ಒಂದು ವರ್ಗದ ಜನರನ್ನು ಮೆಚ್ಚಿಸಲು ಬೇರೆ ಯವರನ್ನು ಯಾಕೆ ಟೀಕೆ ಮಾಡಬೇಕು. ಇದು ಸಮಯಸಾಧಕತನವಲ್ಲದೆ ಬೇರೆ ಇನ್ನೇನು?
ಪ್ರತಿಯೊಬ್ಬರಿಗೂ ನಂಬಿಕೆ ಅನ್ನುವುದು ಇರುತ್ತೆ, ಆ ನಂಬಿಕೆ ಕೆಲವರನ್ನು ಕಾಪಾಡುತ್ತೆ. ಆ ನಂಬಿಕೆ ಮತ್ತು ಅಶಾವಾದ ದಿಂದ ಕೆಲವರು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಗೆಲುವು ಸಾಧಿಸುತ್ತಾರೆ. ಆದ್ದರಿಂದ ಆ ನಂಬಿಕೆಗಳಿಗೆ ಪ್ರಶ್ನೆ ಸಲ್ಲದಲ್ವೆ.
ಏನೇ ಆಗಲಿ ಸೋನಿಯ ಗಾಂಧಿ ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

2 ಕಾಮೆಂಟ್‌ಗಳು:

  1. ಎಷ್ಟಾದ್ರೂ ದೀರ್ಘ ಕಾಲದವರೆಗೆ ಅಧಿಕಾರ ಚುಕ್ಕಾಣಿ ಹಿಡಿದವರು. ಅದಿಕಾರ ಹೋದಮೇಲೆ ಸುಮ್ನೆ ಕೂರಲಿಕ್ಕೆ ಆಗ್ಲಿಲ್ಲ. ತಮ್ಮ ಮೂಲದ ಬಗೆಗೂ ಚಿಂತಿಸದೆ, ಟೀಕೆ ಪ್ರರಮ್ಬಿಸಿದ್ರು.. ಆದ್ರೆ ಏನ್ಮಾಡೋದು, "ಸಂಕಟ ಬಂದಾಗ ವೆಂಕಟರಮಣ" ಎನ್ನೋ ಪಕ್ಕಾ ಹಿಂದೂ ಸಂಪ್ರದಾಯವನ್ನ ಅಸ್ಟು ಸುಲಭವಾಗಿ ಬಿಡೋಕೆ ಆಗಲ್ಲ..!!
    As a Indian I wish get well soon Mrs. Soniya.

    ಹೆಸರು: ರಾಘವೇಂದ್ರ ಬಿ. ಎಸ.
    ಬೆಂಗಳೂರು/ಹೊಸನಗರ(ಶಿವಮೊಗ್ಗ)
    raghavsaru@gmail.com

    ಪ್ರತ್ಯುತ್ತರಅಳಿಸಿ