ಶುಕ್ರವಾರ, ಅಕ್ಟೋಬರ್ 14, 2011

ಇದೆಂತಹ ಪ್ರಗತಿಪರತೆ?


ಶನಿವಾರ, 8 ಅಕ್ಟೋಬರ್ 2011 ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿ, ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಟೀಕಿಸಿದ್ದು ಯಾವ ಪ್ರಗತಿಪರತೆ ಸಿದ್ದಾಂತವೋ ಎಂದು ಜನ ವ್ಯಾಪಕ ರೀತಿ ಯಲ್ಲಿ ಚರ್ಚೆ ಮಾಡುತಿದ್ದಾರೆ. ಬಳಸಿದ ಶಬ್ದಗಳ ಬಗ್ಗೆ ವಿಪರೀತ ಖಂಡನೆ ವ್ಯಕ್ತವಾಗಿದೆ.


ಬಹು ಸೋಜಿಗದ ಸಂಗತಿ ಯೆಂದರೆ, ಮೈಸೂರಿನ ಒಂದು ಪತ್ರಿಕೆಯ ಸಂಪಾದಕರು ಬರೆದ ಅಂಕಣದ ಬಗ್ಗೆ ವಿಪರೀತ ಚರ್ಚೆ ನಡೀತು. ಆದರೆ ಆ ಅಂಕಣಕ್ಕೆ ಅಂತಹ ಮಹತ್ವ ವನ್ನು ಯಾರು ಕೊಡಲಿಲ್ಲ ಕೆಲವರು ಮಾತ್ರ ಬ್ಲಾಗ್ ಬರೆದು ಯಥಾರೀತಿ ಬಲಪಂತೀಯರನ್ನು ಖಂಡಿಸುವುದನ್ನು ಮಾತ್ರ ಮರೆಯಲಿಲ್ಲ. ಭೈರಪ್ಪನವರ ಅಭಿಮಾನಿಗಳಲ್ಲಿ ಹಂಗಾಯಿತು, ಹಿಂಗಾಯಿತು, ಕೆಂಡ ಕಾರಿದ್ರು.  ಪಾಟೀಲ ಪುಟ್ಟಪ್ಪನವರು ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಮಾತನಾಡಿದರು. ಈ ಗಣಪತಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ ಅಂದ್ರು.  ಅಂತ ಏನೇನೋ ಬಡಬಡಾಯಿಸಿದರು.


ಆದರೆ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿ ಮಾತುಗಳಿಗೆ ಮಾತ್ರ ಯಾಕೆ ಗಪ್ ಚುಪ್!!! ಮೈಸೂರಿನ ಪತ್ರಿಕೆಯ ಲೇಖನಕ್ಕೆ ಕೊಟ್ಟ ಪ್ರಾಮುಖ್ಯತೆ ಈ ಮಹಾನುಭಾವರ ಮಾತುಗಳಿಗೆ ಯಾಕಿಲ್ಲ? ಆ ಬ್ಲಾಗ್ ನಲ್ಲಿ ಲೇಖನದ ಬಗ್ಗೆ ಯಾವರೀತಿ ಖಂಡಿಸಿದಿರೋ ಅದೇ ರೀತಿ ಈ ಮಾತುಗಳನ್ನು ಸಹ ಯಾಕೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ? ನೀವು ಹೇಳಬೇಕಾಗಿರುವುದನ್ನು ಅವರು ಹೇಳಿದ್ದಾರೆ ಅಂತ ಇರಬಹುದೇನೋ!




------------------------------------------------------------------------------------------------------------
ಅಂದಿನಿಂದ ಇಂದಿನವರೆಗೆ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾದ ಪರ ವಿರೋಧದ ಲೇಖನಗಳು ಇಲ್ಲಿವೆ,
-------------------------------------------------------------------------------------------






















ಮಂಗಳವಾರ, ಅಕ್ಟೋಬರ್ 11, 2011

IRS Q2 2011: Top 10 dailies in Karnataka


IRS Q2 2011: Top 10 dailies in Karnataka


2011 ರ ಸಾಲಿನ ಎರಡನೇ ತ್ರೈಮಾಸಿಕದ ಐಆರ್‌ಎಸ್ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. 
ಮುಂಚೂಣಿಯಲ್ಲಿರುವ ಕರ್ನಾಟಕದ ಪತ್ರಿಕೆಗಳು ಕಳೆದ ಒಂದು ವರ್ಷದಲ್ಲಿ ಉತ್ತಮವಾದ ಬೆಳವಣಿಗೆ ತೋರಿಸಿವೆ. 




ನಂ .1 ಕನ್ನಡ ದೈನಿಕ ವಿಜಯ ಕರ್ನಾಟಕ ತನ್ನ ಓದುಗರನ್ನು ಕಳೆದುಕೊಳ್ಳದೆ ನಂ.1 ಪಟ್ಟವನ್ನು ಕಾಯ್ದುಕೊಂಡಿದೆ.  ಹಿಂದಿನ ತ್ರೈಮಾಸಿಕದಲ್ಲಿ 34,7 ಲಕ್ಷ ಮತ್ತು IRS Q2 2010 ರಲ್ಲಿ 32,68 ಲಕ್ಷ ಕ್ಕೆ  ಹೋಲಿಸಿದರೆ ಈ ಸಾರಿ  34,38 ಲಕ್ಷ ದಾಖಾಲಾಗಿದೆ.  ಒಟ್ಟಿನಲ್ಲಿ, ವಿಜಯ ಕರ್ನಾಟಕ ಕಳೆದ ಒಂದು ವರ್ಷದ ಅವಧಿಯಲ್ಲಿ  ಶೇಕಡಾ 5.2 ರಷ್ಟು ಸಾಧನೆ ಮಾಡಿದೆ.




ಎರಡನೇ ಸ್ಥಾನದಲ್ಲಿರುವ ಪ್ರಜಾವಾಣಿ, ಈ ವರ್ಷದ ಅವಧಿಯಲ್ಲಿ ಶೇ 31 ರಷ್ಟು ಪ್ರಗತಿಯನ್ನು ಸಾಧಿಸಿದೆ.  ಆದರೆ ಕಳೆದ ತ್ರೈಮಾಸಿಕಕ್ಕೆ (34,03 ಲಕ್ಷ) ಹೋಲಿಸಿದರೆ ಶೇ1 ರಷ್ಟು ಪ್ರಸಾರ ಕಡಿಮೆ ಯಾಗಿದೆ. ಈಸಾರಿ 33,69 ಲಕ್ಷ . ಕಳೆದ ವರ್ಷ 
ಈ ಅವಧಿಯಲ್ಲಿ 25,65 ಲಕ್ಷ ಪ್ರಸಾರವನ್ನು ದಾಖಲಿಸಿತ್ತು. ಹಾಗೆನೋಡಿದರೆ ಪ್ರಜಾವಾಣಿಗೆ ಇದೊಂದು ಉತ್ತಮ ಬೆಳವಣಿಗೆ.


ಮೂರನೆ ಸ್ಥಾನದಲ್ಲಿ ಕನ್ನಡಪ್ರಭವಿದ್ದು, ಅದೂ ಸಹ ವೇಗವಾಗಿ ಬೆಳೆಯುತ್ತಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1.5 ಪ್ರಮಾಣ ಹೆಚ್ಚಳವಾಗಿದೆ, ಕಳೆದ ವರ್ಷ ಎರಡನೇ ತ್ರೈಮಾಸಿಕದಲ್ಲಿ ನಡೆಸಿದ ಸಮೀಕ್ಷೆ ಯ  ಪ್ರಕಾರ ಇದುವರೆವಿಗೂ  ಶೇಕಡ 57 ರಷ್ಟು  ಓದುಗರು ಜಾಸ್ತಿಯಾಗಿದ್ದಾರೆ. IRS Q2 2010 ರಲ್ಲಿ 8,62 ಲಕ್ಷ ಇದ್ದ ಪ್ರಸಾರ ಸಂಖ್ಯೆ  ಅಚಾನಕ್ ಆಗಿ ಈ ಸಾರಿ  Q2 2011 ರಲ್ಲಿ 13,54 ಲಕ್ಷ ಬಂದು ನಿಂತಿದೆ.  ಹಿಂದಿನ ಸಮೀಕ್ಷೆಯಲ್ಲಿ 13,34 ಲಕ್ಷ ಪ್ರಸಾರವಿತ್ತು.


ನಾಲ್ಕನೆ ಸ್ಥಾನದಲ್ಲಿರುವ ಸಂಯುಕ್ತ ಕರ್ನಾಟಕ  ಈ ಸಾರಿ ತನ್ನ ಓದುಗರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಶೇ ೧೦ ರಷ್ಟು ಓದುಗರನ್ನು ಅದು ಕಳೆದುಕೊಂಡಿದೆ. ಒಟ್ಟಿನಲ್ಲಿ ಈ ವರ್ಷ ಶೇ 19.5 ರಷ್ಟು ಬೆಳವಣಿಗೆಯನ್ನು ಕಂಡಿದ್ದು ನಾಲ್ಕನೆ ಸ್ಥಾನದಲ್ಲಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ 13,06 ಲಕ್ಷ ಮತ್ತು ಈ ಬಾರಿ 11,76 ಲಕ್ಷ ದಾಖಲಾಗಿದ್ದೆ ಕಳೆದವರ್ಷ ಈ ಅವಧಿಯಲ್ಲಿ  9,84 ಲಕ್ಷ  ದಾಖಲಾಗಿತ್ತು.




ಉದಯವಾಣಿ ಹಿಂದಿನ ತ್ರೈಮಾಸಿಕದಲ್ಲಿ 8,93 ಲಕ್ಷ ವಿದ್ದ ಸಂಖ್ಯೆ ಈ ಬಾರಿ 9.85 ಲಕ್ಷಕ್ಕೆ ಜಾಸ್ತಿಯಾಗಿದ್ದು, ಶೇ 10.3 ಓದುಗರ  ಸಂಖ್ಯೆ ಯಲ್ಲಿ ಜಾಸ್ತಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾರಿ ಶೇ 24 ರಷ್ಟು ಬೆಳವಣಿಗೆ ಯನ್ನು ದಾಖಲಿಸಿದೆ.




ಆರನೆ ಸ್ಥಾನದಲ್ಲಿ ಟೈಮ್ಸ್ ಆಫ್ ಇಂಡಿಯಾ  ( Q2 2011 ರಲ್ಲಿ 5,75 ಲಕ್ಷ ) ಹಾಗು 


ಏಳನೆ ಸ್ಥಾನದಲ್ಲಿ  ಡೆಕನ್ ಹೆರಾಲ್ಡ್  (Q2 2011 ರಲ್ಲಿ 4.14 ಲಕ್ಷ )
ಎಂಟನೆ ಸ್ಥಾನದಲ್ಲಿ ಸಂಜೆವಾಣಿಯಿದ್ದು Q2 2011 ರಲ್ಲಿ 2,15 ಲಕ್ಷ ಪ್ರ್ಸಸಾರವನ್ನು ದಾಖಲಿಸಿದೆ , ಹಿಂದಿನ ತ್ರೈಮಾಸಿಕದಲ್ಲಿ 2,07 ಲಕ್ಷ ಮತ್ತು IRS Q2 2010 ರಲ್ಲಿ 2,11 ಲಕ್ಷ ಪ್ರಸಾರವಿತ್ತು.





ಒಂಬತ್ತನೆ ಸ್ಥಾನದಲ್ಲಿ ಬೆಂಗಳೂರ್ ಮಿರರ್ ಇದ್ದು  ಹಿಂದಿನ ತ್ರೈಮಾಸಿಕದಲ್ಲಿ 1.60 ಲಕ್ಷ ಇದ್ದ ಪ್ರಸಾರ ಇಂದು 1,75 ಲಕ್ಷ ಬಂದು ನಿಂತಿದೆ. Q2 2010 ರಿಂದ ಶೇಕಡ 150 ರಷ್ಟು ಬೆಳೆಯುತ್ತಿದೆ. 
------------------------------------------------------------------------------------------------




ಭಾನುವಾರ, ಅಕ್ಟೋಬರ್ 2, 2011

ಅಂದು ಇಂದು


ಗಾಂಧಿ ಜಯಂತಿದಿನದಂದು ಪ್ರತಿಯೊಬ್ಬರು ಮಹಾತ್ಮ ನನ್ನು ನೆನಪಿಸುಕೊಳ್ಳುವಂತೆ ಮಾಡುತ್ತಿರುವ ನಮ್ಮ  ಸರ್ಕಾರಿ ಆಯೋಜಿತ ಕಾರ್ಯಕ್ರಮಗಳು, ಶಾಲಾ ಸಮಾರಂಭಗಳು ಕೇವಲ ಒಂದು ದಿನದ ಮಟ್ಟಿಗೆ ಸೀಮಿತವೋ ಏನೋ? 

ಮಧ್ಯ ಮಾಂಸ ಮಾರಾಟ ನಿಷೇದ ವಿದ್ದರೂ ಸಹಿತ, ಕೆಲಕಡೆ ಮಾರಾಟದ ಬಗ್ಗೆ ವರದಿಯಾಗಿವೆ. ಗಾಂಧೀಜಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೂ ಪರವಾಯಿಲ್ಲ ಕನಿಷ್ಟಪಕ್ಷ ಅವರ ಮೌಲ್ಯಗಳಿಗೆ ಗಳಿಗೆ ಬೆಲೆಕೊಟ್ಟು ಒಂದು ದಿನ ಕುಡಿಯದೆ ತಿನ್ನದೆ ಇರಲು ನಮ್ಮ ಜನ ಸಾಮನ್ಯರಿಗೆ ಸಾಧ್ಯವಾಗುತ್ತಿಲ್ಲವೆ.

2008 ರ ಗಾಂಧಿ ಜಯಂತಿ ಯ ಸಂಧರ್ಭದಲ್ಲಿ ಈದ್ ಹಬ್ಬ ಸಹ ಬಂದಿತ್ತು, ಅಂದು ಸಹ ಬಹುತೇಕ ಕಡೆ ಪ್ರಾಣಿಗಳ ಮಾರಣಹೋಮ ನಡೆಯಿತು.








 ಅಹಿಂಸಾ ತತ್ವ ವನ್ನು ಪ್ರತಿಪಾದಿಸುತಿದ್ದ ಬಾಪೂಜಿ ದಶಕಗಳಕಾಲ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.


ಅಂದು

ಭಗತ್ ಸಿಂಗ್,ರಾಜ್ ಗುರು,ಸುಖ್ದೇವ್ ಅವರಿಗೆ ೧೯೩೧ರ ಮಾರ್ಚ್ ೨೩ರನ್ದು ಮರಣದಂಡನೆ ಶಿಕ್ಷೆ ವಿಧಿಸಿದಾಗ ಮರಣದಂಡನೆ ಮುಕ್ತಗೊಳಿಸಲು ಇಡೀ ದೇಶ ಗಾಂಧಿ ಯನ್ನು ಕೋರಿದರೂ ಕೂಡ ಬ್ರಿಟೀಷರ ಮುಂದೆ ಚಕಾರವೆತ್ತಲಿಲ್ಲ. ಕ್ರಾಂತಿಕಾರಿಗಳಿಗೆ ಅವರು ಎಂದೂ ಪ್ರೊತ್ಸಾಹವನ್ನು ನೀಡಿರಲಿಲ್ಲ. ಅವರ ಉದ್ದೇಶ ಅಹಿಂಸಾ ತತ್ವ ಪಾಲನೆ.


ಇಂದು



ಪಾರ್ಲಿಮೆಂಟಿನ ದಾಳಿಯ ರುವಾರಿ ಅಫ್ಜಲ್ ಗುರುವಿನ ಕ್ಷಮಾದಾನದ ಕುರಿತು ಜಮ್ಮು ಕಾಶ್ಮಿರ ವಿಧಾನ ಸಭೆ ನಿರ್ಣಯ ಕೈಗೊಳುತ್ತೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅಫ್ಜಲ್ ಗುರುವಿನ ಪರವಾಗಿ ಟ್ವೀಟ್ ಮಾಡುತ್ತಾರೆ. ಆಭಾಗದ ಜನರ ವಿರೋಧವನ್ನು ಕಟ್ಟಿಕೊಳ್ಳಲು ಅವರು ತಯಾರಿಲ್ಲ. ವೋಟ್ ಬ್ಯಾಂಕ್ ರಾಜಕಾರಣ. 


 


ತಮಿಳುನಾಡಿನ ರಾಜಕಾರಣಿಗಳು ರಾಜೀವ್ ಗಾಂಧಿಯನ್ನು ಕೊಂದ ಎಲ್ ಟಿ ಟಿ ಇ ಪರ ಮಾತನಾಡುತ್ತಾರೆ, ಮತ್ತು ಕ್ಷಮಾದಾನ ಪರ ಕೋರ್ಟ್ ಮೊರೆ ಹೋಗುತ್ತಾರೆ. ಇಲ್ಲೂ ಸಹ ವೋಟ್ ಬ್ಯಾಂಕ್ ರಾಜಕಾರಣ. 


ಹೀಗೆ ನೋಡಿದರೆ, ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಯಾವುದೇ ಬೆಲೆಯಿಲ್ಲ. ಕೇವಲ ಸ್ವ ಹಿತಾಸಕ್ತಿ, ಅಧಿಕಾರದ ದಾಹ, ಸ್ವಜನ ಪಕ್ಷಪಾತ ಗಳೆ ಇಂದಿನ ರಾಜಕಾರಣದ ಮೌಲ್ಯಗಳು.


ಅಂದು ಬ್ರಿಟೀಷರು ಧರ್ಮದ ಆಧಾರದಲ್ಲಿ ದೇಶವನ್ನು ಒಡೆದರು, ಇಂದಿನ ರಾಜಕಾರಣಿಗಳು ಧರ್ಮ, ಜಾತಿ ಮತ್ತು  ಭಾಷೆಯ ಆಧಾರದಲ್ಲಿ ದೇಶವನ್ನು ಒಡೆಯುತಿದ್ದಾರೆ. ಕೇವಲ ಅಧಿಕಾರ ಲಾಲಸೆ ಇಂದಿನ ಈ ಗತಿಗೆ ಕಾರಣ.

ಮಂಗಳವಾರ, ಸೆಪ್ಟೆಂಬರ್ 27, 2011

ಹೆಚ್.ವಿಶ್ವನಾಥ್ ರ ಮಾತು ಅಂದರೆ...........



ಚುನಾವಣೆಯಲ್ಲಿ ಹಣ ಹೆಂಡ ಹಂಚುವುದು ಸಾಮನ್ಯ ಅಂತ ಎಲ್ಲರಿಗೂ ಗೊತ್ತು ಆದ್ದರಿಂದ ಅದನ್ನು ಕಾನೂನು ಬದ್ದವಾಗಿ ಜಾರಿಗೋಳಿಸಿ ಅಂತ ಹೇಳಲಿಲ್ಲವಲ್ಲ ಸದ್ಯ. 


ತಾವು ಕಂಡ ಸತ್ಯಗಳನ್ನು ಸ್ವಲ್ಪವೂ ಮರೆಮಾಚದೇ ನೇರವಾಗಿ ಹೇಳುವ ಸರಳ ಸಜ್ಜನ ರಾಜಕಾರಣಿ  ಹೆಚ್.ವಿಶ್ವನಾಥ್ ರವರ ಮಾತು ಅಂದರೆ ಅಲ್ಲೊಂದು ವಿವಾದದ ಸಾಧ್ಯತೆ ಇಲ್ಲದೆ ಇರುವ ಅವಕಾಶ ಬಹು ಕಡಿಮೆ ಎನ್ನುವ ಮಟ್ಟಿಗೆ ಆಗಿದೆ ಇತ್ತೀಚಿನ ದಿನಗಳಲ್ಲಿ. ಕೆಲದಿನಗಳ ಹಿಂದೆ ಕಾಂಗ್ರೆಸ್ನಲ್ಲಿ ಸಖಿ ಸಂಸ್ಕೃತಿ ಬೆಳೆಯುತ್ತಿದೆ ಅಂತ ಒಂದು ಹೇಳಿಕೆ ಕೊಟ್ಟರು. ಆ ಮಾತಿನ ಬಾಣ ಡಿಕೆಶಿ ಮತ್ತು ನಟಿ ರಮ್ಯ ಕುರಿತದ್ದಾಗಿತ್ತು. ಆ ಸಖಿ ಯಾರು ಮತ್ತು ಯಾರಿಗೆ ಸಖಿ ಎಂದು ಕೇಳುವಷ್ಟರಲ್ಲಿ ಡಿಕೆಶಿ ಯಾರು ಸಖಿ ಸಂಸ್ಕೃತಿ ಹುಟ್ಟು ಹಾಕುತ್ತಿದ್ದಾರೆ ಎಂಬುದನ್ನು ಹೈಕಮಾಂಡ್ ಗೆ ದೂರಲಿ ಅಂತ ಹೇಳೀಯೆ ಬಿಟ್ಟರು.



ತಮ್ಮ ಮಗ ಜೈನಧರ್ಮದ ಹುಡುಗಿಯನ್ನು ಪ್ರೀತಿಸಿದಾಗ, ಅವರಿಷ್ಟದಂತೆಯೆ ಯವುದೇ ವಿರೋಧ ತೋರದೆ ಸರಳ ಮದುವೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು.


ಒಂದು ಸಾರಿ ಕಾಂಗ್ರೆಸ್ಸಿಗರಿಗೆ ಕಾಲುಬಾಯಿ ರೋಗ ಅಂತ ಹೇಳಿ ಪಕ್ಷದ ಒಳಗಡೆ ವಿರೋಧ ಕಟ್ಟಿಕೊಂಡಿದ್ದರು. ಹೀಗೆ ಒಂದಿಲ್ಲೊಂದು ವಿವಾದದ ಮಾತುಗಳನ್ನಾಡಿ ಹಲವರಿಗೆ ಇರುಸು ಮುರುಸು ಮಾಡಿರುವುದು ನಾವೆಲ್ಲ ಕಂಡಿದ್ದೇವೆ.


ತಮ್ಮ ಹಳ್ಳಿ ಹಕ್ಕಿಯ ಹಾಡು ಕೃತಿಯಲ್ಲಿ ಎಸ್.ಎಂ. ಕೃಷ್ಣ ಹಾಗೂ ನಟಿ ಸರೋಜಾದೇವಿ ಅವರ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಎಸ್. ಎಂ. ಕೃಷ್ಣ ಮತ್ತು ಚಲನಚಿತ್ರ ಅಭಿನೇತ್ರಿ ಬಿ. ಸರೋಜಾದೇವಿ ನಡುವೆ "ಅಮರಾಮಧುರಾ ಪ್ರೇಮ, ನೀ ಬಾಬೇಗ ಚಂದಮಾಮ" ಎನ್ನುವಂಥ ಸಂಬಂಧಗಳು ಚಿಗುರೊಡೆದಿದ್ದವು. ಅವರಿಬ್ಬರ ಕೋಮಲ ಮನಸ್ಸುಗಳು ಪರಸ್ಪರ ಅನುರಾಗದ ತೆಕ್ಕೆಗೆ ಬಿದ್ದಿದ್ದವು ಎಂದು ಬರೆದಿದ್ದರು.


ರಾಜಕಾರಣಿಗಳ ದೌರ್ಬಲ್ಯವೇನೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಯಾರೂ ಹೇಳಿಕೊಳ್ಳುವುದಿಲ್ಲ. ಎಲ್ಲರೂ politically correct ಆಗಿ ಇರಲು ಪ್ರಯತ್ನಿಸುತ್ತಾರೆ. ಅಂಥದ್ದರಲ್ಲಿ ವಿಶ್ವನಾಥ್ ಇಂತಹ ಹೇಳಿಕೆ ಗಳನ್ನು ಕೊಡುವ ಮೂಲಕ ಒಂದಿಲ್ಲೊಂದು ವಿವಾದ ಗಳನ್ನು ಮೈಮೆಲೆ ಎಳೆದುಕೊಳ್ಳುತ್ತಾರೆ.  


ಜನರಿಗೆ ಆಮಿಷ ನೀಡಿ ಮತದಾರರನ್ನು ಸೆಳೆಯಲು ಇಂತಹ ಮಾರ್ಗ ಗಳನ್ನು ಶುರು ಮಾಡಿದ್ದು ಯಾರು? ಈ ರಾಜ ಕಾರಣಿಗಳೇ ಅಲ್ಲವೆ. ಅಧಿಕಾರ ಬೇಕು ಅದಕ್ಕಾಗಿ ಇಂತಹ ವಾಮ ಮಾರ್ಗಗಳನ್ನು ಹುಡುಕಿದರು. ಜತೆಗೆ ಜಾತಿ  ಧರ್ಮದ ಓಲೈಕೆ. ಹೀಗೆ ಸಮಾಜವನ್ನು  ಒಡೆದು ಆಳುವ ಕಾರ್ಯವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಮಾಡುತಿದ್ದಾರೆ. 


ಪ್ರತಿಯೊಬ್ಬರಿಗೂ ಶಿಕ್ಷಣ ಹಾಗು ಮೂಲಭೂತ ಸೌಲಭ್ಯಗಳನ್ನು ನೀಡಿ ದ್ದರೆ ಇಂತಹ ಪ್ರಮೇಯವೇ ಬರುತ್ತಿರಲಿಲ್ಲ. ಸುಶಿಕ್ಷಿತ ಮತದಾರರು ಇಂತಹ ಯಾವುದೇ ಆಮಿಷಗಳಿಗೆ ಒಳಗಾಗದೆ ತಮಗೆ ಬೇಕಾದ ವ್ಯಕ್ತಿಗೆ ಮತ ಚಲಾಯಿಸುತ್ತಾರೆ,  ಚುನಾವಣ ನೀತಿ ಸಂಹಿತೆ ಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿದ್ದು ಟಿ,ಎನ್ ಶೇಷನ್, ಕಾಯ್ದೆ ಯಲ್ಲಿ ಇದ್ದ ಕಾನೂನುಗಳ ವ್ಯಾಪ್ತಿಯಲ್ಲಿ  ಚುನಾವಣೆ ಹೇಗೆ ನಡೆಯಬೇಕು ಎಂದು ತೋರಿಸಿಕೊಟ್ಟಿದ್ದರು. ಅಂತಹ ಇಚ್ಚಾಶಕ್ತಿ ಎಲ್ಲರಿಗೂ ಇದ್ದರೆ ಪ್ರತಿಯೊಂದು ಚುನಾವಣೆಗಳು ಕಟ್ಟುನಿಟ್ಟಾಗಿ ನಡೆಯುತಿದ್ದವು.


ರಾಜಕಾರಣಿಗಳು ಬದಲಾಗದೆ ಮತದಾರರು ಬದಲಾಗುವುದು ಸಾಧ್ಯವಿಲ್ಲ ಎಷ್ಟು ನಿಜವೋ ಹಾಗೆ ಮತದಾರರು ಬದಲಾಗದೆ ರಾಜಕಾರಣಿಗಳು ಬದಲಾಗಲು ಸಾಧ್ಯ್ವವಿಲ್ಲ. ಬಹುತೇಕ ಅರಬ್ ದೇಶಗಳಲ್ಲಿ ಮಧ್ಯಪಾನ ನಿಷೇದ ವಿದ್ದು ಸಮಾಜದ ಸ್ವಾಸ್ತ್ಯವನ್ನು ಕಾಪಡುವಲ್ಲಿ ಯಶಸ್ವಿಯಾಗಿದೆ. 



ಮಾನ್ಯ ವಿಶ್ವನಾಥ್ ರವರ ಹೇಳಿಕೆಗಳು ಸಮಾಜವನ್ನು ಬದಲಾಯಿಸುವ ಕಾರ್ಯಕ್ಕೆ ಮುನ್ನುಡಿಯಾಗಬೇಕು ಹೊರತು ಸಮಾಜವನ್ನು ಪ್ರಪಾತಕ್ಕೆ ತಳ್ಳುವಂತಾಗಬಾರದು. ಮಧ್ಯಪಾನ ನಿಷೇದ ಮಾಡಿ ಅಂತ ಒಂದು ಹೋರಾಟ ಬಹು ಕಾಲದಿಂದಲೂ ನಡೆಯುತಿದೆ. ಗಾಂಧೀಜಿಯವರು ಸಹ ಮಧ್ಯಪಾನ ನಿಷೇದಕ್ಕೆ ತಮ್ಮ ಸಮ್ಮತಿಯನ್ನಿತ್ತಿದ್ದರು. ಅದೇ ಗಾಂಧೀಜಿ ಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷದ ಇಂದಿನ ರಾಜಕಾರಣಿ ವಿಶ್ವನಾಥ್ ರವರು ಹಣ ಹೆಂಡ ದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ.


 ಇಂದು ರಾಜಕಾರಣಿಗಳು  ಸಾರಾಯಿ ಮೇಲಿನ ನೀಷೇದ ತೆಗೆಯಿರಿ ಎಂದು ಒತ್ತಾಯಿಸುತ್ತಾರೆ, ಆಮೇಲೆ ಹಣ ಹೆಂಡ ಹಂಚೋದಕ್ಕೆ ಕಾನೂನು ಬದಲಾವಣೆ ಮಾಡಿ ಅಂತಾರೆ. ಹಾಗೆ ಬೇರೆಯವರು ವೇಶ್ಯಾವಾಟಿಕೆ ಗೆ ಒಂದು ಕಾನೂನು ಮಾಡಿ ಅಂತಾರೆ, ನಮಗೆ ಅರಣ್ಯಪ್ರಾಣಿಗಳ ಬೇಟೆಯಾಡುವಾಸೆ, ಆ ನಿಷೇದ ತೆಗೆಯಿರಿ ಅಂತಾರೆ, ಲಂಚತೆಗೆದುಕೊಳ್ಳೋದಿಕ್ಕೆ ಕಷ್ಟಾಅಗ್ತಾಯಿದೆ ಲೋಕಾಯುಕ್ತ ಬಂದ್ ಮಾಡಿ ಅಂತಾರೆ  ಹಿಂಗೆ ಎಲ್ಲ ನಿಷೇದಗಳನ್ನು ತೆಗೆದು ಎಲ್ಲರಿಗೂ full freedom ಕೊಟ್ಟು ಯಾರ್ಯಾರಿಗೆ ಹೇಗೆ ಬೇಕೊ ಹಾಗೆ ಕಾನೂನು ಬದಲಾವಣೆ ಮಾಡಿ ಎಲ್ಲರು ಶಿಲಾಯುಗದ ಆದಿಮಾನವರಾಗಿ ಇದ್ದುಬಿಟ್ರೆ ಎಷ್ಟು ಚೆನ್ನಾಗಿರುತ್ತೆ.


ಕೊನೆಕುಟುಕು:


AVÛVÚ ÑÚ}ÚÀ ÔæÞ×Û¡«æ ÑÛÁé
GÑé.GM. OÚäÎÚ| ÈÚßßRÀÈÚßM~à AW¥Û§VÚ ÑÚM®Úâ´lÑÚºæ ÈÚßßWÒ, ÑÚ_ÈÚ G^é. ÉËÚ‡«Û¢é d}æ ɨ۫ÚÑè¨Ú¥Ú AÈÚÁÚy¥ÚÆÇ «Úsæ¥Úß ÔæàÞVÚß~¡¥Û§VÚ GIÒÒ ÈÚáÛf ÑÚ¥ÚÑÚÀ ÔÚÂËÚ`M¥ÚÃVèsÚ G¥ÚßÁÛ¥ÚÁÚß. OÚäÎÚ| @ÈÚÁÚ«Úß„ OÚMsÚÈÚÁæÞ †Û¿ßVæ …M¥ÚM}æ …¾ÚßÀÄß ËÚßÁÚß ÈÚáÛt¥ÚÁÚß. "ÑæÉß' GM¥æÞ VÚßÁÚß~ÒOæàMtÁÚßÈÚ ÔÚÂËÚ`M¥ÚÃVèsÚÂVæ ®ÚÁÚÁÚ ¬M¥Ú«æ ®ÚÁÚÈÚß R¾ÚáÛÆ. "¬ÞÈÚâ´ @ƒOÛÁÚOæQ …M¥Ú ÈæßÞÅæ ÁÛdÀOæQ …ÁÚ …M}Úß. AVÚ†ÛÁÚ¥æ§ÄÇ AWÔæàÞ¿ß}Úß' - ÕÞVæ H«æÄÇ J¥ÚÂ¥ÚÁÚß. GÄÇÁæ¥ÚßÁÚß ÈÛVÛ§ØVæ ÒPQ¥Úß§ OÚäÎÚ| @ÈÚÂVæ ÈÚßßdßVÚÁÚ DMlß ÈÚáÛt}Úß. @¥Ú«Úß„ }æàÁÚVæàsÚ¥Ú OÚäÎÚ|, "ÂÞ, ÉËÚ‡«Û¢é ¾ÚáÛÂ%Þ @¥Úß. H«æÞ«æà ÈÚáÛ}Ût¡¥Û§Áæ' @M}Ú OæÞØ¥ÚÁÚß. AVÚ ÉËÚ‡«Û¢é ÔæÞØ¥Úß§: "ÑÛÁé, @ÈÚâý„ ÔÚÂËÚ`M¥ÚÃVèsÚ @M}Ú «ÚÈÚáé ®Ûn%¾ÚßÈÚ«æÞ. Ñڇİ ÑÚ¿ßÄÇ. A¥ÚÁæ AVÛVÚ ÑÚ}ÚÀ ÔæÞ×Û¡«æ ÑÛÁé.' 

-- ಪಿ.ತ್ಯಾಗರಾಜ್