ಶುಕ್ರವಾರ, ಸೆಪ್ಟೆಂಬರ್ 23, 2011

ತಲೆಹರಟೆ - ಸ್ವಲ್ಪ ಖಾರ ಸ್ವಲ್ಪ ಸಿಹಿ - 2


ಚೀನಾ ವಿದ್ಯಾರ್ಥಿಗಳಿಗೆ ಸೆಕ್ಸ್- ಲವ್ ಕೋರ್ಸ್ ಕಡ್ಡಾಯ
ಚೀನಾ ಶಿಕ್ಷಣ ಸಚಿವಾಲಯ ಲೈಂಗಿಕ ಶಿಕ್ಷಣ ಹಾಗೂ ಪ್ರೇಮ ಪಾಠವನ್ನೊಳಗೊಂಡ ಮನಃಶಾಸ್ತ್ರ ಅಧ್ಯಯನವನ್ನೂ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಪೀಟರ್ :- ಥಿಯರಿ ಜತೆ ಪ್ರಾಕ್ಟಿಕಲ್ ಕ್ಲಾಸಸ್ ಉಂಟೋ?


ನರೇಂದ್ರ ಮೋದಿ ನಿರಶನಕ್ಕೆ ಜಯಲಲಿತಾ ಬೆಂಬಲ

ತೃತಿಯ ರಂಗದಿಂದ ಎನ್ ಡಿ ಎ ಗೆ ಜಂಪ್ ಮಾಡುವ ಮುನ್ಸೂಚನೆಯೋ?

30 ಕೆಜಿ ತೂಕ ಇಳಿಸಿಕೊಂಡ ಗಡ್ಕರಿ
ಹೊಟ್ಟೇಲಿ ಏನಿತ್ತು ಅಂತ ಕೇಳಿದ್ರಂತೆ ಬೇರೆ ಪಕ್ಷದೋರು!


ನಮ್ಮ ಮೆಟ್ರೊ ಬೇಗ ಕಟ್ರೋ
ಬೇಗ ಬೇಗ ಕಾಸು ಬಿಚ್ಚಿದರೆ ಏನು ಬೇಕಾದರು ಕಟ್ಟುತ್ತೀವಿ,  



Facebook nalli Sri Rama Gowda ಪೋಸ್ಟ್ ಮಾಡಿದ್ದು
ಬೇರೆಯವರಿಗೆ ಕೊಡುವ ಉಪದೇಶವನ್ನು ನಾವೇ ಪಾಲಿಸಿದರೆ ಎಲ್ಲರಿಗಿಂತ ಮೊದಲು ಯಶಸ್ವಿಯಾಗಬಹುದು...





ಸೋಮವಾರ, ಸೆಪ್ಟೆಂಬರ್ 19, 2011

ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಯಾಕೆ ತೂಗ್ತೀರ?




ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಸೋಮವಾರ ಸಂಜೆ ರಾಜ್ಯಪಾಲ ಹಂಸರಾಜ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ  ಸಲ್ಲಿಸಿದ್ದಾರೆ. ಕಾರಣ ನಿಯಮ ಬಾಹಿರ ವಾಗಿ ನಿವೇಶನ ವನ್ನು ಹೊಂದಿದ ಆರೋಪದ ಮೇಲೆ. ಇದೆಲ್ಲ  ಶುರುವಾಗಿದ್ದು ಒಂದು ಆಂಗ್ಲ ಮಾಧ್ಯಮ ವರದಿಯಿಂದ


ನ್ಯಾ.ಶಿವರಾಜ್ ಪಾಟೀಲ್ ನೇಮಕವಾಗಿದ್ದು ಯಡ್ಯೂರಪ್ಪನವರಿಂದ, ಮೊದಲೇ ಯಡ್ಯೂರಪ್ಪ ಭ್ರಷ್ಟಾಚಾರ ಆರೋಪವನ್ನು ಎದುರಿಸುತಿದ್ದಾರೆ ಹಾಗು ತಮ್ಮದೇ ಜಾತಿಯವರನ್ನು ಅವರು ನೇಮಕ ಮಾಡಿದ್ದಾರೆ ಆದ್ದರಿಂದ ಇದೇ ಹಿನ್ನಲೆ ಮೇಲೆ ಶಿವರಾಜ್ ಪಾಟೀಲ್ ರ ಮೇಲೆ ಒಂದು ಕಣ್ಣು ಇಟ್ಟು ಅವರ ಆಸ್ತಿ ಪಾಸ್ತಿ ಗಳನ್ನು ವಿವರವನ್ನು ಕಲೆ ಹಾಕಿದ್ದಾರೆ. ೩ ನಿವೇಶನಗಳು ಕಂಡ ಕೂಡಲೆ ಅವರ ಮೇಲೆ ಆರೋಪ ಮಾಡಿದ್ದಾರೆ


ಮೊದಲನೆಯದಾಗಿ '1982ರಲ್ಲಿ ಅವರು  ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲನಾಗಿ ಸೇವೆ ಸಲ್ಲಿಸುತ್ತಿರುವಾಗ ವಸಂತನಗರದಲ್ಲಿ ಸಣ್ಣ ನಿವೇಶನವೊಂದನ್ನು ಖಾಸಗಿ ವ್ಯಕ್ತಿಯಿಂದ ಖರೀದಿಸಿ ಮನೆ ಕಟ್ಟಿದ್ದರು. ಈ ನಿವೇಶನವನ್ನು ಸರ್ಕಾರ ಅಥವಾ ಯಾವುದೇ ಸೊಸೈಟಿಯಿಂದ ಪಡೆದುಕೊಂಡಿಲ್ಲ'


ಎರಡನೆಯದಾಗಿ   1994ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗ ಕರ್ನಾಟಕ ನ್ಯಾಯಾಂಗ ಇಲಾಖೆ ಹೌಸಿಂಗ್‌ ಸೊಸೈಟಿಯಿಂದ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನವೊಂದನ್ನು ಪಡೆದುಕೊಂಡಿದ್ದರು


ಮೂರನೆಯದು, 2006ರಲ್ಲಿ ಅಂದರೆ ಸುಪ್ರೀಂಕೋರ್ಟ್‌ ನ್ಯಾಯಾಮೂರ್ತಿ ಸ್ಥಾನದಿಂದ ನಿವೃತ್ತಿಯಾದ ಬಳಿಕ  ಅವರ ಪತ್ನಿಯು ನಾಗವಾರದಲ್ಲಿ ವೈಯಾಲ್‌ಕಾವಲ್‌ ಹೌಸಿಂಗ್‌ ಸೊಸೈಟಿಯಿಂದ ನಿವೇಶನವೊಂದನ್ನು ಖರೀದಿಸಿದ್ದರು. ಸಮಸ್ಯೆಗೆ ಈಡು ಮಾಡಿದ್ದು ಇದೇ ಸೈಟ್ ವಿಚಾರ, ತಮ್ಮ ಹೆಸರಿನಲ್ಲಿ ವಸಂತನಗರದಲ್ಲಿ ಒಂದು ನಿವೇಶನ ಇದ್ದಿದ್ದರೂ ಹೆಂಡತಿ ಹೆಸರಲ್ಲಿ ಮತ್ತೊಂದು ಹೌಸಿಂಗ್ ಬೋರ್ಡ್ ನಿವೇಶನ ಕೊಂಡ ಆರೋಪ.
ಕೂಲಂಕುಷವಾಗಿ  ವಿಚಾರಣೆ ನಡೆಸಿದರೆ ಸತ್ಯ ಏನಂತ ಗೊತ್ತಾಗುತ್ತೆ. ಹೋಗಲಿ ಎಂದರೆ ಕೆ,ಜಿ,ಬಾಲಕೃಷ್ಣನ್ ಮತ್ತು ಪಿ,ಡಿ,ದಿನಕರನ್   ರವರು ಎದುರಿಸಿದ ಆರೋಪ ಗಳಿವೆಯಾ? ಯಕಶ್ಚಿತ್  ಒಂದು ಕ್ಷುಲ್ಲಕ ಕಾರಣದಿಂದ ಅವರ ಜೀವಮಾನ ವಿಡಿ ಕಾಪಾಡಿಕೊಂಡು ಬಂದಿದ್ದ  ಪ್ರಾಮಣಿಕತೆ ಗೌರವ ಮಣ್ಣು ಪಾಲು ಮಾಡಲು ಹೊರಟಿದ್ದು ಎಷ್ಟು ಸರಿ? ಅವರಂಥ  ದಕ್ಷ  ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ಸಮರ ಸಾರಲು, ಅವರ ರಾಜೀನಾಮೆ ಪಡೆಯಲು ಇದು ಸಮಂಜಸವಾದ ಸಮಯವೆ?


ಅವರು ಸಲ್ಲಿಸಿದ 2ಜಿ ತರಂಗಗುಚ್ಛ ಹಗರಣದ ವರದಿಯಿಂದಾಗಿ ಎ ರಾಜಾರಂಥ ಹಗಲು ದರೋಡೆಕೋರರು ಇಂದು ತಿಹಾರ್ ಜೈಲಿನಲ್ಲಿ ದ್ದಾರೆ. ಆ ಪ್ರಕರಣಗಳ ವಿಚಾರಣೆಗೆ ಹಿನ್ನಡೆ ಉಂಟಾಗುವುದಿಲ್ಲ  ಎನ್ನುವ ಗ್ಯಾರಂಟಿ ಇದೆಯಾ? 


ಕೆಲ ರಾಜಕೀಯ ಮುಖಂಡರು ಇಂತಹ  ಸಮಯದಲ್ಲಿ ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ, ಯಾಕೆಂದರೆ ಅವರು ನ್ಯಾಯಮೂರ್ತಿ ಯಾಗಿದ್ದಾಗ ಕಳಂಕಿತ ಹಾಗೂ ಭ್ರಷ್ಟರಿಗೆ ಚೆನ್ನಾಗಿ ಬಿಸಿ ಮುಟ್ಟಿಸುತಿದ್ದರು.


ಆರೋಪ ಕೇಳಿಬಂದ ತಕ್ಷಣ ಸೆ. 14  ರಂದು ನಿವೇಶನ ವನ್ನು  ಹಿಂದಿರುಗಿಸಿದ್ದಾರೆ,  ಆದರೆ ಅದನ್ನೇ ಮುಂದಿಟ್ಟುಕೊಂಡು ಅಕ್ರಮ ಎಸಗಿದಿದ್ದುಕ್ಕಾಗಿ ಆರೋಪಿ ಎಂದು ಬಿಂಬಿಸಿದ್ದುದು ಎಷ್ಟರ ಮಟ್ಟಿಗೆ ಸರಿ?  ಬೆಟ್ಟದಷ್ಟು ಭ್ರಷ್ಟಾಚಾರದ ಸಮಸ್ಯೆಗಳು ನಮ್ಮ ಮುಂದೆ ಇರುವಾಗ, ಅದೇ ಬೆಟ್ಟವನ್ನು ಇಲಿಗಾಗಿ ಅಗಿಯುವುದು ಎಲ್ಲಿಯ ನ್ಯಾಯ? ತಪ್ಪಿನ ಪ್ರಮಾಣ ಎಷ್ಟೇ ಇರಲಿ, ತಪ್ಪು ತಪ್ಪೇ. ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿರುವಾಗ ಅದನ್ನೇ ದೊಡ್ಡದು ಮಾಡಿಕೊಂಡು, ಮುಂದಿನ ದೊಡ್ಡ ಸಮಸ್ಯೆಗಳನ್ನು  ಸಣ್ಣದಾಗಿಸುವುದು ಎಷ್ಟು ಸರಿ?  ಇಂತಹ ಪ್ರವೃತ್ತಿಯಿಂದ ಪ್ರಾಮಾಣಿಕ ವ್ಯಕ್ತಿ ಗಳಿಗೆ ಹಿನ್ನಡೆಯಾಗಿ ಇಂತಹ ಯಾವುದೇ ಜವಬ್ದಾರಿಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಭ್ರಷ್ಟಾಚಾರ ವಿರುದ್ಧ ದ ಹೋರಾಟಕ್ಕೆ ಸೋಲಾಗುತ್ತದೆ. ಭ್ರಷ್ಟರ ಕೈ ಮೇಲಾಗುತ್ತದೆ.
Kannadaprabha 24.09.2011


Kannadaprabha 22.09.2011





Kannadaprabha 21.09.2011
sampadakeeya - Vishweswara Bhat




Kannadaprabha 20.09.2011




Samyukta Karnataka 20.09.2011





ಶನಿವಾರ, ಸೆಪ್ಟೆಂಬರ್ 17, 2011

ನಾವು ಹೀಗೇನೆ...!

ಗೆಣಸ್ಲೆ ಬ್ಲಾಗ್ - ಸಚಿನ್ ಭಟ್ ಬರೆದ ಲೇಖನ
ಅ೦ತೂ ಡೆಲ್ಲಿಯಲ್ಲಿ ಮತ್ತೊ೦ದು ಬಾ೦ಬ್ ಢಮಾರ್ ಅ೦ದಿದೆ. ಪ್ರತಿ ಸ್ಫೋಟದ೦ತೆ ಒ೦ದಿಷ್ಟು ಜನ ಸತ್ತು ಕೆಲವರು ಆಸ್ಪತ್ರೆ ಸೇರಿದ್ದಾರೆ. ಟಿವಿ ಚಾನಲ್ಲುಗಳ ಬ್ರೇಕಿ೦ಗ್ ನ್ಯೂಸುಗಳಿಗೆ ವಾರಕ್ಕಾಗುವಷ್ಟು ಆಹಾರ ಸಿಕ್ಕಿದೆ. ಎ೦ದಿನ೦ತೆ ಮ.ಮೋ. ಸಿ೦ಗಮ್ ಮೌನವಾಗಿದ್ದಾರೆ. ಅವರು ಮಾತೇ ಆಡುವುದಿಲ್ಲ. ಆಡಿದರೂ ಯಾರೂ ಕೇಳುವವರಿಲ್ಲವೆ೦ಬುದು ಅವರಿಗೂ ಗೊತ್ತು. ಒ೦ದು ಲಕ್ಷ, ಐವತ್ತು ಸಾವಿರದ ಕೆಲ ಚೆಕ್ಕುಗಳನ್ನು ಹಿಡಿದುಕೊ೦ಡು ಹೋಗಿ ಸೋನಿಯಾ ಸ೦ತ್ರಸ್ತರಿಗೆ ಹ೦ಚಿ ಫೋಟೊಕ್ಕೆ ಪೋಸ್ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಪಾಕಿಸ್ತಾನದಲ್ಲಿ ದಿನವೂ ಬಾ೦ಬ್ ಸ್ಫೋಟವಾಗುತ್ತದೆ, ನಮ್ಮಲ್ಲಿ ನೋಡಿ ಎಷ್ಟೊ೦ದು ಕಡಿಮೆ. ಇದನ್ನು ನೋಡಾದರೂ ಸ೦ತೋಷಪಡಿ ಎ೦ದು ಸಾ೦ತ್ವನ ಹೇಳುತ್ತಾರೆ ರೌಲ್ ವಿನ್ಸಿ ಅಲ್ಲಲ್ಲ ರಾಹುಲ್ ಗಾ೦ಧಿ. ಇದಕ್ಕೆ ಪೋಲಿಸ್ ವೈಫಲ್ಯವೇ ಕಾರಣವೇ ಹೊರತೂ ಸರ್ಕಾರವಲ್ಲ ಎನ್ನುತ್ತಾರೆ ಪ್ರಣಬ್ ದಾ. ಘಟನೆಯ ನೈತಿಕ ಹೊಣೆ ಹೊತ್ತು ಗೃಹಸಚಿವರು ರಾಜಿನಾಮೆ ನೀಡಬೇಕು ಎ೦ದಬ್ಬರಿಸಿ ಸುಮ್ಮನಾಗುತ್ತಾರೆ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್. ಭಯೋತ್ಪಾದಕರು ಮೊದಲೇ ಹೇಳಿ ಬಾ೦ಬ್ ಸ್ಫೋಟಿಸಿದ್ದರೆ ನಮಗೆ ಗೊತ್ತಾಗುತ್ತಿತ್ತು. ಆದ್ದರಿ೦ದ ನಮ್ಮ ತಪ್ಪೇನೂ ಇಲ್ಲ. ಅಷ್ಟಕ್ಕೂ ಕಳೆದ ಹದಿನೈದು ದಿನದಲ್ಲಿ ಇದೊ೦ದೇ ಭಯೋತ್ಪಾದಕರ ದಾಳಿ ನಡೆದದ್ದು ಎ೦ದು ಸಮರ್ಥಿಸಿಕೊಳ್ಳುತ್ತಾರೆ ಚಿದ೦ಬರಮ್. ಪಾಪದ ಭಯೋತ್ಪಾದಕರ ಹೆಸರು ಕೆಡಿಸಲು ಈ ಬಾ೦ಬ್ ಸ್ಫೋಟವನ್ನು ನಡೆಸಿದ್ದೇ ಅರೆಸ್ಸೆಸ್ ಎ೦ದು ಚಾನಲ್ಲುಗಳೆದುರು ಕೂಗುತ್ತಾರೆ ಡಿಗ್ಗಿ ರಾಜಾ. ಯುರೇಕಾ ಯುರೇಕಾ ಎ೦ದು ಏನನ್ನೋ ಕ೦ಡುಹಿಡಿದವರ೦ತೆ ಕೇಸರಿ ಭಯೋತ್ಪಾದನೆಯೇ ಇದಕ್ಕೆ ಕಾರಣವಿರಬಹುದೆ೦ದು ದಿನಗಟ್ಟಲೆ ಚರ್ಚಿಸುತ್ತಾರೆ ರಾಜದೀಪ್ ಸರ್ದೇಸಾಯ್ ಮತ್ತು ಸಾಗರಿಕಾ ಘೋಶ್. ಮು೦ದಿನ ಕಾರ್ಯತ೦ತ್ರಗಳ ಕುರಿತು ಚರ್ಚಿಸಲು ಸರ್ಕಾರ ಉನ್ನತ ಅಧಿಕಾರಿಗಳು ಮತ್ತು ಮ೦ತ್ರಿಗಳ ಸಭೆ ಕರೆಯುತ್ತದೆ. ಬ೦ದವರೆಲ್ಲ  ಬಿಸ್ಕಿಟ್ ತಿ೦ದು ಟೀ ಕುಡಿದು ಎದ್ದು ಹೋಗುತ್ತಾರೆ. ಸ೦ಸತ್ತಿನಲ್ಲಿ ಎಡ, ಬಲ, ಮಧ್ಯಗಳೆಲ್ಲ ಒಟ್ಟಾಗಿ ನಾವು ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎ೦ದು ಘೋಷಿಸುತ್ತಾರೆ. ಇವೆಲ್ಲವುಗಳ ಮಧ್ಯೆ ಅಬ್ಬ ನಾವು ಸಾಯದೇ ಬಚಾವಾದೆವು ಎ೦ದು ನಿಟ್ಟುಸಿರುಬಿಡುತ್ತಾರೆ ಸ್ಫೋಟದಲ್ಲಿ ಬದುಕುಳಿದ ಜನ. ಉಳಿದವರು ಹತ್ತರೊಳಗೆ ಹನ್ನೊ೦ದನೇ ಸುದ್ದಿಯ೦ತೆ ಪತ್ರಿಕೆಯಲ್ಲಿ ಓದಿ ದಿವ್ಯವಾದ ಆಕಳಿಕೆ ತೆಗೆದು ಎ೦ದಿನ೦ತೆ ತಮ್ಮ ಕೆಲಸಕ್ಕೆ ತೆರಳುತ್ತಾರೆ. ಅವರಿಗೂ ಗೊತ್ತು ಮು೦ದಿನ ಬಾ೦ಬ್ ಸ್ಫೋಟವಾಗುವವರೆಗೆ ನಾವು ಸೇಫ್ ಎ೦ದು

ಶುಕ್ರವಾರ, ಸೆಪ್ಟೆಂಬರ್ 16, 2011

ಸ್ವಲ್ಪ ಖಾರ ಸ್ವಲ್ಪ ಸಿಹಿ -೧

ತಲೆ ಹರಟೆ - 1
(ಸ್ವಲ್ಪ ಖಾರ ಸ್ವಲ್ಪ ಸಿಹಿ ) ಅಲ್ಲಿ ಇಲ್ಲಿ ನೋಡಿದ್ದು, ಕೇಳಿದ್ದು ಓದಿದ್ದು.........ಮುಂದ...........ಓದ್ರಿ ಮತ್ತ!

 ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ದಿನಗೂಲಿ ಮುಖ್ಯಮಂತ್ರಿ ---ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ನಾನು ನಿಜಕ್ಕೂ ದಿನಗೂಲಿ ನೌಕರನೇ ಸರಿ. ನಾಡಿನ 6.5 ಕೋಟಿ ಜನರ ವಿನಮ್ರ ಸೇವಕ --ಮುಖ್ಯಮಂತ್ರಿ ಸದಾನಂದ ಗೌಡ 
****
ಬಳ್ಳಾರಿಯಿಂದ ಹೈದರಬಾದಿಗೆ ಲಾರಿಯಲ್ಲೇ ಕೋಟ್ಯಂತರ ರೂ. ಸಾಗಾಟ,
-- 
ಗಣಿನ ಲೂಟಿ ಹೊಡೆದ ದುಡ್ಡು, ಇವತ್ತು ಇಷ್ಟು ಸಿಕ್ಕಿ ಹಾಕಿಕೊಳ್ತು, ಇನ್ನು ಎಷ್ಟಿದೆಯೋ? ಇದಕ್ಕೂ ಮುಂಚೆ ಎಷ್ಟು ಸಾಗಿಸಿದ್ದಾರೋ? ಯಾರ್ಯಾರು ತಗೊಂಡಿದಾರೋ? ಯಾರು ಕೊಟ್ಟಿದಾರೋ? ಧಣಿಗಳೇ ಬಲ್ಲರು.
****
ಸೆಲೆಬ್ರಿಟಿಗಳು ಜೈಲು ಸೇರಿದ್ರೆ ಏನೇನೋ ಕಾಯಿಲೆ ಗಳು ಒಂದೇ ದಿನದಲ್ಲಿ ಬಂದು ಬಿಡುತ್ವೆ ಯಾಕೆ.
-- ಕಾಯಿಲೆಗಳು ಜನಸಾಮನ್ಯರಿಗೆ ಸ್ವಲ್ಪ ಉದಾರಿ, ಆದರೆ ಸೆಲೆಬ್ರಿಟಿಗಳು ಜೈಲು ಸೇರಿದ್ರೆ ಒಂದೇ ಸಾರಿ ಅಟಕಾಯಿಸ್ಕೊಂಡು ಬಿಡ್ತಾವೆ.
****
ಉದಯವಾಣಿ’ಯಲ್ಲಿ ಪತಿ ಲೇಖನ ಬರೆದರೆ?
--ಸಮಯದಲ್ಲಿ ಪತ್ನಿಗೆ ಪಿಂಕ್ ಸ್ಲಿಪ್.
****
ಬದಲಾದ ಸಮಯ ಲುಕ್
-- ಏನ್ ಸಮಯ 24 X 7 ಲೋಗೋ ನ ? 
ಅಲ್ಲ , 
ಮತ್ತೆ?
ಹಾಟ್ ಹಾಟ್ ಸೀನ್ ಗಳು
ಅಂದ್ರೆ ?
ನಿನ್ನೆ (೧೫.೦೯.೨೦೧೧) ಕಿಸ್ ಕಿಂಗ್ - ಸೆನ್ಸಾರ್ ಇಲ್ಲದ ಇಮ್ರಾನ್ ಹಶ್ಮಿ ಯ ಕಾಮ ಕೇಳಿ.
****
ರಮ್ಯ ನಟಿಸಿದ ಲಕ್ಕಿ ಸಿನಿಮಾ ನಿರ್ಮಾಪಕಿ-- ರಾಧಿಕ "ಕುಮಾರಸ್ವಾಮಿ"
-- ಓಹೋ ಈಗ ಅಧಿಕೃತ ಮುದ್ರೆ ಬಿತ್ತಾ!
****
ಸತತ ಹನ್ನೊಂದು ವರ್ಷಗಳಿಂದ ಉಪವಾಸ ನಡೆಸುತ್ತಿರುವ ಇರೋಮ್ ಶರ್ಮಿಳಾ ಚಾನು ರವರ ಮಾತುಗಳನ್ನು ಕೇಳಿ ಅಂತ ಅಂದರು
-- ಮಾಧ್ಯಮ ದವರಿಗೆ ಈಗ ಜ್ನಾನೋದಯ ಆಯಿತ? ಅಂತ ಇನ್ನೊಬ್ಬರು ಕೇಳಿದರು.
****
ಇಂಜಿನೀಯರ್ಸ್ ಡೇ-- ಇಂಜಿನೀಯರ್ಸ್ ಗಳಿಗೆ ನಮನ
ನಮ್ಮ ಇಂಜಿನಿಯರುಗಳಿಗೆ ದೊಡ್ಡ ನಮಸ್ಕಾರ
-- 
ಧನ್ಯವಾದ ಅರ್ಪಣೆಯ ಈ ತಂಪನೆ ಹೊತ್ತಿನಲ್ಲಿ ಕಡುಬಡವರಿಗೆ ಈಗಲೋ ಆಗಲೋ ಬೀಳತ್ತೆ ಎನಿಸುವ "ಆಸರೆ" ಗೃಹ ಕಟ್ಟಿಕೊಡುವ, ಪುತಪುತನೆ ಉದುರುವ ಹೌಸಿಂಗ್ ಬೋರ್ಡ್ ಮನೆಗಳನ್ನು ಕಟ್ಟುವ, ಇಲ್ಲದ ನದಿಗೆ ಸುಳ್ಳುಸುಳ್ಳೇ ಸೇತುವೆ ಕಟ್ಟುವ ಛೀಫ್ ಎಕ್ಸಿಕ್ಯುಟಿವ್ ಇಂಜಿನಿಯರುಗಳನ್ನು ಮತ್ತು ರಸ್ತೆಗೆ ಟಾರ್ ಹಾಕ್ರೋ ಎಂದರೆ ಅಲ್ಲೇ ಗಣಿಗಾರಿಕೆ ಮಾಡ್ತೀನಿ ಅನ್ನೋ ಮುನ್ಸಿಪಾಲ್ಟಿ ಇಂಜಿನಿಯರ್ ಗಳನ್ನು ನೆನಪಿಸಿಕೊಳ್ಳಬಾರದು (ದಟ್ಸ್ ಕನ್ನಡ ಸಂಪಾದಕರು- ಶ್ಯಾಮ್ ಸುಂದರ್)
****
ಒಂದು ಮಾತು--
ಪ್ರತಿಯೊಬ್ಬರು ಒಳ್ಳೆಯವರೆ. ನಾವು ಬೇರೆಯವರಿಂದ ಏನನ್ನು ಬಯಸದೇ ಇರುವ ತನಕ........ವಿಜಯ್ ದೊರೆ(ಫೇಸ್ ಬುಕ್ಕಿನಲ್ಲಿ)
****
ಈ ಮಾತು ಯಾರು ಯಾರಿಗೆ ಯಾವಗ ಹೇಳ್ತಾರೆ
"ಇಂಗ್ಲೀಷಿನೋರಿಗೆ ಹುಟ್ಟಿದಂಗೆ ಆಡ್ತಾನೆ/ಆಡ್ತಾಳೆ/ಆಡ್ತಾರೆ"

ಗುರುವಾರ, ಸೆಪ್ಟೆಂಬರ್ 15, 2011

ಇದು ವಾರ್ತಭಾರತಿಯ ವಿಶೇಷ.



 ಇದು ವಾರ್ತಭಾರತಿಯ ವಿಶೇಷ. 


ಬೇರೆ ಪತ್ರಿಕೆಗಳು ಕೊಡದ ಮಹತ್ವವನ್ನು ವಾರ್ತಭಾರತಿ ಪತ್ರಿಕೆ ತನ್ನ ಮುಖಪುಟದಲ್ಲಿ ಈ ವರದಿಯನ್ನು ಪ್ರಕಟಿಸುವುದರೊಂದಿಗೆ ತಾನು ಬಿನ್ನ ಎಂದು ತೋರಿಸಿದೆ. 

ಮತ್ತೊಂದು ವಿಶೇಷ ಎಂದರೆ, ಬೇರೆ ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಯೇ ಇಲ್ಲ. ಅಮೇರಿಕ ಕಾಂಗ್ರೆಸ್ಸಿನ ವರದಿಯ  ಭಿನ್ನ ವಿಷಯಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ.


ಕನ್ನಡಪ್ರಭದ ವರದಿ ೧೩ ನೇ ಪುಟದಲ್ಲಿ



ಸಂಯುಕ್ತ ಕರ್ನಾಟಕದ ವರದಿ ೭ ನೇ ಪುಟದಲ್ಲಿ


ಪ್ರಜಾವಾಣಿಯ ವರದಿ ೧೨ ನೇ ಪುಟದಲ್ಲಿ


ರಾಹುಲ್- ಮೋದಿ ನೇರ ಸ್ಪರ್ಧೆ ಸಂಭವ